Monday, 29 February 2016

ಜ್ಞಾನವನ್ನು ಯುವ ಪೀಳಿಗೆಗಳ ಅನುಕೂಲಕ್ಕೆ ಬಳಸಿ: ಮೋಹನ್ ಕುಮಾರ್
ಮೈಸೂರು, ಫೆಬ್ರವರಿ 29 . ಆಚರಿಸಲಾಗುತ್ತಿರುವ ಮಹಾನ್ ವ್ಯಕ್ತಿಗಳ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವೃದ್ಧಿಯಾಗುವ ಜ್ಞಾನವನ್ನು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಯುವ ಪೀಳಿಗೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್ ಹೇಳಿದರು.
      ಇಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಯುವ ಪೀಳಿಗೆಗೆ ಒಳ್ಳೆಯ ಮಾರ್ಗದರ್ಶನದ ಅಗತ್ಯತೆ ಇದೆ. ಜ್ಞಾನವನ್ನು ಯುವ ಪೀಳಿಗೆಗಳ ಅನುಕೂಲಕ್ಕಾಗಿ  ಬಳಸಿಕೊಳ್ಳಬೇಕು. ಸದೃಡ ಸಮಾಜದ ನಿರ್ಮಾಣದ ಜವಾಬ್ದಾರಿ ಯುವಜನರ ಮೇಲಿದೆ. ಜ್ಞಾನ ಸಂಪಾದನೆಯಿಂದ ಸಮಾಜವನ್ನು ಸಿರಿಯಾದ ದಿಕ್ಕಿಗೆ ಸಾಗಿಸಲು ಸಾಧ್ಯ ಎಂದರು.
      ಇಂದಿಗೂ ಸಹ ಜಾತಿ ವ್ಯವಸ್ಥೆ ಸಮಾಜದಲ್ಲಿ ಜಾರಿಯಲ್ಲಿದೆ. ಮೊದಲಿಗೆ ಮನಸ್ಸಿನ ಪರಿವರ್ತನೆಯಾಗಬೇಕು. ಮನುಷ್ಯರು ದ್ವೇಷಭಾವನೆಗಳನ್ನು ಕೈಬಿಟ್ಟು ಶಾಂತಿ ಹಾಗೂ ಪ್ರೀತಿಯಿಂದ ಜೀವನವನ್ನು ಸಾಗಿಸಲು ಮುಂದಾಗಬೇಕು. ಅನೇಕ ಮಹಾನ್ ವಚನಕಾರು ರಚಿಸಿರುವ ವಚನಗಳನ್ನು ಅರ್ಥಿಸಿಕೊಂಡರೆ ಸಮಾಜದಲ್ಲಿರುವ ಪ್ರತಿಯೊಬ್ಬರು ಒಳ್ಳೆಯ ಜೀವನ ನಡೆಸಬಹುದು ಎಂದು ತಿಳಿಸಿದರು.
       ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿವೃತ್ತ ಉಪನಿರ್ದೇಶಕ ಮ.ಗು.ಸದಾನಂದಯ್ಯ ಅವರು ಸಿದ್ಧರಾಮೇಶ್ವರರು ಸಮಾಜ ಮತ್ತು ಧರ್ಮವನ್ನು ಒಟ್ಟಾಗಿ ಸರಿತೂಗಿಸಿಕೊಂಡು ಜ್ಞಾನವನ್ನು ಸಮಾನವಾಗಿ ಹಂಚಿದ ಮಹಾನ್ ಯೋಗಿಗಳಲ್ಲಿ ಯೋಗಿ. ವ್ಯಕ್ತಿಯ ಕುಲಕ್ಕೆ ಒತ್ತು ನೀಡದೆ ಗುಣಕ್ಕೆ ಮಹತ್ವ ನೀಡಿದ ದೊಡ್ಡ ಚೇತನ ಎಂದು ಹೇಳಿದರು.
     ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ, ಕಾಯಕವೇ ಸರ್ವಸ್ವ ಎಂದು ನಂಬಿ ಸ್ವತಃ ದುಡಿದು ಇತರರಿಗೂ ಉಪಕಾರ ಮಾಡಿದ, ಕೆರೆ, ಬಾವಿ, ಹೂದೋಟ, ಛತ್ರಗಳನ್ನು ನಿರ್ಮಿಸಿ, ನೂರಾರು ಸಾಮೂಹಿಕ ವಿವಾಹಗಳನ್ನು ನೆರವೇರಿಸಿದ ಯೋಗಿ ಸಿದ್ಧರಾಮೇಶ್ವರರ ಪ್ರಗತಿಪರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
     ಸಿದ್ಧರಾಮೇಶ್ವರರು ರಚಿಸಿರುವ 1900 ವಚನಗಳು ಸರ್ಕಾರದ ಬಳಿಯಿದೆ. ಪ್ರತಿಯೊಬ್ಬರು ಅವರ ವಚನದಲ್ಲಿರುವ ಪದಗಳ ಅರ್ಥವನ್ನು ಸಂಪೂರ್ಣವಾಗಿ ಅರಿತು ತಮ್ಮ ಜೀವನದಲ್ಲಿ ಅಳವಡಿಕೊಂಡರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.    
      ಚಿತ್ರದುರ್ಗ-ಬಾಗಲಕೋಟೆಯ ಜಗದ್ಗುರು ಸಿದ್ಧರಾಮೇಶ್ವರ ಭೋವಿ ಗುರುಪೀಠದ ಶ್ರೀ ಶ್ರೀ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿ ದಿವ್ಯಸಾನಿಧ್ಯ ವಹಿಸಿದರು.
 ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆನಂದ್, ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಮಲ್ಲಯ್ಯ, ಮುಖಂಡರಾದ ಎಂ.ಜಿ.ರಾಮಕೃಷ್ಣಪ್ಪ, ಡಿ.ಸಿದ್ದರಾಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
     ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅರಮನೆ ಕೋಟೆ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಂಗವಾಗಿ ಆಯೋಜಿಸಲಾದ ಮೆರವಣಿಗೆಗೆ ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಬಿ.ಎಲ್. ಭೈರಪ್ಪ ಚಾಲನೆ ನೀಡಿದರು.




           
ಮಾರ್ಚ್ 14 ರಿಂದ ದೊಡ್ಡ ಜಾತ್ರೆ
ಮೈಸೂರು,ಫೆ.29. ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದೊಡ್ಡ ಜಾತ್ರಾ ಮಹೋತ್ಸವ ದಿನಾಂಕ 14-03-2016 ರಿಂದ 25-03-2016 ರವರೆಗೆ ನಡೆಯಲಿದೆ. ದೊಡ್ಡ ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದಿನಾಂಕ 21-03-2016 ರಂದು ಬೆಳಿಗ್ಗೆ 6-08 ರಿಂದ 6-30 ಘಂಟೆಯೊಳಗೆ ಗೌತಮ ಪಂಚಮಹಾರಥೋತ್ಸವ ಹಾಗೂ ದಿನಾಂಕ 23-03-2016 ರಂದು ಸಂಜೆ 7 ಗಂಟೆಗೆ ಕಪಿಲಾ ನದಿಯಲ್ಲಿ ಶ್ರೀಯವರ ತೆಪ್ಪೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಫೆ.29(ಕ.ವಾ.)- ಜಿಲ್ಲಾಧಿಕಾರಿಗಳ ಕಚೇರಿಗೆ ಭೂಸ್ವಾಧೀನ ಹಾಗೂ ಇತರೆ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನು ಸಲಹೆ ನೀಡಲು ಗುತ್ತಿಗೆ ಆಧರದ ಮೇಲೆ ಒಬ್ಬ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು  ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲಾಗುವುದು.
ಆಯ್ಕೆಯಾದವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 313(ಬಿ) ಪ್ರಕಾರ ಮಾಸಿಕ ಸಂಚಿತ ವೇತನ ನೀಡಲಾಗುವುದು.
    ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವವರು ಸ್ವವಿವರಗಳೂಳ್ಳ ಅರ್ಜಿಯನ್ನು ಅಪೇಕ್ಷಿಸಿರುವ ಸಂಭಾವನೆಯ ವಿವರದೊಂದಿಗೆ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು ಇಲ್ಲಿಗೆ  ದಿನಾಂಕ 11-03-2016 ರೊಳಗಾಗಿ ಸಲ್ಲಿಸುವುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಆಕಾಶವಾಣಿಯಲ್ಲಿ ಆರೋಗ್ಯ ಇಲಾಖೆಯ ಬಗ್ಗೆ ಮಾಹಿತಿ
ಮೈಸೂರು,ಫೆ.29. ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವತಿಯಿಂದ ಆರೋಗ್ಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಸೌಲಭ್ಯಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ದಿನಾಂಕ 29.02.2016 ರಿಂದ 12.03.2016 ವರೆಗೆ ಪ್ರತಿ ದಿನ ಸಾಯಂಕಾಲ 5 ಗಂಟೆಗೆ ಆಕಾಶವಾಣಿ (100.6 ಕಂಪನಾಕ)ಯಲ್ಲಿ ಆರೋಗ್ಯ ಭಾಗ್ಯ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸಲಿದ್ದು, ದಿನಾಂಕ 05.03.2016ರ ಸಂಜೆ 5 ಗಂಟೆಗೆ ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯ, ಮೆದುಳುಜ್ವರದ ಬಗ್ಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ||ಚಿದಂಬರ.ಎಸ್, ಅವರು ತಿಳಿಸಿಕೊಡಲಿದ್ದಾರೆ.  ಸಾರ್ವಜನಿಕರು ಉಪಯುಕ್ತ ಮಾಹಿತಿ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಡಾಕ್ ಅದಾಲತ್
ಮೈಸೂರು,ಫೆ.29. ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆಗಳ ಸುಧಾರಣೆಗಾಗಿ ಸಲಹೆ ಸ್ವಾಗತಿಸಲು ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರು ದಿನಾಂಕ 21.03.2016 ರಂದು ಬೆಳಿಗ್ಗೆ 11 ಗಂಟೆಗೆ ಯಾದವಗಿರಿ ಅಂಚೆ ಕಛೇರಿಯ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ  “ಡಾಕ್ ಅದಾಲತ್” ಅಯೋಜಿಸಿರುತ್ತಾರೆ.
    ಗ್ರಾಹಕರು ತಮ್ಮ ದೂರು ಮತ್ತು ಕುಂದುಕೊರತೆಗಳನ್ನು ಲಿಖಿತ ಮೂಲಕವಾಗಿ ಯಾವುದೇ ಅಂಚೆ ಕಛೇರಿಯಿಂದ ಕಳುಹಿಸಬಹುದು. ಈ ಸಂಬಂಧದಲ್ಲಿ ಪತ್ರಗಳನ್ನು   ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ ಸ್ವೀಕರಿಸುವ ಕೊನೆಯ ದಿನಾಂಕ 10.03.2016 ಯಾಗಿರುತ್ತದೆ ಎಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅಣಬೆ ಖಾದ್ಯಗಳ ಪ್ರಾತ್ಯಕ್ಷಿಕೆ
ಮೈಸೂರು,ಫೆ.29-ತೋಟಗಾರಿಕೆ ಇಲಾಖೆ ವತಿಯಿಂದ ದಿನಾಂಕ 04-03-2016 ರಂದು ಬೆಳಿಗ್ಗೆ 10-30 ಗಂಟೆಗೆ ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಣಬೆ ಬೇಸಾಯದಲ್ಲಿ ಕೊಯ್ಲೋತ್ತರ ತಂತ್ರಜ್ಞಾನದ ಜೊತೆಗೆ ವಿಶೇಷವಾಗಿ ಅಣಬೆಯಿಂದ ತಯಾರಿಸಹುದಾದ ಅಣಬೆ ಪಲಾವ್, ಮಂಚೂರಿ, ಸಲಾಡ್, ಉಪ್ಪಿನಕಾಯಿ ಮತ್ತು ಸೂಪ್ ಖಾದ್ಯಗಳನ್ನು ಕಾರ್ಯಕ್ರಮದಲ್ಲೇ ನುರಿತ ಬಾಣಸಿಗರಿಂದ ಪ್ರಾಯೋಗಿಕವಾಗಿ ತಯಾರಿಸುವ ಬಗ್ಗೆ ಶಿಕ್ಷಣಾರ್ಥಿಗಳಿಗೆ ತಿಳಿಸಲಾಗುವುದು.
     ಆಸಕ್ತರು ರೂ 100/- ಶುಲ್ಕ ಪಾವತಿಸಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ಕರ್ಜನ್ ಪಾರ್ಕ್, ಮೈಸೂರು ಇಲ್ಲಿ ಹೆಸರು ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9740596111 ಯನ್ನು ಸಂಪರ್ಕಿಸುವುದು.
ಮಾರ್ಚ್ ಮಾಹೆ ಪಡಿತರ ಬಿಡುಗಡೆ
     ಮೈಸೂರು,ಅ.01.ಮೈಸೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ  ಮಾರ್ಚ್ 2016 ರ ಮಾಹೆಗೆ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ ಉಚಿತವಾಗಿ 4 ಕೆ.ಜಿ. ಅಕ್ಕಿ,  1 ಕೆ.ಜಿ. ಗೋಧಿ ನೀಡಲಾಗುವುದು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 1 ಲೀಟರ್ ತಾಳೆ ಎಣ್ಣೆ  ರೂ. 25/-, 1 ಕೆ.ಜಿ. ಅಯೋಡೈಸ್ಡ್ ಉಪ್ಪು  ರೂ. 2/- ರಂತೆ ತಲಾ 1 ಕೆ.ಜಿ. ಸಕ್ಕರೆ ರೂ. 13-50 ದರದಲ್ಲಿ ನೀಡಲಾಗುವುದು.
     ಎಪಿಎಲ್ ಪಡಿತರ ಕಾರ್ಡು ಏಕಸದಸ್ಯರಿಗೆ 3 ಕೆ.ಜಿ. ಅಕ್ಕಿ ,(ರೂ. 15=00 ಪ್ರತಿ ಕೆ.ಜಿ.ಗೆ) 2 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ಎರಡು ಅಥವಾ ಹೆಚ್ಚಿನ ಕುಟುಂಬ ಸದಸ್ಯರಿಗೆ 5 ಕೆ.ಜಿ. ಅಕ್ಕಿ,(ರೂ. 15=00 ಪ್ರತಿ ಕೆ.ಜಿ.ಗೆ) ಹಾಗೂ 5 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ನೀಡಲಾಗುವುದು.
     ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕಾರ್ಡುದಾರರು ಸಂಬಂಧಿಸಿದ ಗ್ರಾಮ ಪಂಚಾಯಿತಿ/ತಾಲ್ಲೂಕು ಮಟ್ಟದ ಅಧಿಕಾರಿಗಳು ಅಥವಾ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು ಅಥವಾ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422107 ಅಥವಾ ಬೆಂಗಳೂರಿನ ಶುಲ್ಕ ರಹಿತ ಸಹಾಯವಾಣಿ 1800-425-9339ಗೆ ದೂರು ಸಲ್ಲಿಸಬಹುದೆಂದು ತಿಳಿಸಿದ್ದಾರೆ                                                                

Friday, 26 February 2016


ಮಂಡ್ಯ : ತಾಲೂಕಿನ ಬಸರಾಳು ಜಿಲ್ಲಾ ಪಂಚಾಯಿತಿಯಲ್ಲಿ ಜಾ.ದಳ ಬಂಡಾಯವಾಗಿ ಸ್ಪರ್ಧಿಸಿ ವಿಜೇತರಾದ ಎನ್. ಶಿವಣ್ಣ ಹಾಗೂ ಅವರ ತಂಡದಲ್ಲಿ ತಾಲೂಕು ಪಂಚಾಯಿತಿಗೆ ಬಂಡಾಯವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಬೇಬಿ ತಾ.ಪಂ. ಕ್ಷೇತ್ರದ ಮಂಜುಳಾ, ಹಲ್ಲೇಗೆರೆ ತಾ.ಪಂ. ಕ್ಷೇತ್ರದ ರಾಜೇಶ್ವರಿ, ಚಂದಗಾಲು (ಬ) ತಾ.ಪಂ. ಕ್ಷೇತ್ರದ ಆರ್.ಎಂ. ಪ್ರಕಾಶ್ ಅವರು ಹೋಬಳಿಯ ಹಿರಿಯ ನಾಯಕರುಗಳೊಟ್ಟಿಗೆ ರಾಜ್ಯ ಜಾ.ದಳ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಶಿವಣ್ಣ ತಂಡದ ಅವರ ಗೆಲುವಿಗೆ ಹರ್ಷ ವ್ಯಕ್ತಪಡಿಸಿ, ಎಚ್.ಡಿ. ಕುಮಾರಸ್ವಾಮಿ ಅವರು ಶುಭ ಹಾರೈಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ. ತಿಮ್ಮೇಗೌಡ, ಮಾಜಿ ಪ್ರಧಾನ್, ಟಿ. ದೇವರಾಜು, ಕೆಂಚನಹಳ್ಳಿ ಪುಟ್ಟಸ್ವಾಮಿ, ಶಿವಗೇಗೌಡ, ಅರವಿಂದ್ ಕೆರಗೋಡು, ಕೆ.ಎಲ್. ಕೃಷ್ಮ, ಕೆ.ಜೆ. ಅನಂತರಾವ್, ಶಿವರಾಮೇಗೌಡ, ನಾಗರಾಜು, ಪಾಪಯ್ಯ ಇತರರು ಈ ಸಂದರ್ಭದಲ್ಲಿ ಇದ್ದರು.

Wednesday, 24 February 2016

                                              24ನೇಫೆಬ್ರವರಿ 2016
ಫೆಬ್ರವರಿ 26, 27 ಮತ್ತು 28 ರಂದು ವಚನ ಸಂಗೀತೋತ್ಸವ: ಕೆ.ಎ.ದಯಾನಂದ
   ಮೈಸೂರು,ಫೆ.24. ವಚನ ಸಾಹಿತ್ಯಕ್ಕಿರುವ ಗೇಯ ಗುಣವು ಸಂಗೀತದ ವಿವಿಧ ಪ್ರಕಾರಗಳಲ್ಲಿ ಅದರ ವಿಸ್ತರಣೆಯನ್ನು ಕಂಡಿದೆ. ಇಂತಹ ಸಮಸಮಾಜದ ದಿಟ್ಟ ಆಶಯಗಳನ್ನು ಒಳಗೊಂಡಿರುವ ವಚನ ಸಾಹಿತ್ಯವನ್ನು ಹೆಚ್ಚು ಹೆಚ್ಚು ಜನತೆಗೆ ಮುಟ್ಟಿಸುವ ಮೂಲಕ ಸಮಾನತೆಯ ಸಮಾಜ ಕಟ್ಟುವ ದಿಕ್ಕಿನಲ್ಲಿ ಜನಮನವನ್ನು ತೊಡಗಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಳೆದ 2 ದಶಕಗಳಿಂದಲೂ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ವಚನ ಸಂಗೀತೋತ್ಸವವನ್ನು ಆಯೋಜಿಸುತ್ತಾ ಬಂದಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಕೆ.ಎ.ದಯನಂದ ಅವರು ತಿಳಿಸಿದರು.
      ಅವರು ಇಂದು ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಸವನ ಬಾಗೇವಾಡಿ, ಕಲಬುರಗಿ, ಬಸವಕಲ್ಯಾಣ, ಕೂಡಲ ಸಂಗಮ, ಅಥಣಿ, ಉಳವಿ, ಶಿವಮೊಗ್ಗ, ಬೆಂಗಳೂರು,       ಶ್ರೀ ಮಲೈಮಹದೇಶ್ವರ ಬೆಟ್ಟ, ಬೆಳಗಾವಿ ಮುಂತಾದ ಸ್ಥಳಗಳಲ್ಲಿ ವಚನ ಸಂಗೀತೋತ್ಸವವನ್ನು ಈಗಾಗಲೇ ನಡೆಸಲಾಗಿದೆ ಎಂದರು.
    ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಈ ವರ್ಷ ಈ ಕಾರ್ಯಕ್ರಮವನ್ನು ಮೈಸೂರಿನ ಸುತ್ತೂರು ಶಿವರಾತ್ರೀಶ್ವರ ಮಠದಲ್ಲಿ 2016 ಫೆಬ್ರವರಿ 26 ರಿಂದ      28 ರವರೆಗೆ ಮೂರು ದಿನಗಳ ಕಾಲ ವಚನ ಗಾಯನ, ನೃತ್ಯ ಹಾಗೂ ನಾಟಕ ಕಾರ್ಯಕ್ರಮಗಳ ಮೂಲಕ ಶರಣರ ತತ್ವಗಳನ್ನು ಪ್ರಸಾರ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಿದೆ ಎಂದರು.
   ನಾಡಿನ ಹೆಸರಾಂತ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ 26 ರಂದು ಸಂಜೆ 6.00ಕ್ಕೆ ಮಾನ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ  ವಿ. ಶ್ರೀನಿವಾಸ ಪ್ರಸಾದ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ  ಪ್ರತಾಪ್‍ಸಿಂಹ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿಬಿ.ಎಲ್. ಭೈರಪ್ಪ ರವರು ಗೌರವ ಉಪಸ್ಥಿತರಿದ್ದು ಶಾಸಕರಾದ  ಎಂ.ಕೆ. ಸೋಮಶೇಖರ್‍ರವರು ಅಧ್ಯಕ್ಷತೆ ವಹಿಸÀಲಿದ್ದಾರೆ ಎಂದರು.
12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ವಚನ ಸಾಹಿತ್ಯ ಚಳವಳಿಯು ಜಾಗತಿಕ ಸಾಹಿತ್ಯ ಚಳವಳಿಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಇದಕ್ಕೆ ಕಾರಣ ಈ ಚಳವಳಿಯು ಸಾಹಿತ್ಯದ ಮೂಲಕ ದಾಖಲಿಸಲ್ಪಟ್ಟರೂ ಅದು ಅಂದಿನ ಕಾಲಕ್ಕೆ ಅಸಂಭವವೆನಿಸಿದ್ದ ಸಮತಾ ಸಮಾಜದ ಆಶಯಗಳನ್ನೊಳಗೊಂಡಿತ್ತು. ಸಮಾಜದ ಎಲ್ಲಾ ವರ್ಗದ, ಎಲ್ಲಾ ಜಾತಿಯ ಚಿಂತಕರು, ಜ್ಞಾನಿಗಳು ಸೇರಿ ಹೆಣ್ಣು-ಗಂಡು, ಜಾತಿ-ವರ್ಗಗಳೆಂಬ ತಾರಥಮ್ಯ ರಹಿತ ಸಮಾಜ ನಿರ್ಮಾಣದ ಕನಸು ಕಂಡ ಚಳವಳಿ ಇದಾಗಿತ್ತು. ಅಲ್ಲಮಪ್ರಭುವಿನಂಥ ಅನಂತ ತತ್ವಜ್ಞಾನಿ, ಬಸವಣ್ಣನಂಥ ಸಮಸಮಾಜದ ಮಹಾ ಕನಸುಗಾರ, ಸಿದ್ಧರಾಮನಂಥ ಕಾಯಕಯೋಗಿ, ಅಕ್ಕಮಹದೇವಿಯಂಥ ಅಲೌಖಿಕ ಸಂಸಾರಿಗಳಷ್ಟೆ ಅಲ್ಲದೇ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಸಮಾಜದ ಎಲ್ಲ ಸ್ಥರದ, ಎಲ್ಲ ಸಮುದಾಯಗಳ ಸಮಾಜ ಸುಧಾರಕರು ಚಳವಳಿಗೆ ಶಕ್ತಿ ತುಂಬಿದರು. ಆದ್ದರಿಂದಲೇ ಎಂಟು ನೂರು ವರ್ಷಗಳ ನಂತರವೂ ವಚನ ಸಾಹಿತ್ಯ ವಚನಕಾರರ ಆಶಯಗಳು ಈ ಸಮಾಜದ ತುರ್ತುಗಳಾಗಿಯೇ ಪ್ರಸ್ತುತವೆನಿಸಿವೆ ಎಂದು ತಿಳಿಸಿದರು.

ಜೀವನಾನುಭವಗಳ ನೇರ ಹಾಗೂ ದಿಟ್ಟ ಪ್ರಕಟಣೆಗೆ ದೇಸಿ ಸೊಗಡನ್ನು ಬಳಸಿಕೊಂಡ ವಚನ ಸಾಹಿತ್ಯವು ಕಿರಿದರಲ್ಲಿ ಹಿರಿಯ ಅನುಭವಗಳನ್ನು ತುಂಬಿಕೊಟ್ಟ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಕಾಯಕವೇ ಕೈಲಾಸ ಮುಂತಾದ ಸರಳ ತತ್ವಗಳು ವಚನ ಸಾಹಿತ್ಯದ ಬಹುದೊಡ್ಡ ಶಕ್ತಿಯಾಗಿವೆ. ಅಲ್ಲದೇ ಜಾತಿ, ಮತ, ಲಿಂಗ ಬೇಧಗಳನ್ನು ನಿರಾಕರಿಸಿ ನಿಜಭಕ್ತಿಯೊಂದೇ ಸಾರ್ಥಕ ಜೀವನದ ಸನ್ಮಾರ್ಗವೆಂಬುದು ಕೂಡ ವಚನ ಸಾಹಿತ್ಯದ ಮಹತ್ವವನ್ನು ತಿಳಿಸುತ್ತದೆ ಎಂದರು.
      ವಚನ ಸಾಹಿತ್ಯದ ನಿರಂತರ ಪ್ರಸಾರದ ನಿಟ್ಟಿನಲ್ಲಿ ಯೋಜಿಸಿರುವ ಈ ಕಾರ್ಯಕ್ರಮಕ್ಕೆ ಆಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷಹಾಗೂ ವಚನ ಸಂಗೀತೋತ್ಸವದ ಸಂಚಾಲಕ ಗೊ.ರು.ಪರಮೇಶ್ವರಪ್ಪ ಅವರು ಉಪಸ್ಥಿತರಿದ್ದರು.


ಸಾಮಾನ್ಯ ಕೌನ್ಸಿಲ್ ಸಭೆ
ಮೈಸೂರು,ಫೆ.24.-ಮೈಸೂರು ಮಹಾನಗರಪಾಲಿಕೆಯ 2016 ಫೆಬ್ರವರಿ ಮಾಹೆಯ ಸಾಮಾನ್ಯ ಕೌನ್ಸಿಲ್ ಸಭೆಯು ಫೆಬ್ರವರಿ 29 ರಂದು ಮಧ್ಯಾಹ್ನ 3-00 ಗಮಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈಸೂರು ಮಹಾನಗರಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮೈಸೂರು,ಫೆ.24.ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ (ಅಖPಈ)ನಲ್ಲಿ ಖಾಲಿ ಇರುವ ವಿವಿಧ ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಹ ಪುರುಷ ಹಾಗೂ  ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಬ್ ಇನ್ಸ್‍ಪೆಕ್ಟರ್ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 30 ವರ್ಷದೊಳಗಿದ್ದು, ಪಿ.ಯು.ಸಿ.ಯೊಂದಿಗೆ 3.5 ವರ್ಷದ ನರ್ಸಿಂಗ್ ಮತ್ತು ಮಿಡ್ ವೈಫರಿ ಕೋರ್ಸನಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕೇಂದ್ರ/ರಾಜ್ಯ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿಸಿರಬೇಕು. ಸಬ್ ಇನ್ಸ್‍ಪೆಕ್ಟರ್ ರೇಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 30 ವರ್ಷದೊಳಗಿದ್ದು, ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯಗಳೋಂದಿಗೆ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ 2 ವರ್ಷದ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು.
ಸಹಾಯಕ ಸಬ್ ಇನ್ಸ್‍ಪೆಕ್ಟರ್ ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, ಪಿ.ಯು.ಸಿ.ಯೊಂದಿಗೆ ಫಾರ್ಮಸಿ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಸಹಾಯಕ ಸಬ್ ಇನ್ಸ್‍ಪೆಕ್ಟರ್ ಲ್ಯಾಬೋರೇಟರಿ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ಯೊಂದಿಗೆ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಲಾಜಿ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು.
ಸಹಾಯಕ ಸಬ್ ಇನ್ಸ್‍ಪೆಕ್ಟರ್ ಡೆಂಟಲ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ಯೊಂದಿಗೆ 2 ವರ್ಷದ ದಂತ ಆರೋಗ್ಯ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಹೆಡ್ ಕಾನ್ಸ್‍ಟೇಬಲ್ ಲ್ಯಾಬೋರೇಟರಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು, ಮತ್ತು ಲ್ಯಾಬೋರೇಟರಿ ಸಹಾಯಕ ವಿಷಯದಲ್ಲಿ ಸರ್ಟಿಫೆಕೇಟ್ ಪಡೆದಿರಬೇಕು.
ಹೆಡ್ ಕಾನ್ಸ್‍ಟೇಬಲ್ ಎಕ್ಸರೇ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ 2 ವರ್ಷದ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಹೆಡ್ ಕಾನ್ಸ್‍ಟೇಬಲ್ ಏರ್ ಕಂಡಿಷನಿಂಗ್ ಪ್ಲಾನಟ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ರೆಫ್ರಿಜರೇಷನ್& ಏರ್ ಕಂಡಿಷನಿಂಗ್ ವಿಷಯದಲ್ಲಿ ಐಟಿಐ ಕೋರ್ಸ ತೇರ್ಗಡೆಯಾಗಿರಬೇಕು.
    ಹೆಡ್ ಕಾನ್ಸ್‍ಟೇಬಲ್ ಸ್ಟೆವಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ಊಟ ಮತ್ತು ಸೇವೆ ವಿಷಯದಲ್ಲಿ ಡಿಪ್ಲೊಮೊ ಕೋರ್ಸ ತೇರ್ಗಡೆಯಾಗಿರಬೇಕು. ಕಾನ್ಸ್‍ಟೇಬಲ್ ವಾರ್ಡ್ ಬಾಯ್/ಗರ್ಲ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ಪ್ರಥಮ ಚಿಕಿತ್ಸೆ ವಿಷಯದಲ್ಲಿ ಸರ್ಟಿಫೆಕೇಟ್ ಪಡೆದಿರಬೇಕು. ಕಾನ್ಸ್‍ಟೇಬಲ್ ಎಸ್./ಕೆ. ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ 20 ರಿಂದ 25 ವರ್ಷದೊಳಗಿದ್ದು, 10 ನೇ ತರಗತಿ ತೇರ್ಗಡೆಯೊಂದಿಗೆ ಇಂಗ್ಲೀಷ್,ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಓದುವ ಬರೆಯವ ಜ್ಞಾನ ಹೊಂದಿರಬೇಕು.
    ಅರ್ಜಿಯನ್ನು ಆನ್‍ಲೈನ್ ಮೂಲಕ ತಿತಿತಿ.ಛಿಡಿಠಿಜಿiಟಿಜiಚಿ.ಛಿom  ವೆಬ್‍ಸೈಟ್ ಲಾಗಿನ್ ಆಗಿ ದಿನಾಂಕ: 23/03/2016 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಉಪಮುಖ್ಯಸ್ಥರು,  ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸಬಹುದು.
ಉಚಿತ ತಾಂತ್ರಿಕ ತರಬೇತಿಗೆ  ಅರ್ಜಿ ಅಹ್ವಾನ
ಮೈಸೂರು,ಫೆ.24.ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಮೈಸೂರು ಮಹಾ ನಗÀರಪಾಲಿಕೆ  ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಸ್.ಎಸ್.ಎಲ್.ಸಿ ಅಥವಾ ಐ.ಟಿ.ಐ/ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉಚಿತವಾಗಿ ತಾಂತ್ರಿಕ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
     ಟರ್ನರ್, ಮಿಲ್ಲರ್, ಸಿ.ಎನ್.ಸಿ. ಪ್ರೋಗ್ರಾಮಿಂಗ್ ಮತ್ತು ಅಪರೇಷನ್ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದು, ಆಸಕ್ತರು  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ 93-94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್. ರಸ್ತೆ, ಮೈಸೂರು-570016 ಇಲ್ಲಿ  ಅರ್ಜಿಂ ಪಡೆದು ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ  ಮೊಬೈಲ್ ಸಂಖ್ಯೆ: 9141629598, 9066710155.ನ್ನು ಸಂಪರ್ಕಿಸುವುದು.
                        ಸುರೇಖ ಎಂ.ಎಸ್ ಅವರಿಗೆ  ಪಿಎಚ್.ಡಿ. ಪದವಿ


ಮೈಸೂರು,ಫೆ.24.ಮೈಸೂರು ವಿಶ್ವವಿದ್ಯಾಲಯವು ಸುರೇಖ ಎಂ.ಎಸ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಚಂದ್ರಶೇಖರ್ ಅಡಿಗ  ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “Some Sಣuಜies oಟಿ ಒoಜuಟಚಿಡಿ ಖeಟಚಿಣioಟಿs ಜಿoಡಿ ಣhe ಖogeಡಿs-ಖಚಿmಚಿಟಿuರಿಚಿಟಿ ಖಿಥಿಠಿe ಈuಟಿಛಿಣioಟಿs ಚಿಟಿಜ q-ಅoಟಿಣiಟಿueಜ ಈಡಿಚಿಛಿಣioಟಿs ” ಕುರಿತು ಸಾದರಪಡಿಸಿದ ಗಣಿತ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸುರೇಖ ಎಂ.ಎಸ್  ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಅದಕ್ಷ ಮಂತ್ರಿಗಳನ್ನು ಕಿತ್ತು ಹಾಕಿ ದಕ್ಷರನ್ನು ನೇಮಿಸಿ -ಹೆಚ್.ವಿಶ್ವನಾಥ್

ಇದೇ ಮಂತ್ರಿಗಳನ್ನು ಮುಂದಿಟ್ಟುಕೊಂಡು ಹೋದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ : ಮಾಜಿ ಸಾಂಸದ ಹೆಚ್.ವಿಶ್ವನಾಥ್
ಮುಖ್ಯಮಂತ್ರಿ ಬದಲಾವಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ
ತಕ್ಷಣವೇ ಅದಕ್ಷ ಮಂತ್ರಿಗಳನ್ನು ಕಿತ್ತು ಹಾಕಿ ದಕ್ಷರನ್ನು ನೇಮಿಸಿ
ಪಕ್ಷಗಳೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಪದ್ಧತಿ ಹೋಗುತ್ತಿರುವುದು ಆತಂಕಕಾರಿ
ಪಕ್ಷಗಳ ನಾಯಕರು ಕುಟುಂಬ ರಾಜಕಾರಣದ ವ್ಯಾಮೋಹ ಬಿಡಬೇಕು, ಕುಟುಂಬದರನ್ನು ಅಧಿಕಾರದಿಂದ ಹೊರಗಿಡಬೇಕು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿರುವ ಮಂತ್ರಿಗಳನ್ನು ತಕ್ಷಣವೇ ಬದಲಾಯಿಸದೇ ಅವರನ್ನೇ ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆಗೆ ಹೋದರೆ ಆ ಚುನಾವಣೆಯಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಂಗ್ರೆಸ್ ನ ಮಾಜಿ ಸಾಂಸದ ಹೆಚ್.ವಿಶ್ವನಾಥ್ ಗಂಭೀರ ಎಚ್ಚರಿಕೆ ನೀಡಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ-ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವುದಕ್ಕೆ ಅದಕ್ಷ ಸಚಿವರು ಕೆಲಸ ಮಾಡದಿರುವುದೇ ಮುಖ್ಯ ಕಾರಣವಾಗಿದೆ. ಇಂತಹ ಸಚಿವರುಗಳು ಇಲಾಖೆಗೆ ಮುಖ್ಯಸ್ಥರಾಗಿದ್ದರೂ ಕೂಡ ತಮ್ಮ ಸ್ವಕ್ಷೇತ್ರವನ್ನೇ ರಾಜ್ಯ ಮಾಡಿಕೊಂಡು ಅಲ್ಲಿಗೆ ಸೀಮಿತವಾಗಿದ್ದಾರೆ. ಬೇರೆ ಕ್ಷೇತ್ರಗಳತ್ತ ಹೋಗುತ್ತಲೇ ಇಲ್ಲ, ಅಲ್ಲದೆ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ತಮ್ಮ ಕೆಲಸ, ಕಾರ್ಯಗಳು, ಸಾಧನೆಗಳು, ಇಲಾಕೆಯ ಯೋಜನೆಗಳ ಬಗ್ಗೆಯೂ ಜನರಿಗೆ ಹೇಳುವ ಕೆಲಸ ಮಾಡದೆ ಬಾಯಿ ಮುಚ್ಚಿಕೊಂಡಿದ್ದಾರೆ. ಸರ್ಕಾರದ ಬಹುಮುಖ್ಯವಾದ ಇಲಾಖೆಗಳೇ ನಿರ್ಜೀವವಾಗಿದೆ. ಇದನ್ನೆಲ್ಲಾ ರಾಜ್ಯದ ಜನರು ಗಮನಿಸುತ್ತಾ ಬರುತ್ತಿದ್ದಾರೆ.ಜಿ.ಪಂ-ತಾ.ಪಂ ಚುನಾವಣೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್ಚೆತ್ತುಕೊಳ್ಳಬೇಕು, ಕೆಲವು ಅಸಮರ್ಥ ಮಂತ್ರಿಗಳನ್ನು ಕೂಡಲೇ ಕಿತ್ತು ಹಾಕಿ ಅವರ ಸ್ಥಾನಕ್ಕೆ ಕೆಲಸ ಮಾಡುವ ಯುವಕರನ್ನು ನೇಮಕ ಮಾಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಗೆ ಆದ ಗತಿಯೂ ನಿಮಗೂ ಬರುತ್ತದೆ ಎಂದು ಎಚ್ಚರಿಸಿದರು.
ಇಂದು ಪಕ್ಷದಲ್ಲಿ ಯಾವುದೇ ಸಿದ್ಧಾಂತ ಉಳಿದಿಲ್ಲ. ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಜಾತಿ ಮತ್ತು ಹಣವನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ಪಕ್ಷದಲ್ಲಿ ತತ್ವ, ಸಿದ್ದಾಂತ, ಕಾರ್ಯಕ್ರಗಳು, ಹಾಗೂ ದೇಶಕ್ಕಾಗಿ ಪಕ್ಷ ಮಾಡಿದ ತ್ಯಾಗದ ಬಗ್ಗೆ ಜನರಿಗೆ ಹೇಳುತ್ತಿಲ್ಲ, ಬದಲಾಗಿ ಜಾತಿ ಮತ್ತು ಹಣದ ಬಲವನ್ನು ನಂಬಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಪಕ್ಷದಿಂದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರಿಪಾಠ ನಿಂತು ಹೋಗಿದೆ. ಸಚಿವರು, ಶಾಸಕರು, ಮಾಜಿ ಚುನಾಯಿತ ಪ್ರತಿನಿಧಿಗಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಅಭ್ಯರ್ಥಿಗಳಿಗೆ ಪಕ್ಷದಿಂದ ಬಿ.ಫಾರಂ ನೀಡುವ ಸಂಸ್ಕøತಿಯೂ ನಿಂತು ಹೋಗಿದೆ. ಈಗ ಶಾಸಕರು, ಸಚಿವರಗಳೇ ಬಿ.ಫಾರಂಗಳನ್ನು ವಿತರಿಸುತ್ತಿದ್ದು, ಇದರಿಂದಾಗಿ ಈಗ ಪಕ್ಷಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಇದನ್ನು ತಡೆಗಟ್ಟಲು ಚುನಾವಣಾ ಆಯೋಗದಿಂದ ಸಾಧ್ಯವಿಲ್ಲದ ಕಾರಣ ಸರ್ವ ಪಕ್ಷಗಳ ನಾಯಕರುಗಳು ಈ ಬಗ್ಗೆ ಪುನರ್ ಅವಲೋಕನ ಮಾಡಿಕೊಳ್ಳಬೇಕು, ಪಕ್ಷವನ್ನು ಅದರ ತತ್ವ, ಸಿದ್ಧಾಂತ, ಆದರ್ಶಗಳ ಮೇಲೆಯೇ ಉಳಿಸಿಕೊಳ್ಳಬೇಕು ಎಂದರು. ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲ್, ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗಡೆ ಮುಂತಾದವರ ನಡುವಳಿಕೆಗಳೇ ಅವರ ಸರ್ಕಾರಗಳನ್ನು ತಿಂದು ಹಾಕಿವೆ.ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಡುವಳಿಕೆಯನ್ನು ಕೂಡಲೇ ಬದಲಾಯಿಸಿಕೊಳ್ಳಬೇಕು, ಯಾಕೆಂದರೆ ಜನ ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ, ನಿಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಜನ ನಿಮ್ಮ ಬಗ್ಗೆಯೂ ಅಸಹ್ಯ ಪಡುತ್ತಾರೆ ಎಂದರು. ರಾಜಕಾರಣಿಗಳು ತಮ್ಮ ಮಕ್ಕಳು, ಸಂಬಂಧಿಕರು, ಅಳಿಯಂದಿರು ಮುಂತಾದವರ ವರ್ತನೆ ಮೇಲೆ ಕಣ್ಣಿಡಬೇಕು, ಅವರುಗಳನ್ನು ತಮ್ಮ ಕಚೇರಿ, ಕೆಲಸದ ಸ್ಥಳಗಳಿಗೆ ಬಿಟ್ಟುಕೊಳ್ಳಬಾರದು. ಅಧಿಕಾರ ದುರುಪಯೋಗವಾಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಜನರಿಂದ ತಿರಸ್ಕøತರಾಗಬೇಕಾಗುತ್ತದೆ, ಈ ಮಾತು ಮುಖ್ಯಮಂತ್ರಿಯಿಂದ ಹಿಡಿದು ನನ್ನ ತನಕವೂ ಅನ್ವಯಿಸುತ್ತದೆ ಎಂದು ಹೇಳಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಚಿವರ, ಮುಖ್ಯಮಂತ್ರಿಗಳ ಅಧಿಕಾರದಲ್ಲಿ ಸಂಬಂಧಿಕರ ಹಸ್ತಕ್ಷೇಪ, ಅಧಿಕಾರ ದುರ್ಬಳಕೆಯಂತಹ ನಡುವಳಿಕೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಕಾರಣದಿಂದಲೇ ಜನರು ಅಂತಹ ನಾಯಕರನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುತ್ತಿರುವುದು ಕಂಡು ಬರುತ್ತಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯಾದರೆ ಸಮಸ್ಯೆ ಬಗೆಹರಿಯುವುದಿಲ್ಲ: ಪಕ್ಷ ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದರಿಂದ ಪರಿಹಾರವಾಗುವುದಿಲ್ಲ, ನಿಜಲಿಂಗಪ್ಪ, ಬಂಗಾರಪ್ಪ ಸೇರಿದಂತೆ ಅನೇಕ ಮುಖ್ಯಮಂತ್ರಿಗಳನ್ನು ಬದಲಾಯಿಸಿದಾಗ ರಾಜ್ಯದಲ್ಲಿ ಪಕ್ಷ ದುರ್ಬಲವಾಗಿರುವುದು ಇತಿಹಾಸದಿಂದ ನೋಡಬಹುದು. ಸಿಎಂ ಬದಲಾವಣೆ ಎಲ್ಲದಕ್ಕೂ ಉತ್ತರವಲ್ಲ, ಸಿಎಂ ಬದಲಾವಣೆ ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಪಕ್ಷದ ಹೈಕಮಾಂಡ್ ದುರ್ಬಲವಾಗಿಲ್ಲ, ಹೆಬ್ಬಾಳು ಕ್ಷೇತ್ರದ ಚುನಾವಣೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
------------------------------------------
ನಾವು ಮಾನವ ಬಾಂಬ್ ಗಳಿದ್ದಂತೆ. ಯಾವಾಗ ಸಿಡಿಯುತ್ತೇವೆಯೋ ಗೊತ್ತಿಲ್ಲ ;ಮಾಜಿ ಸಾಂಸದ ಹೆಚ್.ವಿಶ್ವನಾಥ್
ಮೈಸೂರು: ನಾವು ಕಾಂಗ್ರೆಸ್ ಪಕ್ಷದಲ್ಲಿ ಮಾನವ ಬಾಂಬ್ ಗಳಿದ್ದಂತೆ ಯಾವಾಗ ಸಿಡಿಯುತ್ತೇವೆಯೋ ಗೊತ್ತಿಲ್ಲ .. ಹೀಗೆಂದು ಹೇಳಿದವರು ಮಾಜಿ ಸಾಂಸದ ಹೆಚ್.ವಿಶ್ವನಾಥ್.
ಪಕ್ಷದ ಹಿರಿಯ ನಾಯಕರಾದ ಜನಾರ್ಧನ ಪೂಜಾರಿ ಹಾಗೂ ತಮ್ಮಂತಹ ಕೆಲವು ನಾಯಕರು ಬಿಟ್ಟರೆ ಬೇರೆ ಯಾರು ನಾಯಕರು ಪಕ್ಷದ ವಾಸ್ತವ ಸಂಗತಿ ಬಗ್ಗೆ ಹೇಳುತ್ತಿಲ್ಲ,  ನಾವು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾಲದಿಂದಲೂ ಪಕ್ಷದಲ್ಲಿ ದುಡಿದುಕೊಂಡು ಬರುತ್ತಿದ್ದೇವೆ. ಪಕ್ಷದ ಸ್ಥಿತಿಗತಿಗಳು, ಎದುರಿಸುತ್ತಿರುವ ಸಮಸ್ಯೆಗಳು, ಹೋಗುತ್ತಿರುವ ದಿಕ್ಕಿನ ಬಗ್ಗೆ ಪಕ್ಷದಲ್ಲಿಯೇ ವಾಸ್ತವವಾಗಿ ಹೇಳುತ್ತೇವೆ, ನಾವೊಂತರ ಮಾನವ ಬಾಂಬ್ ಇದ್ದಂತೆ , ಯಾವಾಗ ಬೇಕಾದರೂ ಸಿಡಿಯುತ್ತೇವೆ, ನಮ್ಮ ಈ ಹೇಳಿಕೆಗಳು ಜನರಲ್ಲಿ ಚರ್ಚೆಯನ್ನುಂಟು ಮಾಡಬೇಕು,  ನಮ್ಮ ಹೇಳಿಕೆಗಳು ಜನರಲ್ಲಿ ಚರ್ಚೆಗೆ ಹಚ್ಚಬೇಕು, ನಮ್ಮ ಹೇಳಿಕೆಗಳಿಂದ ನನಗೇನು ಒಳ್ಳೆಯದಾಯಿತು, ಕೆಟ್ಟದಾಯಿತು ಎಂಬುದರ ಬಗ್ಗೆ ಯೋಚ್ನೆ ಇಲ್ಲ, ಆದರೆ ರಾಜ್ಯಕ್ಕೆ , ಪಕ್ಷಕ್ಕೆ ಒಳ್ಳೆಯದಾಗಬೇಕು ಎಂಬುದಷ್ಟೇ ಮುಖ್ಯವಾಗಿದೆ ಎಂದರು.
---------------------------------------------ಸಮಾಜವಾದದ ಹಿನ್ನಲೆಯ ಕೀರ್ತಿಯನ್ನು ಕಳೆದುಕೊಳ್ಳಬೇಡಿ
*ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ದಿ ಹೇಳಿದ ಮಾಜಿ ಸಾಂಸದ ಹೆಚ್.ವಿಶ್ವನಾಥ್
ಮೈಸೂರು: ಸಮಾಜವಾದಿ ಹಿನ್ನಲೆಯಿಂದ ಬಂದ ನೀವು ಆ ಕೀರ್ತಿಯನ್ನು ಕಳೆದುಕೊಳ್ಳಬೇಡಿ, ನಿಮ್ಮ ಸರಳತೆ, ಸಜ್ಜನಿಕೆಗಳ ಆಧಾರದ ಮೇಲೆ ನಿಮಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ ಎನ್ನುವುದನ್ನು ಮರೆಯಬೇಡಿ ಎಂದು ಮಾಜಿ ಸಾಂಸದ ಅಡಗೂರು ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ಧಿವಾದ ಹೇಳಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಧ ಕೋಟಿರೂ ಗೂ ಅಧಿಕ ಮೌಲ್ಯದ ವಾಚಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜವಾದಿಯಾಗಿದ್ದ ನಿಮ್ಮ ಸರಳತೆ, ಸಜ್ಜನಿಕೆಯನ್ನು ಜನ ಸದಾ ಬಯಸುತ್ತಾರೆ. ನೀವು ಇಲ್ಲಿಯ ತನಕ ಪಾಲಿಸಿಕೊಂಡು ಬಂದಿರುವ ಸಮಾಜವಾದಿ ಮೌಲ್ಯಗಳನ್ನು ಕೈಬಿಡುತ್ತಿರುವುದು ಸರಿಯಲ್ಲ, ಆ ಮೌಲ್ಯಗಳಿಂದಲೇ ಜನ ನಿಮ್ಮನ್ನು ಗುರುತಿಸಿ, ನಾನಾ ವಿಧದ ಅಧಿಕಾರಗಳನ್ನು ನೀಡಿದ್ದಾರೆ ಎಂಬುದನ್ನು ಮರೆಯಬಾರದು, ಸರಳ, ಸಜ್ಜಿನಿಕೆ, ಬದ್ಧತೆಯಿಂದಲೇ ನೀವು ಯುವಕರಿಗೆ ಮಾರ್ಗದರ್ಶಕರಾಗಿರಬೇಕೆಯೇ ವಿನಃ ಆಡಂಬರದಿಂದಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಕಿವಿ ಹಿಂಡಿದರು.
ಕೂಡಲೇ ನೀವು ಧರಿಸಿದ್ದ ಅರ್ಧ ಕೋಟಿ ರೂ ಬೆಲೆ ಬಾಳುವ ವಾಚ್‍ನ್ನು ಸರ್ಕಾರದ ವಶಕ್ಕೆ ನೀಡಿ, ಮುಂದೆ ಬರುವ ಮುಖ್ಯಮಂತ್ರಿಗಳು ಕಟ್ಟಿಕೊಳ್ಳಲಿ, ವಿರೇಂದ್ರಪಾಟೀಲ್ ಹಾಗೂ ರಾಮಕೃಷ್ಣಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಗೆ ಉಡುಗೊರೆಯಾಗಿ ಬಂದಿದ್ದ ವಸ್ತುಗಳನ್ನು ಸರ್ಕಾರದ ವಶಕ್ಕೆ ನೀಡಿದ್ದರು. ಇದನ್ನೇ ನೀವು ಸಹ ಅನುಸರಿಸಿ ಎಂದು ಕಿವಿ ಮಾತು ಹೇಳಿದರು.
---------------------------------------------ಜೆಡಿಎಸ್ ನೊಂದಗಿನ ಮೈತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು
ಮೈಸೂರು: ಅತಂತ್ರವಾಗಿರುವ ಮೈಸೂರು ಸೇರಿದಂತೆ ರಾಜ್ಯದ ಇತರೆ 10 ಜಿ.ಪಂಗಳಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಮಾಜಿ ಸಾಂಸದ ಹೆಚ್.ವಿಶ್ವನಾಥ್ ಹೇಳಿದರು.
ಜೆಡಿಎಸ್ ಈಗ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ, ಅದು ಬಿಜೆಪಿಗೆ ಬೆಂಬಲ ನೀಡುತ್ತಿರುವ ಪಕ್ಷವಾಗಿದೆ. ಹಾಗಾಗಿ ಆ ಪಕ್ಷದೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ತೀರ್ಮಾನ ಹೈಕಮಾಂಡ್ ಗೆ ಸೇರಿದ್ದು ಎಂದರು. 

Tuesday, 23 February 2016

ಕೆ.ಆರ್.ಪೇಟೆ.ಸುದ್ದಿ

ಕೃಷ್ಣರಾಜಪೇಟೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮತ್ತೊಮ್ಮೆ ತನ್ನ ಚಕ್ರಾಧಿಪತ್ಯವನ್ನು ಸಾಭೀತುಪಡಿಸಿದರೆ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜನರಿಂದ ತಿರಸ್ಕರಿಸಲ್ಪಟ್ಟು ಹೀನಾಯ ಸೋಲಿನೊಂದಿಗೆ ಮೂಲೆ ಗುಂಪಾಗಿದ್ದಾರೆ. ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಮಾಜಿಸ್ಪೀಕರ್ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಧೂಳೀಪಟವಾಗಿದೆ.
ತಾಲೂಕು ಪಂಚಾಯಿತಿಯ 24 ಸ್ಥಾನಗಳಲ್ಲಿ ಜೆಡಿಎಸ್ 15 ಸ್ಥಾನಗಳೊಂದಿಗೆ ಬಹುಮತವನ್ನು ಪಡೆದರೆ ಕೇವಲ 8 ಸ್ಥಾನವನ್ನು ಮಾತ್ರ ಕಾಂಗ್ರೇಸ್ ಗಳಿಸಲು ಸಾಧ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವಿಗೆ ಗೌರವ ನೀಡಿರುವ ಹುಟ್ಟೂರು ಬೂಕನಕೆರೆಯ ಮತದಾರರು ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಕಣದಲ್ಲಿದ್ದ ಏಕೈಕ ಬಿಜೆಪಿ ಅಭ್ಯರ್ಥಿಗೆ ವಿಜಯಮಾಲೆಯನ್ನು ತೊಡಿಸಿ ಕಮಲವನ್ನು ಅರಳಿಸುವ ಮೂಲಕ ಮಾಜಿ ಮುಖ್ಯಮಂತ್ರಿಗಳ ಮನವಿಯನ್ನು ಪುರಸ್ಕರಿಸಿ ಗೌರವ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿಯ 6ಕ್ಷೇತ್ರಗಳ ಪೈಕಿ 5ಕ್ಷೇತ್ರಗಳಲ್ಲಿ ಜೆಡಿಎಸ್ ಭರ್ಜರಿ ಗೆಲುವು ದಾಖಲಿಸಿದ್ದು ಕಿಕ್ಕೇರಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೇಸ್ ಅಭ್ಯರ್ಥಿ ಕೋಡಿಮಾರನಹಳ್ಳಿ ದೇವರಾಜು ಅವರನ್ನು ಗೆಲ್ಲಿಸಿ ವಿಜಯಮಾಲೆ ತೊಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಂದು ಪ್ರಚಾರ ಮಾಡಿ ಹೋಗಿದ್ದಕ್ಕೆ ಗೌರವ ನೀಡಿದ್ದಾರೆ.
ಹಣಬಲವೋ ಜನ ಬಲವೋ ಎಂಬ ಅಲೆಯನ್ನೇ ನಿರ್ಮಾಣ ಮಾಡಿದ್ದ ಹಿರಿಕಳಲೆ ಜಿ.ಪಂ ಕ್ಷೇತ್ರದಲ್ಲಿ ಬರಿಗಾಲಿನಲ್ಲಿ ನಡೆಯುವ ಬಡವನಾದ ಕೃಷಿ ಕೂಲಿಕಾರ್ಮಿಕ ರಾಮದಾಸ್ ತಮ್ಮ ಪ್ರತಿಸ್ಪರ್ಧಿ ಮಾಕವಳ್ಳಿ ಸಣ್ಣಯ್ಯ ವಿರುದ್ಧ 3ಸಾವಿರ ಭಾರೀ ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. ಅಕ್ಕಿಹೆಬ್ಬಾಳು ಜಿ.ಪಂ ಕ್ಷೇತ್ರದಲ್ಲಿ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಸಹಕಾರ ಕ್ಷೇತ್ರದ ದಿಗ್ಗಜ ಬಿ.ಎಲ್.ದೇವರಾಜು ತಮ್ಮ ಸಮೀಪ ಪ್ರತಿಸ್ಪರ್ಧಿ ತಾ.ಪಂ ಮಾಜಿಸದಸ್ಯ ರಾಮೇಗೌಡರನ್ನು 2ಸಾವಿರ ಮತಗಳ ಅಂತರದಲ್ಲಿ ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ. ಬೂಕನಕೆರೆ ಜಿ.ಪಂ ಕ್ಷೇತ್ರದ ಕಾಂಗ್ರೇಸ್ ಕೋಟೆಯನ್ನು ಭೇಧಿಸಿರುವ ಗಾಯಿತ್ರ ಇದೇ ಪ್ರಥಮ ಭಾರಿಗೆ ಜೆಡಿಎಸ್ ಪಕ್ಷಕ್ಕೆ ಗೆಲುವನ್ನು ತಂದುಕೊಡುವ ಮೂಲಕ ತಮ್ಮ ಊರಿನವರೇ ಆದ ಕಾಂಗ್ರೇಸ್ ಅಭ್ಯರ್ಥಿ ರತ್ನಮ್ಮ ಅವರನ್ನು 133 ಅಲ್ಪ ಮತಗಳ ಅಚಿತರದಿಂದ ಪರಾಭವಗೊಳಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಶೀಳನೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮನ್‍ಮುಲ್ ನಿರ್ದೇಶಕ ಎಸ್.ಅಂಬರೀಶ್ ಅವರಿಗೆ ಸೋಲಿನ ರುಚಿಯನ್ನು ತೋರಿಸಿದ ಉಧ್ಯಮಿ ಹೆಚ್.ಟಿ.ಮಂಜು ಸ್ವಪಕ್ಷೀಯರ ಭಾರೀ ವಿರೋಧದ ನಡುವೆಯೂ 2200 ಮತಗಳ ಅಂತರದಿಂದ ಇದೇ ಪ್ರಥಮ ಭಾರಿಗೆ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿ ತಮ್ಮನ್ನು ನಂಬಿ ಸ್ಪರ್ಧೆಗೆ ಅವಕಾಶ ನೀಡಿದ ಪಕ್ಷದ ವರಿಷ್ಠರಿಗೆ ಕೃತಜ್ಞತೆಯನ್ನು ಸಮರ್ಪಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಖುದ್ದು ಪ್ರಚಾರ ಮಾಡಿ ತಮ್ಮ ಶಿಷ್ಯನನ್ನು ಗೆಲ್ಲಿಸಿಕೊಡಿ ಎಂಬ ಮನವಿಯನ್ನು ಪುರಸ್ಕರಿಸಿರುವ ಕಿಕ್ಕೇರಿ ಜಿ.ಪಂ ಕ್ಷೇತ್ರದ ಮತದಾರರು ಹಸ್ತಕ್ಕೆ ಮತನೀಡುವ ಮೂಲಕ ಹೋರಾಟಗಾರನಾದ ಯುವಕ ಯು.ಧನಂಜಯ’ಅವರಿಗೆ ಸೋಲಿನ ಕಹಿಯನ್ನು ಉಣಿಸಿದ್ದಾರೆ. ಮುಖ್ಯಮಂತ್ರಿಗಳ ಬಲಗೈ ಭಂಟರಾದ ಕೋಡಿಮಾರನಹಳ್ಳಿ ದೇವರಾಜು ಅವರಿಂದ ಕೇವಲ 440 ಮತಗಳ ಅಂತರದ ವೀರೋಚಿತ ಸೋಲನ್ನು ಒಪ್ಪಿಕೊಂಡಿರುವ ಧನಂಜಯ ಅವರ ಸೋಲಿನಿಂದ ಕಾಂಗ್ರೇಸ್ ತಾಲೂಕಿನಲ್ಲಿ ಮರ್ಯಾದೆ ಉಳಿಸಿಕೊಂಡಿದೆ. ಸಂತೇಬಾಚಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿ ಕುಸುಮ ಮಂಜುನಾಥ್ ಅವರನ್ನು ಪರಾಭವಗೊಳಿಸಿ ಹ್ಯಾಟ್ರಿಕ್ ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಜೆ.ಪ್ರೇಮಕುಮಾರಿ ಕೇವಲ 670 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭಾರೀ ನಿರೀಕ್ಷೆಯನ್ನು ಹುಟ್ಟಿಸಿದ್ದ ಈ ಕ್ಷೇತ್ರದ ಸೋಲಿನೊಂದಿಗೆ ಮಾಜಿಸ್ಪೀಕರ್ ತವರಾದ ಸಂತೇಬಾಚಹಳ್ಳಿ ಹೋಬಳಿಯು ಮತ್ತೊಮ್ಮೆ ಜೆಡಿಎಸ್ ಭದ್ರಕೋಟೆಯಾಗಿ ಹೊರಹೊಮ್ಮಿದೆ. ಸಂತೇಬಾಚಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಾ ಕಣದಲ್ಲಿದ್ದ ಬಿಲ್ಲೇನಹಳ್ಳಿ ದಿನೇಶ್ 1200 ಭಾರೀ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ಟೀಕಾಕಾರರು ಮತ್ತು ವಿರೋಧೀಗಳ ಬಾಯಿ ಮುಚ್ಚಿಸಿದ್ದಾರೆ. ಸಮಾಜಸೇವಕರಾಗಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ದಿನೇಶ್ ಶ್ರೀ ಬಿಲ್ಲೇನಹಳ್ಳಿ ಗವಿರಂಗನಾಥಸ್ವಾಮಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ತೋರಿಸುವ ಮೂಲಕ ಭಕ್ತರು ಹಾಗೂ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದುದು ವರದಾನವಾಗಿ ಪರಿಣಮಿಸಿದೆ. ಇನ್ನು ಮಾಕವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಚಂದ್ರಕಲಾ ಕೇವಲ 47 ಮತಗಳ ಅಂತರದಿಂದ ಕಾಂಗ್ರೇಸ್ ಅಭ್ಯರ್ಥಿ ಪ್ರಭಾವತಿ ಅವರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯಿತಿಯ 24 ಕ್ಷೇತ್ರಗಳಲ್ಲಿ ಜೆಡಿಎಸ್ ಅತ್ಯಧಿಕ 15 ಸ್ಥಾನಗಳನ್ನು ಗೆಲ್ಲುವ ಮೂಲಕ ತಾಲೂಕು ಪಂಚಾಯಿತಿಯ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಇತಿಹಾಸವನ್ನು ನಿರ್ಮಿಸಿದೆ. ಕಾಂಗ್ರೇಸ್ ಕೇವಲ 8ಸ್ಥಾನಗಳಿಗೆ ತೃಪ್ತಿಪಟ್ಟರೆ ಬಿಜೆಪಿ ಒಂದು ಸ್ಥಾನದಲ್ಲಿ ಗೆಲ್ಲುವ ಮೂಲಕ ತಾಲೂಕಿನಲ್ಲಿ ಕಮಲವು ಅರಳಲು ಸಹಾಯ ಹಸ್ತವನ್ನು ಚಾಚಿದೆ. ನಿರೀಕ್ಷೆಗೂ ಮೀರಿ ಜೆಡಿಎಸ್ ಪಕ್ಷದ ಪರವಾಗಿ ಮತ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಹರಸಿ ಆಶೀರ್ವದಿಸಿದ ಮತದಾರ ಪ್ರಭುಗಳಿಗೆ ಕೃತಜ್ಞತೆ ಅರ್ಪಿಸಿರುವ ಶಾಸಕ ನಾರಾಯಣಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ತಾಲೂಕು ಜಾದಳ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸದೇ ತಾಲೂಕಿನ ಅಭಿವೃದ್ಧಿಗೆ ಬದ್ಧರಾಗಿ ದುಡಿಯುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್ ವಿಜಯೋತ್ಸವ: ನಿರೀಕ್ಷೆಗೂ ಮೀರಿ 5 ಜಿ.ಪಂ ಕ್ಷೇತ್ರಗಳು ಹಾಗೂ 15 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿಗಳು ಶಾಸಕ ನಾರಾಯಣಗೌಡ ಮತ್ತು ಮಾಜಿಶಾಸಕ ಬಿ.ಪ್ರಕಾಶ್ ಅವರ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು. ಯಾವುದೇ ಗಲಾಟೆ ಗದ್ದಲಗಳಿಲ್ಲದೇ ಚುನಾವಣೆಯು ಶಾಂತಿಯುತವಾಗಿ ನಡೆದುದ್ದೇ ಅಲ್ಲದೇ ಶಾಂತವಾಗಿ ಮತಎಣಿಕಾ ಪ್ರಕ್ರಿಯೆಯೂ ಮುಗಿಯಿತು. ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಡಿ.ಯೋಗೇಶ್, ಕೆ.ರಾಜೇಂದ್ರ ಮತ್ತು ಸಬ್‍ಇನ್ಸ್‍ಪೆಕ್ಟರ್ ಹೆಚ್.ಎನ್.ವಿನಯ್, ಟಿ.ಎಂ.ಪುನೀತ್, ಯಶ್ವಂತ್‍ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿ.ಪಂ ಕ್ಷೇತ್ರದ ಚುನಾವಣಾಧಿಕಾರಿ ಎನ್.ಡಿ.ಪ್ರಕಾಶ್, ತಾ.ಪಂ ಕ್ಷೇತ್ರದ ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಕೆ.ರತ್ನಾ ಮತ್ತು ಡಾ.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಚುನಾವಣೆ ನಡೆಸಿಕೊಟ


  ಕೆ.ಆರ್.ಪೇಟೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಜೆಡಿಎಸ್ ಅಭ್ಯರ್ಥಿಗಳು ಶಾಸಕ ನಾರಾಯಣಗೌಡ ಮತ್ತು ಮಾಜಿ ಶಾಸಕ ಬಿ.ಪ್ರಕಾಶ್ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.

Sunday, 21 February 2016

ರಾಜಕಾರಣಿಗಳೇನು ಸತ್ಯ ಹರಿಶ್ಚಂದ್ರರೆ ?

ಸಿ.ಪಿ.ಮೂರ್ತಿ, ಪತ್ರಕರ್ತರು,4ನೆ ಮಾಡಲ್ ರಸ್ತೆ ಬಸವನಗುಡಿ, ಬೆಂಗಳೂರು, ಮೊಬೈಲ್ 8277630435

                ರಾಜಕಾರಣಿಗಳೇನು ಸತ್ಯ ಹರಿಶ್ಚಂದ್ರರೆ ?

         ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ವಾರದಿಂದ ವಾಚ್ ಬಗ್ಗೆ ವಾಕ್ಸಮರ ನಡೆದಿರುವುದು ಸಾರ್ವಜನಿಕರಲ್ಲಿ ವಾಕರಿಕೆ ತರಿಸಿದೆ. ನಮ್ಮ ರಾಜ್ಯವನ್ನಾಳಿದ ಕೆಲವು ಮುಖ್ಯಮಂತ್ರಿಗಳನ್ನು ಹೊರೆತು ಪಡಿಸಿದೆರೆ ಬಹುತೇಕ ಮುಖ್ಯಮಂತ್ರಿಗಳು ಐಶರಾಮದ ಬಹುಕು ನಡೆಸಿದವರೆ.
         ನಮ್ಮ ಅಧಿಕಾgಸ್ಧ ರಾಜಕಾರಣಿಗಳು ಸತ್ಯವಂತರೇನಲ್ಲ ಎಂಬುದು ಜನತೆಗೂ ತಿಳಿದಿದೆ.ಯಾವ ರಾಜಕಾರಣಿಯೂ  ತನ್ನ ಶ್ರಮದಿಂದ ಕೂಡಿಟ್ಟ ಹಣ ಖರ್ಚು ಮಾಡಿ ಸಾರ್ವಜನಿಕರ ಸೇವೆಗೆ ಬರಲು ಅವರಿಗೇನು ಹುಚ್ಚೆ. ರಾಜಕಾರಣಿಗಳು ಅಧಿಕಾರಕ್ಕೆ ಬಂದ ತಕ್ಷಣ ಅವರ ಹಿಂಬಾಲಕರುಗಳು ಸನ್ಮಾನಗಳನ್ನು ಮಾಡಿ ಹಾರ ತುರಾಯಿ ಅರ್ಪಿಸುವುದು, ಬೆಳ್ಳಿ ಗದೆ, ಕತ್ತಿ ಗುರಾಣಿ ಅರ್ಪಿಸುವುದು ಮೊದಲಿಂದಲೂ ನಡೆದೆ ಬಂದಿದೆ.
         ಕಾಲ ಬದಲಾದಂತೆಲ್ಲಾ ರಾಜಕಾರಣಿಗೆ ಕೂಡುವ ಉಡುಗೆರೆ ಕೂಡ ಬದಲಾಗುತ್ತಿದೆ. ಹಲವು ವರ್ಷಗಳ ಹಿಂದೆ  ಮಂತ್ರಿಗಳೊಬ್ಬರಿಗೆ ರೊಲೆಕ್ಸ ವಾಚ್ ನೀಡಲಾಗಿತ್ತು. ಈಗ ಮುಖ್ಯಮಂತ್ರಿಗಳೊಬ್ಬರಿಗೆ ಕೋಟಿ ಬೆಲೆ ಬಾಳುವ ವಿದೇಶಿ ವಾಚ್ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಉಡಾಫೆ ಉತ್ತರ ನೀಡುವ ಮೂಲಕ ತಾವೊಬ್ಬ ಬೇಜವ್ದಾರಿ ಮುಖ್ಯಮಂತ್ರಿ ಎಂದು ತೋರಿಸಿ ಕೊಂಡಿದ್ದಾರೆ.
         ನಮ್ಮ ರಾಜಕಾರಣಿಗಳು ಸಾರ್ವಜನಿಕ ಬಾಷಣಗಳಲ್ಲಿ ಪ್ರಾಮಾಣಿಕತೆ ಬಗ್ಗೆ ಗಾಂಧಿ ತತ್ವದ ಬಗ್ಗೆ ಡಂಗೂರ ಹೊಡೆಯುವುದು ಎಲ್ಲರಿಗೂ ಗೊತ್ತಿದೆ. ಆದರೆ ಈ ತತ್ವ ಸಿದ್ದಾಂತಗಳು ತಮಗಲ್ಲ ಎಂದು ರಾಜಕಾರಣಿಗಳು ಸಾಬೀತು ಪಡಿಸಿಯಾಗಿರುವುದರಿಂದ ಜನತೆಯೇನು ಇವರುಗಳನ್ನು ಸತ್ಯ ಹರಿಶ್ಚಂದ್ರರ ತುಕುಡ ಎಂದು ಬಾವಿಸಿಲ್ಲ.
        ಮುಖ್ಯಮಂತ್ರಿ ರಕ್ಷಣೆಗೆ ಖ್ಯಾತ ನಟಿ ರಮ್ಯ ಹಾಗೂ ಉಗ್ರಪ್ಪ ಧಾವಿಸಿದ್ದಾರೆ. ವಾಚ್ ವಿಚಾರವನ್ನು ದೊಡ್ಡ ಹಗರಣ ಮಾಡಲು ಕುಮಾರಸ್ವಾಮಿ ಹೊರಟಿದ್ದರೆ ಮಾಜಿ ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದ ಹಿತ ದೃಷ್ದಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ನಮ್ಮ ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಈ ರಾಜಕಾರಣಿಗಳನ್ನು ಜನರು ಶುದ್ದ ಹಸ್ತರಂದೇನು ಭಾವಿಸಿಲ್ಲ. ಎಲ್ಲಾ ರಾಜಕಾರಿಣಿಗಳನ್ನು ಪ್ರಾಮಾಣಿತೆಯ ತಕ್ಕಡಿಯಲ್ಲಿ ಹಾಕಿದರೆ ಯಾರು ಮೇಲೇಳುವುದಿಲ್ಲ.
        ಚುನಾವಣಾ ಸಂದರ್ಭದಲ್ಲಿ ಕೋಟಿ ಕೋಟಿ ಆಸ್ತಿಪಾಸ್ತಿಯನ್ಜು ಘೋಷಿಸಿಕೊಳ್ಳುವ ರಾಜಕಾರಣಿಗಳು ಯಾವ ರೀತಿಯ ಐಶರಾಮದ ಬದುಕುಗಳನ್ನು ನಡೆಸುತ್ತಾರೆ ಎಂಬುದನ್ನು ನಮ್ಮ ಮಾಧ್ಯಮಗಳೇ ಅನೇಕ ಸಾರಿ ಬಹಿರಂಗ ಮಾಡಿರುವಾಗ ಒಬ್ಬ ರಾಜ್ಯದ ಮುಖ್ಯಮಂತ್ರಿ ಕೋಟಿ ವಾಚ್ ಕಟ್ಟಿದಾಗ ಜನರಿಗೆ ಏನು ಅನಿಸುವುದಿಲ. ಯಾಕೆಂದರೆ ಕೊಟ್ಯಾಂತರ ಬೆಲೆ ಬಾಳುವ ವಸ್ತುಗಳನ್ನು ಯಾರು ಪುಕ್ಕಟ್ಟೆ ನೀಡುವುದಿಲ್ಲ ಎನ್ನುವುದು ಸಾರ್ವಜನಿಕ ಸತ್ಯವಾಗಿರುವಾಗ ಇಂತಹ ವಿಚಾರಗಳ ಬಗ್ಗೆ ಹುಯಲೆಬ್ಬಿಸುವುದರಿಂದ ಪ್ರಯೋಜನವಿಲ್ಲ.
         ಮುಖ್ಯಮಂತ್ರಿಯಾದವರು ತಮ್ಮನ್ನು ಸಾರ್ವಜನಿಕರ ಎಕ್ಸರೇ ಕಣ್ಣಲ್ಲಿ ನೋಡುತ್ತಿರುತ್ತಾರೆ ಎಂಬ ಪರಿಜ್ನಾನ ಇರಬೇಕು. ಎಲ್ಲಾ ರಾಜಕಾರಣಿಗಳು ದಪ್ಪ ಚರ್ಮದವರೆ. ಇದೆ ಕುಮಾರಸ್ವಾಮಿ ಮುಂದೊಂದು ದಿವಸ ಸಿದ್ದರಾಮಯ್ಯನವರ ಜೂತೆ ಹಾತ್ ಮಿಲಾವ್ ಮಾಡುವ ಸಂಭವಗಳು ಇಲ್ಲದಿಲ್ಲ. ಇತ್ತಿಚೆಗೆ ನಿತೀಶ್ ಕುಮಾರ್ ಹಾಗೂ ಲಲ್ಲೂ ಪ್ರಸಾದ್ ನಡೆವೆ ನಡೆದಿರುವ ಪ್ರೇಮ್ಕಿ ಕಹಾನಿ ನೋಡಿಲ್ಲವೆ. ಈಗಾಗಲೆ ಬೆಂಗೂರು ಬಿಬಿಎಂಪಿಯಲಕ್ಲಿ ಒಂದೆ ದೋಣಿಯಲ್ಲಿ ಸಾಗಿರುವ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಜೋಡಿ ಮುಂದಿನ ಸಾರ್ವಜನಿಕ ಚುನಾವಣೆಯ ನಂತರ ಎಲ್ಲವನ್ನು ಮರೆತು ಹಾತ್ ಕಿ ಮಿಲಾವ್ ಮಾಡಬಹುದು.
           ಈಗಾಗಲೆ ಕುಮಾರಸ್ವಾಮಿ ಹೊಂದಿರುವ ಐಶರಾಮದ ಕಾರ್ ಗಳ ಬಗ್ಗೆ ಮತ್ತು ಬೆಲೆ ಬಾಳುವ ವಾಚ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಬಹಿರಂಗವಾಗಿದೆ. ಜನತೇಯೇನು ಈ ಮಹಾ ರಾಜಕಾರಣಿಗಳನ್ನು ಸತ್ಯ ಹರಿಶ್ಚಂದ್ರರ ವಂಶದವರು ಎಂದು ಬಾವಿಸಿಲ್ಲ. ನಮ್ಮ ಮಾಧ್ಯಮಗಳು ಇಂತಹ ವಿಚಾರಕ್ಕೆ ಮಹತ್ವ ಕೊಡದೆ ರಾಜ್ಯದ ಸಮಸ್ಯಗಳತ್ತ ಗಮನ ಹರಿಸುವುದು ಒಳ್ಳೆಯದು.
ದಿನಾಮಕ 21-02-2016                                      ಸಹಿ/  ಸಿ.ಪಿ.ಮೂರ್ತಿ.

ಕೊಳ್ಳೆಗಾಲ ಶಾಂತಿಸಭೆ

ನಾರಾಯಣಸ್ವಾಮಿ ತೇರು : ಶಾಂತಿಸಭೆ

ಕೊಳ್ಳೇಗಾಲ, ಫೆ.21 : ಹಬ್ಬದ ಆಚರಣೆಯು ಸಾರ್ವಜನಿಕರ ನೆಮ್ಮದಿಗೆ ಯಾವುದೇ ರೀತಿಯ ಭಂಗವಾಗದಿರಲಿ ಹಾಗೂ ನಿಯಮಗಳನ್ನು ಮೀರದಿರಲಿ ಎಂದು ಡಿ.ವೈ.ಎಸ್.ಪಿ ಸುರೇಶಬಾಬು ಹೇಳಿದರು.
        ನಗರದಲ್ಲಿ ನಾಳೆ ನಡೆಯುವ ಪ್ರಸಿದ್ಧ ನಾರಾಯಣಸ್ವಾಮಿ ತೇರಿನ ಹಬ್ಬದ ಮುನ್ನಾ ದಿನವಾದ ಇಂದು ವಿವಿಧ ಜನಾಂಗದ ಯಜಮಾನರುಗಳನ್ನು ಕರೆಯಿಸಿ ನಡೆಸಿದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ ಹಬ್ಬದ ಆಚರಣೆಗಳು ದೇವರ ಅನುಗ್ರಹಕ್ಕಾಗಿ ಹಾಗೂ ಭಕ್ತಿಗಾಗಿ ಮಾಡಲಾಗುತ್ತದೆ. ಇದರಿಂದ ಯಾರಿಗೂ ತೊಂದರೆಯಾಗದಂತೆ ಆಚರಿಸಿ ಎಂದು ತಿಳಿಸಿದರು.
        ಶಾಂತಿಗೆ ಭಂಗ ತರುವಂತಹ ಕೆಲಸ ಯಾರೇ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
         ಸಭೆಯಲ್ಲಿ ನಟರಾಜಮಾಳಿಗೆ, ಲಿಂಗರಾಜು, ಸೋಮಶೇಖರ್, ಚಿಕ್ಕಲಿಂಗಯ್ಯ, ಚಿಕ್ಕಮಾದನಾಯಕ, ರಾಜೇಂದ್ರಪ್ರಸಾದ್,ಶಿವರಾಜು ಭಾಗವಹಿಸಿದ್ದರು.

Saturday, 20 February 2016

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 22 ರಂದು 10ನೇ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು.
     ಈ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಲು  ವಾಹನದ ವ್ಯವಸ್ಥೆ ಮಾಡಲಾಗಿದ್ದು, ವಾಹನವು ಅಂದು ಬೆಳಿಗ್ಗೆ 9 ಗಂಟೆಗೆ ವಾರ್ತಾಭವನದಿಂದ ಹೊರಡಲಿದೆ. ಬೆಳಿಗ್ಗೆ 8-30ಕ್ಕೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಆಗಮಿಸುವಂತೆ ಕೋರಿದೆ.
     ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಆಗಮಿಸುವಂತೆ ಕೋರಿದೆ.

ಪ್ರವಾಸ ಕಾರ್ಯಕ್ರಮ
       ಮೈಸೂರು,ಫೆ.20.-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 22 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
       ಅವರು ಅಂದು  ಬೆಳಿಗ್ಗೆ 10-15ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಟಿ.ನರಸೀಪುರ ಹೆಲಿಪ್ಯಾಡ್‍ಗೆ ಆಗಮಿಸಿ. ಟಿ.ನರಸೀಪುರದಲ್ಲಿ ಕುಂಭಮೇಳ ಆಚರಣಾ ಸಮಿತಿಯವರು ಆಯೋಜಿಸಿರುವ 10ನೇ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 12 ಗಂಟೆಗೆ ಟಿ.ನರಸೀಪುರ ಹೆಲಿಪ್ಯಾಡ್‍ನಿಂದ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.

ಸರ್ವಜ್ಞ ಸಾರ್ವಕಾಲಿಕ ಕವಿ: ಪ್ರೊ: ನಾಗಣ್ಣ
    ಮೈಸೂರು,ಫೆ.20-ಸರ್ವಜ್ಞನ ವಚನಗಳು ಸಮಕಾಲೀನವೂ ಹೌದು, ಸಾರ್ವಕಾಲಿಕವೂ ಹೌದು ಎಂದು ಪ್ರೊ. ನಾಗಣ್ಣ ಅಭಿಪ್ರಾಯಪಟ್ಟರು.
    ಜಿಲ್ಲಾಡಳಿತದ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಇಂದು ಆಯೋಜಿಸಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸರ್ವಜ್ಞ ಕವಿಯ ವಚನಗಳ ಪ್ರತಿ ಮಾತು ಮಾಣಿಕ್ಯದಂತಿದೆ. ಜನಮಾನಸದಲ್ಲಿ  ಅವು ಉಳಿದುಕೊಂಡು ಬಂದಿವೆ ಎಂದು ಹೇಳಿದರು.
     ಶೇಕ್ಸಪಿಯರ್ ನಾಟಕದ ನುಡಿಗಟ್ಟುಗಳಂತೆ ಸರ್ವಜ್ಞನ ವಚನಗಳ ನುಡಿಗಟ್ಟುಗಳು ಸಹ ಉಳಿದುಕೊಂಡುಬಂದಿವೆ. ಆದರೆ ಇತ್ತೀಚೆಗೆ ಅವುಗಳ ಮರೆಯಲು ಆರಂಭಿಸಿದ್ದಾರೆ.ಆದ್ದರಿಂದ ಇಂದಿನ ಮಕ್ಕಳು ಸರ್ವಜ್ಞನ ವಚನಗಳನ್ನು ಕಲಿಯುವಂತೆ ಪ್ರೇರಣೆ ನೀಡಬೇಕು ಎಂದು ಅವರು ನುಡಿದರು.
    ಸರ್ವಜ್ಞನ ಕಾಲಘಟ್ಟದ ಸಾಹಿತಿಗಳು, ತಮ್ಮ ಸಾಹಿತ್ಯ ಕೃತಿಗಳಿಗೆ ರಾಮಾಯಣ, ಮಹಾಭಾರತ ಕಾವ್ಯಗಳನ್ನು ಆಧರಿಸಿದ್ದರೆ. ಸರ್ವಜ್ಞ ಅವುಗಳನ್ನು ಪಕ್ಕಕ್ಕಿಟ್ಟು, ತಮ್ಮ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ತನ್ಮೂಲಕ ಸಾಮಾನ್ಯರಿಗೂ ಅರ್ಥವಾಗುವ ಸಾಹಿತ್ಯ ನೀಡಿದರು ಎಂದು ಹೇಳಿದರು.
    ಸರ್ವಜ್ಞರ ಕಾಲದ ಬಗ್ಗೆ ಜಿಜ್ಞಾಸೆ ಇದೆ. ಕೆಲವರು 16 ನೇ ಶತಮಾನದ ಕವಿ ಎಂದರೆ ಮತ್ತೆ ಕೆಲವರು 18 ನೇ ಶತಮಾನವನ್ನು ಸರ್ವಜ್ಞನ ಕಾಲ ಎಂದು ಗುರುತಿಸುತ್ತಾರೆ. ಈ ಕುರಿತು ವಿವಾದ ಏನೇ ಇದ್ದರೂ ಆತನ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
    ಡಾ.ಎಲ್.ಬಸವರಾಜು ಅವರು ಗುರುತಿಸಿರುವಂತೆ ಸರ್ವಜ್ಞನ ಮೂಲ ವಚನಗಳು 950. ಆದರೆ ಕ್ರಮೇಣ ಇತರರು ಸಹ ಸರ್ವಜ್ಞನ ಹೆಸರಿನಲ್ಲಿ ವಚನಗಳನ್ನು ಸೇರಿಸಿ, ಈಗ ಆ ಸಂಖ್ಯೆ 1800 ಅನ್ನು ದಾಟಿದೆ ಎಂದು ನಾಗಣ್ಣ ಹೇಳಿದರು.
     ಇದಕ್ಕೂ ಮುನ್ನ ಸರ್ವಜ್ಞನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಉಪಸ್ಥಿತರಿದ್ದರು.
ಫೆಬ್ರವರಿ 21 ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ
 ಮೈಸೂರು,ಫೆ.20.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ 21 ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಚೆಲುವಾಂಬ ಆಸ್ಪತ್ರೆಯಲ್ಲಿ ಚಾಲನೆ ನೀಡುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃತಿ ಆಹ್ವಾನ
     ಮೈಸೂರು,ಫೆ.20-ಕರ್ನಾಟಕ ಜಾನಪದ ಅಕಾಡೆಮಿಯು 01-01-2015 ರಿಂದ 31-12-2015 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳ ಮಿತಿಯಲ್ಲಿರುವ, ಜಾನಪದ ಗದ್ಯ, ಪದ್ಯ ವಿಚಾರ-ವಿಮರ್ಶೆ, ಸಂಶೋಧನೆ ಹಾಗೂ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು 2015ನೇ ಸಾಲಿನ ಪುಸ್ತಕ ಬಹುಮಾನ ನೀಡಲು ಕೃತಿಗಳನ್ನು ಆಹ್ವಾನಿಸಿದೆ.
    ಲೇಖಕರು/ಪ್ರಕಾಶಕರು/ಸಂಪಾದಕರು ಜಾನಪದಕ್ಕೆ ಸಂಬಂಧಿಸಿದ 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಫೆಬ್ರವರಿ 29 ರೊಳಗೆ ಖುದ್ದಾಗಿ ಅಥವಾ ಕೋರಿಯರ್ ಅಂಚೆ ಮೂಲಕ ಸಲ್ಲಿಸಬಹುದು.
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22215509 ನ್ನು ಸಂಪರ್ಕಿಸಬಹುದು.

ಕನ್ನಡ ಪುಸ್ತಕ ಮಾರಾಟ ಮೇಳ: ಮಳಿಗೆಗೆ ಅರ್ಜಿ ಆಹ್ವಾನ
      ಮೈಸೂರು,ಫೆ.20-ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಫೆಬ್ರವರಿ 24 ರಿಂದ 28 ರವರೆಗೆ ಒಟ್ಟು 5 ದಿನಗಳ ಕಾಲ ‘ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015’ನ್ನು ಹಮ್ಮಿಕೊಂಡಿದೆ. ಮೇಳದಲ್ಲಿ ಪ್ರಕಾಶನ ಸಂಸ್ಥೆಗಳು/ಪ್ರದರ್ಶಕರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ. 1,000/- ಬಾಡಿಗೆ ಹಾಗೂ 1,000/-ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಪ್ರತ್ಯೇಕವಾಗಿ ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಅವರ ಹೆಸರಿನಲ್ಲಿ ಸಲ್ಲಿಸುವುದು.
        ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಪ್ರದರ್ಶಕರು ನಿಗದಿತ ಅರ್ಜಿ ನಮೂನೆಯನ್ನು ಆಯಾಯ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಗಳಲ್ಲಿ ಅಥವಾ ಪ್ರಾಧಿಕಾರದ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿushಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ ಅಥವಾ ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ  ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಫೆಬ್ರವರಿ 22 ರ ಸಂಜೆ 5 ಗಂಟೆಯೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ 080-22484516/22107704 ಸಂಪರ್ಕಿಸಬಹುದಾಗಿದೆ.
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
      ಮೈಸೂರು,ಫೆ.20.ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತವು ಭೂ ಒಡೆತನ ಯೋಜನೆಯಡಿ ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಹೋಬಳಿ, ಚಿಕ್ಕನೇರಳೆ ಗ್ರಾಮದ ಗುಲಾಬ್ ಜಾನ್ ಕೋಂ ವಹಾಬ್ ಭೂ ಮಾಲೀಕರಿಂದ ಜಮೀನು ಖರೀದಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದಾದರು ತಂಟೆ ತಕರಾರು ಇದ್ದರೆ ಲಿಖಿತವಾಗಿ ಅಗತ್ಯ ದಾಖಲಾತಿಗಳೊಂದಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ನಂ. 1580, ನಾರಾಯಣಶಾಸ್ತ್ರೀ ರಸ್ತೆ, ಮೈಸೂರು ಇಲ್ಲಿಗೆ  ಫೆಬ್ರವರಿ 29 ರೊಳಗೆ ಸಲ್ಲಿಸುವಂತೆ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
        ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2430022ನ್ನು ಸಂಪರ್ಕಿಸುವುದು.
ಫೆ.21 ರಂದು ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸಲು ಮರೆಯದಿರಿ
      ಮೈಸೂರು,ಫೆ.20.ಜಿಲ್ಲೆಯಾದ್ಯಂತ ಫೆಬ್ರವರಿ 21 ರಂದು ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕಾಗಿ ಪೋಲಿಯೋ ಲಸಿಕೆಯನ್ನು ಶೀತಲ ಸರಪಳಿಯಲ್ಲಿ ನಿರ್ವಹಿಸಿ, ಅತ್ಯಂತ ಸುರಕ್ಷಿತವಾಗಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು ಪೋಷಕರು ಹಾಗೂ ಸಮುದಾಯವು ಯಾವುದೇ ಆತಂಕವಿಲ್ಲದೇ, ವದಂತಿಗಳಿಗೆ ಕಿವಿಗೊಡದೇ ತಮ್ಮ ಐದು ವರ್ಷಕ್ಕೊಳಪಟ್ಟ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ದಿನಾಂಕ 21-02-2016 ರಂದು ತಪ್ಪದೇ ಕರೆದೊಯ್ದು ಲಸಿಕೆ ಪಡೆಯುವಂತೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಸವರಾಜ್ .ಬಿ. ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಗೋಪಿನಾಥ್ ಎಸ್ ಕೋರಿದ್ದಾರೆ.
      ಮೈಸೂರು ಜಿಲ್ಲೆಯಲ್ಲಿ 2ನೇ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ತಾಲ್ಲೂಕು ಪ್ರದೇಶದಲ್ಲಿ 1277 ಲಸಿಕಾ ಕೇಂದ್ರಗಳಲ್ಲಿ 204573 ಮಕ್ಕಳಿಗೆ ಹಾಗೂ ಮೈಸೂರು ನಗರದಲ್ಲಿ 311 ಲಸಿಕಾ ಕೇಂದ್ರಗಳಲ್ಲಿ 105679 ಮಕ್ಕಳಿಗೆ ಅಂದರೆ ಜಿಲ್ಲೆಯಲ್ಲಿ ಒಟ್ಟು 1588 ಲಸಿಕಾ ಕೇಂದ್ರಗಳಲ್ಲಿ 310204 ಮಕ್ಕಳಿಗೆ ಪೋಲಿಯೋ ಹನಿ ನೀಡುವ ಗುರಿ ಹೊಂದಲಾಗಿದೆ.
 ಈ ಕಾರ್ಯಕ್ರಮಕ್ಕಾಗಿ 6352 ಜನ ಲಸಿಕೆ ನೀಡುವವರು ಹಾಗೂ 317 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ.  ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಬಸ್ ನಿಲ್ದಾಣದಲ್ಲಿ ಹಾಗೂ ರೈಲ್ವೆ ಸ್ಪೇಷನ್‍ಗಳಲ್ಲಿಯೂ 28 ಲಸಿಕಾ ಕೇಂದ್ರಗಳನ್ನು ತೆರೆದು ಸಂಚಾರದಲ್ಲಿರುವ ಮಕ್ಕಳಿಗೂ ಸಹ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
    ದುರ್ಗಮ ಪ್ರದೇಶದ ಹಳ್ಳಿಗಳ ಮೂಲೆ ಮೂಲೆಯಲ್ಲಿರುವ ಕುಗ್ರಾಮಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶದ ಹಾಡಿಗಳಲ್ಲಿಯೂ ಸಹ ಈ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ.
    ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಜನರು, ಪ್ರತಿನಿಧೀಗಳು, ಧಾರ್ಮಿಕ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ ಮಕ್ಕಳಿಗೆ ಲಸಿಕೆ ಕೊಡಿಸಿ, ಪೋಲಿಯೋ ರೋಗ ನಿರ್ಮೂಲನಾ ಆಂದೋಲನಕ್ಕೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಂತರ್ಜಲ ಜನಜಾಗೃತಿ ಶಿಬಿರ
ಮೈಸೂರು,ಫೆ.20.ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಂತರ್ಜಲ ಜನಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ.
ಫೆಬ್ರವರಿ 22 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ಹತ್ತಿರವಿರುವ ಮೈರಾಡದ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ತಾಲ್ಲೂಕು ಮಟ್ಟದ ಜಾಗೃತಿ ಶಿಬಿರವನ್ನು ಆಯೋಜಿಸಿದೆ.
 ಫೆಬ್ರವರಿ 24 ರಂದು ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣ, ಫೆಬ್ರವರಿ 26 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣ ಹಾಗೂ ಫೆಬ್ರವರಿ 27 ರಂದು  ನಂಜನಗೂಡಿನ ಹೆಮ್ಮರಗಾಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೊಳ್ಳೆಗಾಲಆನೆ ತುಳಿದು ವ್ಯಕ್ತಿ ಸಾವ

ಆನೆ ತುಳಿದು ವ್ಯಕ್ತಿ ಸಾವು

ಕೊಳ್ಳೇಗಾಲ, ಫೆ.20 : ಆನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಳ್ಳಿ ಗ್ರಾಮದಲ್ಲಿ ನಡೆದಿದೆ.
         ಗ್ರಾಮದ ಪೀಕನಾಯಕ (೬೫) ಎಂಬುವವರೇ ಮೃತ ದುರ್ಧೈವಿ. ನೆನ್ನೆ ರಾತ್ರಿ ಪೀಕನಾಯಕ ಅವರು ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ಆನೆಯೊಂದು ಇವರ ಮೇಲೆ ಧಾಳಿ ಎಸಗಿತ್ತು. ಆನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪೀಕನಾಯಕ ಜೋರಾಗಿ ಕಿರುಚಿದ್ದಾರೆ. ಜಮೀನಿನ ಸುತ್ತಮುತ್ತ ನಿರ್ಜನ ಪ್ರದೇಶವಾದ ಕಾರಣ ಆನೆಯಿಂದ ತಪ್ಪಿಸಿಕೊಳ್ಳಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
        ಮುಂದಿನ ತಿಂಗಳಲ್ಲಿ ಮೃತ ಪೀಕನಾಯಕರ ಮೊಮ್ಮಗಳ ಮದುವೆ ಇದ್ದು ಇದರ ಹಿನ್ನಲೆಯಲ್ಲಿ ಮೃತ ಪೀಕನಾಯಕ ಅವರು ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಉಳಿದುಕೊಂಡ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
         ಶವ ಪರೀಕ್ಷೆಗೆಂದು ಮೃತ ದೇಹವನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ತದನಂತರ ಸಂಬಂಧಿಕರಿಗೆ ಒಪ್ಪಿಸಲಾಗಿದ್ದು ರಾಮಾಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

Friday, 19 February 2016

:  ವಾಹನಗಳ ಸಂಚಾರ ಮಾರ್ಗ ಬದಲು
ಮೈಸೂರು, ಫೆಬ್ರವರಿ 19- ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನÀಲ್ಲಿ ಫೆಬ್ರವರಿ 20 ರಿಂದ 22ರವರೆಗೆ ನಡೆಯಲಿರುವ 10ನೇ ಮಹಾಕುಂಭಮೇಳ ಮಹೋತ್ಸವದ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು, ಪ್ರವಾಸಿಗರು ಮತ್ತು ಗಣ್ಯಾತಿಗಣ್ಯರ ಆಗಮಿಸುವ ಹಿನ್ನಲೆ ಸಂಚಾರ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿರುವುದರಿಂದ ಕಾವೇರಿ ನದಿಯ ಸೇತುವೆಯ ಮೇಲೆ ಅತೀ ಗಣ್ಯರ ಮತ್ತು ತುರ್ತು ಸೇವಾ ವಾಹನ ಸಂಚಾರವನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.
  ಮೈಸೂರಿನಿಂದ ಟಿ. ನರಸಿಪುರಕ್ಕೆ ವಿಶೇಷವಾಗಿ ಕುಂಭಮೇಳಕ್ಕೆ ಬರುವಂತಹ ಬಸ್ಸುಗಳು ಮತ್ತು ಇತರೆ ಸಾರ್ವಜನಿಕ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 212 ರ ಟಿ.ನರಸಿಪುರ-ಮೈಸೂರು ಮುಖ್ಯ ರಸ್ತೆಯ ಸಮೀಪ ಇರುವ ಬಿಂದಿಗೆ ಫ್ಯಾಕ್ಟರಿಯ ಬಳಿ ನಿರ್ಮಿಸಲಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಜನರನ್ನು ಇಳಿಸಿ, ಅಲ್ಲಿಂದಲೇ ಜನರನ್ನು ಕೂರಿಸಿಕೊಂಡು ಅದೇ ಮಾರ್ಗವಾಗಿ ವಾಪಸ್ ಮೈಸೂರಿಗೆ ತೆರಳಬೇಕು.
  ಮೈಸೂರಿನಿಂದ ಚಾಮರಾಜನಗರ, ಕೊಳ್ಳೇಗಾಲ, ತಲಾಕಾಡು ಮತ್ತು ತಮಿಳುನಾಡು ಕಡೆಗಳಿಗೆ ಟಿ.ನರಸಿಪುರ ಮಾರ್ಗವಾಗಿ ಹೋಗುವ ಸರ್ಕಾರಿ ಬಸ್ಸುಗಳು ಮತ್ತು ಕೆ.ಎಸ್.ಆರ್.ಟಿ.ಸಿ.ಬಸ್ಸುಗಳು, ಇತರೆ ಸಾರ್ವಜನಿಕರನ್ನು ಸಾಗಾಣಿಕೆ ಮಾಡುವ ವಾಹನಗಳು ಗರ್ಗೇಶ್ವರಿ ಮತ್ತು ಟಿ. ನರಸಿಪುರ ಟೌನ್‍ಗೆ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿ 212 ರ ಟಿ. ನರಸೀಪುರ-ಮೈಸೂರು ಮುಖ್ಯ ರಸ್ತೆಯ ಸಮೀಪ ಇರುವ ಬಿಂದಿಗೆ ಫ್ಯಾಕ್ಟರಿಯ ಬಳಿ ನಿರ್ಮಿಸಲಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಕುಂಭಮೇಳಕ್ಕೆ ಬರುವಂತಹ ಭಕ್ತಾಧಿಗಳನ್ನು ಹಾಗೂ ಸಾರ್ವಜನಿಕರನ್ನು ಇಳಿಸಿ, ನಂತರ ಹೊಸದಾಗಿ ನಿರ್ಮಿಸಿರುವ ಕಪಿಲಾ ಸೇತುವೆಯ ಮೇಲೆ ಸಂಚರಿಸಿ ಟಿ.ನರಸೀಪುರ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರನ್ನು ಟಿ.ನರಸೀಪುರ ಟೌನ್‍ನ ಸಂತೇಮಾಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಿರು ಬಸ್ ನಿಲ್ದಾಣದಲ್ಲಿ ಇಳಿಸಿ, ನಂತರ ತಲಕಾಡು, ಕೊಳ್ಳೇಗಾಲ, ಚಾಮರಾಜನಗರ ಮತ್ತು ತಮಿಳುನಾಡು ಕಡೆಗಳಿಗೆ ಸಂಚರಿಸಬೇಕು.
  ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡಿನಿಂದ ಟಿ.ನರಸೀಪುರ ಮಾರ್ಗವಾಗಿ ಮೈಸೂರಿಗೆ ಹೋಗುವ ಸರ್ಕಾರಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ.ಬಸ್‍ಗಳು ಹಾಗೂ ಇತರೆ ಸಾರ್ವಜನಿಕರನ್ನು ಸಾಗಾಣಿಕೆ ಮಾಡುವ ವಾಹನಗಳು, ಟಿ.ನರಸೀಪುರ ಸಂತೇಮಾಳದ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಿರು ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರನ್ನು ಹಾಗೂ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳನ್ನು ಇಳಿಸಿ, ನೂತನಾಗಿ ನಿರ್ಮಿಸಿರುವ ಕಪಿಲಾ ಸೇತುವೆಯ ಮೇಲೆ ಸಂಚರಿಸಿ ಟಿ. ನರಸೀಪುರ ಟೌನ್‍ನ ಸಮೀಪ ಇರುವ ಬಿಂದಿಗೆ ಫ್ಯಾಕ್ಟರಿಯ ಬಳಿ ತಾತ್ಕಾಳಿಕವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರನ್ನು ಹಾಗೂ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳನ್ನು ಇಳಿಸಿ ನಂತರ ಮೈಸೂರಿಗೆ ಸಂಚರಿಸಬೇಕು.
  ಮೈಸೂರಿನಿಂದ ಕೊಳ್ಳೆಗಾಲ,  ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಗೆ ಮತ್ತು ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಂದ ಮೈಸೂರು ಮಂಡ್ಯ ಕಡೆಗಳಿಗೆ ಹೋಗುವಂತಹ ಎಲ್ಲಾ ರೀತಿಯ ವಾಹನಗಳು ಟಿ.ನರಸೀಪುರ ಟೌನ್‍ನ ಸಂತೇಮಾಳದಿಂದ ಬಿಂದಿಗೆ ಫ್ಯಾಕ್ಟರಿಯವರೆಗೆ ನಿಲುಗಡೆ ಮಾಡುವಂತಿಲ್ಲ.  ವಿಶೇಷವಾಗಿ ಭಾರಿ  ವಾಹನಗಳಾಗಲ್ಲಿ ಅಥವಾ ಇನ್ನಿತರೆ ಯಾವುದೇ ವಾಹನಗಳಾಗಲ್ಲಿ ಟಿ.ನರಸೀಪುರ ಟೌನ್‍ನ  ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ನಿಲ್ಲಿಸುವಂತಿಲ್ಲ.
  ಮಂಡ್ಯ, ಮಳವಳ್ಳಿ, ಬನ್ನೂರ ಹಾಗೂ ದೊಡ್ಡೇಬಾಗಿಲು ಕಡೆಗಳಿಂದ  ಟಿ.ನರಸೀಪುರದ ಕಡೆಗೆ ಬರುವ ವಾಹನಗಳು- ಕೆಂಡನಕೊಪ್ಪಲು ಗ್ರಾಮದ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಿರುವ ತಾತ್ಕಾಲಿಕ ವಾಹನ ನಿಲುಗಡೆ ಜಾಗದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರನ್ನು ಹಾಗೂ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳನ್ನು ಇಳಿಸಿ ಅಲ್ಲಿಂದಲೇ ಸಾರ್ವಜನಿಕರನ್ನು ಹಾಗೂ ಭಕ್ತಾಧಿಗಳನ್ನು ಕೂರಿಸಿಕೊಂಡು ಅದೇ ಮಾರ್ಗವಾಗಿ ವಾಪಸ್ ಹೋಗಬೇಕು.
 ಬನ್ನೂರು, ಮಳವಳ್ಳಿ ಮಂಡ್ಯ ಕಡೆಗಳಿಂದ ನಂಜನಗೂಡಿಗೆ ತೆರಳುವ ಭಾರಿ ಸಾಗಾಣಿಕೆ ವಾಹನಗಳು ಹಾಗೂ ವಿಶೇಷವಾಗಿ ಕಬ್ಬು ಸಾಗಾಣಿಕೆ ಮಾಡುವ ವಾಹನಗಳು ಬನ್ನೂರು ಮೈಸೂರು ಮಾರ್ಗವಾಗಿ ನಂಜನಗೂಡಿಗೆ ತೆರಳುವುದು. ಹಾಗೂ ಅದೇ ಮಾರ್ಗದಲ್ಲಿ ವಾಪಸ್ ಬನ್ನೂರು-ಮಳವಳ್ಳಿ-ಮಂಡ್ಯ ಕಡೆಗಳಿಗೆ ತೆರಳಬೇಕು.
 ಬನ್ನೂರಿನಿಂದ ಕೊಳ್ಳೆಗಾಲ,  ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಗೆ ಹೋಗುವ ವಾಹನಗಳು ಬನ್ನೂರು-ಸೋಸಲೆ-ಪೂರಿಗಾಲಿ-ಸರಗೂರು ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಚಲಿಸುವುದು. ಕೊಳ್ಳೆಗಾಲ,  ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಂದ  ಬನ್ನೂರಿಗೆ ಹೋಗುವ ವಾಹನಗಳು ಸರಗೂರು ಹ್ಯಾಂಡ್ ಪೋಸ್ಟ್-ಪೂರಿಗಾಲಿ-ಸೋಸಲೆ-ಬನ್ನೂರು ಮಾರ್ಗವಾಗಿ ಚಲಿಸುವುದು. ಮಂಡ್ಯ-ಮಳವಳ್ಳಿ-ಬನ್ನೂರು ಕಡೆಯಿಂದ ಟಿ.ನರಸೀಪುರಕ್ಕೆ ಬರುವ (ಕುಂಭಮೇಳ ಹೊರತುಪಡಸಿ)ನರಸೀಪುರ ದಾಟುವ ವಾಹನಗಳು ಇತರೆ ವಾಹನಗಳು ರಂಗಸಮುದ್ರ, ಯಡದೊರೆ ಮಾರ್ಗದಲ್ಲಿ ಬರಬೇಕು.
 ನಂಜನಗೂಡಿನಿಂದ ಟಿ. ನರಸೀಪುರ ಪಟ್ಟಣಕ್ಕೆ ಹಾಗೂ ಕುಂಭಮೇಳಕ್ಕೆ ಆಗಮಿಸುವ ವಾಹನಗಳು, ಖಾಸಗಿ ಬಸ್‍ಗಳು,ಬಾರಿ ವಾಹನಗಳು, ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಟಿ.ನರಸೀಪುರ ಟೌನ್ ನ ನಂಜನಗೂಡು-ಟಿ.ನರಸೀಪುರ ಮುಖ್ಯ ರಸ್ತೆಯ ಸಮೀಪ ಇರುವ ಎ.ಪಿ.ಎಂ.ಸಿ. ಆವರಣದಲ್ಲಿ ನಿಲುಗಡೆ ಮಾಡಿ ನಂತರ ಅದೇ ಮಾರ್ಗವಾಗಿ ನಂಜನಗೂಡಿಗೆ ತೆರಳಬೇಕು.
 ಮಂಡ್ಯ, ಮೈಸೂರಿನಿಂದ ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಗೆ ಮತ್ತು ತಮಿಳುನಾಡು, ಕೊಳ್ಳೆಗಾಲ, ಚಾಮರಾಜಗರ, ತಲಕಾಡು ಕಡೆಗಳಿಂದ ಮಂಡ್ಯ ಮೈಸೂರಿಗೆ ಹೋಗುವಂತಹ ಎಲ್ಲಾ ರೀತಿಯ ವಾಹನಗಳು ಟಿ.ನರಸೀಪುರ ಟೌನ್ ನ ಕಪಿಲಾ ನದಿಗೆ ಹೊಸದಾಗಿ ನಿರ್ಮಿಸಿರುವ ಸೇತುವೆಯ ಮೂಲಕ ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಕುಂಭಮೇಳ: ಜಿಲ್ಲಾಧಿಕಾರಿಯಿಂದ ಸ್ಥಳ ಪರಿಶೀಲನೆ


ಮೈಸೂರು, ಫೆಬ್ರವರಿ 19.ನರಸೀಪುರ ತಾಲ್ಲೂಕಿನ ತಿರುಮಲಕೊಡಲಿನಲ್ಲಿ ಫೆಬ್ರವರಿ 20 ರಿಂದ 22 ರವರೆಗೆ ಜರುಗಲಿರುವ ಮಹಾಕುಂಭಮೇಳ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಗುರುವಾರ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
   ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ತಿರುಮಕೋಡಲಿಗೆ ಹೋಗುವ ರಸ್ತೆಯನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ವಿ.ಐ.ಪಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚುವರಿಯಾಗಿ ಮಾಡಲು, ಬಾಕಿ ಉಳಿದಿರುವ ದೇವಾಲಯಗಳ ಸುಣ್ಣ ಬಣ್ಣ ಪೂರ್ಣಗೊಳಿಸಲು ಹಾಗೂ ನೀರನ್ನು ಶುದ್ಧಗೊಳಿಸಿ ವಿತರಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ನಿರ್ದೇಶಿಸಿದರು.
 ಅಗಸ್ತೇಶ್ವರ ದೇವಾಲಯದ ಬಳಿ ನಿರ್ಮಿಸಿರುವ ತಾತ್ಕಾಲಿಕ ಸೋಪಾನದಲ್ಲಿ ಭದ್ರತೆ ದೃಷ್ಠಿಯಿಂದ ಬ್ಯಾರಿಕೇಡ್,   ನದಿಯಲ್ಲಿ ಭಕ್ತಾಧಿಗಳು ಸ್ನಾನ ಮಾಡಲು ಅನುವಾಗುವಂತೆ ಸೂಚಿಸಲಾದ ಹೆಚ್ಚವರಿ ಪ್ರದೇಶದಲ್ಲಿ ಹೆಚ್ಚುವರಿ ಬ್ಯಾರಿಕೇಡ್ ಮತ್ತು ಗಣ್ಯ ವ್ಯಕ್ತಿಗಳ ಸ್ನಾನ ಮಾಡುವ ಸ್ಥಳವನ್ನು ಶುದ್ಧಗೊಳಿಸಿ ಸ್ನಾನ ಮಾಡಲು ಅನುಕೂಲವಾಗುವಂತೆ ಬ್ಯಾರಿಕೇಡ್ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಅಲ್ಲದೆ ತಾತ್ಕಾಲಿಕ ಸೋಪಾಲ ನಿರ್ಮಿಸಲು ಕಾವೇರಿ ನೀರಾವರಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆಯವರು ಕ್ರಮವಹಿಸಲು ತಿಳಿಸಿದರು.
 ಆರೋಗ್ಯ ದೃಷ್ಠಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಪುರಸಭೆವತಿಯಿಂದ  ತಲಾ 10 ಮಂದಿ ಇರುವ 3 ತಂಡಗಳನ್ನು ರಚಿಸಿ 24 ಘಂಟೆಗಳೂ ನಿರಂತರ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
 ಯಾವುದೇ ರೀತಿಯ ಅವWಡಗಳು ಸಂಬವಿಸದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ವಹಸಿಬೇಕು. ಶುಕ್ರವಾರದೊಳಗೆ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳಿಸಲು ಎಲ್ಲಾ ಅನುಷ್ಠನಾಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಖಾ ಹೇಳಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯವಿರ್ನಾಹಕ ಅಧಿಕಾರಿ ಗೋಪಾಲ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
(ಛಾಯಾಚಿತ್ರ ಲಗತ್ತಿಸಿದೆ)
ಶಿವಾಜಿ ದೇಶಕಂಡ ಮಹಾನ್ ವ್ಯಕ್ತಿತ್ವದ ವೀರ ಮಹಾರಾಜ


ಮೈಸೂರು, ಫೆಬ್ರವರಿ 19. ಛತ್ರಪತಿ ಶಿವಾಜಿ ದೇಶಕಂಡ ಮಹಾನ್ ವ್ಯಕ್ತಿತ್ವದ ವೀರ ಮಹಾರಾಜ ಹಾಗೂ ಉತ್ತಮ ಆಡಳಿತಾಧಿಕಾರಿಯಾಗಿದ್ದರು. ಶಿವಾಜಿಯವರ ಆಳ್ವಿಕೆಯಲ್ಲಿ ಎಲ್ಲಾ ಧರ್ಮ ಮತ್ತು ಸಮಾಜದ ಜನರನ್ನು ಸಮಾನ ಗೌರವ ಮತ್ತು ಪ್ರೀತಿಯಿಂದ ನೊಡಲಾಗುತಿತ್ತು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಹೆಚ್.ಎಂ. ವಸಂತಮ್ಮ ತಿಳಿಸಿದರು.
 ಇಂದು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಕಲಾಮಂದಿರ ಮನೆಯಂಗಳದಲ್ಲಿ ನಡೆದ ಛತ್ರಪತಿ ಶಿವಾಜಿಯವರ ಜಯಂತಿ ಕಾರ್ಯಕ್ರಮದಲ್ಲಿ ವಿಷಯ ಉಪನ್ಯಾಸಕಿಯಾಗಿ ಭಾಗವಹಿ ಅವರು ಮಾತನಾಡಿದರು.
 ಅತ್ಯಂತ ಕಿರಿಯ ವಯಸ್ಸಿನಲ್ಲೇ ಛತ್ರಪತಿ ಶಿವಾಜಿಯವರು ತಮ್ಮ ವೀರ ಸಾಮಥ್ರ್ಯವನ್ನು ಮೆರೆದು 40 ಕೋಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಶಿವಾಜಿ ತಮ್ಮ ತಾಯಿ ಜೀಜಬಾಯಿ ಅವರು ಮಾಗದರ್ಶನದಲ್ಲಿ ಜ್ಞಾನವನ್ನು ಸಂಪಾದಿಸಿದರು. ದೇಶ ಭಕ್ತಿಯನ್ನು ಮೈಗೊಡಿಕೊಂಡ ಶಿವಾಜಿ ಮಹಾರಾಜರು ತಮ್ಮ ವೀರ ವ್ಯಕ್ತಿತ್ವದಿಂದ ಯುವಜನರಲ್ಲಿ ದೇಶಭಕ್ತಿಯ ಕಿಚ್ಚನ್ನು ತುಂಬಿದರು ಎಂದು ಹೇಳಿದರು.
 ಬೆಟ್ಟ ಗುಡ್ಡದ ಯುದ್ಧ ವ್ಯವಸ್ಥೆಯಲ್ಲಿ ಹೆಚ್ಚು ಕೀರ್ತಿಯನ್ನು ಪಡೆದಿದ್ದ ಮೊಗಲ್ ದೊರೆ ಔರಂಗಜೇಬ್‍ರಿಂದ ಛತ್ರಪತಿ ಶಿವಾಜಿ ಬೆಟ್ಟ ಗುಡ್ಡದ ಯುದ್ಧ ವ್ಯವಸ್ಥೆಯ ಹುಲಿ ಎಂದೇ ಕೀತಿಗಳಿಸಿದ್ದರು. ತಮ್ಮ ಜ್ಞಾನ ಆಡಳಿತ ಹಾಗೂ ಯುದ್ಧ ಕೌಶಲ್ಯದ ಚತುರತನದಿಂದ ಶತ್ರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು ಛತ್ರಪತಿ ಶಿವಾಜಿ. ಬಡವರಿಗೆ  ಕಲ್ಯಾಣಕಾರ್ಯಕ್ರಮ ಗಳನ್ನು ನೀಡುತ್ತ, ಅನ್ಯಧರ್ಮದವರಿಗೆ ಗೌರವಿಸುತ್ತ ತಮ್ಮ ರಾಜ್ಯವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದರು  ಎಂದು ತಿಳಿಸಿದರು.
  ಶಿವಾಜಿ ಮಹಾರಾಜರು ಯಾವುದೇ ಆರ್ಥಿಕ ಹಾಗೂ ಸಮಾಜಿಕ ಬೆಂಬಲವಿಲ್ಲದೆ ಸಮಾನ್ಯ ಕುಟುಂಬದಲ್ಲಿ ಜನಿಸಿ ಮರಾಠ ಸಾಮಾಜ್ರ್ಯವನ್ನು ಕಟ್ಟಿ ಬೆಳಿಸಿದರು. ಶಿವಾಜಿ ಮಹಾರಾಜರು ತಮ್ಮ ಆಳ್ವಿಕೆಯಲ್ಲಿ 400ಕ್ಕೂ ಹೆಚ್ಚು ಕೋಟೆಯನ್ನು ವಶಪಡಿಸಿಕೊಂಡಿದ್ದರು. ಶತ್ರು ಎಷ್ಟೇ ಬಲಿಷ್ಟವಾಗಿದ್ದರೂ ಎದೆಗುಂದದೆ ದಿಟ್ಟತನದಿಂದ ಹೋರಾಟ ನಡೆಸಿ, ಯುದ್ಧವನ್ನು ಗೆಲ್ಲುವ ಸಾಮಥ್ರ್ಯವನ್ನು ಹೊಂದಿದ್ದ ಮಹಾ ವೀರ ಸೇನಾನಿ ಎಂದು ತಿಳಿಸಿದರು.
    ಶಿವಾಜಿ ಮಹಾರಾಜರು ಪ್ರತಿಯೊಬ್ಬರಿಗೂ ಸ್ಪೂರ್ತಿ. ದೇಶ ಭಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಉತ್ತಮ ಉದಾಹರಣೆ ಶಿವಾಜಿ ಮಹಾರಾಜರು. ಮರಾಠಿ ಮಾತನಾಡುವ ಸಮಾಜದವರಿಗೆ ಶಿವಾಜಿ ಮಹಾರಾಜರು ಸೀಮಿತವಲ್ಲ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಗೂ ಶಿವಾಜಿ ಮಹಾರಾಜ ವ್ಯಕ್ತಿತ್ವ ಹಾಗೂ ಆದರ್ಶ ಮಾರ್ಗದರ್ಶನ ಹಾಗೂ ದಾರಿ ದೀಪ ಎಂದು ತಿಳಿಸಿದರು.
  ಜಿಲ್ಲಾಧಿಕಾರಿ ಸಿ.ಶಿಖಾ ಅವರು ಛತ್ರಪತಿ ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ಮಲ ಮಠಪತಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಸಿದರು.

    

Thursday, 11 February 2016

ಮಂಡ್ಯ: ಪ್ರತಿಯೊಬ್ಬರೂ ಜೀವನದಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡರೆ ದೇಶ ಸುಭೀಕ್ಷವಾಗಿರುತ್ತದೆ ಎಂದು ಮಾಜಿ ಸಚಿವ, ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅವರು ತಿಳಿಸಿದರು.
ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ 7 ದಿನಗಳ ಕಾಲ ಹಮ್ಮಿಕೊಂಡಿದ್ದ ಗೈಡ್, ಬುಲ್‍ಬುಲ್ ಮತ್ತ ರೋವರ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸೇವೆ ಮಾಡುವುದರಿಂದ ನಮಗೇನು ಲಾಭ ಎಂದು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮನುಷ್ಯ ತೊಡಗಿರುವುದರಿಂದ ಪ್ರಸ್ತುತ ಸೇವಾ ಮನೋಭಾವ ಎನ್ನುವುದು ಕಡಿಮೆಯಾಗಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಬದುಕುವ ಬಗ್ಗೆ ಹಾಗೂ ಸೇವಾ ಮನೋಭಾವವನ್ನು ತಿಳಿಸಬೇಕೆಂದು ಕರೆ ನೀಡಿದರು.
ಶಿಕ್ಷಣ ಮತ್ತು ಜ್ಞಾನ ಇದ್ದರೆ ಅಧಿಕಾರ, ಹಣ ಪಡೆಯಲು ಸಾಧ್ಯ. ನಡತೆ ಮತ್ತು ಜ್ಞಾನ ಹೃದಯದ ಎರಡು ಕಣ್ಣುಗಳಿದ್ದಂತೆ. ಅದೇ ರೀತಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಇರಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಒಳ್ಳೆಯ ವಿಚಾರಧಾರೆಗಳನ್ನು ಶಿಕ್ಷಕರು ಕಲಿಸಬೇಕು. ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ದೇಶವೂ ಸ್ವಚ್ಛವಾಗಿರುತ್ತದೆ. ಅದೇ ರೀತಿ ಮನುಷ್ಯನ ಮನಸ್ಸೂ ಸ್ವಚ್ಛವಾಗಿದ್ದರೆ ಎಲ್ಲವೂ ಶಾಂತವಾಗಿರುತ್ತದೆ ಎಂದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಶಿಕ್ಷಕಿಯರು ತರಬೇತಿಯಲ್ಲಿ ಪಡೆದ ಒಳ್ಳೆಯ ಅನುಭವಗಳನ್ನು ವಿದ್ಯಾರ್ಥಿಗಳಿಗೂ ತಿಳಿಸಿ ಅವರನ್ನು ಭವ್ಯ ಭಾರತದ ಪ್ರಜೆಗಳನ್ನಾಗಿ ರೂಪಿಸಬೇಕೆಂದು ತಿಳಿ ಹೇಳಿದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ಜಿಲ್ಲಾ ಮುಖ್ಯ ಆಯುಕ್ತರಾದ ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ತೋರಿಸಲು ಈ ತರಬೇತಿ ಉತ್ತಮ ವೇದಿಕೆ. ನಮ್ಮಲ್ಲಿನ ಒಳಗಿನ ಹಾಗೂ ಹೊರಗಿನ ಭಾವನೆಗಳನ್ನು ತೋರಿಸುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಗೈಡ್‍ನ ಆಯುಕ್ತೆ ಕೆ.ಸಿ.ನಾಗಮ್ಮ, ಭಾರತ್ ಸ್ಕೌಟ್ ಅಂಡ್ ಗೈಡ್ಸ್‍ನ ಜಿಲ್ಲಾ ಕಾರ್ಯದರ್ಶಿ ಶಿವರಾಮೇಗೌಡ, ಜಿಲ್ಲಾ ತರಬೇತಿ ಅಧಿಕಾರಿ ಸ್ಯಾಮುಯಲ್ ಸತ್ಯಕುಮಾರ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Wednesday, 10 February 2016

Krpet

ಕೃಷ್ಣರಾಜಪೇಟೆ. ಸಮಗ್ರವಾದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು, ಗ್ರಾಮೀಣ ಜನರ ಜೀವನ ಶೈಲಿಯನ್ನು ಬದಲಾವಣೆ ಮಾಡಿದ ಕೀರ್ತಿ ಜಾತ್ಯಾತೀತ ಜನತಾದಳಕ್ಕೆ ಸಲ್ಲುತ್ತದೆ. ಆದರೆ ಕಾಂಗ್ರೆಸ್ ಸರ್ಕಾರದ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ನಡೆಯುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಬೇಕು  ಎಂದು ಶಾಸಕ ಕೆ.ಸಿ.ನಾರಾಯಣಗೌಡ ಮತದಾರರಲ್ಲಿ ಮನವಿ ಮಾಡಿದರು.
ಅವರು ತಾಲೂಕಿನ ಸಿಂಧುಘಟ್ಟ, ನೀತಿಮಂಗಲ ಗ್ರಾಮಗಳಲ್ಲಿ ಶೀಳನೆರೆ ಜಿಲ್ಲಾ ಪಂಚಾಯಿತಿ ಮತ್ತು ಸಿಂಧಘಟ್ಟ ತಾಲೂಕು ಪಂಚಾಯಿತಿ ಅಭ್ಯರ್ಥಿಗಳಾದ ಹರಳಹಳ್ಳಿ ಮಂಜು ಮತ್ತು ಖಲೀಲ್ ಅಹಮದ್(ಬಾಬು) ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯಲ್ಲಿ ಹಿಂದುಳಿದ ವರ್ಗಕ್ಕೆ ಹಾಗೂ ಮಹಿಳಾ ಮೀಸಲಾತಿಯನ್ನು ಜನತಾದಳ ಸರ್ಕಾರವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಜಾ.ದಳ ನಾಯಕ ಎಚ್.ಡಿ.ದೇವೇಗೌಡ ಅವರ ಹೋರಾಟ ಫಲವಾಗಿ ಜಾರಿಗೆ ತರಲಾಗಿದೆ. ಇದರಿಂದಾಗಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ,ಸಣ್ಣ ಸಣ್ಣ ಜಾತಿಗಳು ರಾಜಕೀಯ ಶಕ್ತಿಯನ್ನು ಪಡೆಯುವಂತಾಯಿತು. ಮುಂಬರುವ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿಯೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ತರಬೇಕೆಂದು ಜೆಡಿಎಸ್ ನಾಯಕ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಬೀದಿಗಿಳಿದು  ಹೋರಾಟ ಮಾಡಲಿದ್ದಾರೆ ಹಾಗಾಗಿ ಮತದಾರ ಬಂಧುಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಇಬ್ಬರೂ ನಾಯಕರಿಗೆ  ಶಕ್ತಿ ತುಂಬಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು.
ಮಾಜಿ ಶಾಸಕ ಬಿ.ಪ್ರಕಾಶ್ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ತಾಲೂಕು ಜೆಡಿಎಸ್ ನೂತನ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಂಧುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎನ್.ಮಹಾದೇವೇಗೌಡ, ಮಾಜಿ ಅಧ್ಯಕ್ಷರಾದ ಶಾಂತಮ್ಮ, ನಾಸೀರ್‍ಪಾಷಾ, ಜಿ.ಪಂ.ಅಭ್ಯರ್ಥಿ ಎಚ್.ಟಿ.ಮಂಜು, ತಾ.ಪಂ.ಅಭ್ಯರ್ಥಿ ಖಲೀಲ್‍ಅಹಮದ್(ಬಾಬು), ಮುಖಂಡರಾದ ಕರ್ತೇನಹಳ್ಳಿ ಸುರೇಶ್, ರಾಜೇನಹಳ್ಳಿಕುಮಾರಸ್ವಾಮಿ  ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೆ.ಆರ್.ಪೇಟೆ ತಾಲೂಕಿನ ನೀತಿಮಂಗಲ ಸರ್ಕಲ್ ಗ್ರಾಮದಲ್ಲಿ ಶೀಳನೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಕೆ.ಸಿ.ನಾರಾಯಣಗೌಡ ಮಾತನಾಡಿದರು, ಮಾಜಿಶಾಸಕ ಬಿ.ಪ್ರಕಾಶ್, ತಾಲೂಕು ಜಾದಳ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಮತ್ತಿತರರು ಚಿತ್ರದಲ್ಲಿದ್ದಾರೆ.



Sunday, 7 February 2016

ಫೆ. 17 ರಂದು ಏರ್‍ಮೆನ್ ನೇಮಕಾತಿಗೆ ರ್ಯಾಲಿ.
      ಭಾರತೀಯ ವಾಯುಪಡೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಿನಾಂಕ: 17-02-2016 ರಂದು ‘ವೈ’ ಗುಂಪಿನ ಆಟೋಮೋಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್.(ಪೊಲೀಸ್) ಹಾಗೂ ವೈ’ ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಏರ್‍ಮೆನ್ ನೇಮಕಾತಿಗೆ ರ್ಯಾಲಿ ಆಯೋಜಿಸಿದೆ.
     ಅರ್ಜಿ ಸಲ್ಲಿಸುವವರು ದಿನಾಂಕ:  01-08-1996 ರಿಂದ 30-11-1999 ರ ಅವಧಿಯಲ್ಲಿ ಜನಿಸಿರಬೇಕು. ಆಟೋಮೋಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್.(ಪೊಲೀಸ್)  ಹುದ್ದೆಗಾಗಿ ರ್ಯಾಲಿಯಲ್ಲಿ ಭಾಗವಹಿಸುವವರು  ಕನಿಷ್ಠ ಶೇ.50 ಅಂಕಗಳೊಂದಿಗೆ ಪಿ.ಯು.ಸಿ. ಪಾಸಗಿರಬೇಕು. ಇಂಗ್ಲೀಷ್‍ನಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಾಗಿ ರ್ಯಾಲಿಯಲ್ಲಿ ಭಾಗವಹಿಸುವವರು ಕನಿಷ್ಠ ಶೇ. 50 ಅಂಕಗಳೋಂದಿಗೆ ಪಿ.ಯು.ಸಿ. ಪಾಸಗಿರಬೇಕು. ಹಾಗೂ ಭೌತಶಾಸ್ತ್ರ/ ರಸಾಯನಶಾಸ್ತ್ರ/ ಜೀವಶಾಸ್ತ್ರ ಮತ್ತು ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ ಶೇ. 50 ಅಂಕಗಳೋಂದಿಗೆ ಪಾಸಗಿರಬೇಕು.
      ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮೂಲ  ಅಂಕಪಟ್ಟಿ, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ 4 ಜೊತೆ ಜೆರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 7 ಭಾವಚಿತ್ರಗಳೊಂದಿಗೆ ದಿನಾಂಕ:17/02/2016 ರಂದು ಬೆಳಿಗ್ಗೆ ಚಾಮುಂಡಿ ವಿಹಾರ ಸ್ಪೋಟ್ಸ್ ಸ್ಟೇಡಿಯಂ ನಜರ್‍ಬಾದ್, ಮೈಸೂರು ಇಲ್ಲಿ ಹಾಜರಾಗುವುದು.
       ಅರ್ಹತಾ ನಿಬಂಧನೆಗಳು,ವೈದ್ಯಕೀಯ ಪ್ರಮಾಣಗಳು, ಬೇಕಾಗಿರುವ ದಾಖಲೆಗಳು, ಆಯ್ಕೆ ವಿಧಾನ ಮುಂತಾದ ವಿವರಗಳಿಗೆ ಭಾರತೀಯ ವಾಯುದಳದ ವೆಬ್‍ಸೈಟ್ ವಿಳಾಸ: ತಿತಿತಿ.ಚಿiಡಿmeಟಿseಟeಛಿಣioಟಿ.gov.iಟಿ  ಗೆ ಭೇಟಿ ನೀಡಿ ಅಥವಾ 7 ಂiಡಿmeಟಿ Seಟeಛಿಣioಟಿ ಅeಟಿಣಡಿe,ಓo.1, ಅubboಟಿ Pಚಿಡಿಞ ಖoಚಿಜ,ಃಚಿಟಿgಚಿಟoಡಿe-560001 ಈ ಕಛೇರಿ ದೂರವಾಣಿ ಸಂಖ್ಯೆ:080-25592199 ಗೆ ಸಂಪರ್ಕಿಸಬಹುದು.
ಪ್ರವಾಸ ಕಾರ್ಯಕ್ರಮ
   ಮೈಸೂರು,ಫೆ.06.ಕಾನೂನು ಆಯೋಗದ ಅಧ್ಯಕ್ಷ ನಾಡೋಜ ಡಾ: ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರು ಫೆಬ್ರವರಿ 7 ರಿಂದ 9 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅವರು ಫೆಬ್ರವರಿ 7 ರಂದು ರಾತ್ರಿ 12-30 ಕ್ಕೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 8 ರಂದು ಬೆಳಿಗ್ಗೆ 10-30ಕ್ಕೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಕ್ಯಾನ್ಸರ್ ಸ್ಕ್ರಿನಿಂಗ್ ಕ್ಯಾಂಪ್‍ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಫೆಬ್ರವರಿ 9 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.



ಪ್ರವಾಸ ಕಾರ್ಯಕ್ರಮ
    ಮೈಸೂರು,ಫೆ.06-ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ್ ಅವರು ಫೆಬ್ರವರಿ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅವರು ಅಂದು ಬೆಳಿಗ್ಗೆ 10 ಗಂಟೆಗೆ ಬಂಬೂ ಬಜಾರ್‍ನಲ್ಲಿರುವ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಸ್ವೀಕರಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ಮಹಾನಗರಪಾಲಿಕೆಯಲ್ಲಿ ಪೌರಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಮನವಿ
      ಮೈಸೂರು,ಫೆ.06.(ಕ.ವಾ.)-ಮೈಸೂರು ನಗರದ ನಿಮಿಷಾಂಬ ಬಡಾವಣೆಯ 32 ವರ್ಷದ  ಶಿವರಾಜ್ ಎಂ.ಎಸ್. ಜನವರಿ 4 ರಿಂದ ಕಾಣೆಯಾಗಿದ್ದಾರೆ. ಮಾಹಿತಿ ದೊರೆತಲ್ಲಿ ಹತ್ತಿರ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 9448424478, 9972635222 ನ್ನು ಸಂಪರ್ಕಿಸಲು ಕೋರಿದೆ.
                  ಆದರ್ಶ ಶಾಲೆ: ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
   
   ಮೈಸೂರು,ಫೆ.06.ಮೈಸೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ 2016-17ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ  ಅರ್ಜಿ ಆಹ್ವಾನಿಸಿದೆ.
      ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕಿನ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಉಚಿತವಾಗಿ ಸರ್ಕಾರಿ ಆದರ್ಶ ವಿದ್ಯಾಲಯ ಹಳೇ ಕೃಷ್ಣಮೂರ್ತಿಪುರಂ 6ನೇ ಕ್ರಾಸ್, ಮೈಸೂರು ಮತ್ತು ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು 18/02/2016ರ 3.00 ಗಂಟೆಯೊಳಗಾಗಿ ಸಲ್ಲಿಸುವುದು ಎಂದು ಮೈಸೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಬಿ.ಎನ್. ಶಿವರಾಮೇಗೌಡ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ: ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಿ
     ಮೈಸೂರು,ಫೆ.06.-2015-16 ನೇ ಸಾಲಿನಲ್ಲಿ 9, 10 ನೇ ತರಗತಿ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕಾಗಿ hಣಣಠಿs://sಛಿhoಟಚಿಡಿshiಠಿs.gov.iಟಿ  ಮೂಲಕ ಹೆಸರು ನೊಂದಾಯಿಸಿಕೊಳ್ಳಬೇಕಿರುತ್ತದೆ. 2015-16 ಶೈಕ್ಷಣಿಕ ಸಾಲು ಮುಕ್ತಾಯಗೊಳ್ಳುತ್ತಿದ್ದು, ಶಾಲಾ/ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿವೇತನದ ಬಗ್ಗೆ ಗಮನ ಹರಿಸಿ ತುರ್ತಾಗಿ ಪರಿಶೀಲಿಸಿ ಮುಂದಿನ ಹಂತಕ್ಕೆ ಕಳುಹಿಸಿಕೊಡುವುದು. ಅರ್ಜಿ ಪರಿಶೀಲನೆಗೆ ಸಂಬಂಧಿಸಿದಂತೆ ಶಾಲಾ/ಕಾಲೇಜು ಮುಖ್ಯಸ್ಥರಿಗೆ ಸಮಸ್ಯೆಗಳಿದ್ದಲ್ಲಿ ಇ-ಮೇಲ್ ವಿಳಾಸ ಟಿsಠಿsಣmಥಿsoಡಿe@gmಚಿiಟ.ಛಿom  ಗೆ ವಿದ್ಯಾರ್ಥಿ, ಶಾಲಾ/ಕಾಲೇಜು ವಿವರ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಕಳುಹಿಸಿಕೊಡುವುದು.
       ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಅಥವಾ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಅಥವಾ ಯೋಜನಾ ಸಮನ್ವಾಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ದೂರವಾಣಿ ಸಂಖ್ಯೆ 0821-2427140 ಯನ್ನು ಸಂಪರ್ಕಿಸುದು.




























Thursday, 4 February 2016

ಮುಖ್ಯಮಂತ್ರಿಗಳ ಕಾರ್ಯಕ್ರಮ
   
   ಮೈಸೂರು,ಫೆ.4-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 5, 6 ಹಾಗೂ 7 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
       ಫೆಬ್ರವರಿ 5 ರಂದು  ಬೆಳಿಗ್ಗೆ 10-50ಕ್ಕೆ ಸುತ್ತೂರಿನ ಜೆ.ಎಸ್.ಎಸ್. ಹೆಲಿಪ್ಯಾಡ್‍ಗೆ ಆಗಮಿಸುವರು. ಬೆಳಿಗ್ಗೆ 11  ಗಂಟೆಗೆ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಕೃಷಿ ಮೇಳ, ವಸ್ತು ಪ್ರದರ್ಶನ ಹಾಗೂ ಸಾಂಸ್ಕøತಿಕ ಮೇಳ ಉದ್ಘಾಟನೆ ಹಾಗೂ ಶ್ರೀ ಕಪಿಲ ನಂಜುಂಡ ದೇಶಿಕೇಂದ್ರ ಗುರುಕುಲ ಸಾಧಕರ ಸದನ ಹಾಗೂ ಕೇಂದ್ರ ಉಗ್ರಾಣದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಮೈಸೂರು ನಗರದ ಶ್ರೀರಾಂಪುರದಲ್ಲಿ ಗೌತಮ (ಧನ್ವಂತ್ರಿ) ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಜಗನ್ಮೋಹನ ಪ್ಯಾಲೇಸ್ ಸಮೀಪ ಎಂ.ಕೆ.ಎಸ್. ಹೋಟೆಲ್ ಪ್ರೈ ಲಿಮಿಟೆಡ್ ಆಯೋಜಿಸಿರುವ ನೂತನವಾಗಿ ನಿರ್ಮಿಸಿರುವ ಅಂಬಾರಿ ಸೂಟ್ಸ್‍ನ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು. ಸಂಜೆ 5-30ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ 8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 8-30ಕ್ಕೆ 8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದಲ್ಲಿ ಗಣ್ಯರ ಗೌರವಾರ್ಥ ಏರ್ಪಡಿಸಿರುವ ಭೋಜನ ಕೂಟದಲ್ಲಿ ಭಾಗವಹಿಸುವರು. ರಾತ್ರಿ 9-30 ಗಂಟೆಗೆ ಮೈಸೂರಿನಿಂದ ತೆರಳುವರು.
        ಫೆಬ್ರವರಿ 6 ರಂದು  ಬೆಳಿಗ್ಗೆ 10 ಗಂಟೆಗೆ ಮೈಸೂರಿಗೆ ಆಗಮಿಸುವ ಮುಖ್ಯಮಂತ್ರಿಗಳು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 7 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತೆರಳುವರು.

ಫೆಬ್ರವರಿ 5 ರಂದು 8ನೇ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಸಮಾರೋಪ
    ಮೈಸೂರು,ಫೆ.4.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 8ನೇ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭವನ್ನು ಫೆಬ್ರವರಿ 5 ರಂದು ಸಂಜೆ 5-30ಕ್ಕೆ ಮೈಸೂರು ಅರಮನೆ ಮುಂಭಾಗದ ಆವರಣದಲ್ಲಿ ನಡೆಯಲಿದೆ.
     ಮುಖಮಂತ್ರಿ ಸಿದ್ಧರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರಾದ ಆರ್. ರೋಷನ್ ಬೇಗ್ ಅವರು ಆಶಯ ಭಾಷಣ ಮಾಡುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ವಸತಿ ಸಚಿವ ಡಾ. ಎಂ. ಹೆಚ್. ಅಂಬರೀಷ್, ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಉಮಾಶ್ರೀ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಬಿ.ಎಲ್. ಭೈರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಶ್ರೀ ಕಂಠೀರವ ಸ್ಟುಡಿಯೋಸ್ ಲಿ.ನ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನ ಸಭಾ ಸದಸ್ಯ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ವಾಸು, ಹೆಚ್.ಪಿ. ಮಂಜುನಾಥ್, ಕೆ.ವಂಕಟೇಶ್, ಸಾ.ರಾ. ಮಹೇಶ್, ಎಸ್. ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ಎಸ್. ನಾಗರಾಜ್, ಗೋ. ಮಧುಸೂದನ್, ಆರ್. ಧರ್ಮಸೇನ್, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ  ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ರೀಹಾನಾಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾ ಪೌರರಾದ ವನಿತಾ ಪ್ರಸನ್ನ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಂಸ್ಕøತಿ ಕಾರ್ಯಕ್ರಮ: ಉದ್ಘಾಟನೆಯ ನಂತರ ಸಂಜೆ 7.15 ರಿಂದಗುರುಕಿರಣ್ ಮತ್ತು ಚೈತ್ರಾ ಅವರಿಂದ ‘ರಸಸಂಜೆ’ ಕನ್ನಡದ ಜನಪ್ರಿಯ ಗೀತೆಗಳ ಗಾಯನ ಹಾಗೂ ಕೆಲವು ಗೀತೆಗಳಿಗೆ ನೃತ್ಯ, ತಬಲಾ ನಾಣಿ ಮತ್ತು ವೃಂದದವರಿಂದ ‘ಹಾಸ್ಯ ಪ್ರಹಸನ’,  ಬೆಲ್ಜಿಯಂ ದೇಶದ ನೃತ್ಯ ತಂಡವದರಿಂದ ರಂಜನೆ, ರಮೇಶ್ ಅರವಿಂದ್ ಅವರಿಂದ ಸಿನಿಮೋತ್ಸವದ ಬಗ್ಗೆ ಮಾತು, ಖ್ಯಾತ ಸಿನಿಮಾ ನೃತ್ಯ ನಿರ್ದೇಶಕ ‘ಕಲೈ ಮಾಸ್ಟರ್’ ಮತ್ತು ‘ರಾಮು ಮಾಸ್ಟರ್’  ಅವರ ತಂಡದಿಂದ ಜನಪ್ರಿಯ ಗೀತೆಗಳಿಗೆ ನೃತ್ಯ ಪ್ರದರ್ಶನ
ಪ್ರವೇಶ ದ್ವಾರ,  ಪಾರ್ಕಿಂಗ್ ವ್ಯವಸ್ಥೆ
     ಮೈಸೂರು,ಫೆ.04.ಮೈಸೂರು ಅರಮನೆಯ ಆವರಣದಲ್ಲಿ ಫೆಬ್ರವರಿ 5 ರಂದು ಸಂಜೆ 5-30 ಗಂಟೆಗೆ ನಡೆಯಲಿರುವ 8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭಕ್ಕೆ ಪ್ರತ್ಯೇಕ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
     ಸಮಾರಂಭಕ್ಕೆ ಆಗಮಿಸುವ ಗಣ್ಯರು, ಮಾಧ್ಯಮದವರು ಹಾಗೂ ಚಿತ್ರೋದ್ಯಮದವರಿಗೆ ಅರಮನೆಯ ಕರಿಕಲ್ಲು ತೊಟ್ಟಿ ಗೇಟ್‍ನಿಂದ ಪ್ರವೇಶ ಕಲ್ಪಿಸಲಾಗಿದೆ. ಆಹ್ವಾನಿತರು ಮತ್ತು ಸಾರ್ವಜನಿಕರಿಗೆ ಜಯಮಾರ್ತಾಂಡ ಗೇಟ್‍ನಿಂದ ಪ್ರವೇಶ ಕಲ್ಪಿಸಲಾಗಿದೆ.
    ಸಮಾರಂಭಕ್ಕೆ ಆಗಮಿಸುವ ಗಣ್ಯರು, ಮಾಧ್ಯಮದವರು ಹಾಗೂ ಚಿತ್ರೋದ್ಯಮದವರಿಗೆ ಅರಮನೆಯ ಕರಿಕಲ್ಲು ತೊಟ್ಟಿ ಗೇಟ್‍ನ ಹೊರಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ. ಆಹ್ವಾನಿತರು ಮತ್ತು ಸಾರ್ವಜನಿಕರಿಗೆ ದೊಡ್ಡ ಕೆರೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ  ಮಾಡಲಾಗಿದೆ.
    ವಾಹನಗಳನ್ನು ನಿಗಧಿತ ಸ್ಥಳಗಳಲ್ಲಿಯೇ ಪಾರ್ಕಿಂಗ್ ಮಾಡಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ಮುಂಚಿತವಾಗಿ ಆಗಮಿಸಿ ನಿಗಧಿತ ಸ್ಥಳಗಳಲ್ಲಿ ಕುಳಿತುಕೊಳ್ಳುವುದು. ಆಹ್ವಾನ ಪತ್ರಿಕೆ/ಪಾಸ್‍ಗಳನ್ನು ಹೊಂದಿರುವವರು ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು.  ಪರಿಶೀಲನೆ ಸಮಯದಲ್ಲಿ ಹಾಜರುಪಡಿಸುವುದು.  ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಆಯುಧ, ಗಾಜಿನ ಬಾಟಲಿಗಳನ್ನು ತರುವುದನ್ನು ನಿಷೇಧಿಸಿದೆ. ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ನಡೆಸುವ ತಪಾಸಣೆಗೆ ಸಹಕರಿಸುವಂತೆ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸ ಕಾರ್ಯಕ್ರಮ
     ಮೈಸೂರು,ಫೆ.04.ಕನ್ನಡ ಮತ್ತು ಸಂಸ್ಕøತಿ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿ ಡಾ. ಎನ್.ಎಸ್. ಚನ್ನಪ್ಪಗೌಡ ಅವರು ಫೆಬ್ರವರಿ 5 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಫೆಬ್ರವರಿ 5 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿಗೆ ಆಗಮಿಸಿ 8ನೇ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ನಂತರ ರಾತ್ರಿ 8 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
















Wednesday, 3 February 2016

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಸೂಚನೆ ಮೇರೆಗೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ವತಿಯಿಂದ 2016ನೇ ಜನವರಿ 26 ರಂದು ನವದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಲು ರಾಜ್ಯದಿಂದ ಇಬ್ಬರು ಪರಿಶಿಷ್ಟ ಪಂಗಡ ಪ್ರತಿನಿಧಿಗಳು ಮತ್ತು ಒಬ್ಬ ಸಂಪರ್ಕಾಧಿಕಾರಿಯನ್ನು ನವದೆಹಲಿಗೆ ಕಳುಹಿಸಲಾಯಿತು. ಅವರುಗಳು ದಿನಾಂಕ: 04/02/2016ರಂದು ಬೆಳಿಗ್ಗೆ 11.00 ಗಂಟೆಗೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಆವರಣದಲ್ಲಿ ಬುಡಕಟ್ಟು ಪ್ರತಿನಿಧಿಗಳ ಅನುಭವಗಳು/ಅನಿಸಿಕೆಗಳನ್ನು ಹಂಚಿಕೊಳ್ಳುವ ಸಮಾರಂಭವನ್ನು ವ್ಯವಸ್ಥೆ ಮಾಡಲಾಗಿದೆ.
        ಮಾಧ್ಯಮ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದೆ.

ಸಂದರ್ಶನ ಪ್ರಾಧ್ಯಾಪಕರಾಗಿ ಡಾ. ರಾಘವೇಂದ್ರ ಪೈ ನಿಯುಕ್ತಿ


      ಮೈಸೂರು,ಫೆ.03.ಮೈಸೂರು ವಿಶ್ವವಿದ್ಯಾನಿಲಯ ತತ್ವಶಾಸ್ತ್ರ ಅಧ್ಯಯನ ವಿಭಾಗ ಸ್ವಾಮಿ ವಿವೇಕಾನಂದರ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಡಾ. ಕೆ. ರಾಘವೇಂದ್ರ ಪೈ ಅವರು ನಿಯುಕ್ತಿ ಮಾಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರು ತಿಳಿಸಿದ್ದಾರೆ.
     ಡಾ. ಕೆ. ರಾಘವೇಂದ್ರ ಪೈ ಅವರು 18 ವರ್ಷಗಳ ಕಾಲ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ  ಯೋಜನೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡಿಲಿಟ್ ಪದವಿಯನ್ನು ಪಡೆದಿರುವರು. ದೇಶ ವಿದೇಶಗಳಲ್ಲಿ ಇವರು ಯೋಗ ತರಬೇತಿ, ಉಪನ್ಯಾಸ ಪ್ರಾತ್ಯಕ್ಷಿಕೆ ನೀಡಿರುವರು. ಯೋಗ ವಿದ್ಯಾಭೂಷಣ, ರಷ್ಯಾ ಯೋಗಗುರು ಮುಂತಾದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರ ಹೊಂದಿರುವರು. ಒವರ ಯೋಗನಡಿಗೆ ಪೈ ಸೂತ್ರಗಳು ಎಂಬ ತಂತ್ರ ಹಾಗೂ ಕೃತಿಯು ಯೋಗ ಕ್ಷೇತ್ರಕ್ಕೆ ವಿಶೇಷ ಕೊಡುಗೆಯಾಗಿದೆ.
    ಸ್ವಾಮಿ ವಿವೇಕನಂದ ಅಧ್ಯಯನ ಪೀಠವು ಸ್ವಾಮಿ ವಿವೇಕಾನಂದರ ಜೀವನ, ತತ್ವ, ಸಂದೇಶಗಳ ಅಧ್ಯಯನ ಪ್ರಸಾರ ಹಾಗೂ ಪ್ರೇರಣೆ ನೀಡುವ ಉದ್ದೇಶ ಹೊಂದಲಾಗಿದೆ.
ನೀರಿನ ಕಂದಾಯ ಪಾವತಿಸಿ
ಮೈಸೂರು,ಫೆ.03.ಮೈಸೂರು ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ ಅಡಿ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯಕ್ಕೆ ಗ್ರಾಹಕರು ಪಾವತಿಸದೆ ಉಳಿಸಿಕೊಂಡಿರುವ ನೀರಿನ ತೆರಿಗೆ/ಕಂದಾಯ ಬಾಕಿ ರೂ. 120.65 ಕೋಟಿಗಳಷ್ಟಿದ್ದು,
ನೀರಿನ ತೆರಿಗೆ/ಕಂದಾಯ ಬಾಕಿ ಹೆಚ್ಚು ಇರುವ ಹಿನ್ನಲೆಯಲ್ಲಿ ಮೇಲಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ವಸೂಲಾತಿಗಾಗಿ ಸೂಕ್ತ ಕ್ರಮ ವಹಿಸುವಂತೆ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯಕ್ಕೆ ಆದೇಶಿಸಿರುತ್ತಾರೆ.
 ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗೆ ಭರಿಸುತ್ತಿರುವ ವೆಚ್ಚ ನಿರ್ವಹಣೆ ಅಡಿ ವಸೂಲಿ ಮಾಡುತ್ತಿರುವ ನೀರಿನ ಕಂದಾಯದ ಮೊತ್ತಕ್ಕಿಂತ ಹೆಚ್ಚಾಗಿದ್ದು ನಿರ್ವಹಣೆ ನಷ್ಟದಲ್ಲಿದ್ದು, ನಗರ ನೀರು ಸರಬರಾಜು ವ್ಯವಸ್ಥೆ ನಿರ್ವಹಣೆ ಅಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ಈಗಾಗಲೇ ಕೈಗೊಂಡಿರುವ ಯೋಜನೆಗಳಿಗೆ  ಪಡೆದಿರುವ ಸಾಲಗಳಿಗೆ ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಘನ ಸರ್ಕಾರವು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಗ್ರಾಹಕರಿಂದ ಕಟ್ಟು ನಿಟ್ಟಾಗಿ ಬಾಕಿ ನೀರಿನ ಕಂದಾಯ ವಸೂಲು ಮಾಡಲು ಆದೇಶಿಸಿರುತ್ತದೆ.
 ಪ್ರಯುಕ್ತ ಬಾಕಿ ನೀರಿನ ಕಂದಾಯವನ್ನು ವಸೂಲು ಮಾಡಲು ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಲಯವು ಕಾರ್ಯೋನ್ಮುಖವಾಗಿದ್ದು, ಪ್ರತಿ ಬಾಕಿದಾರರ ಬಳಿ ವಸೂಲಿಗೆ ಬರುತ್ತಿದೆ. ಬಾಕಿದಾರರು ತಪ್ಪದೆ ಉಳಿಸಿಕೊಂಡಿರುವ ನೀರಿನ ಕಂದಾಯ ಪಾವತಿಸಲು ಕೋರಲಾಗಿದೆ. ಪಾವತಿಸಲು ನಿರಾಕರಿಸುವ ಗ್ರಾಹಕರ ನೀರಿನ ಹಾಗೂ ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

     ಮೈಸೂರು,ಫೆ.03.ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಹತ್ತು ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಿದೆ.        
    ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 9 ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515944ನ್ನು ಸಂಪರ್ಕಿಸುವುದು.
ಫೆಬ್ರವರಿ 4 ರಂದು ಚಲನಚಿತ್ರ ಪ್ರದರ್ಶನ
    ಮೈಸೂರು,ಫೆ.01.ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮೈಸೂರು ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ ನಾಲ್ಕು ಪರದೆಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಫೆಬ್ರವರಿ 4 ರಂದು ಪ್ರದರ್ಶನಗೊಳ್ಳುವ ಚಲನಚಿತ್ರಗಳ ವಿವರ ಇಂತಿದೆ.
    ಸ್ಕ್ರೀನ್ 1: ಬೆಳಿಗ್ಗೆ 10 ಗಂಟೆಗೆ ಇಥೋಪಿಯೂ ಲ್ಯಾಂಬ್, ಮಧ್ಯಾಹ್ನ 12-30 ಗಂಟೆಗೆ  ಕನ್ನಡದ  ಬೊಂಬೆಯಾಟ,  ಮಧ್ಯಾಹ್ನ 3-30 ಗಂಟೆಗೆ ಟರ್ಕಿ ಮದರ್ ಲ್ಯಾಂಡ್, ಸಂಜೆ 5-30 ಗಂಟೆಗೆ ಇರಾನ್‍ನ ಟ್ಯಾಕ್ಸಿ ತೆಹರಾನ್, ಹಾಗೂ ರಾತ್ರಿ 7-45ಕ್ಕೆ ಕನ್ನಡದ  ನಗರದಲ್ಲಿ ಒಂದು ದಿನ ಚಲನಚಿತ್ರ ಪ್ರದರ್ಶನವಾಗಲಿದೆ.  
    ಸ್ಕ್ರೀನ್ 2 : ಬೆಳಿಗ್ಗೆ 10-10 ಗಂಟೆಗೆ ಬಂಗಾಳಿಯ ಓನೋ ಒಪಾಲಾ ಮಧ್ಯಾಹ್ನ 12-45ಕ್ಕೆ ಯು.ಎಸ್.ಎ. ಕ್ಯಾರೋಲ್, ಮಧ್ಯಾಹ್ನ 3-15ಕ್ಕೆ  ಕನ್ನಡ ಪ್ರಿಯಾಂಕ, ಸಂಜೆ 5-45ಕ್ಕೆ ಇರಾನ್‍ನ ಶೂಸ್, ರಾತ್ರಿ 8 ಗಂಟೆಗೆ ಧನಕ್ ಚಲನಚಿತ್ರ ಪ್ರದರ್ಶನವಾಗಲಿದೆ.
    ಸ್ಕ್ರೀನ್ 3 : ಬೆಳಿಗ್ಗೆ 10-20ಕ್ಕೆ ಯುಎಸ್‍ಎ ಕ್ರಿಷಾ ಮಧ್ಯಾಹ್ನ 1-15ಕ್ಕೆ ಜಪಾನ್  ಪಾಮ್ ಟು ದಿ ಸನ್     ಮಧ್ಯಾಹ್ನ 3-45ಕ್ಕೆ ಜಪಾನ್ ಅವರ್ ಲಿಟ್ಲ್ ಸ್ಟಿಸರ್, ಸಂಜೆ 6 ಗಂಟೆÉಗೆ ಯುಎಸ್‍ಎ ಟ್ಯಾಂಜರೀನ್, ರಾತ್ರಿ 8-15ಕ್ಕೆ ಫ್ರಾನ್ಸ್/ಚೀನಾ  ಅಂಡರ್ ಗ್ರೌಂಡ್ಸ್ ಫ್ರೇಗೇನ್ಸ್  ಚಲನಚಿತ್ರ ಪ್ರದರ್ಶನವಾಗಲಿದೆ.
     ಸ್ಕ್ರೀನ್ 4 : ಬೆಳಿಗ್ಗೆ 10-30 ಗಂಟೆಗೆ ಯುಎಸ್‍ಎಯ ಡೊಂಟೋ ಬೀ ಟೈಯರ್ಡ್, ಸಂಜೆ 4 ಗಂಟೆಗೆ ಯಮನ್  ಐ ಯಾಮ್ ನೊಜೂಂ, ಏಜ್ 10 ಅಂಡ್ ಡೈರ್ವೋಸ್ರ್ಡ  ಸಂಜೆ 6-15ಕ್ಕೆ ಪೋಲ್ಯಾಂಡ್‍ನ ಬಾಡಿ ಚಲನಚಿತ್ರಗಳು ಪ್ರದರ್ಶನವಾಗಲಿದೆ.

ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಮನವಿ
      ಮೈಸೂರು,ಫೆ3.ಮೈಸೂರು ನಗರದ ನಿಮಿಷಾಂಬ ಬಡಾವಣೆಯ 32 ವರ್ಷದ  ಶಿವರಾಜ್ ಎಂ.ಎಸ್. ಎಂಬುವವರು ದಿನಾಂಕ 4-01-2016 ರಂದು ಕಾಣೆಯಾಗಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 94484224478 ನ್ನು ಸಂಪರ್ಕಿಸಲು ಕೋರಿದೆ.

Tuesday, 2 February 2016


ಮಂಡ್ಯ : ಮಾಜಿ ಶಾಸಕ ಎಂ. ಶ್ರೀನಿವಾಸ್‍ರವರ 65ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ನಗರದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಹುಟ್ಟುಹಬ್ಬ ಆಚರಿಸಿದರು.
ನಂತರ ಮಾತನಾಡಿದ ಉದ್ಯಮಿ ಎಚ್.ಎನ್. ಯೋಗೇಶ್ ಅವರು, ಮಾಜಿ ಶಾಸಕ ಎಂ. ಶ್ರೀನಿವಾಸ್‍ರವರು 2 ಬಾರಿ ಶಾಸಕರಾಗಿ ಮಂಡ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಸೇವೆ ಮಂಡ್ಯ ತಾಲೂಕಿನಲ್ಲಿ ಅವಶ್ಯಕತೆ ಇದೆ. ಅವರ ಅಭಿಮಾನಿಗಳು ರೋಗಿಗಳಿಗೆ ಹಣ್ಣು ವಿತರಿಸಿ ವಿಶೇಷವಾಗಿ ಆಚರಿಸುತ್ತಿz್ದÉೀವೆ ಎಂದು ಹೇಳಿದರು.
ಅವರ ಸೇವೆ ಮತ್ತಷ್ಟು ಈ ತಾಲೂಕಿಗೆ ಲಭಿಸಲಿ, ಅವರಿಗೆ ಆಯುಸ್ಸು, ಆರೋಗ್ಯವನ್ನು ಭಗವಂತ ಕರುಣಿಸಲಿ ಎಂದು ಶುಭ ಕೋರಿದರು.
ಜಿ.ಪಂ. ಅಧ್ಯಕ್ಷೆ ಕೋಮಲಾ ಸ್ವಾಮಿ, ಗ್ರಾ.ಪಂ. ಅಧ್ಯಕ್ಷ ಅಶ್ವತ್ಥ, ಸದಸ್ಯ ಪುಟ್ಟಸ್ವಾಮಿ, ದಿನೇಶ್, ನವಭಾರತ ರಕ್ಷಣಾ ವೇದಿಕೆ ಅಧ್ಯಕ್ಷ , ನಾಸೀರ್, ಆರೀಫ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Monday, 1 February 2016

ಹಳ್ಳಕ್ಕೆ ಉರುಳಿ ಬಿದ್ದ ಟಾಟಾ ಸುಮೋ.. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ ಅಣೆಬೆ ಹೋಟೇಲ್ ಸಮೀಪ ದುರ್ಘಟನೆ... ಓರ್ವ ಯುವಕ ಸಾವು, ಮೂವರಿಗೆ ಗಂಭೀರ ಗಾಯ... ಮಧ್ಯರಾತ್ರಿ ಮುಂಜಾನೆ ೨ಗಂಟೆಯಲ್ಲಿ ನಡೆದಿರುವ ಘಟನೆ.  ಮೃತ ಯುವಕ ಮದ್ದೂರು ತಾಲ್ಲೂಕಿನ, ಚಾಮನಹಳ್ಳಿ ಗ್ರಾಮದ ಚೇತನ( 22)... ಪ್ರದೀಪ್(23) ಪ್ರತಾಪ್(25) ಭರತ್(26) ಗಾಯಗೊಂಡವರು... ಗಾಯಾಳುಗಳು ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು  ... ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು...

ಸಾಲಬಾಧೆ,  ರೈತ ಆತ್ಮಹತ್ಯೆ.. ಮದ್ದೂ ತಾಲೂಕಿನ ಸೊಳ್ಳೆಪುರದಲ್ಲಿ ಸಾಲಬಾಧೆ ತಾಳಲಾರದೆ ರಾಜಣ್ಣ (೫೪) ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ... ಎಸ್. ಬಿ. ಐ ಬ್ಯಾಂಕ್ ನಲ್ಲಿ ೭೦ ಸಾವಿರ, ಸೊಸೈಟಿಯಲ್ಲಿ ೩೦ ಸಾವಿರ, ಕೈಸಾಲ ೨ ಲಕ್ಷ ಸಾಲ ಮಾಡಿದ್ದರು...  ೧ ಎಕರೆ ೪ ಗುಂಟೆ ಜಮೀನಿನಲ್ಲಿ ಭತ್ತ ರಾಗಿ ಬೆಳೆದಿದ್ದರು..  ನಾಲ್ಕು ಹೆಣ್ಣು ಮಕ್ಕಳು...  ಇಬ್ಬರಿಗೆ ಮದುವೆಯಾಗಿತ್ತು ... ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೈಸೂರು,ಫೆ.01.-ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮೈಸೂರು ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ ನಾಲ್ಕು ಪರದೆಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಫೆಬ್ರವರಿ 2 ರಂದು ಪ್ರದರ್ಶನಗೊಳ್ಳುವ ಚಲನಚಿತ್ರಗಳ ವಿವರ ಇಂತಿದೆ.
    ಸ್ಕ್ರೀನ್ 1: ಬೆಳಿಗ್ಗೆ 10 ಗಂಟೆಗೆ ಇರಾಕ್‍ನ ಎ ಟೇಲ್ ಆಫ್ ಲವ್, ಮಧ್ಯಾಹ್ನ 12-30 ಗಂಟೆಗೆ  ಮಲಯಾಳಂನ  ಚಾಲಿ ಪೋಲಿಲು,  ಮಧ್ಯಾಹ್ನ 3 ಗಂಟೆಗೆ ಮರಾಠಿಯ  ದಿ ಸೈಲೆನ್ಸ್, ಸಂಜೆ 5-30 ಗಂಟೆಗೆ ಫ್ರಾನ್ಸಿನ ಮುಸ್ಟಂಗ್, ಹಾಗೂ ರಾತ್ರಿ 7-45ಕ್ಕೆ ಕನ್ನಡದ ವಿದಾಯ ಚಲನಚಿತ್ರ ಪ್ರದರ್ಶನವಾಗಲಿದೆ.  
    ಸ್ಕ್ರೀನ್ 2 : ಬೆಳಿಗ್ಗೆ 10-10 ಗಂಟೆಗೆ ಬಂಗಾಳಿಯ ದ ಡಾಕ್‍ಬಾಕ್ಷೋ, ಮಧ್ಯಾಹ್ನ 12-45ಕ್ಕೆ ಕಜಾಕಿಸ್ಥಾನ್ ಸ್ಟೇಂಜರ್, ಮಧ್ಯಾಹ್ನ 3-15ಕ್ಕೆ  ಕಜಾಕಿಸ್ಥಾನ್ ವೊಲ್ಕೆನೊ, ಸಂಜೆ 5-45ಕ್ಕೆ ಫಿಲಿಪೈನ್ಸ್‍ನ ಪ್ಯಾಟ್ರೋಲ್, ರಾತ್ರಿ 8 ಗಂಟೆಗೆ ಇಟಲಿಯ ಮೈ ಮದರ್ ಚಲನಚಿತ್ರ ಪ್ರದರ್ಶನವಾಗಲಿದೆ.
    ಸ್ಕ್ರೀನ್ 3 : ಬೆಳಿಗ್ಗೆ 10-20ಕ್ಕೆ ಫ್ರಾನ್ಸ್‍ನ ಡೈರಿ ಆಫ್ ಎ ಛೇಂಬರ್ ಮೈಡ್, ಮಧ್ಯಾಹ್ನ 1-15ಕ್ಕೆ        ಮಧ್ಯಾಹ್ನ 3-45ಕ್ಕೆ  ಐಲ್ಯಾಂಡ್‍ನ  ರ್ಯಾಮ್ಸ್, ಸಂಜೆ 6 ಗಂಟೆÉ ತೈವಾನ್ ದಿ ಅಸ್ಸಾಸಿನ್, ರಾತ್ರಿ 8-15ಕ್ಕೆ ಕೊಸೋವೂದ  ದ ಹಿರೋ ಚಲನಚಿತ್ರ ಪ್ರದರ್ಶನವಾಗಲಿದೆ.
     ಸ್ಕ್ರೀನ್ 4 : ಬೆಳಿಗ್ಗೆ 10-30 ಗಂಟೆಗೆ ಇರಾನ್ ಡೌರಿಸ್ ಶುಗರ್ ಬೌಲ್, ಮಧ್ಯಾಹ್ನ 1-30ಕ್ಕೆ ಇರಾನ್‍ನ  ದಿ ಲಾಂಗ್ ಫೇರ್‍ವೆಲ್, ಸಂಜೆ 4 ಗಂಟೆಗೆ ಕೈರಗಿಸ್ತಾನ ಅಂಡರ್ ಹೆವನ್,  ಸಂಜೆ 6-15ಕ್ಕೆ ಪ್ಯಾಲಿಸ್ಟೇನ್  ಡಿಗ್ರೇಡ್ ಚಲನಚಿತ್ರಗಳು ಪ್ರದರ್ಶನವಾಗಲಿದೆ.
ಜಿಲ್ಲಾ/ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ: ಜಿಲ್ಲಾ ಮಟ್ಟದ ಸಮಿತಿ ರಚನೆ
    ಮೈಸೂರು,ಫೆ.01.ಜಿಲ್ಲಾ/ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2016ರ ಚುನಾವಣೆಗೆ ಸ್ಪರ್ಧಿಸುವ  ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಪತ್ರಿಕಾ, ಶ್ರವಣ ಮತ್ತು ದೃಶ್ಯ ಮಾಧ್ಯಮಗಳಾದ ಟಿವಿ/ಕೇಬಲ್ ಟಿವಿ ಹಾಗೂ ದೂರದರ್ಶನದ ಮೂಲಕ ಮಾಡುವ ಪ್ರಚಾರಗಳಲ್ಲಿ ದೇಶದ ಕಾನೂನು ಉಲ್ಲಂಘನೆಯಾಗುವುದು, ನೈತಿಕತೆ, ಸಭ್ಯತೆ, ಸೂಕ್ಷ್ಮತೆ ಮೀರುವಂತಹ ಅಂಶಗಳನ್ನು ಪ್ರಚಾರಗಳಲ್ಲಿ ಭಿತ್ತರಿಸುವುದು ಹಾಗೂ ವ್ಯಕ್ತಿಗಳ ಭಾವನೆಗೆ ದಕ್ಕೆ ತರುವುದನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ಜಿಲ್ಲಾಧಿಕಾರಿ ಸಿ.ಶಿಖಾ ಅವರು ರಚಿಸಿರುತ್ತಾರೆ.
ಈ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ಮೈಸೂರು ಅಪರ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಮೈಸೂರು ಉಪವಿಭಾಗಾಧಿಕಾರಿಗಳು ಹಾಗೂ ಮೈಸೂರು ತಾಲ್ಲೂಕು ತಹಶೀಲ್ದಾರರ್ ಸದಸ್ಯರಾಗಿ  ಮೈಸೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೈಸೂರು ಜಿಲ್ಲೆಯ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಸಂಪಾದಕರು / ಮಾಲೀಕರು / ವ್ಯವಸ್ಥಾಪಕರು ಜಿಲ್ಲಾ ಸಮಿತಿಯ ಅನುಮತಿ ಇಲ್ಲದೇ ಯಾವುದೇ ಅಭ್ಯರ್ಥಿ / ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಪ್ರಚಾರ ಜಾಹಿರಾತುಗಳನ್ನು ಸಮಿತಿ ಅನುಮೋದನೆ ಇಲ್ಲದಿದ್ದಲ್ಲಿ ತಮ್ಮ ಮಾಧ್ಯಮದಲ್ಲಿ ಪ್ರಕಟಿಸದಂತೆ ಕೋರಲಾಗಿದೆ.
ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು / ಅಭ್ಯರ್ಥಿಗಳಿಂದ ಜಿಲ್ಲಾ ಸಮಿತಿಯ ಸಂಚಾಲಕರಿಗೆ  (ಉಪನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ) ಅನುಬಂದ -1 ರಲ್ಲಿ ಅರ್ಜಿ ಸಲ್ಲಿಸಬೇಕು.
ಪ್ರತಿಯೊಂದು ನೋಂದಾಯಿತ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಪ್ರತಿಯೊಬ್ಬ ಸ್ಪರ್ಧಿಸುವ ಅಭ್ಯರ್ಥಿಯು ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆರವರಿಗೆ ಅಂತಹ ಪ್ರಚಾರದ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಮೂರು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಬೇರೆ ಯಾವುದೇ ವ್ಯಕ್ತಿಯಾದ ಸಂದರ್ಭದಲ್ಲಿ ಅಥವಾ ನೊಂದಾಯಿತವಲ್ಲದ ರಾಜಕೀಯ ಪಕ್ಷವಾದಲ್ಲಿ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಏಳು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಸಿದ್ದತೆ ಪ್ರಾರಂಭ
ಮೈಸೂರು,ಫೆ.01.ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆ 2016ಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ದಿನಾಂಕ:18.01.2016 ರಿಂದ 24.02.2016ರವರೆಗೆ ನೀತಿ ಸಂಹಿತೆಯು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಉನ್ನತೀಕರಿಸಿ ಚುನಾವಣೆ ನಡೆಯದೇ ಇರುವ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಗೆ ನೀತಿ ಸಂಹಿತೆ ಇರುತ್ತದೆ. ಉಳಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
ನೀತಿ ಸಂಹಿತೆಯು ನಗರ / ಪಟ್ಟಣ ಪ್ರದೇಶಗಳಿಗೆ ಅನ್ವಯಿಸುವುದಿಲ್ಲವಾದರೂ, ನಗರ/ ಪಟ್ಟಣ ವಾಸಿಗಳಾಗಿದ್ದು, ಅವರು ಗ್ರಾಮೀಣ ಪ್ರದೇಶದಲ್ಲಿ ಮತದಾರರಾಗಿರುವವವರಿಗೆ ಹಣ, ಮದ್ಯ ಇತ್ಯಾದಿ ವಸ್ತುಗಳ ಆಮಿಶಗಳನ್ನು ನೀಡಿ ಅಕ್ರಮ ಮತದಾನಕ್ಕೆ ಓಲೈಸುವುದು, ಗ್ರಾಮಾಂತರ ಪ್ರದೇಶದ ವಾಸಿಗಳನ್ನು/ ಮತದಾರರನ್ನು ನಗರ/ ಪಟ್ಟಣ ಪ್ರದೇಶಕ್ಕೆ ಕರೆತಂದು ಅವರಿಗೂ ಸಹ ಹಣ, ಮದ್ಯ ಮತ್ತು ಇತರೆ ವಸ್ತುಗಳನ್ನು ಹಂಚಿಕೆ ಮಾಡುವುದು ಕಂಡುಬಂದಲ್ಲಿ ಭಾರತೀಯ ದಂಡ ಸಂಹಿತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದನ್ವಯ ಭ್ರಷ್ಟಾಚಾರವೆಂದು ಪರಿಗಣಿಸಿ ಅಂತಹವರ ವಿರುದ್ಧ ದೂರು ದಾಖಲಿಸಲಾಗುವುದು.
ಇಂತಹ ಪ್ರಕರಣ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಅಥವಾ ಯಾವುದೇ ರೀತಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಈ ಕೆಳಕಂಡ ಕಂಟ್ರೋಲ್ ರೂಂ ಅಥವಾ ಸಂಬಂದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಜಿಲ್ಲಾ ನಿಯಂತ್ರಣ ಕೊಠಡಿ
1077
ಮೈಸೂರು ತಾಲ್ಲೂಕು
0821-2414811
ನಂಜನಗೂಡು ತಾಲ್ಲೂಕು
08221-223108
ಟಿ.ನರಸೀಪುರ ತಾಲ್ಲೂಕು
08227-260210
ಹುಣಸೂರು ತಾಲ್ಲೂಕು
08222-252040
ಕೆ.ಆರ್.ನಗರ ತಾಲ್ಲೂಕು
08223-262371
ಪಿರಿಯಾಪಟ್ಟಣ ತಾಲ್ಲೂಕು
08223-274007
ಹೆಚ್.ಡಿ.ಕೋಟೆ ತಾಲ್ಲೂಕು
08228-255325

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳದ ಮಾಹಿತಿ
ತಾಲ್ಲೂಕಿನ ಹೆಸರು
ಚುನಾವಣಾಧಿಕಾರಿಗಳ ಹೆಸರು ಹುದ್ದೆ ಮತ್ತು ಪದನಾಮ
ಶ್ರೀಯುತರು
ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಂಖ್ಯೆ ಮತ್ತು ಹೆಸರು
ನಾಮಪತ್ರ ಸ್ವೀಕರಿಸುವ ಸ್ಥಳ
ಮೈಸೂರು
ಸಿ.ಎಲ್.ಆನಂದ್
ಉಪವಿಭಾಗಾಧಿಕಾರಿಗಳು
ಮೈಸೂರು ಉಪವಿಭಾಗ
ಮೈಸೂರು
(ಮೊ: 95358-70900)
1. ಇಲವಾಲ
2. ಹಿನಕಲ್
3. ಸಿದ್ದಲಿಂಗಪುರ
4. ಬೀರಿಹುಂಡಿ(ಮಲ್ಲಹಳ್ಳಿ)
5. ವರುಣ
6. ಜಯಪುರ
7. ಕಡಕೊಳ
8. ಹೂಟಗಳ್ಳಿ
9. ಶ್ರೀರಾಂಪುರ
10. ಹಾರೋಹಳ್ಳಿ(ಮೆಲ್ಲಹಳ್ಳಿ)
ತಾಲ್ಲೂಕು ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಟಿ.ನರಸೀಪುರ
ಶಶಿಧರ್
ಸಹಕಾರ ಸಂಘಗಳ ಉಪ ನಿಬಂಧಕರು
ಮೈಸೂರು
(ಮೊ: 94489-28132)
11. ತುರುಗನೂರು
12. ಸೋಮನಾಥಪುರ
13. ಸೋಸಲೆ
14. ತಲಕಾಡು
15. ಮೂಗೂರು
16. ಗರ್ಗೇಶ್ವರಿ
ತಾಲ್ಲೂಕು ಪಂಚಾಯಿತಿ ಕಛೇರಿ, ಟಿ.ನರಸೀಪುರ
ನಂಜನಗೂಡು
ಬಿ.ಆರ್.ರೂಪ
ಉಪ ಆಡಳಿತಾಧಿಕಾರಿ
ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾವೇರಿ ಜಲಾನಯನ ಯೋಜನೆಗಳು) ಮೈಸೂರು
(ಮೊ:94482-63897)
17. ಹುರಾ
18. ಹುಲ್ಲಹಳ್ಳಿ
19. ಕಳಲೆ
20. ಬದನವಾಳು
21. ದೊಡ್ಡಕೌಲಂದೆ
22. ತಗಡೂರು
23. ಹದಿನಾರು
24. ತಾಂಡವಪುರ
25. ಹೆಗ್ಗಡಹಳ್ಳಿ
ತಾಲ್ಲೂಕು ಪಂಚಾಯಿತಿ ಕಛೇರಿ, ನಂಜನಗೂಡು
ಹುಣಸೂರು
ಡಾ.ಸೌಜನ್ಯ ಎ
ಉಪವಿಭಾಗಾಧಿಕಾರಿ
ಹುಣಸೂರು ಉಪವಿಭಾಗ, ಹುಣಸೂರು
(ಮೊ:99024-33880)
26. ಗಾವಡಗೆರೆ
27. ಬಿಳಿಕೆರೆ
28. ಧರ್ಮಾಪುರ
29. ಬನ್ನಿಕುಪ್ಪೆ
30. ಚಿಲ್ಕುಂದ
31. ಹನಗೋಡು
ಉಪವಿಭಾಗಾಧಿಕಾರಿಗಳ ಕಛೇರಿ
ಹುಣಸೂರು
ಕೆ.ಆರ್.ನಗರ
ಬಿ.ಎನ್.ವೀಣಾ
ಉಪ ಆಯುಕ್ತರು
ವಲಯ ಕಛೇರಿ-6
ಮೈಸೂರು ಮಹಾನಗರ ಪಾಲಿಕೆ, ಮೈಸೂರು
(ಮೊ:94498-41230)
32. ಸಾಲಿಗ್ರಾಮ
33. ಮಿರ್ಲೆ
34. ಭೇರ್ಯ
35. ತಿಪ್ಪೂರು
36. ಹೆಬ್ಬಾಳು
37. ಹೊಸೂರು
ತಾಲ್ಲೂಕು ಕಛೇರಿ, ಕೆ.ಆರ್.ನಗರ
ಪಿರಿಯಾಪಟ್ಟಣ
ಎಂ.ಕೆ.ಸವಿತಾ
ಕಾರ್ಯದರ್ಶಿಗಳು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
(ಮೊ: 81050-36666)
38. ಕಂಪಲಾಪುರ
39. ಹುಣಸವಾಡಿ
40. ಕೊಪ್ಪ
41. ಬೆಟ್ಟದಪುರ
42. ರಾವಂದೂರು
43. ಹಲಗನಹಳ್ಳಿ
ತಾಲ್ಲೂಕು ಕಛೇರಿ, ಪಿರಿಯಾಪಟ್ಟಣ
ಹೆಚ್.ಡಿ.ಕೋಟೆ
ಡಾ.ಕೆ.ರಾಮೇಶ್ವರಪ್ಪ
ಉಪ ನಿರ್ದೇಶಕರು
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮೈಸೂರು
(ಮೊ: 96111-65367)
44. ಅಣ್ಣೂರು
45. ಅಂತರಸಂತೆ
46. ಹಂಪಾಪುರ
47. ಹಂಚೀಪುರ
48. ಕೆ.ಬೆಳತ್ತೂರು
49. ಮುಳ್ಳೂರು
ಮಿನಿ ವಿಧಾನ ಸೌಧ
ಹೆಚ್.ಡಿ.ಕೋಟೆ


ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳದ ಮಾಹಿತಿ
ತಾಲ್ಲೂಕಿನ ಹೆಸರು
ಚುನಾವಣಾಧಿಕಾರಿಗಳ ಹೆಸರು ಹುದ್ದೆ ಮತ್ತು ಪದನಾಮ
ಶ್ರೀಯುತರು
ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸಂಖ್ಯೆ ಮತ್ತು ಹೆಸರು
ನಾಮಪತ್ರ ಸ್ವೀಕರಿಸುವ ಸ್ಥಳ
ಮೈಸೂರು
ಎಸ್.ಪಿ.ಮೋಹನ್
ತಹಶೀಲ್ದಾರ್ ವಲಯ
(1, 2 ಮತ್ತು 4)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
( ಮೊ:99807-81656)
1. ಗುಂಗ್ರಾಲ್ ಛತ್ರ
2. ಇಲವಾಲ
3. ಬೊಮ್ಮೇನಹಳ್ಳಿ
4. ಬೆಳವಾಡಿ
12. ದೊಡ್ಡಮಾರಗೌಡನಹಳ್ಳಿ
13. ಮರಟಿಕ್ಯಾತನಹಳ್ಳಿ
14. ಕೇರ್ಗಳ್ಳಿ
15. ಧನಗಳ್ಳಿ
16. ಜಯಪುರ
17. ಹಾರೋಹಳ್ಳಿ(ಜಯಪುರ)
18. ಮಾರ್ಬಳ್ಳಿ
19. ಉದ್ಬೂರು
ತಾಲ್ಲೂಕು ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಮೈಸೂರು
ಎ.ನವೀನ್‍ಜೋಸೆಫ್
ತಹಶೀಲ್ದಾರ್
ಮೈಸೂರು ತಾಲ್ಲೂಕು
ಮೈಸೂರು
(ಮೊ: 99452-54100)
5. ಆನಂದೂರು
6. ಕೂರ್ಗಳ್ಳಿ
7. ಹೂಟಗಳ್ಳಿ-1
8. ಹೂಟಗಳ್ಳಿ-2
9. ಹಿನಕಲ್ -1
10. ಹಿನಕಲ್-2
11. ಬೋಗಾದಿ
24. ಶ್ರೀರಾಂಪುರ
25. ಚಾಮುಂಡಿಬೆಟ್ಟ
26. ಹಂಚ್ಯಾ
27. ಆಲನಹಳ್ಳಿ
28. ನಾಗನಹಳ್ಳಿ
29. ಸಿದ್ದಲಿಂಗಪುರ
30. ಬೆಲವತ್ತ
31. ರಮ್ಮನಹಳ್ಳಿ
ತಾಲ್ಲೂಕು ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಮೈಸೂರು
ಮಂಜುನಾಥ್
ತಹಶೀಲ್ದಾರ್
(ವಲಯ 5 ಮತ್ತು 5ಎ)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
(ಮೊ:94486-51232)
20. ದೂರ
21. ಸಿಂಧುವಳ್ಳಿ
22. ಕಡಕೊಳ
23. ಹೊಸಹುಂಡಿ
32. ವಾಜಮಂಗಲ
33. ವರುಣ
34. ಆಯರಹಳ್ಳಿ
35. ದೇವಲಾಪುರ
36. ಹಾರೋಹಳ್ಳಿ(ಮೆಲ್ಲಹಳ್ಳಿ)
37. ವರಕೋಡು
38. ಯಡಕೊಳ
ತಾಲ್ಲೂಕು ಪಂಚಾಯಿತಿ ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಟಿ.ನರಸೀಪುರ
ಶೂಲದಯ್ಯ
ತಹಶೀಲ್ದಾರ್
ಟಿ.ನರಸೀಪುರ ತಾಲ್ಲೂಕು
(ಮೊ:98458-80132 )
1. ಕೊಡಗಳ್ಳಿ
2. ಬಿ.ಸೀಹಳ್ಳಿ
3. ತುರುಗನೂರು
4. ಮೆಣಸಿಕ್ಯಾತನಹಳ್ಳಿ
5. ಹೆಗ್ಗೂರು
6. ಅತ್ತಹಳ್ಳಿ
7. ಸೋಮನಾಥಪುರ
8. ಚಿದರವಳ್ಳಿ
9. ಸೋಸಲೆ
10. ಮುತ್ತಲವಾಡಿ
11. ದೊಡ್ಡಬಾಗಿಲು
12. ತಲಕಾಡು
ತಾಲ್ಲೂಕು ಕಛೇರಿ, ಟಿ.ನರಸೀಪುರ
ಟಿ.ನರಸೀಪುರ
ಸಿದ್ದರಾಜು
ಸಹಾಯಕ ಕಾರ್ಯಪಾಲಕ ಅಭಿಯಂತರರು
ಪಂಚಾಯತ್ ರಾಜ್ ಉಪವಿಭಾಗ, ಟಿ.ನರಸೀಪುರ
( 99003-09378)
13. ಟಿ.ಮೇಗಡಹಳ್ಳಿ
14. ಹೊಳೆಸಾಲು(ಕಾವೇರಿಪುರ)
15. ಮಾಲಂಗಿ
16. ಮಾದಾಪುರ
17. ಕೊತ್ತೇಗಾಲ
18. ಮೂಗೂರು
19. ಹ್ಯಾಕನೂರು
20. ಕೇತಹಳ್ಳಿ
21. ಕಿರಗಸೂರು
22. ಗರ್ಗೇಶ್ವರಿ
23. ರಂಗಸಮುದ್ರ
24. ತುಂಬಲ
ತಾಲ್ಲೂಕು ಕಛೇರಿ, ಟಿ.ನರಸೀಪುರ
ನಂಜನಗೂಡು
ಚಂದ್ರಕಾತ್
ಕ್ಷೇತ್ರ ಶಿಕ್ಷಣಾಧಿಕಾರಿ
ಶಿಕ್ಷಣ ಇಲಾಖೆ
ನಂಜನಗೂಡು
( 94806-95308)
1. ಹರದನಹಳ್ಳಿ
2. ನೆಲ್ಲಿತಾಳಪುರ
3. ಕುರಿಹುಂಡಿ
4. ಹುಲ್ಲಹಳ್ಳಿ
5. ಬಿದರಗೂಡು
6. ತಾಂಡವಪುರ
7. ಇಮ್ಮಾವು
8. ಹೊಸಕೋಟೆ
9. ತಾಯೂರು
10. ಹದಿನಾರು
11. ಸುತ್ತೂರು
ತಾಲ್ಲೂಕು ಪಂಚಾಯಿತಿ ಕಛೇರಿ, ನಂಜನಗೂಡು
ನಂಜನಗೂಡು
ಹೆಚ್.ರಾಮಪ್ಪ
ತಹಶೀಲ್ದಾರ್
ನಂಜನಗೂಡು ತಾಲ್ಲೂಕು ನಂಜನಗೂಡು
(ಮೊ:94484-14555)
12. ನಗರ್ಲೆ
13. ಮಲ್ಲೂಪುರ
14. ತಗಡೂರು
15. ಕಾರ್ಯ
16. ದಾಸನೂರು
17. ಕೋಣನೂರು
18. ದೊಡ್ಡಕೌಲಂದೆ
19. ನೇರಳೆ
20. ಹೆಮ್ಮರಗಾಲ
21. ಹೆಡತಲೆ
22. ಹೊರಳವಾಡಿ
ತಾಲ್ಲೂಕು ಕಛೇರಿ, ನಂಜನಗೂಡು
ನಂಜನಗೂಡು
ಡಾ.ಎಂ.ಕೃಷ್ಣಂರಾಜು
ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ನಂಜನಗೂಡು
(ಮೊ:94808-73121)
23. ದೇವರಸನಹಳ್ಳಿ
24. ಕೂಡ್ಲಾಪುರ
25. ಸಿಂಧುವಳ್ಳಿ
26. ಕಳಲೆ
27. ಸೂರಹಳ್ಳಿ
28. ದೇವೀರಮ್ಮನಹಳ್ಳಿ
29. ದೇಬೂರು
30. ಹೆಗ್ಗಡಹಳ್ಳಿ
31. ಹಗಿನವಾಳು
32. ಹುರಾ
33. ಹಾಡ್ಯ
34. ಹೆಡಿಯಾಲ
ತಾಲ್ಲೂಕು ಪಂಚಾಯಿತಿ ಕಛೇರಿ, ನಂಜನಗೂಡು
ಹುಣಸೂರು
ಸಿ.ಆರ್.ಕೃಷ್ಣಕುಮಾರ್
ಕಾರ್ಯನಿರ್ವಾಹಕ ಅಧಿಕಾರಿಗಳು
ತಾಲ್ಲೂಕು ಪಂಚಾಯಿತಿ ಹುಣಸೂರು
(ಮೊ:94808-73110)
1. ಕಟ್ಟೆಮಳಲವಾಡಿ
2. ಜಾಬಗೆರೆ
3. ಗಾವಡಗೆರೆ
4. ಬೋಳನಹಳ್ಳಿ
5. ಹಳೇಬೀಡು
6. ಬಿಳಿಕೆರೆ
7. ಗಾಗೇನಹಳ್ಳಿ
8. ಧರ್ಮಾಪುರ
9. ಉದ್ದೂರು ಕಾವಲ್
10. ಕರಿಮುದ್ದನಹಳ್ಳಿ
11. ಉಯಿಗೊಂಡನಹಳ್ಳಿ
ತಾಲ್ಲೂಕು ಪಂಚಾಯಿತಿ ಕಛೇರಿ, ಹುಣಸೂರು
ಹುಣಸೂರು
ಎನ್.ವೆಂಕಟಾಚಲಪ್ಪ
ತಹಶೀಲ್ದಾರ್
ಹುಣಸೂರು ತಾಲ್ಲೂಕು
ಹುಣಸೂರು
(ಮೊ:94800-58094)
12. ಬನ್ನಿಕುಪ್ಪೆ
13. ಮರದೂರು
14. ಗೋವಿಂದನಹಳ್ಳಿ
15. ಆಸ್ಪತ್ರೆಕಾವಲ್
16. ಮೋದೂರು
17. ಚಿಲ್ಕುಂದ
18. ತಟ್ಟೆಕೆರೆ
19. ಉಮ್ಮತ್ತೂರು
20. ಕಲ್ಲಹಳ್ಳಿ
21. ಹನಗೋಡು
22. ಹೆಗ್ಗಂದೂರು
23. ದೊಡ್ಡಹೆಜ್ಜೂರು
ತಾಲ್ಲೂಕು ಕಛೇರಿ,
ಹುಣಸೂರು
ಕೆ.ಆರ್.ನಗರ
ಜಿ.ಹೆಚ್.ನಾಗರಾಜು
ತಹಶೀಲ್ದಾರ್
ಕೆ.ಆರ್.ನಗರ ತಾಲ್ಲೂಕು
ಕೆ.ಆರ್.ನಗರ
(ಮೊ:84948-28571)
1. ಹರದನಹಳ್ಳಿ
2. ಮುಂಡೂರು
3. ಲಕ್ಕಿಕುಪ್ಪೆ
4. ಮಿರ್ಲೆ
5. ತಂದ್ರೆ
6. ಭೇರ್ಯ
7. ಮೇಲೂರು
8. ಹೊಸಅಗ್ರಹಾರ
9. ಹನಸೋಗೆ
10. ಮಾಯಿಗೌಡನಹಳ್ಳಿ
11. ಹಳಿಯೂರು
ತಾಲ್ಲೂಕು ಕಛೇರಿ, ಕೆ.ಆರ್.ನಗರ
ಕೆ.ಆರ್.ನಗರ
ಗುರುಶಾಂತಪ್ಪ
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಕೆ.ಆರ್.ನಗರ ತಾಲ್ಲೂಕು
(ಮೊ:88805-41218)
12. ಹೊಸಕೋಟೆ
13. ಸಾಲಿಗ್ರಾಮ
14. ಕುಪ್ಪೆ
15. ಕೆಸ್ತೂರು
16. ಬ್ಯಾಡರಹಳ್ಳಿ
17. ಹೆಬ್ಬಾಳು
18. ಡೋರನಹಳ್ಳಿ
19. ಲಾಳಂದೇವನಹಳ್ಳಿ
20. ಗಂಧನಹಳ್ಳಿ
21. ಹಂಪಾಪುರ
22. ತಿಪ್ಪೂರು
ತಾಲ್ಲೂಕು ಕಛೇರಿ, ಕೆ.ಆರ್.ನಗರ
ಪಿರಿಯಾಪಟ್ಟಣ
ಡಾ.ವಿ.ರಂಗನಾಥ್
ತಹಶೀಲ್ದಾರ್
ಪಿರಿಯಾಪಟ್ಟಣ ತಾಲ್ಲೂಕು
(ಮೊ:97421-79000)
1. ಹಲಗನಹಳ್ಳಿ
2. ಕಣಗಾಲು
3. ಚಪ್ಪರದಹಳ್ಳಿ
4. ಚಿಕ್ಕನೇರಳೆ
5. ಬೆಟ್ಟದಪುರ
6. ಭುವನಹಳ್ಳಿ
7. ಅತ್ತಿಗೋಡು
8. ಕಿತ್ತೂರು
9. ಚನ್ನಕಲ್‍ಕಾವಲ್
10. ಕೊಪ್ಪ
11. ದೊಡ್ಡಹರವೆ
12. ಬೈಲಕುಪ್ಪೆ
ತಾಲ್ಲೂಕು ಕಛೇರಿ
ಪಿರಿಯಾಪಟ್ಟಣ
ಪಿರಿಯಾಪಟ್ಟಣ
ಆರ್.ಕರೀಗೌಡ
ಕ್ಷೇತ್ರ ಶಿಕ್ಷಣಾಧಿಕಾರಿ
ಪಿರಿಯಾಪಟ್ಟಣ
(ಮೊ:94806-95309)
13. ಮುತ್ತೂರು
14. ಹಬಟೂರು
15. ಆಲನಹಳ್ಳಿ
16. ಕೋಮಲಾಪುರ
17. ಹಿಟ್ನೆಹೆಬ್ಬಾಗಿಲು
18. ಹೊನ್ನೇನಹಳ್ಳಿ
19. ರಾವಂದೂರು
20. ದೊಡ್ಡಬ್ಯಾಲಾಳು
21. ಕಂಪಲಾಪುರ
22. ಪಂಚವಳ್ಳಿ
ತಾಲ್ಲೂಕು ಪಂಚಾಯಿತಿ ಕಛೇರಿ, ಪಿರಿಯಾಪಟ್ಟಣ
ಹೆಚ್.ಡಿ.ಕೋಟೆ
ಎಂ.ನಂಜುಂಡಯ್ಯ
ತಹಶೀಲ್ದಾರ್
ಹೆಚ್.ಡಿ.ಕೋಟೆ ತಾಲ್ಲೂಕು
ಹೆಚ್.ಡಿ.ಕೋಟೆ
(ಮೊ:94490-95782)
1. ಅಣ್ಣೂರು
2. ಪಡುಕೋಟೆಕಾವಲ್
3. ನಾಗನಹಳ್ಳಿ
4. ಬೂದನೂರು
5. ಜಿ.ಬಿ.ಸರಗೂರು
6. ಹೊಮ್ಮರಗಳ್ಳಿ
7. ಚಿಕ್ಕೆರೆಯೂರು
8. ಕಂಚಮಳ್ಳಿ
9. ಮಾದಾಪುರ
10. ಹೈರಿಗೆ
11. ಹೆಬ್ಬಲಗುಪ್ಪೆ
12. ತುಂಬಸೋಗೆ
ತಾಲ್ಲೂಕು ಕಛೇರಿ, ಹೆಚ್.ಡಿ.ಕೋಟೆ
ಹೆಚ್.ಡಿ.ಕೋಟೆ
ಶ್ರೀಕಂಠೇರಾಜೇಅರಸು
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಹೆಚ್.ಡಿ.ಕೋಟೆ
(ಮೊ:99026-33060)
13. ಹಿರೇಹಳ್ಳಿ
14. ಅಂತರಸಂತೆ
15. ಎನ್.ಬೆಳ್ತೂರು
16. ಮಚ್ಚೂರು
17. ಹಂಚೀಪುರ
18. ಕಿತ್ತೂರು(ತೆರಣಿಮಂಟಿ)
19. ಕೆಂಚನಹಳ್ಳಿ
20. ಬಿ.ಮಟಕೆರೆ
21. ಸಾಗರೆ
22. ಲಂಕೆ
23. ಮುಳ್ಳೂರು
24. ಹಾದನೂರು
ತಾಲ್ಲೂಕು ಕಛೇರಿ, ಹೆಚ್.ಡಿ.ಕೋಟೆ

ಜಿಲ್ಲಾ / ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ -2016,  ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮ್ಮ  ವೈಯಕ್ತಿಕ ಪ್ರಚಾರವನ್ನು ಪತ್ರಿಕಾ / ಶ್ರವಣ ಮತ್ತು ದೃಶ್ಯ ಮಾಧ್ಯಮಗಳಾದ ಟಿ.ವಿ / ಕೇಬಲ್ ಟಿ.ವಿ. ಹಾಗೂ ದೂರದರ್ಶನದ ಮೂಲಕ ಮಾಡುವವರಿರುತ್ತಾರೆ. ಇಂತಹ ಪ್ರಚಾರಗಳಲ್ಲಿ ಚುನಾವಣೆಗೆ ಸಂಬಂಧಪಟ್ಟ ದೇಶದ ಕಾನೂನು ಉಲ್ಲಂಘನೆಯಾಗುವುದು ಹಾಗೂ ನೈತಿಕತೆ, ಸಭ್ಯತೆ ಸೂಕ್ಷ್ಮತೆ ಮೀರುವಂತಹ ಅಂಶಗಳನ್ನು ತಮ್ಮ ಪ್ರಚಾರಗಳಲ್ಲಿ ಬಿತ್ತರಿಸುವುದು ಹಾಗೂ ವ್ಯಕ್ತಿಗಳ ಭಾವನೆಗೆ ಧಕ್ಕೆ ತರುವಂತಹದನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸುವಂತೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನವಿರುತ್ತದೆ.
    ಅದರಂತೆ ಪತ್ರಿಕಾ, ಶ್ರವಣ, ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ನಿಯಂತ್ರಣಗಳನ್ನು ಜಾರಿಯಲ್ಲಿ ತರಲು ಈ ಕೆಳಕಂಡಂತೆ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ
1
ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು
ಅಧ್ಯಕ್ಷರು
2
ಪೊಲೀಸ್ ಅಧೀಕ್ಷರು, ಮೈಸೂರು ಜಿಲ್ಲೆ, ಮೈಸೂರು
ಸದಸ್ಯರು
3
ಅಪರ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು
ಸದಸ್ಯರು
4
ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರು
ಸಂಚಾಲಕರು
5
ಉಪವಿಭಾಗಾಧಿಕಾರಿಗಳು, ಮೈಸೂರು ಉಪವಿಭಾಗ, ಮೈಸೂರು
ಸದಸ್ಯರು
6
ತಹಶೀಲ್ದಾರ್, ಮೈಸೂರು ತಾಲ್ಲೂಕು, ಮೈಸೂರು
ಸದಸ್ಯರು


ಮೈಸೂರು ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಸಂಪಾದಕರು / ಮಾಲೀಕರು / ವ್ಯವಸ್ಥಾಪಕರು ಜಿಲ್ಲಾ ಸಮಿತಿಯ ಅನುಮತಿ ಇಲ್ಲದೇ ಯಾವುದೇ ಅಭ್ಯರ್ಥಿ / ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಪ್ರಚಾರಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸದಂತೆ ಕೋರಲಾಗಿದೆ.
ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು / ಅಭ್ಯರ್ಥಿಗಳಿಂದ ಜಿಲ್ಲಾ ಸಮಿತಿಯ ಸಂಚಾಲಕರಿಗೆ  ( ಉಪನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ) ಅನುಬಂದ -1 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

1. ಪ್ರತಿಯೊಂದು ನೋಂದಾಯಿತ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಪ್ರತಿಯೊಬ್ಬ ಸ್ಪರ್ಧಿಸುವ ಅಭ್ಯರ್ಥಿಯು ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆರವರಿಗೆ ಅಂತಹ ಪ್ರಚಾರದ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಮೂರು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.
2. ಬೇರೆ ಯಾವುದೇ ವ್ಯಕ್ತಿಯ ಸಂದರ್ಭದಲ್ಲಿ ಅಥವಾ ನೊಂದಾಯಿತವಲ್ಲದ ರಾಜಕೀಯ ಪಕ್ಷವಾದಲ್ಲಿ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಏಳು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.

   ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣಗಳು 125 ಮತ್ತು 164 ಕ್ಕೆ ತಿದ್ದುಪಡಿಯಾಗಿರುವುದರಿಂದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳ ಸಂದರ್ಭದಲ್ಲಿ ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕಾಗಿರುತ್ತದೆ.
ಅಲ್ಲದೇ ಮತದಾರನು ಯಾವುದೇ ಅಭ್ಯರ್ಥಿಯ ಪರವಾಗಿ ಮತ ನೀಡಲು ಬಯಸದಿದ್ದ ಪಕ್ಷದಲ್ಲಿ ತನ್ನ ಮತವನ್ನು ಸ್ಪರ್ಧಿಸಿರುವ ಅಭ್ಯರ್ಥಿಗಳ ಹೊರತುಪಡಿಸಿ ಮೇಲ್ಕಂಡ ಯಾರೂ ಅಲ್ಲ (ಓಔಖಿಂ) ಗೆ ಮತಚಲಾಯಿಸಲು ರಾಜ್ಯ ಚುನಾವಣಾ ಆಯೋಗವು ಅವಕಾಶವನ್ನು ಕಲ್ಪಿಸಿರುತ್ತದೆ.
ಆದ್ದರಿಂದ ಜಿಲ್ಲೆಯಲ್ಲಿ ಎಲ್ಲಾ ಗ್ರಾಮೀಣ ಪ್ರದೇಶದ ಮತದಾರರು ಜಿಲ್ಲಾ / ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2016 ರಲ್ಲಿ ಕಡ್ಡಾಯವಾಗಿ ಮತದಾನವನ್ನು ಮಾಡುವಂತೆ ಕೋರಲಾಗಿದೆ. ಹಾಗೂ ಸದರಿ ಚುನಾವಣೆಯಲ್ಲಿ “ಮೇಲ್ಕಂಡ ಯಾರೂ ಅಲ್ಲ (ಓಔಖಿಂ)” ಸಹ ಮತಪತ್ರದಲ್ಲಿ ಇರುತ್ತದೆ ಎಂದು ಮತದಾರರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಚುನಾವಣಾ ಅಧಿಕಾರಿ ನೇಮಕ
   ಮೈಸೂರು,ಫೆ.01.(ಕ.ವಾ.)-ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2016ಕ್ಕೆ ಸಂಬಂಧಿಸಿದಂತೆ ಟಿ.ನರಸೀಪುರ ತಾಲ್ಲೂಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸಹಕಾರ ಸಂಘಗಳ ಉಪನಿಬಂಧಕ ಪಿ. ಶಶಿಧರ್ ಅವರನ್ನು ನೇಮಕ ಮಾಡಲಾಗಿದೆ.
   ಸದರಿ ಕ್ಷೇತ್ರದ ಚುನಾವಣೆಯ ಅರ್ಹ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಚುನಾವಣಾಧಿಕಾರಿಗಳನ್ನು ದಿನಾಂಕ 01-02-2016 ರಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು 8-2-2016 ಕೊನೆಯ ದಿನಾಂಕವಾಗಿರುತ್ತದೆ ಎಂದು ಟಿ.ನರಸೀಪುರ ತಾಲ್ಲೂಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣಾಧಿಕಾರಿ ಪಿ. ಶಶಿಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಶೋಧನಾ ಅಧ್ಯಯನಕ್ಕೆ ಅರ್ಜಿ ಆಹ್ವಾನ
      ಮೈಸೂರು,ಫೆ.01.(ಕ.ವಾ.)-ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2015-16ನೇ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಅಕಾಡೆಮಿಯ ವ್ಯಾಪ್ತಿಗೆ ಒಳಪಡುವ ಯಕ್ಷಗಾನ ಬಯಲಾಟದ ಕಲಾ ಪ್ರಕಾರಗಳ ಬಗ್ಗೆ 1 ವರ್ಷ ಕಾಲ ಅಧ್ಯಯನ ನಡೆಸಿ ಪ್ರಬಂಧ ಮಂಡಿಸುವವರಿಗೆ ಫೆಲೋಶಿಪ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
      ಸಂಶೋಧನಾ ಕಾರ್ಯಕ್ಕಾಗಿ ಒಬ್ಬ ಅಭ್ಯರ್ಥಿಗೆ 1 ಲಕ್ಷ ರೂ. ನಿಗಧಿಪಡಿಸಿದ್ದು, ಕನ್ನಡ ಎಂ.ಎ (ಜಾನಪದ, ಸಮಾಜ ವಿಜ್ಞಾನ, ಮಹಿಳಾ ಅಧ್ಯಯನ, ಸಾಹಿತ್ಯ ಚರಿತ್ರೆ, ಮಾನವಶಾಸ್ತ್ರ ಇತ್ಯಾದಿ) ವಿದ್ಯಾರ್ಹತೆ ಹೊಂದಿರುವ ಪರಿಶಿಷ್ಟ ವರ್ಗ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
      ಸಂಶೋಧನಾ ಅಭ್ಯರ್ಥಿಗಳು ಬಯಲಾಟದಲ್ಲಿ ಮೂಡಲಪಾಯ ಯಕ್ಷಗಾನ, ದೊಡ್ಡಾಟ, ಕೇಳಿಕೆ, ಘಟ್ಟದಕೋಣೆ ಯಕ್ಷಗಾನ ಇತ್ಯಾದಿ, ಸಣ್ಣಾಟದಲ್ಲಿ ಸಂಗ್ಯಾ-ಬಾಳ್ಯ, ರಾಧಾನಾಟ, ಕಡ್ಲೀಮಟ್ಟಿ ಸ್ಟೇಷನ್ ಮಾಸ್ಟರ್ ಇತ್ಯಾದಿ, ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು, ತಾಳಮದ್ದಳೆ, ಸೂತ್ರದಗೊಂಬೆಯಾಟ, ತೊಗಲುಗೊಂಬೆಯಾಟ, ಶ್ರೀ ಕೃಷ್ಣಪಾರಿಜಾತ  ಕಲಾಪ್ರಕಾರಗಳಲ್ಲಿ ಸಂಶೋಧನಾ ನಡೆಸಬೇಕು.
     ಆಸಕ್ತರು ಆಯ್ಕೆ ಮಾಡಿಕೊಳ್ಳುವ ಅಧ್ಯಯನ ವಿಷಯದ ಬಗ್ಗೆ ನಾಲ್ಕು ಪುಟಗಳ ಸಾರಾಂಶ ತಮ್ಮ ಸಾಧನೆಯ ಕಿರು ಪರಿಚಯ ಹಾಗೂ ಜಾತಿ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಫೆಬ್ರವರಿ 25 ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-2 ಅಥವಾ ಇ-ಮೇಲ್ ವಿಳಾಸಕ್ಕೆ ಞಥಿbಚಿbಚಿಟಿgಚಿಟoಡಿe@gmಚಿiಟ.ಛಿom  ನಲ್ಲಿ ಅರ್ಜಿ ಸಲ್ಲಿಸುವುದು.
   ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು ಇವರನ್ನು ಸಂಪರ್ಕಿಸುವುದು.
   
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಫೆ.01.(ಕ.ವಾ.)-ಮೈಸೂರು ರೈಲು ನಿಲ್ದಾಣದ ರೈಲುಗಾಡಿ ನಂ. 16229/16230 ಕೋಚ್ ನಂ. ಎಸ್‍ಡಬ್ಲ್ಯೂಆರ್ ಜಿ.ಎಸ್. 14425 ರಲ್ಲಿ ಫೆಬ್ರವರಿ 1 ರಂದು ಸುಮಾರು 38 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ವ್ಯಕ್ತಿ 5.7 ಅಡಿ ಎತ್ತರ, ದೃಢಕಾಯ ಶರೀರ, ಕಪ್ಪು ಮೈಬಣ್ಣ, ದುಂಡುಮುಖ, ತಲೆಯಲ್ಲಿ ಸುಮಾರು 1.5 ಅಡಿ ಉದ್ದದ ಕಪ್ಪು ಕೂದಲು, ಕಪ್ಪು ಬಣ್ಣದ ನೀಲಿ ಗೆರೆಯುಳ್ಳ ಟೀ ಶರ್ಟ್, ನೀಲಿ ಬಣ್ಣದ ಜಾಗಿಂಗ್ ಪ್ಯಾಂಟ್ ಧರಿಸಿರುತ್ತಾರೆ.
ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

"ಭಾರತೀಯ ವಾಯುದಳ"ದ ನೇಮಕಾತಿ ರ್ಯಾಲಿ
ಮೈಸೂರು,ಭಾರತೀಯ ವಾಯುದಳದಲ್ಲಿ 'ಙ' ಗುಂಪಿನ ಏರ್‍ಮೆನ್ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್ (ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗಾಗಿ  ದಿನಾಂಕ : 17-2-2016 ರಂದು ಚಾಮುಂಡಿ ವಿಹಾರ್ ಕ್ರೀಡಾಂಗಣ, ನಜರಬಾದ್, ಮೈಸೂರು ಇಲ್ಲಿ ನೇರ ನೇಮಕಕ್ಕಾಗಿ ರ್ಯಾಲಿ ಆಯೋಜಿಸಲಾಗಿದೆ.  ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅರ್ಹರು.  ಅಭ್ಯರ್ಥಿಗಳು ದಿನಾಂಕ: 1-8-1996 ರಿಂದ 30-11-1999 ರ ಅವಧಿಯಲ್ಲಿ ಜನಿಸಿದವರಾಗಿರಬೇಕು.
ವಿದ್ಯಾರ್ಹತೆ:
'ಙ'  ಗುಂಪಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್, ಐ.ಐ.ಎಫ್ (ಪೊಲೀಸ್) ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ 10 + 2 ಅಥವಾ ದ್ವಿತೀಯ ಪಿ.ಯು.ಸಿ.ಯಲ್ಲಿ ಸರಾಸರಿ ಕನಿಷ್ಟ ಶೇ  50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು. ಅಥವಾ ಸಿ.ಬಿ.ಎಸ್.ಇ/ರಾಜ್ಯ ಶಿಕ್ಷಣ ಮಂಡಳಿ /ಪರಿಷತ್‍ನಿಂದ ಅಂಗೀಕೃತವಾದ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‍ನಿಂದ 10+2 ಕ್ಕೆ ತತ್ಸಮಾನ ಎಂದು ಪರಿಗಣಿಸಲ್ಪಟ್ಟಿರುವ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಸರಾಸರಿ ಶೇ 50 ಅಂಕಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು.  ವೃತ್ತಿಪರ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ ಇಲ್ಲದಿದ್ದಲ್ಲಿ ಇಂಡರ್‍ಮೀಡಿಯೆಟ್/ ಮೆಟ್ರಿಕುಲೇಷನ್‍ನ ಇಂಗ್ಲೀಷ್ ವಿಷಯದಲ್ಲಿ ಶೇ 50 ಅಂಕ ಗಳಿಸಿರಬೇಕು.
'ಙ' ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳೀಗೆ 10+2 ಅಥವಾ ದ್ವಿತೀಯ ಪಿ.ಯು.ಸಿ. ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾÀಷೆ ವಿಷಯಗಳನ್ನು ಹೊಂದಿದ್ದು, ಸರಾಸರಿ ಶೇ 50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯ ಮೂಲ ಅಂಕ ಪಟ್ಟಿಗಳು, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ 4 ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 7 ಭಾವಚಿತ್ರಗಳೊಂದಿಗೆ ದಿನಾಂಕ: 17-2-2016 ರಂದು ಬೆಳಿಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ನಜಿರಬಾದ್, ಮೈಸೂರು ಇಲ್ಲಿ ಹಾಜರಾಗುವುದು.  ಅರ್ಹತಾ ನಿಬಂಧನೆಗಳು, ವೈದ್ಯಕೀಯ ವಾಯುದಳದ ವೆಬ್‍ಸೈಟ್ ತಿತಿತಿ/ಚಿiಡಿmeಟಿseಟeಛಿಣioಟಿ.gov.iಟಿ ಗೆ ಭೇಟಿ ನೀಡಿ ಅಥವಾ,  7 ಂiಡಿmeಟಿ Seಟeಛಿಣioಟಿ ಅeಟಿಣಡಿe, ಓo. 1, ಅubboಟಿ ಖoಚಿಜ, ಃಚಿಟಿgಚಿಟoಡಿe – 560 001 ಈ ಕಚೇರಿಯನ್ನು ದೂರವಾಣಿ ಸಂಖ್ಯೆ 080-25592100,          ಇ-ಮೇಲ್ ವಿಳಾಸ ಮೂಲಕ ಸಂಪರ್ಕಿಸಿ ಅಭ್ಯರ್ಥಿಗಳು ಹತ್ತಿರದ ಉದ್ಯೋಗಾಧಿಕಾರಿ,ಜಿಲ್ಲಾ ಉದ್ಯೋಗ ವಿನಿÀಮಯ ಕಚೆÉೀರಿ, ಮೈಸೂರು ಇವರನ್ನು ಸಹ ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.