Thursday, 5 March 2015

ಸಚಿವ ಹೆಚ್.ಆಂಜನೇಯ

Anjaneya
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಾಳ್ಮೆ ಕಳೆದುಕೊಳ್ಳಬಾರದು. ತಾಳ್ಮೆಯಿಂದ ಇದ್ದರೆ ಸಿಎಂ ಅಥವಾ ಡಿಸಿಎಂ ಹುದ್ದೆ ಅವರನ್ನು ಅರಸಿಕೊಂಡು ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಕಿವಿಮಾತು ಹೇಳಿದ್ದಾರೆ.

ಡಾ.ಪರಮೇಶ್ವರ್ ಒಳ್ಳೆಯ ನಾಯಕರು. ಉನ್ನತ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಆ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಎಲ್ಕ್ಕೂಲದಕ್ಕೂ ಸಮಯ ಕೂಡಿ ಬರಬೇಕು ಎಂದಿದ್ದಾರೆ.


ದಲಿತ ಮುಖ್ಯಮಂತ್ರಿ ಹುದ್ದೆ ವಿಚಾರವೇ ಇಂದು ಅಪ್ರಸ್ತುತ ಎಂದು ಪುನರುಚ್ಚರಿಸಿದ ಅವರು, ದಲಿತ ಸಿಎಂ ವಿಚಾರವನ್ನು ಕೆಲವರು ಯಾವ ಉದ್ದೇಶಕ್ಕಾಗಿ ಪ್ರಸ್ತಾಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಸಿಎಂ ಅಥವಾ ಡಿಸಿಎಂ ಹುದ್ದೆಗಳು ಖಾಲಿ ಇಲ್ಲ ಎಂದು ದಲಿತ ಮುಖಂಡರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಕುಶಲಕರ್ಮಿಗಳಿಗೆ ಅರ್ಹತಾ ಪತ್ರ ವಿತರಣೆ ಸಮಾರಂಭದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚರ್ಮೋದ್ಯೋಗದಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳಿಗೆ ನಿಗಮದ ಪರವಾಗಿ ಅರ್ಹತಾ ಪತ್ರಗಳನ್ನು ಸಚಿವ ಆಂಜನೇಯ ವಿತರಿಸಿದರು
.

ಮೈಸೂರು ಸುದ್ದಿಗಳು

  ಪ್ರವಾಸ ಕಾರ್ಯಕ್ರಮ
     ಮೈಸೂರು, ಮಾ.5. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾರ್ಚ್ 6 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಸರಗೂರು ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸಂಜೆ 4-30 ಗಂಟೆಗೆ ಹ್ಯಾಂಡ್ ಪೋಸ್ಟ್ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಲೋಕ್ ಅದಾಲತ್
      ಮೈಸೂರು, ಮಾ.5-ಮೈಸೂರು ತಾಲ್ಲೂಕಿನ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಖಾತೆ ವರ್ಗಾವಣೆ ಬಗ್ಗೆ ತಕರಾರು ದಾಖಲಾಗಿರುವ ಪ್ರಕರಣ ಲೋಕ್ ಅದಲತ್ ನಲ್ಲಿ ಬಗೆಹರಿಸಲು ದಿನಾಂಕ 06-03-2015 ಮತ್ತು 14-03-2015 ರಂದು ಮಿನಿ ವಿಧಾನಸೌಧ ಮೈಸೂರು ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಲೋಕ್ ಅದಾಲತ್ ನಡೆಸಲಾಗುವುದು
    ಈ ಲೋಕ್ ಅದಾಲತ್ ನಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹಿರಿಯ ವಕೀಲರುಗಳು ರಾಜಿ ಅಧಿಕಾರಿಗಲಾಗಿರುತ್ತಾರೆ. ತಹಶೀಲ್ದಾರ್ ರವರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಪಕ್ಷಕಾರಗಳು ಸದರಿ ಅವಕಾಶದ ಸದುಪಯೋಗ ಪಡೆದುಕೊಂಡು, ದೀರ್ಘಕಾಲದಿಂದ ವಿವಾದವಿರುವ ಖಾತಾ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಮೈಸೂರು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ದರಪಟ್ಟಿ ಆಹ್ವಾನ
     ಮೈಸೂರು, ಮಾ.5.-ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 2014-15ನೇ ಸಾಲಿಗೆ ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ಖರೀದಿಸಲು ಅರ್ಹ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ.
      ಆಸಕ್ತ ಸಂಸ್ಥೆಗಳು ಸಾಧನ ಸಲಕರಣೆ ವಿವರ ಹಾಗೂ ಹೆಚ್ಚಿನ ಮಾಹಿತಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ.ಸುಬ್ಬಯ್ಯ ರಸ್ತೆ ಮೈಸೂರು ದೂರವಾಣಿ ಸಂಖ್ಯೆ 0821-2496686ನ್ನು ಸಂಪರ್ಕಿಸುವುದು. ದರಪಟ್ಟಿಯನ್ನು ಮಾರ್ಚ್ 16ರ ಸಂಜೆ 4 ಗಂಟೆಯೊಳಗಾಗಿ ಮೊಹರು ಮಾಡಿದ ಲಕೋಟೆಯಲ್ಲಿ  ಸಲ್ಲಿಸುವುದು.
ಭತ್ತದ ಹಲ್ಲಿಂಗ್ : ಅಕ್ಕಿಗಿರಣಿಗಳಿಗೆ ಸೂಚನೆ
      ಮೈಸೂರು, ಮಾ.5.(ಕ.ವಾ.)-ಮೈಸೂರು ಜಿಲ್ಲೆಯಲ್ಲಿ ಭತ್ತವನ್ನು ಕಸ್ವಂ ಹಲ್ಲಿಂಗ್‍ಗಾಗಿ 91 ಅಕ್ಕಿಗಿರಣಿಗಳಿಗೆ 357347.58 ಕ್ವಿಂ ಒಪ್ಪಂದ ಮಾಡಿಕೊಂಡಿದ್ದು, ದಿನಾಂಕ 03-03-2015 ರವರೆಗೆ 298862.44 ಕ್ವಿಂ. ಭತ್ತವನ್ನು ಹಲ್ಲಿಂಗ್ ಮಾಡಲು ಎತ್ತುವಳಿ ಮಾಡಿರುತ್ತಾರೆ.
     ಒಪ್ಪಂದ ಮಾಡಿಕೊಂಡಿರುವ ಅಕ್ಕಿಗಿರಣಿಗಳು ಜಿಲ್ಲಾಧಿಕಾರಿಗಳ ಆದೇಶದ ಹದಿನೈದು ದಿನಗಳ ಒಳಗೆ ಭತ್ತ ಎತ್ತುವಳಿ ಮಾಡಿ ನುರಿಸಬೇಕಿದ್ದು, ಕಾರ್ಯ ವಿಳಂಬವಾಗಿರುತ್ತದೆ. ಒಪ್ಪಂದ ಮಾಡಿಕೊಂಡಿರುವ ಅಕ್ಕಿಗಿರಣಿಗಳು ಮಾರ್ಚ್ 8 ರೊಳಗಾಗಿ ಭತ್ತವನ್ನು ಎತ್ತುವಳಿ ಹಾಗೂ  ಹಲ್ಲಿಂಗ್ ಮಾಡಿಸಿ ಹಿಂದಿರುಗಿಸುವುದು ತಪ್ಪಿದಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 6 ರಂದು ಕಾರ್ಯಾಗಾರ
     ಮೈಸೂರು, ಮಾ.5-ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಮಾರ್ಚ್ 6 ರಂದು ಬೆಳಿಗ್ಗೆ 10-30ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರದ ತರಬೇತಿ ಕಾರ್ಯಾಗಾರ  ಏರ್ಪಡಿಸಲಾಗಿದೆ.
     ಈ ಕಾರ್ಯಾಗಾರದಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ/ನರ್ಸಿಂಗ್ ಹೋಂ ಗಳಿಂದ ಒಟ್ಟು 100 ಜನ ವೈದ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ.
       ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ  ಕೆ.ಬಿ.ಪ್ರಭುಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು,  ಜನನ ಮರಣಗಳ ಜಂಟಿ ಮುಖ್ಯ ನೋಂದಣಾಧಿಕಾರಿ ಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜಿನ  ಸಹಾಯಕ ಪ್ರಾಧ್ಯಾಪಕ ಡಾ.ಆನಂದ್ ಪಿ. ರಾಯಮನೆ ಅವರು  ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಾ. 8 ರಂದು ಅಂತರರಾಷ್ಟ್ರೀಯ ದಿನಾಚರಣೆ
         ಮೈಸೂರು, ಮಾ೬ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಾರ್ಚ್ 8 ರಂದು ಬೆಳಿಗ್ಗೆ  10-30 ಗಂಟೆಗೆ  ಜಗನ್ಮೋಹನ ಅರಮನೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುವುದು.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ  ವಹಿಸುವರು.
     ಮಹಿಳೆಯರಿಗೆ ಇರುವ ಕಾನೂನು ಸೌಲಭ್ಯಗಳ ಜೆ.ಎಸ್.ಎಸ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ|| ಕೆ.ಎಸ್. ಸುರೇಶ್ ಅವರು ಉಪನ್ಯಾಸ ನೀಡಲಿದ್ದಾರೆ. ಸ್ಪಂದನ ಮಹಿಳಾ ಕಲಾತಂಡ ಹಾಗೂ ಆರ್.ಎಲ್.ಹೆಚ್.ಪಿ. ಸಂಸ್ಥೆಯವರು "ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ" ಕುರಿತು -    ಕಿರುನಾಟಕ ನಡೆಸಿ ಕೊಡಲಿದ್ದಾರೆ.
    ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷ ಲೋಕಾಮಣಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು.
    ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಾಥಾ ನಡೆಯಲಿದೆ.



ದೇವಲಾಪುರ ಗ್ರಾಮ ಪಂಚಾಯಿತಿ

ದೇವಲಾಪುರ ಗ್ರಾಮ ಪಂಚಾಯಿತಿ
ನಮ್ಮ ಗ್ರಾಮ ನಮ್ಮ ಸ್ವಚ್ಛತೆಗೆ ಕವಡೆ ಕಾಸಿನ ಕಿಮ್ಮತಿಲ್ಲ.

ದೇವಲಾಪುರ ಫೆ: ದೇವಲಾಪುರ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಲ ಭಾರತ ಸ್ವಚ್ಛಭಾರತ ಗ್ರಾಮ ಯೋಜನೆಗೆ ಶೌಚಾಲಯ ನಿರ್ಮಾಣಮಾಡಿದರು ಇದುವರೆಗೆ ಹಣ ನೀಡದೆ ಇರುವುದು ಫಲಾನುಭವಿಗಳಲ್ಲಿ ಬೇಸರ ತಂದಿದ್ದು ರಾಜ್ಯ ಸರ್ಕಾರದ ಶೌಚಾಲಯ ನಿರ್ಮಾಣದ ಸ್ವಚ್ಚಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೊಂದು ಶೌಚಾಲಯ ಕಟ್ಟಿ ಎನ್ನುವ ಮಾತು ಅಕ್ಷರ ಸಹ ಸತ್ಯಕ್ಕೆ ದೂರು ಎನ್ನುವ ಮಾತು ದೇವಲಾಪುರ ಗ್ರಾಮಪಂಚಾಯಿತಿ ಈ ಯೋಜನೆಯಿಂದ ಅತಿ ದೂರದಲ್ಲಿ ಉಳಿದಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ.
ನಾಗಮಂಗಲ ತಾಲ್ಲೂಕು, ದೇವಲಾಪುರ ಗ್ರಾಮಪಂಚಾಯಿತಿಯಲ್ಲಿ ಒಮ್ಮೆಯಾದರೂ ಅಧಿಕಾರಿಗಳು ಈ ಪಂಚಾಯಿತಿಯ ಪಾರುಪತ್ಯದ ಸತ್ಯವನ್ನು ಪರಿಶೀಲಿಸಿದರೆ ಅಬ್ಬಬ್ಬಾ ಎನ್ನುವಂತೆ ಇಲ್ಲಿನ ಅವ್ಯವಸ್ಥೆಯ ಆಗರದ ಬ್ರಹ್ಮಾಂಡ ಎದ್ದು ತೋರುತ್ತಿದ್ದರು. ಅದೇಕೋ ಅಧಿಕಾರಿಗಳು ಇವರು ಮಾಡಿದ್ದೇ ಸೈ ಎಂದು  ಹೇಳಿ ಹೋರಟೇ ಹೋಗುತ್ತಾರೆ.
ರಾಜ್ಯದ ಮಾನ್ಯ ಪಂಚಾಯತ್ ರಾಜ್ಯ ಸಚಿವರಾದ ಎಚ್.ಕೆ.ಪಾಟೀಲ್‍ರವರ ಗಾಂಧಿ ಕಂಡ ಕನಸಿನ ರಾಜ್ಯದ ಪರಿಕಲ್ಪನೆ ಚಾಲನೆ ನೀಡುತ್ತಿದ್ದರೆ ಈ ಪಂಚಾಯಿತಿಯಲ್ಲಿ ಶೌಚಾಲಯ ಕಟ್ಟಿದ್ದರೂ ಫಲಾನುಭವಿಗಳಿಗೆ ವರ್ಷವಾದರೂ ಹಣ ನೀಡದೆ ಇಲ್ಲಿನ ಅಭಿವೃದ್ದಿ ಅಧಿಕಾರಿಗಳ ದುಂಡಾವರ್ತನೆ ಮಾನ್ಯ ಮಂತ್ರಿಗಳು ಯೋಜನೆಯ ವಿರುದ್ದವಾಗಿ ಕೆಲಸ ನಿರ್ವಹಿಸುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಖಾಯಂ ಅಭಿವೃದ್ದಿ ಅಧಿಕಾರಿಗಳಿಲ್ಲ:- ಇಲ್ಲಿನ ಗ್ರಾಮಪಂಚಾಯಿತಿಗೆ ಅಭಿವೃದ್ದಿ ಅಧಿಕಾರಿಯಾಗಲೀ, ಕಾರ್ಯದರ್ಶಿಗಳಾಗಲೀ, ಯಾರೂ ಎಂಬುದು ಜನಸಾಮಾನ್ಯರಿಗೆ ತಿಳಿಯದಾಗಿದೆ.
ಪಂಚಾಯಿತಿ ಬಿಟ್ಟು ಪರಾರಿ:- ಇಲ್ಲಿನ ಗ್ರಾಮಪಂಚಾಯಿತಿ ಕಾರ್ಯದರ್ಶಿ ಅಭಿವೃದ್ದಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಎಂಬುವರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ವೈಫಲ್ಯತೆ, ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದಿರುವುದು ಹಾಗೂ ಶೌಚಾಲಯ ನಿರ್ಮಾಣವಾಗಿದ್ದು, ಹಣ ನೀಡದೆ ಸಬೂಬು ಹೇಳಿ ಈ ಪಂಚಾಯಿತಿಯಿಂದ ಬೇರೆಡೆ ಕೆಲಸ ನಿರ್ವಹಿಸುತ್ತಿದ್ದಾರೆ.
ನಿಯೋಜನೆ ಅಭಿವೃದ್ದಿ ಅಧಿಕಾರಿಗಳು:- ಶಿವಲಿಂಗಯ್ಯ, ಚಾಮರಾಜು, ಸೋಮಶೇಖರ್‍ರವರುಗಳು ನಿಯೋಜನೆ ಮಾಡಿದ್ದು, ಇವರ್ಯಾರು ಖಾಯಂ ಅಧಿಕಾರಿಗಳಲ್ಲ. ಇಷ್ಟಾದರೂ ಕಾರ್ಯ ನಿರ್ವಾಹಣಾಧಿಕಾರಿಗಳು ತಾತ್ಸರದ ಮಾತುಗಳನ್ನಾಡಿ ಜನರನ್ನು ಕಳುಹಿಸುತ್ತಿದ್ದಾರೆ.
ಉಡಾಫೆ ಉತ್ತರ:- ಇತ್ತಿಚೆಗೆ ನಿಯೋಜನೆಗೊಂಡ ಸೋಮಶೇಖರ ಅಭಿವೃದ್ದಿ ಅಧಿಕಾರಿಗಳು ಜನಸಾಮಾನ್ಯರಿಗೆ ಉಡಾಫೆ ಉತ್ತರ ನೀಡಿ ಜನಸಾಮಾನ್ಯರಿಗೆ ಸ್ಪಂದಿಸುತ್ತಿಲ್ಲ.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಯೋಜನೆಗೆ ಎಳ್ಳುನೀರು:- ಮಂಡ್ಯ ಜಿಲ್ಲಾ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳಾದ ರೋಹಿಣಿ ಸಿಂದೂರಿ ರವರ ದೂರದೃಷ್ಟಿ ಯೋಜನೆಯ ಮಹಿಳಾ ಸಬಲೀಕರಣದ ಕನಸಿನ ಕೂಸಿಗೆ ಈ ಪಂಚಾಯಿತಿಯಲ್ಲಿ ಎಳ್ಳುನೀರು ಬಿಟ್ಟಿದ್ದಾರೆ.
ಈ ಎಲ್ಲಾ ಅವ್ಯವಸ್ಥೆ ಆಗರವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೇ ನೀಡದಿರುವುದು ಜನಸಾಮಾನ್ಯರಿಗೆ ಸಂಶಯವಾಗಿದ್ದು, ಹಾಗೂ ಬಡವ ಬಡ್ಡಿಗೆ ಹಣತಂದು ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳ ಪಾಡೇನು ಎಂಬುದು ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.
ಇಷ್ಟೇಲ್ಲ ದೇವಲಾಪುರ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಶೌಚಾಲಯ ಹಣವನ್ನು ನೀಡದೆ ಇರುವುದು ಇಲ್ಲಿ ಕಾರ್ಯನಿರ್ವಹಿಸಿರುವ ಅಭಿವೃದ್ದಿಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ತೋರುತ್ತಿದ್ದು, ಸಂಬಂಧಪಟ್ಟ ಪಂಚಾಯಿತಿ ಸದಸ್ಯರುಗಳು ಅಭಿವೃದ್ದಿ ಅಧಿಕಾರಿಗಳಿಗೆ ಹಸಿರು ನಿಶಾನೆ ನೀಡಿದ್ದರೂ ಇವರ ಮಾತಿಗೂ ಎಳ್ಳುನೀರು ಬಿಟ್ಟಿದ್ದು ಈ ಪಂಚಾಯಿತಿಯ ದೌರ್ಬಾಗ್ಯ ಎನ್ನಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಈಗಲಾದರೂ ಸಮಸ್ಯೆಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುವರೇ ಎಂಬುದು ಜನಸಾಮಾನ್ಯನ ಆಶಯವಾಗಿದೆ.

ಕೋಪಂ ಸಿಇಒ ರೋಹಿಣಿ ಸಿಂಧೂರಿ ರವರು ಅಧಿಕಾರಿಗಳ ಸಭೆ.


ಮಂಡ್ಯದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ‘ಅಂಗನವಾಡಿ ಮತ್ತು ಶಾಲಾ ಶೌಚಾಲಯಗಳ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆ’ಯನ್ನು ಜಿಪಂ ಸಿಇಒ ರೋಹಿಣಿ ಸಿಂಧೂರಿ ನಡೆಸಿದರು.
ಮಂಡ್ಯ: ಜಿಲ್ಲೆಯಲ್ಲಿ ಸ್ವಂತ ಅಂಗನವಾಡಿ ಕಟ್ಟಡಗಳನ್ನು ಹೊಂದಿದ್ದು, ಈವರೆವಿಗೂ ಶೌಚಾಲಯಗಳನ್ನ ಹೊಂದಿರದ ಕೇಂದ್ರಗಳಲ್ಲಿ ಮಾರ್ಚ್ ತಿಂಗಳಾಂತ್ಯಕ್ಕೆ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ‘ಅಂಗನವಾಡಿ ಮತ್ತು ಶಾಲಾ ಶೌಚಾಲಯಗಳ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆ’ ನಡೆಸಿದ ಸಿಇಓ, ಎಲ್ಲಾ ತಾಲ್ಲೂಕುಗಳ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‍ಗಳಿಗೆ ಈ ಸೂಚನೆ ನೀಡಿದರು.
2014-15ನೇ ಸಾಲಿನಲ್ಲಿ ಸ್ವಂತ ಕಟ್ಟಡ ಹೊಂದಿರುವ 266 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ 218 ಕೇಂದ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉಳಿದ 48 ಕೇಂದ್ರಗಳಲ್ಲಿ ಕಟ್ಟಡ ಶಿಥಿಲವಾಗಿರುವುದು, ಸ್ವಂತ ಕಟ್ಟಡ, ನಿವೇಶನ ಇಲ್ಲದಿರುವುದು ಸೇರಿದಂತೆ ಇತರೆ ಕಾರಣಗಳಿಂದ ಶೌಚಾಲಯಗಳನ್ನು ನಿರ್ಮಿಸಲು ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 2529 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 1483 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, 1068 ಕೇಂದ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ, ಈ ಹಿಂದೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 180 ಶೌಚಾಲಯಗಳನ್ನು ಕಾಲಮಿತಿಯಲ್ಲಿ ನಿರ್ಮಿಸಿಕೊಡುವುದಾಗಿ ಹೇಳಿದ್ದರೂ ಇನ್ನೂ ಕೆಲಸ ಆರಂಭಿಸಿಯೇ ಇಲ್ಲ. ಆದುದ್ದರಿಂದ ಈ ಸಂಖ್ಯೆಯ ಶೌಚಾಲಯಗಳನ್ನು ಪಿಆರ್‍ಇಡಿ ವತಿಯಿಂದ ನಿರ್ಮಿಸಬೇಕು. ಅಗತ್ಯ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಮುಂದಿನ ಲೋಕ ಅದಾಲತ್‍ನಲ್ಲಿ ಸ್ವಂತ ಅಂಗನವಾಡಿ ಕಟ್ಟಡ ಹೊಂದಿರುವ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ ಎಂದು ಅಫಿಡೆವಿಟ್ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯಕ್ಕೆ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಬೇಕು ಎಂದು ಪಿಆರ್‍ಇಡಿ ಎಂಜಿನಿಯರ್‍ಗಳಿಗೆ ಸಿಇಓ ರೋಹಿಣಿ ಸಿಂಧೂರಿ ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿ: ಜಿಲ್ಲೆಯಲ್ಲಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ 128 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಜರೂರಾಗಿ ನಿರ್ಮಿಸಬೇಕು ಎಂದು ಹೇಳಿದರು.
2014-15ನೇ ಸಾಲಿನಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 42, ಮದ್ದೂರಿನಲ್ಲಿ 14, ಮಳವಳ್ಳಿಯಲ್ಲಿ 24, ಮಂಡ್ಯದಲ್ಲಿ 5, ನಾಗಮಂಗಲದಲ್ಲಿ 10, ಪಾಂಡವಪುರದಲ್ಲಿ 19 ಹಾಗೂ ಶ್ರೀರಂಗಪಟ್ಟಣದಲ್ಲಿ 14 ಸೇರಿದಂತೆ ಒಟ್ಟು 128 ಶೌಚಾಲಯಗಳನ್ನು ನಿರ್ಮಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.



 ದಿನಾಂಕ: 05/03/2015.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು/ಸಾಗಾಣಿಕೆ ಮಾಡುತ್ತಿದ್ದ ಶೆಡ್ ಮೇಲೆ ಸಿ.ಸಿ.ಬಿ. ಪೊಲೀಸರ ದಾಳಿ.  ಸುಮಾರು 2,09,300/-ರೂ ಬೆಲೆ ಬಾಳುವ 14,950 ಕೆ.ಜಿ. ಅಕ್ಕಿ
ಹಾಗೂ 1 ಲಾರಿ, 2 ಗೂಡ್ಸ್ ಆಟೋಗಳನ್ನ ಪೊಲೀಸರು ವಸಪಡಿಕೊಳಲಾಗಿದೆ ಎಂದು ಪೋಲೀಸ್ ಆಗುತ್ತೆ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈಸೂರುನಗರ ಸಿ.ಸಿ.ಬಿ. ಪೊಲೀಸರು ದಿನಾಂಕ: 03/03/2015 ಮೈಸೂರು ನಗರ ನರಸಿಂಹರಾಜ  ಪೊಲೀಸ್ ಠಾಣಾ ಸರಹದ್ದಿನ ಸಿದ್ಧಿಖಿ ನಗರ ದಾರುಲ್ ಉಲೂಂ ಸಿದ್ಧಿಖಿಯಾ (ಅರೇಬಿಕ್ ಕಾಲೇಜ್ ಟ್ರಸ್ಟ್) ಕಾಲೇಜಿನ ಪೂರ್ವದ ಕಡೆ ಇರುವ ರಸ್ತೆಯಲ್ಲಿರುವ ಅಫ್ತಾಬ್ ಎಂಬುವರಿಗೆ ಸೇರಿದ ರೆವಿನ್ಯೂ ಸೈಟ್‍ನಲ್ಲಿ ತಾತ್ಕಾಲಿಕವಾಗಿ ತಗಡಿನ ಶೀಟುಗಳಿಂದ ನಿರ್ಮಿಸಲಾಗಿರುವ ಶೆಡ್ ಮೇಲೆ ಧಾಳಿ ಮಾಡಿ ಅಕ್ರಮವಾಗಿ ದಾಸ್ತಾನು/ಸಾಗಾಣಿಕೆ ಮಾಡಲು ಬಚ್ಚಿಟ್ಟಿದ್ದ 1 ಲಾರಿ ಹಾಗೂ 2 ಆಟೋ ರಿಕ್ಷಾಗಳಲ್ಲಿ ತುಂಬಿದ್ದ 50 ಕೆ.ಜಿ. ಸಾಮಥ್ರ್ಯದ 299 ಚೀಲಗಳಲ್ಲಿ ತುಂಬಿದ್ದ ಒಟ್ಟು 2,09,300/-ರೂ ಬೆಲೆ ಬಾಳುವ 14,950 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು,  ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಈ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಈ   ದಾಳಿ   ಕಾರ್ಯವನ್ನು    ಮೈಸೂರುನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ. ಎಂ.ಎಂ. ಮಹದೇವಯ್ಯರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಕೆ.ಎನ್.ಮಾದಯ್ಯರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ರವರುಗಳಾದ ಪಿ.ಎ.ಸೂರಜ್, ಆರ್.ಜಗದೀಶ್, ಪಿ.ಎಸ್.ಐ.  ಎಂ.ಜೆ.ಜಯಶೀಲನ್, ಎ.ಎಸ್.ಐ.ಗಳಾದ .ಎ.ಜಾರ್ಜ್, ಶಾಂತಕುಮಾರ್, ಕೇಶವಮೂರ್ತಿ ಹಾಗೂ ಸಿಬ್ಬಂದಿರವರು ನಡೆಸಿದ್ದು,  ಮೈಸೂರು ನಗರದ ಪೊಲೀಸ್ ಆಯುಕ್ತರವರು ಈ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ.

ಸಾರ್ವಜನಿಕ ಸಂಪರ್ಕಾಧಿಕಾರಿಗಳು,ಪೊಲೀಸ್ ಆಯುಕ್ತರವರ ಕಛೇರಿ,ಮೈಸೂರುನಗರ

Wednesday, 4 March 2015

      ಮೈಸೂರು ವಿಭಾಗ ಮಟ್ಟದ ಯುವಜನ ಮೇಳ
    ಮಂಡ್ಯ, ಮಾ.4. 2014-15ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಯುವಜನ ಮೇಳವನ್ನು ದಿನಾಂಕ 12-03-2015 ರಿಂದ 14-03-2015 ರವರೆಗೆ 3 ದಿನಗಳ ಕಾಲ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಸಂಘಟಿಸಲಾಗುತ್ತಿದೆ.
    ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ವೈಯುಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆದ ಯುವ ಕಲಾವಿದರು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕಲಾ ತಂಡಗಳು  ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಅವಕಾಶ ಪಡೆದಿರುತ್ತಾರೆ. ಎಲ್ಲಾ ಕಲಾಬಂಧುಗಳು ದಿನಾಂಕ 12-03-2015 ರಂದು ಮಧ್ಯಾಹ್ನ 1.00 ಗಂಟೆಗೆ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.
    ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರಯಾಣಭತ್ಯೆ ಹಾಗೂ ಈ ಎರಡು ದಿನಗಳ ಕಾಲ ಉಚಿತ ಊಟ, ಸಾಮಾನ್ಯ ವಸತಿ ಸೌಕರ್ಯ ಕಲ್ಪಿಸಲಾಗಿರುತ್ತದೆ. ಲಘು, ಹಾಸಿಗೆ, ಹೊದಿಕೆಗಳೊಂದಿಗೆ ಎಲ್ಲಾ ಯುವಬಂಧುಗಳು ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ  ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಪರಿಚಿತ ಹೆಂಗಸಿನ ಶವ ಪತ್ತೆ
  ದಿನಾಂಕ 4-3-2015 ರಂದು ಬೆಳಿಗ್ಗೆ 8.00 ಗಂಟೆಯ ಸಮಯದಲ್ಲಿ ಹೆಬ್ಬಕವಾಡಿ ರಸ್ತೆಯ ಕಾಲುವೆ ಬಳಿ ಒಂದು ಅಪರಿಚಿತ ಹೆಂಗಸಿನ ಶವವು ತೇಲಿಕೊಂಡು ಬಂದು ಕಾಲುವೆಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಸೇತುವಯ ರಾಡಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಹೆಂಗÀಸಿನ ಶವ ಸಿಕ್ಕಿಹಾಕಿಕೊಂಡಿದ್ದು, ಮೃತಳು ಎಲ್ಲೋ ನೀರಿನಲ್ಲಿ ಬಿದ್ದು ಮೃತಪಟ್ಟು ತೇಲಿಕೊಂಡು ಬಂದಿರುವಂತೆ ಕಂಡು ಬಂದಿರುತ್ತದೆ.  ಶವದ ಮೈಮೇಲೆ ಕೆಂಪು ಮತ್ತು ಹಳದಿ ಬಣ್ಣದ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿದ್ದು, 161 ಸೆಂ.ಮೀ. ಎತ್ತರ, ದುಂಡು ಮುಖ, ದೃಢಕಾಯ ಶರೀರ, ಕಪ್ಪು ಮೈಬಣ್ಣ, ಬಲಗೈನಲ್ಲಿ ಶಿವಮ್ಮ, ಎಡಗೈನಲ್ಲಿ ಶಶಿ ಎಂಬ ಹೆಸರಿನ ಪಕ್ಕ ಒಂದು ರಂಗೋಲಿಯ ಚಿತ್ರ ಹಸಿರು ಹಚ್ಚೆ ಇರುತ್ತದೆ.  ಹೆಚ್ಚಿನ ಮಾಹಿತಿಗಾಗಿ  ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ: 08232-224500, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ 08232-224200 ಹಾಗೂ ಮಂಡ್ಯ ಗ್ರಾಮಾಂತರ ಸಿ.ಪಿ.ಐ. ಕಚೇರಿ : 08232-221107 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ಯುನೈಟೆಡ್ ಇನ್ಸೂರೆನ್ಸ್‍ನಿಂದ ಮಾ. 6 ರಂದು ಎರಡು ವಿಮಾ ಪಾಲಿಸಿ ಬಿಡುಗಡೆ
ಕೇಂದ್ರ ಸರ್ಕಾರದ ಸಾರ್ವಜನಿಕ ಸಾಮಾನ್ಯ ವಿಮಾ ಸಂಸ್ಥೆಯಾದ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ಸರ್ಕಾರೇತರ ಸಂಸ್ಥೆಯಾದ ಐ25 ಆರ್‍ಎಂಸಿಎಸ್ (ಇಂಟಿಗ್ರಾ) ಮೈಕ್ರೋ ಸಿಸ್ಟಮ್ಸ್ ಲಿಮಿಟೆಡ್ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಮಾ. 6 ರಂದು ಮಂಡ್ಯದಲ್ಲಿ ಎರಡು ಗ್ರಾಮೀಣ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಮಂಡ್ಯ ಶಾಖಾ ವ್ಯವಸ್ಥಾಪಕರಾದ ಸಿ. ಗಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ರಕ್ಷಣೆ ನೀಡುವ ‘ಜನತಾ ಅಪಘಾತ ವಿಮೆ’ ಮತ್ತು 18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಸಾಮಾಜಿಕ ಭದ್ರತೆ ನೀಡುವ ‘ಭಾಗ್ಯಶ್ರೀ ಚೈಲ್ಡ್ ವೆಲ್‍ಫೇರ್ ವಿಮೆ’ ಯೋಜನೆಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅತ್ಯಂತ ಕಡಿಮೆ ಪ್ರೀಮಿಯಂ ದರದಲ್ಲಿ ಗ್ರಾಮೀಣ ಜನತೆಗೆ ಅನುಕೂಲವಾಗುವ ರೀತಿ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರ ಹಿತಿದೃಷ್ಟಿಯಿಂದ ರೂಪಿತಗೊಂಡಿರುವ ಈ ಪಾಲಿಸಿಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಯೋಜನೆಗಳನ್ನು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಮಹಾ ಪ್ರಬಂಧಕರಾದ ಹೇಮಾಮಾಲಿನಿಯವರು ಬಿಡುಗಡೆಗೊಳಿಸುವರು. ಕಂಪನಿಯ ಬೆಂಗಳೂರು ಕ್ಷೇತ್ರದ ಸಹಾಯಕ ಮಹಾ ಪ್ರಬಂಧಕರಾದ ಉಷಾ ರಾಮಸ್ವಾಮಿ, ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಪಿ.ಬಿ. ನಂದಾ, ಇಂಟಿಗ್ರಾ ಮೈಕ್ರೋ ಸಿಸ್ಟಮ್ಸ್‍ನ ವ್ಯವಸ್ಥಾಪಕರಾದ ಭಾಸ್ಕರ್ ಜ್ಯೋತಿ ಫುಖಾನ್, ಲೀಡ್ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******


ಮಾ.೯ರಿಂದ ಜಿಲ್ಲಾದ್ಯಂತ ಕಾಲು ಬಾಯಿ ಜ್ವರಕ್ಕೆ ಲಸಿಕಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವಂತೆ ಪಶುಪಾಲನೆ ಅಧಿಕಾರಿಗಳಿಗೆ ಜಿಪಂ ಸಿಇಒ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ.