ಶ್ರೀರಂಗಪಟ್ಟಣ:ಯುವ ಸಮುದಾಯ ನಾಡು,ನುಡಿ,ಸಾಹಿತ್ಯ,ಸಂಸ್ಕøತಿ ಕಟ್ಟುವ ದಿಕ್ಕಿನಲ್ಲಿ ಮನಸ್ಸು ಮಾಡುವುದರ ಜತೆಗೆ,ಕೋಮು ಭಾವನೆಯನ್ನು ತೊರೆದು ಸಹಿಷ್ಣುತೆಯಿಂದ ಬದುಕುವ ದೃಷ್ಠಿಕೋನವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತೂಬಿನಕೆರೆಯ ಮೈಸೂರು ವಿ.ವಿ.ಯ ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಹೊಂ¨ಯ್ಯ ಕೆ.ಹೊನ್ನಲಗೆರೆ ಕರೆ ನೀಡಿದರು.
ತಾಲೂಕು ಯುವ ಬರಹಗಾರರ ಬಳಗದ ವತಿಯಿಂದ ಪಟ್ಟಣದ ಬಿ.ಸಿ.ಎಂ. ವಿದ್ಯಾರ್ಥಿನಿಯರ ನಿಲಯದಲ್ಲಿ ನಡೆದ ಯುವಜನರು ಮತ್ತು ಕನ್ನಡ ಪ್ರಜ್ಞೆ ವಿಚಾರ ಕುರಿತ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮಾಜದ ಎಲ್ಲಾ ರಂಗಳಲ್ಲಿಯೂ ಯುವಕರು ಅಭಿವೃದ್ಧಿಯನ್ನು ಸಾಧಿಸಬೇಕು.ಇದಕ್ಕೆ ಪ್ರಾಮಾಣಿಕ ಬದ್ಧತೆ ಮುಖ್ಯ.ನಿರ್ದಿಷ್ಟವಾದ ಗುರಿ ಹಾಗೂ ಎತ್ತರದ ಕನಸ್ಸುಗಳನ್ನಿಟ್ಟುಕೊಂಡು ಮನ್ನಡೆಯಬೆಕು ಎಂದರು.
ರಾಜ್ಯದಲ್ಲಿ ಕನ್ನಡದÀ ಆಡಳಿತ ಸಂಪೂರ್ಣ ಜಾರಿಯಾಗಿಲ್ಲ.ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಕನ್ನಡವೆಂದರೆ ತಾತ್ಸಾರ ಭಾವವಿದೆ.ಕ್ನಡ ಕುರಿತಾಗಿ ಅಸಡ್ಡೆ ಬೆಳೆಸಿಕೊಂಡಿದ್ದಾರೆ.ಇದರಿಂದಾಗಿ ಕನ್ನಡ ಅಡಳಿತದಲ್ಲಿ ಸಂಪೂರ್ಣವಾಗಿ ಅನುಷ್ಠಾನವಾಗದೆ,
ಕನ್ನಡಕ್ಕೆ ಹಿನ್ನಡೆ ಉಂಟಾಗಿದೆ ಎಂದು ವಿಷಾದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ,ಯುವಜನರು ಆಧುನಿಕ ತಂತ್ರಜ್ಞಾನದ ಅಡಿಯಾಳಗದೆ,ಸಾಹಿತ್ಯ ಮತ್ತು ಸಾಂಸ್ಕøತಿಕ ಅಭಿರುಚಿಗಳನ್ನು ಮೈಗೂಡಿಸಿಕೊಂಡು,ಉತ್ತಮ ಜೀವನ ಮೌಲ್ಯಗಳ ಆರಾಧಿಸುವ ಜತೆಗೆ ಮಾನವೀಕರಣಗೊಳ್ಳವ
ಹಾದಿಯಲ್ಲಿ ಸಾಗಬೇಕು ಎಂದು ನುಡಿದರು.
ಯುವಜನತೆ ದಿನನಿತ್ಯದ ಬದುಕಿನಲ್ಲಿ ಸದಾ ಕನ್ನಡವನ್ನೇ ಧ್ಯಾನಿಸಬೇಕು.ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳ ಓದುವ ಸಂಸ್ಕøತಿ ಬೆಳೆಸಿಕೊಳ್ಳಬೇಕು.ಕನ್ನಡದಲ್ಲಿನ ಉತ್ತಮ ಚಲನಚಿತ್ರ,ಟಿವಿಯಲ್ಲಿನ ಮನೋವಿಕಾಸ ಮಾಡುವ ಕಾರ್ಯಕ್ರಮಗಳ ವೀಕ್ಷಿಸುವ ಮೂಲಕ ಕನ್ನಡ ಭಾಷೆ,ಸಾಹಿತ್ಯ,ಸಂಸ್ಕøತಿಯ ಅಭ್ಯುದಯಕ್ಕೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಉಪನ್ಯಾಸ ನೀಡಿ ಮಾತನಾಡಿದ ಅಧ್ಯಾಪಕ ಹಾಗೂ ಲೇಖಕ ಮಂಗಲ ಎಂ.ಇ.ಶಿವಣ್ಣ,ಯುವಕ ಯುವತಿಯರಲ್ಲಿ ಅಗಾಧ ಸಂಘಟನಾ ಶಕ್ತಿ ಮತ್ತು ಚೈತನ್ಯವಿರುತ್ತದೆ.ಇದನ್ನು ಕನ್ನಡ ಭಾಷೆಯ ಅಭಿವೃದ್ಧಿಗೆ ಬಳಸುವ ಕಾಳಜಿ ವಹಿಸಬೇಕು.ಕನ್ನಡದ ಬಗ್ಗೆ ಅನಾದರ ಭಾವ ಬೆಳೆಸಿಕೊಳ್ಳದೆ,ಅದನ್ನು ನಿರಂತರವಾಗಿ ಬಳಸುವ ಮೂಲಕ ತಮ್ಮ ಭಾಷಿಕ ಅಭಿಮಾನವನ್ನು ಮೆರೆಯಬೇಕು ಎಂದರು.
ವಿದ್ಯಾಥಿ ಯುವÀಜನರಿಂದ ನಾಡಿನ ಅಭಿವೃದ್ಧಿ ಸಾಧ್ಯವಿದೆ.ಇತಿಹಾಸದ ಎಲ್ಲಾ ಕ್ರಾಂತಿಗಳ ಯಶಸ್ಸಿನ ಹಿಂದೆ ಯುವಜನರ ಪಾತ್ರವಿರವುದೇ ಇದಕ್ಕೆ ಸಾಕ್ಷಿ.ಆದ್ದರಿಂದ ಯುವಜನರು ಯಾವುದೇ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗದೆ,ಧನಾತ್ಮಕ ಚಿಂತನೆಗಳ ದಿಕ್ಕಿನಲ್ಲಿ ಸಾಗಬೇಕು ಎಓಧು ಸಲಹೆ ನೀಡಿದರು.
ಸಮಾರಂಭದಲ್ಲಿ ವಿದ್ಯಾಥಿ ನಿಲಯದ ಮೇಲ್ವಿಚಾರಕಿ ಕೆ.ಎಸ್.ಪ್ರಮೀಳ,ತಾಲೂಕು ಯುವ ಬರಹಗಾರರ ಬಳಗದ ಅಧ್ಯಕ್ಷ ಅಪ್ಪಾಜಿ ಕೆ.ಶೆಟ್ಟಹಳ್ಳಿ,ಸಹಿತಿ ಅನಾರ್ಕಲಿ ಸಲೀಂ,ಯÀ್ವಕವಿ ಮಧುಕುಮಾರ್ ಸಣ್ಣೇನಹಳ್ಳಿ ಉಪಸ್ಥಿತರಿದ್ದರು.

No comments:
Post a Comment