24ನೇಫೆಬ್ರವರಿ 2016
ಫೆಬ್ರವರಿ 26, 27 ಮತ್ತು 28 ರಂದು ವಚನ ಸಂಗೀತೋತ್ಸವ: ಕೆ.ಎ.ದಯಾನಂದ
ಮೈಸೂರು,ಫೆ.24. ವಚನ ಸಾಹಿತ್ಯಕ್ಕಿರುವ ಗೇಯ ಗುಣವು ಸಂಗೀತದ ವಿವಿಧ ಪ್ರಕಾರಗಳಲ್ಲಿ ಅದರ ವಿಸ್ತರಣೆಯನ್ನು ಕಂಡಿದೆ. ಇಂತಹ ಸಮಸಮಾಜದ ದಿಟ್ಟ ಆಶಯಗಳನ್ನು ಒಳಗೊಂಡಿರುವ ವಚನ ಸಾಹಿತ್ಯವನ್ನು ಹೆಚ್ಚು ಹೆಚ್ಚು ಜನತೆಗೆ ಮುಟ್ಟಿಸುವ ಮೂಲಕ ಸಮಾನತೆಯ ಸಮಾಜ ಕಟ್ಟುವ ದಿಕ್ಕಿನಲ್ಲಿ ಜನಮನವನ್ನು ತೊಡಗಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಳೆದ 2 ದಶಕಗಳಿಂದಲೂ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ವಚನ ಸಂಗೀತೋತ್ಸವವನ್ನು ಆಯೋಜಿಸುತ್ತಾ ಬಂದಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಕೆ.ಎ.ದಯನಂದ ಅವರು ತಿಳಿಸಿದರು.
ಅವರು ಇಂದು ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಸವನ ಬಾಗೇವಾಡಿ, ಕಲಬುರಗಿ, ಬಸವಕಲ್ಯಾಣ, ಕೂಡಲ ಸಂಗಮ, ಅಥಣಿ, ಉಳವಿ, ಶಿವಮೊಗ್ಗ, ಬೆಂಗಳೂರು, ಶ್ರೀ ಮಲೈಮಹದೇಶ್ವರ ಬೆಟ್ಟ, ಬೆಳಗಾವಿ ಮುಂತಾದ ಸ್ಥಳಗಳಲ್ಲಿ ವಚನ ಸಂಗೀತೋತ್ಸವವನ್ನು ಈಗಾಗಲೇ ನಡೆಸಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಈ ವರ್ಷ ಈ ಕಾರ್ಯಕ್ರಮವನ್ನು ಮೈಸೂರಿನ ಸುತ್ತೂರು ಶಿವರಾತ್ರೀಶ್ವರ ಮಠದಲ್ಲಿ 2016 ಫೆಬ್ರವರಿ 26 ರಿಂದ 28 ರವರೆಗೆ ಮೂರು ದಿನಗಳ ಕಾಲ ವಚನ ಗಾಯನ, ನೃತ್ಯ ಹಾಗೂ ನಾಟಕ ಕಾರ್ಯಕ್ರಮಗಳ ಮೂಲಕ ಶರಣರ ತತ್ವಗಳನ್ನು ಪ್ರಸಾರ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಿದೆ ಎಂದರು.
ನಾಡಿನ ಹೆಸರಾಂತ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ 26 ರಂದು ಸಂಜೆ 6.00ಕ್ಕೆ ಮಾನ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್‍ಸಿಂಹ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿಬಿ.ಎಲ್. ಭೈರಪ್ಪ ರವರು ಗೌರವ ಉಪಸ್ಥಿತರಿದ್ದು ಶಾಸಕರಾದ ಎಂ.ಕೆ. ಸೋಮಶೇಖರ್‍ರವರು ಅಧ್ಯಕ್ಷತೆ ವಹಿಸÀಲಿದ್ದಾರೆ ಎಂದರು.
12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ವಚನ ಸಾಹಿತ್ಯ ಚಳವಳಿಯು ಜಾಗತಿಕ ಸಾಹಿತ್ಯ ಚಳವಳಿಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಇದಕ್ಕೆ ಕಾರಣ ಈ ಚಳವಳಿಯು ಸಾಹಿತ್ಯದ ಮೂಲಕ ದಾಖಲಿಸಲ್ಪಟ್ಟರೂ ಅದು ಅಂದಿನ ಕಾಲಕ್ಕೆ ಅಸಂಭವವೆನಿಸಿದ್ದ ಸಮತಾ ಸಮಾಜದ ಆಶಯಗಳನ್ನೊಳಗೊಂಡಿತ್ತು. ಸಮಾಜದ ಎಲ್ಲಾ ವರ್ಗದ, ಎಲ್ಲಾ ಜಾತಿಯ ಚಿಂತಕರು, ಜ್ಞಾನಿಗಳು ಸೇರಿ ಹೆಣ್ಣು-ಗಂಡು, ಜಾತಿ-ವರ್ಗಗಳೆಂಬ ತಾರಥಮ್ಯ ರಹಿತ ಸಮಾಜ ನಿರ್ಮಾಣದ ಕನಸು ಕಂಡ ಚಳವಳಿ ಇದಾಗಿತ್ತು. ಅಲ್ಲಮಪ್ರಭುವಿನಂಥ ಅನಂತ ತತ್ವಜ್ಞಾನಿ, ಬಸವಣ್ಣನಂಥ ಸಮಸಮಾಜದ ಮಹಾ ಕನಸುಗಾರ, ಸಿದ್ಧರಾಮನಂಥ ಕಾಯಕಯೋಗಿ, ಅಕ್ಕಮಹದೇವಿಯಂಥ ಅಲೌಖಿಕ ಸಂಸಾರಿಗಳಷ್ಟೆ ಅಲ್ಲದೇ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಸಮಾಜದ ಎಲ್ಲ ಸ್ಥರದ, ಎಲ್ಲ ಸಮುದಾಯಗಳ ಸಮಾಜ ಸುಧಾರಕರು ಚಳವಳಿಗೆ ಶಕ್ತಿ ತುಂಬಿದರು. ಆದ್ದರಿಂದಲೇ ಎಂಟು ನೂರು ವರ್ಷಗಳ ನಂತರವೂ ವಚನ ಸಾಹಿತ್ಯ ವಚನಕಾರರ ಆಶಯಗಳು ಈ ಸಮಾಜದ ತುರ್ತುಗಳಾಗಿಯೇ ಪ್ರಸ್ತುತವೆನಿಸಿವೆ ಎಂದು ತಿಳಿಸಿದರು.
ಜೀವನಾನುಭವಗಳ ನೇರ ಹಾಗೂ ದಿಟ್ಟ ಪ್ರಕಟಣೆಗೆ ದೇಸಿ ಸೊಗಡನ್ನು ಬಳಸಿಕೊಂಡ ವಚನ ಸಾಹಿತ್ಯವು ಕಿರಿದರಲ್ಲಿ ಹಿರಿಯ ಅನುಭವಗಳನ್ನು ತುಂಬಿಕೊಟ್ಟ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಕಾಯಕವೇ ಕೈಲಾಸ ಮುಂತಾದ ಸರಳ ತತ್ವಗಳು ವಚನ ಸಾಹಿತ್ಯದ ಬಹುದೊಡ್ಡ ಶಕ್ತಿಯಾಗಿವೆ. ಅಲ್ಲದೇ ಜಾತಿ, ಮತ, ಲಿಂಗ ಬೇಧಗಳನ್ನು ನಿರಾಕರಿಸಿ ನಿಜಭಕ್ತಿಯೊಂದೇ ಸಾರ್ಥಕ ಜೀವನದ ಸನ್ಮಾರ್ಗವೆಂಬುದು ಕೂಡ ವಚನ ಸಾಹಿತ್ಯದ ಮಹತ್ವವನ್ನು ತಿಳಿಸುತ್ತದೆ ಎಂದರು.
ವಚನ ಸಾಹಿತ್ಯದ ನಿರಂತರ ಪ್ರಸಾರದ ನಿಟ್ಟಿನಲ್ಲಿ ಯೋಜಿಸಿರುವ ಈ ಕಾರ್ಯಕ್ರಮಕ್ಕೆ ಆಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷಹಾಗೂ ವಚನ ಸಂಗೀತೋತ್ಸವದ ಸಂಚಾಲಕ ಗೊ.ರು.ಪರಮೇಶ್ವರಪ್ಪ ಅವರು ಉಪಸ್ಥಿತರಿದ್ದರು.
ಸಾಮಾನ್ಯ ಕೌನ್ಸಿಲ್ ಸಭೆ
ಮೈಸೂರು,ಫೆ.24.-ಮೈಸೂರು ಮಹಾನಗರಪಾಲಿಕೆಯ 2016 ಫೆಬ್ರವರಿ ಮಾಹೆಯ ಸಾಮಾನ್ಯ ಕೌನ್ಸಿಲ್ ಸಭೆಯು ಫೆಬ್ರವರಿ 29 ರಂದು ಮಧ್ಯಾಹ್ನ 3-00 ಗಮಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈಸೂರು ಮಹಾನಗರಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮೈಸೂರು,ಫೆ.24.ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ (ಅಖPಈ)ನಲ್ಲಿ ಖಾಲಿ ಇರುವ ವಿವಿಧ ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಬ್ ಇನ್ಸ್‍ಪೆಕ್ಟರ್ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 30 ವರ್ಷದೊಳಗಿದ್ದು, ಪಿ.ಯು.ಸಿ.ಯೊಂದಿಗೆ 3.5 ವರ್ಷದ ನರ್ಸಿಂಗ್ ಮತ್ತು ಮಿಡ್ ವೈಫರಿ ಕೋರ್ಸನಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕೇಂದ್ರ/ರಾಜ್ಯ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿಸಿರಬೇಕು. ಸಬ್ ಇನ್ಸ್‍ಪೆಕ್ಟರ್ ರೇಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 30 ವರ್ಷದೊಳಗಿದ್ದು, ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯಗಳೋಂದಿಗೆ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ 2 ವರ್ಷದ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು.
ಸಹಾಯಕ ಸಬ್ ಇನ್ಸ್‍ಪೆಕ್ಟರ್ ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, ಪಿ.ಯು.ಸಿ.ಯೊಂದಿಗೆ ಫಾರ್ಮಸಿ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಸಹಾಯಕ ಸಬ್ ಇನ್ಸ್‍ಪೆಕ್ಟರ್ ಲ್ಯಾಬೋರೇಟರಿ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ಯೊಂದಿಗೆ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಲಾಜಿ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು.
ಸಹಾಯಕ ಸಬ್ ಇನ್ಸ್‍ಪೆಕ್ಟರ್ ಡೆಂಟಲ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ಯೊಂದಿಗೆ 2 ವರ್ಷದ ದಂತ ಆರೋಗ್ಯ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಹೆಡ್ ಕಾನ್ಸ್‍ಟೇಬಲ್ ಲ್ಯಾಬೋರೇಟರಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು, ಮತ್ತು ಲ್ಯಾಬೋರೇಟರಿ ಸಹಾಯಕ ವಿಷಯದಲ್ಲಿ ಸರ್ಟಿಫೆಕೇಟ್ ಪಡೆದಿರಬೇಕು.
ಹೆಡ್ ಕಾನ್ಸ್‍ಟೇಬಲ್ ಎಕ್ಸರೇ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ 2 ವರ್ಷದ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಹೆಡ್ ಕಾನ್ಸ್‍ಟೇಬಲ್ ಏರ್ ಕಂಡಿಷನಿಂಗ್ ಪ್ಲಾನಟ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ರೆಫ್ರಿಜರೇಷನ್& ಏರ್ ಕಂಡಿಷನಿಂಗ್ ವಿಷಯದಲ್ಲಿ ಐಟಿಐ ಕೋರ್ಸ ತೇರ್ಗಡೆಯಾಗಿರಬೇಕು.
ಹೆಡ್ ಕಾನ್ಸ್‍ಟೇಬಲ್ ಸ್ಟೆವಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ಊಟ ಮತ್ತು ಸೇವೆ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಕಾನ್ಸ್‍ಟೇಬಲ್ ವಾರ್ಡ್ ಬಾಯ್/ಗರ್ಲ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ಪ್ರಥಮ ಚಿಕಿತ್ಸೆ ವಿಷಯದಲ್ಲಿ ಸರ್ಟಿಫೆಕೇಟ್ ಪಡೆದಿರಬೇಕು. ಕಾನ್ಸ್‍ಟೇಬಲ್ ಎಸ್./ಕೆ. ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ಇಂಗ್ಲೀಷ್,ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಓದುವ ಬರೆಯವ ಜ್ಞಾನ ಹೊಂದಿರಬೇಕು.
ಅರ್ಜಿಯನ್ನು ಆನ್‍ಲೈನ್ ಮೂಲಕ ತಿತಿತಿ.ಛಿಡಿಠಿಜಿiಟಿಜiಚಿ.ಛಿom ವೆಬ್‍ಸೈಟ್ ಲಾಗಿನ್ ಆಗಿ ದಿನಾಂಕ: 23/03/2016 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸಬಹುದು.
ಉಚಿತ ತಾಂತ್ರಿಕ ತರಬೇತಿಗೆ ಅರ್ಜಿ ಅಹ್ವಾನ
ಮೈಸೂರು,ಫೆ.24.ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಮೈಸೂರು ಮಹಾ ನಗÀರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಸ್.ಎಸ್.ಎಲ್.ಸಿ ಅಥವಾ ಐ.ಟಿ.ಐ/ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉಚಿತವಾಗಿ ತಾಂತ್ರಿಕ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಟರ್ನರ್, ಮಿಲ್ಲರ್, ಸಿ.ಎನ್.ಸಿ. ಪ್ರೋಗ್ರಾಮಿಂಗ್ ಮತ್ತು ಅಪರೇಷನ್ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದು, ಆಸಕ್ತರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ 93-94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್. ರಸ್ತೆ, ಮೈಸೂರು-570016 ಇಲ್ಲಿ ಅರ್ಜಿಂ ಪಡೆದು ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9141629598, 9066710155.ನ್ನು ಸಂಪರ್ಕಿಸುವುದು.
ಸುರೇಖ ಎಂ.ಎಸ್ ಅವರಿಗೆ ಪಿಎಚ್.ಡಿ. ಪದವಿ
ಮೈಸೂರು,ಫೆ.24.ಮೈಸೂರು ವಿಶ್ವವಿದ್ಯಾಲಯವು ಸುರೇಖ ಎಂ.ಎಸ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಚಂದ್ರಶೇಖರ್ ಅಡಿಗ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Some Sಣuಜies oಟಿ ಒoಜuಟಚಿಡಿ ಖeಟಚಿಣioಟಿs ಜಿoಡಿ ಣhe ಖogeಡಿs-ಖಚಿmಚಿಟಿuರಿಚಿಟಿ ಖಿಥಿಠಿe ಈuಟಿಛಿಣioಟಿs ಚಿಟಿಜ q-ಅoಟಿಣiಟಿueಜ ಈಡಿಚಿಛಿಣioಟಿs ” ಕುರಿತು ಸಾದರಪಡಿಸಿದ ಗಣಿತ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸುರೇಖ ಎಂ.ಎಸ್ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

No comments:
Post a Comment