Saturday, 5 December 2015

 ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಶಿವಶೈಲ ಕ್ಷೇತ್ರ, ಪಟ್ಟಸೋಮನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಯುತ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಶಿವಪ್ಪರವರ ಒಂಟಿ ತೋಟದ ಮನೆಗೆ ದಿನಾಂಕ: 25-10-2015 ರಂದು ರಾತ್ರಿ ವೇಳೆಯಲ್ಲಿ ಢಕಾಯಿತರು ಮನೆಗೆ ನುಗ್ಗಿ ಜಸ್ಟೀಸ್ ಶಿವಪ್ಪ ಹಾಗೂ ಅವರ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ, ಬಲವಂತವಾಗಿ ಅವರಿಂದ 12,70,000/- ರೂ. ಬೆಲೆ ಬಾಳುವ ಒಡವೆ ಹಾಗೂ ನಗದನ್ನು ದೋಚಿಕೊಂಡು ಹೋಗಿದ್ದು, ಈ ಸಂಭಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ.378/2015. ಕಲಂಃ 395 ಕೂಡ 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

      ಈ ಪ್ರಕರಣವನ್ನು ಬೇಧಿಸಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸದರಿ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಘಟನಾ ಸ್ಥಳದಲ್ಲಿ ದೊರೆತ ಭೌತಿಕ ಸಾಕ್ಷಿಗಳು, ಆಧುನಿಕ ತಂತ್ರಜ್ಞಾನ, ಸ್ಥಳೀಯವಾಗಿ ದೊರೆ ಮಾಹಿತಿ, ಹಳೆಯ ಎಂ.ಓ.ಬಿ.ದಾರರ ಬಗ್ಗೆ ತಳಮಟ್ಟದಿಂದ ಮಾಹಿತಿ ಸಂಗ್ರಹಿಸಿ ಸದರಿ ದರೋಡೆ ಪ್ರಕರಣವನ್ನು ಬೇಧಿಸಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದವರ ಪೈಕಿ ಒಟ್ಟು 16 ಆರೋಪಿಗಳನ್ನು ಬಂಧಿಸಿ, ಅವರುಗಳಿಂದ ಈ ಪ್ರಕರಣದಲ್ಲಿ ದೋಚಲಾಗಿದ್ದ 52,000/- ರೂ. ನಗದು ಹಾಗೂ 187 ಗ್ರಾಂ ಚಿನ್ನದ ಆಭರಗಳನ್ನು ವಶಪಡಿಕೊಳ್ಳಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ ಬೋರಸೆ ತಿಳಿಸಿದ್ದಾರೆ

ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 1] ಜಗದೀಶ @ ಜಗ, 2] ಕೃಷ್ಣಕುಮಾರ @ ಗಜ, 3]ವಿನೋದ @ ವಿನಿ, 4]ಅಯ್ಯಪ್ಪ @ ಲವ ರವರುಗಳನ್ನು ದಿನಾಂಕ 30-11-2015 ರಂದು ದಸ್ತಗಿರಿ ಮಾಡಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್ ಪಡಿಸಿಕೊಂಡು ಸದರಿ ಆರೋಪಿಗಳು ಈ ಪ್ರಕರಣದ ಜೊತೆಗೆ ಇನ್ನು ಒಟ್ಟು ಈ ಕೆಳಕಂಡ  11 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.
1] ಮೈಸೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣೆಯ 1 ಪ್ರಕರಣ,
2] ಮೈಸೂರು ಸಿಟಿ ಸರಸ್ವತಿ ಪುರಂ ಪೊಲಿಸ್ ಠಾಣೆಯ 1 ಪ್ರಕರಣ,
3] ತುಮಕೂರು ಜಿಲ್ಲೆ ನ್ಯೂ ಎಕ್ಸ್‍ಟೆನ್ಷನ್ ಪೊಲೀಸ್ ಠಾಣೆಯ 1 ಪ್ರಕರಣ,
4] ಮದ್ದೂರು ಪೊಲೀಸ್ ಠಾಣೆಯ 1 ಪ್ರಕರಣ,
5] ಮಂಡ್ಯ ಪೂರ್ವ ಪೊಲೀಸ್ ಠಾಣೆಯ 3 ಪ್ರಕರಣ,
6] ಅರಕೆರೆ ಪೊಲೀಸ್ ಠಾಣೆಯ 2 ಪ್ರಕರಣ,
7] ಕೆ.ಆರ್.ಸಾಗರ ಪೊಲೀಸ್ ಠಾಣೆಯ 1 ಪ್ರಕರಣ
8] ಪಾಂಡವಪುರ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ ಬಾಗಿಯಾಗಿರುವುದು ಕಂಡು ಬಂದಿರುತ್ತದೆ.

 ಸದರಿಯವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಒಟ್ಟು 11 ಪ್ರಕರಣಗಳಿಗೆ ಸಂಬಂದಪಟ್ಟ 1] ಒಂದು 53 ಇಂಚಿನ ಸೋನಿ ಎಲ್.ಇ.ಡಿ ಟಿವಿ. 2] ಒಂದು 32 ಇಂಚಿನ ಸೋನಿ ಎಲ್.ಇ.ಡಿ ಟಿ.ವಿ. 3] ಒಂದು ಖಾಲಿ ಸಿಲೆಂಡರ್, ಹಾಗೂ ಒಟ್ಟು 293 ಗ್ರಾಂ ಚಿನ್ನ ಮತ್ತು ಒಂದು ಕೆ.ಜಿ ಬೆಳ್ಳಿಯ ಸಾಮಾನುಗಳನ್ನು ಒಟ್ಟು ಸುಮಾರು 8,55,500/- ( ಎಂಟು ಲಕ್ಷದ ಐವತ್ತೈದು ಸಾವಿರದ ಐನೂರು ರೂ.ಗಳು ) ಗಳಷ್ಟು ಮೌಲ್ಯದ ಮಾಲುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಟವೆರಾ ಕಾರ್ ನಂ. ಎಂ.ಹೆಚ್.-14, ಸಿಎಕ್ಸ್-5102 ಹಾಗೂ ಸ್ವಿಫ್ಟ್ ಡಿಜೈರ್ ಕಾರ್ ಕೆ.ಎ.-05-ಎ.ಇ-6793 ಕಾರನ್ನು ವಶಕ್ಕೆ ಪಡೆದುಕೊಂಡಿರುತ್ತೆ.

ಹಾಗು ಜೆಸ್ಟಿಸ್ ಶಿವಪ್ಪ ರವರ ಮನೆಯ ದರೋಡೆ ಕೇಸಿಗೆ ಸಂಬಂಧಪಟ್ಟಂತೆ ಬೆಂಗಳೂರಿನ ವಕೀಲರಾದ ರಾಜಶೇಖರ್ ಎಂಬುವವರು ಆರೋಪಿಗಳಿಗೆ ಕಳ್ಳತನ ಮಾಡಲು ಸಹಕಾರ ನೀಡಿ ಆರೋಪಿಗಳು ಕದ್ದು ತಂದ ಮಾಲನ್ನು ಮಧ್ಯವರ್ತಿಯಾಗಿ ಮಾರಾಟ ಮಾಡಿಸಿ ಹಣ ಕೊಡಿಸುವ ವೇಳೆಯಲ್ಲಿಯೇ ಖುದ್ದಾಗಿ, ನೇರವಾಗಿ ಸಿಕ್ಕಿಕೊಂಡಿದ್ದು, ಸದರಿಯವರನ್ನು ಸಹ ಈ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದು, ಸದರಿಯವರಿಂದ ಒಂದು ಚಿನ್ನದ ಚೈನು ಮತ್ತು ಒಂದು ಕೆ.ಜಿ. ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು, ರಾಜಶೇಖರ್‍ರವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿರುತ್ತಾರೆ. ಇವರು ವಕೀಲ ವೃತ್ತಿಯ ಜೊತೆಗೆ ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದು, ಸದರಿಯವರು ಮೇಲೆ ಒಟ್ಟು 4 ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾರೆ.

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಇವರುಗಳ ವಿರುದ್ದ ಅನೇಕ ಜಿಲ್ಲೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುತ್ತವೆ. ಜಸ್ಟೀಸ್ ಶಿವಪ್ಪರವರ ಮನೆಯಲ್ಲಿ ಹೆಚ್ಚಿನ ಸಂಪತ್ತು ಇದೆ ಎಂದು ಭಾವಿಸಿ, ಈ ಕೃತ್ಯವೆಸಗಿರುತ್ತಾರೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಒಟ್ಟು 20 ಜನ ಆರೋಪಿಗಳನ್ನು ದಸ್ತಗಿರಿ ಮಾಡಿಕೊಂಡಿದ್ದು, ಉಳಿಕೆ 3 ಆರೋಪಿಗಳ ಬಗ್ಗೆ ಪತ್ತೆ ಕಾರ್ಯ ಮುಂದುವರೆದಿರುತ್ತೆ.

ಸದರಿ ಆರೋಪಿತರುಗಳ ಪತ್ತೆಗಾಗಿ ಶ್ರೀ ಸಿದ್ದೇಶ್ವರ್, ಡಿ.ಎಸ್.ಪಿ. ಶ್ರೀರಂಗಪಟ್ಟಣ, ಶ್ರೀ ಪ್ರಕಾಶ್.ಬಿ.ಎಸ್. ಪೊಲೀಸ್ ಇನ್ಸ್‍ಪೆಕ್ಟರ್, ಪಾಂಡವಪುರ ಪೊಲೀಸ್ ಠಾಣೆ, ಶ್ರೀ ಲೋಕೇಶ್, ವೃತ್ತ ನಿರೀಕ್ಷಕರು, ಶ್ರೀ ಅಯ್ಯನಗೌಡ, ಪಿ.ಎಸ್.ಐ. ಪಾಂಡವಪುರ, ಶ್ರೀ ಅಜರುದ್ದೀನ್, ಪಿ.ಎಸ್.ಐ. ಅರಕೆರೆ ಪೊಲಿಸ್ ಠಾಣೆ. ಹಾಗೂ ಪೊಲೀಸ್ ಸಿಬ್ಬಂದಿಗಳು ಶ್ರಮವಹಿಸಿದ್ದು, ಈ ಪ್ರಕರಣದ ಆರೋಪಿಗಳು ಹಾಗೂ ಮಾಲುಗಳನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟರು, ಮಂಡ್ಯ ಜಿಲ್ಲೆ, ಮಂಡ್ಯರವರು ಪ್ರಶಂಶಿಸಿ, ಪತ್ತೆ ಕಾರ್ಯದಲ್ಲಿ ತೊಡಗಿದ್ದ ತಂಡಕ್ಕೆ ಒಂದು ಲಕ್ಷ ರೂ. ನಗದು ಬಹುಮಾನವನ್ನು ಮಂಜೂರು ಮಾಡಲು, ಮಾನ್ಯ ಐ.ಜಿ.ಪಿ. ದಕ್ಷಿಣ ವಲಯ, ಮೈಸೂರುರವರಿಗೆ ಶಿಫಾರಸ್ಸು ಸಲ್ಲಿಸಿರುತ್ತಾರೆ.

No comments:

Post a Comment