Monday, 14 March 2016

ಮಾರ್ಚ 15 ರಂದು ವಿಶ್ವ ಗ್ರಾಹಕರ ದಿನಾಚರಣೆ
ಮೈಸೂರು,ಮಾ.  ಆಹಾರ, ನಾಗರಿಕ ಸರಬರಜು ಹಾಗೂ ಗ್ರಹಕ ವಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕರ, ಜೆ.ಎಸ್.ಎಸ್ ಕಾನೂನು ಕಾಲೇಜು, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವತಿಯಿಂದ ಮಾರ್ಚ್ 15 ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪುನಗರದಲ್ಲಿರುವ ಜೆ.ಎಸ್.ಎಸ್. ಕಾನೂನು ಕಾಲೇಜಿನ ಆವರಣದಲ್ಲಿ  ವಿಶ್ವ ಗ್ರಾಹಕರ ದಿನಾಚರಣೆ ಮತ್ತು ವಿಶ್ವ ಗ್ರಾಹಕ ವಿಚಾರ ಸಂಕಿರಣ ನಡೆಯಲಿದೆ.
ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಗಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜೆ.ಎಸ್.ಎಸ್. ಕಾನೂನು ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಸುರೇಶ್ ಅವರು ಅಧ್ಯಕ್ಷತೆ ವಹಿಸುವರು.
ಉದ್ಘಾಟನೆಯ ನಂತರ ಜೆ.ಎಸ್.ಎಸ್.ಕಾನೂನು ಕಾಲೇಜಿನ ಸಹ ಪ್ರಾಧ್ಯಪಕ ಡಾ|| ಎಸ್.ನಟರಾಜ್ ಅವರು ವಿಶ್ವ ಗ್ರಾಹಕ: ವಿಶ್ವ ಗ್ರಾಹಕ ಚಳವಳಿ ಕುರಿತು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ ಕೆ.ಸಿ ಬಸವರಾಜು ಅವರು ಭಾರತದಲ್ಲಿ ಗ್ರಾಹಕ ಚಳವಳಿಯ ಸಾರ್ವತ್ರೀಕರಣದ ಸಾಧ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ.
 ಗ್ರಾಹಕರ ಸಮಸ್ಯಗಳು ಕುರಿತು ಸಂವಾದ ನಡೆಯಲಿದ್ದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಶಿವಕುಮಾರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗ್ರಾಹಕ ನ್ಯಾಯ ನಿಷ್ಕರ್ಷೆ ವಿಷಯದ ಬಗ್ಗೆ ಸಂವಾದ ನಡೆಯಲಿದೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಶಿವಕುಮಾರ ಸ್ವಾಮಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಮಾರ್ಚ್ 15 ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ
ಮೈಸೂರು,ಮಾ.14.ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿವೃತ್ತ ನಿರ್ದೇಶಕಿ ಡಾ|| ನ. ರತ್ನ, ಹೆಲನ್ ಕೆಲರ್ ಶಿಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕಿ ಆರ್ ಸುಮಲತ, ಡಾ|| ವಿಜಯಲಕ್ಷ್ಮಿ ಬಸವರಾಜ್ ಚಾರಿಟಬಲ್ ಸೊಸೈಟಿ ಸಂಸ್ಥಾಪಕ ಬಸವರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಾ|| ವಿಜಯಲಕ್ಷ್ಮಿ ಬಸವರಾಜ್ ಅವರು ನಿರ್ದೇಶಿಸಿರುವ ಉಪಹಾರಕ್ಕೆ ಬಂದ ಹುಲಿರಾಯ ನಾಟಕವನ್ನು ಅಂಧ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದು, ಬಿ.ಆರ.ರವೀಶ್ ಅವರು ಸಂಗೀತ ನೀಡಲಿದ್ದಾರೆ.    
ಸಾಮಾನ್ಯ ಕೌನ್ಸಿಲ್ ಸಭೆ ಮುಂದೂಡಿಕೆ
ಮೈಸೂರು,ಮಾ.14.ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಾರ್ಚ್ 14 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಸಾಮಾನ್ಯ ಕೌನ್ಸಿಲ್ ಸಭೆಯನ್ನು ಮೈಸೂರಿನಲ್ಲಿ ಬಂದ್ ಪ್ರಯುಕ್ತ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಹಾಯಕ ಪ್ರಾಧ್ಯಪಕರ ಹುದ್ದೆಗೆ ಸಂದರ್ಶನ
ಮೈಸೂರು,ಮಾ.14.ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಆಹ್ವಾನಿಸಲಾಗಿದ್ದ ತಾತ್ಕಾಲಿಕ ಸಹಾಯಕ ಪ್ರಾಧ್ಯಪಕರ ಹುದ್ದೆಗೆ ಸಂಬಂಧಿಸಿದಂತೆ ದಿನಾಂಕ್ 17-03-2016 ಹಾಗೂ 18-03-2016 ರಂದು ಸಂದರ್ಶನ ನಡೆಯಲಿದೆ.
ಅರ್ಜಿ ಸಲ್ಲಿಸಿರುವವರು ಹೆಚ್ಚಿನ ಮಾಹಿತಿಗೆ ತಿತಿ.uಟಿi-mಥಿsoಡಿe.ಚಿಛಿ.iಟಿ   ಮೂಲಕ ಪಡೆದುಕೊಳ್ಳುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಶವ : ವಾರಸುದಾರರ ಪತ್ತೆಗಾಗಿ ಮನವಿ
ಮೈಸೂರು,ಮಾ.14.ಮೈಸೂರು ರೈಲು ನಿಲ್ದಾಣದ ವೇದಿಕೆ ನಂ.4-5 ರಲ್ಲಿ ರೈಲುಗಾಡಿ ನಂ 17308 ರ ಕೋಚ್ ನಂ 7454 ರಲ್ಲಿ  ಸುಮಾರು 60 ವರ್ಷದ ಅಪರಿಚಿತ ಗಂಡಸು ಮೃತಪಟ್ಟಿರುತ್ತಾರೆ. ಮೈಸೂರು ರೈಲ್ವೆ ಪೊಲೀಸ್ ಠಾಣೆಯವರು ಅಸಹಜ ಮರಣ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಮೃತ ವ್ಯಕ್ತಿಯ ವಯೋಮಿತಿ-60 ವರ್ಷ, ಎತ್ತರ-5.5 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಕೃಶವಾದ ಶರೀರ. ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಕಾಫಿ ಬಣ್ಣದ ಪ್ಯಾಂಟ್ ಹಾಗೂ ಒಂದು ಬೂದು ಬಣ್ಣದ ಬೆಲ್ಟ್  ಇರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇರುವವರು ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸುವುದು.
ತ್ರೈಮಾಸಿಕ ಕೆ.ಡಿ.ಪಿ ಸಭೆ ಮುಂದೂಡಿಕೆ
ಮೈಸೂರು,ಮಾ.14-ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶೀನಿವಾಸ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 16 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಬೇಕಿದ್ದ  ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ತಿಳಿಸಿದ್ದಾರೆ. ಸದರಿ ಸಭೆಯು ಮಾರ್ಚ್ 17 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟು ನೀರಿನ ವ್ಯವಸ್ಥೆ
ಮೈಸೂರು,ಮಾ.14.ಹುಲ್ಲಹಳ್ಳಿ ಅಣೆಕಟ್ಟೆಯ ರಾಂಪುರ ನಾಲೆಯ ಅಚ್ಚುಕಟ್ಟುದಾರರಿಗೆ ಕಬಿನಿ ಜಲಾಶಯದಲ್ಲಿ ಹಾಲಿ ಇರತಕ್ಕ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವಗಳನ್ನು ಗಮನಿಸಿ 2016 ನೇ ಬೇಸಿಗೆ ಅರೆನೀರಾವರಿ ಬೆಳೆಗಳಿಗೆ ಕಟ್ಟು ನೀರಿನ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡಲಾಗುವುದು ಎಂದು ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಒಟ್ಟು 15 ದಿನಗಳು, ಏಪ್ರಿಲ್ 14 ರಿಂದ ಏಪ್ರಿಲ್ 28 ರವರೆಗೆ  ಒಟ್ಟು 15 ದಿನಗಳು, ಮೇ 6 ರಿಂದ ಮೇ 20 ರವರೆಗೆ ಒಟ್ಟು 15 ದಿನಗಳು ಹಾಗೂ ಮೇ 28 ರಿಂದ ಜೂನ್ 6 ರವರೆಗೆ ಒಟ್ಟು 10 ದಿನಗಳು ನೀರು ಬಿಡಲಾಗುವುದು.
 ಏಪ್ರಿಲ್ 7 ರಿಂದ ಏಪ್ರಿಲ್ 13 ರವರೆಗೆ  ಒಟ್ಟು 7 ದಿನಗಳು, ಏಪ್ರಿಲ್ 29 ರಿಂದ ಮೇ 5 ರವರೆಗೆ ಒಟ್ಟು 7 ದಿನಗಳು, ಮೇ 21 ರಿಂದ ಮೇ 27 ರವರೆಗೆ ಒಟ್ಟು 7 ದಿನಗಳು ನೀರನ್ನು ನಿಲ್ಲಿಸಲಾಗುವುದು. ಜೂನ್ 7 ರಿಂದ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.
ಹುಲ್ಲಹಳ್ಳಿ ನಾಲೆಯ ಆಧುನೀಕರಣ ಕಾಮಗಾರಿ ಕೈಗೊಂಡಿರುವುದರಿಂದ 2016 ರ ಬೇಸಿಗೆ ಬೆಳೆಗೆ ಹುಲ್ಲಹಳ್ಳಿ ಅಣೆಕಟ್ಟೆಯ ಹುಲ್ಲಹಳ್ಳಿ ನಾಲಾ ಅಚ್ಚುಕಟ್ಟಿಗೆ ನೀರು ಒದಗಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟು ನೀರಿನ ವ್ಯವಸ್ಥೆ
ಮೈಸೂರು,ಮಾ.14-ನುಗುಜಲಾಶಯ ಯೋಜನೆಯಡಿ ಬರುವ ನುಗು ಎಡದಂಡೆ ಮತ್ತು ನುಗು ಬಲದಂಡೆ ನಾಲೆಯ ಅಚ್ಚುಕಟ್ಟುದಾರರಿಗೆ ನುಗು ಜಲಾಶಯದಲ್ಲಿ ಹಾಲಿ ಇರತಕ್ಕ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವಗಳನ್ನು ಗಮನಿಸಿ 2016 ನೇ ಬೇಸಿಗೆ ಅರೆಖುಷ್ಕಿ ಬೆಳೆಗಳಿಗೆ ಕಟ್ಟು ನೀರಿನ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡಲಾಗುವುದು ಎಂದು ನಂಜನಗೂಡು ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಮಾರ್ಚ್ 16 ರಿಂದ ಮಾರ್ಚ್ 30 ರವರೆಗೆ ಒಟ್ಟು 15 ದಿನಗಳು, ಏಪ್ರಿಲ್ 15 ರಿಂದ ಏಪ್ರಿಲ್ 25 ರವರೆಗೆ  ಒಟ್ಟು 11 ದಿನಗಳು, ಮೇ 7 ರಿಂದ ಮೇ 16 ರವರೆಗೆ ಒಟ್ಟು 10 ದಿನಗಳು ಹಾಗೂ ಜೂನ್ 1 ರಿಂದ ಜೂನ್ 10 ರವರೆಗೆ ಒಟ್ಟು 10 ದಿನಗಳು ನೀರು ಬಿಡಲಾಗುವುದು.
 ಮಾರ್ಚ್ 31 ರಿಂದ ಏಪ್ರಿಲ್ 14 ರವರೆಗೆ ಒಟ್ಟು 15 ದಿನಗಳು,  ಏಪ್ರಿಲ್ 26  ರಿಂದ ಮೇ 6 ರವರೆಗೆ ಒಟ್ಟು 11 ದಿನಗಳು, ಮೇ 17 ರಿಂದ ಮೇ 31 ರವರೆಗೆ ಒಟ್ಟು 15 ದಿನಗಳು ನೀರನ್ನು ನಿಲ್ಲಿಸಲಾಗುವುದು. ಜೂನ್ 11 ರಿಂದ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.
ಕಲೆಗಳಲ್ಲಿ ಜೀವಕಳೆ ತುಂಬಿದೆ ಹೆಚ್.ಆರ್.ಬಸಪ್ಪ


ಮೈಸೂರು,ಮಾ.14-ಪ್ರಾಂತೀಯ ದೂರಸಂಪರ್ಕ ತರಬೇತಿ ಕೇಂದ್ರದಲ್ಲಿ ಮೈಸೂರು ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರಿಗೆ ಕರ್ನಾಟಕದ ಸಂಸ್ಕøತಿ ಕುರಿತು ಹಮ್ಮಿಕೊಳ್ಳಲಾಗಿದ್ದ 4 ದಿನಗಳ  ಚಿತ್ರಕಲಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್.ಬಸಪ್ಪ ಅವರು ಭಾಗವಹಿಸಿ ಕಲೆಗಳಲ್ಲಿ ಜೀವಕಳೆ ತುಂಬಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮಾರ್ಚ್ 9 ರಿಂದ 12 ರವರೆಗೆ ಏರ್ಪಡಿಸಿದ್ದ, ಈ ಕಾರ್ಯಾಗಾರದಲ್ಲಿ 5 ಜಿಲ್ಲೆಗಳ ಸುಮಾರು 56 ಚಿತ್ರಕಲಾಶಿಕ್ಷಕರು ಭಾಗವಹಿಸಿ ಕ್ಯಾನ್ವಾಸ್‍ಗಳ ಮೇಲೆ ಕರ್ನಾಟಕದ ಸಂಸ್ಕøತಿಯನ್ನು ಕುರಿತು ವಿವಿಧ ಶೈಲಿಯಲ್ಲಿ 4 ದಿನಗಳ ಕಾಲ ಕಲಾಕೃತಿಗಳನ್ನು ರಚಿಸಿದರು.
ಡಯಟ್‍ನ ಪ್ರಾಂಶುಪಾಲ  ಆರ್. ರಘುನಂದನ್ ಅವರು ಮಾತನಾಡಿ ಮಹಾಭಾರತ ಯುದ್ಧವು ನಡೆಯಲು ಚಿತ್ರಕಲಾವಿದನೇ ಕಾರಣ. ಮಹಾಭಾರತದಲ್ಲಿ ಪಾಂಡವರ ಅರಮನೆಯ ವೈಭವವನ್ನು ನೋಡುತ್ತ  “ಮಹಾರಾಜನಾದ ದುರ್ಯೋಧನನು ಪಾಂಡವರ ಅರಮನೆಗೆ ಆಗಮಿಸಿದಾಗ ಕಲಾವಿದನ ಕೈಚಳಕದಿಂದ 3ಡಿ ಶೈಲಿಯಲ್ಲಿ ಚಿತ್ರಿತವಾಗಿದ್ದ ಕೊಳವನ್ನು ಹೋಲುತ್ತಿದ್ದ ಚಿತ್ರವನ್ನು ನೋಡಿ ಕಾಲು ತೊಳೆÉಯಲು ಇಳಿದಾಗ ಅದು ಕೊಳವಲ್ಲ, ಕಲಾವಿದನ ಕೈಚಳಕವೆಂದು ತಿಳಿದು ಸಹನೆ ಕಳೆದುಕೊಂಡು ಮುನ್ನಡೆಯುತ್ತಾನೆ. ಮುಂದೆ ನಿಜವಾದ ಕೊಳವನ್ನು ಕಂಡು ಇದೂ ಸಹ ಚಿತ್ರವೆಂದು ಭ್ರಮಿಸಿ ಮುನ್ನಡೆಯುತ್ತಿರುವಾಗ ಕೊಳದಲ್ಲಿ ಕಾಲು ಜಾರಿ ಬೀಳುತ್ತಾನೆ. ಇದನ್ನು ನೋಡಿದ ದ್ರೌಪದಿಯು ಜೋರಾಗಿ ನಕ್ಕಳು”. ಇದೇ ಮಹಾಭಾರತದ ಮಹಾಭಾರತದ ಮಹಾಯುದ್ಧಕ್ಕೆ ಕಾರಣವಾಯಿತೆಂದು ಕಲಾವಿದರ ಕೌಶಲ್ಯತೆಯನ್ನು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕರಾದ ಬಿ.ಕೆ. ಬಸವರಾಜು ಹಾಗೂ ನಿವೃತ್ತ ಚಿತ್ರಕಲಾ ಪರಿವೀಕ್ಷರಾದ ಕಲ್ಲನಗೌಡರ್‍ಟವರು ಭಾಗವಹಿಸಿದ್ದ ಚಿತ್ರಕಲಾ ಶಿಕ್ಷಕರಿಗೆ ಪ್ರಶಸ್ತಿ ಪತ್ರವನ್ನು ನೀಡಿದರು.   ಸಮಾರಂಭದಲ್ಲಿ ಹಿರಿಯ ಕಲಾವಿದರಾದ  ಜಿ.ಎಂ. ಜಂಗಿ, ಪಿ.ಕೆ.ಗೋಪಾಲಕೃಷ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಚಿನ್ನದ ಪದಕ: ಒಂದು ಲಕ್ಷ ರೂ ಚೆಕ್ ಹಸ್ತಾಂತರ


ಮೈಸೂರು,ಮಾ.14.ಮ್ಯೆಸೂರು ವಿಶ್ವವಿದ್ಯಾಲಯದ ಭೂಗರ್ಬ ಶಾಸ್ತ್ರದ ಪ್ರೋಫೇಸರ್,  ಡಾ: ಮಹೇಶ್ ಬಿಲ್ವ ಅವರು  “ಅಡ್ವಾನ್ಸಡ್ ಪೇಲಿಯಂಟಾಲಜಿಅಥವಾ ಪೇಲಿಯಂಟಾಲಜಿ” ವಿಷಯದಲ್ಲಿ ಮೊದಲ ಪ್ರಯತ್ನದಲ್ಲೇ ಅತ್ಯುನ್ನತ ಅಂಕಗಳಿಸುವ ವಿದ್ಯಾರ್ಥಿಯನ್ನು ಉತ್ತೇಜನ ನೀಡಿ ಪ್ರತ್ಸಾಹಿಸುವ ಸಲುವಾಗಿ 2016 ಮ್ಯೆಸೂರು ವಿಶ್ವವಿದ್ಯಾಲಯ ಶತಮಾನೋತ್ಸವ ಅಂಗವಾಗಿ ಶ್ಯಕ್ಷಣಿಕ ಸಾಲಿನಿಂದಲೇ ಅನ್ವಯಸುವಂತೆ ತಮ್ಮ ತಂದೆ ತಾಯಿ “ಶ್ರೀಮತಿ. ಸಿದ್ದಯ್ಯ ಲಕ್ಷ್ಮೀದೇವಮ್ಮ ಮತ್ತುಕೇಂಪೇಗೌಡ ಲಿಂಗಪ್ಪ”ರವರ ಹೆಸರಿನಲ್ಲಿಚಿನ್ನದ ಪದಕ ಪ್ರಧಾನ ಮಾಡಲು ಇತ್ತೀಚೆಗೆ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ: ಕೆ.ಎಸ್.ರಂಗಪ್ಪರವರಿಗೆ ಒಂದು ಲಕ್ಷ ರೂಪಾಯಿ ಚೆಕ್‍ನ್ನು ಹಸ್ತಾಂತರಿಸಿದರು.
   ಇದೇ ಸಂದರ್ಭದಲ್ಲಿ ಬಿಲ್ವ ಕುಟುಂಬದ ಸದಸ್ಯರುಗಳಾದ ಶ್ರೀಮತಿ ಉಷಾ, ಪುತ್ರ ರಾಕೇಶ್, ಸಹೋದರಿಯಾದ ಹೇಮಾಶೇಖರ್ ಇಂದಿರಾಜಯರಾಂ ಹಾಗು ಸಹೋದರ ಶ್ರೀ. ನಾಗೇಶ್ ಬಿಲ್ವ ಹಾಜರಿದ್ದರು.

No comments:

Post a Comment