ಸಮಾನ ವೇತನಕ್ಕೆ ಆಗ್ರಹಿಸಿ 11 ರಂದು ವಿಧಾನಸೌದ ಚಲೋ
ಮೈಸೂರು, ಮಾ.8- ಸಮಾನ ಕನಿಷ್ಠ ವೇತ£, ಗುತ್ತಿಗೆ ಕಾರ್ಮಿಕರ ಖಾಯಂಗೆ ಶಾಸನ ತರಲು ಮತ್ತು ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿಗಾಗಿ ಒತ್ತಾಯಿಸಿ ಇದೇ ತಿಂಗಳ 11 ರಂದು ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ (ಸಿಐಟಿಯು) ವತಿಯಿಂದ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ತಿಳಿಸಿದರು.
ಮೈಸೂರಿನ ಪತ್ರಕÀರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಕಾರ್ಮಿಕರ ಬೇಡಿಕೆಗಳಿಗಾಗಿ ಈ ಬೃಹತ್ ವಿಧಾನ ಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳಲಾಗಿದ್ದು, 7ನೇ ಕೇಂದ್ರ ವೇತನಾಯೋಗದ ಶಿಫಾರಸ್ಸಿನಂತೆ ರೂ. 18,000 ಸಮಾನ ಕನಿಷ್ಠ ವೇತನಕ್ಕಾಗಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ, ಆದರೆ ರಾಜ್ಯ ಸರ್ಕಾರ ಇದುವರೆಗೆ ರಾಜ್ಯದಲ್ಲಿ ಒಟ್ಟು 74 ಅನುಸೂಚಿತ ಉದ್ದಿಮೆಗಳಲ್ಲಿ 9 ಉದ್ದಿಮೆಗಳಿಗೆ 10.010 ರೂ. ಕನಿಷ್ಠ ವೇತನ ನಿಗಧಿಪಡಿಸಿದೆ, ಅಂತೆಯೇ ಅರೆಕುಶಲ ಕಾರ್ಮಿಕರಿಗೆ ರೂ. 10998 ನಿಗಧಿಗೊಳಿಸಿದೆ ಇದೇರೀತಿ ಅಲವು ಉದ್ದಿಮೆಗಳಿಗೆ ಕಡಿಮೆ ವೇತನ ನಿಗಧಿಪಡಿಸಿ ಕಾರ್ಮಿಕರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ , ಎಲ್ಲಾ ಉದ್ದಿಮೆಗಳಿಗೂ ಸಮಾನ ವೇತನ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸ್ಕೀಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರೆ ನೌಕರರನ್ನುಕನಿಷ್ಠ ವೇತನ ಅನುಸೂಚಿಗೆ ಒಳಪಡಿಸಲು ಸಿಐಟಿಯು ಒತ್ತಾಯಿಸುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರದಲ್ಲಿ ರಾಜ್ಯಾದ್ಯಂತ ಸುಮಾರು ಹತ್ತುಸಾವಿರಕ್ಕು ಹೆಚ್ಚು ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ತರಿಕಾ ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಾಲಾಜಿರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ್ ಉಪಸ್ಥಿತರಿದ್ದರು.
ಜನನಿ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಮೈಸೂರು,ಮಾ. 8- ಮೈಸೂರಿನ ಜನನಿ ಟ್ರಸ್ಟ್ ವತಿಯಿಂದ ವಿಶ್ವ ಮಹಿಳಾ ದಿನವಾದ ಇಂದು ಅಂತರಾಷ್ಟ್ರೀಯ ದಿನಾಚರಣೆಯನ್ನು ಪತ್ರಕರ್ತರ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ ಇಮದು ಎಲ್ಲಾ ರಂಗಗಳಲ್ಲೂ ಪುರುಷರಷ್ಟೇ ಸರಿ ಸಮಾನರಾಗಿ ಮಹಿಳೆಯರು ದುಡಿಯುತ್ತಿದ್ದಾರೆ, ಸಮಾಜದಲ್ಲಿ ಮಹಿಳೆಯರು ಬಾಲಕಿಯಾಗಿ, ತಾಯಿಯಾಗಿ, ಅತ್ತೆಯಾಗಿ ಹಾಗೂ ಹಿರಿಯರಾಗಿ ಕುಟುಂಬದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ, ಮಹಿಳೆಯರನ್ನು ಗೌರವದಿಂದ ಕಾಣದ ಯಾವುದೇ ಕುಟುಂಬವು ಶಾಂತಿ ನಿಮ್ಮದಿಯಿಂದ ಬಾಳಲು ಸಾಧ್ಯವಿಲ್ಲ, ಇಂದು ಮಹಿಳೇಯರ ಮೇಲೆ ನಾನಾ ರೀತಿಯ ದೌರ್ಜನ್ಯಗಳು ನಡೆಯುತ್ತಿರುವುದನ್ನು ದಿನನಿತ್ಯವೂ ಕಾಣುತ್ತಿದ್ದೇವೆ. ಎಂದರು.
ಸಮಾಜದಲ್ಲಿ ಮಹಿಳೆಯರು ಮುಂದೆ ಬರಲು ಅವಕಾಶಗಳ ಕೊರತೆ ಇದೆ ಅವುಗಳನ್ನು ನಿವಾರಿಸುವ ಮನೋಬಾವ ಸಮಾಜದಲ್ಲಿ ಬೆಳೆಯಬೇಕು ಆಗ ಮಾತ್ರ ಮಹಿಳೇಯರು ಮುಂದೆಬರಲು ಸಾಧ್ಯ, ಈ ದಿಸೆಯಲ್ಲಿ ಮಹಿಳೆಯರು ತಮಗೆ ಎದುರಾಗುವ ಯಾವುದೇ ಅಡ್ಡಿ ಆತಂಕಗಳನನು ದೈರ್ಯದಿಂದ ಎದುರಿಸಿ ಮುನ್ನುಗ್ಗಬೇಕೆಂದು ಮಹಿಳೆಯರಿಗೆ ಕರೆಯಿತ್ತರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಿರುವ ಮಹಿಳಾ ಸಾಧಕರುಗಳಾದ ನಗರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸದಾಕಾಲ ತೊಡಗಿಸಿಕೊಂಡಿರುವ ಪಾಪಮ್ಮ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಸಂತಕುಮಾರಿ, ಬಸ್ ಡ್ರೈವರ್ ನಿಂಗಮ್ಮ, ಪೋಸ್ಟ್ ವುಮೆನ್ ವೆಂಕಟಲಕ್ಷ್ಮಮ್ಮ, ಶುಶ್ರೂಸಕಿ ಡಿ. ಪಂಕಜ, ಹೋಂಗಾರ್ಡ್ ಶಿವರಂಜನಿ, ಶಾಲೆಯ ಮುಖ್ಯೋಪದ್ಯಾಯಿನಿ ಎಂ.ಜಿ. ಸುಗುಣ, ಪತ್ರಕರ್ತೆ ಪುಷ್ಪಲತಾ, ಅಂಗನವಾಡಿಯ ಎನ್. ಗಾಯಿತ್ರಿ, ಬಿಸಿಯೂಟ ತಯಾರಕಿ ಪಿ. ಮಂಜುಳ, ಸಮಾಜ ಸೇವಕಿ ಪಿ. ಶೋಭಾ, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುಸಬೆಯ ಮಾಜಿ ಸದಸ್ಯ ಜಿಆರ್. ಚೆನ್ನಕೇಶವಯ್ಯ, ಜನನಿ ಟ್ರಸ್ಟ್ ಅಧ್ಯಕ್ಷ ಎಂ.ಕೆ. ಅಶೊಕ್, ಉಪಾಧ್ಯಕ್ಷ ಎಸ್. ನಾಗರತ್ನ, ರೋಟರಿ ಕ್ಲಬ್ ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ಹಾಗೂ ರಮೇಶ್‍ಕುಮಾರ್ ಉಪಸ್ಥಿತರಿದ್ದರು.
ನೂತನ ಮದ್ಯದಂಗಡಿಗಳನ್ನು ತೆರೆಯದಂತೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಮಾ.8- ರಾಜ್ಯದಲ್ಲಿ ನೂತನವಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಅಖಿಲಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಇತ್ತೀಚಿನ ವರಧಿಗಳ ಪ್ರಕಾರ ಹೊಸದಾಗಿ 9,600 ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡಲಾಗಿದ್ದು, ಈ ಪೈಕಿ 3,950 ವೈನ್ ಶಾಪ್‍ಗಳಿವೆ ಎಂಬ ಮಾಹಿತಿ ಇದೆ, ಕೂಡಲೇ ಈ ನಿರ್ಧಾರ ದಿಂದ ಹಿಂದೆ ಸರಿಯಬೇಕು,
ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟದ ನೆಪವನ್ನು ಮುಂದುಟ್ಟುಕೊಂಡು ರಾಜ್ಯ ಸರ್ಕಾರವು ರಾಜಸ್ವವನ್ನು ಸಂಗ್ರಹಿಸಲು ಹೊರಟಿರುವ ಕ್ರಮವನ್ನು ರಾಜ್ಯದ ಜನತೆ ಸಹಿಸಲು ಸಾಧ್ಯವಿಲ್ಲ್, ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಬಡತನ, ಶೋಷಣೆ, ಕೌಟುಂಬಿಕ ಕಲಹ ಹಾಗೂ ಅಶಾಮತಿಗಳು ತಲೆದೋರುವ ಸಾಧ್ಯತೆಗಳಿವೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ. ರಾಜೀವ್, ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ರಾಜ್ಯಾಧ್ಯಕ್ಷ ಸತೀಶ್‍ಹೊನ್ನವಳ್ಳಿ, ದರ್ಮಸ್ಥಳ ಗ್ರಾಮಯೋಜನಾ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ಪ್ರಭುಸ್ವಾಮಿ, ರಾಮೇಗೌಡ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

No comments:
Post a Comment