Thursday, 26 March 2015
Tuesday, 24 March 2015
ಮೈಸೂರು ಸುದ್ದಿಗಳು
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಮಾರ್ಚ್ 25 ರಂದು ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಮೆರವಣಿಗೆ ನಡೆಯಲಿದೆ ಹಾಗೂ ಬೆಳಿಗ್ಗೆ 11 ಗಂಟೆಗೆ ಶ್ರೀ ರಂಗಚಾರ್ಲು ಪುರಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಮಾಧ್ಯಮ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೋರಿದೆ.ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮೀಸಲಾತಿ ನೀತಿಯ ಹೊಸ ದೃಷ್ಟಿಕೋನ ನಿರ್ಧಾರವಾಗಲಿದೆ
ಮೈಸೂರ24- ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿ ಹಮ್ಮಿಕೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯವು ಮೀಸಲಾತಿ ನೀತಿಯ ಹೊಸ ದೃಷ್ಟಿಕೋನ ನಿರ್ಧಾರವಾಗಲಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಉಷಾರಾಣಿ ಹೇಳಿದರು.
ಇಂದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕುರಿತು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು ಸಮರ್ಪಕ ಹಾಗೂ ಯಶಸ್ವಿ ಅನುಷ್ಠಾನಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಗತ್ಯ. ಜಾತಿ ಎಂಬುವುದು ಬಹಳ ಸೂಕ್ಷ್ಮದ ವಿಷಯ. ಬಹಳಷ್ಟು ಜಾತಿಗಳು ಹಾಗೂ ಉಪ ಜಾತಿಗಳು ಅಳಿವಿನಂಚಿನಲಿವೆ. ಸಮೀಕ್ಷೆಯಿಂದ ರಾಜ್ಯದಲ್ಲಿ ಎಷ್ಟು ಜಾತಿಗಳಿವೆ ಎಂಬುದು ಗೊತ್ತಾಗುವುದರ ಜೊತೆಯಲ್ಲಿ ಅಂಕಿ ಅಂಶಗಳು ಲಭ್ಯವಾಗುತ್ತವೆ. ಭಾರತೀಯರು ದಾಖಲೀಕರಣ ಎಷ್ಟು ಮಹತ್ವದ್ದು ಎಂಬುದನ್ನು ಅರಿಯಬೇಕು. ಕೊಡವ ಭಾಷೆ ಹೇಗೆ ಸೃಜಿಸಿತು ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳಿಲ್ಲ. ಆದರೆ, ಈ ಮಾಹಿತಿಯನ್ನು ಲಂಡನ್‍ನಲ್ಲಿ ಸಂರಕ್ಷಿಸಿಡಲಾಗಿದೆ ಎಂದು ತಿಳಿಸಿದರು.
ಪ್ರತಿ 5 ವರ್ಷಕೊಮ್ಮೆ ನಿರಂತರವಾಗಿ ಸಾಮಾಜಿಕ ಹಾಗೂ ಶೈಕ್ಷೆಣಿಕ ಸಮೀಕ್ಷೆ ನಡೆದರೆ ಸಮಾಜ ಸುಧಾರಿಸಲಿದೆ. ಸಮೀಕ್ಷೆ ಕುರಿತು ಕೆಲವು ಸಮುದಾಯದವರಿಗೆ ಅಸಮಾಧಾನವಿದ್ದರೂ ಇತರೆ ಸಮುದಾಯಗಳಿಗೆ ಸಾಮಾಜಿಕ ನ್ಯಾಯಕ್ಕಾಗಿ ಅನುಕೂಲವಾಗಲಿದೆ. ಸರ್ಕಾರದ ಸವಲತ್ತು ಹಂಚಿಕೆಯಲ್ಲಿನ ದುರುಪಯೋಗಕ್ಕೆ ತಡೆ ಬೀಳಲಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಅವರು ಭಾರತದಲ್ಲಿ ಜಾತಿ ಎಂಬ ಮೂಲಭೂತ ಆಧಾರವಿಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಪ್ರತಿಯೊಬ್ಬರು ತಮ್ಮ ಜಾತಿಯನ್ನು ನಿರ್ಭಯದಿಂದ ಹೇಳಿಕೊಳ್ಳುವ ಮೂಲಕ ಸಾಂಸ್ಕøತಿಕ ನೆಲೆ ಉಳಿಯುವಂತೆ ಮಾಡಬೇಕು. ಸಂಘ ಸಂಸ್ಥೆಗಳ ಮೇಲೆ ಬಹಳಷ್ಟು ಜವಾಬ್ದಾರಿಗಳಿದೆ. ಸಮೀಕ್ಷೆಯ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವ ಮೂಲಕ ಜನರನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ಅಂದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾತರ ದೇಶವನ್ನು ಜಾತಿ ಸಮಾನತೆ ರಾಷ್ಟ್ರದ ಕನಸು ಕಂಡಿದ್ರು. ಆದರೇ ಜಾತಿ ನೋಡಿ ಮನೆ ಬಾಡಿಗೆ ನೀಡುವ ಸಂಪ್ರದಾಯ ಮೈಸೂರು ನಗರದಲ್ಲಿ ಇಂದಿಗೂ ಜೀವಂತವಿದೆ. ಮನೆ ಬಾಡಿಗೆಗಾಗಿ ತಮ್ಮ ಜಾತಿಯನ್ನೇ ಅನೇಕರು ಮರೆಮಾಚುವ ವಾತಾವರಣ ಸೃಷ್ಟಿಯಾಗಿದೆ. ಯಾರೂ ಸಹ ತಮ್ಮ ಜಾತಿ ಕುರಿತು ಕೀಳರಿಮೆ ಸೃಷ್ಟಿಸಿಕೊಳ್ಳಬಾರದು ಎಂದು ಹೇಳಿದರು.
ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪ ಸಂಪಾದರಾದ ಚೀ.ಜ.ರಾಜೀವ್ ಮಾತನಾಡಿ ಕೆಲವು ಜಾತಿಗಳಿಗೆ ಮೀಸಲಾತಿ ಇದೆ ಎಂಬುದೇ ಗೊತ್ತಿಲ್ಲ. ಅಂತವರಿಗೆ ತಿಳಿ ಹೇಳಲು ಈ ಸಮೀಕ್ಷೆ ಮಾರ್ಗದರ್ಶನವಾಗಲಿದೆ. ನಮ್ಮಲ್ಲಿ ಎಷ್ಟು ಜಾತಿಗಳಿವೆ, ಅಳಿವಿನಂಚಿನಲ್ಲಿರುವ ಜಾತಿಗಳ ಅಂಕಿ ಸಂಖ್ಯೆಗಳೆಷ್ಟು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಡಾ.ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ.
ಮೈಸೂರು,ಮಾ.24.ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಮಾಜಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರನಾಯಕ ಡಾ.ಬಾಬು ಜಗಜೀವನರಾಂ ಜಯಂತಿಯನ್ನು ಏಪ್ರಿಲ್ 5 ರಂದು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಾದಿನಾಚರಣೆಯನ್ನು ಏಪ್ರಿಲ್ 14 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಪ್ರಿಲ್ 5 ರಂದು ಬೆಳಿಗ್ಗೆ 9 ಗಂಟೆಗೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಡಾ. ಬಾಬು ಜಗಜೀವನ ರಾಂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಚಾಲನೆ ನೀಡಲಾಗುವುದು. ಏಪ್ರಿಲ್ 14 ರಂದು ಬೆಳಿಗ್ಗೆ 9 ಗಂಟೆಗೆ ಪುರಭವನದ ಆವರಣದಲ್ಲಿರುವ ಡಾ: ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ನಂತರ ವಿವಿಧ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು.
ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮಗಳು ಕಲಾಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭಗೊಳ್ಳಲಿದ್ದು, ಕಾರ್ಯಕ್ರಮವು ಅತ್ಯಂತ ಮಹತ್ವದಾಗಿರುವುದರಿಂದ ಎಲ್ಲ ಇಲಾಖೆಗಳ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಮಾರಂಭದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ತಿಳಿಸಿದರು.
ಡಾ. ಬಾಬು ಜಗಜೀವನರಾಂ ಜಯಂತ್ಯೋತ್ಸವದಲ್ಲಿ ಭಾಗವಹಿಸುವ ಗಣ್ಯರಿಗೆ ಡಾ. ಬಾಬು ಜಗಜೀವನರಾಂ ಕುರಿತು ಮುದ್ರಿಸಿರುವ ಪುಸ್ತಕ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಪ್ರಕಟಿಸಿರುವ ಪುಸ್ತಕಗಳನ್ನು ನೀಡಿ ಸ್ವಾಗತಿಸಬೇಕು ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯಿಂದ ಡಾ. ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗಳ ಸ್ವಚ್ಛತೆ ಹಾಗೂ ಪಾಲಿಷ್ ಮಾಡುವುದು. ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ, ರೈಲ್ವೆ ನಿಲ್ದಾಣದ ವೃತ್ತದ ಬಳಿ ಶಾಮಿಯಾನ, ಆಸನ, ಹೂವಿನಹಾರ, ದೀಪ ಮತ್ತು ಪೂಜಾ ಸಾಮಗ್ರಿ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಪುತ್ಥಳಿಯ ಬಳಿ ಬ್ಯಾಂಡ್ ಸೆಟ್, ಸಮಾರಂಭ ಸ್ಥಳದಲ್ಲಿ ತಂಪು ಪಾನೀಯ, ಉಚಿತ ಸಹಿ ತಿಂಡಿ/ಲಡ್ಡು ವ್ಯವಸ್ಥೆ, ಸಮಾರಂಭ ಹೂ ಕುಂಡಗಳಲ್ಲಿ ಅಲಂಕರಿಸುವ ವ್ಯವಸ್ಥೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮುಡಾ ಆಯುಕ್ತ ಪಾಲಯ್ಯ, ಜಿಲ್ಲಾ ಪಂಚಾಯತ್ ಪಿ.ಎ.ಗೋಪಾಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ, ಮೈಸೂರು ಜಿಲ್ಲಾ ಯೋಜನಾ ಸಮಿತಿ ಸದಸ್ಯ ಪದ್ಮನಾಭ್, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಮುಖಂಡರುಗಳಾದ ವಾಸು, ಲಿಂಗರಾಜು ಮಲ್ಲಾಡಿ, ಸೋಮಯ್ಯ ಮಲಿಯೂರು ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದರು.
(ಛಾಯಾಚಿತ್ರ ಲಗತ್ತಿಸಿದೆ).
ಮಾರ್ಚ್ 26 ರಂದು ಸಿನಿಮಾ ಸಮಯದಲ್ಲಿ ದಿ ಅದರ್ ಸನ್ ಚಿತ್ರ ಪ್ರದರ್ಶನ
ಮೈಸೂರು,ಮಾ.24. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮೈಸೂರು ಫಿಲ್ಮ್ ಸೊಸೈಟಿ, ಅಲಿಯನ್ಸ್ ಫ್ರೆಂಚೈಸ್ ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಮಾರ್ಚ್ 26 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಲೊರೆನ್ ಲೆವಿ ನಿರ್ದೇಶನದ ದಿ ಅದರ್ ಸನ್ ಚಲನಚಿತ್ರ ಪ್ರದರ್ಶಿಸಲಾಗುವುದು. ಯುದ್ದದ ದಾಳಿಯ ವೇಳೆ ಆಸ್ಪತ್ರೆಯಲ್ಲಿ ಅದಲು-ಬದಲಾಗುವ ಮಕ್ಕಳು ವಿಭಿನ್ನ ಪರಿಸರದ ಕುಟುಂಬಗಳಲ್ಲಿ ಬೆಳೆಯುತ್ತವೆ. ಜ್ಯೂಯಿಷ್ ಕುಟುಂಬ ಹಾಗೂ ಪ್ಯಾಲೆಸ್ತೀನಿನ ಮುಸ್ಲಿಂ ಕುಟುಂಬದ ಮಕ್ಕಳು ಅದಲು ಬದಲಾಗಿರುತ್ತವೆ ಸತ್ಯ ತಿಳಿದುಬಂದಾಗ ಎರಡೂ ಕುಟುಂಬಗಳು ಅದನ್ನು ಸ್ವೀಕರಿಸುವ ಬಗ್ಗೆ ಹಾಗೂ ತಾಕಲಾಟಗಳನ್ನು ಚಿತ್ರ ನಿರೂಪಿಸಿತ್ತದೆ.
ಇದಕ್ಕೂ ಮುನ್ನ ಸಂಜೆ 5-30 ಗಂಟೆಗೆ ಖ್ಯಾತ ನಟಿ ಬಿ. ಸರೋಜದೇವಿ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಕೋರಿದ್ದಾರೆ.
ಸನ್ಮಾನ ಸಮಾರಂಭ
ಮೈಸೂರು,ಮಾ.24.-ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಸೇವೆಯಿಂದ ನಿವೃತ್ತಿಯಾದ ಪ್ರಯುಕ್ತ ಪ್ರೊ. ಪ್ರಕಾಶ್ ಆರ್. ನಾಯಕ್ ಅವರಿಗೆ ಸನ್ಮಾನ ಸಮಾರಂಭವನ್ನು ಮಾಚ್ ್ 27 ರಂದು ಸಂಜೆ 4 ಗಂಟೆಗೆ ಪ್ರಾಣಿ ಶಾಸ್ತ್ರ ಅಧ್ಯಯನ ವಿಭಾಗದ ಸೆಮಿನಾರ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ.ಎಸ್.ರಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಬೇಸಿಗೆ ಕಾಲ: ಮೈಸೂರು ಮಹಾನಗರ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮ
ಮೈಸೂರು,ಮಾ.24.ಮಬೇಸಿಗೆಕಾಲದಲ್ಲಿ ಕಾಲರ/ ಕರುಳುಬೇನೆಯಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಸಿ.ಜಿ. ಬೆಟಸೂರ್ ಮಠ್ ಅವರು ತಿಳಿಸಿದ್ದಾರೆ
ಹೋಟಲ್, ಕ್ಯಾಂಟಿನ್, ಫಾಸ್ಟ್ ಪುಡ್ ಹುದ್ದಿಮೆದಾರರು ಗ್ರಾಹಕರಿಗೆ ಬಿಸಿಯಾದ ನೀರು, ಶುಚಿಯಾದ ಆಹಾರವನ್ನು ಸರಬರಾಜು ಮಾಡಬೇಕು. ತಟ್ಟೆ ಮತ್ತು ಲೋಟ್‍ಗಳನ್ನು ಸೋಪಿನ ನೀರು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು. ನೆಲ ಮತ್ತು ಟೇಬಲ್‍ಗಳನ್ನು ಕ್ರಿಮಿನಾಶಕ ಉಪಯೋಗಿ ಶುಚಿಗೊಳಿಸಬೇಕು. ಅಡಿಗೆ ಮನೆ ಹಾಗೂ ಹೋಟಲ್‍ನ ಸುತ್ತಮುತ್ತ ಆವರಣವನ್ನು ಶುಚಿಯಾಗಿರಿಸಬೇಕು. ಆಹಾರ ಪಾದಾರ್ಥ ಉತ್ತಮ ಗುಣಮಟ್ಟದಾಗಿರಬೇಕು. ಸಪ್ಲೆಯರ್ ಆರೋಗ್ಯವಂತರಾಗಿರಬೇಕು.
ಶೌಚಾಲಯ ವ್ಯವಸ್ಥೆ ಉತ್ತಮವಾಗಿರಬೇಕು. ಸಿದ್ದಪಡಿಸಿದ ತಿಂಡಿ ಪದಾರ್ಥಗಳನ್ನು ಕಡ್ಡಾಯವಾಗಿ ಗ್ಲಾಸ್ ಕೇಸ್‍ನಲ್ಲಿ ಇಡಬೇಕು. ಪುಟ್‍ಪಾತ್‍ನಲ್ಲಿ ತಿಂಡಿ ಪದಾರ್ಥ ಮಾರಾಟ ಮಾಡುವವರು ಕೊಯ್ದು ಹಣ್ಣು ಹಂಪಲುಗಳನ್ನು ಸೊಳ್ಳೆ, ನೊಣ ಬೀಳದಂತೆ ಗಾಜಿನ ಪಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಮೈಸೂರು,ಮಾ.24.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(ಶೇ. 24.10), ಇತರೆ ಹಿಂದುಳಿದ ವರ್ಗ(ಶೇ. 7.25) ಮತ್ತು ವಿಕಲಚೇತನರಿಗಾಗಿ(ಶೇ. 3) 2012-13, 2013-14 ರ ಮೊತ್ತ ಮತ್ತು 2014-15ನೇ ಸಾಲಿನ ಅನುದಾನದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ವಿಕಲಚೇತನರಿಂದ ಅರ್ಜಿ ಆಹ್ವಾನಿಸಿದೆ.
ನಿವೇಶನ ಖರೀದಿ, ಮನೆ ನಿರ್ಮಾಣ, ಸಣ್ಣ ಉದ್ದಿಮೆ, ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಅಡುಗೆ ಅನಿಲ ಸಂಪರ್ಕ ಪಡೆಯಲು ಸಹಾಯಧನ, ವಿಕಲಚೇತನರಿಗೆ ನಾಲ್ಕು ಚಕ್ರದ ವಾಹನ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದ್ದು ಆಸಕ್ತರು ಏಪ್ರಿಲ್ 22 ರೊಳಗಾಗಿ ನಗರಪಾಲಿಕೆಯ ವಲಯ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 0821-2418807ನ್ನು ಸಂಪರ್ಕಿಸುವುದು.
ಮಾ. 25 ರಂದು ದೇವರ ದಾಸಿಮಯ್ಯ ಜಯಂತಿ
ಮೈಸೂರು,ಮಾ.24.-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಮಾರ್ಚ್ 25 ರಂದು ದೇವರ ದಾಸಿಮಯ್ಯ ಜಯಂತಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಮೆರವಣಿಗೆ ನಡೆಯಲಿದ್ದು, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಹೊರಟು ಆಯುರ್ವೇದ ವೃತ್ತ, ಇರ್ವಿನ್ ರಸ್ತೆ, ಜನತಾ ಬಜಾರ್ ವೃತ್ತ ತಲುಪಿ ಅಶೋಕ ರಸ್ತೆ ಮೂಲಕ ಶ್ರೀರಂಗಾಚಾರ್ಲು ಪುರಭವನ ತಲುಪುವುದು. ಬೆಳಿಗ್ಗೆ 10-15 ಗಂಟೆಗೆ ಶ್ರೀರಂಗಾಚಾರ್ಲು ಪುರಭವನದಲ್ಲಿ ಮೈಸೂರಿನ ಉದಯ ಕಿರಣ ಹಾಗೂ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಶ್ರೀರಂಗಾಚಾರ್ಲು ಪುರಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ಜಿ.ಟಿ. ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾಧು, ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಾಮಣಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಜಯಂತಿಯಲ್ಲಿ ಮೈಸೂರು ನಗರದ ಎಲ್ಲಾ ರಾಜ್ಯ ಸರ್ಕಾರಿ ಇಲಾಖೆ, ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳ ಅಧಿಕಾರಿಗಳು/ ನೌಕರರು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕೋರಿದ್ದಾರೆ.
ಸಾಮಾನ್ಯ ಸಭೆ ಮುಂದೂಡಿಕೆ
ಮೈಸೂರು,ಮಾ.24.-ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಾರ್ಚ್ 25 ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ದೇವರ ದಾಸಿಮಯ್ಯ ಜಯಂತಿ ಪ್ರಯುಕ್ತ ಏಪ್ರಿಲ್ 7 ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆ
ಮೈಸೂರು,ಮಾ.24. ಕೇಂದ್ರ ಲೋಕಸೇವಾ ಆಯೋಗವು ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿಗೆ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನೀಕಲ್ ಇಂಜಿನಿಯರಿಂಗ್ ಎಲೆಕ್ಷ್ರೀಕಲ್ ಇಂಜಿನಿಯರಿಂಗ್, ಎಲೆಕ್ಷ್ರಾನೀಕ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ವಯೋಮಿತಿ 01-01-2015 ಕ್ಕೆ 30 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಹಾಗೂ ಓ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ. ಅರ್ಜಿ ಶುಲ್ಕ 200/- ಮಹಿಳಾ ಅಭ್ಯರ್ಥಿ, ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಅಂಗವಿಕಲರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-04-2015 ಯಾಗಿದ್ದು, ಹೆಚ್ಚಿನ ಮಾಹಿತಿಗೆ ತಿತಿತಿ.uಠಿsಛಿ.gov.iಟಿ. ಕೇಂದ್ರ ಲೋಕಸೇವ ಆಯೋಗದ ದೂರವಾಣಿ ಸಂಖ್ಯೆ 011-23385271/011-23381125/011- 23098543 ಅಥವಾ ಸಿ.ವಿಶ್ವನಾಥ ಭರಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ದೂರವಾಣಿ ಸಂಖ್ಯೆ 0821-2489972 ರವರನ್ನು ಕಚೇರಿಯ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ವಿದ್ಯುತ್ ಹರಿಸುವಿಕೆ: ಎಚ್ಚರ ವಹಿಸಿ
ಮೈಸೂರು,ಮಾ.24. ಮೈಸೂರು ತಾಲ್ಲೂಕು ದೂರ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ 1 ಘಿ 8 ಎಂ.ವಿ.ಎ, 66/11ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ನೂತನವಾಗಿ ನಿರ್ಮಿಸಿರುವ 66ಕೆ.ವಿ. ಮಾರ್ಗದಲ್ಲಿ ದಿನಾಂಕ. 27.03.2015 ರಂದು ವಿದ್ಯುತ್ ಹರಿಸಲಾಗುವುದು.
ಈ ಮಾರ್ಗವು ಕಡಕೊಳ-ಸಂತೆಸರಗೂರು ಮಾರ್ಗದಿಂದ ಹಾದು ಹೋಗುತ್ತವೆ. ಸಾರ್ವಜನಿಕರು ವಿದ್ಯುತ್ ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಹತ್ತುವುದಾಗಲಿ ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ತಂತಿ ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದುವುಗಳನ್ನು ಎಳೆಯುವುದಾಗಲಿ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡುವುದು ತುಂಬಾ ಅಪಾಯಕಾರಿಯಾಗಿದ್ದು ಪ್ರಾಣ ಹಾನಿ ಸಹ ಉಂಟಾಗಬಹುದು.
ಈ ಸೂಚನೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣ ಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರರಲ್ಲ ಎಂದು ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರ ಫೋನ್-ಇನ್- ಕಾರ್ಯಕ್ರಮ
ಮೈಸೂರು,ಮಾ.24.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015 ರಂದು ಶುಕ್ರವಾರ ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.
ಗಂಡನ ಕೊಲೆ ಮಾಡಿದ್ದ ಪತ್ನಿ ಸೇರಿ ಮೂವರ ಬಂಧನ
ಮೈಸೂರು,ಮಾ.24- ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆಮಾಡಿದ್ದ ಆರೋಪದ ಮೇಲೆ ಪತ್ನಿ ಸೇರಿ ಮೂವರನ್ನು ಟಿ. ನರಸೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕು ಮಾಂಬಳ್ಳಿ ಗ್ರಾಮ ವಾಸಿ ಲೀಲಾವತಿ, ಆಕೆಯ ಪ್ರಿಯಕರ ಸಿದ್ದರಾಜು ಮತ್ತು ಸಹಚರ ರೇವಣ್ಣ ಎಂಬುವವರೇ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ. ಲೀಲಾವತಿ ಕಳೆದ 8 ವರ್ಷಗಳ ಹಿಂದೆ ಮಾಂಬಳ್ಳಿಯ ಬಸವರಾಜು ಎಂಬಾತನನ್ನು ವಿವಾಹವಾಗಿದ್ದಳು, ಇವರಿಗೆ 6ವರ್ಷದ ಹೆಣ್ಣುಮಗಳು ಇದ್ದಾಳೆ, ಲೀಲಾವತಿಗೆ ಅದೇಗ್ರಾಮದ ಸಿದ್ದರಾಜು ಪರಿಚಯವಾಗಿ ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು, ಈ ವಿಷಯ ಪತಿ ಬಸವರಾಜನಿಗೆ ಗೊತ್ತಾಗಿ ಹೆಂಡತಿ ಜೊತೆ ಜಗಳವಾಡುತ್ತಿದ್ದ , ಪ್ರತಿದಿನ ಇಬ್ಬರ ನಡುವೆ ಗಲಾಟೆ ನಡೆ3ಯುತ್ತಿತ್ತು. ಇದನ್ನು ಸಹಿಸಿಕೊಳ್ಳದ ಲೀಲಾವತಿ ಇತ್ತೀಚೆಗೆ ಕೆಲ ದಿನಗಳ ಹಿಂದೆ ತನ್ನ ಪ್ರಿಯಕರ ಸಿದ್ದರಾಜುಗೆ ಹೇಳಿ ಕೊಲೆ ಸಂಚು ರೂಪಿಸಿದ್ದಾಳೆ, ಸಿದ್ದರಾಜು ಪ್ರಿಯತಮೆಯ ಮಾತುಕೇಳಿ ತನ್ನ ಸ್ನೇಹಿತ ರೇವಣ್ಣನನ್ನು ಜೊತೆಗೆ ಸೇರಿಸಿಕೊಂಡು ಆಯುಧಗಳಿಂದ ಹೊಡೆದು ಕೊಲೆಮಾಡಿ ತಂದು ಟಿ.ನರಸೀಪುರದ ಕಪಿಲಾ ನದಿಯ ಸೇತುವೆಯ ಕೆಳಗೆ ಬಿಸಾಕಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಟಿ.ನ.ಪುರ ಪೊಲೀಸರು, ಮೊದಲು ಸತ್ತವ್ಯಕ್ತಿಯ ಗುರುತು ಗ್ರಾಮವನ್ನು ಪತ್ತೆಹಚ್ಚಿ ತನಿಖೆ ನಡೆಸಿದಾಗ ಬಸವರಾಜುವಿನ ಮಗಳು ನೀಡಿದ ಸುಳುವಿನ ಮೇರೆಗೆ ಆರೋಪಿಗಳನ್ನು ಪತ್ಯೆಹಚ್ಚಿ ಅವರುಗಳನ್ನು ಬಂಧಿಸಿ ಕರೆತಂದು ವಿಚಾರಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾರೆ ಎಂದು ಹೇಳಲಾಗಿದೆ.
ಮಹಿಳೆಯ ಚಿನ್ನದ ಸರ ಅಪಹರಣ
ಮೈಸೂರು,ಮಾ.24- ವಿಳಾಸ ಕೇಳೂವ ನೆಪ0ದಲ್ಲಿ ಬಂದ ಸರಗಳ್ಳರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ 100ಗ್ರಾಂ ತೂಕದ ಚಿನ್ನದ ಸರಕಿತ್ತು ಪರಾರಿಯಾಗಿರುವ ಘಟನೆ ಮೈಸೂರಿನ ನೇತಾಜಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಅದೇ ಬಡಾವಣೆಯ ವಾಸಿ ಸುಶೀಲ(40) ಎಂಬುವರೇ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಇಂದು ಬೆಳಿಗ್ಗೆ ಸುಮಾರು 9ರ ಸಮಯದಲ್ಲಿ ಮನೆಯಮುಂದೆ ಇದ್ದ ಸುಶೀಲ ಬಳಿಗೆ ಬಂದ ಆಗಂತುಕರು ಯಾವುದೋ ವಿಳಾಸ ಕೇಳಿದ್ದಾರೆ, ನಂತರ ಆಕೆಯನ್ನು ಬೆದರಿಸಿ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಗಿದ್ದಾರೆ ಇದರಿಂದ ಆತಂಕಗೊಂಡ ಮಹಿಳೆ ಕಿರುಚಿಕೊಂಡು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿ ನಂತರ ತಮ್ಮ ಮನೆಯವರ ಮುಖಾಂತರ ನಜರ್‍ಬಾದ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರು ದಾಖಲಿಸಿ ಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
----------------------------------------------------------------
ಮಾ.26ರ ಮದ್ಯರಾತ್ರಿಯಿಂದ ಆಟೊರಿಕ್ಷಾ ಬಂದ್
ಮೈಸೂರು,ಮಾ.24- ಮೈಸೂರು ಜಿಲ್ಲಾಡಳಿತ ಹಾಗೂ ಆರ್.ಟಿ.ಒ. ಅಧಿಕಾರಿಗಳು ನಗರದೊಳಗೆ ನ್ಯಾನೋ ಟ್ಯಾಕ್ಸಿ ಕಾರುಗಳನ್ನು ಓಡಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಮಾ. 26ರ ಮಧ್ಯರಾತ್ರಿಯಿಂದ 27ರ ಮದ್ಯರಾತ್ರಿವರೆಗೆ ನಗರದ ಎಲ್ಲಾ ಆಟೋರಿಕ್ಷಾಗಳನ್ನು ರಸ್ತೆಗಿಳಿಯಲು ಬಿಡದೆಬಂದ್ ಆಟೋ ಬಂದ್ ನಡೆಸಲಾಗುವುದು ಎಂದು ಆಟೋ ಸಂಘದ ಗೌ. ಆಧ್ಯಕ್ಷ ಎನ್. ಲಕ್ಷಣ್ಮ್ ತಿ9ಳಿಸಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಹಲವಾರು ಬಾರಿ ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸಿ ಈ ಆದೇಶ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರೂ ಸಹ ಜಿಲ್ಲಾ ಧಿಕಾರಿಗಳು ಈ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ, ಯಾವುದೆ ಕಾರಣಕ್ಕೂ ಈ ಆದೇಶ ಹಿಂಪ0ಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ,
ಓಲಾ, ಟ್ಯಾಕ್ಸಿ ಪಾರ್ ಸ್ಯೂರ್, ಹುಂಬರ್ ನಂತಹ ಟ್ಯಾಕ್ಸಿಗಳು ನಗರದಿಂದ 25 ಕಿ.ಮೀ. ದೂರಕ್ಕೆ ಮಾತ್ರ ಕೆರೆದೊಯ್ಯಲು ಅವಕಶವಿರುತ್ತದೆ ಆದರೆ ಇವರುಗಳು ನಗರದೊಳಗೆ ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಸ್ಥಳೀಯ ಆಟೋಚಾಲಕರಿಗೆ ತೊಮದರೆಯಾಗುತ್ತಿದೆ, ಇಲ್ಲಿ 35 ಸಾವಿರ ಆಟೋ ಚಾಲಕರಿದ್ದು, ಸುಮಾರು ಒಂದು ಲಕ್ಷ ಕುಟುಂಬಗಳು ಇದನ್ನೇ ನಂಬಿ ಜೀವನ ಸಾಗಿಸುತ್ತಿವೆ ಆದ್ದರಿಮದ ಜಿಲ್ಲಾಧಿಕಾರಿಗಳು ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಆಟೊಸಂಘದ ಪ್ರತಿನಿಧಿಗಳಾದ ಎಡ್ವಿನ್‍ವಿಲ್ಸನ್, ಬಿ.ಟಿ.ರಾಜು ಹಾಗೂ ಆಟೋಚಾಲಕರುಗಳು ಸಂಘದ ಪದಾಧಿಕಾರಿಗಳು ಉಪಸ್ಥೀತರಿದ್ದರು.

ಸರ್ವಜನಾಂಗ ಹಿತರಕ್ಷಣಾ ವೇದಿಕೆಯಿಂದ ಅಂತರಾಷ್ಟ್ರೀಯಾ ಮಹಿಳಾ ದಿನ ಚರಣೆ
ಮೈಸೂರು,ಮಾ.24- ಮೈಸೂರು ಜಿಲ್ಲೆಯ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಮಹಿಳಾ ವಿಭಾಗ ವತಿಯಿಂದ ಇದೆ ತಿಂಗಳ 29ರ ಭಾನುವಾರ ನಗರದ ಕಲಾ ಮಂದಿರದ ಮನೆಯಂಗಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧುಕ್ಷೆ ಡಾ, ಪುಷ್ಪಾಅಮರ್‍ನಾಥ್ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಮಹಿಳಾ ಅಧ್ಯಕ್ಷೆ ಸಿ.ಯಶೋಧ ನಾರಾಯಣ್ ವಹಿಸಲಿದ್ದಾರೆ, ಮುಖ್ಯ ಭಾಷಣಕಾರರಾಗಿ ಮೈ.ವಿ.ವಿಯ ಪೋಸ್ಟ್ ಡಾಕ್ಟರ್ ಆಫ್ ಆಲ್ ಫೆಲೋಡಾ. ಎಂ. ಕನ್ನಿಕಾ ಮಾತನಾಡಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಸ.ಜ.ಹಿ.ವೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೆಹೆನಾಬಾನು, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಉಪಮೇಯರ್ ಮಹದೆವಮ್ಮ, ವಜ್ರೇಗೌಡ, ಹರೀಶ್ಗೌಡ, ಡಾ. ಗೀತಾ ಅವದಾನಿ, ಗಿಡಮೂಲಿಕೆ ವೃದ್ಯೆ ಮಾಸ್ತಮ್ಮ, ನೀಲಮ್ಮ, ಖುರ್ಷಿದ್‍ಬೇಗಂ, ಬಿ,ಟಿ.ರಾಜಮ್ಮ, ಪಿ.ಯು.ವೇದಾವತಿ ಮುಂತಾದವರು ಭಾಗವಹಿಸಲಿದ್ದಾರೆ.

Monday, 23 March 2015
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮಾಧ್ಯಮ ಸಂವಾದ
ಮೈಸೂರು,ಮಾ.23-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು, ಹಿಂದುಳಿದ ವರ್ಗಗಳ ಆಯೋಗ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಸರ್ವರ ಸಮೀಕ್ಷೆ -ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವಿಷಯ ಕುರಿತು ಮಾಧ್ಯಮ ಸಂವಾದ ಆಯೋಜಿಸಲಾಗಿದೆ.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ದಿನಾಂಕ 24-03-2015 ರಂದು ಬೆಳಿಗ್ಗೆ 11 ಗಂಟೆಗೆ ಸಂವಾದ ಆಯೋಜಿಸಲಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಎನ್. ಉಷಾರಾಣಿ ಆಶಯ ನುಡಿಗಳನ್ನಾಡುವರು. ಮೈಸೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ|| ಶಿವಪ್ಪ, ವಿಜಯ ಕರ್ನಾಟಕ ಪತ್ರಿಕೆ ಮುಖ್ಯ ಉಪ ಸಂಪಾದಕ ಚೀ.ಜ. ರಾಜೀವ್ ಪ್ರತಿಕ್ರಿಯೆ ನೀಡುವರು. ಜಿಲ್ಲಾಧಿಕಾರಿ ಸಿ. ಶಿಖಾ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಹಿಂದುಳಿದ ವರ್ಗಗಳ ಇಲಾಖೆಯು ಜಿಲ್ಲಾ ಅಧಿಕಾರಿ ಜಿ.ಎಸ್. ಸೋಮಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಗ್ರಾಹಕರಿಂದ ವಿಷ ಮಿಶ್ರಿತ ಆಹಾರ ಸೇವನೆ: ಡಾ. ಚಿದಂಬರ
ಮೈಸೂರು,ಮಾ.23.ವ್ಯಾಪಾರಸ್ಥರÀ ಹೆಚ್ಚು ಲಾಭsದಾಯಕÀ ದುರಾಸೆಯಿಂದಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ವಿಷ ಮಿಶ್ರಿತ ಆಹಾರವನ್ನು ಸೇವಿಸುವಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ ಎಂದು ವೈದ್ಯಾಧಿಕಾರಿ ಡಾ|| ಚಿದಂಬರ ಅವರು ಹೇಳಿದರು.
ಇಂದು ನಗರದ ಕಲಾಮಂದಿರದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಹುತೇಕ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ಆಹಾರ ಪದಾಥರ್Àದಲ್ಲಿ ವಿಷ ಮಿಶ್ರಿತ ರಾಸಾಯನಿಕ ಬಣ್ಣಗಳನ್ನು ಬೆರಸುತ್ತಿದ್ದಾರೆ. ಇದ್ದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸತತವಾಗಿ 5 ರಿಂದ 6 ವರ್ಷಗಳ ಕಾಲ ಬಣ್ಣದ ರಾಸಾಯನಿಕದಿಂದ ಕೂಡಿರುವ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ಹಾಗೂ ಇತರೆ ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸನ್ನಿವೇಶಗಳು ಹೆಚ್ಚಿದೆ. ಆದ್ದರಿಂದ ಗ್ರಾಹಕರು ಆಹಾರ ಪದಾಥರ್Àಗಳನ್ನು ಖರೀದಿಸುವ ಮುನ್ನ ಬಹಳ ಎಚ್ಚರಿಕೆಯಿಂದ ಕ್ರಮ ವಹಿಸಬೇಕಾಗಿದೆ ಎಂದು ತಿಳಿಸಿದರು.
ಬಹಳಷ್ಟು ತರಕಾರಿ ಹಾಗೂ ಸೊಪ್ಪುಗಳನ್ನು ಕೊಳಚೆ ನೀರಿನಿಂದ ಬೆಳೆಯಲಾಗುತ್ತಿದೆ. ತರಕಾರಿ ಹಾಗೂ ಸೊಪ್ಪಿನ ಪೌಷ್ಠಿಕತೆ ಕಡಿಮೆಯಾದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಹಸಿ ತರಕಾರಿ ಹಾಗೂ ಸೊಪ್ಪನ್ನು ಬಿಸಿ ನೀರಿನಿಂದ ತೊಳೆಯದೆ ಸೇವಿಸಬಾರದು. ಆಹಾರ ಪದಾಥರ್Àವನ್ನು ಗ್ರಾಹಕರು ಖರೀದಿಸುವಾಗ ಅದರ ಉತ್ಪಾದನೆ ಹಾಗೂ ಬಳಕೆಯ ದಿನಾಂಕದ ಮೇಲೆ ನಿಗಾವಹಿಸಬೇಕು. ಅಲ್ಲದೇ ಗ್ರಾಹಕರು ಪದಾಥರ್Àಗಳ ಗುಣಮಟ್ಟದ ಬಗ್ಗೆ ವ್ಯಾಪಾರಸ್ಥರಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಹಾಗೂ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಎಂದು ಡಾ|| ಚಿದಂಬರ ಎಚ್ಚರಿಸಿದರು.
ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಸರಳ ನಾಯರ್ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಗ್ರಾಹಕರು ವ್ಯಾಪಾರಸ್ಥರಿಂದ ಮೋಸ ಹೋಗುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಹಣವಂತರಾಗಲು ಬಹುತೇಕ ವ್ಯಾಪಾರಿಗಳು ಗ್ರಾಹಕರನ್ನು ವಂಚಿಸಲು ಮುಂದಾಗಿದ್ದಾರೆ. ಮಾರಾಟಕ್ಕೆ ಇಟ್ಟಿರುವ ಪದಾರ್ಥಗಳ ಮೇಲೆ ಉತ್ಪಾದಕರ ಸಂಪೂರ್ಣ ವಿಳಾಸದ ಜೊತೆಯಲ್ಲಿ ಪದಾರ್ಥದ ಹೆಸರು, ತೂಕ, ಉತ್ಪಾದನೆ ಹಾಗೂ ಬಳಕೆಯ ದಿನಾಂಕಗಳನ್ನು ಮುದ್ರಿಸಿರಬೇಕು. ಇಲ್ಲದಿದ್ದಲ್ಲಿ ಉತ್ಪಾದಕರ ಮೇಲೆ ಕ್ರಮವಹಿಸಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.
ತೂಕ ಹಾಗೂ ಅಳತೆಯಲ್ಲಿ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಖರೀದಿಯ ಸಮಯದಲ್ಲಿ ಒಂದು ತೂಕವಿದ್ದರೆ ಖರೀದಿಯ ನಂತರ ಒಂದು ತೂಕವಿರುತ್ತದೆ ಎಂದು ವ್ಯಾಪಾರಸ್ಥರಿಂದ ಮೋಸಹೋದ ಬಹಳಷ್ಟು ಗ್ರಾಹಕರು ದೂರು ನೀಡಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಸಿಬ್ಬಂದಿಯಿಂದ ಕೈಗೊಂಡ ದಾಳಿಯ ಸಂದರ್ಭದಲ್ಲಿಯೂ ಈ ವಿಷಯ ಗಮನಕ್ಕೆ ಬಂದಿದೆ. ತೂಕ ಹಾಗೂ ಅಳತೆ ಯಂತ್ರಗಳನ್ನು ಪರಿಶೀಲಿಸಿ ಇಲಾಖೆ ವತಿಯಿಂದ ಮುದ್ರೆಗಳನ್ನು ಹಾಕಲಾಗಿದೆ. ಗ್ರಾಹಕರಿಗೆ ಯಾವುದೇ ಕಾರಣಕ್ಕೂ ವ್ಯಾಪರಸ್ಥರು ಪದಾರ್ಥಗಳ ತೂಕ ಅಥವಾ ಅಳತೆ ಮಾಡುವುದನ್ನು ನಿರಾಕರಿಸಬಾರದು ಎಂದು ತಿಳಿಸಿದರು.
ಗ್ರಾಹಕರು ವ್ಯಾಪರಸ್ಥರಿಂದ ಮೋಸಹೋದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ವಂಚಿತರಾದ ಗ್ರಾಹಕರು ಯಾವುದೇ ವಕೀಲರ ಸಹಾಯವಿಲ್ಲದೆಯೇ ವೇದಿಕೆಯನ್ನು ಸಂಪರ್ಕಿಸಬಹುದು. ಗ್ರಾಹಕರು ಖರೀದಿಸಿರುವ ಪದಾರ್ಥದ ರಸೀದಿಯು ವೇದಿಕೆಯಲ್ಲಿ ಮುಖ್ಯ ಪಾತ್ರವಹಿಸಲಿದೆ. ಪ್ರತಿ ಜಿಲ್ಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸ್ಥಾಪಿತಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗವನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅರ್ಚನಾ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನಾರಾಯಣ ಗೌಡ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಲತಾ, ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಭಾರತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕ ಕೆ. ರಾಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಇಲಾಖೆ ಉಪ ನಿರ್ದೇಶಕಿ ರಾಧಾ ಹಾಗೂ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದರು.
(ಛಾಯಾಚಿತ್ರ ಲಗತ್ತಿಸಿದೆ).
ಶೌಚಾಲಯ ನಿರ್ಮಾಣಕ್ಕೆ ಪ್ರೇರೆಪಿಸಲು ಜಿಲ್ಲಾ ಪಂಚಾಯತ್‍ನಿಂದ ಪತ್ರಾಂದೋಲನ
ಮೈಸೂರು,ಮಾ.23.ಮೈಸೂರು ಜಿಲ್ಲೆಯಲ್ಲಿ ಪ್ರತಿ ಮನೆಯೂ ಶೌಚಾಲಯ ಹೊಂದಿರಬೇಕು ಎಂಬ ಗುರಿ ಸಾಧಿಸಲು ಜಿಲ್ಲಾ ಪಂಚಾಯತ್ ಹೊಸ ಪ್ರಯೋಗ ಪ್ರಾರಂಭಿಸಿದೆ. ಅದೇ ಪತ್ರಾಂದೋಲನ.
ಮಕ್ಕಳೇ ನಾಳಿನ ಭವಿಷ್ಯ. ಮಕ್ಕಳಿಂದ ಅವರ ಪೋಷಕರ ಮನ ಬದಲಾವಣೆ ಸಾಧ್ಯ. ಮಕ್ಕಳ ಮೂಲಕ ಜನಸಾಮಾನ್ಯರ ಮನಮುಟ್ಟಿ ಶೌಚಾಲಯ ಇಲ್ಲದವರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗುವಂತೆ ಮಾಡಲು ಜಿಲ್ಲಾ ಪಂಚಾಯತ್ ಆಧ್ಯಕ್ಷರಾದ ಡಾ; ಬಿ. ಪುಷ್ಪಾ ಅಮರನಾಥ್ ಅವರು ಮಕ್ಕಳಿಗೆ ಪತ್ರ ಬರೆಯುತ್ತಿದ್ದಾರೆ.
ಪತ್ರದಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಹಾಗೂ ಮಹಾತ್ಮ ಗಾಂಧೀಜಿಯವ ಸ್ವಚ್ಛ ಭಾರತ್ ಕನಸನ್ನು ವಿವರಿಸುತ್ತಾ ಅವರು ಮಕ್ಕಳಿಗೆ ಮೊಬೈಲ್‍ಗೆ ಇಷ್ಟೊಂದು ಪ್ರಾಮುಖ್ಯತೆ ನೀಡುವ ನಾವು ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ 12,000/- ಹಾಗೂ ಪರಿಶಿಷ್ಟ ಜಾತಿ/ವರ್ಗದವರಿಗೆ 15,000/- ನೀಡುತ್ತದೆ ಇದನ್ನು ಉಪಯೋಗಿಸಿಕೊಂಡು ಏಕೆ ಶೌಚಾಲಯ ನಿರ್ಮಿಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ.
1ನೇ ತರಗತಿಯಿಂದ 10 ನೇ ತರಗತಿಯವರೆಗೆ 4.5 ಲಕ್ಷ ಮಕ್ಕಳಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ 61,585 ವಿದ್ಯಾರ್ಥಿಗಳು ಹಾಗೂ ಅಂಗನವಾಡಿಯಲ್ಲಿ 75,000 ಮಕ್ಕಳು ಇದ್ದಾರೆ. ಈ ಪತ್ರವನ್ನು ಮಕ್ಕಳಿಗೆ ತಲುಪಿಸುವ ಕುರಿತಂತೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಚರ್ಚಿಸಿದರು.
ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪತ್ರ ತಲುಪಿಸುವುದು ಸ್ವಲ್ಪ ಕಷ್ಟಕರ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜೂನ್ ಮಾಹೆಯಲ್ಲಿ ಶಾಲಾ ಕಾಲೇಜು ಪ್ರಾರಂಭವಾದ ಸಂದರ್ಭದಲ್ಲಿ ಪತ್ರವನ್ನು ಮಕ್ಕಳಿಗೆ ತಲುಪಿಸಿ. ಅದಕ್ಕೆ ಬೇಕಾಗುವ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಿ. ದಾಖಲಾತಿಗಾಗಿ ಆಗಮಿಸುವ ಮಕ್ಕಳು ಹಾಗೂ ಪೋಷಕರಿಗೆ ಶೌಚಾಲಯ ನಿರ್ಮಾಣದ ಉಪಯುಕ್ತತೆಯ ಬಗ್ಗೆ ತಪ್ಪದೇ ತಿಳಿಸಿ ಎಂದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಸೌಲಭ್ಯ ಪಡೆದುಕೊಳ್ಳುವ ಫಲಾನುಭವಿಗಳಿಂದ ಅವರ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ಮಾಹಿತಿ ಪಡೆಯಿರಿ ಇಲ್ಲಾವಾದಲ್ಲಿ ಅವರಿಗೆ ಸರ್ಕಾರದ ಸಹಾಯಧನದ ಬಗ್ಗೆ ಮಾಹಿತಿ ನೀಡಿ ಶೌಚಾಲಯ ನಿರ್ಮಾಣದ ಅರ್ಜಿ ನೀಡುವಂತೆ ತಿಳಿಸಿದರು.
ಸರ್ಕಾರವು ಮೈಸೂರು ಜಿಲ್ಲೆಗೆ 2014-15 ನೇ ಸಾಲಿನಲ್ಲಿ 50,948 ಶೌಚಾಲಯ ನಿರ್ಮಾಣದ ಗುರಿ ನಿಗಧಿಪಡಿಸಿತ್ತು. ಫೆಬ್ರವರಿ 2015 ರ ಅಂತ್ಯದವರೆಗೆ 45,822 ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಮಾಚ್ ್ ಅಂತ್ಯದೊಳಗಾಗಿ ಸರ್ಕಾರ ನಿಗಧಿಪಡಿಸಿರುವ ಗುರಿ ಸಾಧಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಮಾದಪ್ಪ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮುಖ್ಯ ಯೋಜನಾಧಿಕಾರಿ ಮಹೇಶ್, ಡಯಟ್ ಪ್ರಾಂಶುಪಾಲ ಬಸವರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ.ಪುಟ್ಟು, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆ
ಮೈಸೂರು,ಮಾ.23.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರನಾಯಕರಾದ ಡಾ.ಬಾಬು ಜಗಜೀನವರಾಂ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಬಗ್ಗೆ ಚರ್ಚಿಸಲು ಮಾರ್ಚ್ 24 ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ
ಮೈಸೂರು,ಮಾ.23.(ಕ.ವಾ.)-ಮೈಸೂರು ನಗರದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ದಿನಾಂಕ: 30-03-2015 ರಿಂದ 13-04-2015 ರವರೆಗೆ ನಡೆಯಲಿದೆ. ಪರೀಕ್ಷೆ ನಡೆಯುವ 54 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ|| ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
1973ರ ಸಿ.ಆರ್.ಪಿ.ಸಿ. ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶದನ್ವಯ ಪರೀಕ್ಷಾ ಕೇಂದ್ರಗಳ ಬಳಿ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ, ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಮಾ. 25 ರಂದು ದೇವರ ದಾಸಿಮಯ್ಯ ಜಯಂತಿ
ಮೈಸೂರು,ಮಾ.23.(ಕ.ವಾ.)-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಮಾರ್ಚ್ 25 ರಂದು ದೇವರ ದಾಸಿಮಯ್ಯ ಜಯಂತಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಮೆರವಣಿಗೆ ನಡೆಯಲಿದ್ದು, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆ ಜೆ.ಕೆ.ಗ್ರೌಂಡ್ಸ್ ಮೈದಾನ ಆವರಣದಿಂದ ಹೊರಟು ಆಯುರ್ವೇದ ವೃತ್ತ, ಇರ್ವಿನ್ ರಸ್ತೆ, ಜನತಾ ಬಜಾರ್ ವೃತ್ತ ತಲುಪಿ ಅಶೋಕ ರಸ್ತೆ ಮೂಲಕ ಶ್ರೀರಂಗಾಚಾರ್ಲು ಪುರಭವನ ತಲುಪುವುದು. ಬೆಳಿಗ್ಗೆ 10-15 ಗಂಟೆಗೆ ಶ್ರೀರಂಗಾಚಾರ್ಲು ಪುರಭವನದಲ್ಲಿ ಮೈಸೂರಿನ ಉದಯ ಕಿರಣ ಹಾಗೂ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ಜಿ.ಟಿ. ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾಧು, ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಾಮಣಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಜಯಂತಿಯಲ್ಲಿ ಮೈಸೂರು ನಗರದ ಎಲ್ಲಾ ರಾಜ್ಯ ಸರ್ಕಾರಿ ಇಲಾಖೆ, ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳ ಅಧಿಕಾರಿಗಳು/ ನೌಕರರು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕೋರಿದ್ದಾರೆ.
***

Saturday, 21 March 2015
ಡಿಕೆ ರವಿ ನಿಗೂಢ ಸಾವು ಪ್ರಕರಣ: ಯಾವುದೇ ಸಂಗತಿಯನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ.
ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸಂಗತಿಗಳನ್ನು ಮುಚ್ಚಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದು, ಈ ಸಾವಿನ ಹಿಂದೆ ಯಾರದಾದರೂ ಕೈವಾಡವಿದ್ದರೆ ಅವರನ್ನೂ ರಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸದನದಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸರಕಾರದ ನಿಲುವೇನೆಂಬುದನ್ನು ಸ್ಪಷ್ಟಪಡಿಸುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದರು. ರವಿ ಸಾವಿನ ಪ್ರಕರಣವನ್ನು ಸಿಐಡಿ ಬದಲು ಸಿಬಿಐಗೆ ವಹಿಸಬೇಕೆಂದು ವಿರೋಧ ಪಕ್ಷ ಮತ್ತು ಸಾರ್ವಜನಿಕರಿಂದ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲೇಬೇಕಾಗಿದೆ.
ಕಡೆಗೂ ಬಾಯಿಬಿಟ್ಟ ಸಿದ್ದು ಕೋಲಾರದ ಡಿಸಿಯಾಗಿದ್ದಾಗ ಡಿಕೆ ರವಿ ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಕೆಲ ರಾಜಕಾರಣಿಗಳಿಂದ ಡಿಕೆ ರವಿಯವರಿಗೆ ಬೆದರಿಕೆಯ ಕರೆಗಳೂ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೋಲಾರದಿಂದ ಬೆಂಗಳೂರಿಗೆ ಅವರನ್ನು ಟ್ರಾನ್ಸ್‌ಫರ್ ಮಾಡಲಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೂಡ ತೆರಿಗೆಗಳ್ಳರ ವಿರುದ್ಧ ರವಿ ತಿರುಗಿಬಿದ್ದಿದ್ದರು. ಅವರಿಂದ ಕೊಲೆ ಬೆದರಿಕೆ ಕರೆ ಬಂದಿದ್ದರಿಂದ ರವಿಯವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಪಿರಿಯಾಪಟ್ಟಣ ಪೋಲೀಸ್ ಸುದ್ದಿ
“ತಂದೆಯನ್ನೇ ಕೊಲೆ ಮಾಡಿದ ಮಕ್ಕಳು
- 24 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ ಬೆಟ್ಟದಪುರ ಪೊಲೀಸರು”
ದಿನಾಂಕ 19.03.2015 ರಂದು ಬೆಳಿಗ್ಗೆ 7.00 ಗಂಟೆಯಲ್ಲಿ ಪಿರಿಯಾಪಟ್ಟಣ ತಾಲ್ಲೋಕು, ಹಲಗನಹಳ್ಳಿ ಗ್ರಾಮದ ಕೆರೆಯ ಮೇಲ್ಭಾಗ ಕಲ್ಲು ಕಟ್ಟಡದ ಬಳಿ ರಸ್ತೆಯ ಕೆಳಗೆ ಗೋಣಿ ಚೀಲದ ಸಮೇತ ಒಂದು ಗಂಡಸು ಶವ ಬಿದ್ದಿದ್ದು, ಸುಮಾರು 50 ವರ್ಷ ವಯಸ್ಸಿನ ಗಂಡಸಿನ ಶವವಾಗಿದ್ದು, ಆತನ ಎರಡು ಕಾಲುಗಳಿಗೆ ರಕ್ತಗಾಯ ಆಗಿದ್ದು, ಬಲ ಮೊಣಕಾಲು ಮುರಿದಿದ್ದು, ಎಡಗಾಲು ಜಜ್ಜಿದಂತೆ ರಕ್ತ ಗಾಯವಾಗಿರುತ್ತೆ. ಬಲ ಮೊಣಕೈ ಬಳಿ ತರಚಿದ್ದು ಬಿಳಿ ಮತ್ತು ಕಪ್ಪು ಬಣ್ಣದ ಗಡ್ಡ ಮೀಸೆ ಇದ್ದು, ಒಂದು ಮಾಸಲು ಬಣ್ಣದ ಅಂಡರ್ ವೇರ್ ಮತ್ತು ನೀಲಿ ಮತ್ತು ಕೇಸರಿ ಮಾಸಲು ಬಣ್ಣದ ಟೀಶರ್ಟ್ ಧರಿಸಿದ್ದು, ತಲೆಯ ಮೇಲೆ ರಕ್ತ ಗಾಯವಾಗಿರುತ್ತದೆಂದು ಶ್ರೀ.ಇರ್ಫಾನ್ ಪಾಷ ಬಿನ್ ಮಹಮ್ಮದ್ ದಸ್ತಗೀರ್ ಹಲಗನಹಳ್ಳಿ ಗ್ರಾಮ, ಪಿರಿಯಾಪಟ್ಟಣ ತಾಲ್ಲೋಕು. ರವರು ನೀಡಿದ ದೂರಿನ ಮೇರೆಗೆ ಬೆಟ್ಟದಪುರ ಪೊಲೀಸ್ ಠಾಣಾ ಮೊನಂ 39/2015 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳ ಪತ್ತೆ ಬಗ್ಗೆ ಶ್ರೀ.ಅಭಿನವ ಖರೆ – ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಮೈಸೂರು ರವರ ಮಾರ್ಗದರ್ಶನದ ಮೇರೆಗೆ, ಅಪರ ಪೊಲೀಸ್ ಆಧೀಕ್ಷಕರು ಕಲಾ ಕೃಷ್ಣಸ್ವಾಮಿ, ರವರ ನಿರ್ದೇಶನದಂತೆ ಶ್ರೀ.ಡಿ.ಜಯರಾಮ್-ಹುಣಸೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕÀು, ಶ್ರೀ.ಪ್ರಸನ್ನ ಕುಮಾರ್- ಪಿರಿಯಾಪಟ್ಟಣ ವೃತ್ತ ನಿರೀಕ್ಷಕರ ರವರ ನೇತೃತ್ವದಲ್ಲಿ ಪಿಎಸ್‍ಐ ರವರಾದ ಶ್ರೀ ಅನಿಲ್ ಕುಮಾರ್, ಮತ್ತು ಶ್ರೀ.ಮುದ್ದುಮಹದೇವ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡದವರು ಪ್ರಕರಣದ ತನಿಖೆಯನ್ನು ಮುಂದುವರೆಸಿ, ಮೃತ ವ್ಯಕ್ತಿಯು, ದೇವರಸಯ್ಯ ಬಿನ್ ಬೂವಯ್ಯ, 48 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಂಜೀವಿ ನಗರ (ಮಂಡ್ಯ ಶೆಡ್), ಬಿಳಿಕರೆ ಹೋಬಳಿ, ಹುಣಸೂರು ತಾಲ್ಲೋಕು ಎಂದು ಪತ್ತೆಮಾಡಿರುತ್ತಾರೆ.
ನಂತರ ಮೃತನ ಮಕ್ಕಳಾದ ಕೆಂಡಗಣ್ಣ ಮತ್ತು ಶಿವಲಿಂಗ ರವರುಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿ, ತಂದೆ ದೇವರಸಯ್ಯ ಆಗ್ಗಾಗೆ ಕುಡಿದು ಗಲಾಟೆ ಮಾಡುತ್ತಿದ್ದರಿಂದ, ಇಬ್ಬರು ಸೇರಿಕೊಂಡು ತನ್ನ ತಂದೆಯ ಕಾಲಿನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಶವವನ್ನು ಯಾರಿಗೂ ಗೊತ್ತಾಗದಿರಲಿ ಎಂದು ಆಟೋದಲ್ಲಿ ಹಾಕಿಕೊಂಡು 80 ಕಿ.ಮೀ ದೂರದ ಹಲಗನಹಳ್ಳಿ ಗ್ರಾಮದ ಬಳಿ ಇರುವ ಹಾರನಕಟ್ಟೆ ಕೆರೆ ಬಳಿ ಬಿಸಾಕಿ ಹೋಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ.
ನಂತರ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಕಲ್ಲು, ಹಾಗೂ ಕೆಎ 45 – 7137ರ ಗೂಡ್ಸ್ ಆಪೇ ಆಟೋವನ್ನು ಅಮಾನತ್ತು ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ.
ಆರೋಪಿತರ ವಿವರ ಈ ಕೆಳಕಂಡಂತೆ ಇರುತ್ತದೆ.
1. ಕೆಂಡಗಣ್ಣ ಬಿನ್ ದೇವಸರಯ್ಯ, 29ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಂಜೀವಿ ನಗರ (ಮಂಡ್ಯ ಶೆಡ್), ಗ್ರಾಮ, ಬಿಳಿಕೆರೆ ಹೋಬಳಿ, ಹುಣಸೂರು ತಾಲ್ಲೋಕು.
2. ಶವಲಿಂಗ ಬಿನ್ ದೇವಸರಯ್ಯ, 28ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸಂಜೀವಿ ನಗರ (ಮಂಡ್ಯ ಶೆಡ್), ಗ್ರಾಮ, ಬಿಳಿಕೆರೆ ಹೋಬಳಿ, ಹುಣಸೂರು ತಾಲ್ಲೋಕು.
ಸದರಿ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಿದ ಶ್ರೀ.ಡಿ.ಜಯರಾಮ್-ಹುಣಸೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕÀು, ಶ್ರೀ ಪ್ರಸನ್ನ ಕುಮಾರ್, ಸಿಪಿಐ, ಪಿರಿಯಾಪಟ್ಟಣ ವೃತ್ತ, ಶ್ರೀ.ಅನಿಲ್ ಕುಮಾರ್, ಪಿಎಸ್‍ಐ, ಬೆಟ್ಟದಪುರ ಠಾಣೆ, ಶ್ರೀ.ಮುದ್ದುಮಹದೇವ-ಪಿಎಸ್‍ಐ ಬೈಲಕುಪ್ಪೆ ಠಾಣೆ, ಶ್ರೀ.ಜಯಸ್ವಾಮಿ-ಎಎಸ್‍ಐ, ರಂಗಸ್ವಾಮಿಶೆಟ್ಟಿ-ಎಎಸ್‍ಐ ಹಾಗೂ ಸಿಬ್ಬಂದಿಗಳಾದ ಶ್ರೀ.ಬೊಮ್ಮರಸೇಗೌಡ, ಶ್ರೀ.ಜಯರಾಮೇಗೌಡ, ಶ್ರೀ.ಜಗದೀಶ, ಶ್ರೀ.ನಾರಾಯಣಶೆಟ್ಟಿ, ಶ್ರೀ.ದಿಲೀಪ, ಶ್ರೀ.ಮಧುಕುಮಾರ್, ಶ್ರೀ.ರವಿ ಕುಮಾರ್, ಶ್ರೀ.ಅಸ್ಲಂ ಪಾಷಾ, ಶ್ರೀ.ಉಮೇಶ, ಶ್ರೀ.ರವೀಶ, ಕುಮಾರಿ.ಶೀತಲ್ ರವರುಗಳ ಕಾರ್ಯವನ್ನು ಶ್ರೀ.ಅಭಿನವ ಖರೆ – ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ರವರು ಶ್ಲಾಘಿಸಿ, ಬಹುಮಾನ ಘೋಷಿಸಿರುತ್ತಾರೆ.
Subscribe to:
Posts (Atom)