Friday, 27 February 2015

ಕೃಷ್ಣರಾಜಪೇಟೆ. ಮೈಸೂರು ವಿಶ್ವವಿದ್ಯಾನಿಲಯವು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಳೆದ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸದೇ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸುತ್ತಿರುವುದನ್ನು ಖಂಡಿಸಿ ಕರವೇ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ ಇಂದು ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಇಂದು ತಮ್ಮ ತರಗತಿಗಳನ್ನು ಬಹಿಷ್ಕರಿಸಿದ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಳೆದ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಸೆಮಿಸ್ಟರ್‍ಗಳ ಫಲಿತಾಂಶವನ್ನು ಪ್ರಕಟಿಸದೇ ನಿರ್ಲಕ್ಷ್ಯ ವಹಿಸಿರುವ ವಿಶ್ವವಿದ್ಯಾನಿಲಯವು ಮತ್ತೊಂದು ಸೆಮಿಸ್ಟರ್ ಪರೀಕ್ಷೆಯು ಆರಂಭವಾಗುವುದು ಇನ್ನು  ಒಂದು ವಾರವಿದೆ ಎನ್ನುವ ಸಂದರ್ಭದಲ್ಲಿ ಫಲಿತಾಂಶವನ್ನು ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವು ಹೆಚ್ಚಾಗಿ ಪರೀಕ್ಷೆ ಎದುರಿಸಲು ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ಕಳೆದ ಸೆಮಿಸ್ಟರ್ ಫಲಿತಾಂಶವನ್ನು ಪ್ರಕಟಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಹೆಚ್.ಎಲ್.ಶಿವರಾಂ ಅವರ ಮೂಲಕ ಸರ್ಕಾರ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಪ್ರತಿಭಟನೆಯಲ್ಲಿ ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ವೇಣು, ಪದಾಧಿಕಾರಿಗಳಾದ ವರುಣ್ ಕೆ.ವಿ, ಪವನ್, ಗಿರೀಶ್, ಭರತ್, ನಾಜಿಯಾತಬಸ್ಸುಂ, ಪೂಜಾ, ಸ್ಪೂರ್ತಿ, ನಂದಿನಿ, ಅರುಣಾ, ಶಹನಾಜ್, ಜಯಕುಮಾರ್, ಕುಮಾರಸ್ವಾಮಿ ಭಾಗವಹಿಸಿ ನೇತೃತ್ವ ವಹಿಸಿದ್ದರು.
ಚಿತ್ರಶೀರ್ಷಿಕೆ: 27-ಏಖPಇಖಿಇ-01 ಕೆ.ಆರ್.ಪೇಟೆ ಪಟ್ಟಣದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಸೆಮಿಸ್ಟರ್’ನ ಫಲಿತಾಂಶವನ್ನು ಪ್ರಕಟಿಸಲು ವಿಳಂಭ ದೋರಣೆಯನ್ನು ಅನುಸರಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯವೈಖರಿಯನ್ನು ಖಂಡಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿ, ಮೈಸೂರು ಚೆನ್ನರಾಯಪಟ್ಟಣ ರಸ್ತೆ ತಡೆ ನಡೆಸಿ ತಹಶೀಲ್ದಾರ್ ಶಿವರಾಂ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು.

No comments:

Post a Comment