Sunday, 5 July 2015


ರೈತರ ಸರಣಿ ಆತ್ಮಹತ್ಯೆ : ಕಾರಣ -ಪರಿಹಾರಗಳು.
ವಿಚಾರ ಸಂಕಿರಣ
ಈಗ ದಿನಪತ್ರಿಕೆಗಳು ಪ್ರತಿ ನಿತ್ಯ ರೈತರ ಸಾವಿನ ಸುದ್ದಿಯನ್ನು ಹೊತ್ತು ತರುತ್ತಿವೆ. ನಾಡಿನ ಮಾನವ ಸಂಕುಲಕ್ಕೆ ಅನ್ನ ನೀಡಿದ ಅನ್ನದಾತರು, ಸಾಲದ ಸುಳಿಗೆ ಸಿಲುಕಿ ನೇಣು, ವಿಷಗಳಿಗೆ ಆಹಾರವಾಗುತ್ತಿದ್ದಾರೆ. ಪ್ರತಿ ಪತ್ರಿಕೆಯಲ್ಲೂ ರೈತನ ಕಣ್ಣೀರು ಕೈಗಂಟುತ್ತಿದೆ, ದುಡಿಯುವ ಕೈಗಳನ್ನು ಕಳೆದುಕೊಂಡ ಕುಟುಂಬಗಳ ಆರ್ತನಾದ ನಾಡಿನಲ್ಲೆಲ್ಲಾ ವ್ಯಾಪಿಸುತ್ತಿದೆ. ಅದರಲ್ಲೂ ಕಬ್ಬು ಬೆಳೆಗಾರರು, ರೇಷ್ಮೆ ಬೆಳೆಗಾರರ ಸಂಕಷ್ಠ ಹೇಳತೀರದು. ಹೀಗೆ ಇದ್ದಕಿದ್ದಂತೆ ರೈತರು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದು ಏಕೆ ಇದಕ್ಕಿರುವ ಕಾರಣಗಳೇನು, ಬಾಕಿ ಕೊಡದ ಸಕ್ಕರೆ ಕಾರ್ಖಾನೆಗಳಷ್ಟೆ ಇವಕ್ಕೆ ಕಾರಣವೇ? ರೈತರ ಬೇಸಾಯದ ಮಾದರಿಯೆ? ಕಳಪೆ ಬಿತ್ತನೆ ಬೀಜನೆ, ಕಿತ್ತು ತಿನ್ನುವ ಖಾಸಗಿ ಸಾಲದ ಹೊಡೆತವೆ? ವೈಜ್ಞಾನಿಕ ಬೆಲೆಯ ಕೊರತೆಯೇ? ನೀರಾವರಿ ಮತ್ತು ಮಳೆ ವಿದ್ಯುತ್‍ನ ಜೂಜಾಟವೇ? ಹೊರ ದೇಶಗಳಿಂದÀ ಭಾರತಕ್ಕೆ ಬಂದಿಳಿಯುತ್ತಿರುವ ಆಮದು ಕಚ್ಚಾ ರೇಷ್ಮೆ, ಸಕ್ಕರೆ ಕಾರಣವೇ ಅಥವಾ ಸಣ್ಣ ಹಿಡುವಳಿಯೆ?  ಸರ್ಕಾರದ ನೀತಿಗಳೇ? ಹೀಗೆ ಒಂದೇ ಎರಡೇ ನೂರಾರು.....
ಈವತ್ತು ಕೃಷಿ ಲಾಭದಾಯಕ ವøತ್ತಿಯಲ್ಲ.್ಲ ಅನಿವಾರ್ಯ ಕಾರಣಗಳಿಂದ ಬೇರೆ ವೃತ್ತಿ ತಿಳಿಯದ, ಇನ್ನೊಂದು ವøತ್ತಿಗೂ ತಮ್ಮನ್ನು ವರ್ಗಾಯಿಸಿಕೊಳ್ಳಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಏರುತ್ತಿರುವ  ಕೃಷಿಯ ಮೇಲಿನ ಹೂಡಿಕೆ, ವೆಚ್ಚದಷ್ಟು ಬೆಳೆ ಮಾರಾಟದಿಂದ ರೈತನಿಗೆ ಒದಗುತ್ತಿಲ್ಲ, ‘ರೈತ’ ಭಾರತದ ರಾಜಕಾರಣದಲ್ಲಿ ಬಹಳ ವರ್ಷಗಳ ಕಾಲ ದಾಳವಾಗಿ ಬಳಕೆಯಾಗುತ್ತಲೇ ಬಂದಿದ್ದಾರೆ. ಇನ್ನೂ ಮುಂದುವರೆದು ರೈತ ಬಜೆಟ್‍ಗಳು ಬಂದರೂ, ರೈತರ ಬವಣೆಗಳು ಮಾತ್ರ ನೀಗುತ್ತಿಲ್ಲ.
ನಾಡಿನ ಅನ್ನದಾತರು ನೇಣಿಗೆ ಕೊರಳೊಡ್ಡುವಾಗ ನಾಡಿನ ಜನಪರ ಸಂಘಟನೆಗಳು, ನಾಗರೀಕರು, ಸುಮ್ಮನೇ ವೀಕ್ಷಕರಾಗಿ ಛೇ ಅಯ್ಯೋ ಪಾಪ ಎನ್ನುವುದರ ಬದಲು, ರೈತರ ಮೂಲಭೂತ ಸಮಸ್ಯೆಗಳ ಆಳ- ಅಗಲಗಳನ್ನು ಬಗೆದು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ದಕ್ಕುವ ಹೋರಾಟಕ್ಕೆ ದನಿಯಾಗಿ, ಜೊತೆಗೂಡಲು ವಿಚಾರ ಸಂಕಿರಣಕ್ಕೆ ಬನ್ನಿ.
ಪ್ರಾಸ್ತಾವಿಕ ಮಾತು : ಲಕ್ಷ್ಮಣ್ ಚೀರನಹಳ್ಳಿ, ಕರ್ನಾಟಕ ಜನಶಕ್ತಿ.
ವಿಷಯ ಮಂಡನೆ : ಜಿ.ಸಿ.ಬಯ್ಯಾರೆಡ್ಡಿ, ಕರ್ನಾಟಕ ಪ್ರಾಂತ ರೈತಸಂಘ.
ಡಾ.ಚಂದ್ರಪೂಜಾರಿ.ಎಂ.,ಅಭಿವೃದ್ದಿ ಅದ್ಯಯನ ವಿಭಾಗ, ಕನ್ನಡ ವಿವಿ,ಹಂಪಿ
ಅದ್ಯಕ್ಷತೆ : ಪ್ರೊ.ಕೆ.ಸಿ.ಬಸವರಾಜು, ಅರ್ಥಶಾಸ್ತ್ರ ವಿಭಾಗ, ಮೈಸೂರು ವಿ.ವಿ.

ಸಂವಾದದಲ್ಲಿ, ಪೆÇ್ರ.ಎಚ್.ಎಲ್.ಕೇಶವಮೂರ್ತಿ, ಪೆÇ್ರ.ಜಿ.ಟಿ.ವೀರಪ್ಪ, ಪ್ರೊ.ಭೂಮಿಗೌಡ, ಕೆ.ಬೋರಯ್ಯ, ಸುನಂದಜಯರಾಂ, ಕೆ.ಎನ್.ರವಿ, ಪತ್ರಕರ್ತರ ಸಂಘ, ರಾಜೇಗೌಡ, ನಂದಿನಿ ಮತ್ತು ಜಯರಾಂ, ಸುರೇಶ್, ನರಸರಾಜು, ಕರ್ನಾಟಕ ರಾಜ್ಯ ರೈತಸಂಘ, ಎಂ.ಕೃಷ್ಣಮೂರ್ತಿ ಬಹುಜನ ಸಮಾಜ ಪಕ್ಷ, ಬಿ.ರಾಮಣ್ಣ-ಆಮ್ ಅದ್ಮಿ ಪಕ್ಷ, ಬೋರಾಪುರ ಶಂಕರೇಗೌಡ, ವಿಶ್ವನಾಥ ಸೊಳ್ಳೆಪುರ, ಹೆಚ್.ಡಿ.ಜಯರಾಂ ಕರವೇ,  ಶಂಭೂನಹಳ್ಳಿ ಕøಷ್ಣ, ಕಬ್ಬು ಬೆಳೆಗಾರರ ಸಂಘ, ದಾದಾಫೀರ್, ಪಾಪುಲರ್ ಫ್ರೆಂಟ್ ಆಫ್ ಇಂಡಿಯಾ, ವೆಂಕಟಗಿರಿಯಯ್ಯ ಕರಾದಸಂಸ, ಸಂದೇಶ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ, ಬಿ.ಟಿ.ವಿಶ್ವನಾಥ್, ಮಹೇಶ್ ಯಡಗನಹಳ್ಳಿ ವಕೀಲರು, ಹೊನ್ನಯ್ಯ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್, ಸತನೂರು ಕೃಷ್ಣ, ಕುರುಬರ ಸಂಘ, ಎಂ.ಸಿ.ಶಿವರಾಜು, ಭಾರತೀಯ ಭೌದ್ದ ಮಹಾಸಭಾ, ಯೋಗಣ್ಣ, ಜಯಕರ್ನಾಟಕ, ಟಿ.ಯಶವಂತ್, ಕರ್ನಾಟಕ ಪ್ರಾಂತ ರೈತಸಂಘ, ಮುತ್ತುರಾಜ್-ಕರ್ನಾಟಕ ಜನಶಕ್ತಿ, ಬೇಕರಿ ರಮೇಶ್-ಕದಂಬ ಸೈನ್ಯ, ಮಂಜುನಾಥ್ ಕನ್ನಡಸೇನೆ, ಮಾ.ಸೋ.ಚಿದಂಬರ್, ಶಂಕರೇಗೌಡ ಕರ್ನಾಟಕ ರಕ್ಷಣಾ ವೇದಿಕೆ, ಉಮಾಶಂಕರ, ಕರ್ನಾಟಕ ಜನಪರ ವೇದಿಕೆ, ಅಂಜನಪ್ಪ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ, ಹುರಗಲವಾಡಿ ರಾಮಯ್ಯ, ಗಾಯಕರು, ಸಿ.ಸೋಮಶೇಖರಯ್ಯ ಚಿನ್ನೇನಹಳ್ಳಿ, ಸಯ್ಯದ್ ಗನಿಆನ್ ಪ್ರಗತಿಪರ ರೈತರು.

ಮೈಸೂರು ನಗರದ ಉದ್ದಿಮೆದಾರರು ಹಾಗೂ ವ್ಯಾಪಾರಿಗಳಿಗೆ ನಗರ ಸ್ವಚ್ಛವಾಗಿಡಲು ಆಯುಕ್ತ ರ ಸೂಚನೆ.

 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ , ಸಾರ್ವಜನಿಕರ ಅನುಕೂಲಕ್ಕಾಗಿ ಮಳೆ ನೀರು ಚರಂಡಿ ಹಾಗೂ ಪಾದಚಾರಿ ರಸ್ತೆ ಕಾಮಗಾರಿ ಒಳಗೊಂಡಂತೆ ರಾಜ ಮಾರ್ಗ ಕಾಮಗಾರಿಯನ್ನು ಪಾಲಿಕೆ ವತಿಯಿಂದ ಕೈಗೆತ್ತಿಕೊಂಡು ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಆದರೆ ಕಾಮಗಾರಿ ನಡೆಯುತ್ತಿರುವ ರಾಜ ಮಾರ್ಗದ ಉದ್ದಕ್ಕೂ ಇರುವ ಹೋಟೆಲ್ , ಬೇಕರಿ ವಿವಿಧ ಉದ್ದಿಮೆದಾರರು, ಹಾಗೂ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ,  ತೆರೆದ ಚರಂಡಿಗಳಲ್ಲಿ ಬಿಸಾಡದಂತೆ ಅನೇಕ ಬಾರಿ ಮೌಖಿಕವಾಗಿ ತಳಿಸಿದರೂ ಸಹಾ ಪಾಲಿಕೆಯೊಂದಿಗೆ ಸಹಕರಿಸುತ್ತಿಲ್ಲ.
ಸಯ್ಯಾಜಿರಾವ್ ರಸ್ತೆಯ ಬದಿ ರಾಜಮಾರ್ಗ ಕಾಮಗಾರಿ ಕುರಿತು ನಿರ್ಮಿಸಲಾಗಿರುವ ಚರಂಡಿಯಲ್ಲಿ ಪ್ರತೀ ನಿತ್ಯ ಕಸವನ್ನು ಹಾಗೂ ತ್ಯಾಜ್ಯವನ್ನು ಅಂಗಡಿಕಾರರು ಹಾಗೂ ಸಾರ್ವಜನಿಕರು ಹಾಕುತ್ತಿದ್ದಾರೆ.ಇದರಿಂದ ಕಾಮಗಾರಿಯ ಪ್ರಗತಿಯೂ ಕುಠಿತಗೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚರಂಡಿ ಮೇಲೆ ಸ್ಲಾಬ್ ಹಾಕಲಾಗುವುದು. ಕಾರಣ ತ್ಯಾಜ್ಯವನ್ನು ಚರಂಡಿಯಲ್ಲಿ ಹಾಕದಂತೆ ವನಂತಿಸಲಾಗಿದೆ. ತಪ್ಪಿದಲ್ಲಿ ದಂಡವನ್ನು ವಿಧಿಸಿ ಕಾನೂನು ಜರುಗಿಸಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.
ತಮ್ಮಲ್ಲಿ ಪ್ರತೀದಿನ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ತೆರದ ಚರಂಡಿಗಳಲ್ಲಿ ಬಿಸಾಡದೆ ಪ್ರತ್ಯೇಕ ಬಿನ್ಸಗಳಲ್ಲಿ ಸಂಗ್ರಹಿಸಿ ಪಾಲಿಕೆ ವಾಹನಗಳಿಗೆ ನೀಡಿ ಪರಿಸರ ಸಂರಕ್ಷಿಸಲು ಪಾಲಿಕೆಯೊಂದಿಗೆ ಕೈ ಜೋಡಿಸಿ ಜವಾಬ್ದಾರಿಯುತ ನಾಗರೀಕರ /ಉದ್ದಿಮೆದಾರರ  ಕರ್ತವ್ಯವನ್ನು ನಿರ್ವಹಿಸಬೇಕಾಗಿ ಈ ಮೂಲಕ ಕೋರಿದೆ.
                                                                             

Saturday, 4 July 2015

ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಗೆ ಬಹಳಷ್ಟು ಅವಕಾಶ: ಧ್ರುವನಾರಾಯಣ
ಮೈಸೂರು, ಜುಲೈ 4 . ಮಹತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಚಾಮರಾಜನಗರ ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ತಿಳಿಸಿದರು.
 ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ತಾಲ್ಲೂಕು ಪಂಚಾಯತ್‍ಗಳಿಗೆ ಅತೀ ಹೆಚ್ಚು ಅನುದಾನವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿದ್ದು, ಗ್ರಾಮೀಣ ಪ್ರದೇಶದಲ್ಲಿ ಆಟದ ಮೈದಾನ, ದನದ ಕೊಟ್ಟಿಗೆ, ಸ್ಮಶಾನ ಅಭಿವೃದ್ಧಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರು ಅಭಿವೃದ್ಧಿ ಕಾರ್ಯಕ್ಕೆಂದು ಸಂಸದರ ನಿಧಿಯನ್ನು ಅವಲಂಬಿಸುತ್ತಾರೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ 30,000 ಕೋಟಿ ರೂ. ಅನುದಾನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳಿಗೆ ಮೀಸಲಿರಿಸಿದ್ದು, ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಹೇಳಿದರು.
  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 12,419 ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.  ಅದರಲ್ಲಿ 1511 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೇವಲ 163 ಕಾಮಗಾರಿ ಪೂರ್ಣಗೊಂಡಿದೆ ಹಾಗೂ 10,745 ಕಾಮಗಾರಿಗಳು ಇನ್ನೂ ಪ್ರಾರಂಭಗೊಳ್ಳಬೇಕಿದೆ. ಈ ಯೋಜನೆಯಡಿ ನಿಗಧಿಪಡಿಸಿರುವ ಕಾಮಗಾರಿಗಳ ಗುರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಜೊತೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹೊಸದಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ್ ಸದಸ್ಯಗಳಿಗೆ ಈ ಯೋಜನೆ ಬಗ್ಗೆ ಮಾಹಿತಿ ಹಾಗೂ ಜಾಗೃತಗೊಳಿಸಲು ಪ್ರತ್ಯೇಕ ತರಬೇತಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
   ಇಂದಿರಾ ಆವಾಸ್ ಯೋಜನೆಯಡಿ ಆಯ್ಕೆಯಾಗುವ ಫಲಾನುಭವಿಗಳು ಅರ್ಹರಿರಬೇಕು. ಗ್ರಾಮ ಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ನಡೆಯುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಸವಲತ್ತ್ತನ್ನು ಪಡೆದವರೇ ಪಡೆಯದಂತೆ ಎಚ್ಚರವಹಿಸಬೇಕು. ದೇಶಕ್ಕೆ ನುರಿತ ಯುವ ಶಕ್ತಿಯ ಅಗತ್ಯತೆ ಹೆಚ್ಚಿದೆ. ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ತರಬೇತಿಯನ್ನು ಪಡೆಯುವ ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಉದ್ಯೋಗ ಅವಕಾಶಬೇಕು ಹಾಗೂ ಉದ್ಯೋಗ ಅವಕಾಶವಿರುವ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೆ ಪೂರಕವಾಗಿ ತರಬೇತಿಯ ನಂತರ ಒಳ್ಳೆಯ ಸಂಸ್ಥೆಗಳನ್ನು ಆಹ್ವಾನಿಸಿ ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಬೇಕು ಎಂದು ಧ್ರುವನಾರಾಯಣ ಹೇಳಿದರು.
  ಇದೇ ವೇಳೆ ಮಾತನಾಡಿದ ಮೈಸೂರು-ಕೊಡಗು ಲೋಕ ಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ತಾಲ್ಲೂಕುಗಳಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ಅಂಗವಿಕಲತೆ ಪ್ರಮಾಣ ಪತ್ರ ಪಡೆಯಲು ಬಹಳಷ್ಟು ಜನರು ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಾರೆ. ಅಂಗವಿಕಲರಿಗೆ ಸ್ಥಳೀಯವಾಗಿ ಸೌಲಭ್ಯ ಸಿಗುವಂತಾಗಬೇಕು. ಈ ಸಂಬಂಧ ತಜ್ಞ ವೈದ್ಯರನ್ನು ತಾಲ್ಲೂಕುಗಳಲ್ಲಿ ನೇಮಿಸುವುದರ ಜೊತೆಯಲ್ಲಿ ವೈದ್ಯರ ಲಭ್ಯತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಹೋಬಳಿ ಹಂತದಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದರು.
  ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಸರ್ಕಾರ ಸಾಕಷ್ಟು ಅನುದಾನವನ್ನು ಮೀಸಲಿರಿಸಿದೆ. ಮಕ್ಕಳ ಆರೋಗ್ಯ ಕುಡಿಯುವ ನೀರಿನ ಮೇಲೆ ಅವಲಂಬಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಹಕಾರದೊಂದಿಗೆ ಅಗತ್ಯ ಕ್ರಮವಹಿಸಬೇಕು ಎಂದು ಚಾಮರಾಜನಗರ ಲೋಕಸಭಾ ಸದಸ್ಯರು ಹೇಳಿದರು.
  ಸರ್ಕಾರ ಗಿರಿಜನರ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡುವ ಮೂಲಕ ಅನುದಾನವನ್ನು ಬಿಡುಗಡೆಗೊಳಿಸಿದೆ. ಪ್ರತಿ ಮನೆ ನಿರ್ಮಾಣಕ್ಕೆ 1.75 ಲಕ್ಷ ರೂ. ನಿಗಧಿ ಪಡಿಸಿದೆ. ಜಿಲ್ಲೆಯಲ್ಲಿ ಗಿರಿಜನರಿಗೆ 3553 ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು, 2284 ಮನೆಗಳ ಕಾಮಗಾರಿಯು ಪೂರ್ಣಗೊಂಡಿದೆ ಹಾಗೂ 1269 ಮನೆಗಳ ಕಾಮಗಾರಿಯು ಪ್ರಗತಿಯಲ್ಲಿದೆ. ಸಮಾಜದ ಕಟ್ಟ ಕಡೆಯ ಜನರಾಗಿರುವ ಗಿರಿಜನರಿಗೆ ಸರ್ಕಾರವು ನೀಡಿರುವ ಎಲ್ಲಾ ಸೌಲಭ್ಯಗಳು ನಿಗಧಿತ ಅವಧಿಯಲ್ಲಿ ಲಭಿಸುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
  ದೇಶ ಹಾಗೂ ರಾಜ್ಯದ ಸರಾಸರಿಗೆ ಹೋಲಿಸದಾಗ ಮೈಸೂರು ಜಿಲ್ಲೆಯ ಸಾಕ್ಷರತೆ ಹಿಂದೆ ಉಳಿದಿದೆ. ದೇಶದ ಸಾಕ್ಷರತೆ ಶೇ.74 ಹಾಗೂ ರಾಜ್ಯದ ಸಾಕ್ಷರತೆ ಶೇ.75 ಸರಾಸರಿಯಾಗಿದ್ದರೆ, ಮೈಸೂರು ಜಿಲ್ಲೆ ಶೇ.72 ಸರಾಸರಿ ಹೊಂದುವ ಮೂಲಕ ಸಾಕ್ಷರತಾ ಪ್ರಮಾಣದಲ್ಲಿ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದೆ. ತಾಲ್ಲೂಕು ಪಂಚಾಯತ್‍ಗಳ ಕಾರ್ಯನಿರ್ವಾಹಕ ಅಧಿಕಾರಿಗಳು ವೈಯಷ್ಕರ ಶಿಕ್ಷಣ ಇಲಾಖೆಯೊಂದಿಗೆ ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮವಹಿಸಬೇಕು. ಮೈಸೂರು ನಗರ ಸೇರಿದಂತೆ ತಾಲ್ಲೂಕಿನ ಸಾಕ್ಷರತಾ ಪ್ರಮಾಣ ಶೇ.82 ಸರಾಸರಿ ಹೊಂದಿದ್ದು, ಜಿಲ್ಲೆಯ ಇತರೆ ತಾಲ್ಕಕಿಗೆ ಹೋಲಿಸಿದಾಗ ಪ್ರಥಮ ಸ್ಥಾನದಲ್ಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
  ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನವನ್ನು ಅವಲಂಬಿಸದೇ, ಖಾಸಗಿ ಕೈಗಾರಿಕೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಅಭಿವೃದ್ಧಿ ಹೊಂದಬಹುದು. ಕಡ್ಡಾಯವಾಗಿ ಎಲ್ಲಾ ಖಾಸಗಿ ಕೈಗಾರಿಕೆಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಶೇ.2 ಹಣವನ್ನು ಸರ್ಕಾರಕ್ಕೆ ನೀಡÀಬೇಕು. ಅಲ್ಲದೇ ಖಾಸಗಿ ಸಂಸ್ಥೆಗಳ ಪ್ರಯೋಜಿತದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು.
 ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ. ಬಿ.ಪುಷ್ಪ ಅಮರನಾಥ್, ಉಪಾಧ್ಯಕ್ಷರಾದ ಎಲ್.ಮಾದಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಅಪರ ಜಿಲ್ಲಾಧಿಕಾರಿ ಅರ್ಚನಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.     

ಶಾಸಕ ಕೆ.ಸಿ.ನಾರಾಯಣಗೌಡರಿಂದ ರೈತ ಕುಟುಂಬಗಳಿಗೆ ಸಾಂತ್ವನ.

ಕೃಷ್ಣರಾಜಪೇಟೆ. ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಹಿರಿಕಳಲೆಯ ಶಂಕರೇಗೌಡ(42), ದೊಡ್ಡತಾರಹಳ್ಳಿಯ ಪ್ರದೀಪ(40) ಮತ್ತು ಮೂಡನಹಳ್ಳಿಯ ಲೋಕೇಶ(43) ಅವರ ಮನೆಗೆ ಶಾಸಕ ನಾರಾಯಣಗೌಡ ಇಂದು ಅಧಿಕಾರಿಗಳ ತಂಡದೊಂದಿಗೆ ಭೇಟಿ ಮಾಡಿ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ರೈತರ ನೋವು ನಲಿವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ನಿಮ್ಮ ಸಂಕಷ್ಠಕ್ಕೆ ನೆರವಾಗಲು ನಾವಿದ್ದೇವೆ. ನಿಮ್ಮ ಸಂಕಷ್ಠಗಳನ್ನು ನಮ್ಮ ಬಳಿ ಹೇಳಿಕೊಳ್ಳಿ ನಿಮ್ಮ ಸಮಸ್ಯೆಗೆ ನಾವು ಪರಿಹಾರವನ್ನು ಕಂಡುಹಿಡಿಯುತ್ತೇವೆ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರಕ್ಕೆ ಬರಬೇಡಿ ಎಂದು ಅನ್ನದಾತರಲ್ಲಿ ಶಾಸಕ ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು. ಸಾಲದ ಬಾಧೆಯಿಂದ ಮೃತರಾದ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರವು ಪರಿಹಾರದ ಹಣವನ್ನು ಎಷ್ಟು ನೀಡಬೇಕೆಂದು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಸಾಲದ ಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ ಕುಟುಂಬಗಳ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸದನದ ಒಳಗೆ ಮತ್ತು ಹೊರಗೆ ನಿರಂತರವಾದ ಹೋರಾಟವನ್ನು ಮಾಡುತ್ತಿದ್ದಾರಲ್ಲದೇ ಕಾಲ್ನಡಿಯ ಜಾಥವನ್ನು ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕಬ್ಬು ಬೆಳೆಗಾರರ ಸಂಕಷ್ಠಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಬಗೆಯ ಸೌಲಭ್ಯಗಳು ಮತ್ತು ಸಹಾಯ ಧನವನ್ನು ಕೊಡಿಸಿಕೊಡಲು ಕ್ಷೇತ್ರದ ಶಾಸಕನಾದ ನಾನು ಬದ್ಧನಾಗಿದ್ದೇನೆ. ದಯಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಪ್ಲೀಸ್ ಎಂದು ಮನವಿ ಮಾಡಿದ ಶಾಸಕರು ನಾನು ವಯಕ್ತಿಕವಾಗಿ ಪ್ರತೀ ಕುಟುಂಬಕ್ಕೆ ತಲಾ 10ಸಾವಿರ ರೂಪಾಯಿ ಹಣದ ಅಲ್ಪ ಕಾಣಿಕೆ ನೀಡುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುತ್ತೇನೆ ಧೈರ್ಯವಾಗಿರಿ ಎಂದು ಮಾನಸಿಕವಾಗಿ ಆತ್ಮಸ್ಥೈರ್ಯವನ್ನು ಶಾಸಕ ನಾರಾಯಣಗೌಡ ತುಂಬಿದರು.
ಪ್ರವಾಸಿ ಕೇಂದ್ರವಾಗಿ ಹೇಮಗಿರಿ ಅಭಿವೃದ್ಧಿ: ತಾಲೂಕಿನ ಪುರಾಣ ಪ್ರಸಿದ್ಧ ಸ್ಥಳವಾದ ಹೇಮಗಿರಿಯನ್ನು ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಕನಿಷ್ಠಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ರಾಜ್ಯ ಸರ್ಕಾರವು 2ಕೋಟಿ 50ಲಕ್ಷರೂ ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ ಸಧ್ಯ 50 ಲಕ್ಷರೂ ಹಣವನ್ನು ಬಿಡುಗಡೆ ಮಾಡಿದೆ. ಯಾತ್ರಿನಿವಾಸದ ನಿರ್ಮಾಣ, ಹೇಮಗಿರಿ ಫಾಲ್ಸ್‍ಗೆ ಫ್ಲಢ್ ಲೈಟ್ ವ್ಯವಸ್ಥೆ, ಸೋಪಾನಕಟ್ಟೆ, ಸ್ನಾನ ಮತ್ತು ಶೌಚಗೃಹಗಳ ನಿರ್ಮಾಣ, ಕುಡಿಯುವ ನೀರು, ಹೇಮಗಿರಿ ಅಣೆಕಟ್ಟೆಗೆ ಫೆನ್ಸಿಂಗ್ ಮತ್ತು ರೈಲಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಪ್ರವಾಸಿ ಕೇಂದ್ರವಾಗಿ ಹೇಮಗಿರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಲಿದ್ದು ಈ ಭಾಗದ ವಾಣಿಜ್ಯ ವ್ಯವಹಾರಗಳು ದ್ವಿಗುಣಗೊಂಡು ರೈತರ ಭಾಗ್ಯದ ಬಾಗಿಲು ತೆರೆಯಲಿದೆ. ಆದ್ದರಿಂದ ಪ್ರವಾಸಿಗರು ಉಳಿದುಕೊಳ್ಳಲು ಸ್ಟೇಹೋಂಗಳ ನಿರ್ಮಾಣ, ನದಿದಂಡೆಯಲ್ಲಿ ರೆಸಾರ್ಟ ನಿರ್ಮಾಣಕ್ಕೆ ರೈತರು ಮುಂದೆ ಬಂದರೆ ಶೇ.50ರಷ್ಟು ರಿಯಾಯಿತಿಯನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೊಡಿಸಿಕೊಡುವುದಾಗಿ ಶಾಸಕ ನಾರಾಯಣಗೌಡ ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮಶ್ರೀನಿವಾಸ್, ತಾ.ಪಂ ಮಾಜಿಅಧ್ಯಕ್ಷೆ ರೂಪಕೃಷ್ಣ, ಮುಖಂಡರಾದ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಅಘಲಯ ಜಾನಕೀರಾಂ, ಕರ್ತೇನಹಳ್ಳಿಸುರೇಶ್, ದಾನಶೇಖರ, ಬೋಳಮಾರನಹಳ್ಳಿ ಮಂಜುನಾಥ್, ಬಂಡಿಹೊಳೆ ಅಶೋಕ್, ಬಿ.ಎಲ್.ರಂಗನಾಥೇಗೌಡ, ರಾಮೇಗೌಡ, ಕಾಯಿಮಂಜುನಾಥ್, ಶೇಷಾಧ್ರೀ, ಹಿರಿಕಳಲೆ ಸತೀಶ್, ಆನೆಗೊಳರಾಮೇಗೌಡ, ಮಂಡ್ಯನಾಗೇಶ್, ನಾಟನಹಳ್ಳಿ ಗಂಗಾಧರ್, ಕೆ.ಆರ್.ನೀಲಕಂಠ, ತಾಲೂಕು ಸಹಾಯಕ ಕೃಷಿನಿರ್ದೇಶಕ ಶಿವರಾಜ್, ಕೃಷಿ ಅಧಿಕಾರಿ ಶಂಭೂಗೌಡ, ರಾಜಶ್ವನಿರೀಕ್ಷಕ ಮಂಜುನಾಥಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕಾಂಗದ ಎಂ.ಕೆ.ಸೋಮಶೇಖರ್ ರವದಿಂದ ಪಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

 ನಗರದ ಕೆ.ಆರ್. ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ವಿವಿಧ ವೇತನ ಮಂಜೂರಾತಿ ಆದೇಶ ಪ್ರತಿಯನ್ನು ಕೆ.ಆರ್. ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೆ. ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 05-07-2015ರಂದು ಬೆಳಿಗ್ಗೆ 11:30ಕ್ಕೆ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ, ಕುವೆಂಪುನಗರ, ಮೈಸೂರು. ಇಲ್ಲಿ ವಿವಿಧ ಮಂಜೂರಾತಿ ಪ್ರತಿಗಳಾದ ವಿಧಾವಾ ವೇತನ-65, ಸಂಧ್ಯಾ ಸುರಕ್ಷಾ-26, ಅಂಗವಿಕಲರ ವೇತನ-06, ಮನಸ್ವಿನಿ ಯೋಜನೆ-06, ಒಟ್ಟು 103 ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಿದ್ದಾರೆ ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು,         ವಾರ್ಡ್ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕರಾದ ರೇವಣ್ಣ ನವರು ತಿಳಿಸಿದ್ದಾರೆ.
              

Friday, 3 July 2015


ಶ್ರೀರಂಗಪಟ್ಟಣ ಉಪವಿಬಾsಗದ ಪೊಲೀಸರ ಕಾರ್ಯಾಚರಣೆ ಸುಮಾರು 29 ಲಕ್ಷ ಮËಲ್ಯದ ರಕ್ತ ಚಂದನ ವಶಪಡಿಸಿಕೊಂಡಿರುವುದಾಗಿ ಎಸ್ಪಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ದಿನಾಂಕ: 02-07-2015 ರಂದು ಬೆಳಿಗ್ಗೆ ಪಾಂಡವಪುರ ತಾಲ್ಲೋಕು, ಸುಂಕಾತೊಣ್ಣೂರು ಗ್ರಾಮದ ಜ್ಞಾನೇಶ್ ಎಂಬುವವರ ಆಲೆಮನೆಯಲ್ಲಿ ರಕ್ತ ಚಂದನ ಮರವನ್ನು ಕಳ್ಳತನದಿಂದ ಇಟ್ಟುಕೊಂಡಿದ್ದು ಸಾಗಾಣೆ ಮಾಡುತ್ತಿದ್ದಾರೆಂದು ಶ್ರೀರಂಗಪಟ್ಟಣ ಉಪವಿಬಾಗದ ಡಿ.ಎಸ್.ಪಿ. ಶ್ರೀ ಸಿದ್ದೇಶ್ವರ.ಎನ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಡಿ.ಎಸ್.ಪಿ. ಶ್ರೀರಂಗಪಟ್ಟಣ ರವರು ಶ್ರೀ. ದಯಾನಂದ, ಅಪರಾದ ವಿಬಾಗದ ಪಿ.ಎಸ್.ಐ, ಶ್ರೀರಂಗಪಟ್ಟಣ, ಶ್ರೀ. ಪ್ರಬಾಕರ್, ಪಿ.ಎಸ್.ಐ ಮಂಡ್ಯ ಸಂಚಾರಿ ಠಾಣೆ ಹಾಗು ಸಿಬ್ಬಂದಿಗಳಾದ ಎಲ್.ಕೆ.ಧನಂಜಯ, ಪಿ.ಸಿ-240. ಸಂತೋಷ್ ಎಂ.ಆರ್. ಎ.ಪಿ.ಸಿ-194., ಹೇಮಂತ ಎಸ್.ಕೆ., ಎ.ಪಿ.ಸಿ-263., ಮಹೇಂದ್ರ ಜೆ, ಎ.ಪಿ.ಸಿ-170., ಹೇಮಂತ್‍ಕುಮಾರ್ ಎಂ.ಕೆ. ಎ.ಪಿ.ಸಿ-86., ಮರಿಯಪ್ಪ ವೈ.ಡಿ ಎ.ಪಿ.ಸಿ-90 ಹಾಗೂ ಮಾರುತಿ ಎಸ್. ಬ್ಯಾಳಿ ಸಿ.ಪಿ.ಸಿ-256 ರವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಖಾಸಗಿ ವಾಹನಗಳಲ್ಲಿ ಆಲೆಮನೆಯ ಬಳಿಗೆ ಮದ್ಯಾಹ್ನ ಸುಂಕತೊಣ್ಣೂರು ಗ್ರಾಮದ ಜ್ಞಾನೇಶ್ ರವರ ಪಾಳು ಬಿದ್ದಿರುವ ಆಲೆಮನೆಯ ಮೇಲೆ ದಾಳಿ ಮಾಡಲಾಗಿ ಇಬ್ಬರು ಅಸಾಮಿಗಳು  ಸಿಕ್ಕಿ ಬಿದ್ದು ಇತರೆ 5-6 ಜನರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು.  ಸಿಕ್ಕಬಿದ್ದವರ ಹೆಸರು ವಿಳಾಸ ತಿಳಿಯಲಾಗಿ 1] ನಂದೀಶ ಬಿನ್ ಕೆಂಪಣ್ಣ @ ಪಡಿಯಪ್ಪ 25 ವರ್ಷ, ಸುಂಕತೊಣ್ಣೂರು ಗ್ರಾಮ 2] ಸಂತೋಷ ಬಿನ್ ರಾಮೇಗೌಡ, ಮೇಣಾಗ್ರ ಗ್ರಾಮ, ಪಾಂಡವಪುರ ತಾಲ್ಲೂಕು ಎಂದು ತಿಳಿದು ಬಂದಿದ್ದು, ತಪ್ಪಿಸಿಕೊಂಡು ಓಡಿಹೋದವರ ಹೆಸರು ರವಿ, ಕೊಡಗಹಳ್ಳಿ ಗ್ರಾಮ, ಮಂಜು ಬಿನ್ ರಾಮಕೃಷ್ಣೇಗೌಡ, ಮೇಣಾಗ್ರ ಗ್ರಾಮ, ಸುನೀಲ್ ಸುಂಕತೊಣ್ಣೂರು ಗ್ರಾಮ ಹಾಗೂ ಮತ್ತಿಬ್ಬರ ಹೆಸರು ಗೊತ್ತಿಲ್ಲವೆಂದು ತಿಳಿದು ಬಂದಿರುತ್ತದೆ.  ಆಲೆಮನೆಯಲ್ಲಿ ಪರಿಶೀಲಿಸಲಾಗಿ ಆಲೆಮನೆಯ ಬೆಲ್ಲ ಬೇಯಿಸುವ ಒಲೆಯ ಗುಂಡಿಯೊಳಗೆ 5 ರಕ್ತಚಂದನ ಮರದ ತುಂಡುಗಳಿದ್ದು ಆಲೆಮನೆಯ ಗೋಡೆ ಪಕ್ಕದಲ್ಲಿ 3 ರಕ್ತ ಚಂದನ ಮರದ ತುಂಡುಗಳು ಇದ್ದು ಇವುಗಳನ್ನು ಕಬ್ಬಿನ ಸಿಪ್ಪೆ (ರಚ್ಚು) ಯಿಂದ ಮುಚ್ಚಲಾಗಿದ್ದು ಇವುಗಳನ್ನು ಬೇರೆಡೆಗೆ ಸಾಗಾಣಿಕೆ ಮಾಡಲು ಆರೋಪಿಗಳು ವಾಹನಕ್ಕಾಗಿ ಕಾಯುತ್ತ ಕುಳಿತಿರುವುದು ತಿಳಿದು ಬಂದಿದ್ದು, ಇವುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಅವುಗಳ ಒಟ್ಟು ತೂಕ 295 ಕೆ.ಜಿ ಇದ್ದು ಪ್ರತಿ ಕೆ.ಜಿಗೆ 10 ಸಾವಿರ ರೂ ಆಗಿರುತ್ತದೆಂದು ಅರಣ್ಯ ಇಲಾಖೆಯವರಿಂದ ತಿಳಿದು ಬಂದಿದ್ದು, ಒಟ್ಟು ಬೆಲೆ 29,50,000/- ರೂ ಗಳಾಗಿರುತ್ತೆ.

ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಮೇಲ್ಕಂಡ ಅದಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿರುತ್ತಾರೆ.

 

Thursday, 2 July 2015

ಜುಲೈ 27 ರಂದು ಮೈಸೂರಿಗೆ ರಾಷ್ಟ್ರಪತಿ ಭೇಟಿ


ಜುಲೈ 27 ರಂದು ಮೈಸೂರಿಗೆ ರಾಷ್ಟ್ರಪತಿ ಭೇಟಿ
ಮೈಸೂರು, ಜುಲೈ 2 . ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜುಲೈ 27 ರಂದು ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಮೈಸೂರಿಗೆ ಆಗಮಿಸಲಿದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಾಗಿದೆ ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
  ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಭಾರತದ ರಾಷ್ಟ್ರಪತಿ ಮೈಸೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕರೆಯಲಾದ ಸಭೆಯ ಅಧ್ಯಕ್ಷತೆÉವಹಿಸಿ ಅವರು ಮಾಡನಾಡಿದರು.
 ಮೈಸೂರು ವಿಶ್ವವಿದ್ಯಾನಿಲಯವು ಸ್ಥಾಪನೆಯಾಗಿ ನೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಸಂಭ್ರಮಾಚರಣೆÉಯನ್ನು ಹಮ್ಮಿಕೊಳ್ಳಲು ವಿಶ್ವವಿದ್ಯಾನಿಲಯ ಕಾರ್ಯಕ್ರಮವನ್ನು ರೂಪಿಸಿದ್ದು, ಜುಲೈ 27 ರಂದು ರಾಷ್ಟ್ರಪತಿಯವರು ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿಯವರ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಹೇಳಿದರು.
  ರಾಷ್ಟ್ರಪತಿಗಳಿಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸುವ ಜೊತೆಯಲ್ಲಿ ಯಾವುದೇ ಅಸುರಕ್ಷತಾ ಘಟನೆಗಳಿಗೆ ಅವಕಾಶ ನೀಡಬಾರದು. ಪೊಲೀಸ್ ಆಯುಕ್ತರು ಭದ್ರತೆಗೆ ಸಂಬಂಧಪಟ್ಟ ಕಾರ್ಯದ ಉಸ್ತುವಾರಿ ವಹಿಸಲಿದ್ದಾರೆ. ರಾಷ್ಟ್ರಪತಿಗಳು ಸಂಚರಿಸುವ ರಸ್ತೆಯನ್ನು ಸಂಪೂರ್ಣವಾಗಿ ದೂರಸ್ತಿಗೊಳಿಸಬೇಕು. ಮೈಸೂರು ಮಹಾನಗರ ಪಾಲಿಕೆ, ಮುಡಾ ಹಾಗೂ ರಾಷ್ಟ್ರೀಯ ಹೆದ್ದಾರಿ 212ಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು. ರಾಷ್ಟ್ರಪತಿಗಳು ಸಂಚರಿಸುವ ವಾಹನ ಹಾಗೂ ಅವರನ್ನು ಹಿಂಬಾಲಿಸುವ ಭದ್ರತಾ ವಾಹನಗಳ ಸಂಪೂರ್ಣ ತಪಾಸಣೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಕೈಗೊಂಡು ಫಿಟ್ನೆಸ್ ವರದಿಯನ್ನು ಶೀಘ್ರ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಸೂಚಿಸಿದರು.
  ರಾಷ್ಟ್ರಪತಿಗಳ ಶಿಷ್ಟಾಚಾರದಂತೆ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸುವುದು ಆರೋಗ್ಯ ಇಲಾಖೆ ಜವಾಬ್ದಾರಿಯಾಗಿದೆ. ಸೂಕ್ತ ವ್ಯವಸ್ಥೆಯುಲ್ಲ ಆಂಬುಲೆನ್ಸ್, ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ರಾಷ್ಟ್ರಪತಿಗಳಿಗೆ ನೀಡುವ ಆಹಾರದ ಸಂಪೂರ್ಣ ತಪಾಸಣೆಯಾಗಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಾಗಬೇಕು ಹಾಗೂ  ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
  ರಾಷ್ಟ್ರಪತಿಗಳ ಮೈಸೂರಿನ ಭೇಟಿಯ ವೇಳೆ ಚೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ಸರಬರಾಜು ಹಾಗೂ ಭಾರತ ಸಂಚಾರ ನಿಗಮದಿಂದ ದೂರವಾಣೆ ವ್ಯವಸ್ಥೆಯಾಗಬೇಕು. ಅಗ್ನಿಶಾಮಕ ದಳದಿಂದ ಹೆಚ್ಚಿನ ಸಿಬ್ಬಂದಿಗಳನ್ನು ಒದಗಿಸಬೇಕು. ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಲು ಜವಾಬ್ದಾರಿವಹಿಸಲಾದ ಅಧಿಕಾರಿಗಳು ಸಮನ್ವಯ ಸಾಧಿಸಲು ಪೊಲೀಸ್ ಇಲಾಖೆ ಹ್ಯಾಂಡ್ಸೆಟ್ ವೈವಸ್ಥೆ ಕಲ್ಪಿಸಬೇಕು. ಒಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ನೀಡಲಾದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
  ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ರಂಗಪ್ಪ ಅವರು ಮಾತನಾಡಿ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ರಾಷ್ಟ್ರಪತಿಗಳ ಆಪ್ತಾ ಶಾಖೆಗೆ ಕಳುಹಿಸಿಕೊಡಲಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಜೂನ್ 27 ರಂದು ಮಧ್ಯಾಹ್ನ 3 ಗಂಟೆಗೆ ಶತಮಾನೋತ್ಸವ ಕಾರ್ಯಕಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ರಾಜ್ಯಪಾಲರು ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
 ಮುಡಾ ಆಯುಕ್ತರಾದ ಪಾಲಯ್ಯ, ಪಾಲಿಕೆ ಆಯುಕ್ತರಾದ ಬೆಟ್ ಸೂರು ಮಠ್, ಅಪರ ಜಿಲ್ಲಾಧಿಕಾರಿ ಅರ್ಚನಾ, ಉಪ ಪೊಲೀಸ್ ಆಯುಕ್ತರಾದ ಶೇಖರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.