ಸರ್ಕಾರಿ ವೈದ್ಯರ ಔಷಧ ಸಲಹ ಚೀಟಿ ಪರಿಶೀಲಿಸಲು ಸೂಚನೆ
ಮೈಸೂರು, ಸೆಪ್ಟೆಂಬರ್ 11. ಸರ್ಕಾರಿ ವೈದ್ಯರು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಗಳನ್ನು ನೀಡದೆ ಸಮೀಪವಿರುವ ಖಾಸಗಿ ಔಷಧಿ ಅಂಗಡಿಗಳಲ್ಲಿ ಖರೀದಿಸಲು ಔಷಧü ಸಲಹ ಚೀಟಿ ಕೊಡುವ ದೂರುಗಳು ಕೇಳಿಬಂದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ.ಬಿ.ಪುಷ್ಪ ಅಮರನಾಥ್ ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿ.ಪಂ. ಕೆ.ಡಿ.ಪಿ ಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿದ್ದರೂ ಕೆಲವು ಸರ್ಕಾರಿ ವೈದ್ಯರು ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧಿ ಖರೀದಿಸಲು ಸಲಹ ಚೀಟಿ ಕೊಡುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ಖಾಸಗಿ ಔಷಧü ಅಂಗಡಿಗಳಲ್ಲಿ ಖರೀದಿಸಲು ವೈದ್ಯರು ಸಲಹ ಚೀಟಿ ನೀಡುವುದು ಅರ್ಥಕರ. ಆದರೆ ದುಡ್ಡಿನ ಆಸೆಗೆ ಕೆಲವು ವೈದ್ಯರು ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧಿ ಖರೀದಿಸಲು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಮಾನವಿಯತೆ ಮರೆತ ಈ ವೈದ್ಯರ ವಿರುದ್ಧ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷದ ಮೈಸೂರು ಜಿಲ್ಲೆಯ ಪದವಿ ಪೂರ್ವ ಪರೀಕ್ಷಾ ಪಲಿತಾಂಶ ಉತ್ತಮವಾಗಿರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುವ ಮೈಸೂರು ಜಿಲ್ಲೆ, ಪದವಿ ಪೂರ್ವ ಪರೀಕ್ಷಾ ಪಲಿತಾಂಶÀದಲ್ಲಿ ಹಿಂದೆ ಉಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲೇಜು ಪ್ರಾಂಶುಪಾಲರ ಸಭೆಯನ್ನು ಶೀಘ್ರ ಕರೆದು ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಕುರಿತು ಯೋಜನೆಯನ್ನು ತುರ್ತಾಗಿ ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.
ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಒದುತ್ತಿರುವ ಬಹುತೇಖ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದವರು. 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಐತಿಹಾಸಿಕ ಹಿನ್ನಲೆ ಇರುವ ಮಹಾರಾಜ ಕಾಲೇಜಿನಲ್ಲಿ ಕೇವಲ 4 ಶೌಚಾಲಯಗಳಿರುವು ವಿಷಾಧನಿಯ. ಬಹಳಷ್ಟು ಖಾಸಗಿ ಕಾರ್ಖಾನೆಗಳು ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಲಾಭಗಳಿಸುತ್ತಿದ್ದು, ಮೂಲಸೌಲಭ್ಯಕೆಂದೇ ಮೀಸಲಿರುವ ಸಿಎಸ್‍ಆರ್ ಅನುದಾನವನ್ನು ಬಳಸಿಕೊಂಡು ಕಾಲೇಜಿನಲ್ಲಿ ಶೀಘ್ರ ಶೌಚಾಲಯವನ್ನು ನಿರ್ಮಾಣ ಮಾಡುವ ಜೊತೆಯಲ್ಲಿ ಮೂಲಭೂತ ಸೌಕರ್ಯವನ್ನು ಉತ್ತಮಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಸರ್ಕಾರ ಇ ಆಡಳಿತಕ್ಕೆ ಒತ್ತು ನೀಡುತ್ತಿದ್ದು, ಸರ್ಕಾರಿ ಕಚೇರಿಯನ್ನು ಪೇಪರ್ ಮುಕ್ತವÀನ್ನಾಗಿ ಮಾಡಲು ಮುಂದಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಿರಿಗೂ ಕಂಪ್ಯೂಟರ್ ಶಿಕ್ಷಣದ ಜ್ಞಾನ ಅಗತ್ಯ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಬಹಳಷ್ಟು ಕೆಲಸಗಳು ಕಂಪ್ಯೂಟರ್ ಬಳಕೆಯಿಂದ ನಡೆಯುತ್ತಿವೆÉ. ಅಂತರ್ಜಾಲದ ಸಂಪರ್ಕ ಅಗತ್ಯವಾಗಿದ್ದು, ಬಿಎಸ್‍ಎನ್‍ಎಲ್ ಕಡೆಯಿಂದ ಬ್ರಾಡ್ಬ್ಯಾಂಡ್ ವ್ಯವಸ್ಥೆ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ ಸರ್ಕಾರದಿಂದ ಶಾಲೆಗಳಿಗೆ ಕಂಪ್ಯೂಟರ್‍ಗಳನ್ನು ಸರಬರಾಜು ಮಾಡಲಾಗಿದೆ. ಕಂಪ್ಯೂಡರ್ ಜ್ಞಾನ ವಿದ್ಯಾರ್ಥಿಗಳಿಗೆ ಅವಶ್ಯವಾಗಿದ್ದು, ಕಲಿಕೆಗೆ ತೊಂದರೆಯಾಗದಂತೆ ಬ್ರಾಡ್ಬ್ಯಾಂಡ್ ವ್ಯವಸ್ಥೆಯನ್ನು ಬಿಎಸ್‍ಎನ್‍ಎಲ್ ಕಲ್ಪಿಸಬೇಕು ಎಂದು ಹೇಳಿದರು.
ರೈ ಸಂಪರ್ಕ ಕೇಂದ್ರಗಳಲ್ಲಿ ನಡೆಯುವ ಕೃಷಿ ಅದಾಲತ್‍ಗಳು ಹೋಬಳಿ ಮಟ್ಟದಲ್ಲೂ ನಡೆಯಬೇಕು. ರೈತರಿಗೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ರೈತರನ್ನು ಉತ್ತೇಜಿಸಲು ಕೃಷಿಕರ ಗುಂಪುಗಳನ್ನು ಪ್ರತಿ ಗ್ರಾಮಗಳಲ್ಲಿ ಕಟ್ಟವ ಕುರಿತು ಗಂಭೀರ ಚಿಂತನೆ ನಡೆಯಬೇಕು. ರೈತ ಹಿತವನ್ನು ಕಾಪಾಡಲು ಸರ್ಕಾರ ಸಧಾ ಸಿದ್ಧವಿದೆ ಎಂಬುವ ಬಗ್ಗೆ ಜಾಗೃತಿ ಮೂಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹಾಂಪ್‍ಕಾಮ್ಸ್ ಮಳಿಗೆಗಳನ್ನು ತೆರೆಯಲು ತೋಟಗಾರಿ ಇಲಾಖೆ ಮುಂದಾಗಬೇಕು ಎಂದು ಪುಷ್ಪ ಅಮರನಾಥ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಉಪಾಧ್ಯಕ್ಷರಾದ ಎಲ್.ಮಾದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಜಣ್ಣ, ಜವರೇಗೌಡ, ರಾಜಯ್ಯ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

No comments:
Post a Comment