ವಿದ್ಯುತ್ ಉತ್ಪಾದನೆ ಸಾವಲಂಬನೆಗೆ ಕ್ರಮ: ಮುಖ್ಯಮಂತ್ರಿ
ಮೈಸೂರು,ಡಿ.11.ವಿದ್ಯುತ್ ಸಮಸ್ಯೆಯಿಂದ ಹೊರಬರಲು ರಾಜ್ಯವನ್ನು ವಿದ್ಯುತ್ ಉತ್ಪಾದನೆಯಲ್ಲಿ ಸಾವಲಂಬಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ಹೊಸ ಬೆಳಕು ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ವಿದ್ಯುತ್ ಪೂರೈಕೆ ಅಗತ್ಯ. ವಿದ್ಯುತ್ ಕೊರತೆಯಿಂದ ಬೆಡಿಕೆಗೆ ಅನುಸಾರವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಮಳೆಯ ಕೊರತೆಯಿಂದಾಗಿ ಜಲ ವಿದ್ಯುತ್ ಉತ್ಪಾದನೆಗೂ ಸಮಸ್ಯೆ ಕಾಡಿದೆ. ವಿದ್ಯುತ್ ಪೂರೈಕೆಗೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗಿದೆ. ಅಲ್ಲದೆ ಜಲ, ಗಾಳಿ ಹಾಗೂ ಇತರೆ ಅನೇಕ ಪ್ರಯತ್ನಗಳನ್ನು ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯಕ್ಕೆ 10,000 ಮೇಗಾ ವ್ಯಾಟ್ ವಿದ್ಯುತ್ತಿನ ಅವಶ್ಯಕತೆಯಿದೆ. ಆದರೆ 7000 ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 3000 ಮೇಗಾ ವ್ಯಾಟ್ ವಿದ್ಯುತಿನ ಕೊರತೆಯಿದ್ದು, ಇದನ್ನು ನೀಗಿಸಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿದ್ಯುತ್ ಉಳಿಸುವ ವಿನೂತನ ಎಲ್.ಇ.ಡಿ ಬಲ್ಬಗಳನ್ನು ಗೃಹ ಬಳಕೆಗೆ ಬಳಸಲು ಮುಂದಾಗಿದೆ. 9 ವ್ಯಾಟ್ ಸಾಮಥ್ರ್ಯದ ಎಲ್.ಇ.ಡಿ ಬಲ್ಬ್‍ಗಳು 40 ವ್ಯಾಟ್ ಸಾಮಥ್ರ್ಯದ ಬುರುಡೆ ಬಲ್ಬ್ ಅಥವಾ 18 ವ್ಯಾಟ್ ಸಾಮಥ್ರ್ಯದ ಸಿ.ಎಫ್.ಎಲ್ ಬಲ್ಬ್‍ನ ಬೆಳಕಿಗೆ ಸಮವಾಗಿರುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವಿನೂತನ ಎಲ್.ಇ.ಡಿ ಬಲ್ಬ್‍ಗಳಿಂದ ಶೇ.30 ರಷ್ಟು ವಿದ್ಯುತ್‍ತನ್ನು ಉಳಿಸಬಹುದು. ಒಂದು ಎಲ್.ಇ.ಡಿ ಬಲ್ಬ್ ಬಳಕೆಯಿಂದ ವರ್ಷಕ್ಕೆ ರೂ. 120 ರಿಂದ ರೂ. 140 ಹಣವನ್ನು ಗ್ರಾಹಕರು ಉಳಿಸಿಬಹುದು. ಒಂದು ಮನೆಯಲ್ಲಿ 5 ಎಲ್.ಇ.ಡಿ ಬಲ್ಬ್‍ಗಳಿಂದ ವರ್ಷಕ್ಕೆ ರೂ. 500 ರಿಂದ ರೂ. 600 ಉಳಿತಾಯ ಮಾಡಬಹುದು. ಕೇವಲ ಗೃಹ ಬಳಕೆಯಿಂದ ವರ್ಷಕ್ಕೆ ರೂ. 450 ರಿಂದ ರೂ. 500 ಕೋಟಿ ಹಣವನ್ನು ಎಲ್.ಇ.ಡಿ ಬಲ್ಬ್ ಬಳಕೆಯಿಂದ ಉಳಿತಾಯವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 22 ರಿಂದ 23 ಲಕ್ಷ ಪಂಪ್ ಸೆಟ್‍ಗಳಿಗೆ ಸರ್ಕಾರದ ವತಿಯಿಂದ ರೂ.7000 ಕೋಟಿ ಸಬ್‍ಸಿಡ ನೀಡಲಾಗಿದೆ. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತ ಭೂಮಿ ಹಾಗೂ ಉದ್ಯಾನವನಗಳನ್ನು ಬಳಸಿಕೊಂಡು ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ 1.53 ಕೋಟೆ ವಿದ್ಯುತ್ ಬಳಕೆದಾರರಿದ್ದಾರೆ. ಇವರೆಲ್ಲರೂ ಎಲ್.ಇ.ಡಿ ಬಲ್ಬ್‍ಗಳನ್ನು ಬಳಸಿದರೆ ವಿದ್ಯುತ್ ಉಳಿತಾಯದಿಂದ ಉಳಿದ ಹಣವನ್ನು ಇತರೆ ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದು ಎಂದು ತಿಳಿಸಿದರು.
ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಮಾತನಾಡಿ ಹೊಸ ಬಳಕೆ ಯೋಜನೆಯಡಿ ಅಂದಾಜು 6 ಕೋಟಿ ಎಲ್.ಇ.ಡಿ ಬಲ್ಬ್‍ಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನದಿಂದ ರಾಜ್ಯದ ವಿದ್ಯುತ್ ಬಳಕೆಯಲ್ಲಿ ವಾರ್ಷಿಕ ಅಂದಾಜು 1287 ಮೇಗಾ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಹೇಳಿದರು.
ಎಲ್.ಇ.ಡಿ ಬಲ್ಬ್‍ಗೆ 3 ವರ್ಷ ಗ್ಯಾರಂಟಿ ಇದ್ದು, ಅವಧಿಯೊಳಗೆ ಕೆಡುವ ಬಲ್ಬ್‍ಗಳನ್ನು ಸಂಸ್ಥೆಯವರು ಉಚಿತವಾಗಿ ಬದಲಾಯಿಸುತ್ತಾರೆ. ಪ್ರತಿ ಬಲ್ಬ್‍ನ್ನು ಅಂದಾಜು ಬೆಲೆ ತೆರಿಗೆ ಸೇರಿದಂತೆ ರೂ. 100 ಆಗಲಿದೆ. ಈ ಯೋಜನೆಯನ್ನು ಇ.ಇ.ಎಸ್.ಎಲ್ (ಎನರ್ಜಿ ಎಫಿಶಿಯನ್ಸಿ ಸರ್ವೀಸ್ ಲಿಮಿಟೆಡ್) ಜಾರಿಗೊಳಿಸುತ್ತಿದ್ದಾರೆ. 2 ಕಿ.ವ್ಯಾಟ್ ವರೆಗಿನ ಗೃಹೋಪಯೋಗಿ ಸ್ಥಾವರಗಳಿಗೆ 5 ಸಂಖ್ಯೆ ಮತ್ತು 2 ಕಿ.ವ್ಯಾಟ್ ಗಿಂತ ಮೇಲ್ಪಟ್ಟ ಗೃಹೋಪಯೋಗಿ ಸ್ಥಾವರಗಳಿಗೆ 10 ಎಲ್.ಇ.ಡಿ ಬಲ್ಬ್ ನೀಡುವ ಕಾರ್ಯಕ್ರಮವಿದೆ. ಹೊಸ ಬೆಳಕು ಯೋಜನೆಯನ್ನು ಬರುವ ದಿನಗಳಲ್ಲಿ ವಾಣಿಜ್ಯ ಬಳಕೆಗೆ ಮತ್ತು ಬೀದಿ ದೀಪಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ರೇಷ್ಮೆ ಮತ್ತು ಪಶು ಸಂಗೋಪನ ಇಲಾಖೆ ಸಚಿವರಾದ ಮಂಜು, ಶಾಸಕರಾದ ಸೋಮಶೇಖರ್, ಮಂಜುನಾಥ್, ಗೋವಿಂದ ರಾಜು, ಹೊಸ ಬೆಳಕು ಯೋಜನೆಯ ರಾಯಬಾರಿಗಳಾದ ನಟ ಪುನೀತ್ ರಾಜ್‍ಕುಮಾರ್, ನಟಿ ರಮ್ಯ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪುಸ್ತಕ ಎರವಲು ಸೇವೆ ಸ್ಥಗಿತ
ಮೈಸೂರು,ಡಿ.11.ಮೈಸೂರು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಶಾಖೆಯಲ್ಲಿ ದಿ: 12.12.2015 ರಿಂದ 18.12.2015 ರವರೆಗೆ ಪುಸ್ತಕ ದಾಸ್ತಾನು ಪರಿಶೀಲನೆ ನಡೆಯುತ್ತಿದ್ದು, ಸದರಿ ದಿನಗಳಂದು ಸಾರ್ವಜನಿಕರಿಗೆ ಪುಸ್ತಕ ಎರವಲು ಸೇವೆ ಇರುವುದಿಲ್ಲ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.
ಸದರಿ ದಿನಗಳಲ್ಲಿ ಸಾರ್ವಜನಿಕ ಓದುಗರಿಗೆ ದಿನಪತ್ರಿಕೆ, ನಿಯತಕಾಲಿಕೆ ಮತ್ತು ಪರಾಮರ್ಶನ ವಿಭಾಗಗಳ ಸೇವೆಗಳನ್ನು ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆ ವರೆಗೆ ನೀಡಲಾಗುವುದು.
ಗ್ರಂಥಾಲಯದಿಂದ ಈ ಹಿಂದೆ ಪುಸ್ತಕಗಳನ್ನು ಎರವಲು ಪಡೆದಿರುವವರು ಪುಸ್ತಕಗಳನ್ನು ಹಿಂದಿರುಗಿಸಬಹುದಾಗಿದೆ. ಮುಖ್ಯ ಶಾಖೆಯಲ್ಲಿ ಸದಸ್ಯತ್ವ ಹೊಂದಿರುವ ಎರವಲುದಾರರು ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ಪಡೆಯಲು ಕಡ್ಡಾಯವಾಗಿ ಪಿ.ವಿ.ಸಿ ಕಾರ್ಡ್‍ನ್ನು ಹೊಂದಬೇಕಾಗಿದೆ. ಪಿ.ವಿ.ಸಿ. ಕಾರ್ಡ್‍ನ್ನು ಪಡೆಯದಿರುವ ಎರವಲುದಾರರಿಗೆ ಪುಸ್ತಕಗಳನ್ನು ಇನ್ನು ಮುಂದೆ ಎರವಲು ನೀಡಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಅದಾಲತ್
ಮೈಸೂರು,ಡಿ.11. ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆಗಳ ಸುಧಾರಣೆಗಾಗಿ ಸಲಹೆ ಸ್ವಾಗತಿಸಲು ಯಾದವಗಿರಿ ಅಂಚೆ ಕಚೇರಿಯಲ್ಲಿರುವ ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ ದಿನಾಂಕ 17.12.2015 ರಂದು ಬೆಳಿಗ್ಗೆ 11 ಗಂಟೆಗೆ “ಡಾಕ್ ಅದಾಲತ್” ನಡೆಯಲಿದೆ.
ಗ್ರಾಹಕರು ತಮ್ಮ ದೂರು ಮತ್ತು ಕುಂದುಕೊರತೆಗಳನ್ನು ಲಿಖಿತವಾಗಿ ಯಾವುದೇ ಅಂಚೆ ಕಛೇರಿಯಿಂದ ಕಳುಹಿಸಬಹುದಾಗಿದ್ದು, ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ ದೂರುಗಳನ್ನು ದಿನಾಂಕ 16.12.2015.ರೊಳಗೆ ಸ್ವೀಕರಿಸಲಾಗುವುದು.
ವಾಯುದಳದ ಹವಾಮಾನ ವಿಭಾಗದಲ್ಲಿ ಆಫೀಸರ್ಸ್ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಡಿ.11.ಭಾರತೀಯ ವಾಯುದಳದ ಹವಾಮಾನ ವಿಭಾಗದಲ್ಲಿ ಖಾಲಿ ಇರುವ ಆಫೀಸರ್ಸ್ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 26 ವರ್ಷದೊಳಗಿರಬೇಕು. ಗಣಿತ /ಸಂಖ್ಯಾಶಾಸ್ತ್ರ /ಭೂಗೋಳಶಾಸ್ತ್ರ / /ಕಂಪ್ಯೂಟರ್ ಅಪ್ಲಿಕೇಷನ್ / ಪರಿಸರ ವಿಜ್ಞಾನ /ಅನ್ವಯಿಕ ಭೌತಶಾಸ್ತ್ರ / ಸಮುದ್ರಶಾಸ್ತ್ರ /ಪವನಶಾಸ್ತ್ರ /ಕೃಷಿ-ಪವನಶಾಸ್ತ್ರ /ಜಿಯೋಫಿಜಿಕ್ಸ್ / ಪರಿಸರ ಜೀವ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ದೇಹದಾಢ್ರ್ಯತೆ ಪುರುಷರಿಗೆ ಎತ್ತರ-157.5 ಸೆಂ.ಮೀ., ಮಹಿಳೆಯರಿಗೆ ಎತ್ತರ-152 ಸೆಂ.ಮೀ. ಎಂಪ್ಲಾಯ್ಮೇಂಟ್ ನ್ಯೂಸ್‍ನಲ್ಲಿ ಸಿಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಾಮಾನ್ಯ ಅಂಜೆ ಮೂಲಕ PಔSಖಿ ಃಂಉ ಓಔ.001,ಓIಖಒಂಓ ಃಊಂWಂಓ PಔSಖಿ ಔಈಈIಅಇ,ಓಇW ಆಇಐಊI-110106 ಇಲ್ಲಿಗೆ ಸಾಮಾನ್ಯ ಅಂಜೆ ಮೂಲಕ ದಿನಾಂಕ: 02/01/2016 ರೊಳಗಾಗಿ ತಲುಪುವಂತೆ ಕಳುಹಿಸುವುದು.
ದೇಹದಾಢ್ರ್ಯತೆ, ಪರೀಕ್ಷಾ ವಿಧಾನ, ನೇಮಕಾತಿಯ ಪರಿಪೂರ್ಣ ಮಾಹಿತಿಗೆ ವೆಬ್‍ಸೈಟ್ ವಿಳಾಸ ತಿತಿತಿ.ಛಿಚಿಡಿeeಡಿಚಿiಡಿಜಿoಡಿಛಿe.ಟಿiಛಿ.iಟಿ,/ತಿತಿತಿ.emಠಿಟoಥಿmeಟಿಣಟಿeತಿs.gov.iಟಿ,/ತಿತಿತಿ.ಡಿoರಿgಚಿಡಿsಚಿmಚಿಛಿhಚಿಡಿ.gov.iಟಿ ವೀಕ್ಷಿಸಬಹುದು. ಅಥವಾ ಉಪಮುಖ್ಯಸ್ಥರು, ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ ಮೈಸೂರು ಇವರನ್ನು ಸಂಪರ್ಕಿಸುವುದು.
ಪಿಂಚಣಿ ಅದಾಲತ್
ಮೈಸೂರು,ಡಿ.11.ಮೈಸೂರು ವಿಭಾಗ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ದಿನಾಂಕ 17.12.2015 ರಂದು ಮಧ್ಯಾಹ್ನ 3 ಗಂಟೆಗೆ ಪೆನ್‍ಷನ್ ಅದಾಲತ್ ಏರ್ಪಡಿಸಲಾಗಿದೆ. ಭಾಗವಹಿಸಲು ಇಚ್ಛೆಯುಳ್ಳ ಪಿಂಚಣಿದಾರರು ಅಹವಾಲುಗಳನ್ನು ದಿನಾಂಕ 16.12.2015 ರ ಒಳಗೆ ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಮೈಸೂರು ವಿಭಾಗ, ಮೈಸೂರು-570 020 ಇಲ್ಲಿಗೆ ಸಲ್ಲಿಸುವುದು.
ಕಾಲೇಜು ವಿದ್ಯಾರ್ಥಿಗಳ ಕಾರ್ಯಾಗಾರ
ಮೈಸೂರು,ಡಿ.11.ಚಾಮರಾಜೇಂದ್ರ ಸರ್ಕಾರಿ ದೈಶ್ಯಕಲಾ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 8 ನೇ ರಾಷ್ಟ್ರಮಟ್ಟದ ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಡಿಸೆಂಬರ್ 12 ರಂದು ಬೆಳಿಗ್ಗೆ 11-30 ಗಂಟೆಗೆ ಸಿಧ್ದಾರ್ಥನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೈಶ್ಯಕಲಾ ಕಾಲೇಜು ಆವರಣದಲ್ಲಿ ನಡೆಯಲಿದೆ.
ಗುಜರಾತ ವಡೊದರ ಫಾಕಲ್ಟಿ ಆಫ್ ಫೈನ್ ಆಟ್ರ್ಸ್ ವಿಶ್ರಾಂತ ಅನ್ವಯಕಲೆ ವಿಭಾಗದ ಪ್ರೊಫೆಸರ್ ಕಿರಣ್ ಶಹಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತಿರುವನಂತಪುರಂ ಸರ್ಕಾರಿ ಫೈನ್ ಆಟ್ರ್ಸ್ ಕಾಲೇಜಿನ ವಿಶ್ರಂತ ಪ್ರಾಂಶುಪಾಲ ಪ್ರೊಫೆಸರ್ ಅಜೇಯ ಕುಮಾರ್ ಎಸ್ ಅವರು ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ ಎಂ.ಎಸ್. ಮೂರ್ತಿ, ಪಶ್ಚಿಮ ಬಂಗಾಳದ ಶಾಂತಿನಿಕೇತನ ಗ್ರಾಫಿಕ್ ಆಟ್ರ್ಸ್ ವಿಭಾಗದ ಅಸೋಸಿಯೆಟ್ ಪ್ರೊಫೆಸರ್ ಪ್ರಶಾಂತ ಫಿರಂಗಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವಿಶ್ರಂತ ಅಧ್ಯಕ್ಷ ವೆಂಕಟಾಚಲಪತಿ, ಛಾಯಗ್ರಾಹಕ ಪವನಕುಮಾರ್‍ಕೆ.ಜೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
.
No comments:
Post a Comment