ರಾಷ್ಟ್ರೀಯ ಮಾನ್ಯತೆ ಮತ್ತು ಪ್ರಮಾಣೀಕರಣ ಮಂಡಳಿಯ ಸಲಹೆಗಾರರಾಗಿದ್ದ ಡಾ. ಜಗನ್ನಾಥ ಪಾಟೀಲ್ ಅವರು ಜಾಗತಿಕ ಗುಣಮಟ್ಟ ಖಾತರಿ ಸಂಸ್ಥೆಗಳಲ್ಲ್ಲಿ ಹೆಸರುವಾಸಿಯಾದ ಇಂಟರ್ ನ್ಯಾಷನಲ್ ನೆಟ್‍ವರ್ಕ್ ಫಾರ್ ಕ್ವಾಲಿಟಿ ಅಶುರೆನ್ಸ್ ಏಜೆನ್ಸಿಸ್ ಇನ್ ಹೈಯರ್ ಎಜುಕೇಶನ್ ( ಐನ್‍ಕ್ಯೂಎಎಹೆಇ)ನ ಅಧ್ಯಕ್ಷರಾಗಿ ಆಯ್ಕೆಗೊಡಿದ್ದಾರೆ. ಇದು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200 ಜಾಗತಿಕ ಸಂಸ್ಥೆಗಳ ಅಂತರಾಷ್ಟ್ರೀಯ ಜಾಲವಾಗಿದೆ. ಡಾ. ಪಾಟೀಲ್ ಈ ಹುದ್ದೆಗೇರಿದ ಮೊದಲನೆಯ ಭಾರತೀಯ ಹಾಗೂ ಏಷ್ಯನ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐನ್‍ಕ್ಯೂಎಎಹೆಇ ನ ಮುಖ್ಯ ಕಛೇರಿಯಾದ ಸ್ಪೇನ್‍ನಲ್ಲಿರುವ ಬಾರ್ಸಿಲೋನಿಯಾದಲ್ಲಿ ಚುನಾವಣೆಯ ಫಲಿತಾಂಶವನ್ನು ಇತ್ತೀಚಿಗೆ ಪ್ರಕಟಿಸಲಾಯಿತು
No comments:
Post a Comment