Saturday, 31 October 2015


ದಾರಿದ್ರ್ಯತೆ ತೊಲಗಿಸಲು ಹೋರಾಟ ಅಗತ್ಯ
ರಾಜ್ಯಪಾಲ ವಜುಭಾಯ್‍ವಾಲಾ
ಮಂಡ್ಯ, ಅ.31- ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ದಾರಿದ್ರ್ಯತೆ ಹೆಚ್ಚಾಗುತ್ತಲೇ ಇದೆ. ಪ್ರತಿಯೊಬ್ಬರೂ ದಾರಿದ್ರ್ಯತೆಯನ್ನು ತೊಲಗಿಸಲು ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ರಾಜ್ಯಪಾಲ ವಜುಭಾಯ್‍ವಾಲಾ ಅಭಿಪ್ರಾಯ ಪಟ್ಟರು.
ನಗರದ ಪಿ.ಇ.ಎಸ್. ಇಂಜಿನಿಯರ್‍ರಿಂಗ್ ಕಾಲೇಜಿನ ಪ್ಲೇಸ್‍ಮೆಂಟ್ ಸಭಾಂಗಣದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಏರ್ಪಡಿಸಿರುವ ರೆಡ್‍ಕ್ರಾಸ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ವಿಶ್ವದಲ್ಲೇ ಹೆಸರು ಮಾಡಿರುವ ರೆಡ್‍ಕ್ರಾಸ್ ಸಂಸ್ಥೆಯನ್ನು ಜಿಲ್ಲೆಯಲ್ಲೂ ಉದ್ಘಾಟನೆ ಮಾಡಿರುವುದು ಒಳ್ಳೆಯ ಕೆಲಸ. ಪ್ರತಿಯೊಬ್ಬರೂ ಒಬ್ಬ ವ್ಯಕ್ತಿಯ ಜೀವ ಉಳಿಸುವ ರಕ್ತವನ್ನು ದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ರೆಡ್‍ಕ್ರಾಸ್ ಸಂಸ್ಥೆ ಮಾನವೀಯತೆ, ವಿಶ್ವಾಸತೆಗೆ ಹೆಸರುವಾಸಿಯಾಗಿ ವಿಶ್ವಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನೊಂದ ಜನರಿಗೆ ನೆರವಾಗಲು ಪ್ರತಿಯೊಬ್ಬರೂ ಮಾನವೀಯತೆ ಮೆರೆಯಬೇಕು. ಗ್ರಾಮೀಣ ಜನತೆಯಲ್ಲಿ ರಕ್ತದಾನ ಮಾಡುವ ವಿದ್ಯಾವಂತ ಯುವಕರು ಅರಿವು ಮೂಡಿಸಬೇಕು ಎಂದರು.
ಜನತೆ ಹಣ, ಬಟ್ಟೆ, ಊಟವನ್ನು ಕೊಡಲು ಸಿದ್ಧರಾಗುತ್ತಾರೆ ಆದರೆ ಒಬ್ಬ ವ್ಯಕ್ತಿಯ ಜೀವ ಉಳಿಸುವ ರಕ್ತವನ್ನು ನೀಡಲು ಹಿಂದೇಟು ಹಾಕುವುದು ಏಕೆ ಎಂಬುದು ತಿಳಿಯುತ್ತಿಲ್ಲ. ರಾಮಾಯಣದಲ್ಲಿ ಪ್ರತಿಯೊಬ್ಬರೂ ಸುಖದಿಂದ ಇರಲಿ ಎಂದು ಹೇಳುತ್ತಾರೆ ಇದು ನಮ್ಮ ಸಂಸ್ಕøತಿಯ ಪ್ರತಿಬಿಂಬ, ನಮ್ಮ ಒಳಿತನ್ನು ಬಯಸದೆ ಪರರ ಅಭಿವøದ್ಧಿಯ ಬಗ್ಗೆಯೂ ಗಮನ ಹರಿಸಬೇಕು ಇದು ಮಾನವ ಗುಣವಾಗಬೇಕು ಎಂದು ಹೇಳಿದರು.
ಪಾಕಿಸ್ತಾನದಿಂದ ಮೂಖ ಹುಡುಗಿ ಭಾರತಕ್ಕೆ ಮರಳಿ ಬಂದಾಗ ಇಡೀ ಮನುಕುಲವೇ ಪ್ರೀತಿಯಿಂದ ನೋಡಿತು. ಇದು ನಮ್ಮ ಭಾರತದ ಸಂಸ್ಕøತಿಯ ಪ್ರತಿಬಿಂಬವಾಗಿದೆ. ಅದೇ ರೀತಿ ಬೇರೆಯವರು ಸಂಕಷ್ಟದಲ್ಲಿರುವು ಅವರ ಸಮಸ್ಯೆಯನ್ನು ತಮ್ಮದು ಎಂದು ಭಾವಿಸಿ ಅದನ್ನು ಇತ್ಯರ್ಥ ಪಡಿಸಲು ಮುಂದಾಗಬೇಕು ಎಂದರು.
ಬೇರೆಯವರು ದುಃಖದಲ್ಲಿರುವಾಗ ಅವರ ಸಹಾಯಕ್ಕೆ ನೀವು ಹೋದರೆ ದೇವರು ನಿಮ್ಮ ಸಂಕಷ್ಟಕ್ಕೆ ದಾವಿಸುತ್ತಾನೆ.  ಇತ್ತೀಚಿನ ದಿನಗಳಲ್ಲಿ ಆಹಾರ ಸೇವನೆಗಿಂತ ಹೆಚ್ಚಾಗಿ ಔಷಧಿಯನ್ನೇ ಹೆಚ್ಚಾಗಿ ಸೇವಿಸುವಂತಾಗಿದೆ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮಾತನಾಡಿ, ಒಂದು ಸಿನಿಮಾದಲ್ಲಿ ಹೇಗೆ ನಾಯಕನಿರುತ್ತಾನೋ ಹಾಗೆ ಪ್ರತಿ ಸಂಘ ಸಂಸ್ಥೆ ಉತ್ತಮವಾಗಿ ನಡೆಯಲು ಒಬ್ಬ ನಾಯಕನ ಅವಶ್ಯಕತೆ ಇದೆ. ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯನ್ನು ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಮೀರಾ ಶಿವಲಿಂಗಯ್ಯರ ನಂತರ ಉತ್ತಮ ನಾಯಕ ಬರಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.
ರೆಡ್‍ಕ್ರಾಸ್ ಸಂಸ್ಥೆ ಮಾನವೀಯತೆ ಹೆಸರುವಾಸಿಯಾಗಿದೆ. ಯುದ್ದ ಸಂದರ್ಭದಲ್ಲಿ ನಮ್ಮ ದೇಶಕ್ಕಾಗಿ ಪ್ರಾಣ ನೀಡುತ್ತಿರುವವರು ಸರಿಯಾದ ಸಮಯದಲ್ಲಿ ರಕ್ತವನ್ನು ಸರಬರಾಜು ಮಾಡಿ ಅವರ ಜೀವ ಉಳಿಸುತ್ತಿರುವುದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಕ್ತನಿಧಿ ಬ್ಯಾಂಕ್ ತೆರೆಯಲು ಅನುಮತಿ ಕೇಳಿದ್ದಾರೆ. ರಕ್ತನಿಧಿ ಬ್ಯಾಂಕ್ ತೆರೆಯುವುದು ದೊಡ್ಡ ಕೆಲಸವಲ್ಲ ಪ್ರತಿಯೊಬ್ಬರೂ ಸಹಕಾರ ನೀಡಿದರೆ ಈಗಲೇ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ಘಟಕದ ಸಭಾಧ್ಯಕ್ಷರಾದ ಬಸ್ರೂರು ರಾಜೀವಶೆಟ್ಟಿ, ಉಪಾಧ್ಯಕ್ಷರಾದ ಡಾ. ಸಿ.ಸೋಮಶೇಖರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೋಮಲ ಸ್ವಾಮಿ, ನಗರಸಭೆ ಅಧ್ಯಕ್ಷರಾದ ಲೋಕೇಶ್,ಮಂಡ್ಯದ ಘಟಕದ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್ ಜಿ.ಬೊರಸೆ, ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್. ಪೂರ್ಣಿಮಾ, ಮಿಮ್ಸ್ ವೈದ್ಯಕೀಯ  ಅಧೀಕ್ಷಕರಾದ ಡಾ. ಕೆ.ಎಂ. ಶಿವಕುಮಾರ್ ಭಾಗವಹಿಸಿದ್ದರು.
ಕ.ರ.ವೆ ಹೋರಾಟಗಾರರ ವಿರುದ್ಧದ ಮೊಕ್ಕದ್ದಮೆ ಹಿಂಪಡೆಯಲು ಒತ್ತಾಯ
ಮೈಸೂರು,ಅ.31-ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಬರರ್ಬನ್ ಬಸ್ ನಿಲ್ದಾಣದಲ್ಲಿ ಬಾಟ ಮಳಿಗೆ ಮೇಲೆ ದಾಳಿನಡೆಸಿ ಮಾಲೀಕರ ವರ್ತನೆ ವಿರುದ್ಧ ಹೋರಾಡಿದಕ್ಕಾಗಿ ಕಾರ್ಯಕರ್ತರ ಮೇಲೆ ದರೋಡೆ, ಡಕಾಯಿತಿ ಮೊಕದ್ದಮೆ ದಾಖಲಿಸಿರುತ್ತಾರೆ ಈ ಮೊಕ್ಕದಮೆಯನ್ನು ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದಲ್ಲಿ ವೇದಿಕೆಯು ರಾಜ್ಯಾದ್ಯಂತ ಇರುವ ಎಲ್ಲಾ ಬಾಟ ಷೋ ರೂಂಗಳ ಎದುರು ಪ್ರತಿಭಟನೆ ಮಡೆಸಬೇಕಾಗುತ್ತದೆ ಎಂದು ಕ.ರ.ವೇ ಜಿಲ್ಲಾಧ್ಯಕ್ಷ ಕಿರಣ್ ಗೌಡ ತೀಳಿಸಿದರು.
 ಇಂದು  ಸುದ್ಧುಗೋಷ್ಟಿಯಲ್ಲಿ ಮಾತನಾಡುz ಅವರು ಮೈಸೂರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಾಟ ಶೂ ಕಂಪನಿಯವರು ಮಳಿಗೆ ತೆರೆದಿದ್ದು, ಅಲ್ಲಿ ಶೂ ಚಪ್ಪಲಿಗಳನ್ನು ಮಾರಾಟ ಮಾಡುವಾಗ  ಕನ್ನಡ ಬಾವುಟದ ಬಣ್ಣ ಹೊಂದಿರುವ ಬಟ್ಟೆಗಳನ್ನು ಹಾಸಿ ಅಲಂಕರಿಸಿ ಅದರ ಮೇಲೆ ಶೂಸ್‍ಗಳು, ಚಪ್ಪಲಿಗಳನ್ನು ಪ್ರದರ್ಶನಕ್ಕೆ ಇರಿಸಿ ವ್ಯಾಪಾರ ಮಾಡುತ್ತಿದ್ದರು.
 ಆ ಸಂದರ್ಭದಲ್ಲಿ ಕನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೊಬ್ಬರು ಶೂ ತೆಗೆದುಕೊಳ್ಳಲು ತೆರಳಿದ್ದು, ಅಲ್ಲಿ ಕನ್ನಡ ಬಾವುಟ ಹಾಸಿ ಚಪ್ಪಲಿ ಇರಿಸಿರುವುದನ್ನು ಕಂಡು ಮನನೊಂದು ಇತರೆ ಕಾರ್ಯ ಕತ್ರಿಗೆ ವಿಷಯ ತಿಳಿಸÀಲಾಗಿ ಅವರುಗಳು ಬಂದು ಇದು ಕನ್ನಡ ದ್ವಜಕ್ಕೆ  ಮಾಡಿದ ಅವಮಾನ ಆದ್ದರಿಂದ ಇದನ್ನು ತೆಗೆಯಿರಿ ಎಮದು ಹೇಳಿದ್ದಕ್ಕೆ  ಮಾಲೀಕ ಉದ್ದಟತನದ ಮಾತಾಡಿದ ಇದರಿಂದ ಕೆರಳಿದ  ಕಾರ್ಯಕರ್ತರು ದಾಳಿಮಾಡಿದರು ಇಷ್ಟಕ್ಕೆ ಕಾರ್ಯಕರ್ತರ ವಿರುದ್ಧ ದರೋಡೆ, ಡಕಾಯಿತಿ  ಪ್ರಕರಣ ದಾಖಲಿಸಿ ದೂರು ನೀಡಿರುವುದು ಖಂಡನೀಯ, ಆದ್ದರಿಂದ ಈ ಮೊಕ್ಕದ್ದಮೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.
 ಪತ್ರಿಕಾ ಗೋಷ್ಠಿಯಲ್ಲಿ ಸತೀಶ್‍ಗೌಡ, ಮಧು, ಆನಂದ, ಪರಮೇಶ್, ಶ್ರೀಕಾಂತ್ ಉಪಸ್ಥಿತರಿದ್ದರು.
 ಮಗು ಅನುಮಾನಾಸ್ಪದ ಸಾವು, ಕೊಲೆ ಶಂಕೆ
ಮೈಸೂರು,ಅ.31- ಸುಮಾರು ಎರಡು ವರ್ಷದ ಹೆಣ್ಣು ಮಗುವೊಂದು ಅನುಮಾನಾಸ್ಪದ ರೀತಿಯಲ್ಲಿ  ಕೊಲೆಯಾಗಿದ್ದು, ಅರತ್ಯಾಚಾರ ಮತ್ತು ಕೊಲೆ ಶಂಕೆ ವ್ಯಕ್ತವಾಗಿದ್ದು ಮೇಟಗಳ್ಳಿ ಠಾನಾ ವ್ಯಾಪಿಯಲ್ಲಿ ಜರುಗಿದೆ.
  ಮೇಟಗಳ್ಳಿಯ ಅಂಬೇಡ್ಕರ್‍ನಗರ ವಾಸಿ ಲಕ್ಷ್ಮಣ್ ಎಮಬುವರ ಮಗು ಇದಾಗಿದ್ದು, ಲಕ್ಷ್ಮಣ್ ಹೆಂಡತಿಯಿಂದ ದೂರಾಗಿ ಮಗುವಿನಜೊತೆ ವಾಸವಾಗಿದ್ದ, ಕೆಲಸಕ್ಕೆ  ಹೋಗುವಾಗ ನಗರದ ಹೊರ ವಲಯದಲ್ಲಿರುವ ತನ್ನ ತಂಗಿ ಮನೆಯಲ್ಲಿ ಮಗುವನ್ನು ಬಿಟ್ಟು ಹೋಗುತ್ತಿದ್ದ, ತಂಗಿ ಮುಸ್ಲೀಂ ವರ್ಗಕ್ಕೆ ಸೇರಿz ಸದ್ದಾಂ ಎಂಬುವವರನ್ನು ಮದುವೆಯಾಗಿ ಆತನೊಮದಿಗೆ ವಾಸವಾಗಿದ್ದಳು, ಸದ್ದಾಂ ಚಿಂದಿಆಯುವ ಕೆಲಸ ಮಾಡಿಕೊಂಡಿದ್ದ,  ನಿನ್ನೆ ದಿನ ಇದ್ದಕಿದ್ದಂತೆ ಮಗು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ, ಸದ್ದಾಂ ಈ ವಿಷಯವನ್ನು ತನ್ನೆ ಹೆಂಡತಿ ಹಾಗೂ  ಲಕ್ಷ್ಮಣ್‍ಗೆ  ತಿಳಿಸಿ ಮಗುವನ್ನು ತಂದು ಅಂತ್ಯಸಂಸ್ಕಾರ ಮಾಡಲು ತಯಾರಿ ನಡೆಸುವಾಗ ಮಗುವಿನ ಮೈಮೇಲೆ ಗಾಯದ ಗುರುತುಗಳು ಇರುವುದನ್ನು  ಗಮನಿಸಿದ ಸಾರ್ವಜನಿಕರು ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿ ಕೂಲಂಕುಶವಾಗಿ ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿದರು.  ಪೊಲೀಸರು ಬಂದು ಪರಿಶೀಲಿ ಕೊಲೆಪ್ರಕರಣ ದಾಖಲಿಸಿಕೊಂಡು  ಶವವನ್ನು ಪರೀಕ್ಷೆಗೆ  ಕಳುಹಿಸಿದ್ದಾರೆ.  ಶವಪರೀಕ್ಷೆಯ ವರಧಿ ಬಂದನಂತರವೇ ನಿಜಾಂಶ ತಿಳಿಯಲಿದೆ.
ಒಂದು ಮೂಲದ ಪ್ರಕಾರ ಸದ್ದಾಂ ಮಗುವಿನಮೇಲೆ  ಅತ್ತಯಾರವೆಸಗಿ ಹತ್ಯೆಮಾಡಿದ್ದಾನೆ ಎಂದು ಹೇಳಲಾಗಿದೆ.

Friday, 30 October 2015


  ಕನ್ನಡ ರಾಜ್ಯೋತ್ಸವ ನಿತ್ಯ ಆಚರಣೆಯಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್ 30. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ರಾಷ್ಟ್ರಕವಿ ಕುವೆಂಪು ಅವರು ತಿಳಿಸಿರುವಂತೆ ಪ್ರತಿ ನಿತ್ಯ ಕರ್ನಾಟಕ ರಾಜ್ಯದಲ್ಲಿ ಕನ್ನಡ ಹಬ್ಬ ನಡೆಯಲಿ ಇದಕ್ಕೆ ಸರ್ಕಾರದ ಯಾವುದೇ ಅಡ್ಡಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
  ಇಂದು ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಾಗ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಕ್ರಮದ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದರು.
  ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ವಿಶೇಷ ಆಸಕ್ತಿಯ ಮೇರೆಗೆ 15 ಮೇ 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ್ನು ಪ್ರಾರಂಭಿಸಲಾಯಿತು. 6 ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಈ ಪರಿಷತ್ತಿಗೆ 24 ಜನ ಅಧ್ಯಕ್ಷರು ಸೇವೆ ಸಲ್ಲಿಸಿ ಅವರ ಹೊಸ ಆಲೋಚನೆ ಹಾಗೂ ಶ್ರಮದಿಂದ ಪರಿಷತ್ತನ್ನು ಬೆಳೆಸಿದ್ದಾರೆ ಎಂದರು
  ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಗೋಷ್ಠಿಗಳಿಗೆ ತಮ್ಮ ಕೆಲಸವನ್ನು ಸೀಮಿತಗೊಳಿಸದೆ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೂ ಶ್ರಮಿಸಬೇಕು. ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಆಚರಣೆಗಾಗಿ ಆಯಾವ್ಯಯದಲ್ಲಿ ಅನುದಾನ ಘೋಷಿಸಲಾಗಿದೆ ಎಂದರು.
  ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಕನ್ನಡ ಮಾತನಾಡುವವರನ್ನು ಒಟ್ಟಾಗಿ ಸೇರಿಸಲು ಕರ್ನಾಟಕ ಏಕೀಕರಣ ಚಳುವಳಿ ನಡೆಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೊದಲು ಕನ್ನಡ ಕಾವಲು ಸಮಿತಿ ಕಾರ್ಯನಿರ್ವಹಿಸುತ್ತಿತ್ತು. ಆ ಸಂದರ್ಭದಲ್ಲಿ ಮಾತೃ ಭಾಷೆ ಹಾಗೂ ರಾಜ್ಯ ಭಾಷೆಯಾಗಿರುವ ಕನ್ನಡ ಭಾಷೆಗೆ ಕಾವಲಿನ ಅವಶ್ಯಕತೆ ಇದೆಯೇ ಎನ್ನಿಸುತ್ತಿತ್ತು. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ವಿಕಾಸಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅವಶ್ಯಕತೆ ಇದೆ ಎಂದ ಮುಖ್ಯಮಂತ್ರಿಗಳು ಪ್ರತಿಯೊಬ್ಬರು ಕನ್ನಡ ನಾಡು, ನುಡಿ, ಸಂಸ್ಕøತಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು ಸದಾ ಸಿದ್ಧರಿರಬೇಕು ಎಂದರು.
  ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವವರನ್ನು ಸಮಾಜ ಕೂಡ ಖಂಡಿಸುತ್ತದೆ. ಕಲ್ಬುರ್ಗಿ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತ ಹಚ್ಚಲು ಸರ್ಕಾರ ಕಾರ್ಯನಿರತವಾಗಿದೆ. ಸಾಹಿತಿಗಳಿಗೆ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ಹಿಂದಿರುಗಿಸಬಾರದು ಎಂದರು.
ಸಮಾಜದ ಪ್ರಗತಿಗೆ ಮಾರಕವಾಗಿರುವ ಮೂಡನಂಬಿಕೆಗಳ ಆಚರಣೆಗಳನ್ನು ನಿಷೇಧಿಸಲು ಸರ್ಕಾರ ಮೂಡನಂಬಿಕೆ ವಿರೋಧ ಕಾಯ್ದೆ ಜಾರಿಗೆ ತರಲು ಚಿಂತಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿದೆ ಎಂದರು.
 ಇದೇ ಸಂದರ್ಭದಲ್ಲಿ ಡಾ|| ದೇ.ಜವರೇಗೌಡ, ಡಾ|| ಸಿ.ಪಿ.ಕೃಷ್ಣಕುಮಾರ್, ರಾಜಶೇಖರ್ ಕೋಟಿ, ಕೃಷ್ಣ, ಕೆ.ಸಿ.ಶಿವಪ್ಪ, ಡಾ ಲತಾ ರಾಜಶೇಕರ್, ಡಾ|| ಮಂಜುಳಾ ಮಾನಸ,  ಜಿ.ಟಿ.ದೇವೇಗೌಡ ಹಾಗೂ ಇನ್ನಿತರ ಗಣ್ಯರಿಗೆ ಶತಮಾನೋತ್ಸವ ಗೌರವ ಸಲ್ಲಿಸಲಾಯಿತು.
 ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ ಜಿ.ಎಸ್.ಸಿದ್ದಲಿಂಗಯ್ಯ,  ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಶಾಸಕ ವಾಸು, ಸೋಮಶೇಖರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ ಪುಷ್ಪ ಅಮರನಾಥ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.



ಕಲಾಕೃತಿ ಆಹ್ವಾನ
ಮೈಸೂರು, ಅಕ್ಟೋಬರ್ 30. ದಸರಾ ವಸ್ತು ಪ್ರದರ್ಶನ-2015 ರ ಲಲಿತಕಲೆ ಮತ್ತು ಕರಕುಶಲ ಕಲಾ ವಿಭಾಗವು  ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕಲಾಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ಕನ್ನಡ ಕಾರಂಜಿ ಕಟ್ಟಡದಲ್ಲಿರುವ ಲಲಿತಕಲಾ ವಿಭಾಗದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ಕಲಾಕೃತಿಗಳನ್ನು ದಿನಾಂಕ 04.11.2015 ರ ಒಳಗಾಗಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ರ ವರೆಗೆ ನೀಡಬಹುದು ಎಂದು ಲಲಿತ ಕಲೆ ಮತ್ತು ಕರಕುಶಲ ವಿಭಾಗದ ಸದಸ್ಯ ಕಾರ್ಯದರ್ಶಿ ಶಿವಕುಮಾರ್ ಅವರು ತಿಳಿಸಿದ್ದಾರೆ.
ಮುದ್ರ ಯೋಜನೆಯಡಿ ಸಾಲ ಸೌಲಭ್ಯ
ಮೈಸೂರು, ಅಕ್ಟೋಬರ್ 30. ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಐಟಿಐ ಕೌಶಲ್ಯ ತರಬೇತಿ ಪಡೆಸು ಸ್ವಂತ ಉದ್ಯಮ ಪ್ರಾರಂಭಿಸಲು ಹಾಗೂ ಈಗಾಗಲೇ ಇರುವ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಈ ಸೌಲಭ್ಯ ಎಲ್ಲಾ ಬ್ಯಾಂಕುಗಳಲ್ಲೂ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗದು ಬಹುಮಾನ: ಕ್ರೀಡಾ ಸಂಚಲಕರನ್ನು ಸಂಪರ್ಕಿಸಿ
ಮೈಸೂರು, ಅಕ್ಟೋಬರ್ 30 (ಕರ್ನಾಟಕ ವಾರ್ತೆ):- ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಿನಾಂಕ 19-10-2015 ರಂದು ನಡೆದ 2015ನೇ ಜಿಲ್ಲಾ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 200-00, ದ್ವಿತೀಯ ಸ್ಥಾನ ಪಡೆದವರಿಗೆ 150-00 ಮತ್ತು ತೃತೀಯ ಸ್ಥಾನ ಪಡೆದವರಿಗೆ 100-00 ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 200-00 ದ್ವಿತೀಯ ಸ್ಥಾನ ಪಡೆದವರಿಗೆ 150-00 ಗಳ ನಗದು ಬಹುಮಾನ ನೀಡಲಾಗುವುದು.
  ವಿಜೇತ ಕ್ರೀಡಾಪಟುಗಳು ಕ್ರೀಡಾ ವಿಭಾಗದ ಸಂಚಾಲಕರನ್ನು ಸಂಪರ್ಕಿಸಿ ನಗದು ಬಹುಮಾನ ಪಡೆದುಕೊಳ್ಳುವುದ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಯನ್ನು ಸಂಪರ್ಕಿಸುವುದು.
ಟಿಪ್ಪು ಸುಲ್ತಾನ್ ಜನ್ಮದಿನ ಅಚರಣೆ: ಅಕ್ಟೋಬರ್ 31 ರಂದು ಸಭೆ
ಮೈಸೂರು, ಅಕ್ಟೋಬರ್ 30. ಮೈಸೂರು ಹುಲಿ ಹಜûರತ್ ಟಿಪ್ಪು ಸುಲ್ತಾನ್ ಅವರ ಜನ್ಮದಿನಾಚರಣೆ ಅಚರಿಸುವ ಸಂಬಂಧ ಅಕೋಟ್ಬರ್ 31 ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


ಹುಲಿವಾನ-ಸತ್ಯ ಶೋಧನೆ ವರದಿ

ಜನಪರ ಕ್ರಿಯಾ ವೇದಿಕೆಯು ಆಯೋಜಿಸಿದ್ದ ಹುಲಿವಾನ ಗ್ರಾಮದಲ್ಲಿ ನಡೆದ ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ಜರುಗಿದ ಜಾತಿ ದೌರ್ಜನ್ಯಗಳ ಕುರಿತು
ಸತ್ಯಶೋಧನಾ ತಂಡದ ವರದಿ.

ಪ್ರೀತಿಯ ಬಂದುಗಳೇ,

ಮೈಸೂರು ದಸರಾ ಸಂಭ್ರಮದಲ್ಲಿರುವ ನಿಮ್ಮ ಮುಂದೆ ಮಂಡ್ಯ ಜಿಲ್ಲೆಯ ಕೆರೆಗೋಡು ಹೋಬಳಿಯ ಹುಲಿವಾನ ಗ್ರಾಮದ ದಲಿತರ ಮೇಲಿನ ಜಾತಿ ದೌರ್ಜನ್ಯಗಳನ್ನು ಮುಂದೆ ಇಡುವುದರಲ್ಲಿ ನಮಗೆ ಬೇಸರವೆನಿಸುತ್ತಿದೆ. ಮೈಸೂರು ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಎಂಬ ಹಿರಿಮೆಯನ್ನು ಹೊಂದಿದ ಜಿಲ್ಲೆ ಮೈಸೂರಿನ ಪಕ್ಕದ ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆ ಕೂಡ ಹಿಂದೆ ಮೈಸೂರಿನ ಅಂಗವಾಗಿದ್ದುದು ಒಂದು ವಿಶೇಷತೆಯಾಗಿದೆ. ಇಂತಹ ಸಾಂಸ್ಕøತಿಕ ಹಿರಿಮೆಯನ್ನು ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಜಾತಿ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿರುವುದು ನಾವು ಗೌರವದಿಂದ ಹೇಳಿಕೊಳ್ಳುವ ಸಾಂಸ್ಕøತಿಕ ಗುರುತನ್ನು ಪ್ರಶ್ನೆಗೆ ಒಳಪಡುತ್ತದೆ ಎಂಬುದರಲ್ಲಿ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಜಾತಿಗಳ ಸಮುದಾಯಗಳೊಂದಿಗೆ ಒಂದು ಸಂವಾದವನ್ನು ಮುಂದೆ ಇಡುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ಆದುದರಿಂದ ಜಾತಿ ದೌರ್ಜನ್ಯಗಳನ್ನು ಖಂಡಿಸುವುದು, ತಪ್ಪು ಮಾಡಿದವರನ್ನು ಆರೋಪಿಸುವುದು ಮಾತ್ರ ನಮ್ಮ ಕೆಲಸವಾಗಿರಬಾರದು ಬದಲಿಗೆ ಪ್ರೀತಿ ಮತ್ತು ಸಮಾನತೆ ನೆಲೆಯೂರುವ ಒಂದು ಸುವರ್ಣ ಕರ್ನಾಟಕ ಕಟ್ಟುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ಬದುಕಿನ ಪ್ರಮುಖ ಕರ್ತವ್ಯವಾಗಿದೆ. ಇಂತಹ ತಿಳುವಳಿಕೆಯೊಂದಿಗೆ ಈ ಸಮಸ್ಯೆಯನ್ನು ನಾವು ನೋಡಬೇಕು ಎಂಬ ಬಯಕೆಯೊಂದಿಗೆ ಅಭಿಪ್ರಾಯಗಳನ್ನು ಮುಂದೆ ಇಡುತ್ತೇವೆ.

ಘಟನೆಯ ಹಿನ್ನೆಲೆ
ಹುಲಿವಾನ ಗ್ರಾಮದ ದಲಿತ ಯುವಕನಾದ ಸಂತೋಷ ಅದೇ ಗ್ರಾಮಕ್ಕೆ ಸೇರಿದ ಸುಮಾ (ಲಿಂಗಾಯಿತ ಜಾತಿ) ಎಂಬ ಯುವತಿಯೊಂದಿಗೆ ಮಂಡ್ಯ ನಗರದಲ್ಲಿ ಮಾತನಾಡಿದ್ದನ್ನು ನೋಡಿದವರು ಸುಮಾಳ ಪೋಷಕರಿಗೆ ತಿಳಿಸಿರುತ್ತಾರೆ.
ಯುವತಿಯ ಕುಟುಂಬದವರು ಪೊಲೀಸ್ ಇಲಾಖೆಗೆ ವಿಷಯ ತಿಳಿಸಿರುತ್ತಾರೆ. ಪೊಲೀಸರು ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಮತ್ತು ಮದುವೆಯಾಗುವುದಾಗಿಯೂ ಹೇಳಿರುತ್ತಾರೆ. ಇಬ್ಬರೂ ಮದುವೆಯ ವಯಸ್ಸಿನವರಾಗಿದ್ದ ಕಾರಣ, ಪೊಲೀಸರು ದಿನಾಂಕ: 01-09-2015ರಂದು ಎರಡೂ ಕುಟುಂಬದವರಿಗೂ ಸಮಾಧಾನ ಹೇಳಿ ಕಳುಹಿಸಿದರು. ಮರುದಿನ ಅಂದರೆ, 02-09-2015(ಈ ದಿನ ಅಖಿಲ ಭಾರತ ಕಾರ್ಮಿಕ ಮುಷ್ಕರ ಇತ್ತು) ರಂದು ಗ್ರಾಮದಲ್ಲಿ ಬಹು ಸಂಖ್ಯಾತರಾದ ಒಕ್ಕಲಿಗ ಸಮುದಾಯದವರು ಲಿಂಗಾಯಿತ ಸಮುದಾಯದೊಂದಿಗೆ ಸೇರಿಕೊಂಡು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ (8 ರಿಂದ 9 ಗಂಟೆಯ ತನಕ ಲೋಡ್ ಶೆಡ್ಡಿಂಗ್ ಕಾರಣ ವಿದ್ಯುತ್ ಇರುವುದಿಲ್ಲ) ಈ ಸಂದರ್ಭವನ್ನು ಬಳಸಿಕೊಂಡು ದಲಿತ ಕಾಲೋನಿಯೊಳಗೆ ನುಗ್ಗಿ ಸಂತೋಷ ಮತ್ತು ಅವನ ಸ್ನೇಹಿತ ದಿಲೀಪನ ಮನೆ ಮೇಲೆ ನಿರ್ದಾಕ್ಷಿಣ್ಯವಾಗಿ ದಾಳಿ ಮಾಡಿದ್ದಾರೆ. ಇಂತಹ ಯಾವುದಾದರೂ ಅನಾಹುತ ಸಂಭವಿಸಬಹುದೆನೋ ಎಂಬ ಭಯ ಮತ್ತು ನಿರೀಕ್ಷೆಯೊಂದಿಗೆ ದಲಿತರು ಕರೆಗೋಡು ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ಕೋರಿದ್ದರು. ದೂರು ಸ್ವೀಕರಿಸಿದ ಇಲಾಖೆಯವರು ಆರು ಜನ ಪೊಲೀಸರನ್ನು ಗ್ರಾಮದಲ್ಲಿ ರಕ್ಷಣೆಗೆ ನಿಯೋಜಿಸಿದರು. ಆದರೆ 60 ರಿಂದ 70 ಜನರ ಗುಂಪು ಪೊಲೀಸರನ್ನು ಮೀರಿ ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಅಲ್ಲಿದ್ದ ಪೊಲೀಸರು ಮೇಲಾಧಿಕಾರಿಗಳಿಗೆ ತಿಳಿಸಿದ್ದರಿಂದ ಕೂಡಲೇ ಹೆಚ್ಚಿನ ಪೊಲೀಸರು ಆಗಮಿಸಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯ ನಂತರ ದಲಿತರು ಈ ಘಟನೆಯನ್ನು ಕುರಿತು ಮತ್ತೊಂದು ದೂರು ದಾಖಲಿಸಿದರು.

ಎರಡನೆಯ ದಾಳಿ
ಹುಲಿವಾನ ಗ್ರಾಮದ ಮುಖ್ಯ ರಸ್ತೆಯ ಅಂಚಿನಲ್ಲೆಯಿರುವ ದಲಿತ ಕಾಲೋನಿಗೆ ಸಣ್ಣ ಮಟ್ಟಿಗಿನ ಭದ್ರತೆಯನ್ನು ಒದಗಿಸಲಾಗಿತ್ತು. ಮೊದಲನೇ ದಿನದ ಘಟನೆ ಕಾರಣ, ಸವರ್ಣಿಯ ಸಮೂದಾಯಕ್ಕೆ ಸೇರಿದವರ ಮೇಲೆ ಪೋಲಿಸ್ ದೂರು ದಾಖಲಾಗುತ್ತಿದ್ದಂತೆ ಊರಿನಲ್ಲಿ ದಲಿತರ ಮೇಲಿನ ಅಸಹನೆ ಹೆಚ್ಚಾಗಿತ್ತು.
ಅಂದು ಸೆ.3ರ ರಾತ್ರಿ 8 ಗಂಟೆ, ಲೋಡ್ ಷೆಡ್ಡಿಂಗ್ ಕಾರಣ ಈ ದಿನವೂ ಸಹ ಊರಿನಲ್ಲಿ ವಿದ್ಯುತ್ ಕಡಿತವಾಗಿದೆ. ದಲಿತ ಕಾಲೋನಿಯ ರಸ್ತೆಯಂಚಿನಲ್ಲಿ ಒಂದಷ್ಟು ಮಂದಿ ಸಣ್ಣ ಮಟ್ಟದ ಜಗಳವಾಡಲು ಶುರು ಮಾಡಿದ್ದಾರೆ. ಜಗಳ ನೋಡಿದ ಪೋಲಿಸರು ಲಾಠಿ ಬೀಸಿ ಅಲ್ಲಿದ್ದವರನ್ನು ಚದುರಿಸಲು ಮುಂದಾಗಿದ್ದಾರೆ.
ಆ ಪ್ಯೆಕಿ ಯುವಕನೊಬ್ಬ ತನ್ನ ಕಾಲು ಮುರಿಯಿತ್ತೆಂದು ಬೊಬ್ಬಿರಿದಿದ್ದಾನೆ. ಅಷ್ಟೋತ್ತಿಗಾಗಲೆ ದಲಿತ ಕಾಲೋನಿಯ ಬಳಿ ಗುಂಪುಗೂಡಿದ್ದ 300ಕ್ಕೂ ಹೆಚ್ಚು ಮಂದಿ ಸವರ್ಣಿಯರು ಬೆರಳೆಣಿಕೆಯಲ್ಲಿದ್ದ ಪೋಲಿಸರ ವಿರುದ್ದ ತಿರುಗಿ ಬಿದ್ದಿದ್ದಾರೆ.ದೊಡ್ಡ ಸಂಖ್ಯೆಯಲ್ಲಿದ್ದ ಗುಂಪನ್ನು ನಿಭಾಯಿಸಲಾಗದ ಪೋಲಿಸರು ರಕóಣೆಗಾಗಿ ದಲಿತ ಕಾಲೋನಿಯತ್ತ ಓಡಿ ಹೋಗಿದ್ದಾರೆ. ಇದರಿಂದ ಇನ್ನಷ್ಟು ಉನ್ಮತ್ತರಾದ ಸವರ್ಣಿಯರ ಗುಂಪು ಕಲ್ಲು ಬಡಿಗೆಗಳನ್ನು ದಲಿತರ ಮನೆಯ ಮೇಲೆ ತೂರುತ್ತ ಬಾಗಿಲು ಕಿಟಕಿಗಳನ್ನು ಧ್ವಂಸಗೊಳಿಸುತ್ತಾ, ಕೈಗೆ ಸಿಕ್ಕ ಆಂಬೇಡ್ಕರ್ ಧ್ವಜಫಲಕವನ್ನು ಮುರಿದು ಹಾಕಿದೆ. ಹುಲ್ಲಿನ ಮೆದೆಯೊಂದಕ್ಕೆ ಬೆಂಕಿ ಕೊಟ್ಟಿದೆ, ಈ ದಾಳಿಯಿಂದ ಡಿವೈಎಸ್‍ಪಿ ಒಳಗೊಂಡಂತೆ 15ಜನ ಪೊಲೀಸರಿಗೆ ಗಾಯಗಳಾಗಿವೆ. ಭಯಗ್ರಸ್ತ ದಲಿತರು ಕಬ್ಬಿನ ಗದ್ದೆಗಳತ್ತ ಓಡಿ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಪೋಲಿಸರ ಮೇಲೆ ಹಲ್ಲೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಪೋಲಿಸರನ್ನು ಕ್ಷಣಾರ್ಧದಲ್ಲಿ ಜಿಲ್ಲಾಡಳಿತ ರವಾನೆ ಮಾಡಿದೆ. ಈ ಸಂದರ್ಭ ಗಲಭೆನಿರತರಾಗಿದ್ದ 67ಕ್ಕು ಹೆಚ್ಚು ಮಂದಿಯನ್ನು ಬಂಧಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ವಿಚಾರಣೆಯ ನಂತರ ಅಮಾಯಕರು ಎಂದು ಕಂಡುಬಂದ 35 ಮಂದಿಯನ್ನು ಪೋಲಿಸರು ಠಾಣೆಯಲ್ಲೆ ಬಿಡುಗಡೆಗೊಳಿಸಿದ್ದಾರೆ. ಇನ್ನುಳಿದಂತೆ ಗಲಭೆಯಲ್ಲಿ ಭಾಗಿಯೆಂದು ಕಂಡುಬಂದ 32 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಂಸ್ಕøತಿಕ ನಂಬಿಕೆಗಳು ಮತ್ತು ಆಚರಣೆಗಳು
ಸತ್ಯಶೋಧನಾ ತಂಡವು ಮೊದಲು ದೌರ್ಜನ್ಯಕ್ಕೀಡಾದ ದಲಿತರ ಮನೆಗಳಿಗೆ ಭೇಟಿ ನೀಡಿತು. ಒಂದು ಸುಂದರವಾದ ಮಹಡಿ ಮನೆಗೆ ಕರೆದುಕೊಂಡು ಹೋದರು. ಅ ಮನೆಯ ಕಾಂಪೌಂಡು ಗೋಡೆಯಲ್ಲಿ ಕಾಲಭೈರವೇಶ್ವರ ದೇವರ ರಕ್ಷಣೆ ಎಂದು ಬರೆಸಿದ್ದರು. ಈ ದೇವರು ಒಕ್ಕಲಿಗರ ದೇವರು ಅಲ್ಲವೆ ಎಂಬಯೋಚನೆ ಬಂದಿತು. ಆಗ ತಂಡದ ಸದಸ್ಯgರೇ ಹೇಳಿದರು ಈ ಮನೆಯ ಹುಡುಗನೆ ಸವರ್ಣೀಯ ಹುಡುಗಿಯನ್ನು ಪ್ರೀತಿಸಿರುವುದು ಎಂದು. ಆ ಮನೆ ಅಂತರ್ ಜಾತಿ ಮದುವೆಯಾದ ಸಂತೋಷರವರ ಮನೆ ಎಂದು ತಿಳಿಯಿತು, ಆ ಮನೆಯಲ್ಲಿ  ಅವರ ಅಣ್ಣ-ಅತ್ತಿಗೆ ಮತ್ತು ತಾಯಿ-ತಂದೆ ಇದ್ದರು ಈ ಕುಟುಂಬದವರು ಮೇಲೆ ವಿವರಿಸಿದ ಈ ಘಟನೆಯನ್ನು ಬಹಳ ನೋವಿನಿಂದ ಹೇಳಿಕೊಂಡರು. ಆ ಸಂದರ್ಭದಲ್ಲಿ ನೀವುಗಳು ಆದಿಚುಂಚನಗಿರಿ ಮಠದ ದೇವರಾದ ಕಾಲಭೈರವೇಶ್ವರ ದೇವರ ಪೂಜೆ ಮಾಡುತ್ತೀರಲ್ಲವೇ? ನಿಮಗೂ ಒಕ್ಕಲಿಗ ಸಮುದಾಯದವರಿಗೂ ಇರುವ ಸಂಬಂಧಗಳನ್ನು ತಿಳಿಸಿ ಎಂದು ಕೇಳಿದೆವು. ಅದಕ್ಕೆ ಅವರು ತಿಳಿಸಿದ ವಿವರಗಳನ್ನು ಹಾಗೆಯೇ ನಿಮ್ಮ ಮುಂದೆ ಇಡುತ್ತಿದ್ದೇವೆ.
ನಾವುಗಳು ಆದಿಚುಂಚನಗಿರಿ ಮಠದ ಒಕ್ಕಲು ಮನೆಯವರು ಕಾಲಭೈರವೇಶ್ವರನು ನಮ್ಮ ದೇವರು ಒಕ್ಕಲಿಗ ಸಮುದಾಯದವರಿಗೂ ಕಾಲಭೈರವೇಶ್ವರನೇ ದೇವರು. ಒಕ್ಕಲಿಗರು ಹೊಸ ಮನೆ ಕಟ್ಟಿದರೆ, ದೀಪಾವಳಿ ಮತ್ತು ಸಂಕ್ರಾಂತಿ ದಿನಗಳಲ್ಲಿ ನಾವುಗಳು (ದಲಿತರು) ನಮ್ಮ ಮನೆಯಲ್ಲಿ ಇರುವ ಕಾಲಭೈರವೇಶ್ವರ ದೇವರ ಮೂರ್ತಿಯನ್ನು ಒಕ್ಕಲಿಗರ ಮನೆಗೆ ಹೊತ್ತೊಯ್ಯುತ್ತಿದ್ದೆವು ಆ ಮೂರ್ತಿಯನ್ನು ಒಕ್ಕಲಿಗರು ತಮ್ಮ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಆ ಸಮಯದಲ್ಲಿ ದೇವರಿಗೆ ಇಡುವ ಎಡೆಯನ್ನು ನಮಗೆ ಕೊಡುತ್ತಾರೆ. ಈ ಸಂಪ್ರದಾಯ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದೆ ಎಂದರು ಕಾಲಭೈರವೇಶ್ವರನನ್ನು ಪೂಜಿಸುವ ಒಕ್ಕಲಿಗ ಕುಟುಂಬಗಳೊಂದಿಗೆ ಇಡೀ ದೇವರನ್ನು ಪೂಜಿಸುವ ದಲಿತ ಕುಟುಂಬಗಳಿಗೆ ಇರುವ ಸಂಬಂಧ ಹೀಗೆ ಮುಂದುವರಿಯುತ್ತಾ ಇರುವುದು ಆಶ್ಚರ್ಯವಾಗಿತ್ತು.
ಈ ಘಟನೆಯಲ್ಲಿ ದೌರ್ಜನ್ಯಕ್ಕೊಳಗಾದ ಮತ್ತೊಂದು ದಲಿತರ ಮನೆಗೆ ಹೋದೆವು. ಆ ಮನೆಯ ಕಿಟಕಿ ಬಾಗಿಲುಗಳನ್ನು ನಾಶಪಡಿಸಿದ್ದರು. ದಾಳಿಕೋರರು ಗಾಜಿನ ಕಿಟಕಿಗಳನ್ನು ಒಡೆಯುವಾಗ ಮನೆಯ ಒಳಗೆ ಇದ್ದ ಶೃತಿ ಎಂಬ ವಿದ್ಯಾರ್ಥಿನಿಗೆ ಗಾಯಗಳಾಗಿದ್ದವು. ಆ ಮನೆಗೆ ಬಂದ ದಾಳಿಕೋರರ ಗುಂಪು ಅಮಾನುಷ ರೀತಿಯಲ್ಲಿ ದಾಳಿ ನಡೆಸುತ್ತಿರುವುದನ್ನು ಕಂಡು ಆ ಮನೆಯವರು ಜೋರಾಗಿ ಕಿರುಚಾಡಿದರು. ಈ ಶಬ್ದವನ್ನು ಕೇಳಿ ಸ್ಥಳಕ್ಕೆ ಧಾವಿಸಿದ ಪೊಲೀಸರು ದಾಳಿಕೋರರಿಂದ ಆ ಮನೆಯವರನ್ನು ರಕ್ಷಿಸಿ ಗಾಯಗೊಂಡಿದ್ದ ಶೃತಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ಶೃತಿ ಕಂಪ್ಯೂಟರ್ ಸೈನ್ಸ್ ಡಿಗ್ರಿ ಓದುತ್ತಿದ್ದಳು. ಶೃತಿಯವರ ತಂಗಿ ಶ್ವೇತಾ ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು. ತಂದೆ ಶಿವಲಿಂಗಯ್ಯ, ತಾಯಿ ಮಂಗಳಮ್ಮ ಈ ಕುಟುಂಬಕ್ಕೆ ಒಂದು ಎಕರೆ ಜಮೀನಿದೆ ಈ ಜಮೀನು ಕುಲವಾಡಿಕೆ ಕೆಲಸ ಮಾಡುತ್ತಾ ಬಂದಿದ್ದರಿಂದ ಸರ್ಕಾರ 50 ವರ್ಷಗಳ ಹಿಂದೆ ನೀಡಿತ್ತು.
ಈ ಕುಟುಂಬದ ದೇವರು ತಿರುಪತಿ ವೆಂಕಟಸ್ವಾಮಿ. ಈ ಕುಟುಂಬದವರನ್ನು ತಿರುಪತಿ ಒಕ್ಕಲಿನವರು ಎಂದು ಕರೆಯುತ್ತಾರೆ. ಒಕ್ಕಲಿಗರಲ್ಲಿ ತಿರುಪತಿ ವೆಂಕಟೇಶನನ್ನು ಪೂಜಿಸುವವರಿಗೂ ಈ ಕುಟುಂಬದವರಿಗೂ ದೈವ ನಂಬಿಕೆಯಲ್ಲಿ ತುಂಬಾ ಹತ್ತಿರದ ಸಂಬಂಧಗಳಿವೆ. ಕಾಲಭೈರವೇಶ್ವರನನ್ನು ಪೂಜಿಸುವ ದಲಿತ ಕುಟುಂಬ ಹಾಗೆಯೇ ತಿರುಪತಿ ಒಕ್ಕಲು ಎಂದು ಕರೆಯಲಾಗುವ ಈ ದಲಿತ ಕುಟುಂಬದವರು ಒಕ್ಕಲಿಗರಲ್ಲಿ ವೆಂಕಟೇಶನನ್ನು ಪೂಜಿಸುವವರ ಮನೆಯ ಗೃಹ ಪ್ರವೇಶ ದೀಪಾವಳಿ, ಸಂಕ್ರಾಂತಿ ಮತ್ತು ಹರಕೆಯ ದಿನಗಳಲ್ಲಿ ಈ ದಲಿತರ ಮನೆಯಲ್ಲಿರುವ ತಿರುಪತಿ ದೇವರ ಮೂರ್ತಿಯನ್ನು ಶಂಖ ಮತ್ತು ಜಾಗಟೆಗಳೊಂದಿಗೆ ಒಕ್ಕಲಿಗರ ಮನೆಗೆ ಹೊತ್ತೊಯ್ದು ಪೂಜಿಸುತ್ತಾರೆ ಮತ್ತು ದೇವರ ಎಡೆಯನ್ನು ದಲಿತರಿಗೆ ಕೊಡುತ್ತಾರೆ. ಈ ದೇವರ ಮೂರ್ತಿಗಳನ್ನು ದಲಿತರು ತುಂಬಾ ಭಕ್ತಿಯಿಂದ ಪೋಷಿಸಿಕೊಂಡು ಬರುತ್ತಾರೆ.
ಈ ದಲಿತ ಕುಟುಂಬಗಳಿಗೂ ಒಕ್ಕಲಿಗ ಕುಟುಂಬಗಳಿಗೂ ಭಕ್ತಿ ರೂಪದಲ್ಲಿ ಒಂದು ರೀತಿಯ ಸಮಾನತೆ ಇರುವುದು ಕಂಡುಬರುತ್ತದೆ. ಶೈವ ಮತ್ತು ವೈಷ್ಣವ ತತ್ವಗಳು ಬೆಳೆದ ಕಾಲಘಟ್ಟಗಳಲ್ಲಿ ಇಂತಹ ಸಮಾನತೆಯ ಸಂಪ್ರದಾಯ ಸ್ವೀಕರಿಸಿರಬಹುದು. ಅಥವಾ ಸಮುದಾಯದಲ್ಲಿ ಜಾತಿಗಳನ್ನು ನಿರಾಕರಿಸಿ ಬೆಳೆದ ಬೌದ್ಧ ಧರ್ಮದಿಂದ ಈ ಮೌಲ್ಯಗಳು ಸ್ವೀಕರಿಸಿರಲೂ ಬಹುದು. ಆಶ್ಚರ್ಯವನ್ನು ಮೂಡಿಸುವ ದೈವಭಕ್ತಿಯಲ್ಲಿ ಈ ರೀತಿಯ ಸಮಾನತೆಯ ಮೌಲ್ಯಗಳಿರುವ ಬಗ್ಗೆ ವಿಶ್ಲೇಷಣಕಾರರು ಗಮನಹರಿಸಿದರೆ ಶ್ರೇಷ್ಠತೆ ಹೊಂದಿರುವ ಪರಂಪರೆಯನ್ನು ನಾವು ಅರ್ಥಮಾಡಿ ಕೊಳ್ಳಬಹುದು. ಈ ರೀತಿ ವರ್ಷದ ಕೆಲವು ದಿನಗಳಲ್ಲಿ ದೈವಭಕ್ತಿಯ ಆಧಾರದಲ್ಲಿ ಇರುವ ಸಮಾನತೆಯ ಸಂಬಂಧಗಳು ಈ ಸಮುದಾಯಗಳನ್ನು ಮಾನಸಿಕವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹ.
ವರ್ಷದಲ್ಲಿ ಕೆಲವೇ ದಿನಗಳಾದರೂ ದಲಿತರ ಮನೆಗಳಲ್ಲಿರುವ ದೇವರ ಮೂರ್ತಿಗಳನ್ನು ಒಕ್ಕಲಿಗರು ತಮ್ಮ ಮನೆಗಳಲ್ಲಿ ಸ್ವೀಕರಿಸಿ ಪೂಜಿಸುವುದರಿಂದ ಸಮಾನತೆಯ ಭಾವನೆಗಳು ಇರುತ್ತವೆ. ಅದೇ ಸಂದರ್ಭದಲ್ಲಿ ಲಿಂಗಾಯಿತ ಯುವತಿಯನ್ನು ದಲಿತ ಯುವಕ ಪ್ರೀತಿಸಿದ ಎಂಬ ಕಾರಣವನ್ನು ಮುಂದಿಟ್ಟು ದಲಿತರ ಮನೆಗಳ ಮೇಲೆ ದಾಳಿಮಾಡಿ ಆಸ್ತಿ-ಪಾಸ್ತಿಗೆ ಬೆಂಕಿ ಇಟ್ಟು ನಾಶಮಾಡುವ ಆಚರಣೆಯೂ ಇರುತ್ತದೆ. ಈ ಎರಡೂ ಮೌಲ್ಯಗಳಲ್ಲಿ ಈ ಸಮುದಾಯಗಳು ಯಾವ ಮೌಲ್ಯಗಳನ್ನು ಸ್ವೀಕರಿಸಬೇಕು ಮತ್ತು ಯಾವ ಮೌಲ್ಯಗಳನ್ನು ತಿರಸ್ಕರಿಸಬೇಕು ಎಂದು ಕಾಲವು ನಮ್ಮನ್ನು ಕೇಳುತ್ತದೆ. ಮಾನವೀಯತೆಯನ್ನು ದೇಶದ ಸಮುದಾಯದ ಅಭಿವೃದ್ಧಿಯನ್ನು ದೇಶಭಕ್ತಿಯನ್ನು ಪ್ರೀತಿಸುವ ಪ್ರತಿಯೊಬ್ಬ ಮುಖಂಡರು ಮತ್ತು ನಾಗರೀಕರು ಜನರ ಮಧ್ಯದಲ್ಲಿ ಪ್ರೀತಿಯನ್ನು ಬೆಳೆಸುವ ಸಮಾನತೆಯನ್ನೇ ಬಯಸುತ್ತಾರೆ ಎಂದು ದೃಡವಾಗಿ ನಂಬುತ್ತೇವೆ. ಯಾವ ಸಮುದಾಯವು ದ್ವೇಷ ಮತ್ತು ವೈರತ್ವವನ್ನು ಬೆಂಬಲಿಸುತ್ತದೆಯೋ ಅ ಸಮುದಾಯವು ಉನ್ನತವಾದ ಸಂಸ್ಕøತಿ ಚರಿತ್ರೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಸಮುದಾಯ ಜಾತಿಗಳ ನಡುವೆ ಪ್ರೀತಿ ಮತ್ತು ಮಾನವೀಯತೆಯನ್ನು ಬೆಳೆಸುವ ಪರಂಪರೆಯನ್ನು ನಾವು ಕಾಪಾಡಬೇಕಾಗಿರುವುದು ಅತ್ಯಗತ್ಯವಾಗಿದೆ.
ನಮ್ಮ ಸಮುದಾಯದಲ್ಲಿ ಬೇರೂರಿರುವ ಅಸ್ಪøಶ್ಯತೆಯ ಆಧಾರದಲ್ಲಿನ ಜಾತೀಯತೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಾತಿ ರಹಿತ ಸಮಾಜವನ್ನು ಕಟ್ಟಬೇಕು. ಈ ಉನ್ನತ ಅಂಶಗಳನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ಮುಂತಾದವರು ಸಾಮಾಜಿಕ ಚಿಂತಕರೆಲ್ಲರೂ ಹೇಳಿರುವುದನ್ನು ನಾವು ಯೋಚಿಸಬೇಕು. ಜೊತೆಯಲ್ಲಿ ಇರುವ ಮನುಷ್ಯರನ್ನು ಸಮಾನತೆಯಿಂದ ಗೌರವಿಸದೇ ಇರುವ ಸಮಾಜ ಸ್ವತಂತ್ರ್ಯ ಸಮಾಜವಾಗಿ ಇರುವುದಿಲ್ಲ ಎಂದು ಈ ಮಹನೀಯರು ಮತ್ತೆ ಮತ್ತೆ ಒತ್ತಿ ಹೇಳಿದ್ದಾರೆ.
ಗಲಭೆಗೆ ಕಾರಣಗಳು
1. ಊರಿನಲ್ಲಿ ದಲಿತರು ಶಿಕ್ಷಣದ ಕಾರಣಕ್ಕೆ ಸಾಕಷ್ಟು ಸರ್ಕಾರಿ ಹಾಗು ಖಾಸಗಿ ಉದ್ಯೋಗಗಳನ್ನು ಪಡೆಯುವಲ್ಲಿ ಸಫಲರಾಗಿರುವುದು ಕೆಲವು ಸವರ್ಣಿಯ ಕಿಡಿಗೇಡಿಗಳ ಅಸಹನೆಗೆ ಕಾರಣವಾಗಿದೆ.
2. ಈ ಹಿಂದೆಯು ಸಹ ಗ್ರಾಮದಲ್ಲಿ 2 ಅಂತರ್‍ಜಾತಿ ವಿವಾಹಗಳಾಗಿದ್ದು ಯುವತಿಯರು ಹೊರ ಜಿಲ್ಲೆಯವರಾಗಿದ್ದು ಲಿಂಗಾಯಿತ ಕೋಮಿಗೆ ಸೇರಿದ್ದು ಯುವಕರು ದಲಿತ ಕೋಮಿಗೆ ಸೇರಿದ್ದು, ಒಂದೇ ಗ್ರಾಮದ ಯುವಕ ಯುವತಿಯರ ಅಂತರ್ ಜಾತಿ ಪ್ರೇಮ ವಿವಾಹ ಇದೆ ಮೊದಲಾಗಿದೆ.
3. ಗ್ರಾಮದಲ್ಲಿ ಈಗಲೂ ಅಸ್ಪøಶ್ಯತೆ ಅಘೋಷಿತವಾಗಿಯೆ ಮುಂದುವರಿದಿದೆ ದೇವಾಲಯ ಪ್ರವೇಶ, ಕ್ಷೌರ ನಿರಾಕರಣೆ ಸಾಮಾನ್ಯ ಸಂಗತಿಯಾಗಿದೆ. ಇವುಗಳ ಮೇಲಿನ ತಮ್ಮ ಹಕ್ಕು ಕೇಳುತ್ತಿರುವ ದಲಿತರ ನಡೆ ಕೆಲವು ಸವರ್ಣಿಯ ಕಿಡಿಗೇಡಿಗಳನ್ನು ಕೆರಳಿಸಿದೆ.
4. ಅಂತರಜಾತಿ ವಿವಾಹದ ಸಂಧರ್ಭಗಳಲ್ಲಿ ಪೋಲಿಸರು ಇನ್ನಷ್ಟು ಸೂಕ್ಷತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು, ಮುನ್ನೆಚ್ಚೆರಿಕೆ ವಹಿಸಬೇಕಿತ್ತು
5. ಗ್ರಾ.ಪಂ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷದ ಆಭ್ಯರ್ಥಿಯನ್ನು ಬೆಂಬಲಿಸಲಿಲ್ಲ ಎಂಬ ಅಸಮಾಧಾನ ಯುವಕನ ಕುಟುಂಬದ ವಿರುದ್ದ ತಿರುಗಿ ಬೀಳಲು ಕಾರಣವಾಗಿತ್ತು.
6. ಸದರಿ ಹುಲಿವಾನದಲ್ಲಿ ಇನ್ನೂ 3-4 ದಲಿತ ಯುವಕರು ಸವರ್ಣಿಯ ಯುವತಿಯರನ್ನು ಪ್ರೀತಿಸುತ್ತಿದ್ದು ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾರೆ ಎಂಬುವ ಸುದ್ದಿಯನ್ನು ಕಿಡಿಗೇಡಿಗಳು ವ್ಯವಸ್ಥಿತವಾಗಿ ಹರಡಿದ್ದೂ ಸದರಿ ಘಟನೆಗೆ ಮುಖ್ಯವಾದ ಕಾರಣವಾಗಿರುತ್ತದೆ.

ದೌರ್ಜನ್ಯಕೋರರನ್ನು ಬಂದಿಸುವಲ್ಲಿ ಆದ ಅವಗಡ
1. ಗಲಭೆಗೆ ಕಾರಣರಾದವರನ್ನು ಪತ್ತೆಹಚ್ಚಿ ಬಂದಿಸುವ ಪ್ರಯತ್ನದಲ್ಲಿ ಪೋಲೀಸರಿಂದ ಸವರ್ಣಿಯ ಕೇರಿಗಳಲ್ಲಿ ಕೆಲ ಅಮಾಯಕರಿಗೂ ಪೆಟ್ಟು ಬಿದ್ದಿರುವುದು ಕಂಡಬಂದಿತು.
ಶಿಫಾರಸ್ಸುಗಳು
1. ಅಂತರಜಾತಿ ವಿವಾಹಗಳಾದ ಸಂಧರ್ಭದಲ್ಲಿ ಜಿಲ್ಲಾಡಳಿತ ,ಪೋಲಿಸ್ ಅತ್ಯಂತ ಸೂಕ್ಷತೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದು. ವಿವಾಹಿತರಿಗೆ ಅವರ ಅವಲಂಬಿತರಿಗೆ ಹಾಗೂ ಆಗತ್ಯವಿರುವವರಿಗೆ ಸೂಕ್ತ ಭದ್ರತೆ ಒದಗಿಸುವುದು.
2. ಜಾತಿ ಮತ್ತು ಕೋಮು ಗಲಭೆಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗುವ, ರಾಜಕೀಯ ಪಕ್ಷಗಳು, ಮುಖಂಡರುಗಳು, ಕಾರ್ಯಕರ್ತರುಗಳನ್ನು ಮುನ್ನೆಚ್ಚರಿಕೆಯಾಗಿ ಗುರುತಿಸಿ ಸೂಕ್ತ ತಿಳುವಳಿಕೆ ನೀಡುವುದು, ಈ ರೀತಿಯ ಕ್ರುತ್ಯಗಳಿಗೆ ಬೆಂಬಲಿಸಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗುವಿಕೆ.
3. ಸಂತ್ರಸ್ತ ಕುಟುಂಬಗಳಿಗೆ ಎಂ.ನರೇಗ ಯೋಜನೆಯಡಿ ಉದ್ಯೋಗವಕಾಶಗಳನ್ನು ಒದಗಿಸುವುದು.
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುವುದು. ಈ ಸಂಬಂಧ ಪ್ರಕರಣಗಳ ಕಾಲಮಿತಿಯೊಳಗೆ ವಿಲೇವಾರಿಗೆ ಪ್ರತ್ಯೇಕ ಶೀಘ್ರ ನ್ಯಾಯಾಲಯವನ್ನು ಜಾರಿಗೊಳಿಸುವುದು.
5. ಸಮಾಜ ಕಲ್ಯಾಣ ಇಲಾಖೆ ದಲಿತರ ಮೇಲಿನ ದೌರ್ಜನ್ಯಗಳ ಕಾನೂನು ತಿಳುವಳಿಕೆಯನ್ನು ನಿರಂತರವಾಗಿ, ದಲಿತರು, ದಲಿತರೇತರರ ಎಲ್ಲಾ ಸಮುದಾಯಗಳ ನಡುವೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೈಜವಾಗಿ ಜಾಗೃತಿ ಮೂಡಿಸುವುದು.
6. ಸರ್ಕಾರ ಅಂತರ್ಜಾತಿ, ಅಂತರ್‍ಧರ್ಮಿಯ, ಸರಳ ವಿವಾಹಗಳನ್ನು ಪ್ರೋತ್ಸಾಯಿಸುವುದು.

ಸತ್ಯ ಶೋಧನಾ ತಂಡದಲ್ಲಿ ಪೀಪಲ್ಸ್ ಫೋರಂ ಪಾರ್ ಸಿವಿಲ್ ಲಿಬರ್ಟಿಸ್‍ನ ಡಾ.ವಿ.ಎಲ್.ಲಕ್ಷ್ಮಿನಾರಾಯಣ್, ಪ್ರೋ.ಪಂಡಿತಾರಾದ್ಯರವರು ಮತ್ತು ರತಿರಾವ್, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್, ಪತ್ರಕರ್ತ ಎಂ.ಬಿ.ನಾಗಣ್ಣಗೌಡ, ಸಿಪಿಎಂನ ರಾಜ್ಯ ಕಾರ್ಯದರ್ಶಿ ಜಿ.ಎನ್.ನಾಗರಾಜು, ಜನವಾದಿ ಮಹಿಳಾ ಸಂಘಟನೆಯ ಸಿ.ಕುಮಾರಿ, ಡಾ.ಉಮಾಶಂಕರ್, ಸವಿತಾ ಸಮಾಜದ ಮುಖಂಡ ಅಂಜನಪ್ಪ, ಹಿಂದುಳಿದ ವರ್ಗಗಳ ವೇದಿಕೆಯ ಮೈಸೂರು ಶಿವರಾಂ, ಹಿಂದುಳಿದ ವರ್ಗಗಳ ವೇದಿಕೆಯ ಮುಖಂಡ ತಗ್ಗಳ್ಳಿ ಸಂದೇಶ್, ಪಿಎಫ್‍ಐನ ದಾದಪೀರ್, ಮಹಿಳಾ ಮುನ್ನಡೆಯ ಈಶ್ವರಿ, ಕಮಲ, ಕಾರ್ಮಿಕ ಮುಖಂಡ ವರದರಾಜೇಂದ್ರ, ಸಿಪಿಐನ ಮೈಸೂರು ಜವರಪ್ಪ, ಎಸ್.ಎಫ್.ಐ.ನ ರಾಜೇಂದ್ರಸಿಂಗ್ ಬಾಬು ಇತರರು ಇದ್ದರು.

Thursday, 29 October 2015

ಮುಖ್ಯ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
    ಮೈಸೂರು,ಅ.29.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 30 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಂದು ಬೆಳಿಗ್ಗೆ 10-05 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಕಲಾಮಂದಿರದಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿರುವ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು.  ಮಧ್ಯಾಹ್ನ 12 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರೆಳಲಿದ್ದಾರೆ.
ಸಮಸ್ಯೆಗಳಿಗೆ ಕನ್ನಡಿ ಹಿಡಿದ ಜನಸಂದರ್ಶನ  ಸಭೆ


 ಮೈಸೂರು,ಅ.29.ಸರಿಯಾದ ಸಮಯಕ್ಕೆ ಬಸ್ ಬುರತ್ತಿದೆಯೇ? ಪಡಿತರ ಆಹಾರ ಧಾನ್ಯ ನಿಗಧಿತ ಪ್ರಮಾಣದಲ್ಲಿ ದೊರೆಯುತ್ತಿದೆಯೆ?, ಆಸ್ಪತ್ರೆಗೆ ವೈದ್ಯರು ಬರುತ್ತಿದ್ದಾರಾ, ಔಷಧಿಗಳು ಸಿಗುತ್ತಿದೆಯೇ?, ಕುಡಿಯುವ ನೀರು ಸಮಸ್ಯೆ ಇದೆಯೇ?, ಬಸ್‍ಗಳ ವ್ಯವಸ್ಥೆ ಸಾಕಾಷ್ಟುಯಿದೆಯೇ?, ಜಮೀನಿನ ಖಾತೆ ಮಾಡಿ ಕೊಡುತ್ತಿದ್ದಾರಾ .... ಇಂತಹ ಹಲವು ಪ್ರಶ್ನೆಗಳನ್ನು ಸಾರ್ವಜನಿಕರ ಮುಂದೆ ಇಟ್ಟವರು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾದ ರಾಮಯ್ಯ ಅವರು.
    ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮಪಂಚಾಯತ್‍ವಾರು ಸರಣಿ ಜನಸಂದರ್ಶನ ಸಭೆ ನಡೆಸುತ್ತಿರುವ ಜಂಟಿ ಕಾರ್ಯದರ್ಶಿ ರಾಮಯ್ಯ ಅವರು ಇಂದು ನಂಜನಗೂಡು ತಾಲ್ಲೂಕು ಕೊಣನೂರು ಹಾಗೂ ದಾಸನೂರು ಗ್ರಾಮಪಂಚಾಯತ್ ಕೇಂದ್ರಗಳಲ್ಲಿ ಜನಸಂಪರ್ಕ ಸಭೆ ನಡೆಸಿದರು.
    ಸಭೆಯ ಆರಂಭಕ್ಕೆ ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕರಿಗೆ ಪರಿಚಯಸಿದ ಅವರು ಅಧಿಕಾರಿಗಳ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ನೀಡಲು ತಿಳಿಸಿದರಲ್ಲದೆ ಆಯಾಯ ಇಲಾಖೆಗಳಿಂದ ನಿರ್ವಹಿಸುವ ಕೆಲಸದ ಸ್ವರೂಪವನ್ನು ಪರಿಚಯಿಸಿದರು ಹಾಗೂ ಸಂಬಂಧಿ ಕೆಲಸಕ್ಕೆ ಆಯಾಯ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ತಿಳಿಸಿದರು.
     ಕೊಣನೂರಿನಲ್ಲಿ ಪಡಿತರ ವಿತರಣೆಗೆ ತಿಂಗಳಲ್ಲಿ 3 ದಿನ ಮಾತ್ರ ಬರುತ್ತಾರೆ. 8 ರೂ. ವಾಹನ ಬಾಡಿಗೆಯನ್ನು ಪಡಿತರದಾರರಿಂದಲೇ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದಾಗ ಈ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸುವುದಾಗಿ ತಹಶೀಲ್ದಾರರು ತಿಳಿಸಿದರು. ಜಮೀನಿನ ಖಾತೆ ವರ್ಗಾವಣೆಯಲ್ಲಿ ತುಂಬ ಸಮಸ್ಯೆ ಉಂಟಾಗುತ್ತಿದ್ದು, ಗ್ರಾಮಲೆಕ್ಕಾಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲವೆಂಬ ದೂರು ವ್ಯಾಪಕವಾಗಿ ಕೇಳಿ ಬಂದಾಗ 45 ದಿನಗಳ ಒಳಗಾಗಿ ಈ ಸಮಸ್ಯೆ ಬಗೆಹರಿಸಲು ರಾಮಯ್ಯ ಸೂಚಿಸಿದರು.
    ಈ ಭಾಗದಲ್ಲಿ ವಿಶೇಷವಾಗಿ ಕಂದಾಯ ಅದಾಲತ್ ವ್ಯವಸ್ಥೆ ಮಾಡಿ ಖಾತಾ ಸಮಸ್ಯೆ ಬಗೆಹರಿಸುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಆಯುಕ್ತರು ತಿಳಿಸಿದರು.
     ಕೆರೆ ತುಂಬಿಸುವ ಯೋಜನೆಯಡಿ ಕೊಣನೂರು ಕೆರೆಯನ್ನು ತುಂಬಿಸಲಾಗಿದೆ. ಕೆರೆ ಅಂಗಳವನ್ನು ಸ್ಮಶಾನವಾಗಿ ಬಳಸಲಾಗುತ್ತಿತ್ತು, ಕೆರೆ ತುಂಬಿದ ನಂತರ ಸ್ಮಶಾನದ ಸಮಸ್ಯೆ ಉಂಟಾಗಿದೆ ಎಂದು ಕೊಣನೂರು ಗ್ರಾಮಸ್ಥರು ಅಹವಾಲು ಹೇಳಿಕೊಂಡರು. ಹನುಮನಪುರದಲ್ಲಿಯೂ ಸ್ಮಶಾನದ ಸಮಸ್ಯ ಇದೆ ಎಂದಾಗ ಸರ್ಕಾರಿ ಜಮೀನು ಲಭ್ಯವಿದ್ದರೆ ಕೂಡಲೇ ಮಂಜೂರು ಮಾಡಿಕೊಡಲಾಗುವುದು. ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು 3 ತಿಂಗಳ ಒಳಗಾಗಿ ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ವಿಕಲಚೇತನರ ಸಮಸ್ಯೆಗೆ ಸ್ಪಂದನೆ:
      ಸಭೆಯಲ್ಲಿ ಹಲವು ವಿಕಲಚೇತನರು, ಪೋಷಕರು ಹಾಜರಿದ್ದು, ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ದೊರೆಯದಿರುವ ಬಗ್ಗೆ ದೂರಿದರು. 21 ವರ್ಷ ವಯಸ್ಸಿನ ಬುದ್ಧಿಮಾಂದ್ಯ ವಿಕಲಚೇತನನ ಪೋಷಕರೊಬ್ಬರು ಐ.ಡಿ. ಕಾರ್ಡ್ ಸೇರಿದಂತೆ ಸೌಲಭ್ಯಗಳಿಗೆ ಮನವಿ ಸಲ್ಲಿಸಿದಾಗ ಸಂಬಂಧಿಸಿದ ನಿಗಮದಿಂದ ಪೋಷಕರಿಗೆ ಸಾಲಸೌಲಭ್ಯ ಮಂಜೂರು ಮಾಡಲು ತಿಳಿಸಲಾಯಿತು ಹಾಗೂ ಅಗತ್ಯ ವೈದ್ಯಕೀಯ ನೆರವು ಒದಗಿಸಿಕೊಡಲು ತಿಳಿಸಿದರು.
      ಅಂಧ ಯುವತಿಯೊಬ್ಬರು ಇಂಥದೇ ಮನವಿ ಸಲ್ಲಿಸಿದಾಗ ನಂಜನಗೂಡು ಬಾಲಕಿಯರ ಹಾಸ್ಟೆಲ್‍ನಲ್ಲಿ ಪಾರ್ಟ್ ಟೈಮ್ ಸಂಗೀತ ಶಿಕ್ಷಕಿಯಾಗಿ ನೇಮಿಸಿಕೊಳ್ಳಲು ತಿಳಿಸಲಾಯಿಲ್ಲದೆ ಜೊತೆಗೆ ಕರೆದುಕೊಂಡು ಹೋಗುವ ಆಕೆಯ ತಾಯಿಗೆ ಅಡುಗೆ ಸಹಾಯಕರ ಕೆಲಸ ನೀಡುವ ಸಾದ್ಯತೆಯ ಬಗ್ಗೆಯೂ ಪರಿಶೀಲಿಸಲು ತಿಳಿಸಲಾಯಿತು.
     ಕೊಣನೂರು ಕೆರೆ ತುಂಬಿಸಿದ ನಂತರ  ಹಿನ್ನೀರಿನಿಂದಾಗಿ  ತಮ್ಮ ಜಮೀನು ಮುಳುಗಡೆ ಆಗಿ ಜೀವನಕ್ಕೂ ತೊಂದರೆ ಆಗಿರುವುದಾಗಿ ಮಹಿಳೆಯೊಬ್ಬರು ತಿಳಿಸಿದಾಗ ಕೆರೆ ಅಂಗಳ ಒತ್ತುವರಿ ಆಗದಿದ್ದರೆ ನ್ಯಾಯ ಸಮ್ಮತವಾಗಿ ದೊರೆಯಬೇಕಾದ ಪರಿಹಾರ ದೊರೆಕಿಸಿಕೊಡಲು ರಾಮಯ್ಯ ತಿಳಿಸಿದರು. ಅಲ್ಲದೆ ಅವರ ಜಮೀನಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಿಕೊಡಲು ಸಹ ತಿಳಿಸಿದರು.
     ಪ್ರತಿ ಗ್ರಾಮಕ್ಕೂ ಸರ್ಕಾರದಿಂದ ಮಂಜೂರು ಆದ ಯೋಜನಾ ವಿವರಗಳನ್ನು ಸಭೆಯಲ್ಲಿ ಓದಿ ಹೇಳಿದ ರಾಮಯ್ಯ ಅವರು ಈ ಕಾಮಗಾರಿಗಳು ಆಗಿವೆಯೇ, ಗುಣಮಟ್ಟದ ಕೆಲಸ ಆಗಿದೆಯೇ ಎಂಬ ಮಾಹಿತಿ ಪಡೆದುಕೊಂಡರು. ಬೋರ್‍ವೆಲ್ 3 ವರ್ಷಗಳು ಕಳೆದಿದ್ದರೂ ಇನ್ನು ಕೈ ಪಂಪ್ ಅಳವಡಿಸಿಲ್ಲ. ಕೆಲವು ಬೋರ್‍ವೆಲ್‍ಗಳಿಗೆ ಪಂಪ್ ಇದ್ದರೆ ಪೈಪ್ ಲೈನ್ ಇಲ್ಲ ಎಂಬ ಮಾಹಿತಿಯನ್ನು ಸಾರ್ವಜನಿಕರು ಗಮನಕ್ಕೆ ತಂದಾಗ ಈ ಬಗ್ಗೆ ಕ್ರಮವಹಿಸುವುದಾಗಿ ಸಂಬಂಧಿಸಿದ ಅಧಿಕಾರಿಗಳು ಸಮಜಾಯಿಷಿ ನೀಡಿದರು.
     ಸಮಸ್ಯೆಗಳು ಇದ್ದಾಗ ಅಧಿಕಾರಿಗಳ ಬಳಿ ನೀವೂ ಅಲೆಯುತ್ತಿದ್ದೀರಿ.  ಈಗ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಎಲ್ಲ ಸಮಸ್ಯೆಗಳ ಮಾಹಿತಿ ಪಡೆದು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ರಾಮಯ್ಯ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ವಿಶೇಷ ಆಸಕ್ತಿ ವಹಿಸಿದ್ದು, ಅವರ ಸೂಚನೆ ಮೇರೆಗೆ ಈ ಸಭೆ ನಡೆಸಲಾಗುತ್ತಿದ್ದು, ಸಮಸ್ಯೆಗಳಿಗೆ ಪರಿಹಾರ ದೊರೆಕಿಸುವುದಾಗಿ ಹೇಳಿದರು.
     ಕಳಪೆ ಕಾಮಗಾರಿಗಳ ಬಗ್ಗೆ ಹಲವು ದೂರುಗಳು ಕೇಳಿಬಂದಾಗ ಈ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಅಲ್ಲದೆ ಕಾಮಗಾರಿ ಕಳೆಪೆ ಎಂದು ಕಂಡುಬಂದಲ್ಲಿ ಹಣ ಪಾವತಿ ತಡೆಹಿಡಿಯಲಾಗುವುದು ಎಂದರು.
     ಗ್ರಾಮವಾರು ಆಗಬೇಕಾಗಿರುವ ಕಾಮಗಾರಿಗಳ ವಿವರಗಳನ್ನು ಸಭೆಯಲ್ಲಿ ಪಡೆದುಕೊಳ್ಳಲಾಯಿತು. ಸಮುದಾಯ ಭವನಗಳಿಗೆ ಬೇಡಿಕೆ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಹೆಚ್ಚುವರಿ ಬಸ್ ವ್ಯವಸ್ಥೆ, ಹೆಚ್ಚುವರಿ ಕುಡಿಯುವ ನೀರಿನ ವ್ಯವಸ್ಥೆ, ಸ್ಮಶಾನ, ಮೊದಲಾದ ಹಲವು ಬೇಡಿಕೆಗಳನ್ನು ಸಾರ್ವಜನಿಕರು ಸಭೆಯಲ್ಲಿ ಮಂಡಿಸಿದರು.
    ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಿವಶಂಕರ್, ಸಹಾಯಕ ಆಯುಕ್ತ ಆನಂದ್, ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಸುನಿಲ್‍ಕುಮಾರ್, ತಹಶೀಲ್ದಾರ್ ರಾಮಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ|| ಕಲಾವತಿ , ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಭಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಭಾಸ್ಕರ್, ಸೇರಿದಂತೆ ವಿವಿಧ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.



ಅನುಸೂಚಿತ ಜಾತಿ ಮತ್ತು ಪಂಗಡÀ ಕಲ್ಯಾಣ ಸಮಿತಿ: ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
    ಮೈಸೂರು,ಅ.29.ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಸಮಿತಿಯ ಸದಸ್ಯರುಗಳಾದ ವಿಧಾನಸಭಾ ಸದಸ್ಯ ಮನೋಹರ್ ಹೆಚ್. ತಹಶೀಲ್ದಾರ್, ರಾಜಾ ವೆಂಕಟಪ್ಪ ನಾಯಕ, ಎಂ.ಟಿ.ಬಿ. ನಾಗರಾಜ್, ಆರ್. ನರೇಂದ್ರ, ರಾಜು ಅಲಗೂರು, ಬಿ.ಎಂ. ನಾಗರಾಜು, ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ಆರ್. ಜಗದೀಶ್ ಕುಮಾರ್, ಅರವಿಂದ ಚಂದ್ರಕಾಂತ ಬೆಲ್ಲದ್, ತಿಪ್ಪರಾಜು, ಹೆಚ್.ಕೆ.ಕುಮಾರಸ್ವಾಮಿ, ಶಾರದಾ ಪೂರ್ಯ ನಾಯ್ಕ್, ಕೆ.ಎಂ. ತಿಮ್ಮರಾಯಪ್ಪ, ಪಿ. ರಾಜೀವ್, ವಿಧಾನ ಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ರಘುನಾಥರಾವ್ ಮಲ್ಕಾಪುರೆ,  ಆರ್. ಧರ್ಮಸೇನ, ಅರುಣ್ ಶಹಾಪುರ, ತಾರಾ ಅನೂರಾಧ ನವೆಂಬರ್ 2 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅವರುಗಳು ಅಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳವರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಎಸ್‍ಸಿಪಿ/ಟಿಎಸ್‍ಪಿ ಅನುದಾನದ ಬಳಕೆ, ಸುಳ್ಮ್ಳ ಜಾತಿ ಪ್ರಮಾಣ ಪತ್ರ, ಜಿಲ್ಲಾಧಿಕಾರಿ/ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಜಮೀನಿಗೆ ಸಂಬಂಧಿಸಿದ ಪ್ರಕರಣಗಳ ಇತ್ಯರ್ಥ, ನೇಮಕಾತಿ/ಮುಂಬಡ್ತಿಯಲ್ಲಿ ಮೀಸಲಾತಿ ಹಾಗೂ ಬ್ಲಾಕ್‍ಲಾಗ್ ಹುದ್ದೆಗಳ ಭರ್ತಿ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಮಕ್ಷವ್ಮದಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ.
ನ. 1  ರಂದು ಕನ್ನಡ ರಾಜ್ಯೋತ್ಸವ
      ಮೈಸೂರು,ಅ.29.-ಜಿಲ್ಲಾಡಳಿತದ ವತಿಯಿಂದ ನವೆಂಬರ್ 1 ರಂದು ಕೋಟೆ ಶ್ರೀ ಅಂಜುನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕನ್ನಡ ರಾಜೋತ್ಸವ ಆಚರಿಸಲಾಗುವುದು.
  ಅಂದು ಬೆಳಿಗ್ಗೆ 8-30 ಗಂಟೆಗೆ ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಕೋಟೆ ಶ್ರೀ ಅಂಜುನೇಯ ದೇವಸ್ಥಾನದ ಆವರಣದಲ್ಲಿ ಶ್ರೀ ಭುವನೇಶ್ವರಿ ದೇವಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಗುವುದು. ಪುಷ್ಪರ್ಚನೆಯ ನಂತರ ಭುವನೇಶ್ವರಿ ದೇವಿ ಮೆರವಣಿಗೆ ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಸಾಗಿ ಪುರಭವನ ತಲುಪಲಿದೆ.
    ಬೆಳಿಗ್ಗೆ 9 ಗಂಟೆಗೆ  ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
     ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ,ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಂ.ಕೆ. ಸೋಮಶೇಖರ್, ವಾಸು,  ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ,  ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ಮೈಸೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷೆ ರಾಣಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಂಜೆ 5 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಕಲಾಮಂದಿರದಲ್ಲಿ ನಡೆಯಲಿದ್ದು, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್,  ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ ಹಾಗೂ ಶಾಸಕ ವಾಸು ಅವರು ಭಾಗವಹಿಸಲಿದ್ದಾರೆ.


ನ. 5  ರಂದು ನಾಲ್ವಡಿ ಜಯಂತಿ
     ಮೈಸೂರು,ಅ.29.-ಜಿಲ್ಲಾಡಳಿತದ ವತಿಯಿಂದ ನವೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ  ಕಲಾಮಂದಿರದಲ್ಲಿ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಗುವುದು.
  ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.ಖ್ಯಾತ ವಕೀಲರಾದ ಡಾಪಿ.ಎಸ್. ದ್ವಾರಕಾನಾಥ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
    ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಂ.ಕೆ. ಸೋಮಶೇಖರ್,  ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ,  ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ಮೈಸೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷೆ ರಾಣಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
    ಅಂದು ಬೆಳಿಗ್ಗೆ 9-30 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಅರಮನೆ ಆವರಣದಲ್ಲಿರುವ ಪ್ರಸನ್ನ ಲಕ್ಷ್ಮೀರಮಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟು ಅರಮನೆ ಉತ್ತರ ದ್ವಾರದ ಮೂಲಕ ಕೆ.ಆರ್.ವೃತ್ತ ತಲುಪಲಿದೆ. ಕೆ.ಆರ್.ವೃತ್ತದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದ ನಂತರ ಮೆರವಣಿಗೆಯು ಡಿ.ದೇವರಾಜ ಅರಸ್ ರಸ್ತೆ, ಮೆಟ್ರೋಪೋಲ್ ವೃತ್ತದ ಮೂಲಕ ಕಲಾಮಂದಿರ ತಲುಪಲಿದೆ.
ಡಾ.ಬಿ.ಎನ್ ಸುರೇಶ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ
      ಮೈಸೂರು,ಅ.29.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ 2015 ರ ಜೀವಮಾನದ ಸಾಧನೆ ಪ್ರಶಸ್ತಿ ಪ್ರಕಟಿಸಿದೆ. ಪ್ರಶಸ್ತಿಯನ್ನು ಇಸ್ರೋನ ಡಾ|| ವಿಕ್ರಂ ಸಾರಾಭಾಯಿ ಡಿಸ್ಟಿಂಗ್ವಿಶ್ಡ್ ಪ್ರೊಫೆಸರ್ ಹಾಗೂ ಖ್ಯಾತ ಬಾಹ್ಯಕಾಶ ವಿಜ್ಞಾನಿ ಪದ್ಮಭೂಷಣ ಡಾ.ಬಿ.ಎನ್ ಸುರೇಶ್ ಅವರಿಗೆ ನವೆಂಬರ್ 5 ರಂದು ಬೆಂಗಳೂರಿನ ವಿವಿಪುರಂನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿ ಸಭಾಂಗಣದಲ್ಲಿ ನಡೆಯಲಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಎಂಟನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸದಸ್ಯ ಕಾರ್ಯದರ್ಶಿ ಡಾ ಹೆಚ್ ಹೊನ್ನೇಗೌಡ ಅವರು ತಿಳಿಸಿದ್ದಾರೆ.
    ಪ್ರಶಸ್ತಿ ಸ್ವರ್ಣ ಪದಕ, ಸನ್ಮಾನ ಪತ್ರ ಹಾಗೂ 1 ಲಕ್ಷ ನಗದು ಒಳಗೊಂಡಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಗ್ರ ಪ್ರಶಸ್ತಿ
     ಮೈಸೂರು,ಅ.29.ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಇತ್ತೀಚಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಡೆಸಿದ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಮೈಸೂರಿನ ಲಲಿತಾಶರ್ಮ ಅವರು 70 ರಿಂದ 80ರ ವಯೋಮಾನದ ವಿಭಾಗದಲ್ಲಿ ಪ್ರಥಮ ಬಹುಮಾನ ಹಾಗೂ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೊಸ ಕೈಗಾರಿಕಾ ನೀತಿ ಉತ್ತಮ ಆಶಾದಾಯಕವಾಗಿದೆ : ಎಂ. ಶಿವಶಂಕರ್
     ಮೈಸೂರು29-ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಹೊಸ ಉದ್ಯಮಶೀಲರಿಗೆ ಹೊಸ ಕೈಗಾರಿಕಾ ನೀತಿ ಉತ್ತಮ ಆಶಾದಾಯಕವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಶಿವಶಂಕರ್ ಅವರು ತಿಳಿಸಿದರು.
    ಅವರು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸಿಡಾಕ್, ಧಾರವಾಡ ಮತ್ತು ಮೈಸೂರು ಮಹಾರಾಣಿ ಕಲಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ  ಮಹಾರಾಣಿ ಕಲಾ ಕಾಲೇಜಿನಲ್ಲಿ ಇತ್ತೀಚೆಗೆ  ಆಯೋಜಿಸಲಾಗಿದ್ದ ಬಾವಿ ಮತ್ತು ಹಾಲಿ ಹೊಸ ಉದ್ಯಮಶೀಲರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
   ಹೊಸ ಕೈಗಾರಿಕಾ ನೀತಿ ಉದ್ಯಮ ಶೀಲರಿಗೆ ಹೆಚ್ಚು ಉಪಯುಕ್ತವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ಅತ್ಯುತ್ತಮವಾಗಿ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
   ಮಹಾರಾಣಿ ಕಾಲೇಜಿನ ಪ್ರಾಂಶುಪಾಲ ಎಂ. ಪುರುಷೋತ್ತಮ್ ಮಾತನಾಡಿ ಬ್ಯಾಂಕುಗಳಲ್ಲಿ ಯಥೇಚ್ಫವಾದ ಸಾಲ ಸೌಲಭ್ಯ ದೊರೆಯುತ್ತಿದೆ. ಅದನ್ನು ಬಳಸಿಕೊಂಡು ಯುವಕ ಯುವತಿಯರು ಸ್ವಾವಲಂಬಿಯಾಗಬೇಕೆಂದರು.
   ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಅನಂತ ಪದ್ಮನಾಭ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಸೂರು ಮಹಾನಗರಪಾಲಿಕೆ ಚುನಾವಣೆ
     ಮೈಸೂರು,ಅ.29.ಮೈಸೂರು ಮಹಾನಗರಪಾಲಿಕೆ ನೂತನ ಮೇಯರ್/ ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ  ದಿನಾಂಕ 13-11-2015 ರಂದು ಬೆಳಿಗ್ಗೆ 11-30 ಗಂಟೆಗೆ ಮೈಸೂರು ಮಹಾ ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಚುನಾವಣೆ ನಡೆಸಲಾಗುವುದು  ಎಂದು ಮೈಸೂರು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
     ನಿಯಮಾವಳಿಯಂತೆ ನಗರಪಾಲಿಕಾ ಸದಸ್ಯರು, ಸಂಬಂಧಿಸಿದ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ವಿಧಾನಪರಿಷತ್  ಸದಸ್ಯರುಗಳಿಗೆ ತಿಳುವಳಿಕೆ ಪತ್ರ ಕಳುಹಿಸಲಾಗಿದ್ದು, ದಿನಾಂಕ 13-11-2015 ರಂದು ಬೆಳಿಗ್ಗೆ 11-30 ಗಂಟೆಗೆ ಮಹಾನಗರಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸಭೆ ಸಮಾವೇಶಗೊಂಡು ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಂಡ್ಯ೨೯‘ವಚನಸಾಹಿತ್ಯ’ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾರಸ್ವತ ಲೋಕ ನೀಡಿದ ಕೊಡುಗೆ-ಶ್ರೀನಿವಾಸಶೆಟ್ಟಿ
ಮಂಡ್ಯ:ವೇದೋಪನಿಷತ್ತುಗಳ ಸಾರ, ದಟ್ಟವಾದ ಜೀವನಾನುಭವ, ಮೌಢ್ಯ ಕಂದಾಚಾರಗಳ ವಿಡಂಬನೆ, ನೀತಿಬೋಧೆ ಇವುಗಳೇ ವಚನಗಳ ವಸ್ತುವಿಷಯಗಳು. ಮನದ ಭಕ್ತಿ, ಪ್ರೀತಿ, ಆವೇಶ, ಆತಂಕ, ಕಾಯಕತತ್ವ, ಸಾಮಾಜಿಕ ವಿಡಂಬನೆ ಇವುಗಳನ್ನು ಪ್ರಕಟಗೊಳಿಸುವುದಕ್ಕೆ ಶಿವಶರಣರು ಆರಿಸಿಕೊಂಡ ಮಾಧ್ಯಮವೇ ವಚನಗಳು.ಹೀಗೆ ಅವರು ರಚಿಸಿದ ವಚನಸಾಹಿತ್ಯ ವಿಶ್ವಸಾಹಿತ್ಯಕ್ಕೆ ಕನ್ನಡ ಸಾರಸ್ವತ ಲೋಕ ನೀಡಿದ ಕೊಡುಗೆಯಾಗಿದೆ ಎಂದು ಮಂಡ್ಯ ತಾಲೂಕು ಮೂರನೇ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್.ಶ್ರೀನಿವಾಸಶೆಟ್ಟಿ ಬಣ್ಣಿಸಿದರು.
ಅವರು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಕನಕಪುರ,ರಾಷ್ಟ್ರೀಯ ಸೇವಾ ಯೋಜನಾ ಘಟಕ,ಸರ್ಕಾರಿ ಪದವಿ ಪೂರ್ವ ಕಾಲೇಜು ಬಸರಾಳು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಮಂಡ್ಯ ತಾಲೂಕು ಮೂರನೇ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
       12ನೇ ಶತಮಾನ ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಕಾಲ. ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ, ಸಾಹಿತ್ಯಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ  ಬದಲಾವಣೆಯ ಗಾಳಿ ಭರದಿಂದ ಬೀಸಿದ ಕಾಲ. ಬಸವಣ್ಣ ಮತ್ತು ಅವರ ಸಮಕಾಲೀನರಾದ ನೂರಾರು ಶಿವಶರಣರು ಒಂದೆಡೆ ಕಾಯಕತತ್ವವನ್ನು ಅನುಷ್ಠಾನಗೊಳಿಸುತ್ತಾ, ಇನ್ನೊಂದೆಡೆ ಅನುಭವಮಂಟಪದಲ್ಲಿ ಕಲೆತು ಪರಸ್ಪರ ಜಿಜ್ಞಾಸೆ ನಡೆಸುತ್ತ, ಕೊಡು-ಕೊಳ್ಳುತ್ತ ವಚನಗಳನ್ನು ರಚಿಸಿದರು. ಅಂದು ಅವುಗಳು ಶ್ರೀ ಸಾಮಾನ್ಯರ ಅಭಿವ್ಯಕ್ತಿಯ ಬಗೆಯಾಗಿ ಎಲ್ಲರ ನಾಲಿಗೆಯಲ್ಲಿ ಹರಿದಾಡಿತು. ಗಾದೆ, ಒಗಟು, ಜಾನಪದ ಸಾಹಿತ್ಯದಂತೆ ಜನರ ಬಾಯಿಂದ ಬಾಯಿಗೆ ಹರಡಿ ಜನಪ್ರಿಯವಾಯ್ತು. ಹೊಸ ಕ್ರಾಂತಿಗೆ ನಾಂದಿ ಹಾಡಿತು. ಈ ವಚನಗಳು ಕನ್ನಡದ ಅಮೂಲ್ಯ ಆಸ್ತಿ. ಒಂದು ಕಾಲದಲ್ಲಿ ಜನಜಾಗೃತಿಯನ್ನು ಮೂಡಿಸಿದ ಸಾವಿರ ಸಾವಿರ ಸಂಖ್ಯೆಯ ವಚನಗಳಲ್ಲಿ ಕಾಲನ ಪಾಶಕ್ಕೆ ಸಿಕ್ಕಿ ಬಹಳಷ್ಟು ನಲುಗಿ ಹೋಗಿವೆ. ಉಳಿದವುಗಳನ್ನಾದರೂ ಜೋಪಾನ ಮಾಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ವಚನಗಳು ನಮ್ಮ ಅಹಂಕಾರವನ್ನು ಕೆಳಕ್ಕೆ ಒತ್ತಿ ಹೃದಯದ ಆದ್ರ್ರತೆಯನ್ನು  ಹೆಚ್ಚಿಸುತ್ತವೆ. ಬದುಕಿನ ಬಗ್ಗೆ ಸಕಾರಾತ್ಮಕ ಒಲವನ್ನು ಜೀವಪರ ನಿಲುವನ್ನು ಬೆಳೆಸುತ್ತವೆ. ವಚನದ ಓದು ನೀಡುವ ಆನಂದ ನಿಜಕ್ಕೂ ಅಮೂರ್ತವಾದುದು. ನೊಂದು ಬಸವಳಿದ ಮನಸ್ಸುಗಳಿಗೆ ಅವುಗಳು ಉತ್ಸಾಹವನ್ನು ತುಂಬಿ ಬದುಕನ್ನು ಎದುರಿಸುವ ಛಲವನ್ನೂ, ಬಲವನ್ನೂ ಕಟ್ಟಿಕೊಡುತ್ತವೆ.
ಬೆಂದ ಸಂಸಾರ ಬೆಂಬಿಡದೆ ಕಾಡುತ್ತಿರುವುದಯ್ಯ
ಏವೆನಯ್ಯ ಏವೆನಯ್ಯ
ಅಂದಂದಿನ ದಂದುಗಕ್ಕೆ ಏವೆನಯ್ಯ ಏವೆನಯ್ಯ
ಬೆಂದೊಡಲ ಹೊರೆವುದಕ್ಕೆ ನಾನಾರೆ
ಚೆನ್ನಮಲ್ಲಿಕಾರ್ಜುನ ಕೊಲ್ಲು, ಕಾಯಿ ನಿಮ್ಮ ಧರ್ಮ.
ಎಂಬಶಿವಶರಣೆ ಅಕ್ಕಮಹಾದೇವಿಯ ವಚನವನ್ನು ಉಲ್ಲೇಖಿಸಿ
 ‘ಸಂಸಾರ’ವನ್ನು ಬೆಂಕಿಗೆ ಉಪಮಾನಿಸುವ ಅಕ್ಕ  ಸಂಸಾರ ಸಾಗರದಲ್ಲಿ ಸಿಲುಕಿ ಮುಳುಗೇಳುತ್ತಿರುವ ನಮ್ಮೆಲ್ಲರ ಪಾಡೂ ಇದೆ ತಾನೆ? ಅಕ್ಕ ಚೆನ್ನಮಲ್ಲಿಕಾರ್ಜುನನಿಗೆ ಮೊರೆಯಿಡುವಂತೆ ಭಗವಂತನಿಗೆ ಮೊರೆಯಿಡುವುದೊಂದೆ ನಮಗಿರುವ ಏಕೈಕ ಮಾರ್ಗ ಎಂದು ಅವರು ತಿಳಿಸಿದರು.
ನಮ್ಮ ಜೀವನ ಶ್ರೀಮಂತವಾಗಬೇಕಾದರೆ, ಸಮೃದ್ಧಿಯಾಗಬೇಕಾದರೆ ನಮ್ಮಂತರಂಗದ ಅರಿವಿನ ಪ್ರದೀಪವನ್ನು ಬೆಳಗಿಸಿಕೊಳ್ಳಬೇಕು. ಆ ಅಂತರಂಗದ ಜ್ಯೋತಿಯಲ್ಲಿ ಭಗವಂತನನ್ನು ಕಂಡು ಆರಾಧಿಸಬೇಕು. ಇದಕ್ಕೆ ನಮ್ಮದೆ ಆದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ನಮಗಿದೆ. ಆದರೆ ಅದು ಪ್ರದರ್ಶನದ ವಸ್ತುವಾಗಬಾರದು. ಬಾಹ್ಯಾಡಂಬರದ ಪ್ರಕ್ರಿಯೆಯಾಗಬಾರದು ಎಂಬುದು ಶಿವಶರಣರ ಆಶಯ ಎಂದರು.ಅಲ್ಲಮಪ್ರಭು,ಚೆನ್ನಬಸವಣ್ಣ,ಬಸವಣ್ಣ,ಶಾಂತರಸ,ನಾಗಲಾಂಬಿಕೆ ಮುಂತಾದವರ ವಚನಗಳನ್ನು ಅವರು ಉಲ್ಲೇಖಿಸಿದರು.
ಹೀಗೆ ಶಿವಶರಣರ ಅನುಭವದ, ಅನುಭಾವದ ಮೂಸೆಯಲ್ಲಿ ಮೂಡಿಬಂದ ಸಾವಿರಾರು ವಚನಗಳು ನಮ್ಮ ಮುಂದಿವೆ. ಅವುಗಳೆಲ್ಲವೂ ಬೆಳಕಿನ ಪುಂಜಗಳೇ. ಅವುಗಳು ಬರಿಯ ಮಾತುಗಳಲ್ಲ; ಜ್ಯೋತಿರ್ಲಿಂಗಗಳು. ಅವುಗಳ ಅಧ್ಯಯನ ಮತ್ತು ನಿತ್ಯಪಠಣದಿಂದ ಅಜ್ಞಾನದ ಅಂಧಕಾರ ತೊಲಗಿ ಜ್ಞಾನದ ಬೆಳಕು ಪಸರಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಸತ್ಸಂಗಗಳು, ವಚನಗೋಷ್ಠಿಗಳು, ಸಮ್ಮೇಳನಗಳು ಅರ್ಥಪೂರ್ಣ. ಇವುಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ಅವರು ಅಭಿಪ್ರಾಯಪಟ್ಟರು.  

ಮೈಸೂರು ಜೆಎಸ್ ಎಸ್ ಸಂಸ್ಥೆಯ ನೂತನ ವಿದ್ಯಾರ್ಥಿ ವಸತಿ ಕಟ್ಟಡವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು ಸಂದರ್ಭದಲ್ಲಿ ಶ್ರೀ ದೇಶಿಕೇಂದ್ರ ಸ್ವಾಮೀಜಿಯವರು ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು. 
ಮೈಸೂರಲ್ಲಿ ಎರಡು ದಿನ ಕಿಕ್ ಬಾಕ್ಸಿಂಗ್ ಸ್ಪರ್ಧೆ
 ಮೈಸೂರು,ಅ.29-ಮೈಸೂರು ಜಿಲ್ಲೆಯ ಮೋಯ್‍ಥಾಯ್ ಟ್ರಸ್ಟ್ರ್ ಸಂಸ್ಥೆಯು ಇದೇ ತಿಂಗಳು 31 ಹಾಗೂ ನ.1 ರಂದು ದಸರಾ ಮಹೋತ್ಸವ ಹಾಗು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣದಲ್ಲಿ ಮೋಯ್‍ಥಾಯ್ ಎಂಬ ಕಿಕ್ ಬಾಕ್ಸಿಂಗ್ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಹಾಲಿ ಸದಸ್ಯರೂ ಆದ ಪುರುಷೋಥ್ಥಮ್ ತಿಳಿಸಿದರು.
 ಇಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯ್‍ಲಾಂಡಿನಲ್ಲಿ ಪ್ರಸಿದ್ಧಿಯಾಗಿರುವ ಈ  ಪಂದ್ಯವನ್ನು ಭಾರತಕ್ಕೆ ಪರಿಚಯಿಸುವ ಸಲುವಾಗಿ ಈ ಪ್ರಯತ್ನ ಮಾಡಲಾಗಿದೆ,  ಇದರಲ್ಲಿ ಹಲವಾರು ದೇಶಗಳ ಬಾಕ್ಷರ್ ಗಳು, ಫೈಟರ್‍ಗಳು, ಮೈಸೂರು ನಗರದ ಬಾಕ್ಸರ್‍ಗಳು ಸೇರಿದಂತೆ 80 ರಿಂದ 100 ಮಂದಿವರೆಗೆ ಭಾಗವಹಿಸಲಿದ್ದಾರೆ. ಮೈಸೂರಿನವರೇ 26 ಮಂದಿ ಬಾಕ್ಸರ್‍ಗಳು ಈ ಎರಡು ದಿನಗಳ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
  ಅ. 31ರ ಸಂಜೆ 5 ಗಂಟೆಗೆ ಸಚಿವ ವಿ. ಶ್ರೀನಿವಾಸಪ್ರಸಾದ್ ರವರು ಸ್ಪರ್ದೆ ಉದ್ಘಾಟಿಸಲಿದ್ದಾರೆ, ನಗರದ ಎಲ್ಲಾ ರಾಜಕೀಯ ಪ್ರತಿನಿಧಿಗಳು, ನಿಗಮಮಂಡಳಿ ಅಧ್ಯಕ್ಷರುಗಳು  ಭಾಗವಹಿಸಲಿದ್ದಾರೆ.
 ವಿಜೇತರಾದ ಬಾಕ್ಸರ್‍ಗಳಿಗೆ ರಾಷ್ಟ್ರೀಯ ಪ್ರಶಸ್ತಿಬೆಲ್ಟ್, ದಸರಾ ಕಪ್, ರಾಜೋತ್ಸವ ಕಪ್‍ಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾ ಗೊಷ್ಟಿಯಲ್ಲಿ ಟ್ರಸ್ಟ್‍ನ ವ್ಯಸ್ಥಾಪಕ ವಿಕ್ರಮ್, ದೇವರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ರವಿ ಉಪಸ್ಥಿತರಿದ್ದರು.


 31 ರಂದು ರೈತರಿಗೆ ಉಚಿತ ತರಬೇತಿ ಶಿಬಿರ
ಮೈಸೂರು,ಅ,29- ಕೃಷಿವಿಜಾÐನ ವೇದಿಕೆ, ಲಯನ್ಸ್ ಕ್ಲಬ್ ಮೈಸುರು ಹೆರಿಟೇಜ್ ಸಹಯೋಗದೊಮದಿಗೆ  ಅ. 31 ರಂದು ವಿಜಯನಗರದ ಕೃಷಿವಿಜಾÐನವೇದಿಕೆ ಸಬಂಗಣದಲ್ಲಿ ತರಕಾರಿ ಬೆಳೆಗಳಲ್ಲಿ ರೋಗ ಕೀಟಗಳ ಸಮಗ್ರ ನಿರ್ವಹನೆ ಬಗೆಗೆ ರೈತರಿಗೆ  ಉಚಿತವಾಗಿ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ವಸಂತಕುಮಾರ್ ತಿಳಿಸಿದರು.
ಇಮದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ತಾವು ಬೆಳೆದ ಬೆಳೆಗಳ ಬಗ್ಗೆ ಸವುಗಳನ್ನು ರಕ್ಷಣೆಮಾಡಿಕೊಳ್ಳುವ ಬಗ್ಗೆ ಸಮಗ್ರ ಮಾಹಿತಿ , ತಿಳುವಳಿಕೆ ಇರುವುದಿಲ್ಲ ಹಾಗಾಗಿ ರೈತ ಬೆಳೆಯನ್ನು ಹಾಳುಮಾಡಿಕೊಂಡು ಕಂಗಾಲಾಗಿ ಸಾಲದ ಸುಳಿಗೆ ಸಿಲುಕಿಕೊಳ್ಳೂತ್ತಾನೆ ಇದನ್ನು ತಪ್ಪಿಸಲು ಮತ್ತು ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
 ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ರೈತರು ಬಂದು ಭಾಗಿಯಾಗಿ  ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು  ಈ ಕೃಷಿ ನೀತಿ ಅನುಸರಿಸಬೇಕೆಂದು ಹೇಳಿದರು.
 ಈ ಕೃಷಿ ಕಾರ್ಯಕ್ರಮದಲ್ಲಿ ಹಲವಾರು ಮಂದಿ  ಕೃಷಿ ತಜÐರು ಭಾಗವಹಿಸಿ ಯಾವ ಯಾವ ಬೆಳೆಯನ್ನು ಯಾವರೀತಿ ಸುಲಬವಾಗಿ ಬೆಳೆಯಬಹುದು ಎಂಬ ಬಗ್ಗೆ ತಿಳಿಸಿಕೊಡಲಿದ್ದಾರೆ. ಎಂದರು.
 ಪತ್ರಿಕಾ ಗೋಷ್ಠಿಯಲ್ಲಿ ವೇದಿಕೆಯ ಜಯಪ್ರಕಾಶ್, ದೇವರಾಜು, ಬಣಕಾರ್ ಇದ್ದರು.

  

Monday, 26 October 2015


ಮೈಸೂರು ನಗರ ಸಿ.ಸಿ.ಬಿ. ಪೊಲೀಸರಿಂದ ವೇಶ್ಯಾವಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ದಾಳಿ. 05 ಜನರ ಬಂಧನ. ನಗದು , ಮೊಬೈಲ್ ಫೋನ್ ಹಾಗೂ ದ್ವಿ ಚಕ್ರ ವಾಹನ ವಶ.
*****
     24ರಂದು ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಮತ್ತು ಲಷ್ಕರ್ ಠಾಣೆ ಪೊಲೀಸರು ಮೈಸೂರು ನಗರ ಹಳ್ಳದಕೇರಿ, ಕೇಶವಾ ಅಯ್ಯಂಗಾರ್ ರಸ್ತೆ, ನಂ: 2896 ರ ಶ್ರೀ ಸಾಯಿ ರೆಸಿಡೆನ್ಸಿ ಮೇಲೆ ದಾಳಿ ಮಾಡಿ
ವೇಶ್ಯಾವಾಟಿಕೆ ನಡೆಸುತ್ತಿದ್ದ –
ಶಿವಕುಮಾರ್.ಕೆ. ಬಿನ್ ಕೃಷ್ಪ್ಪ, 22 ವಷೌ, ನಾಗಸಂಗ್ರ ಕಾಲೋನಿ, ಬೆಂಗಳೂರು
ಅನಿಲ್ ಕುಮಾರ್, ಅಂಬಳಿಕೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ
ತಿಮ್ಮೇಶ ವಿ.ಕೆ. @ ಪ್ರವೀಣ್ ಬಿನ್ ವಿಜಯಕುಮಾರ್, 24 ವರ್ಷ, ಕೊಡಮಗ್ಗೆ, ಶಿವಮೊಗ್ಗ ಜಿಲ್ಲೆ
ಕುಮಾರ್ ಬಿನ್ ಜವರಪ್ಪ, 23 ವರ್ಷ, ಲಾಡ್ಜ್ ರಿಸೆಪ್ಷನಿಷ್ಟ್, ಹಂಪಾಪುರ, ಮೈಸೂರು ಜಿಲ್ಲೆ

ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ-
ಹರೀಶ್ ಬಿನ್ ಚಿಕ್ಕಣ್ಣೇಗೌಡ, 30 ವರ್ಷ, ಬೇವಿನಕುಪ್ಪೆ, ಮಂಡ್ಯ ಜಿಲ್ಲೆ

ಎಂಬುವವರುಗಳನ್ನು ಬಂಧಿಸಿ, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ ರೂ. 8,000/- ನಗದು, 06 ಮೊಬೈಲ್ ಫೋನ್‍ಗಳು ಮತ್ತು 1 ದ್ವಿ ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಹಾಗೂ ಪಶ್ಚಿಮ ಬಂಗಾಳದ  ಮೂವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಆರೋಪಿಗಳು ಬೆಂಗಳೂರಿನಿಂದ ಹುಡುಗಿಯರನ್ನು ಕರೆತಂದು ಮೈಸೂರಿನಲ್ಲಿ ಲಾಡ್ಜ್‍ಗಳನ್ನು ಬುಕ್ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

     ಈ ದಾಳಿ ಕಾರ್ಯದಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ.ಎನ್.ಡಿ. ಬಿರ್ಜೆ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಸಿ. ಗೋಪಾಲ್ ರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶ್ರೀಮತಿ. ಚಂದ್ರಕಲಾ, ಜಿ.ಸಿ. ರಾಜು ಹಾಗೂ ಲಷ್ಕರ್ ಠಾಣೆ ಇನ್ಸ್‍ಪೆಕ್ಟರ್ ಕಾಂತರಾಜು ಮತ್ತು ಸಿ.ಸಿ.ಬಿ. ಯ ಪಿ.ಎಸ್.ಐ. ಅರುಣಕುಮಾರಿ, ಎ.ಎಸ್.ಐ. ಕೇಶವಮೂರ್ತಿ, ಸಿಬ್ಬಂದಿಗಳಾದ ರವಿ, ರಾಧೇಶ್, ಮಂಜುನಾಥ್, ರಾಮಸ್ವಾಮಿ, ಮಹಿಳಾ ಸಿಬ್ಬಂದಿ ಮಂಜುಳ ಹಾಗೂ ಚಾಲಕರಾದ ರಾಜೇಶ್ ರವರ ತಂಡ ನಡೆಸಲಾಗಿರುತ್ತದೆ ಎಂದು ಪೋಲೀಸ್ ಆಯುಕ್ತರ ಕಛೇರಿಯ
ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ .
ಅ. 27 ರಂದು ಮಹರ್ಷಿ ವಾಲ್ಮೀಕಿ ಜಯಂತಿ
      ಮೈಸೂರು,ಅ.26.-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಮಹಾನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲೆಯ ನಾಯಕ ಜನಾಂಗದ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 27 ರಂದು ಮಧ್ಯಾಹ್ನ 11 ಗಂಟೆಗೆ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು.
   ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಸಭಾ ಸದಸ್ಯರಾದ ವಾಸು ಅವರು ಅಧ್ಯಕ್ಷತೆ ವಹಿಸುವರು. ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ನಂಜುಂಡಸ್ವಾಮಿ ಹರದನಹಳ್ಳಿ ಅವರು ಮುಖ್ಯ ಭಾಷಣಕಾರಾಗಿ ಭಾಗವಹಿಸುವರು.
    ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪ ಅರಮನಾಥ್, ಲೋಕಸಬಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ. ಬಸವರಾಜು, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾದಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನುಬಾನು, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ. ಕೃಷ್ಣಮೂರ್ತಿ, ಉಪಾಧ್ಯಕ್ಷೆ ರಾಣಿ ಅವರು ಸಮಾರಂಭದ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಅಂದು ಬೆಳಿಗ್ಗೆ 10 ಗಂಟೆಗೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್. ಲಿಂಗಪ್ಪ ಅವರು ಮೆರವಣಿಗೆ ಉದ್ಘಾಟಿಸಿ ನಂದಿ ಧ್ವಜ ಪೂಜೆ ನೆರವೇರಿಸುವರು. ಕಲಾಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ  ಉಪ್ಪುಂದ ರಾಜೇಶ್ ಪಡಿಯಾರ್ ಮತ್ತು ತಂಡದಿಂದ ಮಹರ್ಷಿ ವಾಲ್ಮೀಕಿ ಗಾಯನ ಕಾರ್ಯಕ್ರಮ ಆಯೋಜಿಸಿದೆ.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸರ್ಕಾರಿ ನೌಕರರ ಹಾಜರಾತಿ ಕಡ್ಡಾಯ
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ 2015ರ ಅಕ್ಟೋಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದಿಂದ ಮೆರವಣಿಗೆಯ ಹೊರಡಲಿದೆ. ನಂತರ ಮಧ್ಯಾಹ್ನ 11 ಗಂಟೆಗೆ ಕಲಾಮಂದಿರದಲ್ಲಿ ಸಭಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸದರಿ ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರು ಕಡ್ಡಾಯವಾಗಿ ಹಾಜರಾಗಲು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
ಸ್ವ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ
ಮೈಸೂರು,ಅ.26-ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ ಯೋಜನೆಯಡಿಯಲ್ಲಿ ಸ್ವ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಮೊದಲನೇ ಪೀಳಿಗೆ ಉದ್ದಿಮೆಶೀಲರಿಗೆ  ಗರಿಷ್ಠ ಯೋಜನಾ ವೆಚ್ಚವು ಪ್ರಾರಂಭಿಕ ಉತ್ಪಾದನಾ ಅವಶ್ಯಕ ದುಡಿಮೆ ಬಂಡವಾಳ ಸೇರಿದಂತೆ ರೂ. 10 ಲಕ್ಷಗಳಿಗೆ ಸೀಮಿತವಾಗಿರುತ್ತದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 25% ರಷ್ಟು ಹಾಗೂ ವಿಶೇಷ ವರ್ಗದ ಫಲಾನುಭವಿಗಳಿಗೆ ಶೇ 35% ರಷ್ಟು ಸಹಾಯ ಧನವು ಲಭ್ಯವಿರುತ್ತದೆ. ಸಾಮಾನ್ಯ ವರ್ಗದವರು ಶೇ. 10 ರಷ್ಟು ಹಾಗೂ ವಿಶೇಷ ವರ್ಗದವರು ಶೇ. 5% ರಷ್ಟು ಸ್ವಂತ ಬಂಡವಾಳವನ್ನು ತೊಡಗಿಸಬೇಕಾಗಿರುತ್ತದೆ. ಈ ಯೋಜನೆಯು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಮಾತ್ರ ಹಾಗೂ ಹೊಸ ಘಟಕಗಳಿಗೆ ಮಾತ್ರ ಅವಕಾಶವಿರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ರಂದು ಕೊನೆಯ ದಿನಾಂಕ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2566428ನ್ನು ಸಂಪರ್ಕಿಸಬಹುದು.

ಕಲಾಕೃತಿಗೆ ಅರ್ಜಿ ಆಹ್ವಾನ
    ಮೈಸೂರು,ಅ.26.ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಲಲಿತಕಲೆ ಮತ್ತು ಕರಕುಶಲ ವಿಭಾಗ ವತಿಯಿಂದ ದಸರಾ ವಸ್ತು ಪ್ರದರ್ಶನ-2015 ರ ಲಲಿತಕಲೆ ಮತ್ತು ಕರಕುಶಲ ಕಲಾ ವಿಭಾಗಕ್ಕೆ ಕಲಾಕೃತಿಗೆ ಅರ್ಜಿ ಆಹ್ವಾನಿಸಿದೆ.  
    ದಿನಾಂಕ 26.10.2015 ರಿಂದ 03.11.2015 ರವರೆಗೆ ಕನ್ನಡ ಕಾರಂಜಿ ಕಟ್ಟಡದಲ್ಲಿರುವ ಲಲಿತಕಲಾ ವಿಭಾಗಕ್ಕೆ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕಲಾಕೃತಿಗಳನ್ನು ನೀಡಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಹಾಗೂ ಕಲಾಕೃತಿಗಳನ್ನು ನವೆಂಬರ್ 3 ರಂದು  ಮಧ್ಯಾಹ್ನ 2-30 ಗಂಟೆಯೊಳಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಲಲಿತಕಲೆ ಮತ್ತು ಕರಕುಶಲ ವಿಭಾಗಕ್ಕೆ ನೀಡಬೇಕೆಂದು ಲಲಿತಕಲೆ ಮತ್ತು ಕರಕುಶಲ ವಿಭಾಗದ ಸದಸ್ಯ ಕಾರ್ಯದರ್ಶಿ ಗಳು ಪ್ರಕಟಣೆಯಲ್ಲಿ ತಿಳಿಸಿದೆ.

ಬಾರಿಸು ಕನ್ನಡ ಡಿಂಡಿಮವ
ವಿಶೇಷ ಕಾರ್ಯಕ್ರಮ

ನವೆಂಬರ್ 1, 2015 ರಿಂದ ಬಾರಿಸು ಕನ್ನಡ ಡಿಂಡಿಮವ ಹೆಸರಿನಲ್ಲಿ ಪ್ರಚಾರಾಂದೋಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಬಾರಿಸು ಕನ್ನಡ ಡಿಂಡಿಮವ ಎಂಬ ಕುವೆಂಪು ಕವನಗಳ ಆಧಾರಿತ ವಿಡಿಯೋ ಕಳುಹಿಸಿಕೊಡಲಾಗುವುದು. ರಾಜ್ಯೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಲು ಅಗತ್ಯ ಕ್ರಮ ವಹಿಸುವುದು. ವಿಡಿಯೋ ಪ್ಲೇ ಮಾಡಲು ಅಗತ್ಯವಿರುವ ವಿಡಿಯೋ ವಾಲ್ ಅನ್ನು ಸಮಾರಂಭದ ಸ್ಥಳದಲ್ಲಿ ಅಳವಡಿಸಲು ಕ್ರಮ ವಹಿಸುವುದು.
ಕನ್ನಡ ಸಂಸ್ಕøತಿ ಏಳಿಗೆಗಾಗಿ ಸರ್ಕಾರ ರೂಪಿಸಿರುವ ಕ್ರಮಗಳ ಕಿರು ಹೊತ್ತಿಗೆಯನ್ನು ಕೇಂದ್ರ ಕಚೇರಿಯಿಂದ ಕಳುಹಿಸಲಾಗುವುದು ಇದರ ಬಿಡುಗಡೆಗೆ ಕ್ರಮ ವಹಿಸುವುದು. ಇಲಾಖೆಯ ಕ್ಷೇತ್ರಪ್ರಚಾರ ವಾಹನದ ವಿನ್ಸಾಸ ಕಳುಹಿಸಲಾಗುವುದು. ವಿನ್ಯಾಸದಂತೆ ವಾಹನ ಸಿದ್ದಪಡಿಸಿ ನವೆಂಬರ್ 2 ರಂದು ರಾಜ್ಯೋತ್ಸವ ಸಮಾರಂಭದಲ್ಲಿ ಚಾಲನೆ ನೀಡಲು ವ್ಯವಸ್ಥೆ ಮಾಡುವುದು.
ಜಿಲ್ಲಾದ್ಯಾಂತ 20 ದಿನಗಳ ಕಾಲ ಕಾರ್ಯಕ್ರಮ ಏರ್ಪಡಿಸಲು ವ್ಯವಸ್ಥೆ ಮಾಡುವುದು.
ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ಕಾರ್ಯಕ್ರಮ ಈಗಾಗಲೇ ಪೂರ್ಣಗೊಂಡಿದ್ದಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮದ ಜತೆಗೆ ಡಿಸೆಂಬರ್ ತಿಂಗಳ ಕಾರ್ಯಕ್ರಮ ಜೋಡಿಸಿಕೊಳ್ಳುವುದು.
ನವೆಂಬರ್ ತಿಂಗಳ ಕಾರ್ಯಕ್ರಮವನ್ನು ಹಿಂದೂಡಿ ಈಗಾಗಲೇ ಕಾರ್ಯಕ್ರಮ ಏರ್ಪಡಿಸಿರುವವರುಈ ಕಾರ್ಯಕ್ರಮಕ್ಕೆ  ಏರ್ಪಡಿಸಿರುವ ವಿಶೇಷ ಅನುದಾನದಲ್ಲಿ ಡೀಸಲ್ ವೆಚ್ಚ ಭರಿಸಿಕೊಂಡು ಡಿಸೆಂಬರ್ ತಿಂಗಳ ಕಾರ್ಯಕ್ರಮ ಹಿಂದೂಡಿ ಕಾರ್ಯಕ್ರಮ ಏರ್ಪಡಿಸುವುದು. ಈ ಸಂದರ್ಭದಲ್ಲಿ 10 ದಿನ ಸಂಗೀತ 10 ದಿನ ಬೀದಿನಾಟಕ ಏರ್ಪಡಿಸುವುದು.
ಈ ಕಾರ್ಯಕ್ರಮಕ್ಕಾಗಿ 50,000 ರೂ. ವಿಶೇಷ ಅನುದಾನ ಒದಗಿಸಲಾಗುವುದು.


Sunday, 18 October 2015

ಭೂಮಿ-ಆಕಾಶದಲ್ಲಿ ಸೀರೆಗಳ ರಾಣಿ

ಭೂಮಿ-ಆಕಾಶದಲ್ಲಿ ಸೀರೆಗಳ ರಾಣಿ
ಮೈಸೂರ್ ಸಿಲ್ಕ್ ಸೀರೆ : ಡಿ. ಬಸವರಾಜ
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ತನ್ನ ಶ್ರೇಷ್ಟ ಉತ್ಪನ್ನವಾದ ಮೈಸೂರು ಶಿಲ್ಕ್ ಸೀರೆ ಹಾಗೂ ಉತ್ಪನ್ನಗಳನ್ನು 2014-15ನೇ ಸಾಲಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟ ಮಾಡಿದ್ದು, 146.42 ಕೋಟಿ ರೂ. ವಹಿವಾಟು ನಡೆಸಿದ್ದು, 27 ಕೋಟಿ ರೂ. ಲಾಭವನ್ನು ಗಳಿಸಿದೆ. 75 ಸಾವಿರ ಸೀರೆಗಳನ್ನು ಮಾರಾಟ ಮಾಡಿರುವುದಲ್ಲದೇ, ಏರ್ ಇಂಡಿಯಾ ಸಂಸ್ಥೆಯ ಗಗನ ಸಖಿಯರಿಗೆ 10 ಸಾವಿರ ಸೀರೆಗಳನ್ನು ಮಾರಾಟ ಮಾಡಿ, ದಾಖಲೆಯನ್ನು ನಿರ್ಮಿಸಿದೆ. ಭೂಮಿ ಮತ್ತು ಆಕಾಶದಲ್ಲಿ ಸೀರೆಗಳ ರಾಣಿ, “ಮೈಸೂರು ಸಿಲ್ಕ್ ಸೀರೆ” ಎಂದು ಕೆ.ಎಸ್.ಐ.ಸಿ. ಅಧ್ಯಕ್ಷ ಡಿ. ಬಸವರಾಜ ಬಣ್ಣಿಸಿದರು.
ಅವರು ಇಂದು ದಾವಣಗೆರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ವಿವರಣೆ ನೀಡಿದರು. ಅಪ್ಪಟ ರೇಷ್ಮೆ, ಅಪ್ಪಟ ಚಿನ್ನದಿಂದ ಉತ್ಪಾದಿಸಲಾಗುವ ಮೈಸೂರು ಶಿಲ್ಕ್ ಸೀರೆಗಳು ಹಾಗೂ ಅದರ ಉತ್ಪನ್ನಗಳು ಮೈಸೂರು ಸಿಲ್ಕ್ ಅಧಿಕೃತ ಮಳಿಗೆಗಳನ್ನು ಬಿಟ್ಟು ಬೇರೆ ಎಲ್ಲೂ ಮಾರಾಟ ಮಾಡಲಾಗುವುದಿಲ್ಲ. ಕೆಲವು ಬಟ್ಟೆ ಅಂಗಡಿಗಳಲ್ಲಿ ಮೈಸೂರು ಸಿಲ್ಕ್ ಎಂದು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರು ಎಚ್ಚರದಿಂದ ಇರಬೇಕೆಂದು ವಿನಂತಿಸಿದರು.
ಮೈಸೂರು ಸಿಲ್ಕ್ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಸಾರ್ವಜನಿಕ ಉದ್ಯಮಗಳ ಪೈಕಿ, ಶತಮಾನ ಪೂರೈಸಿರುವ ಪ್ರಪ್ರಥಮ ಸಂಸ್ಥೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವಾಗಿದೆ. ಶತಮಾನ ಪೂರೈಸಿರುವ ಸವಿನೆನಪಿಗಾಗಿ ಭಾರತ ಸರ್ಕಾರದ ಅಂಚೆ ಇಲಾಖೆ ಮೈಸೂರು ಅರಮನೆ ಮತ್ತು ಮೈಸೂರು ಸಿಲ್ಕ್ ಚಿಹ್ನೆ ಹೊಂದಿರುವ ಅಂಚೆ ಚೀಟಿ ಹಾಗೂ ಕವರ್‍ಗಳನ್ನು ನಿನ್ನೆ ತಾನೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಕೌಶಿಕ್ ಮುಖರ್ಜಿ ಅವರು ಬಿಡುಗಡೆಗೊಳಿಸಿದರು. ಕೆ.ಎಸ್.ಐ.ಸಿ.ಗೆ ಇದು ಹೆಮ್ಮೆಯ ವಿಚಾರವಾಗಿದೆ.
ಮೊನ್ನೆ ತಾನೇ ವಿಂಟೇಜ್ ಸೀರೆಗಳ ಸ್ಪರ್ಧೆಗಳನ್ನು ಕೆ.ಎಸ್.ಐ.ಸಿ. ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 126 ಸ್ಪರ್ಧಿಗಳ ಪೈಕಿ 3 ಜನರಿಗೆ ತಲಾ 15 ಸಾವಿರ ರೂ., 25 ಜನರಿಗೆ ತಲಾ 1,500 ರೂ. ಬಹುಮಾನ ನೀಡಲಾಯಿತು. 60 ವರ್ಷಗಳಾದರೂ ಹೊಚ್ಚ ಹೊಸ ಸೀರೆಯಂತೆ ಗ್ರಾಹಕರು ಮೈಸೂರು ಸಿಲ್ಕ್ ಸೀರೆಗಳನ್ನು ಕಾಪಾಡಿಕೊಂಡು ಬಂದಿದ್ದರು. ಅಂತಹವರನ್ನು ಗುರುತಿಸಿ ಬಹುಮಾನ ನೀಡಲಾಯಿತು ಎಂದು          ಡಿ. ಬಸವರಾಜ ತಿಳಿಸಿದರು.

Friday, 16 October 2015

ಗಾಳಿ ಪಟ ಸ್ಪರ್ಧೆ
     ಮೈಸೂರು,ಅ.15.-ಮೈಸೂರು ದಸರಾ ಮಹೋತ್ಸವ-2015ರ ಅಂಗವಾಗಿ ದಿನಾಂಕ                17-10-2015 ಮತ್ತು 18-10-2015 ರಂದು ಗಾಳಿಪಟ ಸ್ಪರ್ಧೆ ಲಲಿತ್‍ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯಲಿದೆ.
     ಶಾಸಕ ಎಂ.ಕೆ. ಸೋಮಶೇಖರ್, ತನ್ವೀರ್‍ಸೇಠ್, ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು, ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಗಾಳಿಪಟ ಸ್ಪರ್ಧೆಯನ್ನು ಅಕ್ಟೋಬರ್ 17 ರಂದು  ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ಈ ಗಾಳಿಪಟ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಬಹುದಾಗಿದ್ದು, ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಈ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಾಳುಗಳು ಅಕ್ಟೋಬರ್ 17 ರ ಬೆಳಿಗ್ಗೆ 9 ಗಂಟೆಯೊಳಗಾಗಿ ಲಿಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.
     ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179,  9343777797 ನ್ನು ಸಂಪರ್ಕಿಸುವುದು.

ಚಿತ್ರಕಲಾ ಪ್ರದರ್ಶನ : ಬಹುಮಾನ ಪ್ರಕಟ
      ಮೈಸೂರು,ಅ.16.ಮೈಸೂರು ದಸರಾ ಮಹೋತ್ಸವ-2015ರ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ದಿ.14.10.2015 ರಿಂದ 21.10.2015ರವರೆಗೆ ಆಯೋಜಿಸಲಾಗಿರುವ ಚಿತ್ರಕಲಾ ಪ್ರದರ್ಶನದಲ್ಲಿ ಬಹುಮಾನಕ್ಕಾಗಿ ಆಯ್ಕೆಯಾದ ಕಲಾವಿದರ ಹೆಸರು ಪ್ರಕಟವಾಗಿರುತ್ತದೆ.  ಚಿತ್ರಕಲೆಯಲ್ಲಿ ಸುರೇಶ್ ಕೆ. ಹಾಗೂ ಆರ್.ಎಸ್.ಬಿ.ಆಗ್ನಿ ಹೋತ್ರಿ, ಶಿಲ್ಪಕಲೆಯಲ್ಲಿ ಬಸವರಾಜು ಹಾಗೂ ಅದಿತ್ಯ ಜೈನ್, ಗ್ರಾಫಿಕ್ಸ್‍ನಲ್ಲಿ ಪೂರ್ಣಿಮ ಎನ್. ಹಾಗೂ ಅಸ್ಬ ಅಹಮ್ಮದ್, ಸಾಂಪ್ರದಾಯಿಕ ಚಿತ್ರದಲ್ಲಿ ಮುನ್ನಿ ಕೃಷ್ಣ ಆರ್. ಹಾಗೂ ಲಕ್ಷ್ಮೀ ನಾಗೇಶ್, ಕರಕುಶಲ ಕಲೆಯಲ್ಲಿ ರವಿಕುಮಾರ್ ಆರ್. ಹಾಗೂ ಸುಮಿತ್ರ ಪುಟ್ಟಿ, ಅನ್ವಯಕಲೆಯಲ್ಲಿ ರೇಷ್ಮ ರಾಣಿ ಹಾಗೂ ನಾಗಪ್ರಸಾದ್ ಮತ್ತು ಛಾಯಾಚಿತ್ರ ವಿಭಾಗದಲ್ಲಿ ಸುಮುಖ್ ಭಾರಧ್ವಜ್ ಹಾಗೂ ಅಚ್ಚುತ್ ಬಿ.ಎಸ್. ಬಹುಮಾನ ಪಡೆದಿರುತ್ತಾರೆ ಎಂದು ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಘು ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ
      ಮೈಸೂರು,ಅ.16. ಜಿಲ್ಲಾ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ  ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ   ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಲಘು ವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1000/- ತರಬೇತಿ ಭತ್ಯೆ ನೀಡಲಾಗುವುದು.
    ಅರ್ಜಿ ಸಲ್ಲಿಸುವವರು ಕನಿಷ್ಠ 21 ವರ್ಷ ವಯೋಮಿತಿ ಪೂರೈಸಿರಬೇಕು ವಾರ್ಷಿಕ ಆದಾಯ ಮಿತಿ - ಪ್ರವರ್ಗ-1 ಕ್ಕೆ ರೂ.2.50 ಲಕ್ಷಗಳು ಮತ್ತು ಪ್ರವರ್ಗ-2ಎ, 3ಎ ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.1.00 ಲಕ್ಷ ದೊಳಗಿರಬೇಕು. ಕೇಂದ್ರ ಮೋಟಾರ್ ವಾಹನ ನಿಯಮಾವಳಿಗಳು 1989 ನಿಯಮ 5ರಂತೆ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು.
     ಆಸಕ್ತರು ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಟ್ಟಡದ ಸಂಖ್ಯೆ: 43 (ಹೊಸ ನಂಬರು), 5ನೇ ಕ್ರಾಸ್, 2ನೇ ಮೇನ್, ಜಯನಗರ, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 31 ರೊಳಗಾಗಿ ಸಲ್ಲಿಸುವುದು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2342917ನ್ನು ಸಂಪರ್ಕಿಸುವುದು.
ಕಚೇರಿ ಸ್ಥಳಾಂತರ
    ಮೈಸೂರು,ಅ.16.ಸಾರ್ವಜನಿಕ ಕಚೇರಿಗಳ ಕಟ್ಟಡ, ನ್ಯೂ ಸಯ್ಯಾಜಿರಾವ್ ರಸ್ತೆ ಮೈಸೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿರುವ ಬೇಡನ್ ಪೋವೆಲ್ ಶಾಲೆಯ ಪಕ್ಕದ ಕೆ.ಎಸ್.ಐ.ಸಿ. ಕಟ್ಟಡಕ್ಕೆ ಅಕ್ಟೋಬರ್ 14 ರಂದು ಸ್ಥಳಾಂತರಗೊಂಡಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು,ಅ.16-ನಾಡಹಬ್ಬ ಮೈಸೂರು ದಸರಾ-2015ರ ಕವಿಗೋಷ್ಠಿ ಉಪಸಮಿತಿ ವತಿಯಿಂದ ದಸರಾ ಕವಿಗೋಷ್ಠಿ ಅಕ್ಟೋಬರ್ 19 ಹಾಗೂ 20 ರಂದು ನಡೆಯಲಿದೆ.
ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರಿನ ಪ್ರಸಿದ್ಧ ಕವಯತ್ರಿ ಡಾ. ಲತಾ ರಾಜಶೇಖರ್ ಅವರು ಉದ್ಘಾಟಿಸವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ತುಮಕೂರಿನ ಪ್ರಸಿದ್ಧ ಕವಿ ಪ್ರೊ. ಕೆ.ಬಿ. ಸಿದ್ದಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 19 ರಂದು ಬೆಳಿಗ್ಗೆ 10-30 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯಲ್ಲಿ ಮುಳ್ಳೂರು ಶಿವಮಲ್ಲು, ಜಡಿಯ ಗೌಡ, ಸುಂದರ ಕಲಿವೀರ, ಮಂಜುಳ ಸಿ. ಎಸ್., ಮದ್ದೂರು ದೊರೆಸ್ವಾಮಿ, ಶಂಕರ ಅಂಕನಶೆಟ್ಟಿಪುರ, ಅಪೂರ್ವ ಡಿ’ ಸಿಲ್ವ, ಅಂಕಮಣಿ, ಭೇರ್ಯ ರಾಮಕುಮಾರ್, ತ.ರಾ. ಸುಮ ಹಾಗೂ ಹಾರೋಹಳ್ಳಿ ರವೀಂದ್ರ, ನಾಗರಾಜ ಮೂರ್ತಿ ಎಂ., ರವೀಂದ್ರನಾಥ್ ಸಿ., ಸುಜಾತ ಬಿ., ಹೇಮಗಂಗ ಎ., ಸೋಮಣ್ಣ ಜೆ., ಮಿಲನ ಕೆ. ಭರತ್, ಹಂಚೆಟ್ಟರ್ ಫ್ಯಾನ್ಸಿ ಮುತ್ತಣ್ಣ, ಆಶೈ ಕೆ.ಎ., ಸ್ಪೂರ್ತಿ ಹರವು, ಕೆ.ಆರ್. ಪೇಟೆ ಧನಲಕ್ಷ್ಮಿ, ಕೃಷ್ಣ ಸ್ವರ್ಣಸಂದ್ರ, ಸುಮಾರಾಣಿ ಪಿ., ಶರ್ಮಿಳ ಎಸ್.ಎ., ಪ್ರಭಾಮಣಿ ನಾಗರಾಜ್, ಬಿಚನಹಳ್ಳಿ ಕೃಷ್ಣಪ್ಪ, ನಾಗರಾಜ್ ಹೆತ್ತೂರು, ಸವಾಲ್ ಬೇಲೂರು ಮತ್ತು ಸಂಘಮಿತ್ರ  ಅವರುಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನ ಹಿರಿಯ ಕವಿ ಕೆ.ಸಿ. ಶಿವಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪುರದ ಪ್ರಸಿದ್ಧ ಕವಿ ರಂಜಾನ್ ದರ್ಗಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 19 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಉಳುವ ಯೋಗಿ : ಬದುಕು-ಬವಣೆ ವಿಚಾರಗೋಷ್ಠಿಯಲ್ಲಿ ಕಲಬುರ್ಗಿಯ ಹಿರಿಯ ಜಾನಪದ ವಿದ್ವಾಂಸ ಡಾ. ವೀರಣ್ಣ ದಂಡೆ ಅವರು ಜನಪದ ಸಾಹಿತ್ಯ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಜೆ.ಎಂ. ನಾಗಯ್ಯ ಅವರು ಶಾಸನ ಮತ್ತು ಪ್ರಾಚೀನ ಕಾವ್ಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಜೀನ ಸಹ ಪ್ರಾಧ್ಯಾಪಕಿ ಡಾ. ಎಂ.ಪಿ. ರೇಖಾ ಅವರು ವಚನ ಸಾಹಿತ್ಯ ಮತ್ತು ಸರ್ವಜ್ಞನ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಬೆಂಗಳೂರಿನ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಕಲ್ಗುಡಿ ಅವರು ಆಧುನಿಕ ಸಾಹಿತ್ಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ.
ಮೈಸೂರಿನ ವಿಶ್ರಾಂತ ಕುಲಪತಿ ಪ್ರೊ. ಹೆಚ್.ಕೆ. ಲಕ್ಕಪ್ಪಗೌಡ ಅವರು ಆಶಯ ನುಡಿಯುವರು. ಮೈಸೂರಿನ ಹಿರಿಯ ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕೆ.ಸಿ. ಬಸವರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 20 ರಂದು ಬೆಳಿಗ್ಗೆ 10-30 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ನಡೆಯಲಿರುವ  ಕೃಷಿ ಕಾವ್ಯಸಿರಿ ಕವಿಗೋಷ್ಠಿಯಲ್ಲಿ ಗಂಗನಪಳ್ಳಿ ಎಂ.ಜಿ., ಭಾಸ್ಕರ್ ಟಿ.ಎಂ., ಮಲ್ಲಿಕಾರ್ಜುನ ಮೇತ್ರಿ, ವೆಂಕಮ್ಮ ಎನ್.ಡಿ., ಯಾಕೊಳ್ಳಿ ವಾಯ್ ಎಂ., ಮೆಹಬೂಬಿ ಶೇಟ್, ಚೆನ್ನಪ್ಪ ಅಂಗಡಿ, ಚಿದಾನಂದ ಸಾಲಿ, ರಮೇಶ್ ಗಬ್ಬೂರು, ಲಲಿತಾ ಹೊಸಪೇಟೆ, ಅರ್ಜುನ ಗೊಳಸಂಗಿ, ದುಂಡಿರಾಜ್ ಎಚ್., ಪಾಟೀಲ ಚಂ.ಸು., ಅರುಂಧತಿ ರಮೇಶ್, ಪಾಶ ಶಿ. ಜು., ನರಸಿಂಹಪ್ಪ ಕೆ., ಪವಾರ್ ಕೆ.ಬಿ., ರಾಮದಾಸ್, ಸಿದ್ಧಾಶ್ರಮ ಸಿ.ಪಿ., ಪ್ರಶಾಂತ ನಾಯಕ್, ಐಷಾ ಯು.ಕೆ.(ಬ್ಯಾರಿ), ಸತೀಶ್  ಜವರೇಗೌಡ, ಜರನಗಹಳ್ಳಿ ಶಿವಶಂಕರ್, ಶಿವನಂಜಯ್ಯ ಎಂ., ವಿಜಯರಾಘವನ್ ಆರ್., ಕಾಗತಿ ವಿ. ವೆಂಕಟರತ್ನಂ, ಚಿಕ್ಕಮಗಳೂರಿನ ಗಣೇಶ್, ಚನ್ನೇಗೌಡ ಎನ್.ಎಲ್., ಮಹಾಲಿಂಗಪ್ಪ ಎಲ್., ತ್ಯಾಮಗೊಂಡ್ಲು ಅಂಬರೀಷ್, ಜ್ಯೋತಿ ಚೆಲೈರು, ಸುಕನ್ಯಾ ಕಳಸ, ಸರ್ದಾರ್ ಅಯಾಗ್(ಉರ್ದು), ಹಾಗೂ ಐತಿಚಂಡ ರಮೇಶ್(ಕೊರವ) ಅವರುಗಳು ಭಾಗವಹಿಸುವರು.
ಬೆಂಗಳೂರಿನ ಪ್ರಸಿದ್ಧ ಕವಯತ್ರಿ ನಾಡೋಜ ಡಾ. ಕಮಲಾ ಹಂಪನಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಗ್ನಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತರಬೇತಿ
      ಮೈಸೂರು,ಅ.16.ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖಾ ವತಿಯಿಂದ ಮೈಸೂರು ನಗರದ ಹೆಬ್ಬಾಳ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ದಿನಾಂಕ 29-10-2015 ರಿಂದ 31-10-2015 ರವರೆಗೆ 03 ದಿವಸಗಳ ಅಗ್ನಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತರಬೇತಿ ನಡೆಯಲಿದೆ.
     ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯ ಪೆಟ್ರೋಲ್ ಬಂಕ್, ಪಟಾಕಿ, ಸ್ಪೋಟಕ ದಾಸ್ತಾನುಗಾರರು, ಶಾಲಾ ಕಾಲೇಜು ಶಿಕ್ಷಕರು, ಕಾರ್ಖಾನೆ, ಮಾಲ್‍ಗಳು, ಆಸ್ಪತ್ರೆ ಸಿಬ್ಬಂದಿಗಳು ಇತ್ಯಾದಿ ಸಂಸ್ಥೆಯವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
     ತರಬೇತಿಗೆ ಹಾಜರಾಗಲು ಇಚ್ಚಿಸುವವರು ಜಿ.ಈಶ್ವರ್‍ನಾಯ್ಕ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಮೈಸೂರು ವಲಯ, ಮೊಬೈಲ್ ನಂ- 8277007351, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ - ದೂರವಾಣಿ ಸಂಖ್ಯೆ:- 0821-2540116 ಹಾಗೂ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ಕಚೇರಿ, ಮೈಸೂರು ವಲಯ, ಸರಸ್ವತಿಪುರಂ ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.

ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ ಅರ್ಹತಾ ದಿನಾಂಕ 1ನೇ ನವೆಂಬರ್ 2015
ದಿನಾಂಕ 01.11.2015 ಕ್ಕೆ ಮೊದಲು ಕನಿಷ್ಠ 3 ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೋಬ್ಬ ವ್ಯಕ್ತಿಯು ಮತದಾರರ ಪಟ್ಟಿಗಳಲ್ಲಿ ಹೆಸರುಗಳನ್ನು ದಕ್ಷಿಣ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗಳಿಗೆ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರ್ನಾಟಕ ವಿಧಾನ ಪರಿಷತ್‍ನ ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ ಅರ್ಹತಾ ದಿನಾಂಕ 01-11-2015ರ  ಕಾರ್ಯಕ್ರಮವನ್ನು ದಿನಾಂಕ 01.10.2015 ರಿಂದ 16.11.2015 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಪರಿಷ್ಕರಣೆಯ ವೇಳಾಪಟ್ಟಿಯು ಈ ಕೆಳಕಂಡಂತೆ ಇರುತ್ತದೆ.

ಕ್ರ.ಸಂ
ಪರಿಷ್ಕರಣೆಯ ಚಟುವಟಿಕೆಗಳು
ಅವಧಿ
1
ಮತದಾರರಿಂದ ಎಪಿಕ್ ಸಂಖ್ಯೆಗಳನ್ನು ಸಂಗ್ರಹಿಸುವುದು.
20.09.2015 (ಭಾನುವಾರ) ರಿಂದ
24.09.2015 (ರವರೆಗೆ)
2
ಮತದಾರರ ಪಟ್ಟಿಗಳ ಗಣಕೀಕರಣ
28.09.2015 (ಸೋಮವಾರ) ದವರೆಗೆ
3
ಮತದಾರರ ಪಟ್ಟಿಗಳನ್ನು ಒಟ್ಟುಗೂಡಿಸುವುದು.
28.09.2015 (ಸೋಮವಾರ) ದವರೆಗೆ
4
ಕರಡು ಮತದಾರರ ಪಟ್ಟಿಗಳ ಮುದ್ರಣ
30.09.2015 (ಬುಧವಾರ) ದವರೆಗೆ
5
ಕರಡು ಮತದಾರರ ಪಟ್ಟಿಗಳ ಪ್ರಕಟಣೆ ಹಾಗೂ ಸಾರ್ವಜನಿಕ ತಿಳುವಳಿಕೆಯನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವುದು.
01.10.2015 (ಗುರುವಾರ)
6
ಹಕ್ಕು ಮತ್ತು ಆಕ್ಷೇಪಣೆಗಳನ್ನು (ನಮೂನೆ 18/19) ಗಳನ್ನು ಸ್ವೀಕೃರಿಸುವುದನ್ನು ಪ್ರಾರಂಭಿಸುವುದು.
01.10.2015 (ಗುರುವಾರ) ದಿಂದ
7
ಮೊದಲ ಬಾರಿಗೆ ಸಾರ್ವಜನಿಕ ತಿಳುವಳಿಕೆಯನ್ನು ದಿನಪತ್ರಿಕೆಗಳಲ್ಲಿ ಮರುಪ್ರಕಟಿಸುವುದು.
15.10.2015 (ಗುರುವಾರ)
8
ಎರಡನೇ ಬಾರಿಗೆ ಸಾರ್ವಜನಿಕ ತಿಳುವಳಿಕೆಯನ್ನು ದಿನಪತ್ರಿಕೆಗಳಲ್ಲಿ ಮರುಪ್ರಕಟಿಸುವುದು.
25.10.2015 (ಭಾನುವಾರ)
9
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಅವಧಿ
01.10.2015 (ಗುರುವಾರ) ದಿಂದ 16.11.2015 (ಸೋಮವಾರ) ದವರೆಗೆ
10
ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದು
30.11.2015 (ಸೋಮವಾರ) ದವರೆಗೆ
11
ಪೂರಕ ಪಟ್ಟಿಗಳನ್ನು ತಯಾರಿಸುವುದು ಹಾಗೂ ಮತದಾರರ ಪಟ್ಟಿಗಳ ಮುದ್ರಣ
07.12.2015 (ಸೋಮವಾರ) ದವರೆಗೆ
12
ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆ
14.12.2015 (ಸೋಮವಾರ)

1 ಕರಡು ಮತದಾರರ ಪಟ್ಟಿಗಳನ್ನು (ಆಡಿಚಿಜಿಣ ಇಟeಛಿಣoಡಿಚಿಟ ಖoಟಟs) ದಿನಾಂಕ 01.10.2015 ರಂದು ಪ್ರಕಟಿಸಲಾಗಿದ್ದು. ನಂತರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಅವಧಿಯಲ್ಲಿ ಮೈಸೂರು ಜಿಲ್ಲೆಯ, ತಾಲ್ಲೂಕು ಕೇಂದ್ರಗಳಲ್ಲಿ ಸಂಬಂದಪsÀಟ್ಟ ತಹಶೀಲ್ದಾರ್‍ರವರ ಕಚೇರಿಗಳಲ್ಲಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
2 ಸದರಿ ದಕ್ಷಿಣ ಪದವೀಧರರ ಮತದಾರರ ಪಟ್ಟಿಗಳಲ್ಲಿ ಹೆಸರು ಇಲ್ಲದಿರುವವರು ಹಾಗೂ ಹೊಸದಾಗಿ ಸೇರ್ಪಡೆಗೆ ನಿಗದಿತ ನಮೂನೆಯಲ್ಲಿ (ಈoಡಿm-18) ಅರ್ಜಿಗಳನ್ನು ಅಗತ್ಯ ದಾಖಲಾತಿಗೊಂದಿಗೆ ತಮ್ಮ ಹತ್ತಿರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ನಿಯೋಜಿತ ಅಧಿಕಾರಿಗಳಿಗೆ ದಿನಾಂಕ 01.10.2015 ರಿಂದ ದಿನಾಂಕ 16.11.2015 ರವರೆಗೆ ಸಲ್ಲಿಸಬಹುದು. .

ಸಾರ್ವಜನಿಕರು ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಮೈಸೂರು ಮಹಾನಗರ ಪಾಲಿಕೆ ಕಚೇರಿ -
0821-2418860
ಉಪ ವಿಭಾಗಾಧಿಕಾರಿಗಳ ಕಚೇರಿ, ಮೈಸೂರು ಉಪ ವಿಭಾಗ, ಮೈಸೂರು
0821-2422100
ಉಪ ವಿಭಾಗಾಧಿಕಾರಿಗಳ ಕಚೇರಿ ಹುಣಸೂರು ಉಪ ವಿಭಾಗ, ಹುಣಸೂರು
08222-252073
ಮೈಸೂರು ತಾಲ್ಲೂಕು ಕಚೇರಿ
0821-2414811
ಪಿರಿಯಾಪಟ್ಟಣ ತಾಲ್ಲೂಕು ಕಚೇರಿ
08223-274175
ನಂಜನಗೂಡು ತಾಲ್ಲೂಕು ಕಚೇರಿ
08221-226002
ಕೆ.ಆರ್.ನಗರ ತಾಲ್ಲೂಕು ಕಚೇರಿ
08223-262371
ಟಿ.ನರಸೀಪುರ ತಾಲ್ಲೂಕು ಕಚೇರಿ
08227-261233
ಹುಣಸೂರು ತಾಲ್ಲೂಕು ಕಚೇರಿ
08222-252040


ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ
08228

Monday, 5 October 2015

ಶಾಸಕ ಜಿ.ಟಿ.ದೇವೇಗೌಡರಿಂದ ಭೂ ಒತ್ತುವರಿ: ನೊಂದ ರೈತನಿಂದ ಪ್ರತಿಭಟನೆ
ಮೈಸೂರು: ಶಾಸಕ ಜಿ.ಟಿ.ದೇವೇಗೌಡರು ತಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿ ನೊಂದ ರೈತ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ನೊಂದ ರೈತ ರಟ್ನಹಳ್ಳಿ ಗ್ರಾಮದ ನಿವಾಸಿ ಸುಬ್ಬೇಗೌಡ ಹಾಗೂ ಆತನ ಕುಟುಂಬದವರು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮೈಸೂರು ತಾಲೂಕು ಇಲವಾಲ ಹೋಬಳಿಯ ರಟ್ನಹಳ್ಳಿ ಗ್ರಾಮದ ಸರ್ವೆ ನಂ 52 ರಲ್ಲಿ 338 ಎಕರೆ ಜಮೀನು ಎಂ.ಆರ್. ನಂ 5/98-99 ರ ಪ್ರಕಾರ ನನ್ನ ಸ್ವಾಧೀನಾನುಭವದಲ್ಲಿರಬೇಕು, ಆದರೆ 3.38 ಎಕರೆ ಪ್ರದೇಶದಲ್ಲಿ ಕೇವಲ 1.38 ಎಕರೆ ಮಾತ್ರ ನನ್ನ ಸ್ವಾಧೀನಾನುಭವದಲ್ಲಿದೆ. ಇನ್ನು ಇದೇ ಗ್ರಾಮದ ಸರ್ವೆ ನಂ 178 ರಲ್ಲಿ 2.20 ಎಕರೆ ಜಮೀನು ನನ್ನ ಮಗ ಎಸ್.ಆರ್. ರವಿಕುಮಾರ್ ಹೆಸರಿನಲ್ಲಿದೆ. ದಾಖಲಾತಿಗಳಲ್ಲಿ 2.20 ಎಕರೆ ಜಮೀನು ನನ್ನ ಮಗನ ಹೆಸರಿನಲ್ಲಿದೆ. ಆದರೆ ವಾಸ್ತವವಾಗಿ ನನ್ನ ಮಗನಿಗೆ ಜಮೀನು ಲಭ್ಯವಿಲ್ಲ, ನಮ್ಮೀಬ್ಬರಿಗೆ ಸೇರಿದ ಒಟ್ಟು 4.20 ಎಕರೆ ಜಮೀನು ಕೈತಪ್ಪಿ ಹೋಗಿದೆ. ಇದು ಪ್ರಭಾವಿ ರಾಜಕಾರಣಿ, ಶಾಸಕರೂ ಆದ ಜಿ.ಟಿ.ದೇವೇಗೌಡರ ಪಾಲಾಗಿದೆ. ನಮ್ಮ ಜಮೀನಿನನ್ನು ಅವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಎಷ್ಟೇ ಮನವಿ ಮಾಡಿದರೂ ನಮಗೆ ಬಿಟ್ಟು ಕೊಡುತ್ತಿಲ್ಲ, ಕೇಳಿದರೆ ದೌರ್ಜನ್ಯ ನಡೆಸಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಸಂಸಾರವನ್ನು ಬೀದಿಗೆ ನೂಕಿದ್ದಾರೆ. ಅವರಿಂದ ಆಗಿರುವ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿ, ಕಂದಾಯ ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆದ ಕಾರಣ ನನಗೆ ನ್ಯಾಯ ದೊರಕಿಸಿಕೊಡಬೇಕು, ಅಲ್ಲಿಯ ತನಕ ಧರಣಿಯನ್ನು ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.  

Sunday, 4 October 2015

ಮಂಡ್ಯ: ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಮಾಡಲು ಯುವ ಸಂಘಟನೆಗಳು ಮುಂದಾಗಬೇಕು ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್ ತಿಳಿಸಿದರು.
ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಜಿಲ್ಲಾ ಯುವ ಪರಿಷತ್ ವತಿಯಿಂದ ನಡೆದ ಯುವ ಕಲ್ಯಾಣ ನಿಧಿ ಸದಸ್ಯತ್ವ ನೋಂದಾವಣಿ ಆಂದೋಲನ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ಡಾ. ಎಚ್.ಪಿ. ಮಂಜುಳಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಅನಕ್ಷರತೆ, ದುಷ್ಚಟಗಳನ್ನು ನಿರ್ಮೂಲನೆ ಮಾಡಲು ಯುವ ಮನಸ್ಸುಗಳು ಮುಂದಾಗಬೇಕಿದೆ. ಈ ಸಂಬಂಧ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಯುವ ಸಂಘಟನೆಗಳ ಬಲವರ್ಧನೆಗೆ ನಮ್ಮೂರ ಶಾಲೆಗೆ ನಮ್ಮೂರು ಯುವಜನರು, ಯುವಚೇತನ, ಯುವ ಕ್ರೀಡಾ ಮತ್ತು ಯೋಜನೆಯನ್ನು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿದೆ ಎಂದು ತಿಳಿಸಿದರು.
ಸಾಮಾಜಿಕ ಮೌಲ್ಯಗಳನ್ನು ಕಾಪಾಡಲು ಯುವಜನರಿಗೆ ಹಲವು ರೀತಿಯ ತರಬೇತಿಗಳನ್ನು ರೂಪಿಸಿದೆ. ಯುವ ಕಲ್ಯಾಣ ಕಾರ್ಯಕ್ರಮಗಳನ್ನು ಸಾರ್ವತ್ರೀಕರಣಗೊಳಿಸಲು ಚುನಾಯಿತ ಪ್ರತಿನಿಧಿಗಳು ಮತ್ತು ಯುವ ಸಂಘಟನೆಗಳು ಮುಂದಾಗಬೇಕಿದೆ ಎಂದರು.
 ಪಾಂಡವಪುರ ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜು, ಯುವ ಪರಿಷತ್‍ನ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಯುವಜನರಿಗೆ ಉತ್ತೇಜನ ನೀಡಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಯುವ ಸಂಘಟನೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು.
ಪ್ರಸ್ತುತ ಯುವಜನರಲ್ಲಿ ನಕಾರಾತ್ಮಕ ಧೋರಣೆ ಹೆಚ್ಚುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಯುವಜನರಿಗಾಗಿಯೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಯುವಜನರ ಸಬಲೀಕರಣಗೊಳ್ಳಲು ಮುಂದಾಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಯುವ ಪರಿಷತ್‍ನ ಅಧ್ಯಕ್ಷ ಮಂಗಲ ಎಂ. ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಕಲ್ಯಾಣ ನಿಧಿ ಬಗ್ಗೆ ಮಾಹಿತಿ ಹಾಗೂ ಯುವ ಸಂಘಟನೆಗಳ ಕುರಿತು ಮಾತನಾಡಿದರು.
ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದ ಶ್ರೀ ಸೋಮೇಶ್ವರ ಯುವ ಕಲಾ ಬಳಗದ ಸದಸ್ಯರು 5 ಸಾವಿರ ಹಣವನ್ನು ಯುವ ಕಲ್ಯಾಣ ನಿಧಿಗೆ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ಎಚ್.ಪಿ. ಮಂಜುಳಾ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸಂಸ್ಕøತಿ ಚಿಂತಕಿ ಡಾ. ಲೀಲಾ ಅಪ್ಪಾಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಬಾರ ನಿರ್ದೇಶಕ ಸ್ವಾಮಿ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ, ತಳಗವಾದಿ ನಾಗರಾಜು, ಬಿ.ಎಸ್. ಅನುಪಮ, ವಿಜಯಕುಮಾರ್, ಜಿ.ಎನ್. ಕೆಂಪರಾಜು, ಕೆ.ಸಿ. ಪ್ರಕಾಶ್, ಸಂತೆಕಸಲಗೆರೆ ಬಸವರಾಜು, ಬೇಲೂರು ಸೋಮಶೇಖರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅ. 9ರಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ತಾಲೂಕಿನ ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ ಸದಸ್ಯರನ್ನು ರಾಹುಲ್ ಗಾಂಧಿಯವರು ಭೇಟಿ ಮಾಡಿ ಸಾಂತ್ವನ ಹೇಳುವರು. ನಂತರ ವಿದ್ಯಾರ್ಥಿ ಮುಖಂಡರು, ರೈತರು ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದರು.
ಕೇಶಿಫ್ ವತಿಯಿಂದ ಮಂಡ್ಯ-ಗುಬ್ಬಿ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಂಡ್ಯ- ಮೇಲುಕೋಟೆ ರಸ್ತೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ. ಶೀಘ್ರ ಕೆಲಸ ಪ್ರಾರಂಭಿಸಬೇಕಾಗಿದ್ದು, ರಾಹುಲ್ ಗಾಂಧಿ ಭೇಟಿ ಹಾಗೂ ರಸ್ತೆ ಅಭಿವೃದ್ಧಿ ಕುರಿತಂತೆ ಪರಿಶೀಲನೆ ನಡೆಸಲು ತಾವು ಆಗಮಿಸಿದ್ದಾಗಿ ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ. ಸೋಮಶೇಖರ್, ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಅಧಿಕಾರಿಗಳಾದ ಶಂಕರ್, ಸಿ. ಮಾಧು, ಜನಾರ್ಧನ್ ಇತರರು ಇದ್ದರು.