ಮಂಡ್ಯ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರು ಪ್ರೇರಣಾ ಅಂಧರ ಸಂಸ್ಥೆಯ ಮಕ್ಕಳೊಂದಿಗೆ ಪ್ರಗತಿ ಗ್ರೂಫ್ ಆಫ್ ಕಂಪನಿಯ ಮುಖ್ಯಸ್ಥ ಎಚ್.ಎನ್. ಯೋಗೀಶ್ ಅವರು ತಮ್ಮ ಹುಟ್ಟುಹಬ್ಬನ್ನು ಗುರುವಾರ ಆಚರಿಸಿಕೊಂಡರು.
ಸಂಸ್ಥೆಯ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ಇತರೆ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಉಳ್ಳವರು ತಮ್ಮ ಹುಟ್ಟುಹಬ್ಬನ್ನು ಇಂತಹ ಮಕ್ಕಳೊಂದಿಗೆ ಆಚರಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪ್ರಗತಿ ಗ್ರೂಫ್ ಆಫ್ ಕಂಪನಿಯನ್ನು ಸ್ಥಾಪಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ನಡೆಸಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದೇನೆ ಎಂದರು.
ಯುವಕರು ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಪ್ರಗತಿ ಗ್ರೂಫ್ ಆಫ್ ಕಂಪನಿ ವತಿಯಿಂದ ಮಂಡ್ಯ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು ತಿಳಿಸಿದರು.
ಮಂಡ್ಯ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ನಾಗಣ್ಣಗೌಡ ಅವರ ಪರವಾಗಿ ಜಿಲ್ಲಾಧ್ಯಕ್ಷ ಎಚ್.ಹೊನ್ನಪ್ಪ ಅವರು ಕೊತ್ತತ್ತಿ ಹೋಬಳಿಯ ಇಂಡುವಾಳು ಗ್ರಾಪಂ ಸದಸ್ಯರನ್ನು ಭೇಟಿ ಮತ ಯಾಚಿಸಿದರು.
ಕೆ.ನಾಗಣ್ಣಗೌಡ ಅವರನ್ನು ಸ್ಪರ್ಧೆಗಿಳಿಸಿದ್ದು, ಅವರು ಜಿಲ್ಲಾದ್ಯಂತ ಗ್ರಾಪಂ ಸದಸ್ಯರನ್ನು ಭೇಟಿ ಮತ ಯಾಚಿಸಿದ್ದಾರೆ. ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಿ.ಎಂ. ರವೀಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಲ್ಲಿಕಾರ್ಜುನ, ಮುಖಂಡರಾದ ಕರೀಗೌಡ, ಡಾ. ಶಿವನಂಜಯ್ಯ, ಮೋಹನ್, ರವಿಕುಮಾರ್ ಇತರರಿದ್ದರು.
No comments:
Post a Comment