Wednesday, 9 March 2016

 10 ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಮಂಡ್ಯ ಮಾರ್ಚ್ 9. ಮಾನ್ಯ ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್. ಅಂಬರೀಷ್ ಅವರು 2016ರ ಮಾರ್ಚ್ 10 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಟು ಮಧ್ಯಾಹ್ನ 12 ಗಂಟೆಗೆ ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಸುವರು.

“ರಾಷ್ಟ್ರೀಯ ಯುವ ಪಡೆ” ಯ ಸ್ವಯಂಸೇವಕರ ಆಯ್ಕೆ
ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ದೇಶದಾದ್ಯಂತ “ರಾಷ್ಟ್ರೀಯ ಯುವ ಪಡೆ”(ಓಂಖಿIಔಓಂಐ ಙಔUಖಿಊ ಅಔಖPS) ಎಂಬ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರದ ಮೂಲಕ ಅನುಷ್ಟಾನಗೊಳಿಸುತ್ತಿದೆ. ಈ ಯೋಜನೆಯಲ್ಲಿ ಜಿಲ್ಲಾವಾರು ಈ ಕೆಳಗಿನ ನಿಬಂಧನೆಗಳಿಗೆ ಅನುಗುಣವಾಗಿ ಯುವಜನರನ್ನು ನೇಮಕ ಮಾಡಿಕೊಂಡು, ಅವರಿಗೆ ತರಬೇತಿ ನೀಡುವ ಮೂಲಕ ಅವರು ಗ್ರಾಮೀಣ ಪ್ರದೇಶದ ಯುವಜನರನ್ನು ಯುವಕ/ಯುವತಿ/ಮಹಿಳಾ ಮಂಡಳಿಗಳಾಗಿ ಸಂಘಟಿಸುವ ಹಾಗೂ ಅವರನ್ನು ಸಮಾಜಮುಖಿಗಳನ್ನಾಗಿಸುವ ಕಾರ್ಯವನ್ನು ನಿರ್ವಹಿಸಬೇಕು.
ಅರ್ಜಿ ಹಾಕಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯವರಿಗೆ ಆದ್ಯತೆಯಿದೆ.
ಅಭ್ಯರ್ಥಿಗಳು 18-25 ವಯೋಮಿತಿಯವರಾಗಿರಬೇಕು.
ಅಭ್ಯರ್ಥಿಗಳು ಕಡ್ಡಾಯವಾಗಿ ಮಂಡ್ಯ ಜಿಲ್ಲೆಯ ನಿವಾಸಿಗಳಾಗಿರಬೇಕು.
ಅರ್ಜಿ ಹಾಕಬಯಸುವವರು ಯಾವುದೇ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಾಗಿರಬಾರದು ಹಾಗೂ ಬೇರೆ ಯಾವುದೇ ಸಂಘ/ಸಂಸ್ಥೆ ಅಥವಾ ಇಲಾಖೆಯಲ್ಲಿ ಪೂರ್ಣ ಅಥವಾ ಅರೆಕಾಲಿಕ ಹುದ್ದೆಯಲ್ಲಿ ತೊಡಗಿಸಿಕೊಂಡಿರಬಾರದು.
ಯೋಜನೆಯ ಅವಧಿಯು 2 ವರ್ಷಗಳದ್ದಾಗಿದ್ದು, ಮೊದಲ ವರ್ಷದಲ್ಲಿ ಅವರ ಕೆಲಸ-ಕಾರ್ಯಗಳು ತೃಪ್ತಿಕರವಾಗಿದ್ದಲ್ಲಿ ಮಾತ್ರ ಅವರ ಸೇವೆಯನ್ನು ಎರಡನೆಯ ವರ್ಷಕ್ಕೆ ವಿಸ್ತರಿಸಲಾಗುವುದು.
ಆಯ್ಕೆಯಾದವರು ತರಬೇತಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆಯಲ್ಲದೆ, ತರಬೇತಿ ನಂತರ ಗ್ರಾಮಗಳಿಗೆ ತೆರಳಿ ಯುವ ಸಂಘಟನಾ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಭಾವನೆ ಮತ್ತು ಪ್ರವಾಸ ಭತ್ಯೆಯೆಂದು ಮಾಹೆಯಾನ ರೂ. 2,500/ ಅನ್ನು ಮಾತ್ರ ನೀಡಲಾಗುವುದು.
ಮೇಲಿನ ನಿಬಂಧನೆಗಳಿಗನುಗುಣವಾಗಿ, ಮಂಡ್ಯ ಜಿಲ್ಲೆಯ ಅರ್ಹ ಮತ್ತು ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಕಛೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ದಿ:25-03-2016 ರ ಸಂಜೆ 5.00 ಗಂಟೆ ಒಳಗಾಗಿ ಜಿಲ್ಲಾ ಯುವಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯತ್ ಹತ್ತಿರ, ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ರಸ್ತೆ, ಮಂಡ್ಯ ಇವರಿಗೆ ಸಲ್ಲಿಸಲು ತಿಳಿಸಲಾಗಿದೆ.

ಹೆಬ್ಬಕವಾಡಿ ಗ್ರಾಮದಲ್ಲಿ ವಿಶೇಷ ಸಭೆ
ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಕವಾಡಿ ಗ್ರಾಮದಲ್ಲಿ ವಾರ್ಡ್‍ಗಳ ಸಭೆಯನ್ನು 2016ರ ಮಾರ್ಚ್ 10 ರಂದು  ಹಾಗೂ ವಿಶೇಷ ಗ್ರಾಮ ಸಭೆಯನ್ನು 2016ರ ಮಾರ್ಚ್  11 ರಂದು ಆಯೋಜಿಸಲಾಗಿದೆ ಎಂದು ಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹದೇವು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೀಲಾರದಲ್ಲಿ ಗ್ರಾಮ ಸಭೆ
ಕೀಲಾರ ಗ್ರಾಮ ಪಂಚಾಯಿತಿಯ 2ನೇ ಸುತ್ತಿನ ವಾರ್ಡ್‍ಸಭೆ 2016 ಮಾರ್ಚ್ 14 ರಂದು ಹಾಗೂ 15 ರಂದು 2ನೇ ಸುತ್ತಿನ ಗ್ರಾಮ ಸಭೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುv

No comments:

Post a Comment