ಶಿವಳ್ಳಿ ಠಾಣಾ ಪೊಲೀಸರ ಭರ್ಜರಿ ಕಾರ್ಯಾಚರಣೆ: 9 ವರ್ಷಗಳ ಹಿಂದೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ದಿನಾಂಕ:15-10-2006 ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ತಮ್ಮ ಜಮೀನಿನ ಹತ್ತಿರ ಆಡುಗಳನ್ನು ಮೇಯಿಸಲು ಹೋಗಿದ್ದ ರುದ್ರಮ್ಮ ಎಂಬುವಳನ್ನು ಜಮೀನಿನ ಹತ್ತಿರ ಮಾರಣಾಂತಕವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಈ ಸಂಬಂಧವಾಗಿ ಶಿವಳ್ಳಿ ಠಾಣಾ ಮೊ.ಸಂ:53/2006 ಕಲಂ: ಕಲಂ 302-201-120( ಬಿ)ರೆ,ವಿ,34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿ ತನಿಖೆ ನಡೆಸಿ ಆರೋಪಿ ಚಂದ್ರಮ್ಮ ಎಂಬುವಳನ್ನು ಪತ್ತೇಮಾಡಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ಉಳಿದ ಆರೋಪಿ ಮಂಜುನಾಥಸ್ವಾಮಿ @ ಮಂಜುನಾಥ @ ಮಂಜು ಮತ್ತು ದಿನೇಶ್ ಕುಮಾರ್ @ ದಿನೇಶ್ ರವರುಗಳು ತಲೆಮೆರಿಸಿಕೊಂಡು ಪರಾರಿಯಾಗಿದ್ದರಿಂದ ಸದರಿ ಆರೋಪಿಗಳನ್ನು ತಲೆಮರೆಸಿಕೊಂಡಿರುವ ಆರೋಪಿಗಳೆಂದು ಚಂದ್ರಮ್ಮರವರ ಮೇಲೆ ದೋಷಾರೋಪಣ ಪತ್ರವನ್ನು ಸಲ್ಲಿಸಿಕೊಂಡಿದ್ದು ಮಾನ್ಯ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಎಸ್.ಸಿ. ನಂ:61/2008 ರಲ್ಲಿ ವಿಚಾರಣೆಯಲ್ಲಿ ನಡೆಯುತ್ತಿರುತ್ತೆ.
ಈ ಕೇಸಿನಲ್ಲಿ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರವರಾದ ಶ್ರೀ ಲೋಕೇಶ್‍ರವರ ನೇತೃತ್ವದ ತಂಡವು ಆರೋಪಿಗಳ ಪತ್ತೇಬಗ್ಗೆ ಮಾಹಿತಿ ಕಲೆಹಾಕಿ ದಿನಾಂಕ:20-09-2015 ರಂದು 2ನೇ ಆರೋಪಿ ಮಂಜುನಾಥ @ ಮಂಜು ಎಂಬುವನನ್ನು ಬೆಂಗಳೂರಿನ ಯಶವಂತಪುರ ಯಾರ್ಡ್‍ನಲ್ಲಿ ಹಾಗೂ 3ನೇ ಆರೋಪಿಯನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಹೌಟ್‍ನಲ್ಲಿ ಪತ್ತೇಮಾಡಿ ವಶಕ್ಕೆ ತೆಗೆದುಕೊಂಡು ಬಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತೆ. ಆರೋಪಿಗಳು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಆರೋಪಿಗಳ ವಿವರ
1] ಮಂಜುನಾಥಸ್ವಾಮಿ @ ಮಂಜುನಾಥ @ ಮಂಜು ಬಿನ್ ಲೆಟ್ ಚನ್ನ ಬಸಪ್ಪ 35ವರ್ಷ ಲಿಂಗಾಯಿತರು ಲಾರಿ ಮಾಲೀಕರು ಹಾಗೂ ಲಾರಿ ಡ್ರೈವರ್ ವಾಸ ನಂ. 37-1ನೇ ಮೇಯಿನ್ ರೋಡ್ 6ನೇ ಕ್ರಾಸ್ ಬೈರವೇಶ್ವರ ನಗರ ಲಗ್ಗೆರೆ ಬೆಂಗಳೂರು, ಸ್ವಂತ ಊರು ಬಿ. ಹಟ್ಟಣ ಗ್ರಾಮ ದುದ್ದ ಹೋಬಳಿ ಮಂಡ್ಯ ತಾಲ್ಲೊಕು
2] ದಿನೇಶ್ ಕುಮಾರ್ @ ದಿನೇಶ್ ಬಿನ್ ಪ್ರಕಾಶ್ 40ವರ್ಷ ಚೌದರಿ ಜನಾಂಗ ಕಾರ್ ಡ್ರೈವರ್ ಕೆಲಸ ವಾಸ ದೀಪಾ
ಕಾಂಪ್ಲೆಕ್ಸ್ ವೈಸ್ ಮೆನ್ ಅಪಾರ್ಟ್ ಮೆಂಟ್ ಕೆ,ಕೆ ಲೇಔಟ್ ಲಿಂಗಮ್ಮನ ವಠಾರ ಪಾಪರೆಡ್ಡಿಪಾಳ್ಯ ಬೆಂಗಳೂರು ಸ್ವಂತ ಸ್ಥಳ
ರಾಜಸ್ಥಾನ ರಾಜ್ಯ
ಈ ಪತ್ತೇಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಗ್ರಾಮಾಂತರ ವೃತ್ತ ಆರಕ್ಷಕ ವೃತ್ತ ನಿರೀಕ್ಷಕರವರಾದ ಶ್ರೀ ಲೋಕೇಶ್ ಶಿವಳ್ಳಿ ಠಾಣಾ ಪಿಎಸ್‍ಐ ಶ್ರೀ ಶಿವಮಾದಯ್ಯ, ಸಿಬ್ಬಂದಿಯವರಾದ ಶ್ರೀಬಿ.ಚಿಕ್ಕಯ್ಯ, ಶ್ರೀ ಮಹೇಶ್, ಶ್ರೀಅನಿಲ್‍ಕುಮಾರ್, ಶ್ರೀ ಉಮ್ಮರ್ ಶ್ರೀ ಕಾಳಯ್ಯ, ಶ್ರೀ ಪರಶಿವಮೂರ್ತಿ ಮತ್ತು ಚಾಲಕ ಶ್ರೀ ಕುಮಾರ್ ರವರುಗಳನ್ನು ಮಂಡ್ಯ ಜಿಲ್ಲಾ ಮಾನ್ಯ ಎಸ್‍ಪಿ ಭೂಷಣ್ ಜಿ ಬೋರಸೆ ಶ್ಲಾಘಿಸಿದ್ದಾರೆ.

No comments:
Post a Comment