ಮಂಡ್ಯದ ಮಿಮ್ಸ್‍ನಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಕ್ಷಯರೋಗ- ಪ್ರಸ್ತುತ ಮಾಹಿತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಮಿಮ್ಸ್ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಉದ್ಘಾಟಿಸಿದರು. ಡಾ.ಕೆ.ಎಂ.ಶಿವಕುಮಾರ್, ಡಾ.ಎಚ್.ಪಿ.ಮಂಜೇಗೌಡ, ಡಾ.ಅನಿಲ್, ಉಮೇಶ್ ಇತರರಿದ್ದಾರೆ. ಚಿತ್ರ- ಸಿದ್ದರಾಜು
ಮಂಡ್ಯದ ಅಶೋಕನಗರ ಹೋಟೆಲ್ ಸರೋವರ ಹತ್ತಿರ ನೂತನವಾಗಿ ಪ್ರಾರಂಭವಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರಷೋತ್ತಮಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಎಂ.ಎಸ್.ಆತ್ಮಾನಂದ, ಅಮರಾವತಿ ಚಂದ್ರಶೇಖರ್, ಎನ್.ಆರ್.ಜಗದೀಶ್, ಎಚ್.ಎಂ.ದಿವ್ಯಾನಂದಮೂರ್ತಿ, ಬೇಲೂರು ಸೋಮಶೇಖರ್, ಯಡಿಯೂರಪ್ಪ ಇತರರಿದ್ದಾರೆ. ಚಿತ್ರ- ಸಿದ್ದರಾಜು
ಮಂಡ್ಯದ ಅಶೋಕನಗರದಲ್ಲಿ ಹೋಲ್‍ಸೇಲ್ ದರದಲ್ಲಿ ದೊರೆಯುವ ಶ್ರೀ ಅನ್ನಪೂರ್ಣೆಶ್ವರಿ ಟ್ರೇಡರ್ಸ್ ಮಳಿಗೆಯನ್ನು ನಗರಸಭೆ ಸದಸ್ಯ ಎಸ್.ಕೆ.ಶಿವಪ್ರಕಾಶ್‍ಬಾಬು ಉದ್ಘಾಟಿಸಿದರು. ಟಿ.ಕೆ.ರಾಮಲಿಂಗಯ್ಯ, ಚಂದ್ರಕುಮಾರ್, ವೆಂಕಟರಾಜು, ಉಮೇಶ್, ಸತೀಶ್, ಶಂಕರ್ ಇತರರಿದ್ದಾರೆ.
ಮಂಡ್ಯ: ಅಶೋಕನಗರ ಹೋಟೆಲ್ ಸರೋವರ ಹತ್ತಿರ ನೂತನವಾಗಿ ಪ್ರಾರಂಭವಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರಷೋತ್ತಮಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ತುಮಕೂರು ಮಾತ್ರವಲ್ಲದೆ ರಾಜ್ಯಾದ್ಯಂತ ವಿವಿಧೆಡೆ ಶಾಖೆಗಳನ್ನು ಆರಂಭಿಸಿದೆ. ಮಂಡ್ಯ ನಗರದಲ್ಲಿಯೂ ಸಹ ನೂತನ ಶಾಖೆ ಆರಂಭಿಸಿದೆ. ಜಿಲ್ಲೆಯ ರೈತಾಪಿ ಜನತೆ ಸಂಕಷ್ಟದಲ್ಲಿದ್ದು, ರೈತರಿಗೆ ಸಹಾಯವಾಗುವಂತಹ ಯೋಜನೆಗಳನ್ನು ಬ್ಯಾಂಕ್ ರೂಪಿಸಲಿ. ಜಿಲ್ಲೆಯ ಜನತೆಗೂ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹೇಳಿದರು.
ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ ಕೆಲಸ ಮಾಡಲಿ. ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿಕೊಡಲಿ ಎಂದರು.
ಬ್ಯಾಂಕ್‍ನ ಅಧ್ಯಕ್ಷ ಎನ್.ಆರ್.ಜಗದೀಶ್ ಮಾತನಾಡಿ, ಬ್ಯಾಂಕ್ ರಾಜ್ಯಾದ್ಯಂತ 25 ಶಾಖೆಗಳನ್ನು ಆರಂಭಿಸಿದ್ದು, 2.5 ಸಾವಿರ ಕೋಟಿ ರೂ. ವ್ಯವಹಾರ ಮಾಡುತ್ತಿದೆ. 1200 ಕೋಟಿ ರೂ. ಡಿಪಾಸಿಟ್ ಇಟ್ಟಿದ್ದು, 900 ಕೋಟಿ ಸಾಲ ಸೌಲಭ್ಯ ನೀಡಿದೆ. ವ್ಯಾಪಾರಸ್ಥರಿಗೆ ಮಾತ್ರವಲ್ಲದೆ ವಾಣಿಜ್ಯ ಉದ್ಯಮಿಗಳು, ನೌಕರರು, ರೈತರಿಗೂ ಎಲ್ಲ ರೀತಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಖಜಾಂಚಿ ಅಮರಾವತಿ ಚಂದ್ರಶೇಖರ್, ಬ್ಯಾಂಕ್ ಉಪಾಧ್ಯಕ್ಷ ಎಚ್.ಎಂ.ದಿವ್ಯಾನಂದಮೂರ್ತಿ, ಬ್ಯಾಂಕ್‍ನ ವ್ಯವಸ್ಥಾಪಕ ಯಡಿಯೂರಪ್ಪ, ಮುಖಂಡರಾದ ಬೇಲೂರು ಸೋಮಶೇಖರ್, ಶಿವನಂಜು, ಎಸ್.ಕೆ.ಶಿವಪ್ರಕಾಶ್‍ಬಾಬು, ಎಂ.ಪುಟ್ಟೇಗೌಡ ಇತರರು ಭಾಗವಹಿಸಿದ್ದರು.
No comments:
Post a Comment