Friday, 29 January 2016

ಮತದಾರರ ಅಭಿಪ್ರಾಯ ಸಂಗ್ರಹಿಸಿ ಬಿಜೆಪಿ ಟಿಕೆಟ್
ಮಂಡ್ಯ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳ ಬಗ್ಗೆ ಆಯಾ ಕ್ಷೇತ್ರವಾರು ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಮುಖಂಡರಾದ ಪ್ರೊ. ಬಿ.ಶಿವಲಿಂಗಯ್ಯ ತಿಳಿಸಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ಮೂರು ಜಿಲ್ಲಾ ಪಂಚಾಯಿತಿ ಮತ್ತು 11 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬಗ್ಗೆ ಆಯಾ ಕ್ಷೇತ್ರದ ಮತದಾರರನ್ನು ಖುದ್ದು ಭೇಟಿ ಮಾಡಿ, ಸಭೆಯಲ್ಲಿ ಚರ್ಚಿಸಿ ಉತ್ತಮರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರದಿಂದಲೇ (ಜ.29) ಪ್ರಕ್ರಿಯೆ ಆರಂಭವಾಗಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಬಸರಾಳು, ಚಂದಗಾಲು, ಹಲ್ಲೇಗೆರೆ, ಬೇಬಿ, ಕೆರಗೋಡು, ಕೀಲಾರ, ಹೊಡಾಘಟ್ಟ, ಹುಲಿವಾನ ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಸಭೆ ನಡೆಸಿ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.
31ರ ಭಾನುವಾರ ಹನಕೆರೆ, ಬೂದನೂರು, ಸಾತನೂರು ತಾಪಂ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಮತದಾರರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಅಭ್ಯರ್ಥಿಗಳಿಗೇ ಟಿಕೆಟ್ ನೀಡುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಲ್ಲಿ ಖಾತೆ ತೆರೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇವೆ ಎಂದಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಮತದಾರರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಬೇಕೆಂದು ಪ್ರೊ. ಬಿ.ಶಿವಲಿಂಗಯ್ಯ ಅವರು ಮನವಿ ಮಾಡಿದ್ದಾರೆ.

ಮೈಸೂರು ಜ,30.ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸಿದ ಮಹಾತ್ಮ ಗಾಂಧಿ ಅವರು ಹುತಾತ್ಮರೂ ಹಾಗೂ ಮಹಾತ್ಮರೂ ಆಗಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪುರಸ್ಕøತರಾದ ಸುರೇಂದ್ರ ಕೌಲಗಿ ಹೇಳಿದರು.
ಇಂದು ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಮೈಸೂರು ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹುತಾತ್ಮ ದಿನದ ಅಂಗವಾಗಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ನಮ್ಮ ದೇಶವು ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟೀಷರ ಕಪಿಮುಷ್ಠಿಯಲ್ಲಿತ್ತು. ಅವರಿಂದ ದೇಶವನ್ನು ಬಿಡುಗಡೆಗೊಳಿಸಲು ಮಹಾತ್ಮ ಗಾಂದಿ ಅವರೊಂದಿಗೆ ಹೆಗಲಿಗೆ ಹೆಗಲು ನೀಡಿದ ಲಾಲಾ ಲಜಪತ್‍ರಾಯ್, ಸುಭಾಷ್ ಚಂದ್ರಬೋಸ್, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಇನ್ನಿತರೆ ದೇಶ ಪ್ರೇಮಿಗಳು, ಅವಿರತ ಹೋರಾಟ ನಡೆಸಿದ್ದರು. ಅವರುಗಳ ಈ ಹೋರಾಟದಿಂದಲೇ ನಮ್ಮ ದೇಶ ಸ್ವಾತಂತ್ರ್ಯ ಗಳಿಸಿತು ಎಂದ ಕೌಲಗಿ, ಇಂತಹ ಮಹಾನಿಯರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಗಾಂಧೀಜಿ ಅವರು ನಮ್ಮ ದೇಶ ಸ್ವಾತಂತ್ರ್ಯ ಪಡೆಯಬೇಕು ಜತೆಗೆ ಸ್ವತಂತ್ರ್ಯಾನಂತರ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂದು ಕನಸು ಕಂಡಿದ್ದರು. ಈ ಕನಸು ನನಸಾಗಿದ್ದರೂ ದೇಶವು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಲ್ಲಿ ಒಂದಾಗಬೇಕಾಗಿದೆ. ಈ ದಿಸೆಯಲ್ಲಿ ನಾವು ನಿಜವಾಗಿಯೂ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಗಾಂಧಿಜಿ ಅವರು ದೇಶದಲ್ಲಿ ಸಮಾನತೆ ಇರಬೇಕು. ಯಾವುದೇ ಹಂತದಲ್ಲಿಯೂ ತಾರತಮ್ಯ ಕಾಣಬಾರದು ಎಂಬ ಸರ್ವೋದಯ ಸಮಾಜ ನಿರ್ಮಾಣವಾಗಬೇಕೆಂದು ಬಯಸಿದ್ದರು. ಆದರೆ ದೇಶದಲ್ಲಿ ಇನ್ನೂ ಸಮಾನತೆ ಕಾಣದೆ ಎಲ್ಲಿ ನೋಡಿದರೂ ಬೇಧಭಾವ ಎದ್ದು ಕಾಣುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಹಾತ್ಮ ಗಾಂಧಿ ಅವರು ಹೊಂದಿದ್ದ ಭರವಸೆಗಳು ಕಮರುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇಂದು ವಿಶ್ವದಲ್ಲಿ ದೇಶದೇಶಗಳ ನಡುವೆ ಒಂದಲ್ಲಾ ಒಂದು ವಿಷಯದ ಬಗ್ಗೆ ಪೈಪೋಟಿಗಳು ನಡೆಯುತ್ತಲೇ ಇವೆ. ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ಧವು ಯಾವ ಕಾರಣದಿಂದಲೂ ಆರಂಭವಾಗಬಹುದು. ನಮ್ಮ ದೇಶದ ನೆರೆಯ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳು ದಾಸ್ತಾನುಗೊಂಡಿರುವುದು ಇದಕ್ಕೆ ಇಂಬು ನೀಡಿದಂತಿದೆ. ಮಹಾತ್ಮ ಗಾಂದಿ ಶಾಂತಿ ಪ್ರಿಯರಾಗಿದ್ದರು. ಅವರು ಬಯಸಿದ್ದ ಶಾಂತಿಯುತ ವಾತಾವರಣ ವಿಶ್ವಾದ್ಯಂತ ಕಾಣಬೇಕೆಂಬುದೇ ನಮ್ಮೆಲ್ಲರ ಆಶಯ. ಈ ದಿಸೆಯಲ್ಲಿ ಇಂದಿನ ಯುವ ಜನತೆ ಮಹಾತ್ಮ ಗಾಂದಿ ಅವರಂತೆಯೇ ಮಹಾತ್ಮರಾಗುವತ್ತ ಗಮನ ಹರಿಸಿದ್ದಲ್ಲಿ ಮಾತ್ರ ವಿಶ್ವದಲ್ಲಿ ಶಾಂತಿ ಕಾಣಬಹುದಾಗಿದ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂದಿ ಅವರ ಅತ್ಯಂತ ಪ್ರಿಯವಾದ ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ ಎಂಬ ಗೀತೆಯನ್ನು ಇದೇ ಸಂದರ್ಭದಲ್ಲಿ ಹಾಡುವ ಮೂಲಕ ಗಾಂಧಿ ಅವರ ನೆನಪಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾಣ ಮತ್ತು ಸತ್ರ ನ್ಯಾಯಾದೀಶರಾದ ಕೆ.ಎಸ್.ಮುದಗಲ್, ಹಿರಿಯ ವಕೀಲ ಮಾಜಿ ಶಾಸಕ ಎಚ್.ಗಂಗಾಧರನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಮೌಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.
------------- 

Wednesday, 27 January 2016

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಕಲ ಸಿದ್ಧತೆ


ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಕಲ ಸಿದ್ಧತೆ
     ಮೈಸೂರು,ಜ.27.-ಮೈಸೂರು ನಗರದÀಲ್ಲಿ ಇದೇ ಪ್ರಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಆಯೋಜಿಸಲಾಗಿದ್ದು, ಗುರುವಾರದಿಂದ ಪ್ರಾರಂಭವಾಗುವ ಚಿತ್ರೋತ್ಸವದ ಸಿದ್ಧತೆಗಳನ್ನು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಅವರು ಚಲನಚಿತ್ರೋತ್ಸವ ನಡೆಯುವ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಪರಿಶೀಲನೆ ನಡೆಸಿದರು.
    ಪರೀಶೀಲನೆ ನಡೆಸಿದ ನಂತರ ಮಾತನಾಡಿ ದಿನಾಂಕ 29-01-2016 ರಿಂದ 04-02-2016 ರವರೆಗೆ ನಡೆಯುವ  ಚಿತ್ರೋತ್ಸವಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿವಿಧ ಭಾಷೆಗಳ ಚಲನಚಿತ್ರಗಳನ್ನು  ನಾಲ್ಕು ಪರದೆಗಳಲ್ಲಿ ಉತ್ತಮ ಪ್ರತಿ ದಿನ 5 ಪ್ರದರ್ಶನಗಳಂತೆ ಒಟ್ಟಾರೆ 140 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಮೈಸೂರಿನ  ಸಾರ್ವಜನಿಕರಿಗೆ ಹಾಗೂ ಚಲನಚಿತ್ರ ರಂಗದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ  ಇದು ಸುವರ್ಣ ಅವಕಾಶವಾಗಿದ್ದು, ವಿಶ್ವ ಸಿನಿಮಾ, ಏಷ್ಯಾ ಸಿನಿಮಾ, ಇಂಡಿಯನ್ ಸಿನಿಮಾ, ಕನ್ನಡ ಸಿನಿಮಾಗಳನ್ನು ವೀಕ್ಷಿಸಬಹುದು ಎಂದರು.
     ಜನವರಿ 11 ರಿಂದಲೇ ನೊಂದಣಿ ಕಾರ್ಯ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆಯುತ್ತಿದ್ದು, 500ಕ್ಕೂ ಹೆಚ್ಚು ಜನ ಈವರೆಗೆ ಪ್ರತಿನಿಧಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಶುಲ್ಕ ಸಾರ್ವಜನಿಕರಿಗೆ ರೂ. 600, ವಿದ್ಯಾರ್ಥಿಗಳಿಗೆ, ಚಿತ್ರ ಸಮಾಜದ ಸದಸ್ಯರಿಗೆ, ಚಲನಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ರೂ. 300 ಇರುತ್ತದೆ ಎಂದರು.
   ಚಲನಚಿತ್ರೋತ್ಸವದ ಬಗ್ಗೆ ಮೈಸೂರು ನಗರದಲ್ಲಿರುವ ಸಮೂಹ ಮಾಧ್ಯಮ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿ ಮುಂದೆ ಬಂದು  ಪಠ್ಯ ಚಟುವಟಿಕೆ ಭಾಗವಾಗಿಯೇ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು.  
      ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಜನವರಿ 28 ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದ್ದು, ಮೈಸೂರಿನಲ್ಲಿ ಜನವರಿ 28 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಹಲವು ಪ್ರಶಸ್ತಿ ವಿಜೇತ ‘ತಿಥಿ’ ಕನ್ನಡ ಚಿತ್ರದ ಪ್ರದರ್ಶನದೊಂದಿಗೆ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
        ವಿಶ್ವ ಸಿನಿಮಾ, ಏಷ್ಯಾ ಸಿನಿಮಾ, ಇಂಡಿಯನ್ ಸಿನಿಮಾ, ಕನ್ನಡ ಸಿನಿಮಾ. ಸಿನಿಮಾ ಪುನಾರವಲೋಕನ ಹೀಗೆ ಹಲವು ವಿಭಾಗಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಕೋರ್ಟ್,(ಮರಾಠಿ), ಲೆವಿಯಥಾನ್ (ರಷ್ಯಾ), ಕಾರ್ನ್‍ಐಲ್ಯಾಂಡ್(ಜಾರ್ಜಿಯಾ),  ಪ್ರಾಂಕೋಫೋನಿಯಾ (ಜರ್ಮನಿ), ರಾಮ್ಸ್ (ಐಲ್ಯಾಂಡ್). ಟ್ಯಾಕ್ಸಿ(ಇರಾನ್), ಆಂಟನ್ ಚೆಕಾಫ್ ಹೀಗೆ ಸರಿಸುಮಾರು 140 ಪ್ರಮುಖ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಇದೆ ಎಂದರು
     18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೋಂದಣಿಗೆ ಅವಕಾಶ ಇದ್ದು ನೋಂದಾಯಿಸಿಕೊಳ್ಳಲು ಇಚ್ಚಿಸುವವರು 2 ಭಾವಚಿತ್ರ, ಗುರುತಿನ ಚೀಟಿ ಸಹಿತ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ವಾರ್ತಾಭವನದಲ್ಲಿ, ಸಂಜೆ         5-30 ರಿಂದ 7-30 ರವರೆಗೆ ಮಾಲ್ ಆಫ್ ಮೈಸೂರ್ ಐನಾಕ್ಸ್ ಚಿತ್ರಮಂದಿರದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 2420050, 9448092049 ಹಾಗೂ ಆನ್‍ಲೈನ್ ಕೂಡ ನೋಂದಣಿಗೆÉ ಅವಕಾಶವಿದ್ದು, ನೋಂದಣಿ ಹಾಗೂ ಚಲನಚಿತ್ರಗಳ ವಿವರಗಳಿಗೆ ವೆಬ್‍ಸೈಟ್ ತಿತಿತಿ.biಜಿಜಿes.iಟಿ ನಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
    ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಅವರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ
                              ಮೈಸೂರು,ಜ.27.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೊಂದಾವಣೆಯಾಗಿ ಕ್ರೀಡೆ, ಸಾಂಸ್ಕøತಿಕ ಮತ್ತು ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಯುವಕ/ಯುವತಿ ಸಂಘÀ/ ಮಂಡಳಿಗಳ 5 ಮಂದಿಗೆ ಮತ್ತು ಯುವಕ ಸಂಘ/ಯುವತಿ ಮಂಡಳಿ ಇವುಗಳಿಗೆ ತಲಾ ಒಂದರಂತೆ ಜಿಲ್ಲಾ ಯುವ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
 ಕ್ರೀಡೆ, ಸಾಂಸ್ಕøತಿಕ, ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ 15 ರಿಂದ 35 ವರ್ಷ ವಯೋಮಿತಿಯ ಯುವಕ/ಯುವತಿಯರು ಹಾಗೂ ಯುವಕ ಸಂಘ, ಯುವತಿ ಮಂಡಳಿ ಇವರುಗಳು ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
      ಆಸಕ್ತರು ತಮ್ಮ ವೈಯಕ್ತಿಕ ಅರ್ಜಿಯೊಂದಿಗೆ ಸಾಧನೆಗಳ ದೃಢೀಕೃತ ಪ್ರಶಸ್ತಿ ಪತ್ರಗಳ ಪ್ರಸ್ತಾವನೆಯನ್ನು ದಿನಾಂಕ 25-02-2016 ರ ಒಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಪಡೆಯಬಹುದಾಗಿರುತ್ತದೆ.
ಕ್ರೀಡಾ ಶಾಲೆ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ
     ಮೈಸೂರು,ಜ.27.ಮೈಸೂರು ಜಿಲ್ಲಾ ಪಂಚಾಯತ್ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸುತ್ತಿರುವ  ಜಿಲ್ಲಾ ಕ್ರೀಡಾಶಾಲೆಯ 2016-17ನೇ ಸಾಲಿನ ಪ್ರವೇಶಕ್ಕೆ ದಿನಾಂಕ 05-02-2016 ಮತ್ತು 06-02-2016 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
    ಅಥ್ಲೆಟಿಕ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ದಿನಾಂಕ 01-06-2016 ಕ್ಕೆ 10 ವರ್ಷದೊಳಗಿರಬೇಕು ಹಾಗೂ 4ನೇ ತರಗತಿ ಓದುತ್ತಿರಬೇಕು. 2016-17ನೇ ಶೈಕ್ಷಣಿಕ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು. ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ 05-02-2016 ರಂದು ಬೆಳಿಗ್ಗೆ 8.30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ನಜûರಾಬಾದ್, ಮೈಸೂರು ಇಲ್ಲಿ ವರದಿ ಮಾಡಿಕೊಳ್ಳುವುದು.
     ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜûರಾಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಇವರನ್ನು ಸಂಪರ್ಕಿಸುವುದು.
           ಜನವರಿ 28 ರಂದು ಸಾಮಾನ್ಯ ಕೌನ್ಸಿಲ್ ಸಭೆ
     ಮೈಸೂರು,ಜ.27.ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಜನವರಿ 28 ರಂದು ಮಧ್ಯಾಹ್ನ 3 ಗಂಟೆಗೆ ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಹೆಚ್1ಎನ್1  ಆತಂಕ ಬೇಡ ಅರಿವಿರಲಿ
   ಮೈಸೂರು,ಜ.27.ಹೆಚ್1ಎನ್1 ಇನ್ ಫ್ಲ್ಯೂಯೆಂಜಾ ಎ ತೀವ್ರವಾಗಿ ಹರಡುವ ಉಸಿರಾಟದ ಸೋಂಕು ರೋಗವಾಗಿದ್ದು, ನಿರ್ದಿಷ್ಟ ಮತ್ತು ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ಇದು ಸಾಮಾನ್ಯ ವೈರೆಸ್ ಜ್ವರವಾಗಿದ್ದು, ಮುನ್ನಚ್ಚರಿಕ ಕ್ರಮಗಳಿಂದ ಈ ಜ್ವರ ಹರಡುವುದನ್ನು ತಡೆಗಟ್ಟಬಹುದು.
    ತೀವ್ರವಾದ ಶೀತ, ಜ್ವರ, ಕೆಮ್ಮು, ತಲೆನೋವು, ಗಂಟಲು ನೋವು ಮತ್ತು ಮೈ ಕೈ ನೋವು, ಉಸಿರಾಟದ ತೊಂದರೆ ಇನ್ನು ಮುಂತಾದವುಗಳು ಈ ಜ್ವರದ ಮುಖ್ಯ ಲಕ್ಷಣಗಳು.
    ಸೋಂಕಿತ ವ್ಯಕ್ತಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ವಾತಾವರಣದಲ್ಲಿ ವೈರಾಣುವಿನ ಕಣಗಳು ಹರಡಿ ದಿನನಿತ್ಯದ ಬಳಕೆಯ ವಸ್ತುವಿನ ಮೇಲೆ ಕೂರುತ್ತವೆ. ಆರೋಗ್ಯವಂತೆ ವ್ಯಕ್ತಿ ಈ ವಸ್ತುಗಳನ್ನು ಮುಟ್ಟಿದ/ಉಪಯೋಗಿಸಿದ ನಂತರ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ.
    ಈ ಜ್ವರವನ್ನು ನಿಯಂತ್ರಿಸಲು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಅಥವಾ ಟಿಶ್ಯೂ ಕಾಗದದಿಂದಾಗಲಿ ಮುಚ್ಚಿಕೊಳ್ಳಿ, ನಿಮ್ಮ ಮೂಗು, ಕಣ್ಣು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ, ಚೆನ್ನಾಗಿ ನಿದ್ದೆ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದಿರಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಧಾರಾಳವಾಗಿ ನೀರು ಕುಡಿಯಿರಿ ಮತ್ತು ಪೌಷ್ಠಿಕಾಂಶವಿರುವ ಆಹಾರ ಸೇವಿಸಿ, ರೋಗ ನಿರೋಧಕ ಶಕ್ತಿಯನ್ನು ಬೆಳೆಸಿ, ಜನ ಸಂದಣಿಯಿರುವ ಸ್ಥಳಗಳಿಗೆ ಹೋದಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದನ್ನು ಮರೆಯದಿರಿ. ರೋಗದ ಲಕ್ಷಣವುಳ್ಳ ವ್ಯಕ್ತಿಗಳಿಂದ ಮಾರುದ್ದದ್ದಷ್ಟು ದೂರವಿರಿ.
    ರೋಗದ ಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ. ಚಿಕಿತ್ಸೆಗೆ ಸರ್ಕಾರದ ವತಿಯಿಂದ ಟ್ಯಾಮಿಪ್ಲೂ ಔಷಧಿ ಲಭ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಲಹೆ ಮೇರೆಗೆ ಪಡೆಯರಿ.

Monday, 18 January 2016

ಬೆಂಗಳೂರು:18. ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಹೈಕೋರ್ಟ್ ಸೋಮವಾರ ಗ್ರೀನ್ ಸಿಗ್ನಲ್ ನೀಡಿದೆ.
ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ 200ಕ್ಕೂ ಹೆಚ್ಚು ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್ ಏಕ ಸದಸ್ಯ ಪೀಠ, ಅರ್ಜಿಗಳಲ್ಲಿ ಪರಿಗಣನೆಗೆ ಯೋಗ್ಯವಾದ ಯಾವುದೇ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಿಲ್ಲಾ ಪಂಚಾಯತ್ ಚುನಾವಣೆಗೆ ಹೊರಡಿಸಿರುವ ಮೀಸಲು ಪಟ್ಟಿಯಲ್ಲಿ ಗೊಂದಲಗಳಿದ್ದು ಚುನಾವಣೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ 200ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರಿದ್ದ ನ್ಯಾಯಪೀಠ,  ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟಿಸಿದ ಅವರು, ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಹೇಳಿದ್ದಾರೆ.

Friday, 15 January 2016

 ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆಯ ಸಕಲ ಸಿದ್ಧತೆಗೆ ಸೂಚನೆ
ಮೈಸೂರು,ಜ.14-ನಂಜನಗೂಡು ತಾಲ್ಲೂಕಿನ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರಸ್ವಾಮಿ  ದೊಡ್ಡಜಾತ್ರೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಅಧಿಕಾರಿಗಳು ಶೀಘ್ರ ಸಕಲ ಸಿದ್ಧತೆ ಕೈಗೊಳ್ಳುಬೇಕು ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.
     ಇಂದು ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ದಾಸೋಹ ಭವನದ ವಿ.ಐ.ಪಿ ಹಾಲ್ ನಡೆದ ಶ್ರೀ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾರ್ಚ್ 14 ರಿಂದ 25ರವರೆಗೆ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವತಿಯಿಂದ ಹಲವು ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಹಕಾರ ಪಡೆದು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
      ಮಾರ್ಚ್ 21 ರಂದು ರಥೋತ್ಸವ ಜರುಗಲಿದ್ದು, ರಥಗಳು ಬರುವ ನಾಲ್ಕು ಬೀದಿಗಳಲ್ಲಿ ರಥಗಳ ಚಲನೆಗೆ ಯಾವುದೇ ಅಡೆತಡೆ ಆಗದಂತೆ ರಸ್ತೆಗಳ ಸಮತಟ್ಟು ಮಾಡಬೇಕು. ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಸೂಕ್ತ ಸ್ಥಳಗಳಳ್ಲಿ ತಾತ್ಕಾಲಿಕ ನಲ್ಲಿಗಳನ್ನು ಹಾಕಬೇಕು. ದೇವಾಲಯದ ಸುತ್ತಲು ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಬೇಕು. ಕಸದ ತೊಟ್ಟಿಗÀಳಿಂದ ಕಸ ಸಾಗಿಸಲು ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮವನ್ನು ನಂಜನಗೂಡು ನಗರ ಸಭೆ ಕೈಗೊಳ್ಳಬೇಕು ಎಂದರು.
      ಪೊಲೀಸ್ ಇಲಾಖೆ ಜಾತ್ರೆ ನಡೆಯುವ ದಿನದಂದು, ಅಗತ್ಯ ಬಂದೋಬಸ್ತು ಮಾಡಬೇಕು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳ ವಾಹನಗಳು ಬರುವುದರಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ವ್ಯವಸ್ಥೆ, ಭಕ್ತಾದಿಗಳ ನೂಕು-ನುಗ್ಗಲು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಭಕ್ತಾದಿಗಳು ಸಂಚರಿಸುವ ಮುಖ್ಯ ಸ್ಥಳಗಳಲ್ಲಿ ಕಳ್ಳತನ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
     ಜಾತ್ರಾ ದಿನಗಳಲ್ಲಿ ದೇವಸ್ತಾನಕ್ಕೆ ಬರುವ ಭಕ್ತಾದಿಗಳಿಗೆ ತಾತ್ಕಾಲಿಕ ಕುಡಿಯುವ ನೀರು, ಶೌಚಾಲಯಗಳ  ವ್ಯವಸ್ಥೆಗೆ ನಂಜನಗೂಡು ತಾಲ್ಲೂಕು ಪಂಚಾಯತ್ ಅಗತ್ಯ ಕ್ರಮಕೈಗೊಳ್ಳಬೇಕು. ರಥೋತ್ಸವದ ಅಂಗವಾಗಿ ನಡೆಯುವ ಉತ್ಸವಾದಿಗಳು ಮತ್ತು ತೆಪ್ಪೋತ್ಸವದ ಕಾಲದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗದಂತೆ ಇಂಧನ ಇಲಾಖೆ ಎಚ್ಚರವಹಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿದರು.
     ಕಬಿನ ನೀರಾವರಿ ಇಲಾಖೆಯು ಜಾತ್ರೆ ಮುಗಿಯುವವರೆಗೂ ಭಕ್ತಾದಿಗಳು ಹಾಗೂ ಸಾರ್ವಜನಿಕರು ಸೌಕರ್ಯಕ್ಕಾಗಿ ನದಿಯಲ್ಲಿ ಮತ್ತು ಹುಲ್ಲಹಳ್ಳಿ ನಾಲೆಯಲ್ಲಿ ನೀರನ್ನು ಹರಿಸಬೇಕು. ಕಪಿಲಾ ನದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ತೆಗೆಸಿ ಭಕ್ತಾದಿಗಳಿಗೆ ಸ್ನಾನಕ್ಕಾಗಿ ವ್ಯವಸ್ಥೆ ಮಾಡಬೇಕು. ತೆಪ್ಪೋತ್ಸವದ ಅಂಗವಾಗಿ ಮಾರ್ಚ್ 23 ರಂದು ನದಿಯಲ್ಲಿ ದೋಣಿಯ ಚಾಲನೆಗೆ ಅಗತ್ಯ ನೀರನ್ನು ನದಿಗೆ ಹರಿಬಿಡಲು ಕ್ರಮವಹಿಸಬೇಕು ಎಂದರು.
    ರಥೋತ್ಸವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಆರೋಗ್ಯ ಇಲಾಖೆವಹಿಸಬೇಕು. ದೇವಾಲಯದ ಹತ್ತಿರ ತಾತ್ಕಾಲಿಕ ಪ್ರಥಮ ಚಿಕಿತ್ಸೆ ಹಾಗೂ ಆರೋಗ್ಯ ಕೇಂದ್ರ ತೆರೆದು, ಆಂಬ್ಯುಲೆನ್ಸ್  ವಾಹನದೊಂದಿಗೆ ಸಾಕಷ್ಟು ಸಿಬ್ಬಂದಿ ನಿಯೋಜಿಸಬೇಕು. ಅಲ್ಲದೆ ಭಕ್ತಾದಿಗಳಿಗೆ ಅಗತ್ಯ ಔಷದೋಪಚಾರ ಮಾಡಲು ಸಿದ್ಧರಿರಬೇಕು. ರಥೋತ್ಸವದ ದಿನದಂದು ರಥಗಳು ಸಂಚರಿಸುವ ಬೀದಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಇಲಾಖೆ ಎರಡು ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
     ರಥೋತ್ಸವ ಮತ್ತು ತೆಪ್ಪೋತ್ಸವದ ದಿನಗಳಲ್ಲಿ ನಂಜನಗೂಡಿಗೆ ಹಲವು ಭಾಗಗಳಿಂದ ಬರುವ ಭಕ್ತಾದಿಗಳಿಗೆ ಸೌಕರ್ಯಕ್ಕಾಗಿ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ. ರಥೋತ್ಸವ ದಿನದಂದು ಮುಗಿಯುವವರೆಗೆ ರಥಗಳ ಜೊತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎರಡು ಹೆವೀ ಕ್ರೇನ್ ವ್ಯವಸ್ಥೆ ಮಾಡಬೇಕು. ದೂರಸಂಪರ್ಕ ಇಲಾಖೆಯು ರಥಗಳು ಚಲಿಸುವ ಮಾರ್ಗದಲ್ಲಿ ಅಡ್ಡಲಾಗಿರುವ ತಂತಿಗಳನ್ನು ತೆಗೆದು ರಥಗಳು ಸ್ವಸ್ಥಾನಕ್ಕೆ ಬಂದ ನಂತರ ಮರು ಸಂಪರ್ಕ ಕಲ್ಪಿಸುಲು ಕ್ರಮವಹಿಸಬೇಕು ಎಂದು ಹೇಳಿದರು.
     ಸಭೆಯಲ್ಲಿ ಮೈಸೂರು ಉಪ ವಿಭಾಗಾಧಿಕಾರಿ ಆನಂದ್, ಉಪ ಪೊಲೀಸ್ ವರಿಷ್ಠ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ತಹಶೀಲ್ದಾರ್ ರಾಮಯ್ಯ, ತಾ.ಪಂ. ಕಾರ್ಯನಿರ್ವಹಕ ಅಧಿಕಾರಿ ಕೃಷ್ಣರಾಜು, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಕಾರ್ಯನಿರ್ವಹಕ ಅಧಿಕಾರಿ ಜಯಪ್ರಕಾಶ್, ತಾ.ಪಂ. ಅಧ್ಯಕ್ಷೆ ಸವಿತಾ, ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಮೋಹನ್ ಹಾಗೂ ಇತರರು ಭಾಗವಹಿಸಿದರು.
 ಗ್ರಂಥಾಲಯಗಳ ಬೆಳವಣಿಗೆಗೆ ಸಂಪೂರ್ಣ ಸಹಕಾರ : ಬಿ.ಎಲ್ ಭೈರಪ್ಪ
     ಮೈಸೂರು,ಜ.14.ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ 2016-17 ನೇ ಸಾಲಿನ ರೂ. 350 ಲಕ್ಷಗಳ ಆಯ-ವ್ಯಯವನ್ನು ಅನುಮೋದಿಸಿ, ನಗರ ಕೇಂದ್ರ ಗ್ರಂಥಾಲಯಕ್ಕೆ ಸೇರಿದ ಪೀಪಲ್ಸ್  ಪಾರ್ಕ್ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ರೂ. 1.25 ಕೋಟಿ ಗ್ರಂಥಾಲಯ ಕರವನ್ನು ಸರ್ಕಾರದ ತೀರ್ಮಾನದಂತೆ ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಲಾಗುವುದು ಹಾಗೂ ಗ್ರಂಥಾಲಯಗಳ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಮೈಸೂರು ಮಹಾನಗರ ಪಾಲಿಕೆ ಮಹಾಪೌರರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಬಿ.ಎಲ್.ಭೈರಪ್ಪ ಅವರು ತಿಳಿಸಿದರು.
     ಅವರು ಇತ್ತೀಚೆಗೆ ಮೈಸೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ  ಮೈಸೂರು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮೈಸೂರು ನಗರ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ವಿವಿಧ ಬಡಾವಣೆಗಳಲ್ಲಿರುವ ಗ್ರಂಥಾಲಯಗಳು ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ/ಸೇವಾ ಕೇಂದ್ರ ಗ್ರಂಥಾಲಯಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಿ ಕಟ್ಟಡಗಳನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲು  ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
     ಜೆ.ಪಿ.ನಗರ ಶಾಖಾ ಗ್ರಂಥಾಲಯದಲ್ಲಿರುವ ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯಕ್ಕೆ 30x40 ಅಳತೆಯ  ಖಾಲಿ ನಿವೇಶನವನ್ನು ನೀಡುವುದರ ಜೊತೆಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸ ಬೇಕಾದÀ ಬಾಕಿ ಗ್ರಂಥಾಲಯ ಕರದ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
     ಶಾಖಾ ಗ್ರಂಥಾಲಯಗಳು ಇಲ್ಲದೇ ಇರುವ ಸುಮಾರು 40 ವಾರ್ಡ್‍ಗಳಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡಗಳು, ಸಮುದಾಯ ಭವನಗಳಲ್ಲಿ ವಾಚನಾಲಯ ಪ್ರಾರಂಭಿಸಲು ಮಹಾನಗರ ಪಾಲಿಕೆಯ ಸದಸ್ಯರುಗಳೊಂದಿಗೆ ಚರ್ಚಿಸಿ, ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿ, ವಾಚನಾಲಯಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
     ಈ ಎಲ್ಲಾ ಗ್ರಂಥಾಲಯಗಳ/ವಾಚನಾಲಯಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಗ್ರಂಥಾಲಯ ವಿಜ್ಞಾನದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾರ್ಥಿಗಳನ್ನು ಅಪ್ರೆಂಟಿಸ್ ರೂಪದಲ್ಲಿ ತೆಗೆದುಕೊಂಡು ಅವರಿಗೆ ಸ್ಟೈಪೆಂಡರಿಯೊಂದಿಗೆ ತರಬೇತಿ ನೀಡಲೂ  ಅಧಿಕಾರಿಗಳಿಗೆ ತಿಳಿಸಿದರು.
     ಮೈಸೂರಿನ ವಿವಿಧ ಬಡಾವಣೆಗಳಲ್ಲೂ ಗ್ರಂಥಾಲಯ ಕಟ್ಟಡ ನಿರ್ಮಿಸಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿವೇಶಗಳನ್ನು ಉಚಿತವಾಗಿ ನೀಡುವಂತೆ ಹಾಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ಪಾವತಿಬೇಕಾದ ಗ್ರಂಥಾಲಯ ಕರದ ಬಾಕಿ ಮೊತ್ತವನ್ನು ಪಾವತಿಸಲು ಸಭೆಯಲ್ಲಿ ಹಾಜರಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ಆರ್. ಮಂಜುನಾಥ್ ರವರಿಗೆ ತಿಳಿಸಿದರು.
      ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ಬಾಕಿ ಬರಬೇಕಾದ ಸುಮಾರು ರೂ. 9 ಕೋಟಿ ಮೊತ್ತವನ್ನು ನಗರದ ವಿವಿಧ ಬಡಾವಣೆಗಳಲ್ಲಿಯೂ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಲು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ವೆಚ್ಚ ಮಾಡಲಾಗುವುದು ಎಂದರು.
    ಕುವೆಂಪುನಗರ ಕಾಂಪ್ಲೆಕ್ಸ್ ಬಳಿ ಇರುವ ಹೌಸಿಂಗ್ ಬೋರ್ಡ್, ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಖಾಲಿ ಇರುವ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭಿಸಲು ಪರಿಶೀಲನೆ ನಡೆಸಲಾಗುವುದು ಎಂದರು.
     34 ರ ಮೇದರ್ ಬ್ಲಾಕ್ ಸಮುದಾಯ ಭವನದಲ್ಲಿ ಹಾಗೂ ವಾರ್ಡ್ ಸಂಖ್ಯೆ: 18 ರಲ್ಲಿ ಕುವೆಂಪು ಪ್ರತಿಮೆಯ ಕೆಳ ಭಾಗದಲ್ಲಿರುವ ವಾಚನಾಲಯ ಕಟ್ಟಡದಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಲು ಸದರಿ ಕಟ್ಟಡಗಳನ್ನು ನಗರ ಕೇಂದ್ರ ಗ್ರಂಥಾಲಯಕ್ಕೆ ಹಸ್ತಾಂತರಿಸುವುದಾಗಿ  ತಿಳಿಸಿದರು.
     ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರಿಂದ ವಸೂಲು ಮಾಡುವ ಶೇ 6% ರ ಗ್ರಂಥಾಲಯ ಕರವನ್ನು ನೇರವಾಗಿ ಗ್ರಂಥಾಲಯ ಇಲಾಖೆಯ ಖಾತೆಗೆ ಜಮಾ ಮಾಡುವ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು. ಜೆ.ಪಿ.ನಗರ, ಉದಯಗಿರಿ, ರಾಮಕೃಷ್ಣನಗರ, ವಿವೇಕಾನಂದನಗರ ಶಾಖೆಗಳಲ್ಲಿನ ಗ್ರಂಥಗಳನ್ನು ಗಣಕೀಕರಣಗೊಳಿಸಲು ಬೇಕಾಗುವ ವೆಚ್ಚವನ್ನು ಮೈಸೂರು ಮಹಾನಗರ ಪಾಲಿಕೆಯಿಂದ ಬಾಕಿ ಇರುವ ಗ್ರಂಥಾಲಯ ಕರದ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
     ಇದೇ ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ ಸಮಾರಂಭ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ ಮಾಜಿ ಮಹಾಪೌರರಾದ ಆರ್.ಲಿಂಗಪ್ಪ, ನಗರ ಪಾಲಿಕೆ ಸದಸ್ಯ ಕೆ.ಟಿ.ಚಲುವೇಗೌಡ ಹಾಗೂ ಮಹಾಪೌರರನ್ನು ನಗರ ಗ್ರಂಥಾಲಯ ಪ್ರಾಧಿಕಾರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
     ಸಭೆಯಲ್ಲಿ ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿಗಳು ಆದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ  ಬಿ. ಮಂಜುನಾಥ್, ನಗರ ಕೇಂದ್ರ ಗ್ರಂಥಾಲಯದ ಅಧೀಕ್ಷಕ ಮನು.ಎಂ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ರೈಲ್ವೆ ನೇಮಕಾತಿ ಮಂಡಳಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
     ಮೈಸೂರು,ಜ.14.ರೈಲ್ವೆ ನೇಮಕಾತಿ ಮಂಡಳಿ (ಖಖಃ) ಯಲ್ಲಿ ಖಾಲಿ ಇರುವ ಕರ್ಮಷಿಯಲ್ ಅಪ್ರಂಟೀಸ್, ಟ್ರಾಫಿಕ್ ಅಪ್ರಂಟೀಸ್, ಗೂಡ್ಸ್ ಗಾರ್ಡ್, ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್, ಟ್ರಾಫಿಕ್ ಅಸಿಸ್ಟೆಂಟ್,  ಕಿರಿಯ ಲೆಕ್ಕ ಸಹಾಯಕರು ಹಾಗು ಬೆರಳಚ್ಚುಗಾರರು, ಹಿರಿಯ ಗುಮಾಸ್ತ ಹಾಗು ಬೆರಳಚ್ಚುಗಾರರ  ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು 18-32 ವರ್ಷ ವಯೋಮಿತಿಯೊಳಗಿರಬೇಕು ಪ.ಜಾ/ಪ.ಪಂ.ದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ರಿಯಾಯಿತಿ ಇರುತ್ತದೆ. ಕರ್ಮಷಿಯಲ್ ಅಪ್ರಂಟೀಸ್, ಟ್ರಾಫಿಕ್ ಅಪ್ರಂಟೀಸ್, ಗೂಡ್ಸ್ ಗಾರ್ಡ್, ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್, ಟ್ರಾಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಕಿರಿಯ ಲೆಕ್ಕ ಸಹಾಯಕರು ಹಾಗೂ ಬೆರಳಚ್ಚುಗಾರರು ಮತ್ತು  ಹಿರಿಯ ಗುಮಾಸ್ತ ಹಾಗೂ  ಬೆರಳಚ್ಚುಗಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಟೈಪಿಂಗ್‍ನಲ್ಲಿ ಪರಿಣಿತಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
     ಅರ್ಜಿ ಸಲ್ಲಿಸುವವರು ಜನವರಿ 25 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷಾ ವಿಧಾನ, ನೇಮಕಾತಿಯ ಪರಿಪೂರ್ಣ ಮಾಹಿತಿಗಾಗಿ ತಿತಿತಿ.ಡಿಡಿbbಟಿಛಿ.gov.iಟಿ    ವೆಬ್‍ಸೈಟ್ ಅಥವಾ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ , ಮೈಸೂರು ಇವರನ್ನು ಸಂಪರ್ಕಿಸಬಹುದು.



ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮತ್ತು ಪಿ.ಡಿ.ಒ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ
ಮೈಸೂರು,ಜ.14.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಸರ್ಕಾರವು ಬರುವ ಏಪ್ರಿಲ್ ಮಾಹೆಯ ಒಳಗೆ ನಡೆಸಲಿರುವ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮತ್ತು ಪಿ.ಡಿ.ಒ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಟ್ಟು 50 ದಿನಗಳ ತರಬೇತಿ ನೀಡಲಾಗುವುದು.
ಆಸಕ್ತರು ದಿನಾಂಕ: 19.01.2016ರ ಒಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ದಲ್ಲಿ  ಹೆಸರು  ನೊಂದಾಯಿಸಿಕೊಳ್ಳಬಹುದೆಂದು ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಕ್ಕೆ  ದೂರವಾಣಿ ಸಂಖ್ಯೆ 0821-2515944 ಸಂಪರ್ಕಿಸುವುದು.
ಸಹಕಾರ ಸಂಘಗಳÀ ನೋಂದಣಿ ರದ್ಧತಿ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
      ಮೈಸೂರು,ಜ.14-ಹೆಚ್.ಡಿ.ಕೋಟೆ ತಾಲ್ಲೂಕಿನ ಕುಣಿಗಲ್, ಕೃಷ್ಣಾಪುರ ಹಾಗೂ ಎಂ. ಕನ್ನೇನಹಳ್ಳಿಯಲ್ಲಿರುವ  ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ಚಿಕ್ಕೆರೆಯೂರಿನಲ್ಲಿರುವ ವೀರಭದ್ರೇಶ್ವರ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ಕನ್ನೇನಹಳ್ಳಿಯಲ್ಲಿರುವ ಮಹಾತ್ಮಾಜಿ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ, ಗರಿಕೆಕಟ್ಟೆ ಕಾವಲ್‍ನಲ್ಲಿರುವ ಚಾಮುಂಡೇಶ್ವರಿ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ದೊಡ್ಡಕೆರೆಯೂರಿನಲ್ಲಿರುವ ನಂಜುಂಡೇಶ್ವರ ಸಂಯುಕ್ತ ಬೇಸಾಯ ಸಹಕಾರ ಸಂಘ ನಿ., ಮೇಟಿಕುಪ್ಪೆ, ಚನ್ನಗುಂಡಿ, ಕೆ.ಬೆಳತ್ತೂರು, ಹಂಚಿಪುರದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ, ಕಾಟವಾಳು, ಕಾನಕನಹಳ್ಳಿ, ಕೆಂಚನಹಳ್ಳಿ,   ಎಲೆಹುಂಡಿಯಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ,  ಪುರದಲ್ಲಿರುವ  ಬಳಪದ ಕಲ್ಲಿನ ಕೈಗಾರಿಕಾ ಸಹಕಾರ ಸಂಘ ನಿ.,ಶಿಂಡೇನಹಳ್ಳಿಯಲ್ಲಿರುವ ಕನಕದಾಸ ಗ್ರಾಮಾಂತರ ಕೈಗಾರಿಕಾ ಸಹಕಾರ ಸಂಘ ನಿ.,ಪಿರಿಯಾಪಟ್ಟಣ ತಾಲ್ಲೂಕು, ಸಂಗರ ಶೆಟ್ಟಹಳ್ಳಿ, ರಾಜನಬೆಳಗುಲಿ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ಕಿತ್ತೂರಿನಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಕೆ.ಆರ್.ನಗರ ತಾಲ್ಲೂಕಿನ ಬೆಣಗನಹಳ್ಳಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಚುಂಚನಕಟ್ಟೆ, ಶ್ರೀರಾಮ ಸಕ್ಕರೆ ಕಾರ್ಖಾನೆ ನೌಕರರ ಸಹಕಾರ ಸಂಘ ನಿ ಹಾಗೂ ಕಿತ್ತೂರಿನಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ.  ಸಮಾಪನೆಗೊಂಡಿದ್ದು, ನೋಂದಣಿ ರದ್ಧತಿಗೆ ಸಮಾಪನಾಧಿಕಾರಿಗಳು ಕ್ರಮವಹಿಸಿರುತ್ತಾರೆ.
     ಸಮಾಪನಾಧಿಕಾರಿಗಳಿಗೆ ಸದರಿ ಸಂಘಗಳಿಗೆ ಸಂಬಂಧಿಸಿದ ಲೆಕ್ಕಪುಸ್ತಕಗಳಾಗಲೀ, ಇದನ್ನು ಹೊಂದಿರುವವರ ಮಾಹಿತಿಯಾಗಲಿ ಲಭ್ಯವಿರುವುದಿಲ್ಲ.  ಸಂಘಗಳು  ಬೈಲಾ ರೀತ್ಯಾ ಉದ್ದೇಶಗಳನ್ನು ಈಡೇರಿಸದೆ ಇರುವುದರಿಂದ ಹಾಗೂ ಈ  ಸಂಘಗಳು ಅನುಪಯುಕ್ತವಾಗಿ ಮುಂದುವರೆಯುತ್ತಿರುವುದರಿಂದ ಈ ಸಂಘಗಳ ಆಸ್ತಿ-ಜವಾಬ್ದಾರಿಯನ್ನು ನಿಯಮಾನುಸಾರ ವಿಲೇವಾರಿ ಮಾಡಿ ಸಂಘದ ನೊಂದಣಿಯನ್ನು ರದ್ಧುಪಡಿಸಲು ತೀರ್ಮಾನಿಸಿರುತ್ತಾರೆ.
    ಸದರಿ ಸಂಘದ ರದ್ಧತಿಯ ಬಗ್ಗೆ ಸದಸ್ಯರುಗಳಿಗಾಗಲಿ ಅಥವಾ ಸಾರ್ವಜನಿಕರಿಗಾಗಲೀ ಆಕ್ಷೇಪಣೆಗಳಿದ್ದಲ್ಲಿ  ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗೆ ಈ ಪ್ರಕಟಣೆ ಪ್ರಕಟಗೊಂಡ  15 ದಿನದೊಳಗಾಗಿ ಸಲ್ಲಿಸುವ್ಯದು ಎಂದು ಸಮಾಪನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ : ಸಮಾರೋಪ ಸಮಾರಂಭ
      ಮೈಸೂರು,ಜ.14.ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ 66ನೇ ಹಿರಿಯರ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಜನವರಿ 16 ರಂದು ಸಂಜೆ 4-30 ಗಂಟೆಗೆ ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
    ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ವಸತಿ ಸಚಿವ ಎಂ.ಹೆಚ್. ಅಂಬರೀಶ್, ಸಹಕಾರ ಹಾಗೂ ಸಕ್ಕರೆ ಸಚಿವ ಮಹದೇವ ಪ್ರಸಾದ್, ಯುವ ಸಬಲೀಕರಣ, ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ, ಸಂಸತ್ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ್ ಸಿಂಹ, ವಿಧಾನ ಸಭಾ ಸದಸ್ಯರಾದ ತನ್ವೀರ್ ಸೇಠ್, ವಾಸು, ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ನೋಂದಣಿ ಆರಂಭ
      ಮೈಸೂರು,ಜ.14, 8 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಈ ಬಾರಿ ಜನವರಿ 28 ರಿಂದ ಫೆಬ್ರವರಿ 4 ರವರೆಗೆ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಏಕಕಾಲಕ್ಕೆ ನಡೆಯಲಿದೆ.
       ಈ ಚಿತ್ರೋತ್ಸವದಲ್ಲಿ ಭಾಗವಹಿಸುವವರು ಹೆಸರು ನೊಂದಣಿ ಮಾಡಿಕೊಳ್ಳಬೇಕಿದ್ದು, ನೊಂದಣಿ ಕಾರ್ಯ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಾಲಯದಲ್ಲಿ ನಡೆಯುತ್ತಿದೆ. (ನೊಂದಣಿ ಸಂದರ್ಭದಲ್ಲಿ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಗುರುತಿನ  ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಒಂದು ಸಾವಿರ  ಜನರಿಗೆ ಮಾತ್ರ ನೊಂದಣಿಗೆ ಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.)
    7 ದಿನಗಳ ಪ್ರದರ್ಶನಕ್ಕೆ ಪ್ರತಿನಿಧಿಗಳಾಗಲು ನೋಂದಣಿ ದರ ಸಾರ್ವಜನಿಕರಿಗೆ 600/-ರೂ,  ವಿದ್ಯಾರ್ಥಿಗಳಿಗೆ, ಚಿತ್ರ ಸಮಾಜದ ಸದಸ್ಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳಿಗೆ 300/- ರೂ.ಗಳಾಗಿರುತ್ತದೆ.
   ಪ್ರತಿನಿಧಿಗಳಾಗಿ ನೊಂದಾಯಿಸಿಕೊಂಡವರು  ಮೈಸೂರಿನ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ 4 ತೆರೆಗಳಲ್ಲಿ  ಸಿನಿಮಾಗಳನ್ನು ವೀಕ್ಷಿಸಬಹುದು. ಅಲ್ಲದೆ ಇಚ್ಚಿಸಿದಲ್ಲಿ ಬೆಂಗಳೂರಿನ ರಾಜಾಜಿ ನಗರದ ಓರಿಯನ್ ಮಾಲ್‍ನ ಪಿವಿಆರ್ ಸಿನಿಮಾದ 11 ತೆರೆಗಳಲ್ಲಿ ಸಿನಿಮಾವನ್ನು ವೀಕ್ಷಿಸಬಹುದು.
     ಈ ಚಿತ್ರೋತ್ಸವದಲ್ಲಿ 61 ದೇಶಗಳ  170 ಚಿತ್ರಗಳು  ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2420050 ಯನ್ನು ಸಂಪರ್ಕಿಸುವುದು.
                                             
ಪ್ರಮೋದ್ ಕುಮಾರ್ ಅವರಿಗೆ ಪಿಎಚ್.ಡಿ. ಪದವಿ
    ಮೈಸೂರು,ಜ.14-ಮೈಸೂರು ವಿಶ್ವವಿದ್ಯಾಲಯವು ಪ್ರಮೋದ್ ಕುಮಾರ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಎನ್. ಸುರೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಭರತೇಶ ವೈಭವದ ಸಾಂಸ್ಕøತಿಕ ನೋಟ” ಕುರಿತು ಸಾದರಪಡಿಸಿದ ಎಚಿiಟಿoಟogಥಿ & Pಡಿಚಿಞಡಿiಣs  ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಪ್ರಮೋದ್ ಕುಮಾರ್ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

Sunday, 10 January 2016

ಆಧುನಿಕ ಜೀವನ ಪದ್ಧತಿಯಿಂದ ಪರಂಪರೆ ನಾಶ-ನಾಗರಾಜು

ಮಂಡ್ಯ: ಇಂದಿನ ಯುವಜನತೆ ಆಧುನಿಕ ಜೀವನ ಪದ್ಧತಿಯ ಕಡೆ ಆಕರ್ಷಿತರಾಗುತ್ತಿದ್ದು ಇದರಿಂದ ನಮ್ಮ ಮೌಲ್ಯ ಪರಂಪರೆಗಳು ನಾಶದತ್ತ ಸಾಗುತ್ತಿವೆ ಎಂದು ಹೊನ್ನಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ.ನಾಗರಾಜು ಅಭಿಪ್ರಾಯಪಟ್ಟರು.
    ಬಸರಾಳು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ಸಮಾಜದಲ್ಲಿ ಮೌಢ್ಯ ಅಂಧಕಾರಗಳು ಹೆಚ್ಚುತ್ತಿದ್ದು ಜನ ಅವುಗಳ ಕಡೆ ವಾಲುತ್ತಿದ್ದು ಜನರನ್ನು ದಿಕ್ಕು ತಪ್ಪಿಸುವ ಶಕ್ತಿಗಳು ಹೆಚ್ಚಾಗಿವೆ.ಹಿಂದೆ ಮದುವೆಗಳು ಸಾಂಪ್ರದಾಯಿಕ ಪದ್ಧತಿಯಲ್ಲಿ ಊರುಗಳಲ್ಲಿ ಸರಳವಾಗಿ ನಡೆಯುತ್ತಿದ್ದವು.ಆದರೆ ಇಂದು ಪೈಪೋಟಿಗೆ ಬಿದ್ದಂತೆ ಅದ್ಧೂರಿ ಮದುವೆಗಳ ಸಂಖ್ಯೆ ಹೆಚ್ಚಾಗುತ್ತಿವೆ.ಅದಕ್ಕಾಗಿ ಸಾಲ ಮಾಡಿಕೊಳ್ಳುವವರೂ ಇದ್ದಾರೆ.ದೇವರು ದಿಂಡರ ಹೆಸರಿನಲ್ಲಿ ಶೋಷಣೆಗೆ ಒಳಗಾಗುತ್ತಿರುವುದೂ ಕಂಡುಬರುತ್ತಿದೆ.ಬಸವಣ್ಣನವರಂತ ದಾರ್ಶನಿಕರು ಇಂತಹ ಮೌಢ್ಯಗಳ ವಿರುದ್ಧ ಸಮರ ಸಾರಿದ್ದರು.ಕುವೆಂಪು ಮಂತ್ರ ಮಾಂಗಲ್ಯ ಪ್ರತಿಪಾದಿಸಿದ್ದರು.ಇದ್ಯಾವುದನ್ನು ನಾವು ಅನುಸರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
   ಮಾತಿನಿಂದ ಸಮಾಜ ಕಟ್ಟುವ ಕೆಲಸವಾಗಬೇಕೆ ಹೊರತು ಪರಸ್ಪರ ದ್ವೇಷ ಅಸೂಯೆ ಹುಟ್ಟಿಸುವಂತಿರಬಾರದು.ಮಾತು ಮೃದು ಮಧುರವಾಗಿರಬೇಕು.ಮಾತಿನಲ್ಲಿ ನಯವಿನಯ ಶುದ್ಧತೆ ಇರಬೇಕು.ಬೇರೆಯವರಿಗೆ ಹಿತವನ್ನು ಉಂಟುಮಾಡುವಂತಿರಬೇಕು ಶರಣರು ಹೇಳಿರುವಂತೆ ನಮ್ಮ ಮಾತು ಲಿಂಗ ಮೆಚ್ಚಿ ಅಹುದಹುದು ಎನ್ನುವಂತಿರಬೇಕು ಆಗ ಸಂಬಂಧಗಳು ಸುಧಾರಿಸುತ್ತವೆ ಎಂದರು.
     ಸಮಾರೋಪ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಮೂರ್ತಿ ವಿದ್ಯಾರ್ಥಿ ಜೀವನ ನಿಮ್ಮ ಪಾಲಿಗೆ ಅತಿಮುಖ್ಯ ಕಾಲಘಟ್ಟ.ಈ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ಇಟ್ಟು ಅಭ್ಯಸಿಸಿದರೆ ಮುಂದಿನ ಜೀವನ ಸುಗಮವಾಗುತ್ತದೆ.ಈ ಸಮಯದಲ್ಲಿ ಕಷ್ಟಪಟ್ಟರೆ ಜೀವನದ ದಿಕ್ಕು ದೆಸೆಯೆ ಬದಲಾಗುತ್ತದೆ.ಮನಸ್ಸಿನಂತೆ ಮಾದೇವ ಎನ್ನುವಂತೆ ವಿದ್ಯಾರ್ಥಿ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯ ಎಂಬುದಿಲ್ಲ.ನಿಮ್ಮನ್ನು ನೀವು ನಂಬಿದರೆ ಯಶಸ್ಸು ಖಂಡಿತಾ ಸಾಧ್ಯ.ಈ ನಿಟ್ಟಿನಲ್ಲಿ ಮುಂದುವರೆದು ಪರೀಕ್ಷೆಯನ್ನು ಎದುರಿಸಿ ಯಶಸ್ವಿಯಾಗಿ ಎಂದು ತಿಳಿಸಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದುದ್ದ ಕಾಲೇಜಿನ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು ವಿದ್ಯಾರ್ಥಿಗಳು ಜೀವನದ ಮುಂದಿನ ಗುರಿ ಇರಿಸಿಕೊಂಡು ಗುರಿ ಸಾಧಿಸುವ ಛಲದಿಂದ ಮುನ್ನಡೆದರೆ ಗುರಿ ಮುಟ್ಟಲು ಸಾಧ್ಯ.ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ ಅದನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ತಿಳಿಸಿದರು.
    ಮತ್ತೋರ್ವ ಅತಿಥಿ ಕನ್ನಲಿ ಕಾಲೇಜು ಪ್ರಾಂಶುಪಾಲ ಕೆ.ಎನ್.ಮಲ್ಲೇಗೌಡ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು,ಸಮಯಪ್ರಜ್ಞೆ  ಇಟ್ಟುಕೊಂಡು ಅಭ್ಯಸಿಸಿದರೆ ಯಶಸ್ಸು ಸಾಧ್ಯ.ಶ್ರಮಪಟ್ಟರೆ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎಂದರು.
   ಉಪನ್ಯಾಸಕ ಹೊಳಲು ಶ್ರೀಧರ್ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು.ಹಿರಿಯ ಉಪನ್ಯಾಸಕ ಹೆಚ್.ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್,ತಿಮ್ಮೇಗೌಡ,ಅಕ್ಷಯ ಬಹುಮಾನ ವಿತರಿಸಿದರು.ಉಪನ್ಯಾಸಕಿ ಬಿ.ಜಿ.ಲತಾ ವಾರ್ಷಿಕ ವರದಿ ಮಂಡಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಚಂದ್ರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎನ್.ಮನುಕುಮಾರ್,ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕಿ ರುಕ್ಮಿಣಮ್ಮ,ಉಪನ್ಯಾಸಕರಾದ ಮಂಜುನಾಥ್,ರೂಪಶ್ರೀ,ವಿಶ್ವನಾಥ್,ಸುರೇಶ್,ಚೇತನಾ,ನಾಗರಾಜು ಉಪಸ್ಥಿತರಿದ್ದರು.
   ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು.

Thursday, 7 January 2016


 
   ರಸ್ತೆ ಅಭಿವೃದ್ಧಿ ಮೂಲಕ ಜನರ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ
      ಮೈಸೂರು,ಜ.7.(ಕ.ವಾ):-ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಅತ್ಯಂತ ಅವಶ್ಯಕವಾದ ಮೂಲಭೂತ ಸೌಕರ್ಯ. ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಜನರ ಅಭಿವೃದ್ಧಿಯ ಜೊತೆಯಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
      ಇಂದು ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಲೋಕೋಪಯೋಗಿ ಇಲಾಖೆ  ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ-21ರ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸುವ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ನಗರ ಪ್ರದೇಶದಲ್ಲಿ ರಸ್ತೆ ಎಷ್ಟು ಅವಶ್ಯಕವೊ ಅಷ್ಟೇ ಅವಶ್ಯಕ ಗಾಮೀಣ ಪ್ರದೇಶಕ್ಕೂ ಸಹ ಇದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಅನೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಬಹಳಷ್ಟು ಕಾಮಗಾರಿಗಳನ್ನು ಕೈಗೆತ್ತಕೊಂಡಿದೆ. ಗ್ರಾಮಾಂತರ ಪ್ರದೇಶದ ನಿವಾಸಿಗಳಿಗೆ, ರೈತರಿಗೆ, ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಸಂಚರಿಸಲು ಅನುಕೂಲ ಕಲ್ಪಿಸಲು ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಗಲೀಕರಣ ಹಾಗೂ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.
      ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ-21ರ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸುವ
ನಿಟ್ಟಿನಲ್ಲಿ ಇಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ರಸ್ತೆಯ ಗುಣಮಟ್ಟ ಅಂತರಾಷ್ಟ್ರೀಯ ರಸ್ತೆಗಳ ಗುಣಮಟ್ಟಕ್ಕೆ ಸಮಾನವಿರುತ್ತದೆ. ಒಟ್ಟು 73.69 ಕಿ.ಮೀ. ಉದ್ದದ ರಸ್ತೆಯನ್ನು ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸಲು 221.93 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಸ್ತೆಯ ನಿರ್ಮಾಣ ಅವಧಿ 2 ವರ್ಷಗಳಿದ್ದು, 8 ವರ್ಷಗಳ ಕಾಲ ರಸ್ತೆ ನಿರ್ವಹಣಾ ಅವಧಿ ಇರುತ್ತದೆ ಎಂದು ತಿಳಿಸಿದರು.
      ರಾಜ್ಯ ಸರ್ಕಾರ ಸಮಾಜದ ಕಟ್ಟಕಡೆಯ ಜನರ ಅಭಿವೃದ್ಧಿಯ ದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರು, ದಲಿತರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಸಾಮಾಜಿಕವಾಗಿ ಶಕ್ತಿ ತುಂಬಲ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಪ್ರಸಕ್ತ ವರ್ಷ ಅನೇಕ ಭಾಗದಲ್ಲಿ ನೀರಿನ ಹಾಗೂ ವಿದ್ಯುತ್ ಕೊರತೆ ಕಾಡಿದೆ. ಜೂನ್ ತಿಂಗಳೊತ್ತಿಗೆ ರಾಜ್ಯಕ್ಕೆ 2300 ಮೇಗಾ ವ್ಯಾಟ್ ವಿದ್ಯುತ್ ಹೊಸದಾಗಿ ಸೇರಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ರೈತರ ವಿದ್ಯುತ್ ದರಕ್ಕೆ 7200 ಕೋಟಿ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.
     ಗ್ರಾಮೀಣ ಪ್ರದೇಶದಲ್ಲಿ ರೈತರು ಅನುಕೂಲಕ್ಕಾಗಿ ಹಾಗೂ ಅಂರ್ತಜಲ ಮಟ್ಟವನ್ನು ಹೆಚ್ಚಿಸಲು ಕೆರೆಗಳಿಗೆ ನದಿ ಮೂಲವಾಗಿ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಪ್ರದೇಶದ ಕೆರೆಗಳಲ್ಲಿ ನೀರು ತುಂಬಿದ್ದು, ಜನರು ಸಂತೋಷ ಪಡುವಂತಾಗಿದೆ. ರಾಜ್ಯದಲ್ಲಿ 1200 ಕರೆಗಳಿಗೆ ನೀರು ತುಂಬಿಸಲು 5000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
      ಲೋಕೋಪಯೋಗಿ ಇಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪಾ ಅಮರನಾಥ್, ಶಾಸಕರಾದ ವೆಂಕಟೇಶ್, ಮಂಜುನಾಥ್, ಧರ್ಮಸೇನಾ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎನ್.ಕೃಷ್ಣ ರಾಜು, ಉಪಾಧ್ಯಕ್ಷರಾದ ಎ.ಹೆಚ್.ಭೀಮಾ ಶಂಕರ, ಪ್ರಾದೇಶಿಕ ಆಯುಕ್ತರಾದ ಎ.ಎಂ.ಕುಂಜಪ್ಪ, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


Tuesday, 5 January 2016

ಮಂಡ್ಯ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಜಿಸ್ಟ್‍ರ ಸಂಘದ ವರ್ಷದ ಕ್ಯಾಲೆಂಡರ್ ಅನ್ನು ರಾಜ್ಯಾಧ್ಯಕ್ಷ ಪುಟ್ಟರಾಜು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ವೈದ್ಯರುಗಳು, ಶುಶ್ರೂಷಕಿಯರು ಸೇರಿದಂತೆ ಸಿಬ್ಬಂದಿಗಳ ಹೊಂದಾಣಿಕೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಭಿವೃದ್ಧಿ ಹೊಂದಿ, ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ವೃತ್ತಿಗೆ ಗೌರವ ಸ್ಥಾನ-ಮಾನ ಸಿಗಬೇಕಾಗಿದ್ದು, ಬೇಡಿಕೆಗಳನ್ನು ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಹೋರಾಟದಲ್ಲಿ ಮಂಡ್ಯ ಜಿಲ್ಲೆ ಗಮನ ಸೆಳೆಯುತ್ತಿದೆ. ಒಳ್ಳೆಯ ಸಂಘಟನಾ ಮನೋಭಾವ ಬೆಳೆಸಿಕೊಂಡು ಸಂಘಟನೆಗೆ ಶಕ್ತಿ ತುಂಬಿ ಸಂಘದ ಯಶಸ್ಸಿಗೆ ಹಾಗೂ ನ್ಯಾಯಬದ್ಧ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರನಾಗಪ್ಪ, ಜಿ.ಸಿ.ನಟರಾಜು, ಬಿ.ಟಿ.ಚಿಕ್ಕಣ್ಣ, ಪಿ.ಮಹೇಶ್, ಎಸ್.ಎಲ್.ದಿನೇಶ್ ಸೇರಿದಂತೆ ಇನ್ನಿತರರಿದ್ದರು.

Monday, 4 January 2016

ಮಂಡ್ಯ : ಗ್ರಾಮೀಣ ಕ್ರೀಡಾಕೂಟಗಳನ್ನು ಮರೆತುಹೋಗುತ್ತಿರುವ ಸಂದರ್ಭದಲ್ಲಿ ಟಿ.ಎಲ್. ಪುರುಷೋತ್ತಮ್ ಅವರ 9ನೇ ವರ್ಷದ ಸಂಸ್ಮರಣೆ ಪ್ರಯುಕ್ತ ನೇತಾಜಿ ಟ್ರಸ್ಟ್‍ನವರು ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಿ ಮತ್ತೆ ಈ ಆಟವನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಅಧ್ಯಕ್ಷ ಎಚ್.ವಿ. ಜಯರಾಂ ತಿಳಿಸಿದರು.
ನಗರದ ಗುತ್ತಲು ರಸ್ತೆಯಲ್ಲಿರುವ ಬೆನಕ ಸಮುದಾಯ ಭವನದಲ್ಲಿ ನೇತಾಜಿ ಟ್ರಸ್ಟ್ ಹಾಗೂ ಟಿ.ಎಲ್. ಪುರುಷೋತ್ತಮ್ ಅಭಿಮಾನಿ ಬಳಗದ ವತಿಯಿಂದ ನಡೆದ ವಿಶ್ವಮಾನವ ಕುವೆಂಪು ಅವರ ಜನ್ಮ ಸಂಭ್ರಮ ಹಾಗೂ ಟಿ.ಎಲ್. ಪುರುಷೋತ್ತಮ್ ಅವರ 9ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಟಿ.ಎಲ್. ಪುರುಷೋತ್ತಮ್ ಅವರು ನಗರಸಭಾಧ್ಯಕ್ಷರಾಗಿ ಸುಂದರ ನಗರ ನಿರ್ಮಾಣದ ಕನಸು ಕಂಡಿದ್ದರು. ರಸ್ತೆ, ಚರಂಡಿ, ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದರು.
ಕ್ರೀಡಾಪಟುಗಳು ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕುವೆಂಪುರವರ ಪಂಚ ಮಂತ್ರಗಳಾದ ಮನುಜಪತ, ವಿಶ್ವಪತ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಇವುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ರೈತರು ಆಡಂಬರದ ಮದುವೆಗಳಿಗೆ ಮಾರುಹೋಗದೆ ಕುವೆಂಪುರವರ ಮಂತ್ರ ಮಾಂಗಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಎಂ. ಎಸ್. ಆತ್ಮಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಜಿ.ಮಾದೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‍ಐ ಬಿ.ಎಸ್. ಶಿವರುದ್ರ, ನಗರಸಭಾ ಸದಸ್ಯರಾದ ಟಿ.ಕೆ. ರಾಮಲಿಂಗಯ್ಯ, ರಫೀವುಲ್ಲಾ, ನೇತಾಜಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ್, ಡಿ.ಎಸ್. ಮೋಹನ್, ಕೆ.ಸಿ. ಪ್ರಕಾಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.


ಮಂಡ್ಯ : ರಂಗಭೂಮಿ ಎಲ್ಲಾ ಕಲಾವಿದರಿಗೆ ತಾಯಿ ಬೇರು ಇದ್ದಂತೆ ಎಂದು ಸಾವಯವ ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಮಧುಚಂದನ್ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಕಾರಸವಾಡಿಯ ಸರ್ವಚೇತನ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಶಿವ ಹಾಗೂ ಕೃಷ್ಣ ಡ್ರಾಮಾ ಸೀನರಿ ವತಿಯಿಂದ ಶ್ರೀ ಶಿವಸೀನರಿಯ ಬೆಳ್ಳಿ ಹಬ್ಬದ ಅಂಗವಾಗಿ ಏಳು ದಿನಗಳ ರಾಜ್ಯ ಮಟ್ಟದ ಗ್ರಾಮೀಣ ನಾಟಕೋತ್ಸವ ಹಾಗೂ ರಂಗನಿರ್ದೇಶಕರುಗಳ ಸಮಾವೇಶ ಮತ್ತು ಅಭಿನಂದನಾ ಸಮಾರಂಭ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಲಿಂಗೇಗೌಡರಿಗೆ ಬೆಳ್ಳಿ ಕಿರೀಟಧಾರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಎಂದರೆ ಕೃಷಿ ಎನ್ನುವಂತಹ ಮಾತಿದೆ ಆದರೆ ಮಂಡ್ಯದಲ್ಲಿ ಇರುವಂತಹ ಕಲಾವಿದರು ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಚಿತ್ರರಂಗ, ಬಾಲಿವುಡ್, ಹಾಲಿವುಡ್ ಸೇರಿದಂತೆ ಎಲ್ಲಾ ರಂಗದಲ್ಲೂ ಮಂಡ್ಯದ ಜನ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಶೀಘ್ರ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಯನ್ನು ಮಂಡ್ಯದಲ್ಲಿ ಸ್ಥಾಪನೆ ಮಾಡುವಂತೆ ಶಿವಡ್ರಾಮಾ ಸೀನ್ಸ್ ಮಾಲೀಕ ಶಿವಲಿಂಗೇಗೌಡ ಅವರಿಗೆ ಸಲಹೆ ನೀಡಿದರು. ಮಂಡ್ಯದಲ್ಲಿ ಇದು ತುಂಬಾ ಅಗತ್ಯವಿದೆ ಎಂದರು.
ಹಿಂದೆ ರಂಗಭೂಮಿಯಲ್ಲಿ ಡಾ. ರಾಜ್‍ಕುಮಾರ್, ಕಲ್ಯಾಣ್‍ಕುಮಾರ್, ಲೀಲಾವತಿ ಯಂತಹ ಕಲಾವಿದರು ಒಮ್ಮೆ ಸಂಭಾಷಣೆಯನ್ನು ಒಂದು ಬಾರಿ ಹೇಳಿಕೊಟ್ಟರೆ ಸುಲಲಿತವಾಗಿ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದರು. ಆದರೆ ಇಂದು ಹತ್ತಕ್ಕಿಂತಲೂ ಹೆಚ್ಚು ಬಾರಿ ಹೇಳಿಕೊಟ್ಟರೂ ಇಂದಿನ ಕಲಾವಿದರಿಗೆ ಸಾಧ್ಯವಾಗುವುದಿಲ್ಲ. ಹಿಂದೆ ಇದ್ದಂತ ಶಕ್ತಿ ಇಂದು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿz್ದÉೀಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಮ್ಮ, ಸಾವಯವ ಕೃಷಿಕರ ಸಹಕಾರ ಸಂಘದ ಸಿಇಓ ಕಾರಸವಾಡಿ ಮಹದೇವು, ರಂಗಭೂಮಿ ಕಲಾವಿದ ಕಾಳೇನಹಳ್ಳಿ ಕೆಂಚೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ, ಗ್ರಾ.ಪಂ. ಸದಸ್ಯೆ ಮಮತಾ ರಮೇಶ್, ಮಾಜಿ ಸದಸ್ಯ ಆಟೋ ದೇವರಾಜು, ರಾಘವೇಂದ್ರ ಡ್ರಾಮಾ ಸೀನ್ಸ್ ಮಾಲೀಕ ನಾರಾಯಣಪ್ಪ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.


ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಕನ್ನಡಿಗ ನ್ಯಾಯಮೂರ್ತಿಗಳನ್ನೇ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಕೆ.ಟಿ. ಶಂಕರೇಗೌಡ, ಬಸವರಾಜು, ಭಾರತಿ, ಕಾಂತರಾಜು, ವೇಣು ಇತರರಿದ್ದರು. ಚಿತ್ರ-ಸಿದ್ದರಾಜು

ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕದಂಬ ಸೈನ್ಯ ವತಿಯಿಂದ ರಾಷ್ಟ್ರ ಕವಿ ಕುವೆಂಪುರವರ 111ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬೇಕ್ರಿ ರಮೇಶ್, ಉಮ್ಮಡಹಳ್ಳಿ ನಾಗೇಶ್, ಸಿ. ಮಹದೇವು, ಯೋಗೇಶ್,ರಾಮಯ್ಯ, ಥಾಮಸ್ ಬೆಂಜಮಿನ್, ಎನ್. ರಾಜೇಗೌಡ ಇತರರಿದ್ದರು.

ಮಂಡ್ಯ: ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದೆ ಎಂದು ಮಂಡ್ಯದ ಚುಂಚನಗಿರಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ, ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಿ.ಹೊಸೂರು ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಹಾಗೂ ಶ್ರೀ ಸಾಯಿ ಟ್ರಾಕ್ಟರ್ ವತಿಯಿಂದ ಬಿ.ಹೊಸೂರಿನ ಪ್ರೌಢಶಾಲಾ ಆವರಣದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಆರೋಗ್ಯದಿಂದಿರಲು ಧ್ಯಾನ, ಯೋಗ, ವ್ಯಾಯಾಮ, ಉತ್ತಮ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಉತ್ತಮ ಆರೋಗ್ಯ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಮನುಷ್ಯನಿಗೆ ಕಾಯಿಲೆಗಳು ಸರ್ವೇ ಸಾಮಾನ್ಯವಾಗಿದ್ದು, ಅದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಹೆಚ್ಚು ಹೆಚ್ಚು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಕಡೆ ಗಮನಹರಿಸಬೇಕು. ಇಂತಹ ಆರೋಗ್ಯ ಶಿಬಿರಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಂತರಾಗಿ ಬಾಳಿ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 40ಕ್ಕೂ ಹೆಚ್ಚು ವೈದ್ಯರಿಂದ ಸುಮಾರು 350ಕ್ಕೂ ಹೆಚ್ಚು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಗೋಪಿನಾಥ್, ಡಾ.ಶಿಲ್ಪಶ್ರೀ, ಸಾಯಿ ಟ್ರಾಕ್ಟರ್‍ನ ರವೀಂದ್ರ, ಉಷರಾಣಿರವೀಂದ್ರ, ಎಸ್.ಶಿವಕುಮಾರ್ ಆರಾಧ್ಯ, ಹೆಚ್.ಆರ್.ಅಶೋಕ್‍ಕುಮಾರ್, ಬಸವರಾಜು, ಬೋಜಮ್ಮ, ವಿಜಿಕುಮಾರ್ ಸೇರಿದಂತೆ ಇನ್ನಿತರರಿದ್ದರು.