Monday, 30 November 2015

 ಸಾಹಿತ್ಯ ಪರಿಷತ್ತಿನ ಚುನಾವಣೆ: ಅಧಿಸೂಚನೆ, ಕರಡು ಮತದಾರರ ಪಟ್ಟಿ ಪ್ರಕಟ
ಮೈಸೂರು, ನವೆಂಬರ್ 30- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ, ಜಿಲ್ಲಾ ಘಟಕಗಳ ಅಧ್ಯಕ್ಷಡಿ, ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯನ್ನು ನಡೆಸಲು ಅಧಿಸೂಚಿನೆ
ಮತ್ತು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಜಿಲ್ಲಾ ಕೇಂದ್ರದ ತಹಶೀಲ್ದಾರ್, ಮೈಸೂರು ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚನಾವಣಾಧಿಕಾರಿಗಳು, ಮೈಸೂರು ಜಿಲ್ಲೆ ಇವರ ಕಚೇರಿಯಲ್ಲಿ ನವೆಂಬರ್ 30 ರಂದು ಪ್ರಕಟಿಸಲಾಗಿದೆ ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ನವೀನ್ ಜೋಸೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಜಿಲ್ಲೆಯ ಜಿಲ್ಲಾ ಕೇಂದ್ರದ ತಹಶೀಲ್ದಾರ್ ಗಳನ್ನು ಚುನಾವಣಾಧಿಕಾರಿಗಳನ್ನಾಗಿ ಹಾಗೂ ಜಿಲ್ಲೆಯ ಉಳಿದ ತಹಶೀಲ್ದಾರ್ ರವರುಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮೈಸೂರು ಜಿಲ್ಲೆಯ ಪ್ರತೀ ತಾಲ್ಲೂಕಿನ ತಹಶೀಲ್ದಾರ್ ರವರ ಕಚೇರಿಯಲ್ಲಿ ಆ ತಾಲ್ಲೂಕು ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಹಾಗೂ ಚುನಾವಣಾ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದೆ.
  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಸಂಬಂಧ ಕರಡು ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 19-12-2015 ರಂದು ಕಡೆಯ ದಿನವಾಗಿದೆ. ಆಕ್ಷೇಪಣೆ ಸಲ್ಲಿಸುವವರು ಕಡೆಯ ದಿನಾಂಕದೊಳಗೆ ಸಂಬಂಧಿಸಿದ ತಹಶೀಲ್ದಾರ್ ರವರ ಕಚೇರಿಯಲ್ಲಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ. ಕಡೆಯ ದಿನಾಂಕದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮತನೀಡುವವರು ಚುನಾವಣಾ ತಾರೀಖಿಗೆ ಮೂರು ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಪರಿಷತ್ತಿನ ಜಿಲ್ಲಾ ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಐದು ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಪರಿಷತ್ತಿನ  ಬಾಕಿ ಉಳಿಸಿಕೊಂಡಿರುವವರು ಹಾಗೂ ಕೋರ್ಟಿನಿಂದ ಶಿಕ್ಷೆಗೆ ಒಳಗಾದವರು ಚುನಾವಣೆಗೆ ನಿಲ್ಲಲು ಅರ್ಹರಾಗಿರುವುದಿಲ್ಲ. ಪರಿಷತ್ತಿನ ಸಿಬ್ಬಂದಿಯವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ದಿನಾಂಕ: 18-01-2016 ಸೋಮವಾರದಿಂದ 25-01-2016 ಸೋಮವಾರದವರೆಗೆ ಪ್ರತೀ ದಿನ ಬೆಳಿಗ್ಗೆ 11ರಿಂದ ಸಂಜೆ5ಗಂಟೆ ವರಗೆ.  ( ರಜಾದಿನಗಳನ್ನು ಹೊರತುಪಡಿಸಿ) ಅವಕಾಶವಿರುತ್ತದೆ.

  ದಿನಾಂಕ:25-01-2016 ಸೋಮವಾರ ಸಂಜೆ 5ಗಂಟೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಚುನಾವಣಾ ನೀತಿಸಂಹಿತೆಯು ದಿನಾಂಕ:30-11-2015 ರಿಂದ ಜಾರಿಗೆ ಬಂದಿರುತ್ತದೆ.
 ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಮತದಾರರ ಪಟ್ಟಿಯ ಕರಡು ಪ್ರತಿಯಂತೆ ಮೈಸೂರು ತಾಲ್ಲೂಕು  5475, ಹೆಗ್ಗಡದೇವನಕೋಟೆ 236, ಹುಣಸೂರು 538, ಪಿರಿಯಾಪಟ್ಟಣ 331, ತಿ.ನರಸೀಪುರ: 837, ಕೃಷ್ಣರಾಜನಗರ 754 ಹಾಗೂ ನಂಜನಗೂಡು 278 ಮತದಾರರು ಇದ್ದಾರೆ ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  

No comments:

Post a Comment