Saturday, 28 February 2015

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ*
ಮಂಡ್ಯ : ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಸಾಧಕರನ್ನು ನಗರದ ಪೊಲೀಸ್ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.*
ಇಂದು ಶಾಲೆಯಲ್ಲಿ ಜರುಗಿದ 2014-15ನೇ ಸಾಲಿನ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪೋಷಕರ ಸಭೆ ಜರುಗಿತು.*
ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಯಲ್ಲಿಸಿ ಹೆಚ್.ಡಿ.ಚೌಡಯ್ಯ, ಕ್ರೀಡಾಕ್ಷೇತ್ರದಿಂದ ಪಿ.ಎಂ.ಸೋಮಶೇಖರ್, ಪತ್ರಿಕಾ ಛಾಯಾಗ್ರಾಹಕ ಹಾಗೂ ಜಿಲ್ಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೆ.ವೇಣುಗೋಪಾಲ್, ಜಿ.ಎಸ್.ಶಿವರುದ್ರಪ್ಪ, ತಬಲನಾಣಿ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.*
ನಂತರ ಮಾತನಾಡಿದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.*
ಕ್ರೀಡೆಯಲ್ಲಿ ಹೆಚ್ಚು ತೊಡಗಿಸುಕೊಂಡು ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು.  ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಷ್ಟ್ರಕ್ಕೆ ಕೀರ್ತಿ ತರಬೇಕೆಂದು ಹೇಳಿದರು.*
ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮೈಗೂಡಿಸಿಕೊಂಡು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.*
ಚಿಕ್ಕನಾಗೇಗೌಡ, ರುಸಿಯಾ ಸಾದತ್, ಖಾದರ್, ಶಿವಚಿದಂಬರ್, ರಾಜಶೇಖರ್, ಸೌಭಾಗ್ಯಮ್ಮ ಇತರರಿದ್ದಾರೆ.*
ಕೇಂದ್ರ ಬಜೆಟ್ -ಪ್ರಧಾನ ಮಂತ್ರಿ ಸ್ವಾಗತ

ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ ಅವರು ಲೋಕ ಸಭೆ ಯಲ್ಲಿ ಇಂದು ಮಂಡಿಸಿದ ಬರುವ ಸಾಲಿನ        ಆಯ -ವ್ಯಯ ಮುಂಗಡ ಪತ್ರ  ವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ . ಈ ಬಜೆಟ್ ಪ್ರಗತಿಶೀಲ , ಪ್ರಾಯೋಗಿಕ , ದೂರದೃಷ್ಟಿಯ ,ಸಕಾರಾತ್ಮಕ ಹಾಗೂ ಸ್ಪಷ್ಟ ಗುಣಾತ್ಮಕ ವಾಗಿದೆ ಎಂದು ಬಣ್ಣಿಸಿದ್ದಾರೆ .

ರೈತರು , ಬಡವರು, ಮಧ್ಯಮ ವರ್ಗದವರು , ಯುವ ಜನತೆ ಹಾಗೂ ಸಾಮಾನ್ಯ ಜನರ ಕಲ್ಯಾಣದತ್ತ  ಗಮನ ಹರಿಸಿದೆ ಎಂದಿದ್ದಾರೆ . ೨೦೨೨ ರ ಭಾರತ ಸ್ವಾತಂತ್ಯದ ಅಮೃತ ಮಹೋತ್ಸವದ ಹೊತ್ತಿಗೆ ದೇಶ ಸಾಧಿಸ ಬೇಕಾದ ಗುರಿಗಳನ್ನು ಅರ್ಥ ಸಚಿವರು ಪಟ್ಟಿ ಮಾಡಿರುವುದು ತಮಗೆ ಸಂತೋಷ ವುಂಟು ಮಾಡಿದೆ ಎಂದವರು ಹೇಳಿದ್ದಾರೆ.

ರಾಷ್ಟ್ರೀಯ ಆದ್ಯತೆ ಗಳನ್ನೂ ಗಮನ ದಲ್ಲಿರಿಸಿಕೊಂಡು ಅರ್ಥ ಸಚಿವರು ರಾಜ್ಯಗಳ  ಆಶೋತ್ತರಗಳ  ಈಡೆರಿಕೆಗೆ  ಪ್ರಯತ್ನ ಪಟ್ಟಿದ್ದಾರೆ .ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ .  ವಿಕಾಸದ ಹಳಿಯ ಮೇಲೆ ಕುಳಿತಾಗಿದೆ ,  ಹೊಸ  ಸಂವ್ರುದ್ದ್ದಿ ಯ ಉದಯವಾಗಲಿದೆ .     ಇದು 'ಎಲ್ಲರ ಬಜೆಟ್ ' ಎಂದು ಪ್ರಧಾನ ಮಂತ್ರಿ ಯವರು ಹರ್ಷ ವ್ಯಕ್ತ ಪಡಿಸಿದ್ದಾರೆ .

Friday, 27 February 2015

ಕೃಷ್ಣರಾಜಪೇಟೆ. ಮೈಸೂರು ವಿಶ್ವವಿದ್ಯಾನಿಲಯವು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಳೆದ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸದೇ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸುತ್ತಿರುವುದನ್ನು ಖಂಡಿಸಿ ಕರವೇ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ ಇಂದು ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಇಂದು ತಮ್ಮ ತರಗತಿಗಳನ್ನು ಬಹಿಷ್ಕರಿಸಿದ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಳೆದ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಸೆಮಿಸ್ಟರ್‍ಗಳ ಫಲಿತಾಂಶವನ್ನು ಪ್ರಕಟಿಸದೇ ನಿರ್ಲಕ್ಷ್ಯ ವಹಿಸಿರುವ ವಿಶ್ವವಿದ್ಯಾನಿಲಯವು ಮತ್ತೊಂದು ಸೆಮಿಸ್ಟರ್ ಪರೀಕ್ಷೆಯು ಆರಂಭವಾಗುವುದು ಇನ್ನು  ಒಂದು ವಾರವಿದೆ ಎನ್ನುವ ಸಂದರ್ಭದಲ್ಲಿ ಫಲಿತಾಂಶವನ್ನು ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವು ಹೆಚ್ಚಾಗಿ ಪರೀಕ್ಷೆ ಎದುರಿಸಲು ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ಕಳೆದ ಸೆಮಿಸ್ಟರ್ ಫಲಿತಾಂಶವನ್ನು ಪ್ರಕಟಿಸಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಹೆಚ್.ಎಲ್.ಶಿವರಾಂ ಅವರ ಮೂಲಕ ಸರ್ಕಾರ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಪ್ರತಿಭಟನೆಯಲ್ಲಿ ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ವೇಣು, ಪದಾಧಿಕಾರಿಗಳಾದ ವರುಣ್ ಕೆ.ವಿ, ಪವನ್, ಗಿರೀಶ್, ಭರತ್, ನಾಜಿಯಾತಬಸ್ಸುಂ, ಪೂಜಾ, ಸ್ಪೂರ್ತಿ, ನಂದಿನಿ, ಅರುಣಾ, ಶಹನಾಜ್, ಜಯಕುಮಾರ್, ಕುಮಾರಸ್ವಾಮಿ ಭಾಗವಹಿಸಿ ನೇತೃತ್ವ ವಹಿಸಿದ್ದರು.
ಚಿತ್ರಶೀರ್ಷಿಕೆ: 27-ಏಖPಇಖಿಇ-01 ಕೆ.ಆರ್.ಪೇಟೆ ಪಟ್ಟಣದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಸೆಮಿಸ್ಟರ್’ನ ಫಲಿತಾಂಶವನ್ನು ಪ್ರಕಟಿಸಲು ವಿಳಂಭ ದೋರಣೆಯನ್ನು ಅನುಸರಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯವೈಖರಿಯನ್ನು ಖಂಡಿಸಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿ, ಮೈಸೂರು ಚೆನ್ನರಾಯಪಟ್ಟಣ ರಸ್ತೆ ತಡೆ ನಡೆಸಿ ತಹಶೀಲ್ದಾರ್ ಶಿವರಾಂ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು.
    ದಿನಾಂಕ 28.02.2015 ರಂದು ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿZ್ಪ್ಮý, ಸಮಾರಂಭಕ್ಕೆ ಆಗಮಿಸುವ ವಾಹನಗಳ ನಿಲುಗಡೆ ಸಂಬಂಧವಾಗಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಠಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೋಲೀಸ್ ಆಗುತ್ತೆ ಕಛೇರಿಯ ಸಾರ್ವಜನಿಕ ಸಮರ್ಪಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಕ್ರ.ಸಂ
ವಾಹನಗಳ ಮಾದರಿ
ವಾಹನ ನಿಲುಗಡೆ ಸ್ಥಳ
1
ಅತಿಗಣ್ಯರುಗಳ  ವಾಹನಗಳು
ಮಹಾರಾಜ ಕಾಲೇಜು ಮೈದಾನದ ಜಿಮ್ನಾಷಿಯಂ ಕಟ್ಟಡದ ಮುಂಭಾಗ
2
ಚಲನಚಿತ್ರ ತಾರೆಯರು, ಶಾಸಕರು, ಲೋಕಸಭಾ ಸದಸ್ಯರುಗಳು, ವಾಹನಗಳು,
ಮಹಾರಾಜ ಕಾಲೇಜು ಮೈದಾನದ ವೇದಿಕೆ ಹಿಂಭಾಗ
3
ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು
ಮಹಾರಾಜ ಕಾಲೇಜು ಮೈದಾನದ ಜಿಮ್ನಾಷಿಯಂ ಕಟ್ಟಡದ ಹಿಂಭಾಗ
4
ಚಲನಚಿತ್ರ ತಾಂತ್ರಿಕ ವರ್ಗದವರ ವಾಹನಗಳು
ಬ್ಯಾಸ್ಕೇಟ್ ಬಾಲ್ ಮೈದಾನದ ಆವರಣದಲ್ಲಿ
5
ಮಾಧ್ಯಮದವರುಗಳ ವಾಹನ
ವಾಲಿಬಾಲ್ ಮೈದಾನ
6
ವಿಶೇಷ ಆಹ್ವಾನಿತರ ವಾಹನಗಳು
ಹಾಕಿ ಮೈದಾನದ ಆವರಣದಲ್ಲಿ
7
ಸಾರ್ವಜನಿಕರ ಎಲ್.ಎಂ.ವಿ. ವಾಹನಗಳು.
1 ಶತಮಾನೋತ್ಸವ ಭವನದ ಆವರಣ
2 ಜಯಚಾಮರಾಜೇಂದ್ರಅರಸು ಬೋರ್ಡಿಂಗ ಶಾಲೆ ಮೈದಾನ.
3 ವಿಶ್ವವಿದ್ಯಾನಿಲಯದ ಓವಲ್ ಮೈದಾನ
4 ಸರಸ್ವತಿಪುರಂ ಈಜುಕೊಳದ ರಸ್ತೆ,  ಮತ್ತು ಬೋಗಾದಿ ರಸ್ತೆ
8
ಸಾರ್ವಜನಿಕರ ದ್ವಿಚಕ್ರ ವಾಹನಗಳು
1 ಗೀತಾ ರಸ್ತೆ ರಾಮಸ್ವಾಮಿ ವೃತ್ತದಿಂದ ಹೊಟೇಲ್ ಏರ್‍ಲೈನ್ಸ್ ಜಂಕ್ಷನ್‍ವರೆಗೆ
2 ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ
3 ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ
4 ಕೆ.ಅರ್.ಬಿ. ರಸ್ತೆಯಲ್ಲಿ ಏಕಲವ್ಯ ವೃತ್ತ ದಿಂದ ವಾಣಿವಿಲಾಸ ರಸ್ತೆ ಜಂಕ್ಷನ್ ವರೆಗೆ
5 ಅಗ್ನಿಶಾಮಕ ಧಳದ ಕವಾಯಿತು ಮೈದಾನದಲ್ಲಿ

ಸಮಾರಂಭಕ್ಕೆ ಬರುವ ಸಾರ್ವಜನಿಕರು ನಿಗದಿ ಪಡಿಸಿರುವ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವಂತೆ  ರಸ್ತೆಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಮೈಸೂರು ನಗರ ಪೊಲೀಸ್ ಕಮೀಷನರ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ.


                                 
                                                                 
                                                             
ಲಕ್ಷ್ಮೀಪುರಂ ಪೊಲೀಸರಿಂದ 3 ಜನ ಮನೆ ಕಳ್ಳರ ಬಂಧನ.
ಒಟ್ಟು 1,40,000/- ಬೆಲೆಯ ಚಿನ್ನಾಭರಣ ಮತ್ತು ಬೆಳ್ಳಿ ವಶ.
******
         ದಿನಾಂಕ: 20/02/2015 ರಂದು ಲಕ್ಷ್ಮೀಪುರಂ ಪೊಲೀಸರು –
1) ರಾಕೇಶ್ ಬಿನ್ ಮಾದೇವ, 23 ವರ್ಷ, ಗಾಂಧಿ ನಗರ, ಮೈಸೂರು
2) ಪ್ರವೀಣ್ ಕುಮಾರ್ ಬಿನ್ ವೃಷಬೇಂದ್ರ, 23 ವರ್ಷ, ಬೆಲವತ್ತ ಮಂಟಿ, ಮೈಸೂರು
3) ರಾಘವೇಂದ್ರ ಬಿನ್ ಶಿವಣ್ಣ, 25 ವರ್ಷ, ಬೆಲವತ್ತ, ಮೈಸೂರು

  ಎಂಬುವವರುಗಳನ್ನು ದಸ್ತಗಿರಿ ಮಾಡಿ, ಸದರಿಯವರಿಂದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 1,40,000/- ಬೆಲೆಯ ಒಟ್ಟು 41 ಗ್ರಾಂ ಚಿನ್ನಾಭರಣ ಹಾಗೂ ಒಟ್ಟು 890 ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ಸಾರ್ವಜನಿಕ ಂಪರ್ಕಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

       ಇದರಿಂದ ಸರಸ್ವತಿಪುರಂ ಪೊಲೀಸ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿರುತ್ತದೆ.

      ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ. ಎಂ.ಎಂ. ಮಹದೇವಯ್ಯ ರವರು ಮತ್ತು ಕೃಷ್ಣರಾಜ ವಿಭಾಗದ ಎ.ಸಿ.ಪಿ. ರವರಾದ ಡಿ. ಧನಂಜಯ ರವರ ನೇತೃತ್ವದಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪಿ.ಎ. ಸಿದ್ದರಾಜು, ಉಪ ನಿರೀಕ್ಷಕರಾದ ಕುಮಾರ್ ಮತ್ತು ಸಿಬ್ಬಂದಿ ವರ್ಗದವರುಗಳು ಭಾಗವಹಿಸಿರುತ್ತಾರೆ.

                                           
                                         
                                   

Thursday, 26 February 2015

ಮಂಡ್ಯದ ಕಾವೇರಿ ನೀರಾವರಿ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ಮದ್ದೂರು ಶಾಸಕಾಂಗದ ಡಿ.ಸಿ.ತಮ್ಮಣ್ಣರವರು ಮದ್ದೂರು ಕ್ಷೇತ್ರಕ್ಕೆ ಸಂಬಂಧಪಟ್ಟ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.ಕಾರ್ಯಪಾಲಕ ಅಭಿನಯಂತರ ಕೆ.ಬಸವರಾಜೆಗೌಡ ಮತ್ತಿತರು ಇದ್ದರು.
ಮಂಡ್ಯ, ಫೆ.26 ನಗರ ವಾಸಿಗಳಿಗೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ತಮ್ಮ ಮನೆಯ ಅಂಗಳ ಅಥವಾ ತಾರಸಿಗಳಲ್ಲಿ ಬೆಳೆಸಿಕೊಳ್ಳುವುದರ ಜೊತೆಗೆ ಬಳಕೆ ಮಾಡಿಕೊಂಡು ಆರೋಗ್ಯ ಪೂರ್ಣ ಜೀವನ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯ, ಕೈತೋಟ/ತಾರಸಿ ತೋಟಗಳ ನಿರ್ಮಾಣ ನಿರ್ವಹಣೆ ಬಗ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಒಂದು ದಿನದ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
   ಆಸಕ್ತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾವ), ಮಂಡ್ಯರವರ ಕಚೇರಿಯಲ್ಲಿ ಅರ್ಜಿಯನ್ನು ಪಡೆದು  ಮಾರ್ಚ್ 5 ರ ಸಂಜೆ 4-00 ಗಂಟೆಯೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕು. ಈ ಯೋಜನೆಯಡಿ 500 ಜನ ಫಲಾನುಭವಿಗಳಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ನೊಂದಣಿ ಮಾಡಿಸಿಕೊಂಡ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಈ ಹಿಂದೆ ತರಬೇತಿ ಪಡೆದವರಿಗೆ ಮತ್ತೆ ತರಬೇತಿ ಪಡೆಯಲು ಅವಕಾಶವಿಲ್ಲ.
       ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾಜ್ಯವಲಯ), ಮಂಡ್ಯ (ದೂರವಾಣಿ ಸಂಖ್ಯೆ 08232-220325(ಹಾರ್ಟಿ ಕ್ಲಿನಿಕ್), 08232-220115 - ಕಚೇರಿ) ರವರವನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ಷಿಕ ವಿಶೇಷ ಶಿಬಿರ
ರಾಷ್ಟ್ರೀಯ ಸೇವಾ ಯೋಜನೆ ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ (ರಾಜ್ಯ ಎನ್.ಎಸ್.ಎಸ್. ಪ್ರಶಸ್ತಿ ಮತ್ತು ರಾಷ್ಟ್ರೀಯ ಇಂದಿರಾಗಾಂಧಿ ಎನ್.ಎಸ್.ಎಸ್. ಪ್ರಶಸ್ತಿ ಪುರಸ್ಕøತ ಸಂಸ್ಥೆ) ಹಾಗೂ ಪುರ ಗ್ರಾಮಸ್ಥರು ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 5 ರವರೆಗೆ ಮಂಡ್ಯ ತಾಲ್ಲೂಕು ಪುರ ಗ್ರಾಮದಲ್ಲಿ ವಾರ್ಷಿಕ ವಿಶೇಷ ಶಿಬಿರ ಘಟಕ 1 ಮತ್ತು ಘಟಕ 2 ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಫೆ.27 ರಂದು ಮೈಸೂರು ವಿಭಾಗೀಯ ಮಟ್ಟದ ಸಂವೇದನಾಶೀಲ ಕಾರ್ಯಾಗಾರ
   ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ(ರಿ), ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ-2012 ಹಾಗೂ ಮಕ್ಕಳ ಸಾಗಾಣಿಕೆಯ ವ್ಯಾಪ್ತಿ, ಸ್ವರೂಪ, ಕಾರಣಗಳು ಮತ್ತು ವಿಧಗಳು ಹಾಗೂ ಸಾಗಾಣಿಕೆ ತಡೆಗಟ್ಟುವ ಬಗ್ಗೆ ಸಂವೇದನಾಶೀಲ ಕಾರ್ಯಗಾರವನ್ನು ಫೆಬ್ರವರಿ 27 ರಂದು ಬೆಳಿಗ್ಗೆ 10 ಗಂಟೆಗೆ  ಮಂಡ್ಯ ಪಿ.ಇ.ಎಸ್. ಇಂಜಿನಿಯರಿಂಗ್  ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹಿರಿಯ ಪ್ರಧಾನ ಸಿವಿಲ್ ನ್ಯಾಯಧೀಶರಾದ ಸದಾನಂದ ಎಂ.ದೊಡ್ಡಮನಿ ಅವರು ಅಧ್ಯಕ್ಷತೆ ವಹಿಸುವರು.

ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಗಳಿಗೆ ಸರ್ಕಾರದ ಸಂಪನ್ಮೂಲಗಳ ಕಡಿತ
ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಗಳಿಗೆ ಸರ್ಕಾರ ನೀಡುವ ಇತರ ಸಂಪನ್ಮೂಲಗಳನ್ನು ಕಡಿತಗೊಳಿಸಲಾಗುವುದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿಗೌಡ ಹೇಳಿದ್ದಾರೆ.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಮೈಸೂರು, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬ್ರಹ್ಮದೇವರಹಳ್ಳಿ ಹಾಗೂ ಶಿಶು ಅಭಿವೃಧ್ಧಿ ಇಲಾಖೆ, ಶಿಕ್ಷಣ ಇಲಾಖೆ , ಆರೋಗ್ಯ ಇಲಾಖೆ, ನಾಗಮಂಗಲ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕೊಣನೂರಿನಲ್ಲಿ ಜರುಗಿದ ಸ್ವಚ್ಚ ಭಾರತ್ ಅಭಿಯಾನ, ಹೆಣ್ಣು ಶಿಶು ರಕ್ಷಿಸಿ-ಶಿಕ್ಷಣ ಕೊಡಿಸಿ ಹಾಗೂ ಪ್ರಧಾನ ಮಂತ್ರಿ ಜನ-ಧನ ಯೋಜನೆ ಕುರಿತಾದ ವಿಶೇಷ ವಿಸ್ತøತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
   ಗ್ರಾಮಿಣ ಭಾಗದಲ್ಲಿ ಜನರ ಜೀವನ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಸ್ವಚ್ಛ ಭಾರತ, ಜನ-ಧನ ಯೋಜನೆಗಳು ಅತ್ಯಂತ ಮಹತ್ವದ್ದಾಗಿದ್ದು ಜನರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತಿ ಅಧ್ಯಕ್ಷ ಮೂಡ್ಲಿಗೌಡ ಸರ್ಕಾರ ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳಿಗೆ ನೀಡುವ ಸೌಲಭ್ಯಗಳನ್ನು ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಅಂತಹ ಕುಟುಂಬಗಳು ಸಾಮಾಜಿಕವಾಗಿ ಮುಂದೆ ಬರುವಂತೆ ಪ್ರೇರೇಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಮಂಜುಳಾ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ, ಮೈಸೂರು ಘಟಕದ ಸಹಾಯಕ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ಆದಿಚುಂಚನಗಿರಿ ಮಠದ ಸಲಹೆಗಾರ ಅಮರನಾರಾಯಣ, ಗ್ರಾಮ ಪಂಚಾಯತಿ ಸದಸ್ಯ ಮಹಾದೇವ, ಗ್ರಾಮದ ಮುಖಂಡ ಮಹಾಬಲೇಶ್ವರ, ಶಿವಣ್ಣೇಗೌಡ, ಶ್ರೀನಿವಾಸಯ್ಯ, ಪಿ.ಡಿ.ಓ ಶ್ರೀಕಂಠ, ಕಾರ್ಯದರ್ಶಿ ರಂಗಸ್ವಾಮಿ ಹಾಗೂ ಸಿಬ್ಬಂದಿ ವರ್ಗ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು, ಯುವ ಮುಖಂಡ ಧನಂಜಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸ್ವಚ್ಚ ಭಾರತ್ ಅಭಿಯಾನ, ಹೆಣ್ಣು ಶಿಶು ರಕ್ಷಿಸಿ-ಶಿಕ್ಷಣ ಕೊಡಿಸಿ ಹಾಗೂ ಪ್ರಧಾನ ಮಂತ್ರಿ ಜನ-ಧನ ಯೋಜನೆ ಕುರಿತು ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ರ್ಯಾಲಿ ಏರ್ಪಡಿಸಿದ್ದು, ರಸ ಪ್ರಶ್ನೆ ಮೂಲಕ ಬಹುಮಾನಗಳನ್ನು ವಿತರಿಸಲಾಯಿತು.
ಐನ್‍ಕ್ಯೂಎಎಹೆಇ ಅಧ್ಯಕ್ಷರಾಗಿ ಡಾ. ಜಗನ್ನಾಥ ಪಾಟೀಲ್ 
ರಾಷ್ಟ್ರೀಯ ಮಾನ್ಯತೆ ಮತ್ತು ಪ್ರಮಾಣೀಕರಣ ಮಂಡಳಿಯ ಸಲಹೆಗಾರರಾಗಿದ್ದ ಡಾ. ಜಗನ್ನಾಥ ಪಾಟೀಲ್ ಅವರು ಜಾಗತಿಕ ಗುಣಮಟ್ಟ ಖಾತರಿ ಸಂಸ್ಥೆಗಳಲ್ಲ್ಲಿ ಹೆಸರುವಾಸಿಯಾದ ಇಂಟರ್ ನ್ಯಾಷನಲ್ ನೆಟ್‍ವರ್ಕ್ ಫಾರ್ ಕ್ವಾಲಿಟಿ ಅಶುರೆನ್ಸ್ ಏಜೆನ್ಸಿಸ್ ಇನ್ ಹೈಯರ್ ಎಜುಕೇಶನ್ ( ಐನ್‍ಕ್ಯೂಎಎಹೆಇ)ನ ಅಧ್ಯಕ್ಷರಾಗಿ ಆಯ್ಕೆಗೊಡಿದ್ದಾರೆ. ಇದು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200 ಜಾಗತಿಕ ಸಂಸ್ಥೆಗಳ ಅಂತರಾಷ್ಟ್ರೀಯ ಜಾಲವಾಗಿದೆ. ಡಾ. ಪಾಟೀಲ್ ಈ ಹುದ್ದೆಗೇರಿದ ಮೊದಲನೆಯ ಭಾರತೀಯ ಹಾಗೂ ಏಷ್ಯನ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐನ್‍ಕ್ಯೂಎಎಹೆಇ ನ ಮುಖ್ಯ ಕಛೇರಿಯಾದ ಸ್ಪೇನ್‍ನಲ್ಲಿರುವ ಬಾರ್ಸಿಲೋನಿಯಾದಲ್ಲಿ ಚುನಾವಣೆಯ ಫಲಿತಾಂಶವನ್ನು ಇತ್ತೀಚಿಗೆ ಪ್ರಕಟಿಸಲಾಯಿತು

ಭಾರತ ಸರ್ಕಾರದ ವಾರ್ತಾ ಶಾಖೆ
ಬೆಂಗಳೂರು
********
ಮುಖ್ಯಮಂತ್ರಿಗಳಿಗೆ ಪ್ರಧಾನಿ ಪತ್ರ

ಫೆಬ್ರವರಿ 26. 2015
14ನೆಯ ಹಣಕಾಸು ಆಯೋಗದ ಶಿಫಾರಸುಗಳನ್ನು ತುಂಬುಹೃದಯದಿಂದ ಸ್ವೀಕರಿಸಬೇಕಾಗಿ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ :
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ನಾನು ನಮ್ಮ ಸಂಯುಕ್ತ ರಾಜ್ಯಾಡಳಿತವನ್ನು ಸದೃಢಗೊಳಿಸಿ, ಸಹಕಾರಿ ಒಕ್ಕೂಟವನ್ನು  ಉತ್ತೇಜಿಸುವೆಡೆ ಕಾರ್ಯೋನ್ಮುಖನಾಗಿದ್ದೇನೆ.  ನಮ್ಮ ದೇಶದ ಜನತೆಗೆ ಅವರ ಸರ್ಕಾರದಿಂದ ಅತೀವ ನಿರೀಕ್ಷೆಗಳಿವೆ. ಆದರೆ, ಅವರು ಕಾಯಲು ಸಿದ್ಧರಿಲ್ಲ. ಆದ್ದರಿಂದ ಪ್ರಾರಂಭದಿಂದಲೇ ನಾವು ಬೆಳವಣಿಗೆಯ ಸಮಗ್ರ ಮತ್ತು ಕ್ಷಿಪ್ರ ಪ್ರಕ್ರಿಯೆಗೆ ಬದ್ಧರಾಗಿದ್ದೇವೆ. ದೇಶದ ವೈವಿಧ್ಯತೆಯನ್ನು ಗಮನಿಸಿ, ನೈಜ ಮತ್ತು ಕಾರ್ಯೋನ್ಮುಖ ಸಂಯುಕ್ತ ಆಡಳಿತವೊಂದೇ ಈ ಗುರಿಯನ್ನು ಕ್ಷಿಪ್ರ ಮತ್ತು ಸಮಗ್ರವಾಗಿ ಸಾಧಿಸುವ ಏಕೈಕ ವಾಹನ ಎಂಬುವುದನ್ನು ನಾವು ತಿಳಿದುಕೊಂಡಿದ್ದೇವೆ.
ಸದೃಢ ರಾಜ್ಯಗಳು ಸದೃಢ ಭಾರತದ ಮೈಲಿಗಲ್ಲು ಎಂಬುವುದನ್ನು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ. ಮುಖ್ಯಮಂತ್ರಿಯಾಗಿದ್ದಾಗಲೂ ನಾನು ‘ರಾಜ್ಯಗಳ ಪ್ರಗತಿಯ ಮೇಲೆ ದೇಶದ ಪ್ರಗತಿ ಆಧರಿತವಾಗಿದೆ’ ಎಂದು ಹೇಳುತ್ತಲೇ ಇದ್ದೆ.  ಹಾಗಾಗಿ, ಈ ಸರ್ಕಾರ ಎಲ್ಲ ರೀತಿಯಲ್ಲೂ ರಾಜ್ಯಗಳ ಸಬಲೀಕರಣದ ಆಲೋಚನೆಗೆ ಬದ್ಧವಾಗಿದೆ. ಆರ್ಥಿಕ ವಿವೇಚನೆ ಮತ್ತು ಶಿಸ್ತುಗಳನ್ನು ಗಮನದಲ್ಲಿರಿಸಿ ಹೆಚ್ಚಿನ ಹಣಕಾಸು ಬಲ ಮತ್ತು ಸ್ವಾತಂತ್ರ್ಯಗಳನ್ನು ಹೊಂದುವ ಮೂಲಕ ರಾಜ್ಯಗಳಿಗೆ ತಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳ ರೂಪುರೇಷೆ ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ನಾವು ನಂಬಿದ್ದೇವೆ. ಇವುಗಳಿಲ್ಲದೆ ಸ್ಥಳೀಯ ಅಭಿವೃದ್ಧಿ ಆವಶ್ಯಕತೆಗಳನ್ನು ಪೂರೈಸಲು ಮತ್ತು ಹಿಂದುಳಿದ ವರ್ಗಗಳ ಹಾಗೂ ಹಿಂದುಳಿದ ಪ್ರದೇಶಗಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಿಲ್ಲ ಎಂಬುವುದನ್ನು ನಾವು ಇಲ್ಲಿ ಸ್ಪಷ್ಟ ಪಡಿಸುತ್ತೇವೆ.
ಈ ಎಲ್ಲ ಅಂಶÀಗಳನ್ನು ಗಮನದಲ್ಲಿರಿಸಿ ನಾವು ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗವನ್ನು ಪರಿಚಯಿಸಿದ್ದೇವೆ. ಅಭಿವೃದ್ಧಿಯ ರಾಷ್ಟ್ರೀಯ ದೃಷ್ಟಿಕೋನವನ್ನು ಹಂಚಿಕೊಳ್ಳಲು ಇದೊಂದು ಸಾಮಾನ್ಯ ವೇದಿಕೆಯಾಗಲಿದೆ ಎಂಬ ಸ್ಪಷ್ಟ ಉದ್ದೇಶದಿಂದ ಈ ಆಯೋಗವನ್ನು ಪ್ರಾರಂಭಿಸಲಾಗಿದೆ. 14ನೆಯ ಹಣಕಾಸು ಆಯೋಗ ರಾಜ್ಯಗಳಿಗೆ ನೀಡುವ ಸಂಪನ್ಮೂಲಗಳ ವಿಕೇಂದ್ರೀಕರಣದಲ್ಲಿ ಶೇ 10 ರಷ್ಟು ದಾಖಲೆ ಪ್ರಮಾಣದ ಏರಿಕೆಗೆ ಶಿಫಾರಸು ಮಾಡಿದೆ. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ ತೀವ್ರ ಹೊರೆ ಬೀಳಲಿದೆ. . ಆದರೂ, ನಿಮ್ಮ ಅಗತ್ಯತೆ ಮತ್ತು ಪ್ರಾಧಾನ್ಯತೆಗೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಿಸುವ ಮತ್ತು ಅನುಷ್ಠಾನಕ್ಕೆ ತರುವಲ್ಲಿ ನಿಮ್ಮ ಕೈಜೋಡಿಸುವ ಉದ್ದೇಶದಿಂದ ನಾವು 14ನೆಯ ಹಣಕಾಸು ಆಯೋಗದ ಶಿಫಾರಸುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇವೆ.
14ನೆಯ ಹಣಕಾಸು ಆಯೋಗ ಹಣಕಾಸು ಆದಾಯ ವೆಚ್ಚಗಳ ವಿನ್ಯಾಸದಲ್ಲಿ ಮೂಲಭೂತ ವರ್ಗಾವಣೆÉಯನ್ನು ಮಾಡಿದೆ. ಇನ್ನು ಮುಂದೆ ರಾಜ್ಯ ಯೋಜನಾ ಆದಾಯ ವೆಚ್ಚಗಳಿಗೆ ನೀಡಲ್ಪಡುವ ಕೇಂದ್ರ ಸಹಾಯ ರಾಜ್ಯದ ಆರ್ಥಿಕ ಹೊರೆಯ ಭಾಗವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರದ ಯೋಜನೆ ಮತ್ತು ಅನುದಾನ ಆಧರಿತ ಬೆಂಬಲ ಇನ್ನು ಮುಂದೆ ವಿಕೇಂದ್ರೀಕರಣ ಆಧರಿತವಾಗಲಿದೆ.
14ನೆಯ ಹಣಕಾಸು ಆಯೋಗದ ಪ್ರಕಾರ ರಾಜ್ಯ ವಿಕೇಂದ್ರಿತ  ಸಂಪನ್ಮೂಲಗಳಿಗಷ್ಟೇ ರಾಜ್ಯ ಯೋಜನಾ ಆದಾಯ ವೆಚ್ಚ ಮೀಸಲಿರಬೇಕು.  ಇದಕ್ಕೆ ಹೊರತಾಗಿ ಕೆಲವು ರಾಷ್ಟ್ರೀಯ ಪ್ರಧಾನ್ಯತೆಯುಳ್ಳ ಕಾರ್ಯಕ್ರಮಗಳಾದ ನರೇಗಾ, ಬಡತನ ನಿರ್ಮೂಲನೆ, ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಕೃಷಿ ಮತ್ತು ಇನ್ನಿತರ ಕ್ಷೇತ್ರಗಳಿಗೆ ಈಗಿರುವ ಹಣಕಾಸು ಬೆಂಬಲವನ್ನೇ ಮುಂದುವರೆಸಲು ನಾವು ನಿರ್ಧರಿಸಿದ್ದೇವೆ.
ಈ ಹಣಕಾಸು ಆಯೋಗದ ಶಿಫಾರಸುಗಳನ್ನು ಸ್ವೀಕರಿಸುವ ಮೂಲಕ ನಾವು ಕಠಿಣ ಕೇಂದ್ರೀಕೃತ ಯೋಜನೆಯಿಂದ ದೂರ ಸಾಗಿ  ‘ ಒನ್ ಸೈಜ್ ಫಿಟ್ ಫಾರ್ ಆಲ್’ ( ಒಂದೇ ಗಾತ್ರ ಮತ್ತು ಎಲ್ಲರಿಗೂ ಸೂಕ್ತವಾದ) ವಿಧಾನದೆಡೆ ಸಾಗುತ್ತಿದ್ದೇವೆ.  ಕೇಂದ್ರ ಬೆಂಬಲಿತ  ಯೋಜನೆಗಳಲ್ಲಿ  ಮತ್ತು ಕಾರ್ಯಕ್ರಮಗಳಲ್ಲಿ ಬದಲಾಣೆ ತರಲು ರಾಜ್ಯಗಳು ಸಂಪೂರ್ಣ ಸ್ವಾತಂತ್ರ್ಯ ಹೊಂದಿವೆ. ಆಲೋಚನೆ , ಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಕೇಂದ್ರ ಸರ್ಕಾರ , ಅದರಲ್ಲೂ ನೀತಿ ಆಯೋಗ ಒಂದು ನಿರ್ಧಿಷ್ಟ ವಿಧಾನವನ್ನು ಅಭಿವೃದ್ಧಿ ಪಡಿಸಿ ಅದನ್ನು ಅಳವಡಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡಲಿದೆ.
ಸಂಪನ್ಮೂಲಗಳು ಸರಿಯಾದ ಜಾಗವನ್ನು ತಲುಪುತ್ತಿವೆ. ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಠಿ, ವಸತಿ, ಕುಡಿಯುವ ನೀರು, ರಸ್ತೆ ನಿರ್ಮಾಣ, ಶಾಲೆ, ಆಸ್ಪತ್ರೆಗಳ ನಿರ್ಮಾಣ ಇವುಗಳಿಗಾಗಿ ಸಂಪನ್ಮೂಲ ವಿನಿಯೋಗವಾಗುತ್ತಿದೆ.
ನಾವು ಇತ್ತೀಚಿಗೆ ಖನಿಜಗಳ ಮೇಲಿನ ರಾಯಧನಗಳನ್ನು ಪರಿಷ್ಕರಿಸಿದ್ದೇವೆ.  ಇದರಿಂದಾಗಿ ರಾಜ್ಯಗಳಿಗೆ ಪ್ರಯೋಜನವಾಗಲಿದೆ. ಕಲ್ಲಿದ್ದಲು ಮತ್ತು ಇತರ ಖನಿಜಗಳ ಪಾರದರ್ಶಕ ಹರಾಜಿನಿಂದ  ಅವನ್ನು ಹೊಂದಿರುವ ರಾಜ್ಯಗಳ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಹರಿದು ಬರಲಿದೆ.
 ದೇಶದ ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಗೆ ಇದೊಂದು ಸುವರ್ಣ ಅವಕಾಶ.  ಭಾರತದಲ್ಲಿ ಹಣ ಹೂಡುವ ಬಗ್ಗೆ ಹೊರದೇಶಗಳಿಗೆ ಅತೀವ ಆಸಕ್ತಿ ಇದೆ.  ನಮ್ಮ ದೇಶದ ಬಗ್ಗೆ ಹೊರದೇಶಗಳಿಗೆ ಅಪಾರ ಆಶಾವಾದವಿರುವುದನ್ನು ನನ್ನ ಇತ್ತೀಚಿನ ಪ್ರಪಂಚ ಪರ್ಯಟನೆ ತೋರಿಸಿಕೊಟ್ಟಿದೆ.  ಭಾರತದ ಬೆಳವಣಿಗೆಯ ಯಶೊಗಾಥೆಯಲ್ಲಿ ಎಲ್ಲರೂ ಭಾಗವಾಗಲು ಇಚ್ಛಿಸುತ್ತಿದ್ದಾರೆ.  ಇದು ಕೇವಲ ಕೇಂದ್ರ ಸರ್ಕಾರಕ್ಕೆ ಸಿಕ್ಕ ಅವಕಾಶವಲ್ಲ ಬದಲಾಗಿ ಇಡೀ ದೇಶಕ್ಕೇ ಸಿಕ್ಕ ಅವಕಾಶ.
ದೇಶದ ಪ್ರಗತಿ ಪ್ರಕ್ರಿಯೆಯಲ್ಲಿ ಕ್ಷಿಪ್ರ ಮುನ್ನಡೆಯನ್ನು ಸಾಧಿಸುವ ಗುರಿಯನ್ನು ಹೊಂದೋಣ.  ನಿಮ್ಮ ರಾಜ್ಯಗಳಲ್ಲಿರುವ ಪ್ರಮುಖ ಸವಾಲುಗಳನ್ನು ವ್ಯಾಖ್ಯಾನಿಸುವಲ್ಲಿ ನಿಮ್ಮ ಬೆಂಬಲ ಮತ್ತು ಒಳಗೊಳ್ಳುವಿಕೆಯನ್ನು ಯಾಚಿಸಲು ಮತ್ತು ಆ ಸವಾಲುಗಳ ಎದುರಿಸಲು ಸಮಯ, ಸಂಪನ್ಮೂಲ ಮತ್ತು ಶಕ್ತಿಯನ್ನು ಮೀಸಲಿಡಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.  ಎಲ್ಲ ರಾಜ್ಯಗಳು ತಮ್ಮ ಪ್ರಮುಖ ಆದ್ಯತಾ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವಕ್ಕಾಗಿ ಸಂಪನ್ಮೂಲಗಳನ್ನು ಮೀಸಲಿಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಯೋಜನೆಗಳ ಮೌಲ್ಯಮಾಪನಕ್ಕಾಗಿ ನಾವೊಂದು ಕಠಿಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಈ ಪ್ರಯತ್ನದಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಗುಣಮಟ್ಟದ ಕೆಲಸ ಮತ್ತು ಅದರ ಕ್ಷಿಪ್ರ ಅನುಷ್ಠಾನದಲ್ಲಿ ನಾವು ಮಾನದಂಡ ಸ್ಥಾಪಿಸಬೇಕು. ಬನ್ನಿ. . . …ಈ ನಿಟ್ಟಿನಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸೋಣ. ಇದಕ್ಕೆ ಸಂಬಂಧಿಸಿದಂತೆ ಸಮಾಲೋಚನೆಗೆ ನಾನು ಯಾವುದೇ ಹೊತ್ತಿನಲ್ಲಿ ಲಭ್ಯನಾಗಿದ್ದೇನೆ.
************

ಹಂದಿಜ್ವರಕ್ಕೆ ಉಚಿತ ಔಷಧಿ ವಿತರಣೆ ಶಿಬಿರ
ಮೈಸೂರು.ಫೆ.26-ನಗರದ ಅಗ್ರಹಾರ ವೃತ್ತದ ಬಳಿಯಿರುವ ಹೊಸಮಠ ಹೋಮಿಯೋಪಥಿಕ್ ಸೆಂಟರ್ ಇದೇ ತಿಂಗಳ 26ರಂದು ಬೆಳಗ್ಗೆ 9.30ರಿಂದ ಸಂಜೆ 6.30ರವೆಗೆ ಹಂದಿ   ಊ1-ಓ1 ಕಾಯಿಲೆಗೆ ಉಚಿತ ರೋಗ ನಿರೋಧಕ ಔಷಧಿ ವಿತರಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಆಸ್ಪತ್ರೆಯನ್ನು ಸಂಪರ್ಕಿಸಿ ಈ ರೋಗ ಲಕ್ಷಣಗಳ ಬಗ್ಗೆ ಸೂಕ್ತ ಸಲಹೆಗಳನ್ನು ಪಡೆದು ಕೊಳ್ಳುವುದರ ಜೊತೆಗೆ ರೋಗಕ್ಕೆ ಬೇಕಾದ ಔಷಧಿಯನ್ನು ಪಡೆದು ಕೊಳ್ಳಬೇಕೆಂದು ಹೋಮಿಯೋಪಥಿಕ್ ಸೆಂಟರ್ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ
ಹೆಚ್ಚಿನ ಮಾಹಿತಿಗಾಗಿ 8151837131, 8496809467 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ. 

Friday, 13 February 2015

ವಸ್ತುಪ್ರದರ್ಶನ ಸಮಿತಿ ವತಿಯಿಂದ ಆಹಾರ ಮೇಳದ ಪೋಸ್ಟರ್ ನ್ನ ಸಮಿತಿಯ ಅಧ್ಯಕ್ಷರಾದ ಶಾಸಕಾಂಗದ ರಮೇಶ್ ಬಾಬು ಬಿಡುಗಡೆ ಮಾಡಿದರು, ಸಂದರ್ಭದಲ್ಲಿ ಜಿಲ್ಲಧಿಕಾರಿ ಅಜಯ್ ನಾಗಭೂಷಣ್,ಮತ್ತಿತರ ರು ಉಪಸ್ತಿತರಿದ್ದರು

Tuesday, 10 February 2015

ಪತ್ರಿಕಾ ಗೋಷ್ಠಿ ಯಲ್ಲಿ ನಿವ್ರತ್ತ ಐಎಎಸ್ ಅಧಿಕಾರಿಗಳಾದ ಟಿ.ತಿಮ್ಮೇಗೌಡ,ಅಮರನಾರಯಣ್,ಮಾತನಾಡಿದರು.

Saturday, 7 February 2015

ಜನಜಾಗ್ರುತಿ ಕಾರ್ಯವನ್ನು ಸಮಾಜ ಕಲ್ಯಾಣ ಸಚಿವ ಆಂಜನೇಯ ಉದ್ಘಾಟಿಸಿದರು ಸಂದರ್ಭದಲ್ಲಿ ವಸತಿ ಸಚಿವ ಅಂಬರೀಷ್ ,ಸಂಸದ ಸಿಎಸ್.ಪುಟ್ಟರಾಜು,ಶಾಸಕ ಡಿ. ಸಿ.ತಮ್ಮಣ್ಣ,ಎಂ.ಬಿ.ಶ್ರೀ ನಿವಾಸದ ಉಪಸ್ತಿತರಿದ್ದರು.

Thursday, 5 February 2015

ಫೆ.9 ರಂದು ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಪೈಲೆಟ್್ ಸರ್ವೆ

ಮೈಸೂರು,ಫೆ.6-ಮೈಸೂರು ಜಿಲ್ಲೆಯಲ್ಲಿ    ಏಪ್ರಿಲ್ 11 ರಿಂದ 30 ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಿಂದ ಫೆಬ್ರವರಿ 9 ರಂದು ಸಿದ್ದರಾಮಯ್ಯನಹುಂಡಿ ಹಾಗೂ ಸರಸ್ವತಿಪುರಂನಲ್ಲಿರುವ ವಾರ್ಡ್ ನಂ 20 ರಲ್ಲಿ ಪೈಲೆಟ್ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆಬ್ರವರಿ 9 ರಂದು  ನಡೆಯುವ ಮಾದರಿ ಸಮೀಕ್ಷೆಯಲ್ಲಿ ಯಾವುದೇ ತೊಂದರೆ ಇದ್ದಲ್ಲಿ ಅದನ್ನು ಸರಿಪಡಿಸಿ ಏಪ್ರಿಲ್ 11 ರಿಂದ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು.
ಜಾತಿ, ಉಪಜಾತಿ, ಆಧಾರ್‍ಕಾರ್ಡ್, ವಿವಾಹ, ಧರ್ಮ ಇತ್ಯಾದಿ ವಿಷಯಗಳ ಬಗ್ಗೆ 55 ಪ್ರಶ್ನೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಗಣತಿದಾರರು ನಮೂನೆ 3ನ್ನು ಭರ್ತಿ ಮಾಡಬೇಕಿರುತ್ತದೆ. ಈ ಪ್ರಶ್ನಾವಳಿಗಳಿಗೆ ಯಾವುದೇ ಗೊಂದಲ್ಲವಿಲ್ಲದೆ ಮಾಹಿತಿ ನೀಡುವ ರೀತಿ ಸಿದ್ದಪಡಿಸಲಾಗಿದೆ. ಗಣತಿದಾರರು ಅವರಿಗೆ ನೀಡುವ  ಕೈಪಿಡಿಯನ್ನು ಸಂಪೂರ್ಣವಾಗಿ ಓದಿಕೊಂಡರೆ   ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.
ಹಿಂದುಳಿದ ವರ್ಗದ ಆಯೋಗದಿಂದ 1357 ಜಾತಿಗಳ ಪಟ್ಟಿ ಮಾಡಲಾಗಿದೆ ಈ ಪಟ್ಟಿ ಅಂತಿಮವಾದ ಅಥವಾ ಅಧಿಕೃತ ಪಟ್ಟಿಯಲ್ಲ.  ಸಂಪೂರ್ಣ ಸಮೀಕ್ಷೆಯ ನಂತರ  ಜಾತಿಯ ಪಟ್ಟಿಯಲ್ಲಿ ಏರಿಕೆ ಅಥವಾ ಇಳಿಕೆಯಾಗಬಹುದು. ಕೈಪಿಡಿಯಲ್ಲಿ ಜಾತಿಯ ಹೆಸರು ಮತ್ತು ಕೋಡ್ ಇಲ್ಲದಿದ್ದರೆ ಅದಕ್ಕೆ ಸಮೀಕ್ಷೆ ಮುಗಿದ ನಂತರ ಹೊಸ ಕೋಡ್ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದರು.
ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಮನೆಯ ಅಧಿಕೃತ ವ್ಯಕ್ತಿಯಿಂದ ಮಾಹಿತಿ ಹಾಗೂ ಸಹಿ ಪಡೆಯಬೇಕು. ಬೇರೆಯವರಿಂದ ಮಾಹಿತಿ ಪಡೆಯುವುದು ಕಂಡುಬಂದರೆ ಗಣತಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಣತಿದಾರರು ಸಮೀಕ್ಷೆ ನಡೆಸುವಾಗ ಮನೆಯ ಅಧಿಕೃತ ವ್ಯಕ್ತಿಯೊಂದಿಗೆ ಅಕ್ಕ ಪಕ್ಕದ ಮನೆಯವರನ್ನು ಸೇರಿಸಿಕೊಂಡರೆ ಸಮೀಕ್ಷೆಯ ಮಾಹಿತಿಯನ್ನು ಸರಿಯಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಗುಂಪು ಮಾಡಿಕೊಂಡು ಮಾಹಿತಿ ಪಡೆಯಬಾರದು ಎಂದರು.
ಗಣತಿದಾರರು ಪ್ರಶ್ನಾವಳಿಗಳಿಗೆ ಸಾರ್ವಜನಿಕರಿಂದ ಕೋಡ್‍ನ ಮೂಲಕ ಉತ್ತರ ಪಡೆಯಬಾರದು. ಅವರಿಂದ ಮಾಹಿತಿ ಪಡೆದ ನಂತರ ಕೈಪಿಡಿಯಲ್ಲಿ ನೀಡಿರುವ ಕೋಡ್‍ಗಳನ್ನು ತಿಳಿದುಕೊಂಡು ನಮೂನೆ ಭರ್ತಿ ಮಾಡಬೇಕು ಎಂದರು.
ಚಾರ್ಚ್ ಅಧಿಕಾರಿಗಳಿಂದ ಅವರ ವ್ಯಾಪ್ತಿಗೆ ಸಂಬಂಧಿಸಿದಂತೆ ಗಣತಿದಾರರು ಹಾಗೂ ಮೇಲ್ವಿಚಾರಕರ ನೇಮಕಾತಿಯ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಶಿಖಾ, ಅಪರ ಜಿಲ್ಲಾಧಿಕಾರಿ ಅರ್ಚನ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Sunday, 1 February 2015

ಮಂಡ್ಯ ಅಮೃತ ಮಹೋತ್ಸ ವ ಕಾರ್ಯಕ್ರಮ ಉದ್ಘಾಟನೆಗೆ ಬರುವಂತೆ ಜಿಲ್ಲಾಉಸ್ತುವಾರಿ ಸಚಿವ ಅಂಬರೀಷ್ರವರು ಆಹ್ವಾನಿಸಿದರು ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ,ಕೆ.ಸಿ.ನಾರಾಯಣಗೌಡ,ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಇದ್ದರು.



ಮಂಡ್ಯ ಅಮೃತ ಮಹೋತ್ಸವ ಉದ್ಘಾಟನೆಗೆ ಬರುವಂತೆ ಜಿಲ್ಲಾಉಸ್ತುವಾರಿ ಸಚಿವ ಅಂಬರೀಷ್ರವರು ಆಹ್ವಾನಿಸಿದರು ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ,ಕೆ.ಸಿ.ನಾರಾಯಣಗೌಡ,ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಇದ್ದರು.