Thursday, 17 December 2015

ಮಂಡ್ಯ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರು ಪ್ರೇರಣಾ ಅಂಧರ ಸಂಸ್ಥೆಯ ಮಕ್ಕಳೊಂದಿಗೆ ಪ್ರಗತಿ ಗ್ರೂಫ್ ಆಫ್ ಕಂಪನಿಯ ಮುಖ್ಯಸ್ಥ ಎಚ್.ಎನ್. ಯೋಗೀಶ್ ಅವರು ತಮ್ಮ ಹುಟ್ಟುಹಬ್ಬನ್ನು ಗುರುವಾರ ಆಚರಿಸಿಕೊಂಡರು.
ಸಂಸ್ಥೆಯ ಮಕ್ಕಳಿಗೆ ಹಾಲು, ಹಣ್ಣು, ಬ್ರೆಡ್ ಇತರೆ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಉಳ್ಳವರು ತಮ್ಮ ಹುಟ್ಟುಹಬ್ಬನ್ನು ಇಂತಹ ಮಕ್ಕಳೊಂದಿಗೆ ಆಚರಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪ್ರಗತಿ ಗ್ರೂಫ್ ಆಫ್ ಕಂಪನಿಯನ್ನು ಸ್ಥಾಪಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ನಡೆಸಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದೇನೆ ಎಂದರು.
ಯುವಕರು ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಪ್ರಗತಿ ಗ್ರೂಫ್ ಆಫ್ ಕಂಪನಿ ವತಿಯಿಂದ ಮಂಡ್ಯ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು ತಿಳಿಸಿದರು.
ಮಂಡ್ಯ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ನಾಗಣ್ಣಗೌಡ ಅವರ ಪರವಾಗಿ ಜಿಲ್ಲಾಧ್ಯಕ್ಷ ಎಚ್.ಹೊನ್ನಪ್ಪ ಅವರು ಕೊತ್ತತ್ತಿ ಹೋಬಳಿಯ ಇಂಡುವಾಳು ಗ್ರಾಪಂ ಸದಸ್ಯರನ್ನು ಭೇಟಿ ಮತ ಯಾಚಿಸಿದರು.
ಕೆ.ನಾಗಣ್ಣಗೌಡ ಅವರನ್ನು ಸ್ಪರ್ಧೆಗಿಳಿಸಿದ್ದು, ಅವರು ಜಿಲ್ಲಾದ್ಯಂತ ಗ್ರಾಪಂ ಸದಸ್ಯರನ್ನು ಭೇಟಿ ಮತ ಯಾಚಿಸಿದ್ದಾರೆ. ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಿ.ಎಂ. ರವೀಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಲ್ಲಿಕಾರ್ಜುನ, ಮುಖಂಡರಾದ ಕರೀಗೌಡ, ಡಾ. ಶಿವನಂಜಯ್ಯ, ಮೋಹನ್, ರವಿಕುಮಾರ್ ಇತರರಿದ್ದರು.

Monday, 14 December 2015

ಡಿ.21ರಂದು ರೈತಸಂಘದಿಂದ ಬøಹತ್ ಪ್ರತಿಭಟನೆ
ಮಂಡ್ಯ, ಡಿ.14- ಮೈಷುಗರ್ ಕಾರ್ಖಾನೆ ಆರಂಭ, ಭತ್ತಕ್ಕೆ ಬೆಂಬಲ ಬೆಲೆ, ಹಾನಿಗೊಳಗಾದ ಭತ್ತದ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ಡಿ.21ರಂದು ರೈತಸಂಘ ಕಾರ್ಯಕರ್ತರಿಂದ ಬøಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬೋರಾಪುರ ಶಂಕರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವಮಾನ ವೈಪರಿತ್ಯದಿಂದ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಭತ್ತಕ್ಕೆ ಜೋನುರೋಗ ತಗುಲಿ ಅಪಾರ ನಷ್ಟವಾಗಿದೆ ಆದ್ದರಿಂದ ಕ್ವಿಂಟರ್ ಭತ್ತಕ್ಕೆ 2 ಸಾವಿರ ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ನವೆಂಬರ್- ಡಿಸೆಂಬರ್‍ನಲ್ಲಿ ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲಾಗುವುದು ಎಂದು ಹೇಳುತ್ತಿದ್ದ ಸಕ್ಕರೆ ಸಚಿವರು ಈಗ ಜನವರಿಯಲ್ಲಿ ಕಾರ್ಖಾನೆ ಆರಂಭಿಸುತ್ತೇನೆ ಎಂದು ಹೇಳುತ್ತಿದ್ದಾರೆ ಅದು ಎಷ್ಟರ ಮಟ್ಟಿಗೆ ನಿಜವೋ ತಿಳಿಯುತ್ತಿಲ್ಲ ಕೂಡಲೇ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಕಬ್ಬಿಗೆ ಎಫ್‍ಆರ್‍ಪಿ ದರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೆಲವು ಗ್ರಾಮಗಳು ಇನಾಮ್ ಗ್ರಾಮಗಳಾಗಿದ್ದು, ರೈತರಿಗೆ ರೆವಿನ್ಯೂ ದಾಖಲೆಗಳನ್ನು ಪಡೆಯುವಲ್ಲಿ ತೊಂದರೆಯಾಗಿದ್ದು ಈ ಇನಾಮ್ ಗ್ರಾಮಗಳಲ್ಲಿ ಸರ್ಕಾರ ಕೂಡಲೇ ರೀ ಸರ್ವೆ ನಡೆಸಿ ಪೆÇೀಡಿಮುಕ್ತ ಗ್ರಾಮಗಳಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ, ಮಹೇಶ, ಸುಧೀರ್‍ಕುಮಾರ್, ಶಿವರುದ್ರ ಉಪಸ್ಥಿತರಿದ್ದರು.
ಗ್ರೂಪ್-ಡಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
     ಮೈಸೂರು,ಡಿ.14.ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಖಾಲಿ ಇರುವ27 ಗ್ರೂಪ್-ಡಿ ಹುದ್ದೆ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ 18-35 ವರ್ಷ ವಯೋಮಿತಿಯೊಳಗಿನ ಅರ್ಹ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ.
    ವಯೋಮಿತಿ ಸಡಿಲಿಕೆ: ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಪ್ರವರ್ಗಗಳ  ವರ್ಗ-1, 2ಎ,       2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ರಿಯಾಯಿತಿ ಇರುತ್ತದೆ. ಅರ್ಜಿಯನ್ನು hಣಣಠಿ://ಞಚಿಡಿಟಿಚಿಣಚಿಞಚಿರಿuಜiಛಿಚಿಡಿಥಿ.ಞಚಿಡಿ.ಟಿiಛಿ.iಟಿ  ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಡಿಸೆಂಬರ್ 31 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ  ಮೈಸೂರು ಇವರನ್ನು ಸಂಪರ್ಕಿಸಬಹುದು.
ಜನವರಿ 1 ರಿಂದ ಚುಂಚನಕಟ್ಟೆ ಜಾತ್ರೆ
    ಮೈಸೂರು,ಡಿ.14.ಕೆ.ಆರ್. ನಗರ ತಾಲ್ಲೂಕು ಚುಂಚನಕಟ್ಟೆ ಶ್ರೀರಾಮ ದೇವರ ಜಾನುವಾರುಗಳ ಜಾತ್ರೆ ದಿನಾಂಕ 01.01.2016 ರಿಂದ 31.01.2016 ರವರೆಗೆ ನಡೆಯಲಿದ್ದು, ಜನವರಿ 16 ರಂದು ರಥೋತ್ಸವ ನಡೆಯಲಿದೆ.
  ಇತ್ತೀಚೆಗೆ ಹುಣಸೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಚುಂಚನಕಟ್ಟೆ ಜಾತ್ರಾ ಪೂರ್ವಸಿದ್ದತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಕೃಷ್ಣರಾಜನಗರ ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.
    ದಿನಾಂಕ 01.01.2016ರ ಒಳಗೆ ಜಾತ್ರಾ ಮಾಳಕ್ಕೆ ಜಾನುವಾರುಗಳು ಬರುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ದಿನಾಂಕ 01.01.2016 ರೊಳಗೆ ಬರುವ ದನ ಜಾನುವಾರುಗಳಿಗೆ ಯಾವುದೇ ಸೌಲಭ್ಯ ಮಾಡಿರುವುದಿಲ್ಲ. ಜನ/ಜಾನುವಾರುಗಳಿಗೆ ವೈದ್ಯಕೀಯ ಸೌಲಭ್ಯ ಕುಡಿಯುವ ನೀರು ಹಾಗೂ ವಿದ್ಯುಚ್ಫಕ್ತಿ ವ್ಯವಸ್ಥೆ ಇರುವುದಿಲ್ಲ ಹಾಗೂ ಅಂತಹವರ ವಿರುದ್ಧ ಕಾನೂನಿನ ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ
ಮೈಸೂರು,ಡಿ.14-ಮೈಸೂರು ನಗರದ ಮಿರ್ಜಾ ರಸ್ತೆಯಲ್ಲಿನ ಡಿ.ಐ.ಇ.ಟಿ ನಲ್ಲಿ ಪ್ರಥಮ ಮತ್ತು ದ್ವಿತೀಯ ಡಿ.ಇ.ಡಿ ಪೂರಕ ಪರೀಕ್ಷೆ ದಿನಾಂಕ: 14-12-2015 ರಿಂದ 19-12-2015 ರವರೆಗೆ ನಡೆಯಲಿದೆ.  ಸದರಿ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು  ನಿಷೇಧಿತ ಪ್ರದೇಶವೆಂದು ಘೋಷಿಸಿ ಮೈಸೂರು ನಗರದ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶದನ್ವಯ ದಿನಾಂಕ: 14-12-2015 ರಿಂದ 19-12-2015 ರವರೆಗೆ ಪರೀಕ್ಷಾ ಕೇಂದ್ರದ ಬಳಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೈಸೂರು ನಗರದ ಮಿರ್ಜಾ ರಸ್ತೆಯಲ್ಲಿನ ಡಿ.ಐ.ಇ.ಟಿ ನಲ್ಲಿ ಇರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ, ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 19 ರಂದು ಯುವ ಸೌರಭ ಕಾರ್ಯಕ್ರಮ
     ಮೈಸೂರು,ಡಿ.14.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡಿಸೆಂಬರ್ 19 ರಂದು ಬೆಳಿಗ್ಗೆ    10-30 ಗಂಟೆಗೆ ಟಿ.ನರಸೀಪುರದ ವಿದ್ಯೋದಯ ಬಾಲಿಕಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಲಿದೆ.
    ಟಿ.ನರಸೀಪುರದ ಹಿರಿಯ ರಂಗಕಲಾವಿದ ಹೊನ್ನನಾಯಕರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಟಿ.ನರಸೀಪುರದ ಗ್ರಾಮ ವಿದ್ಯೋದಯ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
    ಮೈಸೂರಿನ ಪದವಿಪೂರ್ವ ಶಿಕ್ಷಣ ಮಂಡಳಿ ಉಪನಿರ್ದೇಶಕ ಪುಟ್ಟು, ಟಿ.ನರಸೀಪುರದ ತಹಶೀಲ್ದಾರ್ ಆರ್. ಶೂಲದಯ್ಯ, ಟಿ.ನರಸೀಪುರದ ವಿದ್ಯೋದಯ ಬಾಲಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲು ಉದಯ್ ಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಹುಣಸೂರಿನ ಶ್ರೀ ತ್ಯಾಗರಾಜ ಸಹಸ್ರಗಾಯನ ಟ್ರಸ್ಟ್ ವತಿಯಿಂದ ಪಿಟೀಲು ವಾದನ, ಮೈಸೂರಿನ ಮಾನಸ ಹಾಗೂ ನಯನ ಅವರಿಂದ ಕರ್ನಾಟಕ ಸಂಗೀತ, ಕೆ.ಆರ್.ನಗರದ ಶಿವರಾಜೇಗೌಡ ಅವರಿಂದ ತತ್ವಪದ, ಪಿರಿಯಾಪಟ್ಟಣ ವೆಂಕಟೇಶ್ ಮತ್ತು ತಂಡದಿಂದ ಜನಪದ ಗೀತೆ, ನಂಜನಗೂಡು ವಿ.ಭಾವನಾ ಮತ್ತು ತಂಡದಿಂದ ನೃತ್ಯ ರೂಪಕ, ಹೆಚ್.ಡಿ.ಕೋಟೆ ಮಂಜುನಾಥ ಮತ್ತು ತಂಡದಿಂದ ಕಂಸಾಳೆ ನೃತ್ಯ, ಮೈಸೂರಿನ ಕು|| ದೀಪಿಕಾ ಮತ್ತು ತಂಡದಿಂದ ವೀರಭದ್ರ ನೃತ್ಯ, ನಿತ್ಯ ನಿರಂತರ ಟ್ರಸ್ಟ್ ವತಿಯಿಂದ ನಾಟಕ ಹಾಗೂ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಬಸವರಾಜು ಮತ್ತು ತಂಡದವರು ಗಮಕ ವಾಚನ ಪ್ರಸುತ್ತಪಡಿಸಲಿದ್ದಾರೆ. ನಂಜನಗೂಡಿನ ಸೋಮೇಶ್ ಮತ್ತು ತಂಡದಿಂದ ನಗಾರಿ, ಕೆ.ಆರ್.ನಗರ ತಾಲ್ಲೂಕಿನ ಶೇಖರಯ್ಯ ಮತ್ತು ತಂಡದಿಂದ ಹುಲಿ ವೇಷ ಪಾಳೇಗಾರ ನೃತ್ಯ, ಟಿ.ನರಸೀಪುರ ಗುರುಸ್ವಾಮಿ ಮತ್ತು ತಂಡದಿಂದ ಪಟ ಕುಣಿತ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ ಪೆಂಜಳ್ಳಿ ಹಾಡಿ ರವಿ ಮತ್ತು ತಂಡ ಕೂರನನೃತ್ಯ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಉದ್ಯೋಗ ಮೇಳ
       ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯು ಅಪೊಲೋ ಹೋಮ್ ಹೆಲ್ತ್ ಕೆರ್ (ಪ್ರೈ)(ಲಿ) ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:21-12-2015 ರಂದು ಬೆಳಿಗ್ಗೆ:10-00 ಘಂಟೆಗೆ ಹುಣಸೂರು ರಸ್ತೆ ಬಿ.ಎಂ.ಆಸ್ಪತ್ರೆ ಎದುರು ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ.
   ಉದ್ಯೋಗ ಮೇಳದಲ್ಲಿ ಎ.ಎನ್.ಎಂ., ಜಿ.ಎನ್.ಎಂ., ಬಿ.ಎಸ್ಸಿ ನರ್ಸಿಂಗ್ ಹಾಗೂ ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರುವ 18 ರಿಂದ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬಹುದಾಗಿದೆ.
   ಹೆಚ್ಚಿನ ಮಾಹಿತಿಗೆ ಸಿ.ವಿಶ್ವನಾಥ, ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮೈಸೂರು, ಇವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ:0821-2489972 ಅಥವಾ 080-42157070 ರಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

 ಪ್ರಬಲ ಕ್ಷೇತ್ರ: ಅಂಶಿ ಪ್ರಸನ್ನಕುಮಾರ್
ಮೈಸೂರು,ಡಿಸೆಂಬರ್14. ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತ ಬಂದಿರುವ   ಮಾಧ್ಯಮ ಕ್ಷೇತ್ರ ಇಂದು ಪ್ರಬಲ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ಕನ್ನಡ ಪ್ರಭ ದಿನ ಪತ್ರಿಕೆಯ ಸಹಾಯಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್ ತಿಳಿಸಿದರು.
 ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇಎಂಆರ್‍ಸಿ ಎಜ್ಯುಸ್ಯಾಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಪರಿಶಿಷ್ಟ ಜಾತಿ ಮತ್ತು ವರ್ಗದ ಅಭ್ಯರ್ಥಿಗಳಿಗೆ ವೀಡಿಯೋ ಚಿತ್ರೀಕರಣ ಮತ್ತು ಸಂಕಲನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸಮಾಜದಲ್ಲಿ ಪ್ರಬಲವಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಆಸಕ್ತಿಯಿಂದ ಕೆಲಸ ಮಾಡುವವರಿಗೆ ಸಾಕಷ್ಟು ಅವಕಾಶಗಳಿವೆ. ವೀಡಿಯೋ ಚಿತ್ರೀಕರಣ ಮತ್ತು ಸಂಕಲನದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮಾಧ್ಯಮ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು.
 ಸದೃಢ ರಾಷ್ಟ್ರ ನಿರ್ಮಾಣ ಮಾಡುವುದರಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಯುವ ಜನರು ಪತ್ರಿಕೋದ್ಯಮ ಕ್ಷೇತ್ರದಂತ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಬೇಕು. ಸಮಾಜದಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಪತ್ರಿಕೋದ್ಯಮ ಉತ್ತಮ ವೇದಿಕೆ. ಪ್ರತಿಕೋದ್ಯಮದ ಶಕ್ತಿ ದಿನ ದಿನಕ್ಕೆ ಪ್ರಬಲವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
 ವಿದ್ಯಾರ್ಥಿಗಳು ಮೊದಲು ಜೀವನದಲ್ಲಿ ಶಿಸ್ತು ಬೆಳಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಹೊಂದಬೇಕಾದರೆ ಕ್ಷೇತ್ರದ ಬಗ್ಗೆ ತಿಳುವಳಿಕೆ ಅಗತ್ಯ. ತರಬೇತಿ ಪಡೆಯಲು ಇಚ್ಚಿಸುವವರು ಮೊದಲು ವಿಷಯ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು. ತರಬೇತಿಯ ಸಂಪೂರ್ಣ ಉಪಯೋಗ ಪಡೆದರೆ ಮಾತ್ರ ತರಬೇತಿಗೆ ನಿಜವಾದ ಅರ್ಥ ಸಿಕ್ಕಂತೆ ಎಂದರು.  
 ವಾರ್ತಾ ಮತ್ತು ಸಾರ್ವಜನಿಕ ಸಮಪರ್ಕ ಇಲಾಖೆ ಉಪ ನಿರ್ದೇಶಕರಾದ ಎ.ಆರ್.ಪ್ರಕಾಶ್, ಬಸವರಾಜು ಹಾಗೂ ಇಎಂಆರ್‍ಸಿ ನಿರ್ದೇಶಕರಾದ ನಿರಂಜನ ವಾನಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Friday, 11 December 2015


                                          
ವಿದ್ಯುತ್ ಉತ್ಪಾದನೆ ಸಾವಲಂಬನೆಗೆ ಕ್ರಮ: ಮುಖ್ಯಮಂತ್ರಿ
     ಮೈಸೂರು,ಡಿ.11.ವಿದ್ಯುತ್ ಸಮಸ್ಯೆಯಿಂದ ಹೊರಬರಲು ರಾಜ್ಯವನ್ನು  ವಿದ್ಯುತ್ ಉತ್ಪಾದನೆಯಲ್ಲಿ ಸಾವಲಂಬಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 
     ಇಂದು ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ಹೊಸ ಬೆಳಕು ಯೋಜನೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ವಿದ್ಯುತ್ ಪೂರೈಕೆ ಅಗತ್ಯ. ವಿದ್ಯುತ್ ಕೊರತೆಯಿಂದ ಬೆಡಿಕೆಗೆ ಅನುಸಾರವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಮಳೆಯ ಕೊರತೆಯಿಂದಾಗಿ ಜಲ ವಿದ್ಯುತ್ ಉತ್ಪಾದನೆಗೂ ಸಮಸ್ಯೆ ಕಾಡಿದೆ. ವಿದ್ಯುತ್ ಪೂರೈಕೆಗೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗಿದೆ. ಅಲ್ಲದೆ ಜಲ, ಗಾಳಿ ಹಾಗೂ ಇತರೆ ಅನೇಕ ಪ್ರಯತ್ನಗಳನ್ನು ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. 
     ರಾಜ್ಯಕ್ಕೆ 10,000 ಮೇಗಾ ವ್ಯಾಟ್ ವಿದ್ಯುತ್ತಿನ ಅವಶ್ಯಕತೆಯಿದೆ. ಆದರೆ 7000 ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 3000 ಮೇಗಾ ವ್ಯಾಟ್ ವಿದ್ಯುತಿನ ಕೊರತೆಯಿದ್ದು, ಇದನ್ನು ನೀಗಿಸಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿದ್ಯುತ್ ಉಳಿಸುವ ವಿನೂತನ ಎಲ್.ಇ.ಡಿ ಬಲ್ಬಗಳನ್ನು ಗೃಹ ಬಳಕೆಗೆ ಬಳಸಲು ಮುಂದಾಗಿದೆ. 9 ವ್ಯಾಟ್ ಸಾಮಥ್ರ್ಯದ ಎಲ್.ಇ.ಡಿ ಬಲ್ಬ್‍ಗಳು 40 ವ್ಯಾಟ್ ಸಾಮಥ್ರ್ಯದ ಬುರುಡೆ ಬಲ್ಬ್ ಅಥವಾ 18 ವ್ಯಾಟ್ ಸಾಮಥ್ರ್ಯದ ಸಿ.ಎಫ್.ಎಲ್ ಬಲ್ಬ್‍ನ ಬೆಳಕಿಗೆ ಸಮವಾಗಿರುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
     ವಿನೂತನ ಎಲ್.ಇ.ಡಿ ಬಲ್ಬ್‍ಗಳಿಂದ ಶೇ.30 ರಷ್ಟು ವಿದ್ಯುತ್‍ತನ್ನು ಉಳಿಸಬಹುದು. ಒಂದು ಎಲ್.ಇ.ಡಿ ಬಲ್ಬ್ ಬಳಕೆಯಿಂದ ವರ್ಷಕ್ಕೆ  ರೂ. 120 ರಿಂದ ರೂ. 140 ಹಣವನ್ನು ಗ್ರಾಹಕರು ಉಳಿಸಿಬಹುದು. ಒಂದು ಮನೆಯಲ್ಲಿ 5 ಎಲ್.ಇ.ಡಿ ಬಲ್ಬ್‍ಗಳಿಂದ ವರ್ಷಕ್ಕೆ ರೂ. 500 ರಿಂದ ರೂ. 600 ಉಳಿತಾಯ ಮಾಡಬಹುದು. ಕೇವಲ ಗೃಹ ಬಳಕೆಯಿಂದ ವರ್ಷಕ್ಕೆ ರೂ. 450 ರಿಂದ ರೂ. 500 ಕೋಟಿ ಹಣವನ್ನು ಎಲ್.ಇ.ಡಿ ಬಲ್ಬ್ ಬಳಕೆಯಿಂದ ಉಳಿತಾಯವಾಗಲಿದೆ ಎಂದು ಹೇಳಿದರು.
     ರಾಜ್ಯದಲ್ಲಿ 22 ರಿಂದ 23 ಲಕ್ಷ ಪಂಪ್ ಸೆಟ್‍ಗಳಿಗೆ ಸರ್ಕಾರದ ವತಿಯಿಂದ ರೂ.7000 ಕೋಟಿ ಸಬ್‍ಸಿಡ ನೀಡಲಾಗಿದೆ. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತ ಭೂಮಿ ಹಾಗೂ ಉದ್ಯಾನವನಗಳನ್ನು ಬಳಸಿಕೊಂಡು ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಹಲವು ಪ್ರಯತ್ನಗಳನ್ನು  ಮಾಡಲಾಗುತ್ತಿದೆ. ರಾಜ್ಯದಲ್ಲಿ 1.53 ಕೋಟೆ ವಿದ್ಯುತ್ ಬಳಕೆದಾರರಿದ್ದಾರೆ. ಇವರೆಲ್ಲರೂ ಎಲ್.ಇ.ಡಿ ಬಲ್ಬ್‍ಗಳನ್ನು ಬಳಸಿದರೆ ವಿದ್ಯುತ್ ಉಳಿತಾಯದಿಂದ ಉಳಿದ ಹಣವನ್ನು ಇತರೆ ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದು ಎಂದು ತಿಳಿಸಿದರು.
     ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಮಾತನಾಡಿ ಹೊಸ ಬಳಕೆ ಯೋಜನೆಯಡಿ ಅಂದಾಜು 6 ಕೋಟಿ ಎಲ್.ಇ.ಡಿ ಬಲ್ಬ್‍ಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನದಿಂದ ರಾಜ್ಯದ ವಿದ್ಯುತ್ ಬಳಕೆಯಲ್ಲಿ ವಾರ್ಷಿಕ ಅಂದಾಜು 1287 ಮೇಗಾ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಹೇಳಿದರು.
     ಎಲ್.ಇ.ಡಿ ಬಲ್ಬ್‍ಗೆ 3 ವರ್ಷ ಗ್ಯಾರಂಟಿ ಇದ್ದು, ಅವಧಿಯೊಳಗೆ ಕೆಡುವ ಬಲ್ಬ್‍ಗಳನ್ನು ಸಂಸ್ಥೆಯವರು ಉಚಿತವಾಗಿ ಬದಲಾಯಿಸುತ್ತಾರೆ. ಪ್ರತಿ ಬಲ್ಬ್‍ನ್ನು ಅಂದಾಜು ಬೆಲೆ ತೆರಿಗೆ ಸೇರಿದಂತೆ ರೂ. 100 ಆಗಲಿದೆ. ಈ ಯೋಜನೆಯನ್ನು ಇ.ಇ.ಎಸ್.ಎಲ್ (ಎನರ್ಜಿ ಎಫಿಶಿಯನ್ಸಿ ಸರ್ವೀಸ್ ಲಿಮಿಟೆಡ್) ಜಾರಿಗೊಳಿಸುತ್ತಿದ್ದಾರೆ. 2 ಕಿ.ವ್ಯಾಟ್ ವರೆಗಿನ ಗೃಹೋಪಯೋಗಿ ಸ್ಥಾವರಗಳಿಗೆ 5 ಸಂಖ್ಯೆ ಮತ್ತು 2 ಕಿ.ವ್ಯಾಟ್ ಗಿಂತ ಮೇಲ್ಪಟ್ಟ ಗೃಹೋಪಯೋಗಿ ಸ್ಥಾವರಗಳಿಗೆ 10 ಎಲ್.ಇ.ಡಿ ಬಲ್ಬ್ ನೀಡುವ ಕಾರ್ಯಕ್ರಮವಿದೆ. ಹೊಸ ಬೆಳಕು ಯೋಜನೆಯನ್ನು ಬರುವ ದಿನಗಳಲ್ಲಿ ವಾಣಿಜ್ಯ ಬಳಕೆಗೆ ಮತ್ತು ಬೀದಿ ದೀಪಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. 
    ಲೋಕೋಪಯೋಗಿ ಇಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ರೇಷ್ಮೆ ಮತ್ತು ಪಶು ಸಂಗೋಪನ ಇಲಾಖೆ ಸಚಿವರಾದ ಮಂಜು, ಶಾಸಕರಾದ ಸೋಮಶೇಖರ್,  ಮಂಜುನಾಥ್, ಗೋವಿಂದ ರಾಜು, ಹೊಸ ಬೆಳಕು ಯೋಜನೆಯ ರಾಯಬಾರಿಗಳಾದ ನಟ ಪುನೀತ್ ರಾಜ್‍ಕುಮಾರ್, ನಟಿ ರಮ್ಯ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
  
ಪುಸ್ತಕ ಎರವಲು ಸೇವೆ  ಸ್ಥಗಿತ
 ಮೈಸೂರು,ಡಿ.11.ಮೈಸೂರು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಶಾಖೆಯಲ್ಲಿ                                ದಿ: 12.12.2015 ರಿಂದ 18.12.2015 ರವರೆಗೆ ಪುಸ್ತಕ ದಾಸ್ತಾನು ಪರಿಶೀಲನೆ  ನಡೆಯುತ್ತಿದ್ದು, ಸದರಿ ದಿನಗಳಂದು ಸಾರ್ವಜನಿಕರಿಗೆ  ಪುಸ್ತಕ ಎರವಲು ಸೇವೆ  ಇರುವುದಿಲ್ಲ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.
    ಸದರಿ ದಿನಗಳಲ್ಲಿ ಸಾರ್ವಜನಿಕ ಓದುಗರಿಗೆ ದಿನಪತ್ರಿಕೆ, ನಿಯತಕಾಲಿಕೆ ಮತ್ತು ಪರಾಮರ್ಶನ ವಿಭಾಗಗಳ ಸೇವೆಗಳನ್ನು ಬೆಳಿಗ್ಗೆ 8.00 ರಿಂದ  ರಾತ್ರಿ 8.00 ಗಂಟೆ ವರೆಗೆ ನೀಡಲಾಗುವುದು.
    ಗ್ರಂಥಾಲಯದಿಂದ ಈ ಹಿಂದೆ ಪುಸ್ತಕಗಳನ್ನು ಎರವಲು ಪಡೆದಿರುವವರು ಪುಸ್ತಕಗಳನ್ನು ಹಿಂದಿರುಗಿಸಬಹುದಾಗಿದೆ. ಮುಖ್ಯ ಶಾಖೆಯಲ್ಲಿ ಸದಸ್ಯತ್ವ ಹೊಂದಿರುವ ಎರವಲುದಾರರು ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ಪಡೆಯಲು ಕಡ್ಡಾಯವಾಗಿ ಪಿ.ವಿ.ಸಿ ಕಾರ್ಡ್‍ನ್ನು ಹೊಂದಬೇಕಾಗಿದೆ. ಪಿ.ವಿ.ಸಿ. ಕಾರ್ಡ್‍ನ್ನು ಪಡೆಯದಿರುವ ಎರವಲುದಾರರಿಗೆ ಪುಸ್ತಕಗಳನ್ನು ಇನ್ನು ಮುಂದೆ ಎರವಲು ನೀಡಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಅದಾಲತ್
        ಮೈಸೂರು,ಡಿ.11. ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆಗಳ ಸುಧಾರಣೆಗಾಗಿ ಸಲಹೆ ಸ್ವಾಗತಿಸಲು ಯಾದವಗಿರಿ ಅಂಚೆ ಕಚೇರಿಯಲ್ಲಿರುವ ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ ದಿನಾಂಕ 17.12.2015 ರಂದು ಬೆಳಿಗ್ಗೆ 11 ಗಂಟೆಗೆ “ಡಾಕ್ ಅದಾಲತ್” ನಡೆಯಲಿದೆ. 
   ಗ್ರಾಹಕರು ತಮ್ಮ ದೂರು ಮತ್ತು ಕುಂದುಕೊರತೆಗಳನ್ನು ಲಿಖಿತವಾಗಿ ಯಾವುದೇ ಅಂಚೆ ಕಛೇರಿಯಿಂದ ಕಳುಹಿಸಬಹುದಾಗಿದ್ದು,  ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ ದೂರುಗಳನ್ನು ದಿನಾಂಕ 16.12.2015.ರೊಳಗೆ ಸ್ವೀಕರಿಸಲಾಗುವುದು.
ವಾಯುದಳದ ಹವಾಮಾನ ವಿಭಾಗದಲ್ಲಿ ಆಫೀಸರ್ಸ್ ಹುದ್ದೆಗೆ ಅರ್ಜಿ ಆಹ್ವಾನ
     ಮೈಸೂರು,ಡಿ.11.ಭಾರತೀಯ ವಾಯುದಳದ ಹವಾಮಾನ ವಿಭಾಗದಲ್ಲಿ ಖಾಲಿ ಇರುವ ಆಫೀಸರ್ಸ್ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ
     ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 26 ವರ್ಷದೊಳಗಿರಬೇಕು. ಗಣಿತ /ಸಂಖ್ಯಾಶಾಸ್ತ್ರ /ಭೂಗೋಳಶಾಸ್ತ್ರ / /ಕಂಪ್ಯೂಟರ್ ಅಪ್ಲಿಕೇಷನ್ / ಪರಿಸರ ವಿಜ್ಞಾನ /ಅನ್ವಯಿಕ ಭೌತಶಾಸ್ತ್ರ / ಸಮುದ್ರಶಾಸ್ತ್ರ /ಪವನಶಾಸ್ತ್ರ /ಕೃಷಿ-ಪವನಶಾಸ್ತ್ರ /ಜಿಯೋಫಿಜಿಕ್ಸ್ / ಪರಿಸರ ಜೀವ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ದೇಹದಾಢ್ರ್ಯತೆ ಪುರುಷರಿಗೆ ಎತ್ತರ-157.5 ಸೆಂ.ಮೀ., ಮಹಿಳೆಯರಿಗೆ ಎತ್ತರ-152 ಸೆಂ.ಮೀ. ಎಂಪ್ಲಾಯ್ಮೇಂಟ್ ನ್ಯೂಸ್‍ನಲ್ಲಿ ಸಿಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಾಮಾನ್ಯ ಅಂಜೆ ಮೂಲಕ  PಔSಖಿ ಃಂಉ ಓಔ.001,ಓIಖಒಂಓ ಃಊಂWಂಓ PಔSಖಿ ಔಈಈIಅಇ,ಓಇW ಆಇಐಊI-110106 ಇಲ್ಲಿಗೆ  ಸಾಮಾನ್ಯ ಅಂಜೆ ಮೂಲಕ ದಿನಾಂಕ: 02/01/2016 ರೊಳಗಾಗಿ ತಲುಪುವಂತೆ ಕಳುಹಿಸುವುದು. 
     ದೇಹದಾಢ್ರ್ಯತೆ, ಪರೀಕ್ಷಾ ವಿಧಾನ, ನೇಮಕಾತಿಯ ಪರಿಪೂರ್ಣ ಮಾಹಿತಿಗೆ ವೆಬ್‍ಸೈಟ್ ವಿಳಾಸ ತಿತಿತಿ.ಛಿಚಿಡಿeeಡಿಚಿiಡಿಜಿoಡಿಛಿe.ಟಿiಛಿ.iಟಿ,/ತಿತಿತಿ.emಠಿಟoಥಿmeಟಿಣಟಿeತಿs.gov.iಟಿ,/ತಿತಿತಿ.ಡಿoರಿgಚಿಡಿsಚಿmಚಿಛಿhಚಿಡಿ.gov.iಟಿ ವೀಕ್ಷಿಸಬಹುದು. ಅಥವಾ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ  ಮೈಸೂರು ಇವರನ್ನು ಸಂಪರ್ಕಿಸುವುದು.                                                                                                                                                                                                                                                                                                                                               
ಪಿಂಚಣಿ ಅದಾಲತ್
    ಮೈಸೂರು,ಡಿ.11.ಮೈಸೂರು ವಿಭಾಗ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ದಿನಾಂಕ  17.12.2015 ರಂದು ಮಧ್ಯಾಹ್ನ 3 ಗಂಟೆಗೆ   ಪೆನ್‍ಷನ್ ಅದಾಲತ್ ಏರ್ಪಡಿಸಲಾಗಿದೆ.  ಭಾಗವಹಿಸಲು ಇಚ್ಛೆಯುಳ್ಳ ಪಿಂಚಣಿದಾರರು ಅಹವಾಲುಗಳನ್ನು ದಿನಾಂಕ 16.12.2015 ರ ಒಳಗೆ ಹಿರಿಯ ಅಂಚೆ ಅಧೀಕ್ಷಕರ ಕಚೇರಿ,  ಮೈಸೂರು ವಿಭಾಗ, ಮೈಸೂರು-570 020 ಇಲ್ಲಿಗೆ ಸಲ್ಲಿಸುವುದು.
ಕಾಲೇಜು ವಿದ್ಯಾರ್ಥಿಗಳ ಕಾರ್ಯಾಗಾರ
    ಮೈಸೂರು,ಡಿ.11.ಚಾಮರಾಜೇಂದ್ರ ಸರ್ಕಾರಿ ದೈಶ್ಯಕಲಾ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ 8 ನೇ ರಾಷ್ಟ್ರಮಟ್ಟದ ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಡಿಸೆಂಬರ್ 12 ರಂದು ಬೆಳಿಗ್ಗೆ 11-30 ಗಂಟೆಗೆ ಸಿಧ್ದಾರ್ಥನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೈಶ್ಯಕಲಾ ಕಾಲೇಜು ಆವರಣದಲ್ಲಿ ನಡೆಯಲಿದೆ.
     ಗುಜರಾತ ವಡೊದರ ಫಾಕಲ್ಟಿ ಆಫ್ ಫೈನ್ ಆಟ್ರ್ಸ್  ವಿಶ್ರಾಂತ ಅನ್ವಯಕಲೆ ವಿಭಾಗದ ಪ್ರೊಫೆಸರ್ ಕಿರಣ್ ಶಹಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತಿರುವನಂತಪುರಂ ಸರ್ಕಾರಿ ಫೈನ್ ಆಟ್ರ್ಸ್ ಕಾಲೇಜಿನ ವಿಶ್ರಂತ ಪ್ರಾಂಶುಪಾಲ ಪ್ರೊಫೆಸರ್ ಅಜೇಯ ಕುಮಾರ್ ಎಸ್ ಅವರು ಅಧ್ಯಕ್ಷತೆ ವಹಿಸುವರು.
     ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ ಎಂ.ಎಸ್. ಮೂರ್ತಿ, ಪಶ್ಚಿಮ ಬಂಗಾಳದ ಶಾಂತಿನಿಕೇತನ ಗ್ರಾಫಿಕ್ ಆಟ್ರ್ಸ್ ವಿಭಾಗದ ಅಸೋಸಿಯೆಟ್ ಪ್ರೊಫೆಸರ್ ಪ್ರಶಾಂತ ಫಿರಂಗಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವಿಶ್ರಂತ ಅಧ್ಯಕ್ಷ ವೆಂಕಟಾಚಲಪತಿ, ಛಾಯಗ್ರಾಹಕ ಪವನಕುಮಾರ್‍ಕೆ.ಜೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


 
.

Thursday, 10 December 2015

 ವೀಕ್ಷಕರ ನೇಮಕ
  ಮೈಸೂರು,ಡಿ.10-ಕರ್ನಾಟಕ ವಿಧಾನ ಪರಿಷತ್ತಿಗೆ ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆ 2015 ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ .ಐಯ್ಯಪ್ಪ ಎಂ.ಕೆ, ಆಯುಕ್ತರು, ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ, ಬೆಂಗಳೂರು ಇವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸದರಿ ಚುನಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಅಭ್ಯರ್ಥಿಗಳು / ಮತದಾರರು / ಸಾರ್ವಜನಿಕರು ಚುನಾವಣಾ ವೀಕ್ಷಕರನ್ನು ಮೊಬೈಲ್ ಸಂಖ್ಯೆಗೆ 9449270557 ಕರೆ ಮಾಡಿ ಸಂಪರ್ಕಿಸಬಹುದಾಗಿದೆ
    ಚುನಾವಣಾ ವೀಕ್ಷಕರ ಸಮನ್ವಯಾಧಿಕಾರಿಯಾಗಿ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ  ಪ್ರಸಾದ್ ಮೂರ್ತಿ ಮೊಬೈಲ್ ಸಂಖ್ಯೆ 9480326752 ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಬಡತನ ಮಾನವ ಹಕ್ಕುಗಳಿಗೆ ದೂಡ್ಡ ಸವಾಲು: ಕೆ.ಎಸ್.ಮುದಗಲ್
   
 ಮೈಸೂರು,ಡಿ.10-ಬಡತನ ಮತ್ತು ಅನಕ್ಷರತೆ ಮಾನವ ಹಕ್ಕುಗಳಿಗೆ ದೂಡ್ಡ ಸವಾಲುಗಳಾಗಿ ಹೊರಹೊಮ್ಮಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಹೇಳಿದರು.
    ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಮಾನವನ ಹಕ್ಕುಗಳು ಬಹಳ ವರ್ಷಗಳಿಂದಲ್ಲೇ ಉಲ್ಲಂಘನೆಯಾಗುತ್ತಿವೆÉ. ಸಮಾಜದಲ್ಲಿ ಎಲ್ಲರಿಗೂ ಸಮಾನ ಬದುಕು ಬಾಳಲು ಅವಕಾಶವಿದೆ. ಆದರೆ ಬಡತನ ಮತ್ತು ಅನಕ್ಷರತೆ ಸಮಾನ ಬಾಳಿಗೆ ಅಡ್ಡಿಯಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜೊತೆಯಲ್ಲಿ ಜತೆಗೆ ಅಕ್ಷರಸ್ತರಾದರೆ ಮಾನವ ಹಕ್ಕುಗಳ ಪರಿಕಲ್ಪನೆಗೆ ನಿಜವಾದ ಅರ್ಥ ಸಿಕ್ಕಂತೆ ಎಂದು ಹೇಳಿದರು.
    ಸಮಾಜದಲ್ಲಿ ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು.  ಯಾವುದೇ ಕಾರಣದಿಂದ ಇದಕ್ಕೆ ತೊಡಕಾದಲ್ಲಿ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ.  ಮಾನವ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು
    ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾದಲ್ಲಿ ದೇಶದ ಅಭಿವೃದ್ಧಿಗೆ ಮಾರಕವಾಗುವುದಲ್ಲದೆ, ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚು. ವಿಶ್ವದಲ್ಲಿ ಮಾನವ ಹಕ್ಕುಗಳಿಗೆ ಹೆಚ್ಚಿನ ಒತ್ತು ನೀಡುತ್ತ ಬಂದಿರುವ ದೇಶಗಳಲ್ಲಿ ಭಾರತ ಮುಂಚುಣಿಯಲ್ಲಿದೆ ಎಂದರು.
    ಮೈಸೂರಿನ ವಿಶ್ವವಿದ್ಯಾನಿಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಎಂ. ಉಮಾಪತಿ ಅವರು ಮಾತನಾಡಿ 1948 ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ತೀವ್ರ ಸ್ಪಂದನೆ ನೀಡಿದ ಪರಿಣಾಮವಾಗಿ, ಆಗಿನಿಂದಲೂ ಮಾನವ ಹಕ್ಕುಗಳ ರಕ್ಷಣಾ ದಿನವನ್ನು ಆಚರಿಸಲಾಗುತ್ತಿದೆ. ಮಗುವಿನ ಹುಟ್ಟಿನಿಂದ ಮೊದಲುಗೊಳ್ಳುವ ಹಕ್ಕುಗಳು, ಮರಣ ಕಾಲದವರೆಗೆ ಜೀವನದುದ್ದಕ್ಕೂ ಆತನಿಗೆ ಹಕ್ಕುಗಳನ್ನು ನಮ್ಮ ಸಂವಿಧಾನ ದಯಪಾಲಿಸಿದೆ ಎಂದು ಹೇಳಿದರು.
     ದೇಶದಲ್ಲಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿಯೂ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ನಗರೀಕರಣ, ಕೈಗಾರಿಕರಣದ ಜೊತೆ ಜೊತೆಗೆ ನಾಗರಿಕತೆಯ ಅಭಿವೃದ್ಧಿಯತ್ತ ಹಾಗೂ ಅವರ ಹಕ್ಕುಗಳ ರಕ್ಷಣೆಯತ್ತಲೂ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.  ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಮಾನವ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು ಎಂದರು.
     ಸಮಾಜದಲ್ಲಿ ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು. ಯಾವುದೇ ಕಾರಣದಿಂದ ಇದಕ್ಕೆ ತೊಡಕಾದಲ್ಲಿ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ.  ಮಾನವ ಹಕ್ಕುಗಳ ಬಗ್ಗೆ ಕೇವಲ ದಿನಾಚರಣೆಯಂದು ಚರ್ಚಿಸದೆ,  ವರ್ಷದುದ್ದಕ್ಕೂ ಇದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಾಗಬೇಕು ಎಂದು ಹೇಳಿದರು.
     ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್ ಹೆಗಡೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್, ಮೈಸೂರು ಉಪ ವಿಭಾಗಾಧಿಕಾರಿ ಆನಂದ್, ತಹಶೀಲ್ದಾರ್ ನವೀನ್ ಜೋಸೆಫ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಡಿ. 11 ರಂದು ಹೊಸ ಬೆಳಕು ಯೋಜನೆಗೆ ಚಾಲನೆ
    ಮೈಸೂರು,ಡಿ.10.ಇಂಧನ ಇಲಾಖೆ ವತಿಯಿಂದ ಹೊಸ ಬೆಳಕು ಯೋಜನೆ ಎಲ್‍ಇಡಿ ಜನಜಾಗೃತಿ ಅಭಿಯಾನ ಡಿಸೆಂಬರ್ 11 ರಂದು ಮಧ್ಯಾಹ್ನ 12 ಗಂಟೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯಲಿದೆ.
    ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡೆಲ್ಪ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಯೋಜನೆಯ ರಾಯಭಾರಿ ಚಲನಚಿತ್ರ ನಟ ಪುನೀತ್ ರಾಜ್‍ಕುಮಾರ್ ಹಾಗೂ ಚಲನಚಿತ್ರ ನಟಿ ಕು| ರಮ್ಯ ಅವರು ಭಾಗವಹಿಸಲಿದ್ದಾರೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಕರ್ನಾಟಕ ವಸತಿ ಸಚಿವ ಡಾ| ಎಂ.ಹೆಚ್. ಅಂಬರೀಶ್, ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವ ಎ. ಮಂಜು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೇಡಲ್) ಅಧ್ಯಕ್ಷ ಶಶಿಕುಮಾರ್, ಇಂಧನ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಬಿ.ಪಿ. ಪಾಂಡೆ, ಇ.ಇ.ಎಸ್.ಎಲ್ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಕುಮಾರ್, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನ ಸಭಾ ಸದಸ್ಯ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ಹೆಚ್.ಪಿ. ಮಂಜುನಾಥ್, ಕೆ.ವಂಕಟೇಶ್, ಸಾ.ರಾ. ಮಹೇಶ್, ಚಿಕ್ಕಮಾದು ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್ ಅವರು ಭಾಗವಹಿಸುವರು.
      ಮಹಿಳೆಯರಿಗೆ ತಾಂತ್ರಿಕ ತರಬೇತಿ
   ಮೈಸೂರು,ಡಿ.10.-ಭಾರತ ಸರ್ಕಾರದ ಪಂ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಆಆU-ಉಏಙ) ಯಡಿ ಹಾಗೂ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಪ್ರದೇಶದ ಎಸ್.ಎಸ್.ಎಲ್.ಸಿ  ಉತ್ತೀರ್ಣ/ಅನುತ್ತೀರ್ಣರಾದ ನಿರುದ್ಯೋಗಿ ಮಹಿಳಾ ಅಭ್ಯರ್ಥಿಗಳಿಗೆ 6 ತಿಂಗಳ ಕಾಲವಾದಿಯ ಸಿ.ಎನ್.ಸಿ. ಮೆಷಿನ್ ಆಪರೇಟರ್, 12 ತಿಂಗಳ ಕಾಲವಾದಿಯ ಟೂಲ್ ರೂಮ್ ಮೆಷಿನಿಸ್ಟ್  ತಾಂತ್ರಿಕ ತರಬೇತಿಯನ್ನು  ಊಟ, ವಸತಿ ಹಾಗೂ ಶಿಷ್ಯವೇತನದೊಂದಿಗೆ ಉಚಿತವಾಗಿ ನೀಡಲಾಗುವುದು.
     18 ವರ್ಷ ತುಂಬಿದ ನಿರುದ್ಯೋಗಿ ಗ್ರಾಮೀಣ ಪ್ರದೇಶದ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ 93-94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್. ರಸ್ತೆ, ಮೈಸೂರು-570016 ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ 9141629598 ಗೆ ಸಂಪರ್ಕಿಸುವುದು

ಡಿಸೆಂಬರ್ 25ರಿಂದ 27ರವರೆಗೆ ಕಾವ, ಜಾಣ, ರತ್ನ ಪರೀಕ್ಷೆ
     ಮೈಸೂರು,ಡಿ.10.ಕನ್ನಡ ಸಾಹಿತ್ಯ ಪರಿಷತ್ತಿನ  2015-16ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು 2015 ಡಿಸೆಂಬರ್ 25, 26 ಮತ್ತು 27 ರಂದು 3 ದಿನಗಳ ಕಾಲ ರಾಜ್ಯದ 17 ಕೇಂದ್ರಗಳಲ್ಲಿ ನಡೆಯಲಿದೆ.
     ಪರೀಕ್ಷ ಪ್ರವೇಶ ಪತ್ರÀಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಈಗಾಗಲೇ ಕಳುಹಿಸಿ ಕೊಡಲಾಗಿದೆ.  ದಿನಾಂಕ 15-12-2015ರ ನಂತರವೂ ಪ್ರವೇಶ ಪತ್ರ ತಲುಪದಿದ್ದಲ್ಲಿ  ಬಗ್ಗೆ ವಿದ್ಯಾರ್ಥಿಗಳು ಗೌರವ ಸಲಹೆಗಾರರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ದೂರವಾಣಿ 080-26623584ನ್ನು ಸಂಪರ್ಕಿಸುವುದು. ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ ತಿತಿತಿ.ಞಚಿsಚಿಠಿಚಿ.iಟಿ ಮೂಲಕ ಸಹ ಪಡೆಯಬಹುದಾಗಿದೆ.

ಭಾರತೀಯ ವಾಯುದಳದಲ್ಲಿ ಆಫೀಸರ್ಸ್ ಹುದ್ದೆಗೆ ಅರ್ಜಿ ಆಹ್ವಾನ
     ಮೈಸೂರು,ಡಿ.10.ಭಾರತೀಯ ವಾಯುದಳದ ಫ್ಲೆಯಿಂಗ್, ಟೆಕ್ನಿಕಲ್ ಹಾಗೂ ಗ್ರೌಂಡ್ ಡ್ಯೂಟಿ ವಿಭಾಗದಲ್ಲಿ ಖಾಲಿ ಇರುವ ಆಫೀಸರ್ಸ್ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
    ಫ್ಲೈಯಿಂಗ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರ ವಯೋಮಿತಿ 20ರಿಂದ 24 ವರ್ಷದೊಳಗಿರಬೇಕು  ಪದವಿಯಲ್ಲಿ 60% ಅಂಕ ಪಡೆದಿರಬೇಕು. ಪಿಯುಸಿ ಹಂತದಲ್ಲಿ ಗಣಿತ ಮತ್ತು ಭೌತಶಾಸ್ತ್ರ ಅಭ್ಯಾಸ ಮಾಡಿರಬೇಕು ಅಥವಾ ಇಂಜಿನಿಯರ್ ಪದವಿಯಲ್ಲಿ 60% ಅಂಕ ಪಡೆದಿಬೇಕು. ಆಯ್ಕೆಯಾಗುವ ಅಭ್ಯರ್ಥಿಗೆ ರೂ 80,238/- ವೇತನ ಸಿಗಲಿದೆ.
     ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರ ವಯೋಮಿತಿ 20ರಿಂದ 26 ವರ್ಷ ದೊಳಗಿರಬೇಕು, ಇಂಜಿನಿಯರಿಂಗ್ ಪದವಿಯಲ್ಲಿ 60% ಅಂಕ ಪಡೆದಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗೆ ರೂ 69,238/- ವೇತನ ಸಿಗಲಿದೆ.
    ಗ್ರೌಂಡ್ ಡ್ಯೂಟಿ ವಿಭಾಗಕ್ಕೆ ಅರ್ಜಿ ಸಲ್ಲಿಸುವವರ ವಯೋಮಿತಿ 20ರಿಂದ 26 ವರ್ಷ ದೊಳಗಿರಬೇಕು. ಪದವಿಯಲ್ಲಿ 60% ಅಂಕ ಪಡೆದಿಬೇಕು ಅಥವಾ ಸ್ನಾತಕೋತ್ತರ ಪದವಿ  ಪಡೆದಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗೆ ರೂ. 66,738/- ವೇತನ ಸಿಗಲಿದೆ.
     ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/2015 ಯಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ತಿತಿತಿ.ಛಿಚಿಡಿeeಡಿಚಿiಡಿಜಿoಡಿಛಿe.ಟಿiಛಿ.iಟಿ, ತಿತಿತಿ.emಠಿಟoಥಿmeಟಿಣಟಿeತಿs.gov.iಟಿ, ತಿತಿತಿ.ಡಿoರಿgಚಿಡಿsಚಿmಚಿಛಿhಚಿಡಿ.gov.iಟಿ ಅಥವಾ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ , ಮೈಸೂರು ಇವರನ್ನು ಸಂಪರ್ಕಿಸಬಹುದು.
ಡಿಸೆಂಬರ್ 17 ರಂದು ಸುಬ್ರಹ್ಮಣ್ಯೇಶ್ವರ ಸ್ವಾಮಿ ಜಾತ್ರೆ
     ಮೈಸೂರು,ಡಿ.10.ಮೈಸೂರು ತಾಲ್ಲೂಕು ಕಸಬಾ ಹೋಬಳಿಯ ಸಿದ್ದಲಿಂಗಪುರ ಗ್ರಾಮದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ಷಷ್ಠಿ ಜಾತ್ರೆಯು ಡಿಸೆಂಬರ್ 17 ರಂದು ನಡೆಯಲಿದೆ.
    ಈ ರಥೋತ್ಸವದಂದು ದೇವಸ್ಥಾನದ ಗರ್ಭಗುಡಿಯಲ್ಲಿ ನೂಕು ನುಗ್ಗಲು ಉಂಟಾಗುವುದರಿಂದ ಭಕ್ತಾದಿಗಳನ್ನು ನಿಯಂತ್ರಿಸಲು ಹಾಗೂ ವಿಶೇಷ ದರ್ಶನಕ್ಕೆ ಭಕ್ತಾದಿಗಳು ಶೀಘ್ರ ದರ್ಶನ ಪಡೆಯಲು ಭಕ್ತಾದಿಗಳ ಸುರಕ್ಷತೆಯ ದೃಷ್ಠಿಯಿಂದ ಪೊಲೀಸ್  ಬಂದೋಬಸ್ತ್ ಮಾಡಲಾಗಿದೆ ಹಾಗೂ ಕಂದಾಯ ಇಲಾಖಾ ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
     ನೇಮಕಗೊಂಡಿರುವ ಕಂದಾಯ ಇಲಾಖಾ ಸಿಬ್ಬಂದಿ ವರ್ಗದವರು ಡಿಸೆಂಬರ್ 16ರ ಮಧ್ಯಾಹ್ನ 3 ಗಂಟೆಯಿಂದ ಡಿಸೆಂಬರ್ 17ರ ರಾತ್ರಿ 11 ಗಂಟೆಯವರೆಗೆ ದೇವಸ್ಥಾನದಲ್ಲಿ ಇಲಾಖಾ ನೌಕರರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.
    ಡಿಸೆಂಬರ್ 17 ರಂದು ಉಚಿತವಾಗಿ  ಪ್ರಸಾದ ವಿನಿಯೋಗ ಮಾಡುವವರು ತಹಶೀಲ್ದಾರ್ ಕಚೇರಿ ಮೈಸೂರು ಇಲ್ಲಿ  ಹೆಸರು ನೋಂದಾಯಿಸಿಕೊಳ್ಳುವುದು. ಸಾರ್ವಜನಿಕರು ಭಕ್ತಾದಿಗಳು ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ಅವರ ದರ್ಶನ ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಧಾನ ಪರಿಷತ್ ಚುನಾವಣೆ- ಎಲ್ಲಾ ನಾಮಪತ್ರಗಳೂ ಕ್ರಮಬದ್ಧ
    ಮೈಸೂರು,ಡಿ.10.ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತ ಚುನಾವಣೆಗೆ  ಸಲ್ಲಿಕೆಯಾಗಿದ್ದ ಎಲ್ಲಾ 14 ಮಂದಿಯ 27 ನಾಮಪತ್ರಗಳು ಕ್ರಮಬದ್ಧವಾಗಿದ್ದು ಪುರಸ್ಕಾರಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿ ಸಿ.ಶಿಖಾ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸ ಕಾರ್ಯಕ್ರಮ
   ಮೈಸೂರು,ಡಿ.10.-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 11 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅವರು ಅಂದು ಬೆಳಿಗ್ಗೆ 11-30ಕ್ಕೆ ರಸ್ತೆ ಮೂಲಕ ಮೈಸೂರಿಗೆ ಆಗಮಿಸಿ ಮಧ್ಯಾಹ್ನ 12 ಗಂಟೆಗೆ ಇಂಧನ ಇಲಾಖೆಯಿಂದ ಆಯೋಜಿಸಿರುವ ಹೊಸಬೆಳಕು ಯೋಜನೆಯ ಎಲ್.ಇ.ಡಿ. ಜನಜಾಗೃತಿ ಅಭಿಯಾನ ಡೆಲ್ಪ್ ಯೋಜನೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಚಾಲನೆ ನೀಡಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

 ವಿಧಾನ ಪರಿಷತ್ತಿಗೆ ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆ 2015 ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಶ್ರೀ.ಐಯ್ಯಪ್ಪ ಎಂ.ಕೆ, ಐ.ಎ.ಎಸ್, ಆಯುಕ್ತರು, ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ, ಬೆಂಗಳೂರುರವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಕ ಮಾಡಿ ಆದೇಶವನ್ನು ಹೊರಡಿಸಿರುತ್ತದೆ.

ಸದರಿ ಚುನಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಅಭ್ಯರ್ಥಿಗಳು / ಮತದಾರರು / ಸಾರ್ವಜನಿಕರು ಚುನಾವಣಾ ವೀಕ್ಷಕರನ್ನು ಸಂಪರ್ಕಿಸಲು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿರುತ್ತದೆ

ಶ್ರೀ.ಐಯ್ಯಪ್ಪ.ಎಂ.ಕೆ, ಐ.ಎ.ಎಸ್,  : 9449270557

ಶ್ರೀ.ಪ್ರಸಾದ್ ಮೂರ್ತಿ, ಉಪ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು ಇವರು ಚುನಾವಣಾ ವೀಕ್ಷಕರ ಸಮನ್ವಯಾಧಿಕಾರಿಯಾಗಿರುತ್ತಾರೆ. ಸದರಿಯವರನ್ನು ಮೊಬೈಲ್ ಸಂಖ್ಯೆ 9480326752 ಗೆ ಸಂಪರ್ಕಿಸಬಹುದಾಗಿದೆ.

Tuesday, 8 December 2015

ಸಂಜೆ ಮಿತ್ರ :ಬೆಂಗಳೂರು: ಉಪ ಲೋಕಾಯುಕ್ತರ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆನಂದ್ ಅವರನ್ನು ಹೆಸರನ್ನು ಶಿಫಾರಸು ಮಾಡಲು ಉಪ ಲೋಕಾಯುಕ್ತ ನೇಮಕಾತಿ ಸಮಿತಿ ಸಭೆ ನಿರ್ಧರಿಸಿದೆ.Justice Anand

ಸಿಎಂ ಸಿದ್ದರಾಮಯ್ಯ


ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾ.ಆನಂದ್ ಅವರ ಹೆಸರನ್ನು ಉಪ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಲು ಸರ್ವಾನುಮತದಿಂದ ನಿರ್ಧಾರಿಸಲಾಗಿದೆ ಎಂದು ಸಭೆಯ ನಂತರ ಸಿಎಂ ತಿಳಿಸಿದ್ದಾರೆ.

ಈ ಹಿಂದೆ ರಾಜ್ಯ ಸರ್ಕಾರ ಉಪ ಲೋಕಾಯುಕ್ತ ಹುದ್ದೆ ನ್ಯಾ.ಮಂಜುನಾಥ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ ರಾಜ್ಯಪಾಲರು ಮಂಜುನಾಥ್ ಅವರನ್ನು ಹೆಸರನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ಹೊಸದಾಗಿ ಆನಂದ್ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಿದೆ.

ಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಭಾಗವಹಿಸಿದ್ದರು.

Monday, 7 December 2015

ಮಂಡ್ಯ :ಆಹಾರ ಪದಾರ್ಥಗಳಲ್ಲಿ ರಾಗಿ ಹಿಟ್ಟಿನ ಪಾತ್ರ ಮಹತ್ವದಾಗಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜೆಎಸ್‍ಡಿ ಪೆÇ್ರೀಡೆಕ್ಟ್ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ರಾಗಿ ಹಿಟ್ಟು ಮಾರು ಕಟ್ಟೆ ಬಿಡುಗಡೆ ಸಮಾರಂ ಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಗಿಹಿಟ್ಟಿನಲ್ಲಿ ಉತ್ಕøಷ್ಟ ಪೌಷ್ಠಿಕಾಂಶವಿದ್ದು ಸರ್ವ ರೋಗಗಳನ್ನು ನಿಯಂತ್ರಿಸಬಲ್ಲ ಉತ್ತಮ ಆಹಾರ ಪದಾರ್ಥ ವಾಗಿದೆ ಸಮರ್ಪಕವಾಗಿ ರಾಗಿ ಯನ್ನು ಬಳಸಿಕೊಂಡರೆ ರೋಗ ನಿಯಂತ್ರಣ ತಡೆಗಟ್ಟಬಹುದು. ನೀರಿನ ಸಮಸ್ಯೆಯನ್ನು ನೀಗಿ ಸಬಹುದ ಎಂದರು.
ಇತ್ತೀಚಿನ ದಿನಗಳಲ್ಲಿ ರಾಗಿಯೂ ವಿಶ್ವಮಾನ್ಯತೆ ಪಡೆಯುತ್ತಿದೆ. ವಿದೇಶಿಗರು ಕೂಡ ರಾಗಿಹಿಟ್ಟನ್ನು ಹೆಚ್ಚಾಗಿ ಬಳಸುತ್ತಿರುವುದು ಗಮನಿಸಬ ಹುದು. ಅಮೇರಿಕಾ, ಚೈನಾ ಸೇರಿದಂತೆ ಮುಂತಾದ ರಾಷ್ಟ್ರ ಗಳು ವಿವಿಧ ಪದಾರ್ಥಗಳಲ್ಲಿ ಬಳಸುತ್ತಿದ್ದಾರೆ ಎಂದು ಹೇಳಿ ದರು.
ವಿಜ್ಞಾನಿಗಳು ಮತ್ತು ಕøಷಿ ತಂತ್ರಜ್ಞರು ಕಡಿಮೆ ನೀರಿನಲ್ಲಿ ಬೆಳೆಯುವ ಪೌಷ್ಠಿಕಾಂಶತೆ ಯುಳ್ಳ ಆಹಾರ ಪದಾರ್ಥ ಗಳನ್ನು ಸಂಶೋಧಿಸಬೇಕು. ರೈತರಿಗೆ ಉತ್ತಮ ಲಾಭ ನೀಡುವ ಬೆಳೆಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅನ್ನವನ್ನು ಆಹಾರ ಪದಾರ್ಥವಾಗಿ ಸೇವಿಸುತ್ತಿರು ವುದರಿಂದ ದೀರ್ಘರೋಗಗಳಿಗೆ ತುತ್ತಾಗುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ರೋಗ ನಿಯಂತ್ರಣ ಕ್ಕಾಗಿ ರಾಗಿಯನ್ನು ಮುದ್ದೆ, ರೊಟ್ಟಿ, ಗಂಜಿ ಮೊದಲಾದ ರೂಪದಲ್ಲಿ ಬಳಸುವುದು ಅಗತ್ಯ ಎಂದು ತಿಳಿಸಿದರು.
ಬೆಂಗಳೂರು, ಕøಷಿ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣ ಗೌಡ, ಮಾಣಿಕ್ಯನಹಳ್ಳಿ ಅಶೋಕ್‍ಗೌಡ, ಮಂಜು ವಡ್ಡರಹಳ್ಳಿ, ನಾಗೇಶ್ ಎಂ.ಬಿ. ಶ್ರೀನಿವಾಸ್, ಎಂ.ಎಸ್. ಕುಮಾರ್, ಕೊಳಲು ಪತ್ರಿಕೆ ಸಂಪಾದಕ ಶ್ರೀಪಾದು ಸೇರಿದಂತೆ ಇತರರಿದ್ದರು.


ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಭಕ್ತಸಾಗರ.
ನಜನಗೂಡು: ಡಿ.07.  ಇಂದು ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ  ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ಬೆಳಿಗಿನ ಜಾವ 4.30ರಿಂದ ಸ್ನಾನ-ಸಂಧ್ಯವಂದನೆಗಳನ್ನು ಮಾಡಿ, ಹರಕೆಯಂತೆ  ಮುಡಿಕಟ್ಟೆಯಲ್ಲಿ ಕೇಶವನ್ನು ತೆಗೆಸಿಕೊಂಡು, ನಂತರ ಸ್ನಾನಮಾಡಿ, ಉರುಳುಸೇವೆ, ಮಾಡುತ್ತಾ ದೇವಸ್ಥಾನದ  ಸರತಿ ಸಾಲಿನಲ್ಲಿ ನಿಂತು ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು.
     ಬೆಳೆಗಿನ ಜಾವದ  ಸೇವೆಯಗಳಾದ  ಕಪಿಲಾ ತೀರ್ಥದ  ಮಜ್ಜನ, ಬಿಲ್ವಪತ್ರೆ, ಪಂಚಾಮೃತಾಭಿಷೇಕ, ಜೇನುತುಪ್ಪ, ಹಾಲು-ಮೊಸರು, ಶಾಲ್ಯಾನ್ನ, ಮುಂತಾದ ಅಭಿಷೇಕಗಳು ನಡೆದು ನಂತರ  ವಿವಿಧ ಅರ್ಚನೆಗಳು, ವಿವಿಧ ಸೇವೆಗಳಾದ ತುಲಾಭಾರ,
ಭಕ್ತರಿಂದ ಪ್ರಸಾದವಿನಿಯೋಗ, ಹರಕೆ ಮುಂತಾದವುಗಳು ಜರುಗಿದವು.
     ಜನಸಂದಣಿಯ ಕಾರಣ ದೇವಸ್ಥಾನದವತಿಯಿಂದ  ಧ್ವನಿವರ್ದಕದಲ್ಲಿ  ಭಕ್ತಾಧಿಗಳಿಗೆ ಎಚ್ಚರಿಕೆಯಾಗಿರಲು  ಗಂಟೆಯಂತೆ ,ತಮ್ಮ ತಮ್ಮ ವಸ್ತುಗಳನ್ನು, ಬೆಲೆಬಾಳುವ ಆಭರಣಗಳನ್ನು ಸುರಕ್ಷತವಾಗಿ ನೋಡಿಕೊಳ್ಳಲು  ಎಚ್ಚರಿಸುತ್ತಿರುವುದು ಕಾಣಬರುತ್ತಿತ್ತು.
      ದೇವಸ್ಥಾನದಲ್ಲಿ ವಿಷೇಶತೆಯಿಂದ  ಜನರನ್ನು ನಿಯಂತ್ರಿಸಲು ಸಂಚಾರಿ ಪೆÇಲೀಸರು, ಹಾಗೂ ಭಕ್ತರ  ವಸ್ತುಗಳ  ಕಳ್ಳತನವಾಗದಂತೆ  ವಿವಿಧ ಮಾರು ವೇಶಗಳಲ್ಲಿ  ಪೆÇಲೀಸ್ ತಂಡ ಸದಾ ಸನ್ನದ್ದರಾಗಿ ಕೆಲಸಮಾಡುತ್ತಿದ್ದು  ಕಾಣುವಂತಿತ್ತು.

Saturday, 5 December 2015

 ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಶಿವಶೈಲ ಕ್ಷೇತ್ರ, ಪಟ್ಟಸೋಮನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಯುತ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಶಿವಪ್ಪರವರ ಒಂಟಿ ತೋಟದ ಮನೆಗೆ ದಿನಾಂಕ: 25-10-2015 ರಂದು ರಾತ್ರಿ ವೇಳೆಯಲ್ಲಿ ಢಕಾಯಿತರು ಮನೆಗೆ ನುಗ್ಗಿ ಜಸ್ಟೀಸ್ ಶಿವಪ್ಪ ಹಾಗೂ ಅವರ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ, ಬಲವಂತವಾಗಿ ಅವರಿಂದ 12,70,000/- ರೂ. ಬೆಲೆ ಬಾಳುವ ಒಡವೆ ಹಾಗೂ ನಗದನ್ನು ದೋಚಿಕೊಂಡು ಹೋಗಿದ್ದು, ಈ ಸಂಭಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ.378/2015. ಕಲಂಃ 395 ಕೂಡ 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

      ಈ ಪ್ರಕರಣವನ್ನು ಬೇಧಿಸಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸದರಿ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಘಟನಾ ಸ್ಥಳದಲ್ಲಿ ದೊರೆತ ಭೌತಿಕ ಸಾಕ್ಷಿಗಳು, ಆಧುನಿಕ ತಂತ್ರಜ್ಞಾನ, ಸ್ಥಳೀಯವಾಗಿ ದೊರೆ ಮಾಹಿತಿ, ಹಳೆಯ ಎಂ.ಓ.ಬಿ.ದಾರರ ಬಗ್ಗೆ ತಳಮಟ್ಟದಿಂದ ಮಾಹಿತಿ ಸಂಗ್ರಹಿಸಿ ಸದರಿ ದರೋಡೆ ಪ್ರಕರಣವನ್ನು ಬೇಧಿಸಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದವರ ಪೈಕಿ ಒಟ್ಟು 16 ಆರೋಪಿಗಳನ್ನು ಬಂಧಿಸಿ, ಅವರುಗಳಿಂದ ಈ ಪ್ರಕರಣದಲ್ಲಿ ದೋಚಲಾಗಿದ್ದ 52,000/- ರೂ. ನಗದು ಹಾಗೂ 187 ಗ್ರಾಂ ಚಿನ್ನದ ಆಭರಗಳನ್ನು ವಶಪಡಿಕೊಳ್ಳಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ ಬೋರಸೆ ತಿಳಿಸಿದ್ದಾರೆ

ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 1] ಜಗದೀಶ @ ಜಗ, 2] ಕೃಷ್ಣಕುಮಾರ @ ಗಜ, 3]ವಿನೋದ @ ವಿನಿ, 4]ಅಯ್ಯಪ್ಪ @ ಲವ ರವರುಗಳನ್ನು ದಿನಾಂಕ 30-11-2015 ರಂದು ದಸ್ತಗಿರಿ ಮಾಡಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್ ಪಡಿಸಿಕೊಂಡು ಸದರಿ ಆರೋಪಿಗಳು ಈ ಪ್ರಕರಣದ ಜೊತೆಗೆ ಇನ್ನು ಒಟ್ಟು ಈ ಕೆಳಕಂಡ  11 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.
1] ಮೈಸೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣೆಯ 1 ಪ್ರಕರಣ,
2] ಮೈಸೂರು ಸಿಟಿ ಸರಸ್ವತಿ ಪುರಂ ಪೊಲಿಸ್ ಠಾಣೆಯ 1 ಪ್ರಕರಣ,
3] ತುಮಕೂರು ಜಿಲ್ಲೆ ನ್ಯೂ ಎಕ್ಸ್‍ಟೆನ್ಷನ್ ಪೊಲೀಸ್ ಠಾಣೆಯ 1 ಪ್ರಕರಣ,
4] ಮದ್ದೂರು ಪೊಲೀಸ್ ಠಾಣೆಯ 1 ಪ್ರಕರಣ,
5] ಮಂಡ್ಯ ಪೂರ್ವ ಪೊಲೀಸ್ ಠಾಣೆಯ 3 ಪ್ರಕರಣ,
6] ಅರಕೆರೆ ಪೊಲೀಸ್ ಠಾಣೆಯ 2 ಪ್ರಕರಣ,
7] ಕೆ.ಆರ್.ಸಾಗರ ಪೊಲೀಸ್ ಠಾಣೆಯ 1 ಪ್ರಕರಣ
8] ಪಾಂಡವಪುರ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ ಬಾಗಿಯಾಗಿರುವುದು ಕಂಡು ಬಂದಿರುತ್ತದೆ.

 ಸದರಿಯವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಒಟ್ಟು 11 ಪ್ರಕರಣಗಳಿಗೆ ಸಂಬಂದಪಟ್ಟ 1] ಒಂದು 53 ಇಂಚಿನ ಸೋನಿ ಎಲ್.ಇ.ಡಿ ಟಿವಿ. 2] ಒಂದು 32 ಇಂಚಿನ ಸೋನಿ ಎಲ್.ಇ.ಡಿ ಟಿ.ವಿ. 3] ಒಂದು ಖಾಲಿ ಸಿಲೆಂಡರ್, ಹಾಗೂ ಒಟ್ಟು 293 ಗ್ರಾಂ ಚಿನ್ನ ಮತ್ತು ಒಂದು ಕೆ.ಜಿ ಬೆಳ್ಳಿಯ ಸಾಮಾನುಗಳನ್ನು ಒಟ್ಟು ಸುಮಾರು 8,55,500/- ( ಎಂಟು ಲಕ್ಷದ ಐವತ್ತೈದು ಸಾವಿರದ ಐನೂರು ರೂ.ಗಳು ) ಗಳಷ್ಟು ಮೌಲ್ಯದ ಮಾಲುಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಟವೆರಾ ಕಾರ್ ನಂ. ಎಂ.ಹೆಚ್.-14, ಸಿಎಕ್ಸ್-5102 ಹಾಗೂ ಸ್ವಿಫ್ಟ್ ಡಿಜೈರ್ ಕಾರ್ ಕೆ.ಎ.-05-ಎ.ಇ-6793 ಕಾರನ್ನು ವಶಕ್ಕೆ ಪಡೆದುಕೊಂಡಿರುತ್ತೆ.

ಹಾಗು ಜೆಸ್ಟಿಸ್ ಶಿವಪ್ಪ ರವರ ಮನೆಯ ದರೋಡೆ ಕೇಸಿಗೆ ಸಂಬಂಧಪಟ್ಟಂತೆ ಬೆಂಗಳೂರಿನ ವಕೀಲರಾದ ರಾಜಶೇಖರ್ ಎಂಬುವವರು ಆರೋಪಿಗಳಿಗೆ ಕಳ್ಳತನ ಮಾಡಲು ಸಹಕಾರ ನೀಡಿ ಆರೋಪಿಗಳು ಕದ್ದು ತಂದ ಮಾಲನ್ನು ಮಧ್ಯವರ್ತಿಯಾಗಿ ಮಾರಾಟ ಮಾಡಿಸಿ ಹಣ ಕೊಡಿಸುವ ವೇಳೆಯಲ್ಲಿಯೇ ಖುದ್ದಾಗಿ, ನೇರವಾಗಿ ಸಿಕ್ಕಿಕೊಂಡಿದ್ದು, ಸದರಿಯವರನ್ನು ಸಹ ಈ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದು, ಸದರಿಯವರಿಂದ ಒಂದು ಚಿನ್ನದ ಚೈನು ಮತ್ತು ಒಂದು ಕೆ.ಜಿ. ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು, ರಾಜಶೇಖರ್‍ರವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿರುತ್ತಾರೆ. ಇವರು ವಕೀಲ ವೃತ್ತಿಯ ಜೊತೆಗೆ ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದು, ಸದರಿಯವರು ಮೇಲೆ ಒಟ್ಟು 4 ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾರೆ.

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಇವರುಗಳ ವಿರುದ್ದ ಅನೇಕ ಜಿಲ್ಲೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುತ್ತವೆ. ಜಸ್ಟೀಸ್ ಶಿವಪ್ಪರವರ ಮನೆಯಲ್ಲಿ ಹೆಚ್ಚಿನ ಸಂಪತ್ತು ಇದೆ ಎಂದು ಭಾವಿಸಿ, ಈ ಕೃತ್ಯವೆಸಗಿರುತ್ತಾರೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಒಟ್ಟು 20 ಜನ ಆರೋಪಿಗಳನ್ನು ದಸ್ತಗಿರಿ ಮಾಡಿಕೊಂಡಿದ್ದು, ಉಳಿಕೆ 3 ಆರೋಪಿಗಳ ಬಗ್ಗೆ ಪತ್ತೆ ಕಾರ್ಯ ಮುಂದುವರೆದಿರುತ್ತೆ.

ಸದರಿ ಆರೋಪಿತರುಗಳ ಪತ್ತೆಗಾಗಿ ಶ್ರೀ ಸಿದ್ದೇಶ್ವರ್, ಡಿ.ಎಸ್.ಪಿ. ಶ್ರೀರಂಗಪಟ್ಟಣ, ಶ್ರೀ ಪ್ರಕಾಶ್.ಬಿ.ಎಸ್. ಪೊಲೀಸ್ ಇನ್ಸ್‍ಪೆಕ್ಟರ್, ಪಾಂಡವಪುರ ಪೊಲೀಸ್ ಠಾಣೆ, ಶ್ರೀ ಲೋಕೇಶ್, ವೃತ್ತ ನಿರೀಕ್ಷಕರು, ಶ್ರೀ ಅಯ್ಯನಗೌಡ, ಪಿ.ಎಸ್.ಐ. ಪಾಂಡವಪುರ, ಶ್ರೀ ಅಜರುದ್ದೀನ್, ಪಿ.ಎಸ್.ಐ. ಅರಕೆರೆ ಪೊಲಿಸ್ ಠಾಣೆ. ಹಾಗೂ ಪೊಲೀಸ್ ಸಿಬ್ಬಂದಿಗಳು ಶ್ರಮವಹಿಸಿದ್ದು, ಈ ಪ್ರಕರಣದ ಆರೋಪಿಗಳು ಹಾಗೂ ಮಾಲುಗಳನ್ನು ಪತ್ತೆ ಮಾಡುವಲ್ಲಿ ಶ್ರಮ ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟರು, ಮಂಡ್ಯ ಜಿಲ್ಲೆ, ಮಂಡ್ಯರವರು ಪ್ರಶಂಶಿಸಿ, ಪತ್ತೆ ಕಾರ್ಯದಲ್ಲಿ ತೊಡಗಿದ್ದ ತಂಡಕ್ಕೆ ಒಂದು ಲಕ್ಷ ರೂ. ನಗದು ಬಹುಮಾನವನ್ನು ಮಂಜೂರು ಮಾಡಲು, ಮಾನ್ಯ ಐ.ಜಿ.ಪಿ. ದಕ್ಷಿಣ ವಲಯ, ಮೈಸೂರುರವರಿಗೆ ಶಿಫಾರಸ್ಸು ಸಲ್ಲಿಸಿರುತ್ತಾರೆ.

Friday, 4 December 2015

4ನೇ ಡಿಸೆಂಬರ್ 2015
ನಾಮಪತ್ರ ಸಲ್ಲಿಕೆ ಇಲ್ಲ
ಮೈಸೂರು,ಡಿ.4.ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತ ಚುನಾವಣೆಗೆ ನಾಮಪತ್ರ  ಸಲ್ಲಿಸಲು ಮೂರನೇ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.

ಮಾಜಿ ಸೈನಿಕರು: ಸಮಸ್ಯೆಗಳಿದ್ದಲ್ಲಿ ಮನವಿ ಸಲ್ಲಿಸಿ
ಮೈಸೂರು,ಡಿ.4.-ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ & ಸೆಂಟರ್, ಇವರ ವತಿಯಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿನವರೆಗೆ ಸೈಕಲ್ ರ್ಯಾಲಿ ``ತಂಬಿ ಮಿಲಾಪ`` ಅನ್ನು ಹಮ್ಮಿಕೊಂಡಿದ್ದು, ದಿನಾಂಕ 16-12-2015ರ ಸಂಜೆ 4 ಘಂಟೆಗೆ ಮೈಸೂರಿನ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸ್ಕ್ವಾಡರ್ನ್ ಲೀಡರ್ ಎ. ಬಿ. ದೇವಯ್ಯ ಭವನಕ್ಕೆ ಆಗಮಿಸುವರು.
ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ನಲ್ಲಿ ಸೇವೆ ಸಲ್ಲಿಸಿರುವಂತಹ  ಮಾಜಿ ಸೈನಿಕರ ಮತ್ತು ಅವರ ಅವಲಂಬಿತರುಗಳ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಇರಬಹುದಾದ ಸಮಸ್ಯೆಗಳನ್ನು ಆಲಿಸಲು ದಿನಾಂಕ 16-12-2015ರ ಸಂಜೆ 4 ಘಂಟೆಗೆ  ಮೈಸೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯ, ಸ್ಕ್ವಾಡ್ರನ್ ಲೀಡರ್ ಎ.ಬಿ. ದೇವಯ್ಯ ಭವನದಲ್ಲಿ ಸಭೆ ಏರ್ಪಡಿಸಲಾಗಿದೆ.
       ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‍ನಲ್ಲಿ ಸೇವೆ ಸಲ್ಲಿಸಿರುವಂತಹ  ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ಎಲ್ಲಾ ಸಮಸ್ಯೆಗಳನ್ನು ಖುದ್ದಾಗಿ ಲಿಖಿತ ರೂಪದ ಅರ್ಜಿಯನ್ನು ದಿನಾಂಕ 12-12-2015ರೊಳಗಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ಇವರಿಗೆ ನೇರವಾಗಿ ಸಲ್ಲಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.
ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ಇವರನ್ನು ದೂರವಾಣಿ ಸಂಖ್ಯೆ 0821-2425240 ನಲ್ಲಿ ಸಂಪರ್ಕಿಸಬಹುದಾಗಿದೆ.
ಡಿ.10 ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಮೈಸೂರು,ಡಿ.4.ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 10-12-15 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಗುವುದು.
     ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾನವ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ರಕ್ಷಣೆ, ಮಕ್ಕಳ ಹಕ್ಕು ಹಾಗೂ ಅಭಿವೃದ್ಧಿ ಕುರಿತಂತೆ ವಿಚಾರ ಸಂಕಿರಣ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶಾತಿ ಶುಲ್ಕ ಪಾವತಿಗೆ ದಿನಾಂಕ ನಿಗಧಿ

ಮೈಸೂರು,ಡಿ.4.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2015-16 ನೇ ಸಾಲಿಗೆ ದ್ವಿತೀಯ ಹಾಗೂ ತೃತೀಯ ಬಿ.ಎ/ಬಿ.ಕಾಂ ಮತ್ತು ಅಂತಿಮ ಎಂ.ಎ/ ಎಂ.ಕಾಂ ಶಿಕ್ಷಣ ಕ್ರಮಗಳ ಪ್ರವೇಶಾತಿ ನವೀಕರಣಕ್ಕೆ  ದಿನಾಂಕ ನಿಗಧಿ ಪಡಿಸಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲದ ಕುಲಸಚಿವರು ತಿಳಿಸಿದ್ದಾರೆ.
   ದ್ವಿತೀಯ ಬಿ.ಎ., ಬಿ.ಕಾಂ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು 2016 ಜನವರಿ 4, ರೂ 200/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜನವರಿ18 ಹಾಗೂ ರೂ 400/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ.
   ತೃತೀಯ ಬಿ.ಎ., ಬಿ.ಕಾಂ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು 2016 ಜನವರಿ 5, ರೂ 200/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜನವರಿ 19 ಹಾಗೂ ರೂ 400/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜನವರಿ 29 ಕೊನೆಯ ದಿನಾಂಕವಾಗಿರುತ್ತದೆ.
     ಅಂತಿಮ .ಎಂ.ಎ, ಎಂ.ಕಾಂ ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು 2016 ಜನವರಿ 6, ರೂ 200/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜನವರಿ 20 ಹಾಗೂ ರೂ 400/- ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಸಲು ಜನವರಿ 30 ಕೊನೆಯ ದಿನಾಂಕವಾಗಿರುತ್ತದೆ.
ನಿಗಧಿತ ದಿನಾಂಕದೊಳಗೆ ಪ್ರವೇಶಾತಿ ನವೀಕರಣ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.ಞsoumಥಿsoಡಿe.eಜu.iಟಿ  ಸಂಪರ್ಕಿಸುವುದು.

ವಿಶೇಷ ಉಪನ್ಯಾಸ ಮಾಲೆ

ಮೈಸೂರು,ಡಿ.4.ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರುಗಳ ಸಂಯುಕ್ರಾಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಆಚರಣೆ ಪ್ರಯುಕ್ತ ಡಿಸೆಂಬರ್ 7 ರಿಂದ 9 ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಭೌತವಿಜ್ಞಾನ ಅಧ್ಯಂiÀiನ ವಿಭಾಗದ ಐನ್‍ಸ್ಟೈನ್ ಸಭಾಂಗಣದಲ್ಲಿ ಸ್ನಾತಕೋತ್ತರ ವಿಜ್ಞಾನ ವಿಶೇಷ ಉಪನ್ಯಾಸ ಮಾಲೆಯನ್ನು ಹಮ್ಮಿಕೊಳ್ಳಲಾಗಿದೆ.
      ಡಿಸೆಂಬರ್ 7 ರಂದು ಬೆಳಿಗ್ಗೆ 9-30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಕೆ.ಎಸ್. ರಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಹಾಗೂ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಸಂದರ್ಶಕ ಪ್ರಾಧ್ಯಪಕ ಪ್ರೋ. ಎನ್ ಡಿ. ಹರಿದಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೈಸೂರು ಚಲೋ ಕಾರ್ಯಕ್ರಮ ಮುಂದೂಡಿಕೆ
ಮೈಸೂರು,ಡಿ.4.ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 5 ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ ಮೈಸೂರು ಚಲೋ ಕಾರ್ಯಕ್ರಮವನ್ನು ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ರಿಯಾಯಿತಿ ದರದಲ್ಲಿ  ಪುಸ್ತಕ ಮಾರಾಟದ ದಿನಾಂಕ ವಿಸ್ತರಣೆ
ಮೈಸೂರು,ಡಿ.4.ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ  ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪುಸ್ತಕಗಳನ್ನು ಕನಿಷ್ಠ ಶೇ. 15 ರಿಂದ ಗರಿಷ್ಠ 33.33ರ ರಿಯಾಯಿತಿ ದರದಲ್ಲಿ  ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಮಾರಾಟ ಮಾಡಲಾಗುತ್ತಿರುವ ಅವಧಿಯನ್ನು ವಿಸ್ತರಿಸಲಾಗಿದ್ದು, ಸದರಿ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ದಿನಾಂಕ 05-01-2016 ರವರೆಗೆ ಪಡೆಯಬಹುದಾಗಿದೆ.  ವಿದ್ಯಾರ್ಥಿ ವೃಂದ, ಉಪನ್ಯಾಸಕರು ಮತ್ತು ಪುಸ್ತಕ ಪ್ರೇಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಸಾರಾಂಗದ ನಿರ್ದೇಶಕ ಪ್ರೊ. ಎಂ.ಜಿ. ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 3 December 2015

ಕೃಷ್ಣರಾಜಪೇಟೆ. ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಪ್ರತಿಷ್ಠೆಯಿಂದ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಯನ್ನು ಪದೇ ಪದೇ ಸ್ಥಗಿತ ಗೊಳಿಸಿರುವುದನ್ನು ಖಂಡಿಸಿ ಕಬ್ಬನ್ನು ಸಾಗಿಸುವ ಚಾಲಕರು ಮತ್ತು ಸಹಾಯಕರು ದಿಢೀರ್ ಪ್ರತಿಭಟನೆ ನಡೆಸಿ ತಕ್ಷಣ ಕಾರ್ಖಾನೆಯನ್ನು ಪ್ರಾರಂಭಿಸಲು ಒತ್ತಾಯಿಸಿದ ಘಟನೆ ಇಂದು ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿಯೇ ನಡೆಯಿತು.
ಕಾರ್ಖಾನೆಯ ಒಳಗಡೆ ಕೆಲಸ ಮಾಡುವವರು  ದಿನದಲ್ಲಿ 8 ಗಂಟೆ ಮಾತ್ರ ಕೆಲಸಮಾಡಿ ಬೆಚ್ಚಗೆ ಮನೆಗೆ ಹೋಗುತ್ತಾರೆ. ಆದರೆ ಚಾಲಕರಾದ ನಾವುಗಳು ದಿನದ 24 ಗಂಟೆಗಳ ಕಾಲ ಕಬ್ಬನ್ನು ಸಾಗಿಸಿಬೇಕಾಗಿದೆ. ಆದರೆ ತಿಂಗಳಿಗೆ ಎರಡು ಮೂರು ಸಾರಿ ಕಾರ್ಖಾನೆಯನ್ನು ಸ್ಥಗಿತಗೊಳಿಸುವುದರಿಂದ ನಾವುಗಳು ತುಂಬಾ ಸಂಕಷ್ಠ ಅನುಭವಿಸಬೇಕಾಗಿದೆ. ಏಕೆಂದರೆ ನಾವುಗಳು ದಿನಕ್ಕೆ ಒಂದು ಟ್ರಿಪ್ ಮಾತ್ರ ಮಾಡುತ್ತೇವೆ ಆಗ ನಮಗೆ 200 ರೂಪಾಯಿಸಿಗುತ್ತದೆ. ಒಂದು ವೇಳೆ ಇಲ್ಲಿ ಕೆಲಸ ಸ್ಥಗಿತಗೊಂಡರೆ ನಾವು ಆ ಹಣದಲ್ಲಿ ಒಂದು ದಿವಸ ಮಾತ್ರ  ಊಟ,ತಿಂಡಿ ಮಾಡಬಹುದು. ಉಳಿದ ಸಮಯದಲ್ಲಿ ಊಟಕ್ಕೆ ಹಣವಿಲ್ಲದೇ ಹಸಿವಿನಿಂದ ನರಳಾಡಬೇಕಾಗುತ್ತದೆ. ನಮಗೆ ಶೌಚಾಲಯ, ವಿಶ್ರಾಂತಿಗೆ ಸೂಕ್ತ ಸ್ಥಳಾÀವಕಾಶ ವಿಲ್ಲದಿರುವುದರಿಂದ ಚಳಿಯಲ್ಲಿ ನಡುಗಿಕೊಂಡು ಕಾಲದೂಡುತ್ತಿದ್ದೇವೆ. ನಮಗೆ  ಸೂಕ್ತ ಸಂಬಳ ವಿಲ್ಲದೆ  ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಮಾಲೀಕರು ಲಕ್ಷಾಂತರ ರೂಪಾಯಿ ಸಾಲಮಾಡಿ ಬಂಡವಾಳ ಹಾಕಿ ಲಾರಿಗಳನ್ನು ಓಡಿಸುತ್ತಿದ್ದು ಸರಿಯಾಗಿ ಲಾರಿಗಳು ಓಡದಿದ್ದರೆ ಸಾಲದ ಬಡ್ಡಿಕಟ್ಟಲು ಸಾಧ್ಯವಾಗುತ್ತಿಲ್ಲ. ತಕ್ಷಣ ಕಾರ್ಖಾನೆಯನ್ನು  ಪ್ರಾರಂಭಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಚಾಲಕರು ಒತ್ತಾಯಿಸಿದರು. ವಡ್ಡರಹಳ್ಳಿ ಲೋಕೇಶ್, ಸೂರ್ಯ,ಅನಿಲ್‍ಕುಮಾರ್, ಜಗದೀಶ್, ಮೋಹನ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: 03-ಏಖPಇಖಿ-5   ಕೆ.ಆರ್.ಪೇಟೆ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಬೇಕೆಂದು ಒತ್ತಾಯಿಸಿ ಇಂದು ಲಾರಿಗಳ ಚಾಲಕರು ಮತ್ತು ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
ಕೃಷ್ಣರಾಜಪೇಟೆ. ಕಳೆದ ಕೆಲವು ತಿಂಗಳ ಹಿಂದೆ ತಾಲೂಕಿನ ಕೋರಮಂಡಲ್ ಕಾರ್ಖಾನೆ ಒಳಭಾಗದಲ್ಲಿ ಅಧಿಕಾರಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅಮಾನತ್ತು ಪಡಿಸಿರುವ ಏಳು ಮಂದಿ ಕಾರ್ಮಿಕರನ್ನು ಮತ್ತೆ  ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾರ್ಮಿಕರು ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕೆಲಸವನ್ನು ಸ್ಥಗಿತಗೊಳಿಸಿ ಕಾರ್ಖಾನೆ ಮುಂಭಾಗದಲ್ಲಿ ವಿಷದ ಬಾಟಲಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
ಅಮಾನತ್ತಾಗಿರುವ ಏಳು ಜನರ ಪೈಕಿ ಒಬ್ಬ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಹಾಲಿ ಮೈಸೂರಿನಲ್ಲಿರುವ ಕೃಷ್ಣರಾಜ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆತಂಕಗೊಂಡಿರುವ ಉಳಿದ ಕಾರ್ಮಿಕರು ತಕ್ಷಣ ಅಮಾನತ್ತಾಗಿರುವ ಏಳು ಜನರನ್ನು  ಯಾವುದೇ ನಿಬಂಧನೆಗಳಿಲ್ಲದೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ನಿವೃತ್ತಿಹೊಂದಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬಾರದು, ವಿದ್ಯಾವಂತ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಕಾರ್ಖಾನೆಯಲ್ಲಿ ಕೆಲಸ ನಡೆಯಲು ಸೂಕ್ತ ಕ್ರಮ ವಹಿಸಿಬೇಕು ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿ ಕಾರ್ಮಿಕರು ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ಸೇವೆಯಿಂದ ಅಮಾನತ್ತುಗೊಂಡಿರುವ ಕಾರ್ಮಿಕ ಸಂಘದ ಅಧ್ಯಕ್ಷ ಯೋಗಮೂರ್ತಿ, ಕುಮಾರ್, ಚಿಕ್ಕೇಗೌಡ, ನಾಗರಾಜರಾವ್, ಚಂದ್ರಶೇಖರ್ ನೇತೃತ್ವದಲ್ಲಿ ನೌಕರರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಚಿತ್ರಶೀರ್ಷಿಕೆ: 03-ಏಖPಇಖಿ-05   ಕೆ.ಆರ್.ಪೇಟೆ ತಾಲೂಕಿನ ಕೋರಮಂಡಲ್‍ಸಕ್ಕರೆ ಕಾರ್ಖಾನೆಯಲ್ಲಿ ಅಮಾನತ್ತಾಗಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಅಮಾನತ್ತುಗೊಂಡಿರುವ ಕಾರ್ಮಿಕ ಸಂಘದ ಅಧ್ಯಕ್ಷ ಯೋಗಮೂರ್ತಿ ನೇತೃತ್ವದಲ್ಲಿ ಕಾರ್ಮಿಕರು ಇಂದಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.



Tuesday, 1 December 2015

ಶ್ರೀರಂಗಪಟ್ಟಣ:ಯುವ ಸಮುದಾಯ ನಾಡು,ನುಡಿ,ಸಾಹಿತ್ಯ,ಸಂಸ್ಕøತಿ ಕಟ್ಟುವ ದಿಕ್ಕಿನಲ್ಲಿ ಮನಸ್ಸು ಮಾಡುವುದರ ಜತೆಗೆ,ಕೋಮು ಭಾವನೆಯನ್ನು ತೊರೆದು ಸಹಿಷ್ಣುತೆಯಿಂದ ಬದುಕುವ ದೃಷ್ಠಿಕೋನವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ತೂಬಿನಕೆರೆಯ ಮೈಸೂರು ವಿ.ವಿ.ಯ ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಹೊಂ¨ಯ್ಯ ಕೆ.ಹೊನ್ನಲಗೆರೆ ಕರೆ ನೀಡಿದರು.
   ತಾಲೂಕು ಯುವ ಬರಹಗಾರರ ಬಳಗದ ವತಿಯಿಂದ ಪಟ್ಟಣದ ಬಿ.ಸಿ.ಎಂ. ವಿದ್ಯಾರ್ಥಿನಿಯರ ನಿಲಯದಲ್ಲಿ ನಡೆದ ಯುವಜನರು ಮತ್ತು ಕನ್ನಡ ಪ್ರಜ್ಞೆ ವಿಚಾರ ಕುರಿತ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮಾಜದ ಎಲ್ಲಾ ರಂಗಳಲ್ಲಿಯೂ ಯುವಕರು ಅಭಿವೃದ್ಧಿಯನ್ನು ಸಾಧಿಸಬೇಕು.ಇದಕ್ಕೆ ಪ್ರಾಮಾಣಿಕ ಬದ್ಧತೆ ಮುಖ್ಯ.ನಿರ್ದಿಷ್ಟವಾದ ಗುರಿ ಹಾಗೂ ಎತ್ತರದ ಕನಸ್ಸುಗಳನ್ನಿಟ್ಟುಕೊಂಡು ಮನ್ನಡೆಯಬೆಕು ಎಂದರು.
   ರಾಜ್ಯದಲ್ಲಿ ಕನ್ನಡದÀ ಆಡಳಿತ ಸಂಪೂರ್ಣ ಜಾರಿಯಾಗಿಲ್ಲ.ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಕನ್ನಡವೆಂದರೆ ತಾತ್ಸಾರ ಭಾವವಿದೆ.ಕ್ನಡ ಕುರಿತಾಗಿ ಅಸಡ್ಡೆ ಬೆಳೆಸಿಕೊಂಡಿದ್ದಾರೆ.ಇದರಿಂದಾಗಿ ಕನ್ನಡ ಅಡಳಿತದಲ್ಲಿ ಸಂಪೂರ್ಣವಾಗಿ ಅನುಷ್ಠಾನವಾಗದೆ,
ಕನ್ನಡಕ್ಕೆ ಹಿನ್ನಡೆ ಉಂಟಾಗಿದೆ ಎಂದು ವಿಷಾದಿಸಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ,ಯುವಜನರು ಆಧುನಿಕ ತಂತ್ರಜ್ಞಾನದ ಅಡಿಯಾಳಗದೆ,ಸಾಹಿತ್ಯ ಮತ್ತು ಸಾಂಸ್ಕøತಿಕ ಅಭಿರುಚಿಗಳನ್ನು ಮೈಗೂಡಿಸಿಕೊಂಡು,ಉತ್ತಮ ಜೀವನ ಮೌಲ್ಯಗಳ ಆರಾಧಿಸುವ ಜತೆಗೆ ಮಾನವೀಕರಣಗೊಳ್ಳವ
ಹಾದಿಯಲ್ಲಿ ಸಾಗಬೇಕು ಎಂದು ನುಡಿದರು.
  ಯುವಜನತೆ ದಿನನಿತ್ಯದ ಬದುಕಿನಲ್ಲಿ ಸದಾ ಕನ್ನಡವನ್ನೇ ಧ್ಯಾನಿಸಬೇಕು.ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳ ಓದುವ ಸಂಸ್ಕøತಿ ಬೆಳೆಸಿಕೊಳ್ಳಬೇಕು.ಕನ್ನಡದಲ್ಲಿನ ಉತ್ತಮ ಚಲನಚಿತ್ರ,ಟಿವಿಯಲ್ಲಿನ ಮನೋವಿಕಾಸ ಮಾಡುವ ಕಾರ್ಯಕ್ರಮಗಳ ವೀಕ್ಷಿಸುವ ಮೂಲಕ ಕನ್ನಡ ಭಾಷೆ,ಸಾಹಿತ್ಯ,ಸಂಸ್ಕøತಿಯ ಅಭ್ಯುದಯಕ್ಕೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
  ಉಪನ್ಯಾಸ ನೀಡಿ ಮಾತನಾಡಿದ ಅಧ್ಯಾಪಕ ಹಾಗೂ ಲೇಖಕ ಮಂಗಲ ಎಂ.ಇ.ಶಿವಣ್ಣ,ಯುವಕ ಯುವತಿಯರಲ್ಲಿ ಅಗಾಧ ಸಂಘಟನಾ ಶಕ್ತಿ ಮತ್ತು ಚೈತನ್ಯವಿರುತ್ತದೆ.ಇದನ್ನು ಕನ್ನಡ ಭಾಷೆಯ ಅಭಿವೃದ್ಧಿಗೆ ಬಳಸುವ ಕಾಳಜಿ ವಹಿಸಬೇಕು.ಕನ್ನಡದ ಬಗ್ಗೆ ಅನಾದರ ಭಾವ ಬೆಳೆಸಿಕೊಳ್ಳದೆ,ಅದನ್ನು ನಿರಂತರವಾಗಿ ಬಳಸುವ ಮೂಲಕ ತಮ್ಮ ಭಾಷಿಕ ಅಭಿಮಾನವನ್ನು ಮೆರೆಯಬೇಕು ಎಂದರು.
  ವಿದ್ಯಾಥಿ ಯುವÀಜನರಿಂದ ನಾಡಿನ ಅಭಿವೃದ್ಧಿ ಸಾಧ್ಯವಿದೆ.ಇತಿಹಾಸದ ಎಲ್ಲಾ ಕ್ರಾಂತಿಗಳ ಯಶಸ್ಸಿನ ಹಿಂದೆ ಯುವಜನರ ಪಾತ್ರವಿರವುದೇ ಇದಕ್ಕೆ ಸಾಕ್ಷಿ.ಆದ್ದರಿಂದ ಯುವಜನರು ಯಾವುದೇ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗದೆ,ಧನಾತ್ಮಕ ಚಿಂತನೆಗಳ ದಿಕ್ಕಿನಲ್ಲಿ ಸಾಗಬೇಕು ಎಓಧು ಸಲಹೆ ನೀಡಿದರು.
  ಸಮಾರಂಭದಲ್ಲಿ ವಿದ್ಯಾಥಿ ನಿಲಯದ ಮೇಲ್ವಿಚಾರಕಿ ಕೆ.ಎಸ್.ಪ್ರಮೀಳ,ತಾಲೂಕು ಯುವ ಬರಹಗಾರರ ಬಳಗದ ಅಧ್ಯಕ್ಷ ಅಪ್ಪಾಜಿ ಕೆ.ಶೆಟ್ಟಹಳ್ಳಿ,ಸಹಿತಿ ಅನಾರ್ಕಲಿ ಸಲೀಂ,ಯÀ್ವಕವಿ ಮಧುಕುಮಾರ್ ಸಣ್ಣೇನಹಳ್ಳಿ ಉಪಸ್ಥಿತರಿದ್ದರು.