ಕಾರು ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು,ನ.18- ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಉತ್ತನಹಳ್ಳಿ ವರ್ತುಲ ರಸ್ತೆಯ ಹೊಸಹುಂಡಿ ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.
ತಾಲ್ಲೂಕಿನ ಕೊಚನಹಳ್ಳಿ ಗ್ರಾಮದ ನಿವಾಸಿ ನರಸಿಂಹನ್(35) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ ಪ್ರತಿಭಟಿಸಿದರು.
ಕಾರ್ಯ ನಿಮಿತ್ತ ಮೈಸೂರಿಗೆ ಸ್ಕೂಟರ್‍ನಲ್ಲಿ ನರಸಿಂಹನ್ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಅಪಘಾತದ ಸುದ್ದಿ ತಿಳಿದ ಗ್ರಾಮದ ನೂರಾರು ಜನತೆ ರೊಚ್ಚಿಗೆದ್ದು ರಸ್ತೆತಡೆ ನಡೆಸಿ ಅಪಘಾತ ತಡೆಗಟ್ಟಲು ಕ್ರಮವಹಿಸುವಂತೆ ಒತ್ತಾಯಿಸಿದರು.
ಪೊಲೀಸರು ಮದ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಕಂಬಕ್ಕೆ ಕಟ್ಟಿ ವ್ಯಕ್ತಿ ಸಜೀವ ದಹನ
ಮೈಸೂರು,ನ.18-ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಜೀವವಾಗಿ ದಹಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು-ಬನ್ನೂರು ವರ್ತುಲ ರಸ್ತೆಯ ನಾರಾಯಣ ಹೃದಯಾಲದ ಬಳಿ ದುಷ್ಕøತ್ಯ ನಡೆದಿದ್ದು, ಸುಮಾರು 25ರಿಂದ 30ರ ಪ್ರಾಯಾದ ವ್ಯಕ್ತಿ ಬೀಕರವಾಗಿ ಹತ್ಯೆಯಾಗಿದ್ದಾನೆ.
ದುಷ್ಕøರ್ಮಿಗಳು ರಾತ್ರಿವೇಳೆ ವ್ಯಕ್ತಿಯನ್ನು ಕರೆ ತಂದು ಇಲ್ಲಿನ ವಿದ್ಯುತ್ ಕಂಬಕ್ಕೆ ವೈಯರ್‍ನಿಂದ ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ವ್ಯಕ್ತಿ ಸಜೀವವಾಗಿ ದಹನಗೊಂಡಿದ್ದಾನೆ.
ಬೆಳಿಗ್ಗೆ ವೇಳೆಗೆ ದಾರಿಹೋಕರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣಾ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

No comments:
Post a Comment