Monday, 2 May 2016

ಮಂಡ್ಯ,ಮೇ 2: ವಿದ್ಯಾರ್ಥಿ ಜೀವನದಲ್ಲಿ ಎನ್‍ಎಸ್‍ಎಸ್ ಶಿಬಿರಗಳಲ್ಲಿ ಭಾಗವಹಿಸಿದರೆ ಸರಳ ಹಾಗೂ ಸಂಘಟಿತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಮೈಸೂರು ವಿಭಾಗದ ಎನ್‍ಎಸ್‍ಎಸ್‍ನ ಸಹಾಯಕ ಕಾರ್ಯ ಸಂಯೋಜನಾಧಿಕಾರಿ ಸಿ.ಆರ್.ದಿನೇಶ್ ತಿಳಿಸಿದರು.
ತಾಲೂಕಿನ ಕೋಣನಹಳ್ಳಿ ಗ್ರಾಮದಲ್ಲಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯ ಮಂಡ್ಯ ಗ್ರಾಮಾಂತರ ಪಂಚಾಯಿತಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ಮನೆಯಲ್ಲಿ ವಿದ್ಯಾರ್ಥಿಗಳು ಐಷಾರಾಮಿ ಬದುಕು ಸಾಗಿಸಬಹುದು ಅಥವಾ ಬಡತನದಲ್ಲಿ ಇರಬಹುದು. ಆದರೆ ಶಿಬಿರದಲ್ಲಿ ಎಲ್ಲರೂ ಸಹ ಸಾಮೂಹಿಕವಾಗಿ ಭಾಗವಹಿಸಿದಾಗ ಪಂಕ್ತಿ ಭೋಜನ, ಗ್ರಾಮಸ್ಥರ ಒಡನಾಟ, ಸಂಘಟಿತ ಬದುಕನ್ನು ಕಲಿಸಿಕೊಡಲಿದೆ ಎಂದರು.
ಜನರ ಒಡನಾಟದಿಂದ ತಾವೂ ಸಹ ಪರಿ ವರ್ತರಾಗುವ ಮೂಲಕ ಊರಿನ ಪರಿಸರವನ್ನು ಬದಲಾಯಿಸಬಹುದು. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಬಹುದು. ಇದಕ್ಕಿಂತ ಹೆಚ್ಚಾಗಿ ಕೃಷಿ ವಿದ್ಯಾರ್ಥಿಗಳಾಗಿರು ವುದರಿಂದ ರೈತರಲ್ಲಿ ಕೃಷಿ ಜ್ಞಾನ ಮೂಡಿಸ ಬಹುದಾಗಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ನಾವು ಸಹ ವಿದ್ಯಾರ್ಥಿಯಾಗಿದ್ದಾಗ ನಾಯಕತ್ವ ಗುಣ ಮೈಗೂಡಿಸಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕೃಷಿ ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂಪಕರು. ಶ್ರಮದಾನದ ಮೂಲಕ ಜನರ ವಿಶ್ವಾಸ ಪ್ರೀತಿ ಗಳಿಸಿ ಗ್ರಾಮಾಭಿವೃದ್ಧಿಗೆ ಸಹಕಾರಿಯಾಗ ಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದ ನೆನಪು ಜೀವನದಲ್ಲಿ ಸದಾ ಕಾಲ ಇರಬೇಕು. ಅಷ್ಟರ ಮಟ್ಟಿಗೆ ತಮ್ಮ ಸೇವೆಯನ್ನು ಮಾಡಬೇಕು. ಗ್ರಾಮೀಣ ಜನರ ಬದುಕಿಗೆ ನೆರವಾಗುವ ಮೂಲಕ ಪೋಷಕರು ಹಾಗೂ ಕಾಲೇಜಿಗೆ ಕೀರ್ತಿ ತರಲು ಮುಂದಾಗ ಬೇಕೆಂದು ಹೇಳಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಟಿ. ಶಿವಶಂಕರ್ ಮಾತನಾಡಿ, ಎನ್‍ಎಸ್‍ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರ ಪರಿಚಯ ಮಾಡಿಕೊಡಲಿದೆ. ಅಷ್ಟೇ ಅಲ್ಲದೆ ಹೊಸ ಅನುಭವವನ್ನು ತಂದು ಕೊಡಲಿದೆ. ಕೋಣನಹಳ್ಳಿ ಗ್ರಾಮ ಅಚ್ಚುಕಟ್ಟಾಗಿದೆ. ಆದರೆ ಇಲ್ಲಿ ಪರಿಸರ ನ್ಯೂನ್ಯತೆ ಎದ್ದು ಕಾಣುತ್ತಿದೆ. ಮರ-ಗಿಡಗಳು ಇಲ್ಲದಂತಾಗಿವೆ. ಪರಿಸರ ಸಂರಕ್ಷಣೆ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಮರ ಗಿಡಗಳನ್ನು ಬೆಳೆಸಿದರೆ ಗ್ರಾಮಕ್ಕೆ ಶೋಭೆ ತರಲಿದೆ. ಇಂದಿನ ಕೆರೆಗೆ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿದ್ದು, ಇದರಿಂದ ಅನಾನು ಕೂಲವೇ ಹೆಚ್ಚು. ಕೆರೆಯ ಅಚ್ಚುಕಟ್ಟು ಕಾಪಾಡಲು ಗ್ರಾಮಸ್ಥರು ಮುಂದಾಗಬೇಕು ಎಂದರು.
ಕೃಷಿ ವಿದ್ಯಾರ್ಜಿಗಳು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಭತ್ತ ಮತ್ತು ಕಬ್ಬು ರೈತರಿಗೆ ಹೆಚ್ಚಿನ ಆದಾಯ ತಂದು ಕೊಡಲಿದೆ. ಪರ್ಯಾಯ ಬೆಳೆಗಳ ಬಗ್ಗೆ ಆಲೋಚಿಸಬೇಕಿದೆ. ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಗ್ರಾಮದ ಮಕ್ಕಳ ಸೇವಾ ಮನೋಭಾವಕ್ಕೆ ಪ್ರೇರಣೆ ಯಾಗಲಿದೆ ಎಂದು ಆಶಿಸಿದರು.
ಗ್ರಾಪಂ ಅಧ್ಯಕ್ಷ ಶಾರದಾ ಸಿದ್ದರಾಜು, ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ, ಅರುಣ್, ರೈತ ಮುಖಂಡ ಜವರೇಗೌಡ, ಗ್ರಾಪಂ ಸದಸ್ಯರಾದ ಪಟೇಲ್ ಶಂಕರ, ಧನಂಜಯ, ವೇಣುಗೋಪಾ ಲಸ್ವಾಮಿ, ಕೆ.ಎಸ್.ಮಂಜು, ಹೆಚ್.ಎಸ್. ರೂಪಾ, ಪ್ರಮೀಳಾ, ಬಿಲ್‍ಕಲೆಕ್ಟರ್ ಸೋಮಶೇಖರ, ವಾಟರ್ ಮನ್ ರಘು, ಕೃಷಿ ಡಿಪ್ಲೊಮಾ ಕಾಲೇಜು ಪ್ರಾಂಶು ಪಾಲ ಡಾ.ಹೆಚ್.ಡಿ. ನಾಗರಾಜು, ಶಿಬಿರಾಧಿಕಾರಿ ಗಳಾದ ಡಾ.ಜೆ.ಮಹದೇವು, ಡಾ.ಕೆ.ಪುಷ್ಪಾ, ಸದಾನಂದ ಆರ್ ಇನಾಂದಾರ್ ಉಪಸ್ಥಿತರಿದ್ದರು.

No comments:

Post a Comment