Tuesday, 5 January 2016

ಮಂಡ್ಯ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಜಿಸ್ಟ್‍ರ ಸಂಘದ ವರ್ಷದ ಕ್ಯಾಲೆಂಡರ್ ಅನ್ನು ರಾಜ್ಯಾಧ್ಯಕ್ಷ ಪುಟ್ಟರಾಜು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ವೈದ್ಯರುಗಳು, ಶುಶ್ರೂಷಕಿಯರು ಸೇರಿದಂತೆ ಸಿಬ್ಬಂದಿಗಳ ಹೊಂದಾಣಿಕೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಭಿವೃದ್ಧಿ ಹೊಂದಿ, ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ವೃತ್ತಿಗೆ ಗೌರವ ಸ್ಥಾನ-ಮಾನ ಸಿಗಬೇಕಾಗಿದ್ದು, ಬೇಡಿಕೆಗಳನ್ನು ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಹೋರಾಟದಲ್ಲಿ ಮಂಡ್ಯ ಜಿಲ್ಲೆ ಗಮನ ಸೆಳೆಯುತ್ತಿದೆ. ಒಳ್ಳೆಯ ಸಂಘಟನಾ ಮನೋಭಾವ ಬೆಳೆಸಿಕೊಂಡು ಸಂಘಟನೆಗೆ ಶಕ್ತಿ ತುಂಬಿ ಸಂಘದ ಯಶಸ್ಸಿಗೆ ಹಾಗೂ ನ್ಯಾಯಬದ್ಧ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರನಾಗಪ್ಪ, ಜಿ.ಸಿ.ನಟರಾಜು, ಬಿ.ಟಿ.ಚಿಕ್ಕಣ್ಣ, ಪಿ.ಮಹೇಶ್, ಎಸ್.ಎಲ್.ದಿನೇಶ್ ಸೇರಿದಂತೆ ಇನ್ನಿತರರಿದ್ದರು.

No comments:

Post a Comment