Friday, 6 November 2015

ಖಾಸಗಿ ಬಸ್ಸ್ ಚಾಲಕರಿಗೆ ಚಾಲನಾ ಪರೀಕ್ಷೆ

  ಮಂಡ್ಯ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ  ಹಾಗೂ ಖಾಸಗಿ ಶಾಲಾ ಮಕ್ಕಳುಗಳ ವಾಹನಗಳ ಅಪಘಾತಗಳು ಕೂಡ ಜಿಲ್ಲೆಯ ಕೆಲವು ಭಾಗಗಳಲ್ಲಿ ವರದಿಯಾಗಿದ್ದ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ., ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖಾ ವತಿಯಿಂದ ಮಂಡ್ಯ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಖಾಸಗಿ ಬಸ್ ಚಾಲಕರುಗಳ ಹಾಗೂ ಖಾಸಗಿ ಶಾಲಾ ಮಕ್ಕಳ ಬಸ್ ಚಾಲಕರ ಚಾಲನಾ ಪರೀಕ್ಷೆ/ತರಬೇತಿಯನ್ನು ಪರಿಣತಿ ಹೊಂದಿರುವ ಕೆ.ಎಸ್.ಆರ್.ಟಿ.ಸಿ. ಚಾಲಕರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಹಯೋಗದೊಡನೆ ನಡೆಸಲು ನಿರ್ಧರಿಸಲಾಗಿದೆ.

    ಈ ಪರೀಕ್ಷೆ/ತರಬೇತಿಯನ್ನು 2015ರ ನವೆಂಬರ್ ತಿಂಗಳ ಪ್ರತಿ ಭಾನುವಾರ ಅಂದರೆ, ದಿನಾಂಕ: 08-11-2015, 15-11-2015, 22-11-2015 ಮತ್ತು 29-11-2015 ಹಮ್ಮಿಕೊಳ್ಳಲಾಗಿದೆ. ಆದುದರಿಂದ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಬಸ್ಸುಗಳ ಚಾಲಕರುಗಳು ಮತ್ತು ಎಲ್ಲಾ ಖಾಸಗಿ ಶಾಲಾ ಮಕ್ಕಳ ವಾಹನಗಳ ಚಾಲಕರುಗಳು, ತಮ್ಮ ಚಾಲನಾ ಪರವಾನಿಗೆಯೊಂದಿಗೆ ಮೇಲ್ಕಂಡ ದಿನಾಂಕಗಳಂದು ಮಂಡ್ಯ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಬೆಳಿಗ್ಗೆ 09-00 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯವರೆಗೆ ಭಾಗವಹಿಸಬೇಕೆಂದು ಈ ಮೂಲಕ ಕೋರಲಾಗಿದೆ.

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ.
1. ಶ್ರೀ.ಸೋಮಶೇಖರ್, ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್-2,
  ಹಾಗೂ ಮೋಟಾರ್ ವಾಹನ ವಿಭಾಗ, ಜಿಲ್ಲಾ ಸಶಸ್ತ್ರ ಮೀಸಲು ಪಡೆ,
  ಮಂಡ್ಯ ನಗರ : ಮೊ.ಸಂ.:9448643207- 08232-224057.
2. ಶ್ರೀ.ಅಬ್ದುಲ್ ನಸೀಮ್, ಸಾರಿಗೆ ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಇಲಾಖೆ,
   ಮಂಡ್ಯ, ಮೊ.ಸಂ. 9481905786.

No comments:

Post a Comment