ಕೃಷ್ಣರಾಜಪೇಟೆ. ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಪ್ರತಿಷ್ಠೆಯಿಂದ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಯನ್ನು ಪದೇ ಪದೇ ಸ್ಥಗಿತ ಗೊಳಿಸಿರುವುದನ್ನು ಖಂಡಿಸಿ ಕಬ್ಬನ್ನು ಸಾಗಿಸುವ ಚಾಲಕರು ಮತ್ತು ಸಹಾಯಕರು ದಿಢೀರ್ ಪ್ರತಿಭಟನೆ ನಡೆಸಿ ತಕ್ಷಣ ಕಾರ್ಖಾನೆಯನ್ನು ಪ್ರಾರಂಭಿಸಲು ಒತ್ತಾಯಿಸಿದ ಘಟನೆ ಇಂದು ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿಯೇ ನಡೆಯಿತು.
ಕಾರ್ಖಾನೆಯ ಒಳಗಡೆ ಕೆಲಸ ಮಾಡುವವರು ದಿನದಲ್ಲಿ 8 ಗಂಟೆ ಮಾತ್ರ ಕೆಲಸಮಾಡಿ ಬೆಚ್ಚಗೆ ಮನೆಗೆ ಹೋಗುತ್ತಾರೆ. ಆದರೆ ಚಾಲಕರಾದ ನಾವುಗಳು ದಿನದ 24 ಗಂಟೆಗಳ ಕಾಲ ಕಬ್ಬನ್ನು ಸಾಗಿಸಿಬೇಕಾಗಿದೆ. ಆದರೆ ತಿಂಗಳಿಗೆ ಎರಡು ಮೂರು ಸಾರಿ ಕಾರ್ಖಾನೆಯನ್ನು ಸ್ಥಗಿತಗೊಳಿಸುವುದರಿಂದ ನಾವುಗಳು ತುಂಬಾ ಸಂಕಷ್ಠ ಅನುಭವಿಸಬೇಕಾಗಿದೆ. ಏಕೆಂದರೆ ನಾವುಗಳು ದಿನಕ್ಕೆ ಒಂದು ಟ್ರಿಪ್ ಮಾತ್ರ ಮಾಡುತ್ತೇವೆ ಆಗ ನಮಗೆ 200 ರೂಪಾಯಿಸಿಗುತ್ತದೆ. ಒಂದು ವೇಳೆ ಇಲ್ಲಿ ಕೆಲಸ ಸ್ಥಗಿತಗೊಂಡರೆ ನಾವು ಆ ಹಣದಲ್ಲಿ ಒಂದು ದಿವಸ ಮಾತ್ರ ಊಟ,ತಿಂಡಿ ಮಾಡಬಹುದು. ಉಳಿದ ಸಮಯದಲ್ಲಿ ಊಟಕ್ಕೆ ಹಣವಿಲ್ಲದೇ ಹಸಿವಿನಿಂದ ನರಳಾಡಬೇಕಾಗುತ್ತದೆ. ನಮಗೆ ಶೌಚಾಲಯ, ವಿಶ್ರಾಂತಿಗೆ ಸೂಕ್ತ ಸ್ಥಳಾÀವಕಾಶ ವಿಲ್ಲದಿರುವುದರಿಂದ ಚಳಿಯಲ್ಲಿ ನಡುಗಿಕೊಂಡು ಕಾಲದೂಡುತ್ತಿದ್ದೇವೆ. ನಮಗೆ ಸೂಕ್ತ ಸಂಬಳ ವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಮಾಲೀಕರು ಲಕ್ಷಾಂತರ ರೂಪಾಯಿ ಸಾಲಮಾಡಿ ಬಂಡವಾಳ ಹಾಕಿ ಲಾರಿಗಳನ್ನು ಓಡಿಸುತ್ತಿದ್ದು ಸರಿಯಾಗಿ ಲಾರಿಗಳು ಓಡದಿದ್ದರೆ ಸಾಲದ ಬಡ್ಡಿಕಟ್ಟಲು ಸಾಧ್ಯವಾಗುತ್ತಿಲ್ಲ. ತಕ್ಷಣ ಕಾರ್ಖಾನೆಯನ್ನು ಪ್ರಾರಂಭಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಚಾಲಕರು ಒತ್ತಾಯಿಸಿದರು. ವಡ್ಡರಹಳ್ಳಿ ಲೋಕೇಶ್, ಸೂರ್ಯ,ಅನಿಲ್‍ಕುಮಾರ್, ಜಗದೀಶ್, ಮೋಹನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: 03-ಏಖPಇಖಿ-5 ಕೆ.ಆರ್.ಪೇಟೆ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಬೇಕೆಂದು ಒತ್ತಾಯಿಸಿ ಇಂದು ಲಾರಿಗಳ ಚಾಲಕರು ಮತ್ತು ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
ಕೃಷ್ಣರಾಜಪೇಟೆ. ಕಳೆದ ಕೆಲವು ತಿಂಗಳ ಹಿಂದೆ ತಾಲೂಕಿನ ಕೋರಮಂಡಲ್ ಕಾರ್ಖಾನೆ ಒಳಭಾಗದಲ್ಲಿ ಅಧಿಕಾರಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅಮಾನತ್ತು ಪಡಿಸಿರುವ ಏಳು ಮಂದಿ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾರ್ಮಿಕರು ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕೆಲಸವನ್ನು ಸ್ಥಗಿತಗೊಳಿಸಿ ಕಾರ್ಖಾನೆ ಮುಂಭಾಗದಲ್ಲಿ ವಿಷದ ಬಾಟಲಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
ಅಮಾನತ್ತಾಗಿರುವ ಏಳು ಜನರ ಪೈಕಿ ಒಬ್ಬ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಹಾಲಿ ಮೈಸೂರಿನಲ್ಲಿರುವ ಕೃಷ್ಣರಾಜ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆತಂಕಗೊಂಡಿರುವ ಉಳಿದ ಕಾರ್ಮಿಕರು ತಕ್ಷಣ ಅಮಾನತ್ತಾಗಿರುವ ಏಳು ಜನರನ್ನು ಯಾವುದೇ ನಿಬಂಧನೆಗಳಿಲ್ಲದೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ನಿವೃತ್ತಿಹೊಂದಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬಾರದು, ವಿದ್ಯಾವಂತ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಕಾರ್ಖಾನೆಯಲ್ಲಿ ಕೆಲಸ ನಡೆಯಲು ಸೂಕ್ತ ಕ್ರಮ ವಹಿಸಿಬೇಕು ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿ ಕಾರ್ಮಿಕರು ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಸೇವೆಯಿಂದ ಅಮಾನತ್ತುಗೊಂಡಿರುವ ಕಾರ್ಮಿಕ ಸಂಘದ ಅಧ್ಯಕ್ಷ ಯೋಗಮೂರ್ತಿ, ಕುಮಾರ್, ಚಿಕ್ಕೇಗೌಡ, ನಾಗರಾಜರಾವ್, ಚಂದ್ರಶೇಖರ್ ನೇತೃತ್ವದಲ್ಲಿ ನೌಕರರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಚಿತ್ರಶೀರ್ಷಿಕೆ: 03-ಏಖPಇಖಿ-05 ಕೆ.ಆರ್.ಪೇಟೆ ತಾಲೂಕಿನ ಕೋರಮಂಡಲ್‍ಸಕ್ಕರೆ ಕಾರ್ಖಾನೆಯಲ್ಲಿ ಅಮಾನತ್ತಾಗಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಅಮಾನತ್ತುಗೊಂಡಿರುವ ಕಾರ್ಮಿಕ ಸಂಘದ ಅಧ್ಯಕ್ಷ ಯೋಗಮೂರ್ತಿ ನೇತೃತ್ವದಲ್ಲಿ ಕಾರ್ಮಿಕರು ಇಂದಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

No comments:
Post a Comment