ದಸಂಸ ವಿಘಟನೆಯ ಮೂಲ ಪುರುಷ ಎಚ್.ಗೋವಿಂದಯ್ಯ -ಗುರುಪ್ರಸಾದ್ ಕೆರಗೋಡು.
ದಲಿತ ಚಳವಳಿಯ ಆಂತರ್ಯದಿಂದಲೇ ಹೊರ ಬಂದಿರುವ ಎಚ್. ಗೋವಿಂದಯ್ಯರವರು ಹಲವಾರು ಸಂದರ್ಭಗಳಲ್ಲಿ ದೇವನೂರು ಮಹಾದೇವ ಮತ್ತು ದಲಿತ ಸಂಘರ್ಷ ಸಮಿತಿ ಬಗ್ಗೆ ತಮ್ಮ ಹೊಣೆಗೇಡಿ ಮಾತುಗಳ ಮೂಲಕ ಶತ್ರುಗಳಿಗಿಂತಲೂ ಮಿಗಿಲಾದ ರೀತಿಯಲ್ಲಿ ನಿಂದಿಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ದೇವನೂರ ಮಹಾದೇವ ಅವರ ವೈಚಾರಿಕತೆ, ಸಾಹಿತ್ಯ ಇತ್ಯಾದಿಗಳ ಬಗ್ಗೆ ತಮ್ಮ ಭಿನ್ನಾಭಿಪ್ರಾಯಗಳಿದ್ದರೆ, ಅಂತಹುದನ್ನು ಬರವಣಿಗೆಯಲ್ಲಿ ದಾಖಲಿಸಲಿ. ಹಾಗೆಯೇ ದಲಿತ ಚಳುವಳಿಯ ಸ್ವರೂಪ, ಕಾರ್ಯಕ್ರಮ ಹಾಗೂ ಗುರಿಗಳ ಬಗ್ಗೆ ನಿರ್ದಿಷ್ಟ ನಿಲುವುಗಳಿದ್ದರೆ ಸೂಕ್ತ ವೇದಿಕೆಗಳಲ್ಲಿ ವಿಮರ್ಶೆಗೆ ಮುಂದಾಗಲಿ. ಅದು ಬಿಟ್ಟು ದಲಿತ ಸಂಘರ್ಷ ಸಮಿತಿಯು ಛಿದ್ರಗೊಳ್ಳಲು ದೇವನೂರ ಮಹಾದೇವರವರೇ ಕಾರಣ, ಅವರಿದಲೇ ದಲಿತ ಚಳುವಳಿ ನಾಶವಾಗುತ್ತಿದೆ ಎಂಬ ಅರ್ಥದಲ್ಲಿ ಗೋವಿಂದಯ್ಯರವರು ತಮ್ಮ ನಾಲಿಗೆಯನ್ನು ಬಳಸುತ್ತಿರುವುದರಲ್ಲಿ ಹೆಚ್ಚಾಗಿ ವೈಯಕ್ತಿಕ ದ್ವೇಷ, ಈಷ್ರ್ಯೆ, ಕುಹಕ ಮುಂತಾದ ದುಷ್ಟ ವರ್ತನೆಗಳು ಕಾಣುತ್ತಿವೆಯೇ ಹೊರತು ಸಾಮಾಜಿಕ ಬದಲಾವಣೆ ಅಥವಾ ದಲಿತ ಚಳವಳಿ ಬಗೆಗಿನ ಕನಿಷ್ಟ ಕಾಳಜಿಗಳನ್ನೂ ಅವರ ಮಾತುಗಳು ದ್ವನಿಸುತ್ತಿಲ್ಲ.
ಕರ್ನಾಟಕದ ವೈಚಾರಿಕ ಆಂದೋಲನ, ಶೋಷಿತÀರ ಬಗೆಗಿನ ಕಾಳಜಿ, ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ದೇವನೂರು ಮಹಾದೇವರವರ ಪ್ರಭಾವ ಎಷ್ಟಿದೆ ಅಥವಾ ಇಲ್ಲಾ ಎಂಬುದರ ಬಗ್ಗೆ ನಾಡಿನ ಸಮಸ್ತ ಪ್ರಜ್ಞಾವಂತ ನಾಗರೀಕರು ಸ್ವತಃ ಅರಿತು; ವಿಮರ್ಶಿಸಿ, ಸ್ವೀಕರಿಸುವ ಅಥವಾ ನಿರಾಕರಿಸುವ ಮುಕ್ತ ವಾತಾವರಣಕ್ಕೆ ಯಾರೊಬ್ಬರೂ ತೊಡಕಾಗಿಲ್ಲ. ಆದ್ದರಿಂದ ದಸಂಸವು ದೇವನೂರ ಮಹಾದೇವರವರ ಪರವಾಗಿ ಯಾವುದೇ ವಕಾಲತ್ತು ವಹಿಸಬೇಕಾದ ಅಗತ್ಯವಿಲ್ಲ ಎಂಬ ತಿಳುವಳಿಕೆಯಿಂದಲೇ ಈ ಪ್ರತಿಕ್ರಿಯೆಯನ್ನು ನೀಡುತ್ತಿದೆ.
ದೇವನೂರು ಮಹಾದೇವರವರಿಂದ ದಲಿತ ಸಂಘಟನೆ/ದಲಿತ ಚಳುವಳಿಯು ಛಿದ್ರವಾಗುತ್ತಿದೆ-ನಾಶವಾಗುತ್ತಿದೆ ಎಂಬ ಗೋವಿಂದಯ್ಯನವರ ಪುನರುಚ್ಚಿತ ನೇರ-ಗಂಭೀರ ಆರೋಪವು ಸ್ವತಃ ಗೋವಿಂದಯ್ಯನವರ ಕೊರಳನ್ನೇ ಸುತ್ತಿಕೊಂಡು ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆಂಬ ಸತ್ಯವು ಸಂಘಟನೆ ಮತ್ತು ಹೋರಾಟಗಳಲ್ಲಿ ಈಗಲೂ ಸಕ್ರಿಯರಾಗಿರುವ ದಸಂಸ ಹಿರಿಯ ಕಾರ್ಯಕರ್ತರೆಲ್ಲರಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿಯಾಗಿದೆ.
ದಸಂಸ ಸಂಘಟನೆಯ ಪ್ರಾರಂಭದಲ್ಲಿ ದೇವನೂರ ಮಹಾದೇವರವರ ಸುತ್ತಾ ಉಪಗ್ರಹದಂತೆ ಸುತ್ತುತ್ತಿದ್ದ ಗೋವಿಂದಯ್ಯರವರು ಬ್ರದರ್-ಬ್ರದರ್ ಅಂತ ಹೇಳುತ್ತಲೇ ಪ್ರೊ|| ಬಿ. ಕೃಷ್ಣಪ್ಪ, ದೇವಯ್ಯ ಹರವೆ, ದಲಿತಕವಿ ಸಿದ್ದಲಿಂಗಯ್ಯ, ಓ. ಶ್ರೀಧರನ್, ಇಂದೂಧರ ಹೊನ್ನಾಪುರ, ಕೆ. ರಾಮಯ್ಯ, ರಾಮ್‍ದೇವ್ ರಾಕೆ ಇತ್ಯಾದಿ... ಮುಂಚೂಣಿ ಸಂಘಟಕರ ನಡುವೆ ಗುಮಾನಿ, ಭಿನ್ನ ಮತದ ಬಿತ್ತನೆ ಹಾಕಿ ಅದು ಬೆಳೆದು ದೊಡ್ಡದಾಗುವಂತೆ ನೋಡಿಕೊಂಡರು. ಆ ಮೂಲಕ ಪ್ರಮುಖ ಮುಂಚೂಣಿ ನಾಯಕರ ನಡುವೆ ಸಂಘಟನಾತ್ಮಕವಾಗಿ ಇರಲೇಬೇಕಾಗಿದ್ದ ಆತ್ಮೀಯತೆ, ನಂಬಿಕೆ, ವಿಶ್ವಾಸಕ್ಕೆ ಭಂಗ ತರುವ ಮೂಲಕ ದಸಂಸ ವಿಘಟನೆಗೆ ಗೋವಿಂದಯ್ಯನವರೇ ಮುನ್ನುಡಿ ಬರೆದಿದ್ದು ಎಂಬುವುದನ್ನು ಈಗ ನಾವುಗಳು ಹೇಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರೇ ಸೃಷ್ಟಿಸಿದ್ದಾರೆ.
ಚಳವಳಿಗೆ ಬೇಕಾದ ತಾತ್ವಿಕತೆ, ವೈಚಾರಿಕತೆಯನ್ನು ಪೂರೈಸುವಲ್ಲಿ ವಿಫಲರಾಗಿರುವ ಗೋವಿಂದಯ್ಯನವರು ಈಗ ಎಲ್ಲಾ ಅನಾಹುತಗಳನ್ನೂ ದೇವನೂರು ಮಹಾದೇವರೊಬ್ಬರ ತಲೆಗೆ ಕಟ್ಟಲು ಹೊರಟಿರುವುದು ಕುಚೋದ್ಯವಲ್ಲದೆ ಬೇರೇನೂ ಅಲ್ಲ. ಸಂಘಟನೆ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ನಿರ್ದಿಷ್ಟ ಉಪಜಾತಿಯನ್ನು ತನ್ನ ಸ್ವಹಿತಕ್ಕೆ, ಸಾಮಥ್ರ್ಯಕ್ಕೆ, ಕಾರ್ಯ ಸೂಚಿಗಳಿಗೆ ಅಸ್ತ್ರವಾಗಿ ಬಳಸಿಕೊಂಡಿದ್ದಲ್ಲದೆ, ದಸಂಸ ಕಾರ್ಯಕರ್ತರ ಮನಸ್ಸುಗಳಲ್ಲಿ ಈ ಬಗ್ಗೆ ಎಂದೂ ಇಲ್ಲದಿದ್ದ ಒಡಕು ಭಾವನೆಗಳಿಗೆ ಪ್ರಚೋದನೆ ನೀಡಿದ್ದು ಕೂಡ ಇದೇ ಗೋವಿಂದಯ್ಯನವರು ಅನ್ನೋದು ದಸಂಸ ಚರಿತ್ರೆಯಲ್ಲಿ ದಾಖಲಾಗಿರುವ ಮತ್ತೊಂದು ಕಠೋರ ಸತ್ಯವಾಗಿದೆ.
ದಸಂಸ ಸಂಸ್ಥಾಪಕರಲ್ಲಿ ತಾವೂ ಒಬ್ಬರಾಗಿದ್ದುಕೊಂಡು ಸಂಘÀಟನೆಯನ್ನು ಕಟ್ಟಿ ಬೆಳೆಸುವಲ್ಲಿ ಇನ್ನಿತರ ಮೂಂಚೂಣಿ ನಾಯಕರೊಟ್ಟಿಗೆ ಆರಂಭದಲ್ಲಿ ಶ್ರಮಿಸಿದ ಗೋವಿಂದಯ್ಯನವರು ತಾವೇ ಕಟ್ಟಿ ಬೆಳೆಸಿದ ಚಳುವಳಿಯನ್ನು ತಾವೇ ಕೆಡುವುವಂತಹ ವಿದ್ವಂಸÀಕ ಮನಸ್ಥಿತಿಗೆ ಹೇಗೆ ಒಳಗಾದರೆಂಬುದೇ ಆಶ್ಚರ್ಯಕರವಾದ ವಿಚಾರ. ಹಾಗಿಲ್ಲದಿದ್ದರೆ ದಸಂಸ ಸತ್ತಿದೆ, ಅದನ್ನು ದಫನ್ ಮಾಡಬೇಕು, ಸಂಘಟನೆಯಲ್ಲಿರೋರೆಲ್ಲಾ ವಸೂಲಿಕಾರರು ಎಂದೆಲ್ಲಾ ಹೇಗೆ ಹೇಳಲಿಕ್ಕೆ ಸಾಧ್ಯ. (ಈ ಎಲ್ಲಾ ಮಾತುಗಳನ್ನು ಅವರು ಈ ಹಿಂದೆ ಮಾತನಾಡಿದ್ದಾರೆ) ಅವರ ಇಂತಹ ಮಾತು ಮತ್ತು ವರ್ತನೆಯು ಈಗಲೂ ದಲಿತ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅನೇಕ ಪ್ರಾಮಾಣಿಕ ಕಾರ್ಯಕರ್ತರ ಮನಸ್ಸಿಗೆ ಆಘಾತ ಹಾಗೂ ನೋವುಂಟು ಮಾಡಿದೆ.
ಗೋವಿಂದಯ್ಯನವರಂತವರ ಮಾತು ಮತ್ತು ವರ್ತನೆಗಳಿಂದಾಗಿ ದಲಿತ ಚಳುವಳಿಯ ಜತೆಗೆ ಗುರುತಿಸಿಕೊಂಡಿದ್ದ ಅನೇಕ ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ದಲಿತ ಚಿಂತಕರಾದಿಯಾಗಿ ನಿಧಾನವಾಗಿ ಬಹುತೇಕರು ಸಂಘಟನೆಯ ಚಟುವಟಿಕೆಗಳಿಂದ ಸಕ್ರಿಯ ಸಂಬಂಧಗಳಿಂದ ದೂರವಾಗಿ ಹೋದರು. ದಲಿತ ಚಳುವಳಿಯ ಇವತ್ತಿನ ಸ್ಥಿತಿಗೆ, ಒಡಕಿಗೆ ಗೋವಿಂದಯ್ಯರವರು ಈ ವಿಧದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಆದ್ದರಿಂದ ಗೋವಿಂದಯ್ಯರವರು ದಸಂಸದ ಛಿದ್ರತೆಗೆ ಇತರರನ್ನು ಬೆರಳು ಮಾಡಿ ದೂಷಿಸುವುದಾದರೆ, ಅದು ಮೊದಲು ಅವರ ವಿರುದ್ಧವೇ ಬೆರಳು ಮಾಡಿ ತೋರಿಸುತ್ತದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.
• ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ
ವಿಳಾಸ: ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ, 10ನೇ ತಿರುವು, ಗಾಂಧಿನಗರ, ಮಂಡ್ಯ - 571 401
ಮೊಬೈಲ್ ನಂ. : 8095234299

No comments:
Post a Comment