Saturday, 20 February 2016

ಕೊಳ್ಳೆಗಾಲಆನೆ ತುಳಿದು ವ್ಯಕ್ತಿ ಸಾವ

ಆನೆ ತುಳಿದು ವ್ಯಕ್ತಿ ಸಾವು

ಕೊಳ್ಳೇಗಾಲ, ಫೆ.20 : ಆನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಳ್ಳಿ ಗ್ರಾಮದಲ್ಲಿ ನಡೆದಿದೆ.
         ಗ್ರಾಮದ ಪೀಕನಾಯಕ (೬೫) ಎಂಬುವವರೇ ಮೃತ ದುರ್ಧೈವಿ. ನೆನ್ನೆ ರಾತ್ರಿ ಪೀಕನಾಯಕ ಅವರು ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಆನೆಯೊಂದು ಇವರ ಮೇಲೆ ಧಾಳಿ ಎಸಗಿತ್ತು. ಆನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪೀಕನಾಯಕ ಜೋರಾಗಿ ಕಿರುಚಿದ್ದಾರೆ. ಜಮೀನಿನ ಸುತ್ತಮುತ್ತ ನಿರ್ಜನ ಪ್ರದೇಶವಾದ ಕಾರಣ ಆನೆಯಿಂದ ತಪ್ಪಿಸಿಕೊಳ್ಳಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
        ಮುಂದಿನ ತಿಂಗಳಲ್ಲಿ ಮೃತ ಪೀಕನಾಯಕರ ಮೊಮ್ಮಗಳ ಮದುವೆ ಇದ್ದು ಇದರ ಹಿನ್ನಲೆಯಲ್ಲಿ ಮೃತ ಪೀಕನಾಯಕ ಅವರು ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಉಳಿದುಕೊಂಡ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
         ಶವ ಪರೀಕ್ಷೆಗೆಂದು ಮೃತ ದೇಹವನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ತದನಂತರ ಸಂಬಂಧಿಕರಿಗೆ ಒಪ್ಪಿಸಲಾಗಿದ್ದು ರಾಮಾಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

No comments:

Post a Comment