ಆರೋಗ್ಯಕರ ಜೀವನಕ್ಕೆ ಪರಿಸರ ಪ್ರಿಯ ತಂತ್ರಜ್ಞಾನಗಳ
ಕೃಷಿ ವಿಜ್ಞಾನ ಕೇಂದ್ರ, ವಿ.ಸಿ.ಫಾರಂ ವತಿಯಿಂದ “ಎಲೆಕೋಸು ಬೆಳೆಯಲ್ಲಿ ಸಮಗ್ರ ಪೋಷಕಾಂಶ ಮತ್ತು ಪೀಡೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆಯ “ಕ್ಷೇತ್ರೋತ್ಸವ” ವನ್ನು ಪಾಂಡವಪುರ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ,
ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪ್ರಾತ್ಯಕ್ಷಿಕೆ ಕೈಗೊಂಡಿರುವ ಕೆ.ವಿ.ಕೆಯ ತೋಟಗಾರಿಕಾ ತಜ್ಞರಾದ ಡಾ. ಎಂ.ವೆಂಕಟೇಶ್‍ರವರು ಸಮಗ್ರ ಪೋಷಕಾಂಶ ಮತ್ತು ಪೀಡೆ ನಿರ್ವಹಣೆಯಲ್ಲಿ ಬಳಕೆ ಮಾಡಿದ ಟ್ರೈಕೋಡರ್ಮಾ, ಸೂಡೋಮೊನಾಸ್, ಬೇವಿನ ಹಿಂಡಿ, ಬೇವಿನ ಎಣ್ಣೆ, ಹಳದಿ ಅಂಟು ಹಾಳೆ, ಮೋಹಕ ಬಲೆ ಇತ್ಯಾದಿ ಪರಿಸರ ಪ್ರಿಯ ತಂತ್ರಜ್ಞಾನಗಳನ್ನು ಬಳಕೆ ಮಾಡಿ, ಕೀಟ ಮತ್ತು ರೋಗ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಸಂಗಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಪ್ರಕಾಶ್, ಡಿ. ರವರು ಮಾತನಾಡಿ ಕೋಸು ಜಾತಿಯ ಬೆಳೆಗಳಿಗೆ ಹೆಚ್ಚು ವಿಷಕಾರಿ ಔಷಧ ಬಳಕೆ ಮಾಡದೇ, ವಿಜ್ಞಾನಿಗಳು ತಿಳಿಸಿರುವ ತಂತ್ರಜ್ಞಾನಗಳ ಬಳಕೆ ಮಾಡುವ ಮುಖೇನ ಪರಿಸರ ಮಾಲಿನ್ಯ ಕಡಿಮೆ ಮಾಡಿ, ತರಕಾರಿಗಳನ್ನು ಬಳಸುವ ಗ್ರಾಹಕರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಬೆಳೆಗಾರರ ಕರ್ತವ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡ ರೈತರಾದ ಎಸ್.ಆರ್. ಭೋಜರಾಜ್, ಚಂದ್ರಶೇಖರ್, ಎಸ್, ಯೋಗಾನಂದ, ಚನ್ನಬಸಪ್ಪ ಪಾಲ್ಗೊಂಡು ತಾವು ಕೋಸು ಬೆಳೆಯಲ್ಲಿ ಅನುಸರಿಸಿದ ತಂತ್ರಜ್ಞಾನಗಳ ಮಾಹಿತಿಯನ್ನು ಇತರ ರೈತರಿಗೂ ಸಹ ಪರಿಚಯ ಮಾಡಿಸಿದರು. ಆರೋಗ್ಯಕರ ಜೀವನಕ್ಕೆ ಪರಿಸರ ಪ್ರಿಯ ತಂತ್ರಜ್ಞಾನಗಳು ಬಹಳ ಮುಖ್ಯವೆಂಬುದು ರೈತರ ಅಭಿಪ್ರಾಯ. ಶ್ರೀ ಹೆಚ್.ಎಂ. ಮಹೇಶ, ತರಬೇತಿ ಸಹಾಯಕರು, ಕೆ.ವಿ.ಕೆ ರವರು ಪಾಲ್ಗೊಂಡು ಕಾರ್ಯಕ್ರಮವನ್ನು ನಿರೂಪಿಸಿದರು. ಸದರಿ ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 27 ಜನ ರೈತರು, ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

No comments:
Post a Comment