Monday, 14 December 2015

ಗ್ರೂಪ್-ಡಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
     ಮೈಸೂರು,ಡಿ.14.ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಖಾಲಿ ಇರುವ27 ಗ್ರೂಪ್-ಡಿ ಹುದ್ದೆ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ 18-35 ವರ್ಷ ವಯೋಮಿತಿಯೊಳಗಿನ ಅರ್ಹ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ.
    ವಯೋಮಿತಿ ಸಡಿಲಿಕೆ: ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಪ್ರವರ್ಗಗಳ  ವರ್ಗ-1, 2ಎ,       2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ರಿಯಾಯಿತಿ ಇರುತ್ತದೆ. ಅರ್ಜಿಯನ್ನು hಣಣಠಿ://ಞಚಿಡಿಟಿಚಿಣಚಿಞಚಿರಿuಜiಛಿಚಿಡಿಥಿ.ಞಚಿಡಿ.ಟಿiಛಿ.iಟಿ  ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಡಿಸೆಂಬರ್ 31 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ  ಮೈಸೂರು ಇವರನ್ನು ಸಂಪರ್ಕಿಸಬಹುದು.
ಜನವರಿ 1 ರಿಂದ ಚುಂಚನಕಟ್ಟೆ ಜಾತ್ರೆ
    ಮೈಸೂರು,ಡಿ.14.ಕೆ.ಆರ್. ನಗರ ತಾಲ್ಲೂಕು ಚುಂಚನಕಟ್ಟೆ ಶ್ರೀರಾಮ ದೇವರ ಜಾನುವಾರುಗಳ ಜಾತ್ರೆ ದಿನಾಂಕ 01.01.2016 ರಿಂದ 31.01.2016 ರವರೆಗೆ ನಡೆಯಲಿದ್ದು, ಜನವರಿ 16 ರಂದು ರಥೋತ್ಸವ ನಡೆಯಲಿದೆ.
  ಇತ್ತೀಚೆಗೆ ಹುಣಸೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಚುಂಚನಕಟ್ಟೆ ಜಾತ್ರಾ ಪೂರ್ವಸಿದ್ದತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಕೃಷ್ಣರಾಜನಗರ ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.
    ದಿನಾಂಕ 01.01.2016ರ ಒಳಗೆ ಜಾತ್ರಾ ಮಾಳಕ್ಕೆ ಜಾನುವಾರುಗಳು ಬರುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ದಿನಾಂಕ 01.01.2016 ರೊಳಗೆ ಬರುವ ದನ ಜಾನುವಾರುಗಳಿಗೆ ಯಾವುದೇ ಸೌಲಭ್ಯ ಮಾಡಿರುವುದಿಲ್ಲ. ಜನ/ಜಾನುವಾರುಗಳಿಗೆ ವೈದ್ಯಕೀಯ ಸೌಲಭ್ಯ ಕುಡಿಯುವ ನೀರು ಹಾಗೂ ವಿದ್ಯುಚ್ಫಕ್ತಿ ವ್ಯವಸ್ಥೆ ಇರುವುದಿಲ್ಲ ಹಾಗೂ ಅಂತಹವರ ವಿರುದ್ಧ ಕಾನೂನಿನ ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ
ಮೈಸೂರು,ಡಿ.14-ಮೈಸೂರು ನಗರದ ಮಿರ್ಜಾ ರಸ್ತೆಯಲ್ಲಿನ ಡಿ.ಐ.ಇ.ಟಿ ನಲ್ಲಿ ಪ್ರಥಮ ಮತ್ತು ದ್ವಿತೀಯ ಡಿ.ಇ.ಡಿ ಪೂರಕ ಪರೀಕ್ಷೆ ದಿನಾಂಕ: 14-12-2015 ರಿಂದ 19-12-2015 ರವರೆಗೆ ನಡೆಯಲಿದೆ.  ಸದರಿ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು  ನಿಷೇಧಿತ ಪ್ರದೇಶವೆಂದು ಘೋಷಿಸಿ ಮೈಸೂರು ನಗರದ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶದನ್ವಯ ದಿನಾಂಕ: 14-12-2015 ರಿಂದ 19-12-2015 ರವರೆಗೆ ಪರೀಕ್ಷಾ ಕೇಂದ್ರದ ಬಳಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೈಸೂರು ನಗರದ ಮಿರ್ಜಾ ರಸ್ತೆಯಲ್ಲಿನ ಡಿ.ಐ.ಇ.ಟಿ ನಲ್ಲಿ ಇರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ, ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 19 ರಂದು ಯುವ ಸೌರಭ ಕಾರ್ಯಕ್ರಮ
     ಮೈಸೂರು,ಡಿ.14.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಿಸೆಂಬರ್ 19 ರಂದು ಬೆಳಿಗ್ಗೆ    10-30 ಗಂಟೆಗೆ ಟಿ.ನರಸೀಪುರದ ವಿದ್ಯೋದಯ ಬಾಲಿಕಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಲಿದೆ.
    ಟಿ.ನರಸೀಪುರದ ಹಿರಿಯ ರಂಗಕಲಾವಿದ ಹೊನ್ನನಾಯಕರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಟಿ.ನರಸೀಪುರದ ಗ್ರಾಮ ವಿದ್ಯೋದಯ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
    ಮೈಸೂರಿನ ಪದವಿಪೂರ್ವ ಶಿಕ್ಷಣ ಮಂಡಳಿ ಉಪನಿರ್ದೇಶಕ ಪುಟ್ಟು, ಟಿ.ನರಸೀಪುರದ ತಹಶೀಲ್ದಾರ್ ಆರ್. ಶೂಲದಯ್ಯ, ಟಿ.ನರಸೀಪುರದ ವಿದ್ಯೋದಯ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲು ಉದಯ್ ಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಹುಣಸೂರಿನ ಶ್ರೀ ತ್ಯಾಗರಾಜ ಸಹಸ್ರಗಾಯನ ಟ್ರಸ್ಟ್ ವತಿಯಿಂದ ಪಿಟೀಲು ವಾದನ, ಮೈಸೂರಿನ ಮಾನಸ ಹಾಗೂ ನಯನ ಅವರಿಂದ ಕರ್ನಾಟಕ ಸಂಗೀತ, ಕೆ.ಆರ್.ನಗರದ ಶಿವರಾಜೇಗೌಡ ಅವರಿಂದ ತತ್ವಪದ, ಪಿರಿಯಾಪಟ್ಟಣ ವೆಂಕಟೇಶ್ ಮತ್ತು ತಂಡದಿಂದ ಜನಪದ ಗೀತೆ, ನಂಜನಗೂಡು ವಿ.ಭಾವನಾ ಮತ್ತು ತಂಡದಿಂದ ನೃತ್ಯ ರೂಪಕ, ಹೆಚ್.ಡಿ.ಕೋಟೆ ಮಂಜುನಾಥ ಮತ್ತು ತಂಡದಿಂದ ಕಂಸಾಳೆ ನೃತ್ಯ, ಮೈಸೂರಿನ ಕು|| ದೀಪಿಕಾ ಮತ್ತು ತಂಡದಿಂದ ವೀರಭದ್ರ ನೃತ್ಯ, ನಿತ್ಯ ನಿರಂತರ ಟ್ರಸ್ಟ್ ವತಿಯಿಂದ ನಾಟಕ ಹಾಗೂ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಬಸವರಾಜು ಮತ್ತು ತಂಡದವರು ಗಮಕ ವಾಚನ ಪ್ರಸುತ್ತಪಡಿಸಲಿದ್ದಾರೆ. ನಂಜನಗೂಡಿನ ಸೋಮೇಶ್ ಮತ್ತು ತಂಡದಿಂದ ನಗಾರಿ, ಕೆ.ಆರ್.ನಗರ ತಾಲ್ಲೂಕಿನ ಶೇಖರಯ್ಯ ಮತ್ತು ತಂಡದಿಂದ ಹುಲಿ ವೇಷ ಪಾಳೇಗಾರ ನೃತ್ಯ, ಟಿ.ನರಸೀಪುರ ಗುರುಸ್ವಾಮಿ ಮತ್ತು ತಂಡದಿಂದ ಪಟ ಕುಣಿತ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ ಪೆಂಜಳ್ಳಿ ಹಾಡಿ ರವಿ ಮತ್ತು ತಂಡ ಕೂರನನೃತ್ಯ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಉದ್ಯೋಗ ಮೇಳ
       ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯು ಅಪೊಲೋ ಹೋಮ್ ಹೆಲ್ತ್ ಕೆರ್ (ಪ್ರೈ)(ಲಿ) ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:21-12-2015 ರಂದು ಬೆಳಿಗ್ಗೆ:10-00 ಘಂಟೆಗೆ ಹುಣಸೂರು ರಸ್ತೆ ಬಿ.ಎಂ.ಆಸ್ಪತ್ರೆ ಎದುರು ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ.
   ಉದ್ಯೋಗ ಮೇಳದಲ್ಲಿ ಎ.ಎನ್.ಎಂ., ಜಿ.ಎನ್.ಎಂ., ಬಿ.ಎಸ್ಸಿ ನರ್ಸಿಂಗ್ ಹಾಗೂ ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರುವ 18 ರಿಂದ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬಹುದಾಗಿದೆ.
   ಹೆಚ್ಚಿನ ಮಾಹಿತಿಗೆ ಸಿ.ವಿಶ್ವನಾಥ, ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮೈಸೂರು, ಇವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ:0821-2489972 ಅಥವಾ 080-42157070 ರಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

No comments:

Post a Comment