Friday, 16 October 2015

ಗಾಳಿ ಪಟ ಸ್ಪರ್ಧೆ
     ಮೈಸೂರು,ಅ.15.-ಮೈಸೂರು ದಸರಾ ಮಹೋತ್ಸವ-2015ರ ಅಂಗವಾಗಿ ದಿನಾಂಕ                17-10-2015 ಮತ್ತು 18-10-2015 ರಂದು ಗಾಳಿಪಟ ಸ್ಪರ್ಧೆ ಲಲಿತ್‍ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯಲಿದೆ.
     ಶಾಸಕ ಎಂ.ಕೆ. ಸೋಮಶೇಖರ್, ತನ್ವೀರ್‍ಸೇಠ್, ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು, ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಗಾಳಿಪಟ ಸ್ಪರ್ಧೆಯನ್ನು ಅಕ್ಟೋಬರ್ 17 ರಂದು  ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ಈ ಗಾಳಿಪಟ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದಾಗಿದ್ದು, ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಈ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಾಳುಗಳು ಅಕ್ಟೋಬರ್ 17 ರ ಬೆಳಿಗ್ಗೆ 9 ಗಂಟೆಯೊಳಗಾಗಿ ಲಿಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.
     ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179,  9343777797 ನ್ನು ಸಂಪರ್ಕಿಸುವುದು.

ಚಿತ್ರಕಲಾ ಪ್ರದರ್ಶನ : ಬಹುಮಾನ ಪ್ರಕಟ
      ಮೈಸೂರು,ಅ.16.ಮೈಸೂರು ದಸರಾ ಮಹೋತ್ಸವ-2015ರ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ದಿ.14.10.2015 ರಿಂದ 21.10.2015ರವರೆಗೆ ಆಯೋಜಿಸಲಾಗಿರುವ ಚಿತ್ರಕಲಾ ಪ್ರದರ್ಶನದಲ್ಲಿ ಬಹುಮಾನಕ್ಕಾಗಿ ಆಯ್ಕೆಯಾದ ಕಲಾವಿದರ ಹೆಸರು ಪ್ರಕಟವಾಗಿರುತ್ತದೆ.  ಚಿತ್ರಕಲೆಯಲ್ಲಿ ಸುರೇಶ್ ಕೆ. ಹಾಗೂ ಆರ್.ಎಸ್.ಬಿ.ಆಗ್ನಿ ಹೋತ್ರಿ, ಶಿಲ್ಪಕಲೆಯಲ್ಲಿ ಬಸವರಾಜು ಹಾಗೂ ಅದಿತ್ಯ ಜೈನ್, ಗ್ರಾಫಿಕ್ಸ್‍ನಲ್ಲಿ ಪೂರ್ಣಿಮ ಎನ್. ಹಾಗೂ ಅಸ್ಬ ಅಹಮ್ಮದ್, ಸಾಂಪ್ರದಾಯಿಕ ಚಿತ್ರದಲ್ಲಿ ಮುನ್ನಿ ಕೃಷ್ಣ ಆರ್. ಹಾಗೂ ಲಕ್ಷ್ಮೀ ನಾಗೇಶ್, ಕರಕುಶಲ ಕಲೆಯಲ್ಲಿ ರವಿಕುಮಾರ್ ಆರ್. ಹಾಗೂ ಸುಮಿತ್ರ ಪುಟ್ಟಿ, ಅನ್ವಯಕಲೆಯಲ್ಲಿ ರೇಷ್ಮ ರಾಣಿ ಹಾಗೂ ನಾಗಪ್ರಸಾದ್ ಮತ್ತು ಛಾಯಾಚಿತ್ರ ವಿಭಾಗದಲ್ಲಿ ಸುಮುಖ್ ಭಾರಧ್ವಜ್ ಹಾಗೂ ಅಚ್ಚುತ್ ಬಿ.ಎಸ್. ಬಹುಮಾನ ಪಡೆದಿರುತ್ತಾರೆ ಎಂದು ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಘು ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ
      ಮೈಸೂರು,ಅ.16. ಜಿಲ್ಲಾ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ  ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ   ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಲಘು ವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1000/- ತರಬೇತಿ ಭತ್ಯೆ ನೀಡಲಾಗುವುದು.
    ಅರ್ಜಿ ಸಲ್ಲಿಸುವವರು ಕನಿಷ್ಠ 21 ವರ್ಷ ವಯೋಮಿತಿ ಪೂರೈಸಿರಬೇಕು ವಾರ್ಷಿಕ ಆದಾಯ ಮಿತಿ - ಪ್ರವರ್ಗ-1 ಕ್ಕೆ ರೂ.2.50 ಲಕ್ಷಗಳು ಮತ್ತು ಪ್ರವರ್ಗ-2ಎ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.1.00 ಲಕ್ಷ ದೊಳಗಿರಬೇಕು. ಕೇಂದ್ರ ಮೋಟಾರ್ ವಾಹನ ನಿಯಮಾವಳಿಗಳು 1989 ನಿಯಮ 5ರಂತೆ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು.
     ಆಸಕ್ತರು ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಟ್ಟಡದ ಸಂಖ್ಯೆ: 43 (ಹೊಸ ನಂಬರು), 5ನೇ ಕ್ರಾಸ್, 2ನೇ ಮೇನ್, ಜಯನಗರ, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 31 ರೊಳಗಾಗಿ ಸಲ್ಲಿಸುವುದು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2342917ನ್ನು ಸಂಪರ್ಕಿಸುವುದು.
ಕಚೇರಿ ಸ್ಥಳಾಂತರ
    ಮೈಸೂರು,ಅ.16.ಸಾರ್ವಜನಿಕ ಕಚೇರಿಗಳ ಕಟ್ಟಡ, ನ್ಯೂ ಸಯ್ಯಾಜಿರಾವ್ ರಸ್ತೆ ಮೈಸೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿರುವ ಬೇಡನ್ ಪೋವೆಲ್ ಶಾಲೆಯ ಪಕ್ಕದ ಕೆ.ಎಸ್.ಐ.ಸಿ. ಕಟ್ಟಡಕ್ಕೆ ಅಕ್ಟೋಬರ್ 14 ರಂದು ಸ್ಥಳಾಂತರಗೊಂಡಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು,ಅ.16-ನಾಡಹಬ್ಬ ಮೈಸೂರು ದಸರಾ-2015ರ ಕವಿಗೋಷ್ಠಿ ಉಪಸಮಿತಿ ವತಿಯಿಂದ ದಸರಾ ಕವಿಗೋಷ್ಠಿ ಅಕ್ಟೋಬರ್ 19 ಹಾಗೂ 20 ರಂದು ನಡೆಯಲಿದೆ.
ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರಿನ ಪ್ರಸಿದ್ಧ ಕವಯತ್ರಿ ಡಾ. ಲತಾ ರಾಜಶೇಖರ್ ಅವರು ಉದ್ಘಾಟಿಸವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ತುಮಕೂರಿನ ಪ್ರಸಿದ್ಧ ಕವಿ ಪ್ರೊ. ಕೆ.ಬಿ. ಸಿದ್ದಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 19 ರಂದು ಬೆಳಿಗ್ಗೆ 10-30 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯಲ್ಲಿ ಮುಳ್ಳೂರು ಶಿವಮಲ್ಲು, ಜಡಿಯ ಗೌಡ, ಸುಂದರ ಕಲಿವೀರ, ಮಂಜುಳ ಸಿ. ಎಸ್., ಮದ್ದೂರು ದೊರೆಸ್ವಾಮಿ, ಶಂಕರ ಅಂಕನಶೆಟ್ಟಿಪುರ, ಅಪೂರ್ವ ಡಿ’ ಸಿಲ್ವ, ಅಂಕಮಣಿ, ಭೇರ್ಯ ರಾಮಕುಮಾರ್, ತ.ರಾ. ಸುಮ ಹಾಗೂ ಹಾರೋಹಳ್ಳಿ ರವೀಂದ್ರ, ನಾಗರಾಜ ಮೂರ್ತಿ ಎಂ., ರವೀಂದ್ರನಾಥ್ ಸಿ., ಸುಜಾತ ಬಿ., ಹೇಮಗಂಗ ಎ., ಸೋಮಣ್ಣ ಜೆ., ಮಿಲನ ಕೆ. ಭರತ್, ಹಂಚೆಟ್ಟರ್ ಫ್ಯಾನ್ಸಿ ಮುತ್ತಣ್ಣ, ಆಶೈ ಕೆ.ಎ., ಸ್ಪೂರ್ತಿ ಹರವು, ಕೆ.ಆರ್. ಪೇಟೆ ಧನಲಕ್ಷ್ಮಿ, ಕೃಷ್ಣ ಸ್ವರ್ಣಸಂದ್ರ, ಸುಮಾರಾಣಿ ಪಿ., ಶರ್ಮಿಳ ಎಸ್.ಎ., ಪ್ರಭಾಮಣಿ ನಾಗರಾಜ್, ಬಿಚನಹಳ್ಳಿ ಕೃಷ್ಣಪ್ಪ, ನಾಗರಾಜ್ ಹೆತ್ತೂರು, ಸವಾಲ್ ಬೇಲೂರು ಮತ್ತು ಸಂಘಮಿತ್ರ  ಅವರುಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನ ಹಿರಿಯ ಕವಿ ಕೆ.ಸಿ. ಶಿವಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪುರದ ಪ್ರಸಿದ್ಧ ಕವಿ ರಂಜಾನ್ ದರ್ಗಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 19 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಉಳುವ ಯೋಗಿ : ಬದುಕು-ಬವಣೆ ವಿಚಾರಗೋಷ್ಠಿಯಲ್ಲಿ ಕಲಬುರ್ಗಿಯ ಹಿರಿಯ ಜಾನಪದ ವಿದ್ವಾಂಸ ಡಾ. ವೀರಣ್ಣ ದಂಡೆ ಅವರು ಜನಪದ ಸಾಹಿತ್ಯ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಜೆ.ಎಂ. ನಾಗಯ್ಯ ಅವರು ಶಾಸನ ಮತ್ತು ಪ್ರಾಚೀನ ಕಾವ್ಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಜೀನ ಸಹ ಪ್ರಾಧ್ಯಾಪಕಿ ಡಾ. ಎಂ.ಪಿ. ರೇಖಾ ಅವರು ವಚನ ಸಾಹಿತ್ಯ ಮತ್ತು ಸರ್ವಜ್ಞನ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಬೆಂಗಳೂರಿನ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಕಲ್ಗುಡಿ ಅವರು ಆಧುನಿಕ ಸಾಹಿತ್ಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ.
ಮೈಸೂರಿನ ವಿಶ್ರಾಂತ ಕುಲಪತಿ ಪ್ರೊ. ಹೆಚ್.ಕೆ. ಲಕ್ಕಪ್ಪಗೌಡ ಅವರು ಆಶಯ ನುಡಿಯುವರು. ಮೈಸೂರಿನ ಹಿರಿಯ ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕೆ.ಸಿ. ಬಸವರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 20 ರಂದು ಬೆಳಿಗ್ಗೆ 10-30 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ನಡೆಯಲಿರುವ  ಕೃಷಿ ಕಾವ್ಯಸಿರಿ ಕವಿಗೋಷ್ಠಿಯಲ್ಲಿ ಗಂಗನಪಳ್ಳಿ ಎಂ.ಜಿ., ಭಾಸ್ಕರ್ ಟಿ.ಎಂ., ಮಲ್ಲಿಕಾರ್ಜುನ ಮೇತ್ರಿ, ವೆಂಕಮ್ಮ ಎನ್.ಡಿ., ಯಾಕೊಳ್ಳಿ ವಾಯ್ ಎಂ., ಮೆಹಬೂಬಿ ಶೇಟ್, ಚೆನ್ನಪ್ಪ ಅಂಗಡಿ, ಚಿದಾನಂದ ಸಾಲಿ, ರಮೇಶ್ ಗಬ್ಬೂರು, ಲಲಿತಾ ಹೊಸಪೇಟೆ, ಅರ್ಜುನ ಗೊಳಸಂಗಿ, ದುಂಡಿರಾಜ್ ಎಚ್., ಪಾಟೀಲ ಚಂ.ಸು., ಅರುಂಧತಿ ರಮೇಶ್, ಪಾಶ ಶಿ. ಜು., ನರಸಿಂಹಪ್ಪ ಕೆ., ಪವಾರ್ ಕೆ.ಬಿ., ರಾಮದಾಸ್, ಸಿದ್ಧಾಶ್ರಮ ಸಿ.ಪಿ., ಪ್ರಶಾಂತ ನಾಯಕ್, ಐಷಾ ಯು.ಕೆ.(ಬ್ಯಾರಿ), ಸತೀಶ್  ಜವರೇಗೌಡ, ಜರನಗಹಳ್ಳಿ ಶಿವಶಂಕರ್, ಶಿವನಂಜಯ್ಯ ಎಂ., ವಿಜಯರಾಘವನ್ ಆರ್., ಕಾಗತಿ ವಿ. ವೆಂಕಟರತ್ನಂ, ಚಿಕ್ಕಮಗಳೂರಿನ ಗಣೇಶ್, ಚನ್ನೇಗೌಡ ಎನ್.ಎಲ್., ಮಹಾಲಿಂಗಪ್ಪ ಎಲ್., ತ್ಯಾಮಗೊಂಡ್ಲು ಅಂಬರೀಷ್, ಜ್ಯೋತಿ ಚೆಲೈರು, ಸುಕನ್ಯಾ ಕಳಸ, ಸರ್ದಾರ್ ಅಯಾಗ್(ಉರ್ದು), ಹಾಗೂ ಐತಿಚಂಡ ರಮೇಶ್(ಕೊರವ) ಅವರುಗಳು ಭಾಗವಹಿಸುವರು.
ಬೆಂಗಳೂರಿನ ಪ್ರಸಿದ್ಧ ಕವಯತ್ರಿ ನಾಡೋಜ ಡಾ. ಕಮಲಾ ಹಂಪನಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಗ್ನಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತರಬೇತಿ
      ಮೈಸೂರು,ಅ.16.ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖಾ ವತಿಯಿಂದ ಮೈಸೂರು ನಗರದ ಹೆಬ್ಬಾಳ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ದಿನಾಂಕ 29-10-2015 ರಿಂದ 31-10-2015 ರವರೆಗೆ 03 ದಿವಸಗಳ ಅಗ್ನಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತರಬೇತಿ ನಡೆಯಲಿದೆ.
     ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯ ಪೆಟ್ರೋಲ್ ಬಂಕ್, ಪಟಾಕಿ, ಸ್ಪೋಟಕ ದಾಸ್ತಾನುಗಾರರು, ಶಾಲಾ ಕಾಲೇಜು ಶಿಕ್ಷಕರು, ಕಾರ್ಖಾನೆ, ಮಾಲ್‍ಗಳು, ಆಸ್ಪತ್ರೆ ಸಿಬ್ಬಂದಿಗಳು ಇತ್ಯಾದಿ ಸಂಸ್ಥೆಯವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
     ತರಬೇತಿಗೆ ಹಾಜರಾಗಲು ಇಚ್ಚಿಸುವವರು ಜಿ.ಈಶ್ವರ್‍ನಾಯ್ಕ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಮೈಸೂರು ವಲಯ, ಮೊಬೈಲ್ ನಂ- 8277007351, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ - ದೂರವಾಣಿ ಸಂಖ್ಯೆ:- 0821-2540116 ಹಾಗೂ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ಕಚೇರಿ, ಮೈಸೂರು ವಲಯ, ಸರಸ್ವತಿಪುರಂ ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.

ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ ಅರ್ಹತಾ ದಿನಾಂಕ 1ನೇ ನವೆಂಬರ್ 2015
ದಿನಾಂಕ 01.11.2015 ಕ್ಕೆ ಮೊದಲು ಕನಿಷ್ಠ 3 ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೋಬ್ಬ ವ್ಯಕ್ತಿಯು ಮತದಾರರ ಪಟ್ಟಿಗಳಲ್ಲಿ ಹೆಸರುಗಳನ್ನು ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗಳಿಗೆ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರ್ನಾಟಕ ವಿಧಾನ ಪರಿಷತ್‍ನ ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ ಅರ್ಹತಾ ದಿನಾಂಕ 01-11-2015ರ  ಕಾರ್ಯಕ್ರಮವನ್ನು ದಿನಾಂಕ 01.10.2015 ರಿಂದ 16.11.2015 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಪರಿಷ್ಕರಣೆಯ ವೇಳಾಪಟ್ಟಿಯು ಈ ಕೆಳಕಂಡಂತೆ ಇರುತ್ತದೆ.

ಕ್ರ.ಸಂ
ಪರಿಷ್ಕರಣೆಯ ಚಟುವಟಿಕೆಗಳು
ಅವಧಿ
1
ಮತದಾರರಿಂದ ಎಪಿಕ್ ಸಂಖ್ಯೆಗಳನ್ನು ಸಂಗ್ರಹಿಸುವುದು.
20.09.2015 (ಭಾನುವಾರ) ರಿಂದ
24.09.2015 (ರವರೆಗೆ)
2
ಮತದಾರರ ಪಟ್ಟಿಗಳ ಗಣಕೀಕರಣ
28.09.2015 (ಸೋಮವಾರ) ದವರೆಗೆ
3
ಮತದಾರರ ಪಟ್ಟಿಗಳನ್ನು ಒಟ್ಟುಗೂಡಿಸುವುದು.
28.09.2015 (ಸೋಮವಾರ) ದವರೆಗೆ
4
ಕರಡು ಮತದಾರರ ಪಟ್ಟಿಗಳ ಮುದ್ರಣ
30.09.2015 (ಬುಧವಾರ) ದವರೆಗೆ
5
ಕರಡು ಮತದಾರರ ಪಟ್ಟಿಗಳ ಪ್ರಕಟಣೆ ಹಾಗೂ ಸಾರ್ವಜನಿಕ ತಿಳುವಳಿಕೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವುದು.
01.10.2015 (ಗುರುವಾರ)
6
ಹಕ್ಕು ಮತ್ತು ಆಕ್ಷೇಪಣೆಗಳನ್ನು (ನಮೂನೆ 18/19) ಗಳನ್ನು ಸ್ವೀಕೃರಿಸುವುದನ್ನು ಪ್ರಾರಂಭಿಸುವುದು.
01.10.2015 (ಗುರುವಾರ) ದಿಂದ
7
ಮೊದಲ ಬಾರಿಗೆ ಸಾರ್ವಜನಿಕ ತಿಳುವಳಿಕೆಯನ್ನು ದಿನಪತ್ರಿಕೆಗಳಲ್ಲಿ ಮರುಪ್ರಕಟಿಸುವುದು.
15.10.2015 (ಗುರುವಾರ)
8
ಎರಡನೇ ಬಾರಿಗೆ ಸಾರ್ವಜನಿಕ ತಿಳುವಳಿಕೆಯನ್ನು ದಿನಪತ್ರಿಕೆಗಳಲ್ಲಿ ಮರುಪ್ರಕಟಿಸುವುದು.
25.10.2015 (ಭಾನುವಾರ)
9
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಅವಧಿ
01.10.2015 (ಗುರುವಾರ) ದಿಂದ 16.11.2015 (ಸೋಮವಾರ) ದವರೆಗೆ
10
ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದು
30.11.2015 (ಸೋಮವಾರ) ದವರೆಗೆ
11
ಪೂರಕ ಪಟ್ಟಿಗಳನ್ನು ತಯಾರಿಸುವುದು ಹಾಗೂ ಮತದಾರರ ಪಟ್ಟಿಗಳ ಮುದ್ರಣ
07.12.2015 (ಸೋಮವಾರ) ದವರೆಗೆ
12
ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆ
14.12.2015 (ಸೋಮವಾರ)

1 ಕರಡು ಮತದಾರರ ಪಟ್ಟಿಗಳನ್ನು (ಆಡಿಚಿಜಿಣ ಇಟeಛಿಣoಡಿಚಿಟ ಖoಟಟs) ದಿನಾಂಕ 01.10.2015 ರಂದು ಪ್ರಕಟಿಸಲಾಗಿದ್ದು. ನಂತರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಅವಧಿಯಲ್ಲಿ ಮೈಸೂರು ಜಿಲ್ಲೆಯ, ತಾಲ್ಲೂಕು ಕೇಂದ್ರಗಳಲ್ಲಿ ಸಂಬಂದಪsÀಟ್ಟ ತಹಶೀಲ್ದಾರ್‍ರವರ ಕಚೇರಿಗಳಲ್ಲಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
2 ಸದರಿ ದಕ್ಷಿಣ ಪದವೀಧರರ ಮತದಾರರ ಪಟ್ಟಿಗಳಲ್ಲಿ ಹೆಸರು ಇಲ್ಲದಿರುವವರು ಹಾಗೂ ಹೊಸದಾಗಿ ಸೇರ್ಪಡೆಗೆ ನಿಗದಿತ ನಮೂನೆಯಲ್ಲಿ (ಈoಡಿm-18) ಅರ್ಜಿಗಳನ್ನು ಅಗತ್ಯ ದಾಖಲಾತಿಗೊಂದಿಗೆ ತಮ್ಮ ಹತ್ತಿರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ನಿಯೋಜಿತ ಅಧಿಕಾರಿಗಳಿಗೆ ದಿನಾಂಕ 01.10.2015 ರಿಂದ ದಿನಾಂಕ 16.11.2015 ರವರೆಗೆ ಸಲ್ಲಿಸಬಹುದು. .

ಸಾರ್ವಜನಿಕರು ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಮೈಸೂರು ಮಹಾನಗರ ಪಾಲಿಕೆ ಕಚೇರಿ -
0821-2418860
ಉಪ ವಿಭಾಗಾಧಿಕಾರಿಗಳ ಕಚೇರಿ, ಮೈಸೂರು ಉಪ ವಿಭಾಗ, ಮೈಸೂರು
0821-2422100
ಉಪ ವಿಭಾಗಾಧಿಕಾರಿಗಳ ಕಚೇರಿ ಹುಣಸೂರು ಉಪ ವಿಭಾಗ, ಹುಣಸೂರು
08222-252073
ಮೈಸೂರು ತಾಲ್ಲೂಕು ಕಚೇರಿ
0821-2414811
ಪಿರಿಯಾಪಟ್ಟಣ ತಾಲ್ಲೂಕು ಕಚೇರಿ
08223-274175
ನಂಜನಗೂಡು ತಾಲ್ಲೂಕು ಕಚೇರಿ
08221-226002
ಕೆ.ಆರ್.ನಗರ ತಾಲ್ಲೂಕು ಕಚೇರಿ
08223-262371
ಟಿ.ನರಸೀಪುರ ತಾಲ್ಲೂಕು ಕಚೇರಿ
08227-261233
ಹುಣಸೂರು ತಾಲ್ಲೂಕು ಕಚೇರಿ
08222-252040


ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ
08228

No comments:

Post a Comment