ಮಂಡ್ಯ : ತಾಲೂಕಿನ ಬಸರಾಳು ಜಿಲ್ಲಾ ಪಂಚಾಯಿತಿಯಲ್ಲಿ ಜಾ.ದಳ ಬಂಡಾಯವಾಗಿ ಸ್ಪರ್ಧಿಸಿ ವಿಜೇತರಾದ ಎನ್. ಶಿವಣ್ಣ ಹಾಗೂ ಅವರ ತಂಡದಲ್ಲಿ ತಾಲೂಕು ಪಂಚಾಯಿತಿಗೆ ಬಂಡಾಯವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಬೇಬಿ ತಾ.ಪಂ. ಕ್ಷೇತ್ರದ ಮಂಜುಳಾ, ಹಲ್ಲೇಗೆರೆ ತಾ.ಪಂ. ಕ್ಷೇತ್ರದ ರಾಜೇಶ್ವರಿ, ಚಂದಗಾಲು (ಬ) ತಾ.ಪಂ. ಕ್ಷೇತ್ರದ ಆರ್.ಎಂ. ಪ್ರಕಾಶ್ ಅವರು ಹೋಬಳಿಯ ಹಿರಿಯ ನಾಯಕರುಗಳೊಟ್ಟಿಗೆ ರಾಜ್ಯ ಜಾ.ದಳ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಶಿವಣ್ಣ ತಂಡದ ಅವರ ಗೆಲುವಿಗೆ ಹರ್ಷ ವ್ಯಕ್ತಪಡಿಸಿ, ಎಚ್.ಡಿ. ಕುಮಾರಸ್ವಾಮಿ ಅವರು ಶುಭ ಹಾರೈಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ. ತಿಮ್ಮೇಗೌಡ, ಮಾಜಿ ಪ್ರಧಾನ್, ಟಿ. ದೇವರಾಜು, ಕೆಂಚನಹಳ್ಳಿ ಪುಟ್ಟಸ್ವಾಮಿ, ಶಿವಗೇಗೌಡ, ಅರವಿಂದ್ ಕೆರಗೋಡು, ಕೆ.ಎಲ್. ಕೃಷ್ಮ, ಕೆ.ಜೆ. ಅನಂತರಾವ್, ಶಿವರಾಮೇಗೌಡ, ನಾಗರಾಜು, ಪಾಪಯ್ಯ ಇತರರು ಈ ಸಂದರ್ಭದಲ್ಲಿ ಇದ್ದರು.
No comments:
Post a Comment