Tuesday, 3 March 2015

ಮೈಸೂರು
ಕಳೆದ ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿರುವ ಫಾಲ್ಕಾನ್ ಟೈರ್ಸ್ ಕಾರ್ಖಾನೆಯನ್ನು ವಶಕ್ಕೆ ಪಡೆದು ಪುನಾರಂಭಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಫಾಲ್ಕಾನ್ ಟೈರ್ಸ್ ಎಂಪ್ಲಾಯೀಸ್ ಯೂನಿಯನ್ ಸದಸ್ಯರು ಮಂಗಳವಾರ ನಗರದಲ್ಲಿ ಬೈಕ್ ರ್ಯಾಲಿ ಹಾಗೂ ಕಾಲ್ನಡಿಗೆ ನಡೆಸಿದರು.
ನಗರದ ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿದ ಸದಸ್ಯರು, ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ಮೈಸೂರಿನ ಪ್ರತಿಷ್ಠಿತ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆದಿದ್ದ ಫಾಲ್ಕಾನ್ ಟೈರ್ಸ್ ಇತ್ತೀಚಿನ ದಿನಗಳಲ್ಲಿ ಮುಳುಗುವ ಹಂತ ತಲುಪಿರುವುದು ದುರದೃಷ್ಟಕರ. ಕಂಪನಿಯನ್ನು ವಹಿಸಿಕೊಂಡು ಕಾರ್ಖಾನೆಯನನು ವಿಸ್ತರಿಸುವ ನಾಟಕವಾಡಿದ ಮಾಲೀಕರು, ವಿವಿಧ ಬ್ಯಾಂಕ್‍ಗಳಿಂದ ಅಗತ್ಯಕ್ಕಿಂತ ಹೆಚ್ಚು ಹಣ ಸಾಲ ಪಡೆದು ಅದರ ಹೊರೆಯನ್ನು ಕಾರ್ಖಾನೆ ಮೇಲೆ ವಹಿಸಿದ್ದಾರೆ. ಕಂಪೆನಿಯ ಮೂಲ ಬಂಡವಾಳ, ಆದಾಯ ಮತ್ತು ಬ್ಯಾಂಕ್ ಸಾಲಗಳಿಂದ ಪಡೆದ ಹಣವನ್ನು ಅನ್ಯ ಕಾರಣಕ್ಕೆ ಬಳಕೆ ಮಾಡಿದ್ದರಿಂದ ಕಾರ್ಖಾನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.
ಕಳೆದ 40 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಯಲ್ಲಿ ನಿತ್ಯ 34, 000 ಟೈರುಗಳು, 18,000 ಟ್ಯೂಬುಗಳನ್ನು ತಯಾರಿಸುತ್ತಿತ್ತು. ತಿಂಗಳಿಗೆ 1,200 ಕೋಟಿ ವಹಿವಾಟು ನಡೆಯುತ್ತಿತ್ತು. 70 ರಿಂದ 100 ಕೋಟಿ ಆದಾಯ ತರುವ ಕಂಪೆನಿ ಇದಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಕಾರ್ಖಾನೆಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಹೀಗಿದ್ದರೂ ಒಂದೂವರೆ ವರ್ಷದಿಂದ ಹಂತ ಹಂತವಾಗಿ ಉತ್ಪನ್ನವನ್ನು ಉದ್ದೇಶಪೂರ್ವಕವಾಗಿ ಕ್ರಮೇಣ ಕಡಿಮೆಗೊಳಿಸಲಾಗಿದೆ. ಧನದಾಹಿ ಮಾಲೀಕರು ಕಂಪೆನಿ ವಿಸ್ತಾರಕ್ಕೆ ಪಡೆದ ಸಾಲ, ಕಂಪೆನಿ ಆದಾಯವನ್ನು ರಿಯಲ್ ಎಸ್ಟೇಟ್‍ಗೆ ಬಳಕೆ ಮಾಡಿದ್ದರಿಂದ ಕಳೆದ ಒಂದೂವರೆ ತಿಂಗಳಿನಿಂದ ಕಾರ್ಖಾನೆ ಮುಚ್ಚಲಾಗಿದೆ. ಇದರಿಂದ 2500 ಖಾಯಂ ಕಾರ್ಮಿಕರು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬ ಬೀದಿಗೆ ಬೀಳುವಂತಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಕಂಪೆನಿಯನ್ನು ನಡೆಸುವುದಲ್ಲದೆ, ಬಾಕಿ ವೇತನ, ಕಾರ್ಮಿಕರಿಗೆ ನೀಡಬೇಕಾದ ಇತರ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ಅಧ್ಯಕ್ಷ ಡಿ.ವಿ. ದೇವರಾಜು, ಸಂಘದ ಪದಾಧಿಕಾರಿಗಳಾದ ಬಿ. ರವೀಂದ್ರ, ವಿ. ಕುಮಾರ್, ಲಕ್ಷ್ಮೀನಾರಾಯಣ, ನಂಜುಂಡಸ್ವಾಮಿ ಸೇರಿದಂತೆ ನೂರಾರು ಮಂದಿ ಭಾಗಹಿಸಿದ್ದರು.
--------------------------------


Monday, 2 March 2015



 ಸೋಂಕು ರಹಿತ ಮಗು ಹುಟ್ಟುವುದಕ್ಕಾಗಿ ಜನರಲ್ಲಿ ಜಾಗೃತಿ ಅವಶ್ಯಕ
ಮಂಡ್ಯ ಮಾ.2(ಕರ್ನಾಟಕ ವಾರ್ತೆ) ತಂದೆ ತಾಯಿಗೆ ಸೋಂಕು ತಗುಲಿದ್ದರೂ ಹುಟ್ಟುವ ಮಗು ಸೋಂಕು ರಹಿತವಾಗಿ ಹುಟ್ಟುವುದಾಕ್ಕಾಗಿ ಜನರಲ್ಲಿ ಜಾಗೃತಿ ಅವಶ್ಯಕ ಎಂದು ಆರೋಗ್ಯ ಸಚಿವ ಯೂ.ಟಿ.ಖಾದರ್ ಅವರು ತಿಳಿಸಿದರು.     ಅವರು ಸೋಮವಾರ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ “ಸಮಗ್ರ ಜನ ಜಾಗೃತಿ ಅಭಿಯಾನ” ಮನೆ ಮನೆ ಮಾಹಿತಿ ಆಂದೋಲನ ಮೂಲಕ ಹೆಚ್.ಐ.ವಿ/ ಏಡ್ಸ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
     ಎಚ್‍ಐವಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಶೂನ್ಯಕ್ಕೆ ತರಬೇಕು, ಅದಕ್ಕೆ ತಂದು ನಿಲ್ಲುವಲ್ಲಿ ರಾಜ್ಯ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ತಿಳಿಸಿದ ಸಚಿವರು ಸೋಂಕು ರಹಿತ ಮಗುವನ್ನು ರೂಪಿಸುವಲ್ಲಿ ಜವಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಈ ನಿಟ್ಟಿನಲ್ಲಿ ಜನ ಸಾಮಾನ್ಯರೂ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಮುಂದಿನ ದಿನಗಳಲ್ಲಿ ಸೋಂಕು ರಹಿತ ರಾಜ್ಯವಾಗಿ ಮಾಡಲು ಮುಂದಾಗಬೇಕು ಎಂದು ಅವರು ತಿಳಿಸಿದರು.
   ಸಮಸ್ಯೆಗಳು ಮನುಷ್ಯನಿಗೆ ಬರುವುದು ಸಹಜ ಅದನ್ನು ಆತ್ಮ ವಿಶ್ವಾಸದಿಂದ ಎದುರಿಸಬೇಕು. ಅಲ್ಲದೆ ಸಾರ್ವಜನಿಕರು ಕೂಡ ಎಚ್‍ಐವಿ ಸೋಂಕು ತಗುಲಿದ ವ್ಯಕ್ತಿಯನ್ನು ಸ್ನೇಹಿತರಂತೆ ಕಾಣಬೇಕು ಎಂದು ಸಚಿವರು ತಿಳಿಸಿದರು.
    ಏಡ್ಸ್ ರೋಗಕ್ಕೆ ಇಂದು ಯುವ ಜನತೆ ಹೆಚ್ಚು ಬಲಿಯಾಗುತ್ತಿದ್ದು, ಅದರಲ್ಲಿಯೂ ಹಳ್ಳಿಗಳಲ್ಲಿ ಎಚ್‍ಐವಿ ಪೀಡಿತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಬೆಳವಣಿಗೆ ದೇಶದ ಭವಿಷ್ಯಕ್ಕೆ ಮಾರಕವಾಗುತ್ತಿದ್ದು, ಯುವ ಜನತೆಗೆÉ ಏಡ್ಸ್ ಬಗ್ಗೆ ಅರಿವು ಹಾಗೂ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲಲಿತಾ ಪ್ರಕಾಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಕಲಾ ನಂಜುಂಡಚಾರ್, ರಾಜ್ಯ ಏಡ್ಸ್ ಪಿವೆನ್ಷನ್ ಸೊಸೈಟಿ ನಿರ್ದೇಶಕರಾದ ಎಸ್.ಜಿ. ವಿಜಯಾ, ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಚೇಗೌಡ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಶಶಿಧರ್ ಬಸವರಾಜು ಹಾಗೂ ಇತರರು ಉಪಸ್ಥಿತರಿದ್ದರು.

                ಮಾ. 10 ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
      ಮಾರ್ಚ್ 10, 2015 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲಲಿತಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಮಾಹಿತಿ ತಂತ್ರಜ್ಞಾನ ಕನ್ಸ್‍ಲ್ಡ್‍ಂಟ್ (ಜೂನಿಯರ್ ಪ್ರೊಗ್ರಾಮರ್) ಹುದ್ದೆಗೆ ಅರ್ಜಿ ಆಹ್ವಾನ
   ಮಂಡ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯಾದ ನಾಗಮಂಗಲ ಪಟ್ಟಣ ಪಂಚಾಯಿತಿ ಕಚೇರಿಗೆ, ಮಾಹಿತಿ ತಂತ್ರಜ್ಞಾನ ಕನ್ಸ್‍ಲ್ಡ್‍ಂಟ್ (ಜೂನಿಯರ್ ಪ್ರೊಗ್ರಾಮರ್) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ದಿನಾಂಕ 27-2-2015ರಲ್ಲಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-3-2015 ಆಗಿದ್ದು, ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಗಳನ್ನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ಮಂಡ್ಯ ಜಿಲ್ಲೆ ಮಂಡ್ಯರವರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿ ಪುರ ಗ್ರಾಮದಲ್ಲಿ ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ ಇವರು ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಮದ್ದೂರಿನ ಸ್ವಾಮಿ ವಿವೇಕಾನಂದ ಯುವ ಸಾಂಸ್ಕøತಿಕ ಕ್ರೀಡಾ ಸಂಘ ಹಾಗೂ ಮನುಜ ಮತ ಸೇವಾ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಸ್ಫರ್ಧೆಗೆ ಕಾವೇರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ. ನಂಜಪ್ಪ ಚಾಲನೆ ನೀಡಿದರು.  ನಂತರ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ವಾಮಿ ವಿವೇಕಾನಂದ ಯುವ ಸಾಂಸ್ಕøತಿಕ ಕ್ರೀಡಾ ಸಂಘ ಅಧ್ಯಕ್ಷ ಲಾರಾ ಪ್ರಸನ್ನ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಕ್ರೀಡೆಗಳಲ್ಲಿ ಯುವತಿಯರು ಪಾಲ್ಗೊಳ್ಳುವುದು ಕ್ಷೀಣಿಸುತ್ತಿದ್ದು ಇಂದು ಪುರ ಗ್ರಾಮದಲ್ಲಿ 150ಕ್ಕೂ ಹೆಚ್ಚು ಯುವತಿಯರೇ ಕೆಸರು ಗದ್ದೆ ಆಟಗಳಲ್ಲಿ ಭಾಗವಹಿಸಿರುವುದು ಮಂಡ್ಯ ಜಿಲ್ಲೆಯ ಗ್ರಾಮೀಣ ಕ್ರೀಡೆ ಹಾಗೂ ಸಂಸ್ಕøತಿಯನ್ನು ಮತ್ತೆ ಸಾರುವ ಕೆಲಸ ಆಗುತ್ತಿದೆ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಸಂಸ್ಕøತಿ, ಜನಪದ, ಕ್ರೀಡೆಗಳನ್ನ ಆಡುವುದರ ಜೊತೆಗೆ ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಸಂಘ ಸಂಸ್ಥೆಗಳ ಮೇಲಿದೆ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರ ಗ್ರಾ.ಪಂ ಸದಸ್ಯ ಮಹದೇವಪ್ಪ ವಹಿಸಿ ಮಾತನಾಡಿದರು.  ನಂತರ ನಡೆದ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಯುವತಿಯರು ಭಾಗವಹಿಸಿ ಎದ್ದು ಬಿದ್ದು ನಾ ಮುಂದು ತಾ ಮುಂದು ಎನ್ನುತ್ತಾ ಗುರಿ ಮುಟ್ಟಲು ಹರ ಸಾಹಸಪಟ್ಟರು.  ನಂತರ ಕೂಸುಮರಿ ಓಟ, ತುಂಬಿದ ನೀರಿನ ಬಿಂದಿಗೆ ಓಟ, ಹಗ್ಗ ಜಗ್ಗಾಟ ಮತ್ತು ಕೆಸರುಗದ್ದೆಯಲ್ಲಿ ಫ್ಯಾಶನ್ ಷೋ ಸ್ಪರ್ಧೆಗಳನ್ನು ಉತ್ಸುಕತೆಯಿಂದ ಪಾಲ್ಗೊಂಡು ಗ್ರಾಮದ ಗ್ರಾಮಸ್ಥರಿಗೆ ಹಾಗೂ ನೆರೆದಿದ್ದ ಕ್ರೀಡಾ ಪೋಷಕರಿಗೆ ಮುದ ನೀಡಿದರು.  ಈ ಸಂದರ್ಭದಲ್ಲಿ ಗ್ರಾ.ಪಂ ಪಿ.ಡಿ.ಓ ಚಂದ್ರು ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ. ನಾರಾಯಣ ಕೆ ಬಿ ಮತ್ತು ಪ್ರೊ. ಪ್ರಮೀಳ ಎಂ ಬಿ, ಸಹಾಯಕ ನವೀನ್ ಕುಮಾರ್ ಎಂ ಎಸ್, ಗ್ರಾಮದ ಮುಂಖಡರುಗಳಾದ ಪ್ರಪುಲ್ಲಚಂದ್ರ, ಹಿರಿಯ ಸ್ವಯಂಸೇವಕಿ ಸುಕೃತ ಜಿ ಸಿ, ಸುಷ್ಮ ಎನ್ ಆರ್, ನಾಗರತ್ನ ಕೆ ಪಿ, ಸಂಧ್ಯಾ ಎಂ ಸಿ  ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು.
ಸ್ಪರ್ಧೆ ವಿಜೇತರ ವಿವರ.
1. ನೀರು ತುಂಬಿದ ಬಿಂದಿಗೆ ಓಟ: ಅಶ್ವಿನಿ ಎಸ್ (ಪ್ರಥಮ), ಕಾವ್ಯ ಹೆಚ್ ಕೆ (ದ್ವಿತೀಯ) & ರಮ್ಯ ಎ (ತೃತೀಯ).
2. ಕೂಸು ಮರಿ ಓಟ: ರಮ್ಯ – ಅಶ್ವಿನಿ (ಪ್ರಥಮ), ಮಾನಸ - ಸುಷ್ಮಾ ಸಿ ಎನ್ (ದ್ವಿತೀಯ).
3. ಹಗ್ಗ ಜಗ್ಗಾಟ ಸ್ಪರ್ಧೆ: ನರ್ಮದಾ ತಂಡ (ಪ್ರಥಮ), ಕಾವೇರಿ ತಂಡ  (ದ್ವಿತೀಯ)
4. 50 ಮೀ ಓಟದ ಸ್ಪರ್ಧೆ: ಸಹನ ಹೆಚ್.ಎಸ್ (ಪ್ರಥಮ), ಹರ್ಷಿತ ಎಲ್ ಎಸ್ (ದ್ವಿತೀಯ) ಪದ್ಮಶ್ರೀ ಎಸ್ (ತೃತೀಯ) ಸ್ಥಾನ ಪಡೆದರು.
5. ಗ್ರಾಮದ ಪುಟಾಣಿಗಳಿಗೆ ನಡೆದ ಓಟದ ಸ್ಪರ್ಧೆ ವಿಜೇತರ ವಿವರ: ಪ್ರಜ್ವಲ್ (ಪ್ರಥಮ), ಬಸವ (ದ್ವಿತೀಯ), ಚಂದನ್ (ತೃತೀಯ).
6. ಗ್ರಾಮದ ಯುವಕರ ಹಗ್ಗ ಜಗ್ಗಾಟ ಸ್ಪರ್ಧೆ : ಪುರ ಗ್ರಾಮದ ತಂಡ (ಪ್ರಥಮ), ಮಲ್ಲಿಗೆರೆ ಯುವ ತಂಡ (ದ್ವಿತೀಯ)
ವಿಶೇಷವೆಂಬಂತೆ ಈ ಎಲ್ಲಾ ಸ್ಪರ್ಧೆಗಳು ಕೆಸರು ಗದ್ದೆಯಲ್ಲೇ ನಡೆದು ನೆರೆದಿದ್ದವರನ್ನು ಖುಷಿಗೊಳಿಸಿತು.
ಕರ್ನಾಟಕ ಸರ್ಕಾರ
ಉಪನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಎರಡನೇ ಮಹಡಿ, ನಂ.17, ಭಗವಾನ್ ಮಹಾವೀರ ರಸ್ತೆ, (ಇನ್‍ಫೆಂಟ್ರಿ ರಸ್ತೆ) ಬೆಂಗಳೂರು-560 001


ವಾರ್ತಾ ವಿಶೇಷ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಹಾಗೂ ವಿದ್ಯಾರ್ಥಿವೇತನ ಸೌಲಭ್ಯ
ಬೆಂ. ಗ್ರಾ. ಜಿಲ್ಲೆ. ಮಾ: 2 _ ಅಲ್ಪಸಂಖ್ಯಾತರ ಸಮುದಾಯದ ಮುಸಲ್ಮಾನರು, ಕ್ರಿಶ್ಚಿಯನ್ನರು, ಜೈನರು, ಭೌದ್ಧರು, ಸಿಖ್ಖರು, ಮತ್ತು ಪಾರ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ಇಲಾಖೆಯು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ/ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ನರ್ಸಿಂಗ್, ಕಂಪ್ಯೂಟರ್ ತರಬೇತಿ, ಜೈನ್ ಸಮುದಾಯದವರಿಗೆ ವಿದ್ಯಾರ್ಥಿವೇತನ, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇತ್ಯಾದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.  
ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ, ಹೊಸಕೋಟೆ ಟೌನ್, ಬೆಂಗಳೂರು ಗ್ರಾಮಾಂತರ, ಬಾಲಕರಿಗೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ, ಸಿಂಡಿಕೇಟ್ ಬ್ಯಾಂಕ್ ಕಟ್ಟಡ, ಮೂರನೇ ಮಹಡಿ, ಜೆ.ಪಿ. ಆಸ್ಪತ್ರೆ ಎದುರು, ಮೈಸೂರ್ ಬ್ಯಾಂಕ್ ಹಿಂಭಾಗ, ಪರಮಣ್ಣ ಲೇಔಟ್, ನೆಲಮಂಗಲ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ನಿಯಲಗಳಿದ್ದು, ಸೌಲಭ್ಯ ಪಡೆಯುವವರು ಅರ್ಜಿಗಳನ್ನು ಆಯಾ ವಿದ್ಯಾರ್ಥಿನಿಲಯದಲ್ಲಿ  ಪಡೆಯಬಹುದು.
ವಿದ್ಯಾರ್ಥಿವೇತನ ಕಾರ್ಯಕ್ರಮಗಳು: ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ:- 1ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ರಾಜ್ಯದ ಸರ್ಕಾರಿ/ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವರ್ಷ ಒಂದಕ್ಕೆ ರೂ.1000/-ರಿಂದ 5000/- ರವರೆಗೆ ವಿದ್ಯಾರ್ಥಿವೇತನ ನೀಡಲಾಗುವುದು. ವಿದ್ಯಾರ್ಥಿವೇತನಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ತಿebsiಣe:-ತಿತಿತಿ.ಉoಞಜom.ಞಚಿಡಿ.ಟಿiಛಿ ನಲ್ಲಿ ಪಡೆಯಬಹುದು.




ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.1.00 ಲಕ್ಷಕ್ಕೆ ಮೀರಿರಬಾರದು.  ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಶೇ.50 ರಷ್ಟು ಅಂಕ ಗಳಿಸಿರಬೇಕು.  ಶೇ30 ರಷ್ಟು ವಿದ್ಯಾರ್ಥಿ ವೇತನವನ್ನು ಬಾಲಕಿಯರಿಗೆ ಮೀಸಲಿರಿಸಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ: ಪಿಯುಸಿ  ನಂತರದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‍ಡಿ.ಯವರಿಗಿನ ಎಲ್ಲಾ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಅವಕಾಶವಿದೆ.  ರಾಜ್ಯದ ಸರ್ಕಾರಿ/ಅನುದಾನಿತ/ಹಾಗೂ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾವತಿಸಿದ ಪ್ರವೇಶ ಶುಲ್ಕ ಹಾಗೂ ಭೋಧನ ಶುಲ್ಕವನ್ನು ಆಧರಿಸಿ ಗರಿಷ್ಠ ರೂ.3500/- ರಿಂದ ರೂ.7500/- ರವರೆಗೆ ಪ್ರತಿ ವರ್ಷಕ್ಕೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ನಂತರ ಅದರ ಮೂಲಪ್ರತಿಯಲ್ಲಿ ವಿದ್ಯಾರ್ಥಿಯು ಕಾಲೇಜಿನ ಪ್ರಾಂಶುಪಾಲರಿಂದ ಧೃಢೀಕರಿಸಿ ರುಜು ಪಡೆದು ಕೇಳಿರುವ ಎಲ್ಲಾ ದಾಖಲೆಗಳ (ಆದಾಯ ಪತ್ರ, ಅಂಕಪಟ್ಟಿ, ಕಾಲೇಜಿಗೆ ಕಟ್ಟಿರುವ ಶುಲ್ಕ ಜೆರಾಕ್ಸ್ ಪ್ರತಿ, ವಿದ್ಯಾರ್ಥಿಯ ಬ್ಯಾಂಕಿನ ಖಾತೆಯ ವಿವರ, ಮತ್ತು ಭಾವ ಚಿತ್ರ)¸ಮೇತ ಪೂರ್ಣ ಅರ್ಜಿಯನ್ನು ಜಿಲ್ಲಾ ಕಚೇರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಶ್ವೇಶ್ವರಯ್ಯ ಗೋಪುರ, 1ನೇ ಮಹಡಿ, ಪೋಡಿಯಂ ಬ್ಲಾಕ್, ಬೆಂಗಳೂರು-560001. ಇಲ್ಲಿಗೆ ಸಲ್ಲಿಸಬೇಕು.  
ಹೆಚ್ಚಿನ ವಿವರಗಳಿಗೆ ತಿebsiಣe:-ತಿತಿತಿ.ಉoಞಜom.ಞಚಿಡಿ.ಟಿiಛಿ ನಲ್ಲಿ ಲಭ್ಯವಿರುತ್ತದೆ. ಹಿಂದಿನ ತರಗತಿಯಲ್ಲಿ ಶೇ.50 ರಷ್ಟು ಅಂಕ ಗಳಿಸಿರಬೇಕು.   ಕುಟುಂಬದ ವಾರ್ಷಿಕ ವರಮಾನ ರೂ.2 ಲಕ್ಷಕ್ಕೆ ಮೀರಿರಬಾರದು, ಶೇ 30 ರಷ್ಟು ವಿದ್ಯಾರ್ಥಿ ವೇತನವನ್ನು ಬಾಲಕಿಯರಿಗಾಗಿ ಮೀಸಲಿರಿಸಿದೆ.


Sunday, 1 March 2015

ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ  ಅಧ್ಯಕ್ಷತೆಯಲ್ಲಿ ದಿನಾಂಕ : 02-03-2015ರಂದು ಸೋಮುವಾರ ಸಂಜೆ 4:00 ಗಂಟೆ ಮೈಸೂರು ಮಹಾನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿ ಒಳಪಟ್ಟಂತೆ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಕಸವಿಲೇವಾರಿ, ಹಳೇ ಮರಗಳನ್ನು ಕಡಿಯುವ ಸಮಸ್ಯೆ, ಉದ್ಯಾನವನಗಳ ಸಮಸ್ಯೆಯ ಬಗ್ಗೆ  ಸಭೆ ನಡೆಸಲಾಗುತ್ತದೆ ಈ ಸಂಧರ್ಭದಲ್ಲಿ ನಗರ ಪಾಲಿಕೆ ಆಯುಕ್ತರು, ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿಗಳು,  ಅಧೀಕ್ಷಕ   ಅಭಿಯಂತರರು,ಅಭಿವೃದ್ಧಿ ಅಧಿಕಾರಿ, ವಲಯ ಅಧಿಕಾರಿಗಳು ಭಾಗವಹಿಸಲಿದ್ದಾರೆ .  ಆದ್ದರಿಂದ ವರದಿಗಾರರು ಹಾಗೂ ಛಾಯಗ್ರಾಹಕರು ಕಾರ್ಯಕ್ರಮಕ್ಕೆ ಹಾಜರಾಗಿ ವರದಿಮಾಡಲು ಶಾಸಕರ ಆಪ್ತ ಸಹಾಕ ರೇವಣ್ಣ ಕೋರಿದ್ದಾರೆ.
ವದೆಹಲಿ: ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ  ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಭಾನುವಾರ ಬೆಳಗ್ಗೆ ಪಿಡಿಪಿಯ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯ್ಯದ್ ರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
 ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡು 49 ದಿನಗಳೇ ಕಳೆದರೂ ಸರ್ಕಾರ ರಚನೆ ಮಾತ್ರ ಆಗಿರಲಿಲ್ಲ.

ಇದೇ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಫ್ತಿ ಮೊಹಮದ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದರು. ಜಮ್ಮು ಯೂನಿರ್ವಸಿಟಿ ಝೋರಾವರ್ ಸಿಂಗ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಜಮ್ಮು-ಕಾಶ್ಮೀರ ರಾಜ್ಯಪಾಲ ನರೇಂದ್ರನಾಥ್ ವೊಹ್ರಾ ಅವರು ಮುಫ್ತಿ ಮೊಹಮದ್ ಅವರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಮುಫ್ತಿ ಜೊತೆಗೆ ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಅವರು ಡಿಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇನ್ನು ಸಜ್ಜಾದ್ ಲೊನ್, ಅಬ್ದುಲ್ ರೆಹಮಾನ್ ಭಟ್ ಸಚಿವರಾಗಿ, ಬಿಜೆಪಿ ಮುಖಂಡ ಚಂದ್ರಪ್ರಕಾಶ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ, ಜಾವೇದ್ ಮುಸ್ತಾಫಾ ಮೀರ್, ಬಿಜೆಪಿ ಶಾಸಕ ಲಾಲ್ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರುವಂತೆ ಬಹು ದಿನಗಳ ಕಾಂಗ್ರೆಸ್ ಮುಖಂಡರ ಒತ್ತಾಯಕ್ಕೆ ಅಂತೂ ಕಾಲ ಕೂಡಿ ಬಂದತ್ತಿದೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಜೆ ಮೇಲೆ ತೆರಳಿದ್ದು ಅವರು ಬಂದ ಮೇಲೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಇದೇ ವೇಳೆ, ಪ್ರಿಯಾಂಕ ಗಾಂಧಿಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತದೆ ಎಂದು ದೆಹಲಿಯ ಕಾಂಗ್ರೆಸ್’ನ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.

ಮುಂದಿನ ಏಪ್ರಿಲ್ನಲ್ಲಿ ಎಐಸಿಸಿ ಸಭೆಯಲ್ಲಿ ರಾಹುಲ್, ಅಧ್ಯಕ್ಷ ಗಾದಿಯನ್ನು ಏರುವ ಸಾಧ್ಯತೆ ಇದ್ದು, ಅವರ ತಂಡಕ್ಕೆ ಪ್ರಿಯಾಂಕ ಸೇರ್ಪಡೆಯಾಗಲಿದ್ದಾರೆ. ಕಾರ್ಯಕರ್ತರ ಒತ್ತಡ ಮೇರೆ ಪ್ರಿಯಾಂಕ ಸಕ್ರೀಯ ರಾಜಕೀಯಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.