Monday, 26 October 2015

ಅ. 27 ರಂದು ಮಹರ್ಷಿ ವಾಲ್ಮೀಕಿ ಜಯಂತಿ
      ಮೈಸೂರು,ಅ.26.-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಮಹಾನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲೆಯ ನಾಯಕ ಜನಾಂಗದ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 27 ರಂದು ಮಧ್ಯಾಹ್ನ 11 ಗಂಟೆಗೆ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು.
   ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಸಭಾ ಸದಸ್ಯರಾದ ವಾಸು ಅವರು ಅಧ್ಯಕ್ಷತೆ ವಹಿಸುವರು. ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ನಂಜುಂಡಸ್ವಾಮಿ ಹರದನಹಳ್ಳಿ ಅವರು ಮುಖ್ಯ ಭಾಷಣಕಾರಾಗಿ ಭಾಗವಹಿಸುವರು.
    ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪ ಅರಮನಾಥ್, ಲೋಕಸಬಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ. ಬಸವರಾಜು, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾದಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನುಬಾನು, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ. ಕೃಷ್ಣಮೂರ್ತಿ, ಉಪಾಧ್ಯಕ್ಷೆ ರಾಣಿ ಅವರು ಸಮಾರಂಭದ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಅಂದು ಬೆಳಿಗ್ಗೆ 10 ಗಂಟೆಗೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್. ಲಿಂಗಪ್ಪ ಅವರು ಮೆರವಣಿಗೆ ಉದ್ಘಾಟಿಸಿ ನಂದಿ ಧ್ವಜ ಪೂಜೆ ನೆರವೇರಿಸುವರು. ಕಲಾಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ  ಉಪ್ಪುಂದ ರಾಜೇಶ್ ಪಡಿಯಾರ್ ಮತ್ತು ತಂಡದಿಂದ ಮಹರ್ಷಿ ವಾಲ್ಮೀಕಿ ಗಾಯನ ಕಾರ್ಯಕ್ರಮ ಆಯೋಜಿಸಿದೆ.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸರ್ಕಾರಿ ನೌಕರರ ಹಾಜರಾತಿ ಕಡ್ಡಾಯ
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ 2015ರ ಅಕ್ಟೋಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದಿಂದ ಮೆರವಣಿಗೆಯ ಹೊರಡಲಿದೆ. ನಂತರ ಮಧ್ಯಾಹ್ನ 11 ಗಂಟೆಗೆ ಕಲಾಮಂದಿರದಲ್ಲಿ ಸಭಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸದರಿ ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರು ಕಡ್ಡಾಯವಾಗಿ ಹಾಜರಾಗಲು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
ಸ್ವ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ
ಮೈಸೂರು,ಅ.26-ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ ಯೋಜನೆಯಡಿಯಲ್ಲಿ ಸ್ವ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಮೊದಲನೇ ಪೀಳಿಗೆ ಉದ್ದಿಮೆಶೀಲರಿಗೆ  ಗರಿಷ್ಠ ಯೋಜನಾ ವೆಚ್ಚವು ಪ್ರಾರಂಭಿಕ ಉತ್ಪಾದನಾ ಅವಶ್ಯಕ ದುಡಿಮೆ ಬಂಡವಾಳ ಸೇರಿದಂತೆ ರೂ. 10 ಲಕ್ಷಗಳಿಗೆ ಸೀಮಿತವಾಗಿರುತ್ತದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 25% ರಷ್ಟು ಹಾಗೂ ವಿಶೇಷ ವರ್ಗದ ಫಲಾನುಭವಿಗಳಿಗೆ ಶೇ 35% ರಷ್ಟು ಸಹಾಯ ಧನವು ಲಭ್ಯವಿರುತ್ತದೆ. ಸಾಮಾನ್ಯ ವರ್ಗದವರು ಶೇ. 10 ರಷ್ಟು ಹಾಗೂ ವಿಶೇಷ ವರ್ಗದವರು ಶೇ. 5% ರಷ್ಟು ಸ್ವಂತ ಬಂಡವಾಳವನ್ನು ತೊಡಗಿಸಬೇಕಾಗಿರುತ್ತದೆ. ಈ ಯೋಜನೆಯು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಮಾತ್ರ ಹಾಗೂ ಹೊಸ ಘಟಕಗಳಿಗೆ ಮಾತ್ರ ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ರಂದು ಕೊನೆಯ ದಿನಾಂಕ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2566428ನ್ನು ಸಂಪರ್ಕಿಸಬಹುದು.

ಕಲಾಕೃತಿಗೆ ಅರ್ಜಿ ಆಹ್ವಾನ
    ಮೈಸೂರು,ಅ.26.ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಲಲಿತಕಲೆ ಮತ್ತು ಕರಕುಶಲ ವಿಭಾಗ ವತಿಯಿಂದ ದಸರಾ ವಸ್ತು ಪ್ರದರ್ಶನ-2015 ರ ಲಲಿತಕಲೆ ಮತ್ತು ಕರಕುಶಲ ಕಲಾ ವಿಭಾಗಕ್ಕೆ ಕಲಾಕೃತಿಗೆ ಅರ್ಜಿ ಆಹ್ವಾನಿಸಿದೆ.  
    ದಿನಾಂಕ 26.10.2015 ರಿಂದ 03.11.2015 ರವರೆಗೆ ಕನ್ನಡ ಕಾರಂಜಿ ಕಟ್ಟಡದಲ್ಲಿರುವ ಲಲಿತಕಲಾ ವಿಭಾಗಕ್ಕೆ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕಲಾಕೃತಿಗಳನ್ನು ನೀಡಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಹಾಗೂ ಕಲಾಕೃತಿಗಳನ್ನು ನವೆಂಬರ್ 3 ರಂದು  ಮಧ್ಯಾಹ್ನ 2-30 ಗಂಟೆಯೊಳಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಲಲಿತಕಲೆ ಮತ್ತು ಕರಕುಶಲ ವಿಭಾಗಕ್ಕೆ ನೀಡಬೇಕೆಂದು ಲಲಿತಕಲೆ ಮತ್ತು ಕರಕುಶಲ ವಿಭಾಗದ ಸದಸ್ಯ ಕಾರ್ಯದರ್ಶಿ ಗಳು ಪ್ರಕಟಣೆಯಲ್ಲಿ ತಿಳಿಸಿದೆ.

ಬಾರಿಸು ಕನ್ನಡ ಡಿಂಡಿಮವ
ವಿಶೇಷ ಕಾರ್ಯಕ್ರಮ

ನವೆಂಬರ್ 1, 2015 ರಿಂದ ಬಾರಿಸು ಕನ್ನಡ ಡಿಂಡಿಮವ ಹೆಸರಿನಲ್ಲಿ ಪ್ರಚಾರಾಂದೋಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಬಾರಿಸು ಕನ್ನಡ ಡಿಂಡಿಮವ ಎಂಬ ಕುವೆಂಪು ಕವನಗಳ ಆಧಾರಿತ ವಿಡಿಯೋ ಕಳುಹಿಸಿಕೊಡಲಾಗುವುದು. ರಾಜ್ಯೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲು ಅಗತ್ಯ ಕ್ರಮ ವಹಿಸುವುದು. ವಿಡಿಯೋ ಪ್ಲೇ ಮಾಡಲು ಅಗತ್ಯವಿರುವ ವಿಡಿಯೋ ವಾಲ್ ಅನ್ನು ಸಮಾರಂಭದ ಸ್ಥಳದಲ್ಲಿ ಅಳವಡಿಸಲು ಕ್ರಮ ವಹಿಸುವುದು.
ಕನ್ನಡ ಸಂಸ್ಕøತಿ ಏಳಿಗೆಗಾಗಿ ಸರ್ಕಾರ ರೂಪಿಸಿರುವ ಕ್ರಮಗಳ ಕಿರು ಹೊತ್ತಿಗೆಯನ್ನು ಕೇಂದ್ರ ಕಚೇರಿಯಿಂದ ಕಳುಹಿಸಲಾಗುವುದು ಇದರ ಬಿಡುಗಡೆಗೆ ಕ್ರಮ ವಹಿಸುವುದು. ಇಲಾಖೆಯ ಕ್ಷೇತ್ರಪ್ರಚಾರ ವಾಹನದ ವಿನ್ಸಾಸ ಕಳುಹಿಸಲಾಗುವುದು. ವಿನ್ಯಾಸದಂತೆ ವಾಹನ ಸಿದ್ದಪಡಿಸಿ ನವೆಂಬರ್ 2 ರಂದು ರಾಜ್ಯೋತ್ಸವ ಸಮಾರಂಭದಲ್ಲಿ ಚಾಲನೆ ನೀಡಲು ವ್ಯವಸ್ಥೆ ಮಾಡುವುದು.
ಜಿಲ್ಲಾದ್ಯಾಂತ 20 ದಿನಗಳ ಕಾಲ ಕಾರ್ಯಕ್ರಮ ಏರ್ಪಡಿಸಲು ವ್ಯವಸ್ಥೆ ಮಾಡುವುದು.
ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ಕಾರ್ಯಕ್ರಮ ಈಗಾಗಲೇ ಪೂರ್ಣಗೊಂಡಿದ್ದಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮದ ಜತೆಗೆ ಡಿಸೆಂಬರ್ ತಿಂಗಳ ಕಾರ್ಯಕ್ರಮ ಜೋಡಿಸಿಕೊಳ್ಳುವುದು.
ನವೆಂಬರ್ ತಿಂಗಳ ಕಾರ್ಯಕ್ರಮವನ್ನು ಹಿಂದೂಡಿ ಈಗಾಗಲೇ ಕಾರ್ಯಕ್ರಮ ಏರ್ಪಡಿಸಿರುವವರುಈ ಕಾರ್ಯಕ್ರಮಕ್ಕೆ  ಏರ್ಪಡಿಸಿರುವ ವಿಶೇಷ ಅನುದಾನದಲ್ಲಿ ಡೀಸಲ್ ವೆಚ್ಚ ಭರಿಸಿಕೊಂಡು ಡಿಸೆಂಬರ್ ತಿಂಗಳ ಕಾರ್ಯಕ್ರಮ ಹಿಂದೂಡಿ ಕಾರ್ಯಕ್ರಮ ಏರ್ಪಡಿಸುವುದು. ಈ ಸಂದರ್ಭದಲ್ಲಿ 10 ದಿನ ಸಂಗೀತ 10 ದಿನ ಬೀದಿನಾಟಕ ಏರ್ಪಡಿಸುವುದು.
ಈ ಕಾರ್ಯಕ್ರಮಕ್ಕಾಗಿ 50,000 ರೂ. ವಿಶೇಷ ಅನುದಾನ ಒದಗಿಸಲಾಗುವುದು.


No comments:

Post a Comment