ಸಿ.ಪಿ.ಮೂರ್ತಿ, ಪತ್ರಕರ್ತರು,4ನೆ ಮಾಡಲ್ ರಸ್ತೆ ಬಸವನಗುಡಿ, ಬೆಂಗಳೂರು, ಮೊಬೈಲ್ 8277630435
ರಾಜಕಾರಣಿಗಳೇನು ಸತ್ಯ ಹರಿಶ್ಚಂದ್ರರೆ ?
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ವಾರದಿಂದ ವಾಚ್ ಬಗ್ಗೆ ವಾಕ್ಸಮರ ನಡೆದಿರುವುದು ಸಾರ್ವಜನಿಕರಲ್ಲಿ ವಾಕರಿಕೆ ತರಿಸಿದೆ. ನಮ್ಮ ರಾಜ್ಯವನ್ನಾಳಿದ ಕೆಲವು ಮುಖ್ಯಮಂತ್ರಿಗಳನ್ನು ಹೊರೆತು ಪಡಿಸಿದೆರೆ ಬಹುತೇಕ ಮುಖ್ಯಮಂತ್ರಿಗಳು ಐಶರಾಮದ ಬಹುಕು ನಡೆಸಿದವರೆ.
ನಮ್ಮ ಅಧಿಕಾgಸ್ಧ ರಾಜಕಾರಣಿಗಳು ಸತ್ಯವಂತರೇನಲ್ಲ ಎಂಬುದು ಜನತೆಗೂ ತಿಳಿದಿದೆ.ಯಾವ ರಾಜಕಾರಣಿಯೂ ತನ್ನ ಶ್ರಮದಿಂದ ಕೂಡಿಟ್ಟ ಹಣ ಖರ್ಚು ಮಾಡಿ ಸಾರ್ವಜನಿಕರ ಸೇವೆಗೆ ಬರಲು ಅವರಿಗೇನು ಹುಚ್ಚೆ. ರಾಜಕಾರಣಿಗಳು ಅಧಿಕಾರಕ್ಕೆ ಬಂದ ತಕ್ಷಣ ಅವರ ಹಿಂಬಾಲಕರುಗಳು ಸನ್ಮಾನಗಳನ್ನು ಮಾಡಿ ಹಾರ ತುರಾಯಿ ಅರ್ಪಿಸುವುದು, ಬೆಳ್ಳಿ ಗದೆ, ಕತ್ತಿ ಗುರಾಣಿ ಅರ್ಪಿಸುವುದು ಮೊದಲಿಂದಲೂ ನಡೆದೆ ಬಂದಿದೆ.
ಕಾಲ ಬದಲಾದಂತೆಲ್ಲಾ ರಾಜಕಾರಣಿಗೆ ಕೂಡುವ ಉಡುಗೆರೆ ಕೂಡ ಬದಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಮಂತ್ರಿಗಳೊಬ್ಬರಿಗೆ ರೊಲೆಕ್ಸ ವಾಚ್ ನೀಡಲಾಗಿತ್ತು. ಈಗ ಮುಖ್ಯಮಂತ್ರಿಗಳೊಬ್ಬರಿಗೆ ಕೋಟಿ ಬೆಲೆ ಬಾಳುವ ವಿದೇಶಿ ವಾಚ್ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡಾಫೆ ಉತ್ತರ ನೀಡುವ ಮೂಲಕ ತಾವೊಬ್ಬ ಬೇಜವ್ದಾರಿ ಮುಖ್ಯಮಂತ್ರಿ ಎಂದು ತೋರಿಸಿ ಕೊಂಡಿದ್ದಾರೆ.
ನಮ್ಮ ರಾಜಕಾರಣಿಗಳು ಸಾರ್ವಜನಿಕ ಬಾಷಣಗಳಲ್ಲಿ ಪ್ರಾಮಾಣಿಕತೆ ಬಗ್ಗೆ ಗಾಂಧಿ ತತ್ವದ ಬಗ್ಗೆ ಡಂಗೂರ ಹೊಡೆಯುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ತತ್ವ ಸಿದ್ದಾಂತಗಳು ತಮಗಲ್ಲ ಎಂದು ರಾಜಕಾರಣಿಗಳು ಸಾಬೀತು ಪಡಿಸಿಯಾಗಿರುವುದರಿಂದ ಜನತೆಯೇನು ಇವರುಗಳನ್ನು ಸತ್ಯ ಹರಿಶ್ಚಂದ್ರರ ತುಕುಡ ಎಂದು ಬಾವಿಸಿಲ್ಲ.
• ಮುಖ್ಯಮಂತ್ರಿ ರಕ್ಷಣೆಗೆ ಖ್ಯಾತ ನಟಿ ರಮ್ಯ ಹಾಗೂ ಉಗ್ರಪ್ಪ ಧಾವಿಸಿದ್ದಾರೆ. ವಾಚ್ ವಿಚಾರವನ್ನು ದೊಡ್ಡ ಹಗರಣ ಮಾಡಲು ಕುಮಾರಸ್ವಾಮಿ ಹೊರಟಿದ್ದರೆ ಮಾಜಿ ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದ ಹಿತ ದೃಷ್ದಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ನಮ್ಮ ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಈ ರಾಜಕಾರಣಿಗಳನ್ನು ಜನರು ಶುದ್ದ ಹಸ್ತರಂದೇನು ಭಾವಿಸಿಲ್ಲ. ಎಲ್ಲಾ ರಾಜಕಾರಿಣಿಗಳನ್ನು ಪ್ರಾಮಾಣಿತೆಯ ತಕ್ಕಡಿಯಲ್ಲಿ ಹಾಕಿದರೆ ಯಾರು ಮೇಲೇಳುವುದಿಲ್ಲ.
• ಚುನಾವಣಾ ಸಂದರ್ಭದಲ್ಲಿ ಕೋಟಿ ಕೋಟಿ ಆಸ್ತಿಪಾಸ್ತಿಯನ್ಜು ಘೋಷಿಸಿಕೊಳ್ಳುವ ರಾಜಕಾರಣಿಗಳು ಯಾವ ರೀತಿಯ ಐಶರಾಮದ ಬದುಕುಗಳನ್ನು ನಡೆಸುತ್ತಾರೆ ಎಂಬುದನ್ನು ನಮ್ಮ ಮಾಧ್ಯಮಗಳೇ ಅನೇಕ ಸಾರಿ ಬಹಿರಂಗ ಮಾಡಿರುವಾಗ ಒಬ್ಬ ರಾಜ್ಯದ ಮುಖ್ಯಮಂತ್ರಿ ಕೋಟಿ ವಾಚ್ ಕಟ್ಟಿದಾಗ ಜನರಿಗೆ ಏನು ಅನಿಸುವುದಿಲ. ಯಾಕೆಂದರೆ ಕೊಟ್ಯಾಂತರ ಬೆಲೆ ಬಾಳುವ ವಸ್ತುಗಳನ್ನು ಯಾರು ಪುಕ್ಕಟ್ಟೆ ನೀಡುವುದಿಲ್ಲ ಎನ್ನುವುದು ಸಾರ್ವಜನಿಕ ಸತ್ಯವಾಗಿರುವಾಗ ಇಂತಹ ವಿಚಾರಗಳ ಬಗ್ಗೆ ಹುಯಲೆಬ್ಬಿಸುವುದರಿಂದ ಪ್ರಯೋಜನವಿಲ್ಲ.
• ಮುಖ್ಯಮಂತ್ರಿಯಾದವರು ತಮ್ಮನ್ನು ಸಾರ್ವಜನಿಕರ ಎಕ್ಸರೇ ಕಣ್ಣಲ್ಲಿ ನೋಡುತ್ತಿರುತ್ತಾರೆ ಎಂಬ ಪರಿಜ್ನಾನ ಇರಬೇಕು. ಎಲ್ಲಾ ರಾಜಕಾರಣಿಗಳು ದಪ್ಪ ಚರ್ಮದವರೆ. ಇದೆ ಕುಮಾರಸ್ವಾಮಿ ಮುಂದೊಂದು ದಿವಸ ಸಿದ್ದರಾಮಯ್ಯನವರ ಜೂತೆ ಹಾತ್ ಮಿಲಾವ್ ಮಾಡುವ ಸಂಭವಗಳು ಇಲ್ಲದಿಲ್ಲ. ಇತ್ತಿಚೆಗೆ ನಿತೀಶ್ ಕುಮಾರ್ ಹಾಗೂ ಲಲ್ಲೂ ಪ್ರಸಾದ್ ನಡೆವೆ ನಡೆದಿರುವ ಪ್ರೇಮ್ಕಿ ಕಹಾನಿ ನೋಡಿಲ್ಲವೆ. ಈಗಾಗಲೆ ಬೆಂಗೂರು ಬಿಬಿಎಂಪಿಯಲಕ್ಲಿ ಒಂದೆ ದೋಣಿಯಲ್ಲಿ ಸಾಗಿರುವ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಜೋಡಿ ಮುಂದಿನ ಸಾರ್ವಜನಿಕ ಚುನಾವಣೆಯ ನಂತರ ಎಲ್ಲವನ್ನು ಮರೆತು ಹಾತ್ ಕಿ ಮಿಲಾವ್ ಮಾಡಬಹುದು.
• ಈಗಾಗಲೆ ಕುಮಾರಸ್ವಾಮಿ ಹೊಂದಿರುವ ಐಶರಾಮದ ಕಾರ್ ಗಳ ಬಗ್ಗೆ ಮತ್ತು ಬೆಲೆ ಬಾಳುವ ವಾಚ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಬಹಿರಂಗವಾಗಿದೆ. ಜನತೇಯೇನು ಈ ಮಹಾ ರಾಜಕಾರಣಿಗಳನ್ನು ಸತ್ಯ ಹರಿಶ್ಚಂದ್ರರ ವಂಶದವರು ಎಂದು ಬಾವಿಸಿಲ್ಲ. ನಮ್ಮ ಮಾಧ್ಯಮಗಳು ಇಂತಹ ವಿಚಾರಕ್ಕೆ ಮಹತ್ವ ಕೊಡದೆ ರಾಜ್ಯದ ಸಮಸ್ಯಗಳತ್ತ ಗಮನ ಹರಿಸುವುದು ಒಳ್ಳೆಯದು.
• ದಿನಾಮಕ 21-02-2016 ಸಹಿ/ ಸಿ.ಪಿ.ಮೂರ್ತಿ.

No comments:
Post a Comment