Sunday, 5 January 2014

ಮೈಸೂರು-ಉಪ ಲೋಕಾಯುಕ್ತರಿಂದ ದೂರು ವಿವಾರಣೆ.



ಉಪ ಲೋಕಾಯುಕ್ತರಿಂದ  ದೂರು  ವಿಚಾರಣೆ
ಸಾರ್ವಜನಿಕರಿಂದ  ಸ್ವೀಕೃತವಾಗಿರುವ  ದೂರುಗಳನ್ನು  ಇದೇ  . 30 ಹಾಗೂ 31 ರಂದು  ಹುಣಸೂರು  ಹಾಗು  ಮೈಸೂರು  ಉಪ ವಿಭಾಗ ಗಳಿಗೆ  ಸಂಬಂದಿಸಿ  ಪ್ರತ್ಯೇಕವಾಗಿ  ವಿಚಾರಣೆ ನಡೆಸಲಾಗುವುದು.
ಜಿಲ್ಲಾಧಿಕಾರಿಗಳ  ಕಚೇರಿ  ಸಭಾಂಗಣದಲ್ಲಿ  ಇಂದು  ನಡೆಸಿದ  ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ  ಉಪಲೋಕಾಯುಕ್ತ  ಶ್ರೀ. ಸುಭಾಷ್  ಬಿ. ಅಡಿ  ಅವರು  ವಿಷಯ ತಿಳಿಸಿದರು.
ಈಗಾಗಲೇ  ಸ್ವೀಕೃತವಾಗಿರುವ  ದೂರುಗಳ  ವಿಚಾರಣೆ  ಜತೆಗೆ  ಹೊಸದಾಗಿ  ಸಲ್ಲಿಸುವ  ದೂರುಗಳನ್ನು  ಸ್ವೀಕರಿಸಲಾಗುವುದು  ಎಂದು  ಅವರು  ಹೇಳಿದರು.
ವಿವಿಧ  ಇಲಾಖೆಗಳಿಗೆ  ಸಂಬಂದಿಸಿ  ಸ್ವೀಕೃತವಾಗಿರುವ  ದೂರುಗಳನ್ನು   ವಿಚಾರಣ  ದಿನಾಂಕದ  ವೇಳೆಗೆ  ಇತ್ಯರ್ಥ ಪಡಿಸುವಂತೆ  ಅವರು  ಅಧಿಕಾರಿಗಳಿಗೆ  ಸೂಚಿಸಿದರು.
ತಾಂತ್ರಿಕ  ಇಲ್ಲವೇ  ಆಡಳಿತಾತ್ಮಕ  ಕ್ರಮಗಳ  ಹೆಸರಿನಲ್ಲಿ  ದೂರುಗಳಿಗೆ  ಸಂಬಂದಿಸಿದ  ವಿಷಯಗಳ ನ್ನು   ಇತ್ಯರ್ಥ ಪಡಿಸಲು  ವಿಳಂಬ  ಮಾಡಬೇಡಿ  ಎಂದು  ಅವರು  ತಿಳಿಸಿದರು.
ಉತ್ತಮ  ಆಡಳಿತ  ನೀಡುವ  ಸಲುವಾಗಿ  ಪ್ರಾಮಾಣಿಕವಾಗಿ  ಕರ್ತವ್ಯ  ನಿರ್ವಹಿಸಿ ,ಅಕ್ರಮ ಗಳಲ್ಲಿ  ತೊಡಗಬೇಡಿ   ಎಂದು  ಅವರು  ಹೇಳಿದರು.
ಆಡಳಿತದಲ್ಲಿ  ವಿಳಂಬ  ಅಕ್ರಗಳಿಗೆ  ಎಡೆ  ಮಾಡಿಕೊಡುತ್ತದೆ , ಆದಷ್ಟು   ಜಾಗ್ರತೆಯಾಗಿ  ಎಚ್ಚ್ಹೆತ್ತು  ಕೊಳ್ಳುವುದು  ಒಳಿತು, ತಪ್ಪಿದಲ್ಲಿ  ಪರಿಣಾಮ  ಎದುರಿಸ ಬೇಕಾಗುತ್ತದೆ  ಎಂದು ಅವರು ಎಚ್ಚ್ಚರಿಕೆ  ನೀಡಿದರು.
ಸಭೆಯಲ್ಲಿ  ಜಿಲ್ಲಾಧಿಕಾರಿ ²SÁ  ಸಿ. . .UÉÆÃ¥Á¯ï ಮತ್ತಿತರರು  ಇದ್ದರು.

No comments:

Post a Comment