Wednesday, 11 May 2016

 ಸುತ್ತಮುತ್ತ ಪಾಲಿಕೆಯಿಂದ ಸ್ವಚ್ಫತಾ ಕಾರ್ಯಕ್ರಮ
ಮೈಸೂರು,ಮೇ.10- ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಕಾರ್ಖಾನೆಗಳ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮೇ2 ರಂದು ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-2ರಲ್ಲಿ ವಾರ್ಡ್ ನಂ 11 ರ ವಿಶ್ವೇಶ್ವರ ನಗರದ ರೋಲನ್ ಫ್ಯಾಕ್ಟರಿ ಹಾಗೂ ಜಾಕಿ ಫ್ಯಾಕ್ಟರಿಯ ಸುತ್ತಮುತ್ತಲಿನ ಆವರಣವನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಖಾನೆ ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು.

ಮೇ 13 ರಂದು  ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ
     ಮೈಸೂರು,ಮೇ.10-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 13 ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪುನಗರ 2ನೇ ಹಂತದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಯೋಗಮಂದಿರದ ಕಟ್ಟಡದಲ್ಲಿ ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
    ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಸಿ.ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ವಾಸು, ವಿಧಾನ ಪರಿಷತ್ ಸದಸ್ಯರಾದ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಎಸ್. ನಾಗರಾಜು, ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ, ಉಪಾಧ್ಯಕ್ಷ ಕಯ್ಯಂಬಳ್ಳಿ ನಟರಾಜು,  ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ,  ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ವನಿತಾ ಪ್ರಸನ್ನ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
ಆಡಳಿತ್ಮಾಕ ಅಧಿಕಾರಿ ಹುದ್ದೆ : ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು,ಮೇ.10.(ಕ.ವಾ):- ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮೆಟೆಡ್‍ನಲ್ಲಿ 300 ಆಡಳಿತ್ಮಾಕ ಅಧಿಕಾರಿ ಹುದ್ದೆಗಳನ್ನು  ಸ್ಪರ್ಧಾತ್ಮಕ ಪರೀಕ್ಷೆ  ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ “ಆನ್ ಲೈನ್” ಮೂಲಕ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸುವವರು ದಿನಾಂಕ:31-03-2016 ಕ್ಕೆ  ಯಾವುದಾದರೂ ಪದವಿಯಲ್ಲಿ  ತೇರ್ಗಡೆ ಹೊಂದಿರಬೇಕು.  ದಿನಾಂಕ: 31-03-2016 ಕ್ಕೆ ಕನಿಷ್ಟ 21-30 ವರ್ಷ ಮೀರಿರಬಾರದು.  ಪರಿಶಿಷ್ಟಜಾತಿ/ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ 3 ವರ್ಷ & ಪಿ.ಹೆಚ್. ಅಭ್ಯರ್ಥಿಗಳಿಗೆ 10 ವರ್ಷ  ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ  ಇರುತ್ತದೆ. ಅರ್ಜಿ ಸಲ್ಲಿಸಲು ಮೇ 17 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ತಿತಿತಿ.uiiಛಿ.ಛಿo.iಟಿ   ವೆಬ್‍ಸೈಟ್ ವಿಳಾಸದಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬೇಕು.
    ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ , ಮೈಸೂರು ಇವರನ್ನು ಸಂಪರ್ಕಿಸಬಹುದು.
ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
   ಮೈಸೂರು,ಮೇ.10. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಗ್ರೀನ್ ಗ್ರಾಮೀಣ ಅಭಿವ್ರøದ್ಧಿ ಮತ್ತು ತರಬೇತಿ ಸಂಸ್ಥೆ ಅವರು ನಿರ್ವಹಿಸಲಿದ್ದಾರೆ. ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಖಾಲಿ ಇರುವ ಸಮಾಜ ವಿಷಯ ಪರಿಶೀಲಕರು,  ಶುಷ್ರೂಷಕÀರು  ಹಾಗೂ ಕಚೇರಿ ಸಹಾಯಕರ ಹುದ್ದೆಗಳನ್ನು  ಗೌರವಧನದ ಆಧಾರ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಸಮಾಜ ವಿಷಯ ಪರಿಶೀಲಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂ.ಎಸ್.ಡಬ್ಲೂ/ ಸ್ನಾತಕೋತ್ತರ / ಮನೋತಜ್ಞದಲ್ಲಿ  ವಿದ್ಯಾರ್ಹತೆ ಹೊಂದಿರಬೇಕು. ಶುಷ್ರೂಷಕÀರ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೊಮಾ ಇನ್ ನರ್ಸಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ ಹೊಂದಿದವರು ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
      ಆಸಕ್ತರು ಸ್ವವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಗ್ರೀನ್ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಬ್ರಹ್ಮಶ್ರೀ ನಾರಾಯಣಗುರು ಯೋಗಮಂದಿರದ ಕಟ್ಟಡ #362/ಎ, ನಿಮಿಷಾಂಬನಗರ, ಕುವೆಂಪುನಗರ 2ನೇ ಹಂತ, ಮೈಸೂರು ಇವರಿಗೆ ಸಲ್ಲಿಸುವುದು  ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ:9448425408, 9900667482 ಸಂಪರ್ಕಿಸುವುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ                                                                                              
ಪ್ರವಾಸ ಕಾರ್ಯಕ್ರಮ
     ಮೈಸೂರು,ಮೇ.10-ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಮೇ 11 ರಿಂದ 13 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಮೇ 11 ರಂದು ಸಂಜೆ 4-30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಮೇ 12 ರಂದು ಬೆಳಿಗ್ಗೆ 10-30 ಗಂಟೆಗೆ ಸರಸ್ವತಿಪುರಂ ನಲ್ಲಿರುವ ವಿಶ್ವಮಾನವ ಅಂತರಾಷ್ಟ್ರೀಯ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿರುವ ಭೋದನೆ ಮತ್ತು ಸಂಶೋಧನೆಯಲ್ಲಿ ಮಹಿಳಾ ದೃಷ್ಠಿಕೋನಗಳನ್ನು ಅಳವಡಿಸಲು ಅನುಸರಿಸುವ ವಿಧಾನಗಳು ಮತ್ತು ಅಗತ್ಯವಾದ ಕೌಶಲ್ಯಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮೇ 13 ರಂದು ಬೆಳಿಗ್ಗೆ 10 ಗಂಟೆಗೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಕೆರೆ  ಶಾಲಾ ಆವರಣದಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.                                                            
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
     ಮೈಸೂರು,ಮೇ.10.(ಕ.ವಾ):-2016 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಅನುಷ್ಠಾನಗೊಳಿಸಲು ನಿಗಧಿತ ತೋಟಗಾರಿಕೆ ಬೆಳೆಗಳನ್ನು ಗುರುತಿಸಲಾಗಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಅಂತರಸಂತೆಗೆ-ಅರಿಶಿಣ, ಹಂಪಾಪುರಕ್ಕೆ-ಟಮೊಟೋ(ನಿ), ಅರಿಶಿಣ ಹಾಗೂ ಬದನೆ, ಹೆಗ್ಗಡದೇವನಕೋಟೆಗೆ- ಟಮೊಟೋ(ನಿ), ಅರಿಶಿಣ, ಕಂದಲಿಕೆಗೆ-ಅರಿಶಿಣ, ಸರಗೂರಿಗೆ-ಅರಿಶಿಣ ತೋಟಗಾರಿಕೆ ಬೆಳೆ  ನಿಗಧಿಪಡಿಸಲಾಗಿದೆ.
   ಹುಣಸೂರಿನ ಬಿಳಿಕೆರೆಗೆ - ಟಮೊಟೋ(ನಿ) ಹಾಗೂ ಅರಿಶಿಣ, ಕೃಷ್ಣರಾಜನಗರ ತಾಲ್ಲೂಕಿನ ಹೆಬ್ಬಾಳಿಗೆ- ಟಮೊಟೋ(ನಿ), ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರಕ್ಕೆ –ಆಲೂಗಡ್ಡೆ(ಮ.ಅ). ಟಿ.ನರಸೀಪುರ ತಾಲ್ಲೂಕಿನ ಸೋಸಲೆಗೆ- ಟಮೊಟೋ(ನಿ) ತೋಟಗಾರಿಕಾ ಬೆಳೆ ನಿಗಧಿಪಡಿಸಲಾಗಿದೆ.
    ಮೈಸೂರು ತಾಲ್ಲೂಕಿನ ಇಲವಾಲಕ್ಕೆ- ಟಮೊಟೋ(ನಿ), ಬೀನ್ಸ್, ಜಯಪುರಕ್ಕೆ- ಟಮೊಟೋ(ನಿ), ಎಲೆಕೋಸು ಮತ್ತು ಬದನೆ, ವರುಣಕ್ಕೆ- ಟಮೊಟೋ(ನಿ) ಮತ್ತು ಬೀನ್ಸ್, ನಂಜನಗೂಡು ತಾಲ್ಲೂಕಿನ ಬಿಳಿಗೆರೆಗೆ-ಅರಿಶಿಣ, ಚಿಕ್ಕಯ್ಯನಛತ್ರಕ್ಕೆ- ಟಮೊಟೋ(ನಿ), ಹುಲ್ಲಹಳ್ಳಿಗೆ ಟಮೊಟೋ(ನಿ), ಕೌಲಂದೆಗೆ- ಟಮೊಟೋ(ನಿ) ಮತ್ತು ಅರಿಶಿಣ ಹಾಗೂ ನಂಜನಗೂಡಿಗೆ- ಟಮೊಟೋ(ನಿ) ಮತ್ತು ಅರಿಶಿಣ ನಿಗಧಿಪಡಿಸಲಾಗಿದೆ.
    ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ರೈತರು ಘೋಷಣೆಗಳನ್ನು ಸಲ್ಲಿಸಲು ಜುಲೈ 30 ಕೊನೆಯ ದಿನಾಂಕವಾಗಿರುತ್ತದೆ.
   ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಅಥವಾ ಸಹಾಯಕ ತೋಟಗಾರಿಕಾ ನಿದೇರ್ಶಕರನ್ನು ಸಂಪರ್ಕಿಸುವುದು ಎಂದು ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
               

No comments:

Post a Comment