ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಎಂ.ಎಸ್. ಸತ್ಯು ಸಿನಿಮಾವಲೋಕನ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 12 ರಂದು ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಜಿ.ಎಸ್. ಭಾಸ್ಕರ್ ಮತ್ತು ವಿ.ಎನ್. ಲಕ್ಷ್ಮಿನಾರಾಯಣ್ ಅವರು ಎಂ.ಎಸ್.ಸತ್ಯು ಜೊತೆಗೆ ಸಂವಾದ ನಡೆಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದೆ.
ಮಾಧ್ಯಮ ಆಹ್ವಾನ-2
ಮುಖ್ಯಮಂತ್ರಿಗಳು ಸುತ್ತೂರಿನಲ್ಲಿರುವ ಜೆ.ಎಸ್.ಎಸ್. ವಸತಿ ಪ್ರೌಢಶಾಲೆ ಸುವರ್ಣಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 14 ರಂದು ಭಾಗವಹಿಸಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಮಾಡಲಾಗಿದ್ದು, ವಾಹನವು ಅಂದು ಬೆಳಿಗ್ಗೆ 9-30 ಗಂಟೆಗೆ ವಾರ್ತಾಭವನದಿಂದ ಹೊರಡಲಿದೆ. ಬೆಳಿಗ್ಗೆ 9 ಗಂಟೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಆಗಮಿಸುವಂತೆ ಕೋರಿದೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಸೆ.11.ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 14 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅವರು ಅಂದು ಬೆಳಿಗ್ಗೆ 10-50ಕ್ಕೆ ಸುತ್ತೂರಿನ ಜೆ.ಎಸ್.ಎಸ್. ಸ್ಕೂಲ್ ಕ್ಯಾಂಪಸ್‍ನ ಹತ್ತಿರವಿರುವ ಹೆಲಿಪ್ಯಾಡ್‍ಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಜೆ.ಎಸ್.ಎಸ್. ಮಹಾವಿದ್ಯಾಪೀಠದ ವತಿಯಿಂದ ಸುತ್ತೂರಿನಲ್ಲಿ ಆಯೋಜಿಸಿರುವ ಜೆ.ಎಸ್.ಎಸ್. ವಸತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 12-30 ಗಂಟೆಗೆ ಸುತ್ತೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಮೂಲಕ ಬೆಂಗಳೂರಿಗೆ ತೆರೆಳಲಿದ್ದಾರೆ.
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
ಮೈಸೂರು,ಸೆ.11.(
ಮೈಸೂರು ಜಿಲ್ಲಾ ಪಂಚಾಯಿತಿಯ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2015ರ ಸೆಪ್ಟೆಂಬರ್ ಮಾಹೆಯಲ್ಲಿ ಮೈಸೂರು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಮೈಸೂರು ತಾಲ್ಲೂಕಿನಲ್ಲಿ ಸೆಪ್ಟೆಂಬರ್ 25 ರಂದು ಆನಂದೂರು, ಸೆಪ್ಟೆಂಬರ್ 26 ರಂದು ನಾಗನಹಳ್ಳಿ, ಸೆಪ್ಟೆಂಬರ್ 28 ರಂದು ಡಿ.ಎಂ.ಜಿ. ಹಳ್ಳಿ, ನಂಜನಗೂಡು ತಾಲ್ಲೂಕಿನಲ್ಲಿ ಸೆಪ್ಟೆಂಬರ್ 14 ರಂದು ನವಿಲೂರು, ಸೆಪ್ಟೆಂಬರ್ 19 ರಂದು ಹೆಡಿಯಾಲ, ಸೆಪ್ಟೆಂಬರ್ 23 ರಂದು ಕಾರ್ಯ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 15 ರಂದು ಹಂಡಿತವಳ್ಳಿ, ಹುಣಸೂರು ತಾಲ್ಲೂಕಿನಲ್ಲಿ ಸೆಪ್ಟೆಂಬರ್ 18 ರಂದು ದೊಡ್ಡಹೆಜ್ಜೂರು, ಸೆಪ್ಟೆಂಬರ್ 22 ರಂದು ಹರವೆ, ಸೆಪ್ಟೆಂಬರ್ 29 ರಂದು ಹಳೇಬೀಡು, ತಿ.ನರಸೀಪುರ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 21 ರಂದು ಸೋಮನಾಥಪುರ ಹಾಗೂ ಕೆ.ಆರ್.ನಗರ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 30 ರಂದು ಕೆಗ್ಗರೆ ಗ್ರಾಮದಲ್ಲಿ ವಾಹನ ಸಂಚರಿಸಲಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಸೆ. 17 ರಂದು ಶ್ರೀ ಗಣೇಶ ಪ್ರಯುಕ್ತ ಕುರಿಮಂಡಿ ಕಸಾಯಿಖಾನೆ ಬಂದ್
ಮೈಸೂರು,ಸೆ.11.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 2015 ರ ಸೆಪ್ಟೆಂಬರ್ 17 ರಂದು ಮುಚ್ಚಲಾಗುವುದು. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಎಲ್ಲ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೆ. 12, 13 ರಂದು ಎಂ.ಎಸ್. ಸತ್ಯು ಸಿನಿಮಾವಲೋಕನ
ಮೈಸೂರು,ಸೆ.11.ಕನ್ನಡಕ್ಕೆ ಹಲವು ವಿಭಿನ್ನ ಚಿತ್ರಗಳನ್ನು ನೀಡಿದ ಬಹುಭಾಷಾ ಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ಎಂ.ಎಸ್. ಸತ್ಯು ಅವರ ಸಮಗ್ರ ಚಿತ್ರಕೃತಿಗಳ ವೀಕ್ಷಣೆ ಹಾಗೂ ಸಂವಾದ ಕಾರ್ಯಕ್ರಮವನ್ನು ಒಳಗೊಂಡ ಎಂ.ಎಸ್. ಸತ್ಯು ಸಿನಿಮಾವಲೋಕನ ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 12 ಹಾಗೂ 13 ಶನಿವಾರ ಮತ್ತು ಭಾನುವಾರದಂದು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯ ಕಾರ್ಯಕ್ರಮದ ಅಂಗವಾಗಿ ಸಿನಿಮಾವಲೋಕನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಎರಡು ದಿನಗಳ ಕಾಲ ಎಂ.ಎಸ್. ಸತ್ಯು ಅವರು ಉಪಸ್ಥಿತರಿದ್ದು ಚಿತ್ರವೀಕ್ಷಣೆಯ ನಂತರ ಪ್ರೇಕ್ಷಕರ ಜತೆ ಸಂವಾದದಲ್ಲಿ ಪಾಲ್ಗೊಳ್ಳುವರು.
ಶನಿವಾರ ಸಂಜೆ 5 ಗಂಟೆಗೆ ಎಂ.ಎಸ್.ಸತ್ಯು ಅವರ ಜತೆ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಹಾಗೂ ಚಲನಚಿತ್ರ ವಿಮರ್ಶಕ ವಿ.ಎನ್.ಲಕ್ಷ್ಮಿನಾರಾಯಣ್ ಅವರು ಸಂವಾದ ನಡೆಸುವರು. ರಂಗಾಯಣ ನಿರ್ದೇಶಕ ಹೆಚ್. ಜನಾರ್ಧನ್ (ಜನ್ನಿ) ಅವರು ಸಂವಾದಕ್ಕೆ ಚಾಲನೆ ನೀಡುವರು. ಈ ಸಂವಾದದಲ್ಲಿ ಎಂ.ಎಸ್. ಸತ್ಯು ಅವರು ಚಲನಚಿತ್ರ ರಂಗದ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಎಂ.ಎಸ್.ಸತ್ಯು ಅವರ ನಿರ್ದೇಶನದ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಚಲನಚಿತ್ರಗಳ ಪ್ರದರ್ಶನವನ್ನು ಎರಡೂ ದಿನಗಳ ಕಾಲ ಆಯೋಜಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ 10-30 ರಿಂದಲೇ ಚಿತ್ರಗಳ ಪ್ರದರ್ಶನ ಆರಂಭವಾಗಲಿದೆ.
ಮೈಸೂರಿನ ಖ್ಯಾತ ಛಾಯಾಗ್ರಾಹಕ ಟಿ.ಎಸ್.ಸತ್ಯನ್ ಅವರನ್ನು ಕುರಿತು ಸಾಕ್ಷ್ಯಚಿತ್ರ ಪ್ರದರ್ಶನದ ಜತೆ ಶನಿವಾರ ಬೆಳಿಗ್ಗೆ 10-30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಕನ್ನಡ ಚಲನಚಿತ್ರ ಕನ್ನೇಶ್ವರ ರಾಮ, ಮಧ್ಯಾಹ್ನ 2-30ಕ್ಕೆ ಗುಬ್ಬಿವೀರಣ್ಣ ಅವರನ್ನು ಕುರಿತ ಸಾಕ್ಷ್ಯಚಿತ್ರ ನಾಟಕರತ್ನ, ಮಧ್ಯಾಹ್ನ 3 ಗಂಟೆಗೆ ಕನ್ನಡ ಚಲನಚಿತ್ರ ಇಜ್ಜೋಡು, ಸಂಜೆ 6 ಗಂಟೆಗೆ ಕನ್ನಡ ಚಲನಚಿತ್ರ ಚಿತೆÉಗೂ ಚಿಂತೆ ಪ್ರದರ್ಶಿಸಲಾಗುವುದು.
ಭಾನುವಾರ ಬೆಳಿಗ್ಗೆ 10-30ಕ್ಕೆ ಕಿರುಚಿತ್ರ ರೈಟ್ ಟು ಲಿವ್, ಬೆಳಿಗ್ಗೆ 11 ಗಂಟೆಗೆ ಕನ್ನಡ ಚಲನಚಿತ್ರ ಗಳಿಗೆ ಮಧ್ಯಾಹ್ನ 2-30ಕ್ಕೆ ಸಾಕ್ಷ್ಯಚಿತ್ರ ಮಾಸ್ತಿ, ಮಧ್ಯಾಹ್ನ 3 ಗಂಟೆಗೆ ಕನ್ನಡ ಚಲನಚಿತ್ರ ಬರ, ಪ್ರದರ್ಶನ ಇರುತ್ತದೆ.
ಭಾನುವಾರ ಸಂಜೆ 5 ಗಂಟೆಗೆ ಸಾಹಿತಿ ಡಾ. ಕಾಳೇಗೌಡ ನಾಗವಾರ, ಚಿತ್ರನಟ, ರಂಗಕರ್ಮಿ ಮಂಡ್ಯ ರಮೇಶ್ ಸಮಾರೋಪ ನುಡಿಗಳನ್ನಾಡುವರು. ನಂತರ ಸಂಜೆ 6 ಗಂಟೆಗೆ ಗರಂ ಹವಾ ಹಿಂದಿ ಚಲನಚಿತ್ರ ಪ್ರದರ್ಶನ ಇರುತ್ತದೆ.
ಮೈಸೂರು ಶ್ರೀನಿವಾಸ್ ಸತ್ಯು ಅವರು ಮೂಲತ: ಮೈಸೂರಿನವರೇ ಆಗಿದ್ದು ರಾಷ್ಟ್ರಮಟ್ಟದಲ್ಲಿ ಚಲನಚಿತ್ರ ನಿರ್ದೇಶನ, ನಾಟಕ ನಿರ್ದೇಶನ ಹಾಗೂ ಕಲಾ ನಿರ್ದೇಶನದಲ್ಲಿ ಹೆಸರು ಮಾಡಿದವರು. ಗರಂ ಹವಾ ಹಿಂದಿ ಚಲನಚಿತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಸತ್ಯು ಅವರಿಗೆ ಪದ್ಮಶ್ರೀ ಪ್ರಶಸ್ತಿಯು ಸೇರಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಎಲ್ಲ ಚಿತ್ರಗಳಿಗೆ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
ಅಣಬೆ ಬೇಸಾಯ ತರಬೇತಿ
ಮೈಸೂರು,ಸೆ.11.ಮೈಸೂರಿನ ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದ ಅಣಬೆ ಪ್ರಯೋಗಶಾಲೆಯಲ್ಲಿ ಸೆಪ್ಟೆಂಬರ್ 23 ರಂದು ಅಣಬೆ ಉತ್ಪಾದನೆ ಮತ್ತು ಸಂಸ್ಕರಣೆ ಬಗ್ಗೆ ಕೃಷಿಕರು , ಗೃಹಣಿಯರು, ನಿರುದ್ಯೋಗಿ ಪದವೀಧರರು ಹಾಗೂ ಉದ್ಯಮಿಗಳಿಗೆ ಒಂದು ದಿನದ ಪ್ರಾಯೋಗಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯವಲಯ, ಕರ್ಜನ್ ಪಾರ್ಕ್, ಮೈಸೂರು ಇಲ್ಲಿ ರೂ 50/- ಪಾವತಿಸಿ ಹೆಸರು ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9740596111 ನ್ನು ಸಂಪರ್ಕಿಸುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ.ಫಿಲ್ ಮತ್ತು ಪಿಹೆಚ್.ಡಿ ಪ್ರಬಂಧ ಮುದ್ರಿಸಲು ಧನಸಹಾಯ
ಮೈಸೂರು,ಸೆ.11.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅನುಸೂಚಿತ ಜಾತಿ ಮತ್ತು ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳು 2014-15ನೇ ಸಾಲಿನಲ್ಲಿ ಕನ್ನಡದಲ್ಲಿ ಮಂಡಿಸಿದ ಎಂ.ಫಿಲ್ ಮತ್ತು ಪಿಹೆಚ್.ಡಿ ಪ್ರಬಂಧ ಮುದ್ರಿಸಲು ಧನಸಹಾಯ ನೀಡಲಿದೆ.
ದಿನಾಂಕ 01.04.2015 ರಿಂದ 31.02.2015ರ ಒಳಗೆ ಯಾವುದೇ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯಗಳಲ್ಲಿ ಕನ್ನಡದಲ್ಲಿ ಎಂ.ಫಿಲ್ ಮತ್ತು ಪಿಹೆಚ್.ಡಿಗೆ ಮಂಡಿಸಿ ಪದವಿ ಪಡೆದ ಪ್ರೌಢ ಪ್ರಬಂಧಗಳಾಗಿರಬೇಕು.
ಅರ್ಜಿ ನಮೂನೆ ಹಾಗೂ ನಿಯಮಾವಳಿ ವೆಬ್‍ಸೈಟ್ ತಿತಿತಿ.ಞಚಿಟಿಟಿಚಿಜಚಿsiಡಿi.ಛಿo.iಟಿ ನಲ್ಲಿ ಅಥವಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇಲ್ಲಿಗೆ ಸೆಪ್ಟೆಂಬರ್ 25 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22111206 ಹಾಗೂ ಮೊಬೈಲ್ ಸಂಖ್ಯೆ 9449842132 ನ್ನು ಸಂಪರ್ಕಿಸಬಹುದು.
ಮ್ಯಾನೇಜರ್ ಸೆಕ್ಯುರಿಟಿ ಹಾಗೂ ಮ್ಯಾನೇಜರ್ ರಾಜಭಾಷಾ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಸೆ.11.ವಿಜಯ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಸೆಕ್ಯುರಿಟಿ -24 ಹುದ್ದೆಗಳು ಹಾಗೂ ಮ್ಯಾನೇಜರ್ ರಾಜಭಾಷಾ -16 ಹುದ್ದೆಗಳನ್ನು ನೇಮಾಕಾತಿ ಮಾಡಿಕೊಳ್ಳಲಾಗುವುದು.
ಮ್ಯಾನೇಜರ್ ಸೆಕ್ಯುರಿಟಿ ಹುದ್ದೆಗೆ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ವಯೋಮಿತಿ 01/08/2015 ಕ್ಕೆ 20-45 ವರ್ಷದೊಳಗಿರಬೇಕು. ಕನಿಷ್ಠ ಐದು ವರ್ಷ ಕಮೀಷಂಡ್ ರ್ಯಾಂಕ್‍ನಲ್ಲಿ ಸೇನೆ/ನೌಕದಳ/ವಾಯುದಳ ಸೇವೆಯಲ್ಲಿ ಅಥವಾ ಪೋಲೀಸ್ ಇಲಾಖೆಯಲ್ಲಿ ಂಅP/ಆಥಿSP ಸೇವೆಯಲ್ಲಿ ಅಥವಾ ಪ್ಯಾರ ಮಿಲಿಟರಿಯಲ್ಲಿ ಸೇವೆ ಸಲ್ಲಿಸರಬೇಕು.
ಮ್ಯಾನೇಜರ್ ರಾಜಭಾಷಾ ಹುದ್ದೆಗೆ ಸ್ನಾತಕೋತ್ತರ ಪದವಿಯೊಂದಿಗೆ (ಹಿಂದಿ ಭಾಷೆಯಲ್ಲಿ) ಪದವಿ ಮಟ್ಟದಲ್ಲಿ ಆಂಗ್ಲ ಭಾಷೆಯನ್ನು ಐಚ್ಛಿಕ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು ಅಥವಾ ಸ್ನಾತಕೋತ್ತರ ಪದವಿಯೊಂದಿಗೆ (ಸಂಸ್ಕøತ ಭಾಷೆಯಲ್ಲಿ) ಪದವಿ ಮಟ್ಟದಲ್ಲಿ ಆಂಗ್ಲ ಭಾಷೆ ಮತ್ತು ಹಿಂದಿ ಎರಡು ವಿಷಯಗಳನ್ನು ಅಧ್ಯಯನ ಮಾಡಿರಬೇಕು. ವಯೋಮಿತಿ 01/08/2015 ಕ್ಕೆ 20-35 ವರ್ಷದೊಳಗಿರಬೇಕು. ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ/ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ/ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ಸೇವೆಯಲ್ಲಿ ಎರಡು ವರ್ಷಗಳ ಭಾಷಾನುಷ್ಠಾನದಲ್ಲಿ ಅನುಭವವಿರಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ: ತಿತಿತಿ.viರಿಚಿಥಿಚಿbಚಿಟಿಞ.ಛಿom ರಲ್ಲಿ ಪಡೆಯಬಹುದು.
ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ
ಮೈಸೂರು,ಸೆ.11. ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರು ದಕ್ಷಿಣ ವಲಯದ ಬ್ಲಾಕ್ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 15 ರಂದು ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಪ್ರತಿಭಾ ಕಾರಂಜಿ ನಡೆಯಲಿದೆ.
ಕ್ಲಾಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ಸೆಪ್ಟೆಂಬರ್ 15 ರಂದು ಬೆಳಿಗ್ಗೆ 9 ಗಂಟೆಯೊಳಗೆ ಹಾಜರಾಗಿ ಹೆಸರು ನೋಂದಾಯಿಸಿಕೊಂಡು ಸ್ಫರ್ಧೆಗಳಲ್ಲಿ ಭಾಗವಹಿಸುವುದು.
ವಾರ್ಡನ್ ಹುದ್ದೆ: ಸೆಪ್ಟೆಂಬರ್ 13 ರಂದು ಲಿಖಿತ ಪರೀಕ್ಷೆ
ಮೈಸೂರು,ಸೆ.11. ಕರ್ನಾಟಕ ಕಾರಾಗೃಹ ಇಲಾಖೆಯ ವಾರ್ಡ್‍ರ್ ಹುದ್ದೆಗೆ ಲಿಖಿತ ಪರೀಕ್ಷೆ ಸೆಪ್ಟೆಂಬರ್ 13 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬರುಗಿ, ಬಳ್ಳಾರಿ, ವಿಜಯಪುರ ಹಾಗೂ ಮಂಗಳೂರಿನಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಲು ಹಾಜರಿ ಪತ್ರವನ್ನು ತಿತಿತಿ.ಞಚಿಡಿಟಿಚಿಣಚಿಞಚಿಠಿಡಿisoಟಿs.iಟಿ ವೆಬ್‍ಸೈಟ್ ಮೂಲಕ ಪಡೆದು, ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮುಂಚಿತವಾಗಿ ಕರೆಪತ್ರ, ಆನ್‍ಲೈನ್ ಅರ್ಜಿಯ ಹಾರ್ಡ್‍ಕಾಪಿ ಹಾಗೂ ಹಣ ಪಾವತಿಸಿದ ಬಗ್ಗೆ ಬ್ಯಾಂಕ್ ಚಲನ್‍ನೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ್ಲ
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-22261131ನ್ನು ಸಂಪರ್ಕಿಸುವುದು.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ : ಸಿ. ಶಿಖಾ
ಮೈಸೂರು,ಸೆ.11.ಬ್ಯಾಂಕ್‍ಗಳು ಸಾಮಾಜಿಕವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮನವಿ ಮಾಡಿದರು.
ಅವರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಜವಾಬ್ದಾರಿ ಕುರಿತಂತೆ ವಿವಿಧ ಬ್ಯಾಂಕ್‍ಗಳ ಜೊತೆಗೆ ಸಭೆ ನಡೆಸಿ ಮಾತನಾಡಿದರು. ಸಭೆಯಲ್ಲಿ ಮುಖ್ಯವಾಗಿ ಸಂಸದ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ
ಬಿ. ಮಟಕೆರೆ ಗ್ರಾಮಗಳ ಅಭಿವೃದ್ಧಿ ಕುರಿತಂತೆ ಚರ್ಚೆಸಲಾಯಿತು.
ಸರ್ಕಾರಿ ಯೋಜನೆಗಳು ಹೆಚ್ಚು ಉಪಯುಕ್ತವಾಗುವ ಹಾಗೂ ಫಲಪ್ರದವಾಗುವ ರೀತಿಯಲ್ಲಿ ಬ್ಯಾಂಕ್‍ಗಳು ಸಹಕಾರ ನೀಡಬೇಕು. ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದರಿಂದ ಸಾರ್ವಜನಿಕರು ಹಾಗೂ ಬ್ಯಾಂಕಿನ ನಡುವೆ ಉತ್ತಮ ಬಾಂದವ್ಯ ಬೆಳೆಯಲಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ 20 ವಿವಿಧ ದೊಡ್ಡ ಹಾಗೂ ಸಣ್ಣ ಬ್ಯಾಂಕ್‍ಗಳ ಮುಖ್ಯಸ್ಥರು, ಸಂಸದ ಆದರ್ಶ ಗ್ರಾಮಗಳ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ ಹಾಗೂ ಕಂಪ್ಯೂಟರ್ ಒದಗಿಸಲು ಒಪ್ಪಿಗೆ ನೀಡಿದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನವರು ಕರಿಮುದ್ದನಹಳ್ಳಿ ಹಾಗೂ ಬಿ. ಮಟಕೆರೆ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಲಾ 50 ಲಕ್ಷದಂತೆ 1 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದರು. ಸ್ಟೇಟ್ ಬ್ಯಾಂಕ್ ಇಂಡಿಯದವರು ಬಿ. ಮಟಕೆರೆ ಶಾಲೆಗಳಿಗೆ ಶೌಚಾಲಯ ಕಲ್ಪಿಸಲು ರೂ. 9.75 ಲಕ್ಷ ನೀಡಲು ಒಪ್ಪಿಗೆ ನೀಡಿದರು.
ಇಂಡಿಯನ್ ಓವರ್‍ಸಿಸ್ ಬ್ಯಾಂಕ್, ವಿಜಯಬ್ಯಾಂಕ್ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್‍ಗಳು ಜಂಟಿಯಾಗಿ 20 ಲಕ್ಷ ರೂ.ವೆಚ್ಚದಲ್ಲಿ ಕರಿಮುದ್ದನಹಳ್ಳಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಲು ಒಪ್ಪಿಗೆ ನೀಡಿತು.
20 ಲಕ್ಷ ರೂ. ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಅಂಗನವಾಡಿಗಳಲ್ಲಿ ಶೌಚಾಲಯ ಸೌಲಭ್ಯ, ಕಾಂಪೌಂಡ್ ನಿರ್ಮಾಣ, ಗೋಡೆ ಚಿತ್ರಗಳು, ಆಟದ ಸಾಮಾನು, ಹಾಗೂ ಬೋಧನಾ ಸಾಮಾಗ್ರಿಗಳನ್ನು ಒದಗಿಸುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ರೂಪಿಸಲು ಕಾರ್ಪೋರೇಷನ್ ಬ್ಯಾಂಕ್‍ನವರು ಒಪ್ಪಿಗೆ ಸೂಚಿಸಿತು.
2 ಆದರ್ಶ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಉಪ ಕೇಂದ್ರಗಳ ನಿರ್ಮಾಣಕ್ಕೆ ರೂ. 8.50 ಲಕ್ಷ ನೀಡಲು ಹೆಚ್‍ಡಿಎಫ್‍ಸಿ ಬ್ಯಾಂಕ್, ರೂ. 4 ಲಕ್ಷ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಿಂಡಿಕೇಟ್ ಬ್ಯಾಂಕ್ ಹಾಗೂ ರೂ. 10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳು ಹಾಗೂ ಕಂಪ್ಯೂಟರ್ ಒದಗಿಸಲು ಐ.ಡಿ.ಬಿ.ಐ ಬ್ಯಾಂಕ್ ಸಮ್ಮತಿಸಿತು.
ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಾತನಾಡಿ ಮೈಸೂರಿನ ಭಾರತೀಯ ಕೈಗಾರಿಕಾ ಒಕ್ಕೂಟ ಚಾಮುಂಡಿಬೆಟ್ಟದಲ್ಲಿ ಈಗಾಗಲೇ 70 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರ ನಿರ್ಮಿಸುತ್ತಿದೆ. ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲೂ 60 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರ ನಿರ್ಮಿಸಲಿದ್ದಾರೆ. ಮೈಸೂರಿನ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಮುತ್ತು ಕುಮಾರ್ ಅವರು ಮುಂದಿನ ದಿನಗಳಲ್ಲಿ ಇದೇ ರೀತಿ ಮೈಸೂರಿನ ಎಲ್ಲ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರ ನಿರ್ಮಿಸಿಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಗಳು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಕೈಗಾರಿಕೆಗಳು ಹಾಗೂ ಬ್ಯಾಂಕರ್‍ಗಳೊಂದಿಗೆ ಜಿಲ್ಲಾಡಳಿತವು ಸಭೆ ನಡೆಸಿದ್ದು, ಕೈಗಾರಿಕೆಗಳು ಹಾಗೂ ಬ್ಯಾಂಕ್‍ಗಳು ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಸೌಲಭ್ಯಗಳನ್ನು ನೀಡಲು ಮುಂದೆ ಬಂದಿದ್ದು, ವಿವಿಧ ಕೈಗಾರಿಕೆ ಹಾಗೂ ಬ್ಯಾಂಕ್‍ಗಳು ಸಾರ್ವಜನಿಕರ ಕೆಲಸಕ್ಕಾಗಿ 4.80 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಬ್ಯಾಂಕ್‍ಗಳ ಮುಖ್ಯಸ್ಥರು ಭಾಗವಹಿಸಿದ್ದರು.