Monday, 4 January 2016

ಮಂಡ್ಯ : ಗ್ರಾಮೀಣ ಕ್ರೀಡಾಕೂಟಗಳನ್ನು ಮರೆತುಹೋಗುತ್ತಿರುವ ಸಂದರ್ಭದಲ್ಲಿ ಟಿ.ಎಲ್. ಪುರುಷೋತ್ತಮ್ ಅವರ 9ನೇ ವರ್ಷದ ಸಂಸ್ಮರಣೆ ಪ್ರಯುಕ್ತ ನೇತಾಜಿ ಟ್ರಸ್ಟ್‍ನವರು ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಿ ಮತ್ತೆ ಈ ಆಟವನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಅಧ್ಯಕ್ಷ ಎಚ್.ವಿ. ಜಯರಾಂ ತಿಳಿಸಿದರು.
ನಗರದ ಗುತ್ತಲು ರಸ್ತೆಯಲ್ಲಿರುವ ಬೆನಕ ಸಮುದಾಯ ಭವನದಲ್ಲಿ ನೇತಾಜಿ ಟ್ರಸ್ಟ್ ಹಾಗೂ ಟಿ.ಎಲ್. ಪುರುಷೋತ್ತಮ್ ಅಭಿಮಾನಿ ಬಳಗದ ವತಿಯಿಂದ ನಡೆದ ವಿಶ್ವಮಾನವ ಕುವೆಂಪು ಅವರ ಜನ್ಮ ಸಂಭ್ರಮ ಹಾಗೂ ಟಿ.ಎಲ್. ಪುರುಷೋತ್ತಮ್ ಅವರ 9ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಟಿ.ಎಲ್. ಪುರುಷೋತ್ತಮ್ ಅವರು ನಗರಸಭಾಧ್ಯಕ್ಷರಾಗಿ ಸುಂದರ ನಗರ ನಿರ್ಮಾಣದ ಕನಸು ಕಂಡಿದ್ದರು. ರಸ್ತೆ, ಚರಂಡಿ, ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.
ಕ್ರೀಡಾಪಟುಗಳು ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕುವೆಂಪುರವರ ಪಂಚ ಮಂತ್ರಗಳಾದ ಮನುಜಪತ, ವಿಶ್ವಪತ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಇವುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ರೈತರು ಆಡಂಬರದ ಮದುವೆಗಳಿಗೆ ಮಾರುಹೋಗದೆ ಕುವೆಂಪುರವರ ಮಂತ್ರ ಮಾಂಗಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಎಂ. ಎಸ್. ಆತ್ಮಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಜಿ.ಮಾದೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‍ಐ ಬಿ.ಎಸ್. ಶಿವರುದ್ರ, ನಗರಸಭಾ ಸದಸ್ಯರಾದ ಟಿ.ಕೆ. ರಾಮಲಿಂಗಯ್ಯ, ರಫೀವುಲ್ಲಾ, ನೇತಾಜಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್, ಡಿ.ಎಸ್. ಮೋಹನ್, ಕೆ.ಸಿ. ಪ್ರಕಾಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.


ಮಂಡ್ಯ : ರಂಗಭೂಮಿ ಎಲ್ಲಾ ಕಲಾವಿದರಿಗೆ ತಾಯಿ ಬೇರು ಇದ್ದಂತೆ ಎಂದು ಸಾವಯವ ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಮಧುಚಂದನ್ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಕಾರಸವಾಡಿಯ ಸರ್ವಚೇತನ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಶಿವ ಹಾಗೂ ಕೃಷ್ಣ ಡ್ರಾಮಾ ಸೀನರಿ ವತಿಯಿಂದ ಶ್ರೀ ಶಿವಸೀನರಿಯ ಬೆಳ್ಳಿ ಹಬ್ಬದ ಅಂಗವಾಗಿ ಏಳು ದಿನಗಳ ರಾಜ್ಯ ಮಟ್ಟದ ಗ್ರಾಮೀಣ ನಾಟಕೋತ್ಸವ ಹಾಗೂ ರಂಗನಿರ್ದೇಶಕರುಗಳ ಸಮಾವೇಶ ಮತ್ತು ಅಭಿನಂದನಾ ಸಮಾರಂಭ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಲಿಂಗೇಗೌಡರಿಗೆ ಬೆಳ್ಳಿ ಕಿರೀಟಧಾರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಎಂದರೆ ಕೃಷಿ ಎನ್ನುವಂತಹ ಮಾತಿದೆ ಆದರೆ ಮಂಡ್ಯದಲ್ಲಿ ಇರುವಂತಹ ಕಲಾವಿದರು ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಚಿತ್ರರಂಗ, ಬಾಲಿವುಡ್, ಹಾಲಿವುಡ್ ಸೇರಿದಂತೆ ಎಲ್ಲಾ ರಂಗದಲ್ಲೂ ಮಂಡ್ಯದ ಜನ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಶೀಘ್ರ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಯನ್ನು ಮಂಡ್ಯದಲ್ಲಿ ಸ್ಥಾಪನೆ ಮಾಡುವಂತೆ ಶಿವಡ್ರಾಮಾ ಸೀನ್ಸ್ ಮಾಲೀಕ ಶಿವಲಿಂಗೇಗೌಡ ಅವರಿಗೆ ಸಲಹೆ ನೀಡಿದರು. ಮಂಡ್ಯದಲ್ಲಿ ಇದು ತುಂಬಾ ಅಗತ್ಯವಿದೆ ಎಂದರು.
ಹಿಂದೆ ರಂಗಭೂಮಿಯಲ್ಲಿ ಡಾ. ರಾಜ್‍ಕುಮಾರ್, ಕಲ್ಯಾಣ್‍ಕುಮಾರ್, ಲೀಲಾವತಿ ಯಂತಹ ಕಲಾವಿದರು ಒಮ್ಮೆ ಸಂಭಾಷಣೆಯನ್ನು ಒಂದು ಬಾರಿ ಹೇಳಿಕೊಟ್ಟರೆ ಸುಲಲಿತವಾಗಿ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದರು. ಆದರೆ ಇಂದು ಹತ್ತಕ್ಕಿಂತಲೂ ಹೆಚ್ಚು ಬಾರಿ ಹೇಳಿಕೊಟ್ಟರೂ ಇಂದಿನ ಕಲಾವಿದರಿಗೆ ಸಾಧ್ಯವಾಗುವುದಿಲ್ಲ. ಹಿಂದೆ ಇದ್ದಂತ ಶಕ್ತಿ ಇಂದು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿz್ದÉೀಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಮ್ಮ, ಸಾವಯವ ಕೃಷಿಕರ ಸಹಕಾರ ಸಂಘದ ಸಿಇಓ ಕಾರಸವಾಡಿ ಮಹದೇವು, ರಂಗಭೂಮಿ ಕಲಾವಿದ ಕಾಳೇನಹಳ್ಳಿ ಕೆಂಚೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ, ಗ್ರಾ.ಪಂ. ಸದಸ್ಯೆ ಮಮತಾ ರಮೇಶ್, ಮಾಜಿ ಸದಸ್ಯ ಆಟೋ ದೇವರಾಜು, ರಾಘವೇಂದ್ರ ಡ್ರಾಮಾ ಸೀನ್ಸ್ ಮಾಲೀಕ ನಾರಾಯಣಪ್ಪ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.


ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಕನ್ನಡಿಗ ನ್ಯಾಯಮೂರ್ತಿಗಳನ್ನೇ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಕೆ.ಟಿ. ಶಂಕರೇಗೌಡ, ಬಸವರಾಜು, ಭಾರತಿ, ಕಾಂತರಾಜು, ವೇಣು ಇತರರಿದ್ದರು. ಚಿತ್ರ-ಸಿದ್ದರಾಜು

ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕದಂಬ ಸೈನ್ಯ ವತಿಯಿಂದ ರಾಷ್ಟ್ರ ಕವಿ ಕುವೆಂಪುರವರ 111ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬೇಕ್ರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಸಿ. ಮಹದೇವು, ಯೋಗೇಶ್,ರಾಮಯ್ಯ, ಥಾಮಸ್ ಬೆಂಜಮಿನ್, ಎನ್. ರಾಜೇಗೌಡ ಇತರರಿದ್ದರು.

No comments:

Post a Comment