Monday, 24 October 2016

ಭಾರತೀಯರ ರತ್ನ ಡಾ|| ಬಿ.ಆರ್.ಅಂಬೇಡ್ಕರ್: ಡಾ|| ಹೆಚ್.ಸಿ.ಮಹದೇವಪ್ಪ

ಬರ ಕಾಮಗಾರಿ ನಿರ್ವಹಣೆಗೆ ಸೂಚನೆ
      ಮೈಸೂರು.ಅ.24.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಹೀಮಾ ಸುಲ್ತಾನ್ ನಜೀರ್ ಅಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು.
     ಸಭೆಯಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾದ್ಯಾಂತ ವ್ಯಾಪಕವಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಕೈಗೊಂಡ  ಕ್ರಮದ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ ಎಂದು ಹಲವಾರು ಸದಸ್ಯರು ಪ್ರಸ್ತಾಪಿಸಿದರು.
     ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್ ಅವರು ಈ ವರ್ಷ ಶೇ. 57 ರಷ್ಟು ಮಾತ್ರ ಮಳೆಯಾಗಿದ್ದು, ಶೇ. 43 ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಒಟ್ಟು ಮಳೆ ಶೇ 80 ರಷ್ಟು ಮಳೆಯಾಗುತ್ತಿದ್ದು, ಆದರೆ ಸೆಪ್ಟೆಂಬರ್ ಶೇ. 78 ರಷ್ಟು ಮಳೆ ಕೊರತೆ ಹಾಗೂ ಅಕ್ಟೋಬರ್ ನಲ್ಲಿ  ಈವರೆಗೆ 88 ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳಿದರು.
     ಬೆಳೆ ನಷ್ಟದ ಬಗ್ಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯ ಕೈಗೊಂಡಿದೆ. ಶೇ. 90 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 1.21 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪರಿಹಾರವನ್ನು ಕೇಳಲು ಕ್ರಮವಹಿಸಿದೆ. ಕೇಂದ್ರದಿಂದ ಅನುದಾನ ಬಿಡುಗಡೆ ನಂತರ ಬೆಳೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದರು.
     2015-16ನೇ ಸಾಲ್ಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಹೊಸದಾಗಿ ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೋದನೆ ನೀಡಿರುವುದಿಲ್ಲ. 2016-17 ನೇ ಸಾಲಿಗೆ 82 ಕೋಟಿ ರೂ, ಒದಗಿಸಲಾಗಿದ್ದು, ಮುಂದುವರೆದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಬಳಸಲಾಗುತ್ತಿದೆ ಎಂದರು.
    ಬೀಕರ ಬರದ ಹಿನ್ನೆಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ. ಬರ ನಿರ್ವಹಣೆಗಾಗಿ ಜಿಲ್ಲೆಗೆ 15 ಕೋಟಿ ರೂ. ನೀಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ 13 ವಾರಕ್ಕೆ ಸಾಕಾಗುವಷ್ಟು ಮೇವು ಸಂಗ್ರಹಣೆ ಇದೆ. 16 ಕಡೆ ಮೇವು ಬ್ಯಾಂಕ್ ತೆರೆಯಲು ಪ್ರಸ್ತಾವನೆ ಇರುತ್ತದೆಎಂದರು.
    ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಸೇರಿಸಲು ಮನವಿ ಸರ್ಕಾರಕ್ಕೆ ನಿರ್ಣಾಯ ಮಾಡಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರುಗಳು ತಿಳಿಸಿದರು.
     ಪ್ರತಿ ಹೋಬಳಿಯಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವುಗಳಿಗಾಗಿ ಮೇವು ಘಟಕ ಪ್ರಾರಂಭಿಸುವಂತೆ ನಿರ್ಣಯ ಮಾಡಲು ಸಭೆ ನಿರ್ಣಯಿಸಿತು.
      ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀಯರ ರತ್ನ ಡಾ|| ಬಿ.ಆರ್.ಅಂಬೇಡ್ಕರ್: ಡಾ||      ಹೆಚ್.ಸಿ.ಮಹದೇವಪ್ಪ







 ಮೈಸೂರು.ಅ.24.ಭಾರತದ ಸಂವಿಧಾನ ರಚಿಸಿ ಎಲ್ಲರಿಗೂ ಬೇಕಿರುವ ಮೂಲಭೂತ ಹಕ್ಕುಗಳನ್ನು ಒದಗಿಸಿಕೊಟ್ಟ ಡಾ|| ಬಿ.ಆರ್ ಅಂಬೇಡ್ಕರ್ ಅವರು ಭಾರತೀಯರ ರತ್ನ ಎಂದು ಲೋಕೋಪಯೋಗಿ  ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
    ಅವರು ಇಂದು ಮೈಸೂರು ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ, ಡಾ|| ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು ಡಾ|| ಬಿ.ಆರ್.ಅಂಬೇಡ್ಕರ್  ಅವರು ಗ್ರಂಥಾಲಯದಲ್ಲೇ ತಮ್ಮ ಹೆಚ್ಚಿನ ಕಾಲ ಕಳೆದು, ಜ್ಞಾನ ವೃದ್ಧಿಸಿಕೊಂಡು ಇಡೀ ಪ್ರಪಂಚದಲ್ಲೇ 5 ಬುದ್ಧಿ ಜೀವಿಗಳಲ್ಲಿ ಒಬ್ಬರಾದರು. ಭಾರತ ದೇಶದ 125 ಕೋಟಿ ಜನರಿಗೆ ಬೇಕಿರುವ ಸಂವಿಧಾನ ರೂಪಿಸಿದ ಇವರು ಕೇವಲ ಒಂದು ವರ್ಗಕ್ಕೆ ಸೇರಿದ ನಾಯಕರಲ್ಲ. ಇಡೀ ದೇಶದ ಎಲ್ಲಾ ವರ್ಗಕ್ಕೆ ಸೇರಿದ ನಾಯಕರು ಎಂದರು.
     ಧರ್ಮ, ಗುಂಪು, ಜಾತಿ, ಲಿಂಗ ಭೇದದ ಪರಿಕಲ್ಪನೆ ಮೀರಿ ಸರ್ವರಿಗೂ ಸಮಬಾಳು ಸಮಪಾಲು ಎಂಬ ಉದ್ದೇಶದಿಂದ ಸಂವಿಧಾನ ರೂಪಿಸಿದರು. ಮತದಾನದ ಹಕ್ಕು ನೀಡಿದರು. ಮತದಾನದ ಮೂಲಕ ಉತ್ತಮ ನಾಯಕ ಹಾಗೂ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಬೇಕು. ಶೋಷಿತ ಸಮುದಾಯಗಳು ಸಂಘಟನಾತ್ಮಕ ಹೋರಾಟ ಮಾಡಬೇಕು ಆಗಲೇ  ಶೋಷಣೆಯನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
      ಡಾ|| ಬಿ.ಆರ್.ಅಂಬೇಡ್ಕರ್ ಅವರು ಕಾನೂನು, ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿ ಉತ್ತಮ ಕೊಡುಗೆಗಳನ್ನು ನೀಡಿದರು. ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಹಿಂದೂ ಕೋಡ್ ಬಿಲ್ ಅಂಗೀಕಾರವಾಗದ ಸಂದರ್ಭದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲಿಂಗ ತಾರತಮ್ಯ ವಿರುದ್ಧ ಸಹ  ಹೋರಾಟ ನಡೆಸಿದರು ಎಂದರು.
        ಡಾ|| ಬಿ.ಆರ್.ಅಂಬೇಡ್ಕರ್ ಅವರು ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ ಎಂದರು. ತಳ ಸಮುದಾಯದವರು ಸ್ವಾಭಿಮಾನದಿಂದ ಬದುಕಬೇಕು. ಮೂಡನಂಬಿಕೆಯನ್ನು ದೂರ ಮಾಡಿಕೊಂಡು ಶಿಕ್ಷಣಕ್ಕೆ  ಆದ್ಯತೆ ನೀಡಬೇಕು ಎಂದರು.
      ಪರಿಶಿಷ್ಟ ಜಾತಿ ಹಾಗೂ ವರ್ಗದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನವನ್ನು ಮೀಸಲಿಡಲಾಗಿದೆ. ಮೈಸೂರು ನಗರಕ್ಕೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿರುವ ಹಿಂದೆ ಪೌರಕಾರ್ಮಿಕರ ಶ್ರಮವಿದೆ ಎಂದರು.
      ಕಾರ್ಯಕ್ರಮದಲ್ಲಿ ಶಾಸಕ ವಾಸು, ಹೆಚ್.ಪಿ.ಮಂಜುನಾಥ್, ಸೋಮಶೇಖರ್ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್.ಭೈರಪ್ಪ, ಉಪಮಹಾಪೌರರಾದ ವನಿತಾಪ್ರಸನ್ನ, ವಿವಿಧ ಸ್ಥಯಿ ಸಮಿತಿ ಅಧ್ಯಕ್ಷರಾದ ಪುಟ್ಟಲಿಂಗು, ಬಾಲು, ಎಂ.ಕೆ.ಶಂಕರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅ. 27 ರಂದು ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ
      ಮೈಸೂರು.ಅ.24.ಸರ್ವ ಶಿಕ್ಷಣ ಅಭಿಯಾನ ವತಿಯಿಂದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸಾರ್ವಜನಿಕ  ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳನ್ನು  ಪರಿಚಯಿಸಲು ನಿರ್ಮಿಸಿರುವ ಮಳಿಗೆಯನ್ನು ಅಕ್ಟೋಬರ್ 27 ರಂದು         ಸಂಜೆ 6-30 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪ ಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ತನ್ವೀರ್ ಸೇಠ್ ಅವರು ಉದ್ಘಾಟಿಸುವರು ಎಂದು ಸರ್ವ ಶಿಕ್ಷಣ  ಅಭಿಯಾನ ಸಾರ್ವಜನಿಕ  ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆ ಬಗ್ಗೆ ವಿಚಾರ ಸಂಕಿರಣ: ಹೆಸರು ನೊಂದಾಯಿಸಿಕೊಳ್ಳಿ
     ಮೈಸೂರು.ಅ.24. ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಪೋಬಿಕ್ಸ್ ಪುಡ್ಸ್ ಅಂಡ್ ಬಯೋಟೆಕ್ನಾಲಜಿ ಕನ್ಸಲ್‍ಟೆನ್ಸಿ ಸರ್ವಿಸಸ್ ಎಲ್‍ಎಲ್‍ಪಿ. ಇವರ ಸಹಯೋಗದೊಂದಿಗೆ ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆ ಬಗ್ಗೆ ವಿಚಾರ ಸಂಕಿರಣವನ್ನು ನವೆಂಬರ್ ಮಾಹೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
     ವಿಚಾರ ವಿನಿಯಮ ಮತ್ತು ಮಾಹಿತಿಯನ್ನು ಹಾಲಿ ಮತ್ತು ಭಾವೀ ಉದ್ದಿಮೆದಾರರ ಜೊತೆ ಹಂಚಿಕೊಂಡು ಉದ್ಯಮ ಸ್ಥಾಪನೆ/ವಿಸ್ತರಣೆಗೆ ಅನುವು ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ಬಗ್ಗೆ ಈಗಾಗಲೇ ನೋಂದಾಯಿಸಿಕೊಂಡಿರುವುದು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು ಯಾವುದೇ ಶುಲ್ಕವಿಲ್ಲದೆ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 0821-2520886 ನ್ನು ಸಂಪರ್ಕಿಸಿ ನವೆಂಬರ್ 5 ರೊಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಸಂತೆ
     ಮೈಸೂರು. ಅ. 24.ಮೈಸೂರು ಜಿಲ್ಲೆಯ ಓಲ್ಡ್ ಸೋಸಲೆ ಗ್ರಾಮದಲ್ಲಿ ಅಂಚೆ ಸಂತೆಯನ್ನು ಅಕ್ಟೋಬರ್ 25 ರಂದು ಹಮ್ಮಿಕೊಳ್ಳಲಾಗಿದೆ.
    ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣಾ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು. ಓಲ್ಡ್ ಸೋಸಲೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಅವರು ಕೋರಿದ್ದಾರೆ.     
ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರ
     ಮೈಸೂರು.ಅ.24.ಬೆಂಗಳೂರಿನ ಅಲಿಂಕೋ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರ ಅಕ್ಟೋಬರ್ 25 ರಂದು ಮಧ್ಯಾಹ್ನ 12-30 ಗಂಟೆಗೆ ಹುಣಸರು ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
     ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಂ.ಕೆ. ಸೋಮಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
     ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ,್ಪ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಉಮಾಶ್ರೀ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ ನಜೀರ್ ಅಹಮದ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ  ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಪಿ. ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿ. ನಟರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
ಪ್ರೋತ್ಸಾಹಧನ: ಅರ್ಜಿ ಆಹ್ವಾನ
     ಮೈಸೂರು. ಅ. 24- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿಗೆ “ಸಮೃದ್ಧಿ ಯೋಜನೆ”ಯಡಿ ಆರ್ಥಿಕವಾಗಿ ಹಿಂದುಳಿದ, ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ಕೈಗೊಂಡಿರುವ ಮಹಿಳಾ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ತಲಾ ರೂ. 10,000/- ಪ್ರೋತ್ಸಾಹಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಸ್ವ ಬರಹದ ಅರ್ಜಿ ಆಹ್ವಾನಿಸಿದೆ.
    ಅಭ್ಯರ್ಥಿಗಳು ಸ್ವ ಬರಹದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ 3 ಪ್ರತಿಯಲ್ಲಿ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ನವೆಂಬರ್ 7  ರೊಳಗೆ ಸಲ್ಲಿಸುವುದು.
 ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 60 ವಯೋಮಿತಿಯಲ್ಲಿರಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ ಮತ್ತು ಮೈಸೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿ “ಬೀದಿಬದಿ ವ್ಯಾಪಾರಿ”ಎಂದು ನೊಂದಣಿ ಮಾಡಿಸಿರುವ ಗುರಿತಿನ ಚೀಟಿ ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ಧೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು.
  ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು. ಒಬ್ಬ ಫಲಾನುಭವಿ ಕೇವಲ ಒಂದು ಭಾರಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
     ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ-0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742, ಟಿ.ನರಸೀಪುರ-08227-261267 ನ್ನು ಸಂಪರ್ಕಿಸಲು ಕೋರಿದೆ.
ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರ : ಅರ್ಜಿ ಆಹ್ವಾನ
       ಮೈಸೂರು, ಅ. 24. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2016-17ನೇ ಸಾಲಿನಲ್ಲಿ ವಿಶೇಷಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಕಲಾವಿದರಿಗೆ ಹಾಗೂ ಪರಿಶಿಷ್ಟ ಪಂಗಡದ ಕಲಾವಿದರಿಗೆ ನೇರವಾಗಿ ಪ್ರಯೋಜನವಾಗುವಂತಹ ವಿವಿಧ ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರ ಕಮ್ಮಟವನ್ನು ಹಮ್ಮಿಕೊಂಡಿದೆ.
    ತರಬೇತಿ ಕಾರ್ಯಾಗಾರ ಮತ್ತು ಕಮ್ಮಟವನ್ನು 3 ದಿನಗಳ ಕಾಲ ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ನಶಿಸಿ ಹೋಗುತ್ತಿರುವ ಕಲೆಗಳಿಗೆ ಆದ್ಯತೆ ನೀಡಿ ಇದಕ್ಕೆ ಸಂಬಂಧಪಟ್ಟ ತರಬೇತಿಯನ್ನು ನೀಡಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ದಿನಕ್ಕೆ 500/- ರಂತೆ ಗೌರವ ಸಂಭಾವನೆಯನ್ನು ಪಾವತಿಸಲಾಗುವುದು.
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷದಿಂದ 50 ವರ್ಷದೊಳಗಿನವರಾಗಿರಬೇಕು. ಆಸಕ್ತರು ನವೆಂಬರ್ 4 ರೊಳಗೆ ಅರ್ಜಿಯ ಜೊತೆಗೆ ಜಾತಿ ಪ್ರಮಾಣ ಪತ್ರದೊಂದಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು. ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸುವುದು.
ಎಲ್.ಪಿ.ಜಿ ಸಂಪರ್ಕ ಇದ್ದಲ್ಲಿ ಮಾಹಿತಿ ನೀಡಿ
      ಮೈಸೂರು, ಅ. 24. ಪಡಿತರ ಚೀಟಿದಾರರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಎಲ್.ಪಿ.ಜಿ. ಸಂಪರ್ಕ ಹೊಂದಿದ್ದು, ಆ ಮಾಹಿತಿಯನ್ನು ಬಹಿರಂಗಪಡಿಸದೆ ಸೀಮೆಎಣ್ಣೆ ಪಡೆಯುತ್ತಿರುವ ನಿಯಮಬಾಹಿರವಾಗಿರುತ್ತದೆ. ಪಡಿತರ ಚೀಟಿದಾರರು ಎಲ್.ಪಿ.ಜಿ ಸಬ್ಬಿಡಿ ಮತ್ತು ಸೀಮೆಎಣ್ಣೆ ಸಬ್ಸಿಡಿ ಎರಡನ್ನೂ ಪಡೆಯುವುದು ಸಹ ನಿಯಮಬಾಹಿರವಾಗಿರುತ್ತದೆ.
      ಒಬ್ಬ ವ್ಯಕ್ತಿ ಅಥವಾ ಕುಟುಮಬ ಈ ರೀತಿ ಎರಡೂ ಸೌಲಭ್ಯವನ್ನು ಪಡೆಯುತ್ತಿದ್ದಲ್ಲಿ ಅಂತಹ ಸೌಲಭ್ಯಗಳನ್ನು ರದ್ದುಪಡಿಸಲು ನಿಯಮಗಳಲ್ಲಿ ಅವಕಾಶವಿರುತ್ತದೆ. ಎಲ್.ಪಿ.ಜಿ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗೆ ಅಥವಾ ಸಂಬಂಧಿಸಿದ ಆಹಾರ ನಿರೀಕ್ಷಕರುಗಳಿಗೆ ಅಕ್ಟೋಬರ್ 25 ರೊಳಗೆ ನೀಡುವುದು.
      ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತ ಪ್ರದೇಶವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.
      ಇಲಾಖೆಯು ಕಳೆದ ವರ್ಷದಿಂದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸೀಮೆಎಣ್ಣೆ ಬಳಕೆದಾರ ಪಡಿತರ ಚೀಟಿದಾರರು ಎಲ್.ಪಿ.ಜಿ ಸಂಪರ್ಕ ಪಡೆಯಲು ಮನವಿ ಮಾಡುತ್ತಿದೆ. ಆದರೂ ಸಹ  ಜಿಲ್ಲೆಯ ನಗರ/ಪಟ್ಟಣ ಪ್ರದೇಶಗಳಲ್ಲಿ 39690 ಪಡಿತರ ಚೀಟಿದಾರರು ಇನ್ನು ಅಡುಗೆ ಅನಿಲ ಸಂಪರ್ಕ ಪಡೆದಿಲ್ಲವೆಂದು ಪ್ರತೀ ತಿಂಗಳು ಸೀಮೆಎಣ್ಣೆ ಪಡೆಯುತ್ತಿದ್ದಾರೆ.
      ಮೈಸೂರು -20454, ನಂಜನಗೂಡು-3324, ಟಿ.ನರಸೀಪುರ-6158, ಹುಣಸೂರು-2593, ಕೆ.ಆರ್.ನಗರ-2198, ಹೆಚ್.ಡಿ.ಕೋಟೆ-2955 ಹಾಗೂ ಪಿರಿಯಾಪಟ್ಟಣ-2008 ನಗರ ಮತ್ತು ಇತರೆ ಪಟ್ಟಣ ಪ್ರದೇಶಗಳಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದಿಲ್ಲವೆಂದು ಸೀಮೆಎಣ್ಣೆ ಪಡೆಯುತ್ತಿರುವುದು ಕಂಡುಬಂದಿರುತ್ತದೆ.
    ಯಾವ ಪಡಿತರ ಚೀಟಿದಾರರು ಇದುವರೆವಿಗೆ ಎಲ್.ಪಿ.ಜಿ ಸಂಪರ್ಕ ಪಡೆದಿರುವುದಿಲ್ಲವೋ ಅವರುಗಳಿಗೆ ಪ್ರಥಮ ಆದ್ಯತೆ ಮೇಲೆ ಎಲ್.ಪಿ.ಜಿ. ಸಂಪರ್ಕ ನೀಡಲು ಜಿಲ್ಲೆಯ ಎಲ್ಲಾ ಎಲ್.ಪಿ.ಜಿ ವಿತರಕರಿಗೆ ಆದೇಶಿಸಲಾಗಿದೆ. ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಪಡಿತರ ಚೀಟಿದಾರರು ಇದುವರೆವಿಗೆ ಎಲ್.ಪಿ.ಜಿ ಸಂಪರ್ಕ ಪಡೆದುಕೊಳ್ಳದಿದ್ದಲ್ಲಿ ಅಕ್ಟೋಬರ್ 25 ರೊಳಗೆ ತಮ್ಮ ಹತ್ತಿರದ ಎಲ್.ಪಿ.ಜಿ. ವಿತರಕರಿಂದ ಕಡ್ಡಾಯವಾಗಿ ಎಲ್.ಪಿ.ಜಿ ಸಂಪರ್ಕ ಪಡೆದುಕೊಳ್ಳುವುದು.
     ಯಾವುದೇ ಎಲ್.ಪಿ.ಜಿ ವಿತರಕರು ಎಲ್.ಪಿ.ಜಿ. ಸಂಪರ್ಕ ನೀಡಲು ತೊಂದರೆ ಮಾಡಿದಲ್ಲಿ ತಾಲ್ಲೂಕಿನ ಆಹಾರ ಶಿರಸ್ತೇದಾರರು/ಆಹಾರ ನಿರೀಕ್ಷಕರು ಅಥವಾ ಡಾ|| ಕೆ. ರಾಮೇಶ್ವರಪ್ಪ ಹಿರಿಯ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಇವರ ಮೊಬೈಲ್ ಸಂಖ್ಯೆ 9611165367 ಅಥವಾ ಸಹಾಯವಾಣಿ ಸಂಖ್ಯೆ 1967 ಗೆ ದೂರು ಸಲ್ಲಿಸುವಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಡಾ|| ಕಾ. ರಾಮೇಶ್ವರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೀಮೆಎಣ್ಣೆ ಬಿಡುಗಡೆ
     ಮೈಸೂರು, ಅ. 24. ನಗರ ಮತ್ತು ಗ್ರಾಮಾಂತರ ಪ್ರದೇಶದ ಅನಿಲ ರಹಿತ ಆದ್ಯತಾ ಕುಟುಂಬಗಳು ಬಿಪಿಎಲ್ ಮತ್ತು ಗ್ರಾಮಾಂತರ ಪ್ರದೇಶಗಳ ಆದ್ಯತೇತರ ಎಪಿಎಲ್ ಪಡಿತರ ಚೀಟಿದಾರರಿಗೆ 2016 ಅಕ್ಟೋಬರ್ ಮಾಹೆಯ ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.
     ನಗರ ಪ್ರದೇಶದ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ ಹಾಗೂ  ಗ್ರಾಮಾಂತರ ಪ್ರದೇಶದಲ್ಲಿ ಬಯೋಕೂಪನ್ ವ್ಯವಸ್ಥೆ ಜಾರಿಯಿರುವ ಪ್ರದೇಶದಲ್ಲಿ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ 3 ಲೀಟರ್ ಸೀಮೆಎಣ್ಣೆ  ಗ್ರಾಮಾಂತರ ಪ್ರದೇಶದಲ್ಲಿ ಬಯೋಕೂಪನ್ ವ್ಯವಸ್ಥೆ ಜಾರಿಯಿಲ್ಲದ ಪ್ರದೇಶದ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ  2.5 ಲೀಟರ್ ಸೀಮೆಎಣ್ಣೆ ಮತ್ತು  ಆದ್ಯತೇತರ ಕುಟುಂಬ ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎಪಿಎಲ್ ಪಡಿತರ ಚೀಟಿದಾರರಿಗೆ 2 ಲೀಟರ್ ಸೀಮೆಎಣ್ಣೆ ನೀಡಲಾಗುವುದು. ಪ್ರತಿ ಲೀಟರ್ ಸೀಮೆಎಣ್ಣೆಗೆ ರೂ. 20/- ನಿಗಧಿಪಡಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಡಾ|| ಕಾ. ರಾಮೇಶ್ವರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಗು ಬೆಳೆ ಕುರಿತು ತರಬೇತಿ ಪ್ರಾತ್ಯಕ್ಷಿಕೆ
ಮೈಸೂರು, ಅ. 24. ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕವು, 28-10-2016 ರಂದು ತೆಂಗು ಕುರಿತಾದ ತರಬೇತಿ- ಪ್ರಾತ್ಯಕ್ಷಿಕೆÉ – ಸಂವಾದ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅನುಭವಿ ಕೃಷಿಕರು ಹಾಗೂ ನುರಿತ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಆಸಕ್ತರು ಹೆಸರು ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದ್ದು, ಹೆಸರು ನೋಂದಾಯಿಸಿಕೊಳ್ಳಲು 7829500130 / 9945832499 / 8904790461 / 9880445913 / 0821 2970411 ನ್ನು ಸಂಪರ್ಕಿಸಬಹುದಾಗಿದೆ. ನೋಂದಾಯಿಸಿದ ಬೆಳೆಗಾರರು ತಮ್ಮ ಪ್ರಸ್ತುತ ತೆಂಗು ಬೆಳೆಯಲ್ಲಿ ರೋಗ/ಕೀಟ/ಇತರೇ ಸಮಸ್ಯೆಗಳಿಗೊಳಗಾದ ಗಿಡದ ಭಾಗಗಳನ್ನು ಬರುವಾಗ ತೆಗೆದುಕೊಂಡು ಬಂದು ಘಟಕದಲ್ಲಿ ಪರೀಕ್ಷೆಗೊಳಪಡಿಸಿ ಸೂಕ್ತ ಸಲಹೆಯನ್ನು ಉಚಿತವಾಗಿ ಪಡೆಯಬಹುದು.

ಮಾಂಸದ ಕೋಳಿ ಸಾಕಾಣಿಕೆ ತರಬೇತಿ
     ಮೈಸೂರು, ಅ. 24. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ವತಿಯಿಂದ  2016-17ನೇ ಸಾಲಿನ ನಿರುದ್ಯೋಗ ಯುವಕ/ಯುವತಿಯರಿಗೆ ಹಾಗೂ ಸಣ್ಣ ರೈತರಿಗೆ ಮಾಂಸದ ಕೋಳಿ ಸಾಕಾಣಿಕೆ ತರಬೇತಿಯನ್ನು ದಿನಾಂಕ:             07-11-2016 ರಿಂದ 11-11-2016 ರವರೆಗೆ ಸಹಾಯಕ ನಿರ್ದೆಶಕರವರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿ., ಪ್ರಾದೇಶಿಕ ಕೇಂದ್ರ, ಧನ್ವಂತರಿ ರಸ್ತೆ, ಮೈಸೂರು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
    ಸದರಿ ತರಬೇತಿ ಶಿಬಿರದ ಪ್ರಯೋಜನವನ್ನು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಒಂಭತ್ತು ಜಿಲ್ಲೆಯ ಆಸಕ್ತರು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರವರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ (ನಿ), ಪ್ರಾದೇಶಿಕ ಕೇಂದ್ರ, ಧನ್ವಂತರಿ ರಸ್ತೆ, ಮೈಸೂರು.   0821-2422775 ನ್ನು ಸಂಪರ್ಕಿಸಬಹುದು.

Tuesday, 18 October 2016

ದಸಂಸ ವಿಘಟನೆಯ ಮೂಲ ಪುರುಷ ಎಚ್.ಗೋವಿಂದಯ್ಯ -ಗುರುಪ್ರಸಾದ್ ಕೆರಗೋಡು.

ದಸಂಸ ವಿಘಟನೆಯ ಮೂಲ ಪುರುಷ ಎಚ್.ಗೋವಿಂದಯ್ಯ -ಗುರುಪ್ರಸಾದ್ ಕೆರಗೋಡು.
ದಲಿತ ಚಳವಳಿಯ ಆಂತರ್ಯದಿಂದಲೇ ಹೊರ ಬಂದಿರುವ  ಎಚ್. ಗೋವಿಂದಯ್ಯರವರು ಹಲವಾರು ಸಂದರ್ಭಗಳಲ್ಲಿ ದೇವನೂರು ಮಹಾದೇವ ಮತ್ತು ದಲಿತ ಸಂಘರ್ಷ ಸಮಿತಿ ಬಗ್ಗೆ ತಮ್ಮ ಹೊಣೆಗೇಡಿ ಮಾತುಗಳ ಮೂಲಕ ಶತ್ರುಗಳಿಗಿಂತಲೂ ಮಿಗಿಲಾದ ರೀತಿಯಲ್ಲಿ ನಿಂದಿಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ದೇವನೂರ ಮಹಾದೇವ ಅವರ ವೈಚಾರಿಕತೆ, ಸಾಹಿತ್ಯ ಇತ್ಯಾದಿಗಳ ಬಗ್ಗೆ ತಮ್ಮ ಭಿನ್ನಾಭಿಪ್ರಾಯಗಳಿದ್ದರೆ, ಅಂತಹುದನ್ನು ಬರವಣಿಗೆಯಲ್ಲಿ ದಾಖಲಿಸಲಿ. ಹಾಗೆಯೇ ದಲಿತ ಚಳುವಳಿಯ ಸ್ವರೂಪ, ಕಾರ್ಯಕ್ರಮ ಹಾಗೂ ಗುರಿಗಳ ಬಗ್ಗೆ ನಿರ್ದಿಷ್ಟ ನಿಲುವುಗಳಿದ್ದರೆ ಸೂಕ್ತ ವೇದಿಕೆಗಳಲ್ಲಿ ವಿಮರ್ಶೆಗೆ ಮುಂದಾಗಲಿ. ಅದು ಬಿಟ್ಟು ದಲಿತ ಸಂಘರ್ಷ ಸಮಿತಿಯು ಛಿದ್ರಗೊಳ್ಳಲು ದೇವನೂರ ಮಹಾದೇವರವರೇ ಕಾರಣ, ಅವರಿದಲೇ ದಲಿತ ಚಳುವಳಿ ನಾಶವಾಗುತ್ತಿದೆ ಎಂಬ ಅರ್ಥದಲ್ಲಿ ಗೋವಿಂದಯ್ಯರವರು ತಮ್ಮ ನಾಲಿಗೆಯನ್ನು ಬಳಸುತ್ತಿರುವುದರಲ್ಲಿ ಹೆಚ್ಚಾಗಿ ವೈಯಕ್ತಿಕ ದ್ವೇಷ, ಈಷ್ರ್ಯೆ, ಕುಹಕ ಮುಂತಾದ ದುಷ್ಟ ವರ್ತನೆಗಳು ಕಾಣುತ್ತಿವೆಯೇ ಹೊರತು ಸಾಮಾಜಿಕ ಬದಲಾವಣೆ ಅಥವಾ ದಲಿತ ಚಳವಳಿ ಬಗೆಗಿನ ಕನಿಷ್ಟ ಕಾಳಜಿಗಳನ್ನೂ ಅವರ ಮಾತುಗಳು ದ್ವನಿಸುತ್ತಿಲ್ಲ.
ಕರ್ನಾಟಕದ ವೈಚಾರಿಕ ಆಂದೋಲನ, ಶೋಷಿತÀರ ಬಗೆಗಿನ ಕಾಳಜಿ, ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ದೇವನೂರು ಮಹಾದೇವರವರ ಪ್ರಭಾವ ಎಷ್ಟಿದೆ ಅಥವಾ ಇಲ್ಲಾ ಎಂಬುದರ ಬಗ್ಗೆ ನಾಡಿನ ಸಮಸ್ತ ಪ್ರಜ್ಞಾವಂತ ನಾಗರೀಕರು ಸ್ವತಃ ಅರಿತು; ವಿಮರ್ಶಿಸಿ, ಸ್ವೀಕರಿಸುವ ಅಥವಾ ನಿರಾಕರಿಸುವ ಮುಕ್ತ ವಾತಾವರಣಕ್ಕೆ ಯಾರೊಬ್ಬರೂ ತೊಡಕಾಗಿಲ್ಲ. ಆದ್ದರಿಂದ ದಸಂಸವು ದೇವನೂರ ಮಹಾದೇವರವರ ಪರವಾಗಿ ಯಾವುದೇ ವಕಾಲತ್ತು ವಹಿಸಬೇಕಾದ ಅಗತ್ಯವಿಲ್ಲ ಎಂಬ ತಿಳುವಳಿಕೆಯಿಂದಲೇ ಈ ಪ್ರತಿಕ್ರಿಯೆಯನ್ನು ನೀಡುತ್ತಿದೆ.
ದೇವನೂರು ಮಹಾದೇವರವರಿಂದ ದಲಿತ ಸಂಘಟನೆ/ದಲಿತ ಚಳುವಳಿಯು ಛಿದ್ರವಾಗುತ್ತಿದೆ-ನಾಶವಾಗುತ್ತಿದೆ ಎಂಬ ಗೋವಿಂದಯ್ಯನವರ ಪುನರುಚ್ಚಿತ ನೇರ-ಗಂಭೀರ ಆರೋಪವು ಸ್ವತಃ ಗೋವಿಂದಯ್ಯನವರ ಕೊರಳನ್ನೇ ಸುತ್ತಿಕೊಂಡು ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆಂಬ ಸತ್ಯವು ಸಂಘಟನೆ ಮತ್ತು ಹೋರಾಟಗಳಲ್ಲಿ ಈಗಲೂ ಸಕ್ರಿಯರಾಗಿರುವ ದಸಂಸ ಹಿರಿಯ ಕಾರ್ಯಕರ್ತರೆಲ್ಲರಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿಯಾಗಿದೆ.
ದಸಂಸ ಸಂಘಟನೆಯ ಪ್ರಾರಂಭದಲ್ಲಿ ದೇವನೂರ ಮಹಾದೇವರವರ ಸುತ್ತಾ ಉಪಗ್ರಹದಂತೆ ಸುತ್ತುತ್ತಿದ್ದ ಗೋವಿಂದಯ್ಯರವರು ಬ್ರದರ್-ಬ್ರದರ್ ಅಂತ ಹೇಳುತ್ತಲೇ ಪ್ರೊ|| ಬಿ. ಕೃಷ್ಣಪ್ಪ, ದೇವಯ್ಯ ಹರವೆ, ದಲಿತಕವಿ ಸಿದ್ದಲಿಂಗಯ್ಯ, ಓ. ಶ್ರೀಧರನ್, ಇಂದೂಧರ ಹೊನ್ನಾಪುರ, ಕೆ. ರಾಮಯ್ಯ, ರಾಮ್‍ದೇವ್ ರಾಕೆ ಇತ್ಯಾದಿ... ಮುಂಚೂಣಿ ಸಂಘಟಕರ ನಡುವೆ ಗುಮಾನಿ, ಭಿನ್ನ ಮತದ ಬಿತ್ತನೆ ಹಾಕಿ ಅದು ಬೆಳೆದು ದೊಡ್ಡದಾಗುವಂತೆ ನೋಡಿಕೊಂಡರು. ಆ ಮೂಲಕ ಪ್ರಮುಖ ಮುಂಚೂಣಿ ನಾಯಕರ ನಡುವೆ ಸಂಘಟನಾತ್ಮಕವಾಗಿ ಇರಲೇಬೇಕಾಗಿದ್ದ ಆತ್ಮೀಯತೆ, ನಂಬಿಕೆ, ವಿಶ್ವಾಸಕ್ಕೆ ಭಂಗ ತರುವ ಮೂಲಕ ದಸಂಸ ವಿಘಟನೆಗೆ ಗೋವಿಂದಯ್ಯನವರೇ ಮುನ್ನುಡಿ ಬರೆದಿದ್ದು ಎಂಬುವುದನ್ನು ಈಗ ನಾವುಗಳು ಹೇಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರೇ ಸೃಷ್ಟಿಸಿದ್ದಾರೆ.
ಚಳವಳಿಗೆ ಬೇಕಾದ ತಾತ್ವಿಕತೆ, ವೈಚಾರಿಕತೆಯನ್ನು ಪೂರೈಸುವಲ್ಲಿ ವಿಫಲರಾಗಿರುವ ಗೋವಿಂದಯ್ಯನವರು ಈಗ ಎಲ್ಲಾ ಅನಾಹುತಗಳನ್ನೂ ದೇವನೂರು ಮಹಾದೇವರೊಬ್ಬರ ತಲೆಗೆ ಕಟ್ಟಲು ಹೊರಟಿರುವುದು ಕುಚೋದ್ಯವಲ್ಲದೆ ಬೇರೇನೂ ಅಲ್ಲ. ಸಂಘಟನೆ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ನಿರ್ದಿಷ್ಟ ಉಪಜಾತಿಯನ್ನು ತನ್ನ ಸ್ವಹಿತಕ್ಕೆ, ಸಾಮಥ್ರ್ಯಕ್ಕೆ, ಕಾರ್ಯ ಸೂಚಿಗಳಿಗೆ ಅಸ್ತ್ರವಾಗಿ ಬಳಸಿಕೊಂಡಿದ್ದಲ್ಲದೆ, ದಸಂಸ ಕಾರ್ಯಕರ್ತರ ಮನಸ್ಸುಗಳಲ್ಲಿ ಈ ಬಗ್ಗೆ ಎಂದೂ ಇಲ್ಲದಿದ್ದ ಒಡಕು ಭಾವನೆಗಳಿಗೆ ಪ್ರಚೋದನೆ ನೀಡಿದ್ದು ಕೂಡ ಇದೇ ಗೋವಿಂದಯ್ಯನವರು ಅನ್ನೋದು ದಸಂಸ ಚರಿತ್ರೆಯಲ್ಲಿ ದಾಖಲಾಗಿರುವ ಮತ್ತೊಂದು ಕಠೋರ ಸತ್ಯವಾಗಿದೆ.
ದಸಂಸ ಸಂಸ್ಥಾಪಕರಲ್ಲಿ ತಾವೂ ಒಬ್ಬರಾಗಿದ್ದುಕೊಂಡು ಸಂಘÀಟನೆಯನ್ನು ಕಟ್ಟಿ ಬೆಳೆಸುವಲ್ಲಿ ಇನ್ನಿತರ ಮೂಂಚೂಣಿ ನಾಯಕರೊಟ್ಟಿಗೆ ಆರಂಭದಲ್ಲಿ ಶ್ರಮಿಸಿದ ಗೋವಿಂದಯ್ಯನವರು ತಾವೇ ಕಟ್ಟಿ ಬೆಳೆಸಿದ ಚಳುವಳಿಯನ್ನು ತಾವೇ ಕೆಡುವುವಂತಹ ವಿದ್ವಂಸÀಕ ಮನಸ್ಥಿತಿಗೆ ಹೇಗೆ ಒಳಗಾದರೆಂಬುದೇ ಆಶ್ಚರ್ಯಕರವಾದ ವಿಚಾರ. ಹಾಗಿಲ್ಲದಿದ್ದರೆ ದಸಂಸ ಸತ್ತಿದೆ, ಅದನ್ನು ದಫನ್ ಮಾಡಬೇಕು, ಸಂಘಟನೆಯಲ್ಲಿರೋರೆಲ್ಲಾ ವಸೂಲಿಕಾರರು ಎಂದೆಲ್ಲಾ ಹೇಗೆ ಹೇಳಲಿಕ್ಕೆ ಸಾಧ್ಯ. (ಈ ಎಲ್ಲಾ ಮಾತುಗಳನ್ನು ಅವರು ಈ ಹಿಂದೆ ಮಾತನಾಡಿದ್ದಾರೆ) ಅವರ ಇಂತಹ ಮಾತು ಮತ್ತು ವರ್ತನೆಯು ಈಗಲೂ ದಲಿತ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅನೇಕ ಪ್ರಾಮಾಣಿಕ ಕಾರ್ಯಕರ್ತರ ಮನಸ್ಸಿಗೆ ಆಘಾತ ಹಾಗೂ ನೋವುಂಟು ಮಾಡಿದೆ.
ಗೋವಿಂದಯ್ಯನವರಂತವರ ಮಾತು ಮತ್ತು ವರ್ತನೆಗಳಿಂದಾಗಿ ದಲಿತ ಚಳುವಳಿಯ ಜತೆಗೆ ಗುರುತಿಸಿಕೊಂಡಿದ್ದ ಅನೇಕ ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ದಲಿತ ಚಿಂತಕರಾದಿಯಾಗಿ ನಿಧಾನವಾಗಿ ಬಹುತೇಕರು ಸಂಘಟನೆಯ ಚಟುವಟಿಕೆಗಳಿಂದ ಸಕ್ರಿಯ ಸಂಬಂಧಗಳಿಂದ ದೂರವಾಗಿ ಹೋದರು. ದಲಿತ ಚಳುವಳಿಯ ಇವತ್ತಿನ ಸ್ಥಿತಿಗೆ, ಒಡಕಿಗೆ ಗೋವಿಂದಯ್ಯರವರು ಈ ವಿಧದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಆದ್ದರಿಂದ ಗೋವಿಂದಯ್ಯರವರು ದಸಂಸದ ಛಿದ್ರತೆಗೆ ಇತರರನ್ನು ಬೆರಳು ಮಾಡಿ ದೂಷಿಸುವುದಾದರೆ, ಅದು ಮೊದಲು ಅವರ ವಿರುದ್ಧವೇ ಬೆರಳು ಮಾಡಿ ತೋರಿಸುತ್ತದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.

ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ



ವಿಳಾಸ: ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ,  10ನೇ ತಿರುವು, ಗಾಂಧಿನಗರ, ಮಂಡ್ಯ - 571 401
ಮೊಬೈಲ್ ನಂ. : 8095234299

Wednesday, 12 October 2016

ಪೊಲೀಸ್ ಶಿಕ್ಷಣ ಸಮುಚ್ಛಯ ನಿರ್ಮಾಣಕ್ಕೆ 22.5 ಕೋಟಿ ರೂ. ಅನುದಾನ: ಸಿದ್ದರಾಮಯ್ಯ

ಪೊಲೀಸ್ ಶಿಕ್ಷಣ ಸಮುಚ್ಛಯ ನಿರ್ಮಾಣಕ್ಕೆ 22.5 ಕೋಟಿ ರೂ. ಅನುದಾನ: ಸಿದ್ದರಾಮಯ್ಯ
ಮೈಸೂರು, ಅ. 12. ಮೈಸೂರು ನಗರದಲ್ಲಿ ಪೊಲೀಸ್ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಅತ್ಯುತ್ತಮವಾದ ಶಿಕ್ಷಣ ಸಮುಚ್ಛಯವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿ, ಕಾರ್ಯಗತ ಮಾಡಲಾಗುತ್ತಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 22.5 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೈಸೂರು ನಗರದ ಜಲಪುರಿ ಪೊಲೀಸ್ ಪಬ್ಲಿಕ್ ಶಾಲೆಯ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಿಸಿರುವ ನರ್ಸರಿ ಶಾಲಾ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಪ್ರವೇಶ ದೊರೆಯುತ್ತದೆ. ಆದರೆ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ. ಈ ಪೋಷಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಾಗೂ ಮೌಲ್ಯಯುತವಾದ ಶಿಕ್ಷಣ ಸಿಗಬೇಕು ಎಂದು ಅವರು ಹೇಳಿದರು.
ಈ ಶಾಲೆ ಆರಂಭವಾದಾಗ 179 ಮಕ್ಕಳು ಇದ್ದರು ಈಗ 1200 ಮಕ್ಕಳು ಕಲಿಯುತ್ತಿದ್ದಾರೆ. ಪ್ರಾಥಮಿಕ ಪೂರ್ವ ಶಾಲೆಯಿಂದ 11ನೇ ತರಗತಿ ವರೆಗೆ ಇಲ್ಲಿ ಶಿಕ್ಷಣ ದೊರೆಯುತ್ತದೆ. ಸಿ.ಬಿ.ಎಸ್.ಸಿ.ಯಿಂದ ಅನುಮತಿ ಪಡೆದು ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ಇಂತಹ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಬಡವರ ಮಕ್ಕಳಿಗೂ ಉತ್ತಮವಾದ ಶಿಕ್ಷಣ ಸಿಗಬೇಕು ಎಂದು ಕೇಂದ್ರದ ಯು.ಪಿ.ಎ. ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆರ್.ಟಿ.ಇ. ಕಾಯ್ದೆ ಜಾರಿಗೆ ತಂದಿದೆ. ರಾಜ್ಯದಲ್ಲಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿತವರು ಸಹ ಮಹಾನ್ ವ್ಯಕ್ತಿಗಳಾಗಿದ್ದಾರೆ. ಎ.ಪಿ.ಜೆ. ಅಬ್ದುಲ್ ಕಲಾಂ, ಸಿ.ಎನ್.ಆರ್.ರಾವ್, ಸರ್. ಎಂ. ವಿಶ್ವೇಶ್ವರಯ್ಯ ಅವರು ಸಹ ಸರ್ಕಾರಿ ಶಾಲೆಯಲ್ಲಿ ಕಲಿತವರು ಎಂದು ಹೇಳಿದ ಅವರು, ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗಾಗಿ ರಾಜ್ಯದಲ್ಲಿ 1.02 ಕೋಟಿ ಮಕ್ಕಳಿಗೆ ಹಾಲು ಕೊಡಲಾಗುತ್ತಿದೆ. ಈ ಪೈಕಿ ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳು ಹಾಲು ಕುಡಿಯುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರ ಬಗ್ಗೆ ನನಗೆ ಸಹಾನುಭೂತಿ ಇದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಇದ್ದರೆ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ. ಶಾಂತಿ ಕಾಪಾಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು.
ಪೊಲೀಸರಿಗೆ ಸೌಲಭ್ಯ ನೀಡುವ ಬಗ್ಗೆ ವರದಿ ನೀಡಲು ರಾಘವೇಂದ್ರ ಔರಾದ್‍ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ವರದಿಯನ್ನು ಗೃಹ ಇಲಾಖೆಗೆ ನೀಡಿದೆ. ಈ ತಿಂಗಳ 21ರೊಳಗೆ ಸಭೆಗೆ ಕರೆದು ವರದಿ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸಿಗುವ ಉತ್ತಮವಾದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣವಾಗಿರುವಂತೆ ಎಲ್ಲಾ ಜಿಲ್ಲೆಗಳಲ್ಲೂ ಆಗಬೇಕು. ರಾಜ್ಯದ 176 ತಾಲ್ಲೂಕುಗಳಲ್ಲೂ ಒಂದೊಂದು ಶಾಲೆಯಲ್ಲಿ ದತ್ತು ಪಡೆದು ಈ ರೀತಿಯ ಶಿಕ್ಷಣವನ್ನು ಕೊಡಬೇಕು ಎಂದು ಅವರು ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ತಿಳಿಸಿದರು.
ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ 27 ವಿಷಯವಾರು ಪಠ್ಯಕ್ರಮಗಳ ಪರಿಷ್ಕರಣೆಗೆ ಸಮಿತಿ ನೇಮಕ ಮಾಡಲಾಗಿದ್ದು, ಅದರ ವರದಿ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ತುಂಬಾ ಶಿಥಿಲವಾಗಿರುವ ಕಟ್ಟಡಗಳ ದುರಸ್ಥಿ ಹಾಗೂ ನವೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳಲ್ಲಿ ಹೈಕೋರ್ಟ್‍ನ ನಿರ್ದೇಶನದ ಮೇರೆಗೆ ಏಕರೂಪ ಶುಲ್ಕ ಪದ್ಧತಿ ಜಾರಿಯಾಗಬೇಕು. ಡಿಸೆಂಬರ್ ಅಂತ್ಯದ ವೇಳೆಗೆ ಖಾಸಗಿ ಶಾಲೆಗಳು ಶುಲ್ಕದ ವಿವರಗಳನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ ನೀಡಲು ಮೌಲ್ಯವರ್ಧಿತ ಶಿಕ್ಷಣ ನೀಡಲಾಗುತ್ತಿದೆ. ಮೊದಲು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಈ ಶಿಕ್ಷಣ ನೀಡಲಾಗುತ್ತಿದ್ದು, ಈಗ ಸಾಮಾನ್ಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಈ ಯೋಜನೆಗೆ ‘ವಿಶ್ವಾಸ ಕಿರಣ’ ಎಂದು ಹೆಸರಿಡಲಾಗಿದೆ. 1.10 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆಯುತ್ತಿದ್ದಾರೆ. ಗಣಿತ ಮತ್ತು ವಿಜ್ಞಾನ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ.
ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಪಾಲಿಕೆ ಸದಸ್ಯರಾದ ಸಂದೇಶ್ ಸ್ವಾಮಿ, ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ, ಡಿ.ಜಿ ಮತ್ತು ಐ.ಜಿ.ಪಿ ಓಂಪ್ರಕಾಶ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಎ.ಡಿ.ಜಿ.ಪಿ ಸುನಿಲ್ ಕುಮಾರ್, ದಕ್ಷಿಣ ವಲಯದ ಐ.ಜಿ.ಪಿ ಬಿ.ಕೆ.ಸಿಂಗ್, ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್, ಪೊಲೀಸ್ ಆಯುಕ್ತರಾದ ಡಾ. ಬಿ. ದಯಾನಂದ್, ಪೊಲೀಸ್ ಅಧೀಕ್ಷಕರಾದ ರವಿ. ಡಿ. ಚನ್ನಣ್ಣನವರ್, ರಾಜ್ಯ ಗುಪ್ತವಾರ್ತೆ ಐ.ಜಿ.ಪಿ ಶರತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.

Monday, 10 October 2016

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ

ಮೈಸೂರು.ಅ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 10 ರಿಂದ 12 ರವರೆಗೆ  ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಇಂದು ಸಂಜೆ 4-35 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.  ಅಕ್ಟೋಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದ ತೊಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.16 ಗಂಟೆಗೆ ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂಧೀಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ 2.45 ಕ್ಕೆ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆ ಉದ್ಘಾಟನೆ ಮತ್ತು ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಸಂಜೆ 4 ಗಂಟೆಗೆ ಕುವೆಂಪುನಗರದಲ್ಲಿರುವ ಕರುಣ ಚಾರಿಟಬಲ್ ಟ್ರಸ್ಟ್‍ನ ನವ್ಯ ಸಂತಾನೋತ್ಪತ್ತಿ ಕೇಂದ್ರ ಉದ್ಘಾಟಿಸಲಿದ್ದಾರೆ. ರಾತ್ರಿ 8 ಗಂಟೆಗೆ ಬನ್ನಿಮಂಟಪದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರ ಉಪಸ್ಥಿತಿಯಲ್ಲಿ ಪಂಜಿನ ಕವಾಯತ್ ವೀಕ್ಷಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
    ಅಕ್ಟೋಬರ್ 12 ರಂದು ಬೆಳಿಗ್ಗೆ 10-30 ಗಂಟೆಗೆ ನಜರ್‍ಬಾದ್‍ನಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ನೂತನ ನರ್ಸರಿ ಬ್ಲಾಕ್ ಕಟ್ಟಡ ಉದ್ಘಾಟಿಸಿದ ನಂತರ ಮಧ್ಯಾಹ್ನ 12 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

Monday, 3 October 2016

mahila dasara






ಅಕ್ಟೋಬರ್ 4 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು

ಅಕ್ಟೋಬರ್ 4 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು.ಅ.3. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2016ರ ಅಂಗವಾಗಿ ಮೈಸೂರು ನಗರದ ಎರಡು ವೇದಿಕೆಗಳಲ್ಲಿ ಅಕ್ಟೋಬರ್ 4 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಸೋಲೋ ಫಿನಾಲೆ,  ಬೆಳಿಗ್ಗೆ 11 ಗಂಟೆಗೆ  ಫಾರ್ ಫ್ರಂ ಹೋಂ, ಮಧ್ಯಾಹ್ನ 2 ಗಂಟೆಗೆ ಮಾನ್ ಅನ್‍ಕಲ್,  ಹಾಗೂ ಮಧ್ಯಾಹ್ನ 4 ಗಂಟೆಗೆ ಜಲ್
        ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀÉ ಟಾಕಿಂಗ್ ವಾಲ್ಸ್,  ಬೆಳಿಗ್ಗೆ 11 ಗಂಟೆಗೆ ವಿದಾಯ,  ಮಧ್ಯಾಹ್ನ 2 ಗಂಟೆಗೆ ದಿ ಹೆಡ್ ಹಂಟರ್, ಸಂಜೆ 4 ಗಂಟೆಗೆ ದ ಪೋಲ್ ಡೈರಿ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
    ಸ್ಕೈಲೈನ್- ದೇವರನಾಡಲ್ಲಿ,   ಒಲಂಪಿಯಾ- ಕಿರಗೂರಿನ ಗಯ್ಯಾಳಿಗಳು, ಡಿ.ಆರ್.ಸಿ.- ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಐನಾಕ್ಸ್- ಯು ಟರ್ನ್,  ಲಕ್ಷ್ಮೀ- ಫಸ್ಟ್ ರ್ಯಾಂಕ್ ರಾಜು, ಹೆಚ್.ಡಿ.ಕೋಟೆಯ ಮಂಜುನಾಥ ಚಿತ್ರಮಂದಿರದಲ್ಲಿ – ಒಡಿ & ಒಡಿs ರಾಮಾಚಾರಿ, ಕೆ.ಆರ್.ನಗರದ ಗೌರಿಶಂಕರ-ಕೆಂಡಸಪಿಂಗೆ ನಂಜನಗೂಡಿನ ಲಲಿತ- ಮಾಣಿಕ್ಯ,  ಪಿರಿಯಾಪಟ್ಟಣದ ಮಹದೇಶ್ವರ- ಬುಲ್ ಬುಲ್, ಹುಣಸೂರಿನ ಲೀಲಾ-ಲಾಸ್ಟ್ ಬಸ್ ಹಾಗೂ ಟಿ.ನರಸೀಪುರದ ಭಗವಾನ್- ಫಸ್ಟ್ ರ್ಯಾಂಕ್ ರಾಜು ಚಲನಚಿತ್ರಗಳು ಬೆಳಗಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ  20 ರೂ.  ಹಾಗೂ ಮಲ್ಟಿಫ್ಲೆಕ್ಸ್ ರೂ. 30 ನಿಗದಿಪಡಿಸಿದೆ.
ಅಕ್ಟೋಬರ್ 4 ರಂದು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು
    ಮೈಸೂರು.ಅ.03. ದಸರಾ ಮಹೋತ್ಸವ 2016 ರ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ಅಕ್ಟೋಬರ್ 4 ರಂದು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ವಿವರ ಇಂತಿದೆ.
      ಅರಮನೆ ವೇದಿಕೆ:  ಸಂಜೆ 6 ಗಂಟೆಗೆ ಬೆಂಗಳೂರಿನ ಬಿ. ಜಯಶ್ರೀ ತಂಡದಿಂದ ರಂಗೀತೆ,  ಸಂಜೆ     7-15ಕ್ಕೆ ಕೇರಳ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಮೋಹಿನಿಅಟ್ಟಂ ನ್ಯತ್ಯ, ಸಂಜೆ 7-45ಕ್ಕೆ ಬೆಂಗಳೂರಿನ ಎಸ್.ಶಂಕರ್ ಮತ್ತು ತಂಡದಿಂದ ಶ್ರೀವಿನಾಯಕ ತೊರವಿ, ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಜುಗಲ್‍ಬಂದಿ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಹರಿಹರ ಶ್ರೀ ಚೌಡೇಶ್ವರಿ ಮಹಿಳಾ ಸಂಘದ ಯಂಕಮ್ಮ ಜೆ.ಟಿ. ಅವರಿಂದ ಮಹಿಳಾ ವಾದ್ಯಗೋಷ್ಠಿ  ಸಂಜೆ 6 ರಿಂದ 7 ಗಂಟೆಯವರೆಗೆ ತುಮಕೂರಿನ ತಾರಾ ರಾಜಗೋಪಾಲನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಜಿ. ಗುರುರಾಜ್ ಮತ್ತು ತಂಡದಿಂದ ಜನಪದ ಸಂಗೀತ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ತುಮಕೂರಿನ ರಮ್ಯ ಆನಂದ ಮತ್ತು ತಂಡದಿಂದ ಸಮೂಹ ನೃತ್ಯ.
      ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ಗದಗ ಶಂಕ್ರಣ್ಣ ರಾಮಪ್ಪ ಸಂಕರಣ್ಣವರ ಮತ್ತು ತಂಡದಿಂದ ಜೋಗತಿ ನೃತ್ಯ,  ಸಂಜೆ 6 ರಿಂದ 7 ಗಂಟೆಯವರೆಗೆ ಮೈಸೂರಿನ ಪದ್ಮಶ್ರೀ ಮತ್ತು ತಂಡದಿಂದ ಭರತನಾಟ್ಯ, ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಗಂಗಾಧರ ಆಚಾರ್ ಮತ್ತು ತಂಡದಿಂದ ಹರಿಕಥೆ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ಧಾರವಾಡ ಸುಜಾತ ಗೊರವ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಚಾಮರಾಜನಗರ ಪುಟ್ಟಮಲ್ಲೇಗೌಡರು ಮತ್ತು ತಂಡದಿಂದ ಗೊರವರ ಕುಣಿತ,  ಸಂಜೆ 6 ರಿಂದ 7 ಗಂಟೆಯವರೆಗೆ ತೆಲಂಗಾಣ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಮಾಥುರಿ ನೃತ್ಯ, ಸಂಜೆ 7 ರಿಂದ 8 ಗಂಟೆಯವರೆ ಮೈಸೂರಿನ ಸುಂದರರಾಜ್ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಸಂಜೆ 8 ರಿಂದ 9 ಗಂಟೆಯವರೆ ಬೆಂಗಳೂರಿನ ದಿವ್ಯಾ ರಾಮಚಂದ್ರ ಮತ್ತು ತಂಡದಿಂದ ಸುಗಮ ಸಂಗೀತ.
     ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಹೆಚ್.ಡಿ.ಕೋಟೆ ತಾಲ್ಲೂಕಿನ ಗೌತಮ್ ಕಲಾ ಬಳಗದ ವತಿಯಿಂದ ಕೋಲಾಟ, ಸಂಜೆ 6 ರಿಂದ 7 ಗಂಟೆಯವರೆಗೆ  ಟಿ.ನರಸೀಪುರ ಕರಿಯಪ್ಪ ಮತ್ತು ತಂಡದಿಂದ ಪೂಜಾ ಕುಣಿತ ಹಾಗೂ ಸಂಜೆ 7 ರಿಂದ 8 ಗಂಟೆಯವರೆಗೆ ಬಾಗಲಕೋಟೆ ಜಿಲ್ಲೆ ಶಿವಶರಣ ಭಜನಾ ಮಂಡಳಿ ವತಿಯಿಂದ ಭಜನೆ.
ಪುರಭವನ ವೇದಿಕೆ: ಬೆಳಿಗ್ಗೆ 10 ಗಂಟೆ ಮೈಸೂರಿನ ರಾಜೇಗೌಡ ಕಲಾ ಸಂಘದ ವತಿಯಿಂದ ಬಳ್ಳಿ ಬಾಡಿತು ಹೂವು ಅರಳಿತು ನಾಟಕ, ಮಧ್ಯಾಹ್ನ 3 ಗಂಟೆಗೆ ತುಮಕೂರಿನ ತುರುವೇಕೆರೆ ದಾಸಪ್ಪಚಾರ್ ಮತ್ತು ತಂಡದಿಂದ ಯಕ್ಷಗಾನ ತಾಳ ಮದ್ದಲೆ ಹಾಗೂ  ಸಂಜೆ 7 ಗಂಟೆಗೆ ಮೈಸೂರಿನ ಮಧ್ಯಮ ವ್ಯಾಯೋಗಪರಸ್ಪರ  ತಂಡದಿಂದ ನಾಟಕ ನಡೆಯಲಿದೆ.
ಮಹಿಳಾ ದಸರಾ:- ಅಕ್ಟೋಬರ್ 4 ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಜೆ.ಕೆ.ಗ್ರೌಂಡ್‍ನಲ್ಲಿ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಸ್ಪರ್ಧೆ, ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರಿಂದ ವಿವಿಧ ರಾಜ್ಯಗಳ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮಗಳು ನಡೆಯಲಿವೆ.
ಆಹಾರ ಮೇಳ:- ಅಕ್ಟೋಬರ್ 4 ರಂದು ಬೆಳಿಗ್ಗೆ 11 ಗಂಟೆಗೆ  ಸಿರಿಧಾನ್ಯ ಲೋಕದಲ್ಲಿ  ಬಿಜಾಪುರ ಕೃಷಿಕರ ಬಳಗದ ಜೋಳ ಸಿರಿಧಾನ್ಯ ಬಗ್ಗೆ ಪ್ರಾತ್ಯಕ್ಷತೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಯುವದರ್ಶಿನಿ ಯುವಕರ ವಿಭಾಗದಲ್ಲಿ ಉಪ್ಪಿಟ್ಟು ಮತ್ತು ಕೇಸರಿಬಾತ್ ತಯಾರಿಸುವ ಸ್ಪರ್ಧೆ, ಸಂಜೆ 4 ಗಂಟೆಗೆ ಮಕ್ಕಳ ಆಹಾರದಲ್ಲಿ ಮಹಿಳೆಯರ ಪಾತ್ರ ಬಗ್ಗೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರಾಧಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಮಕ್ಕಳ ದಸರಾ :- ಅಕ್ಟೋಬರ್ 4 ರಂದು ನಾಡಹಬ್ಬ ಮೈಸೂರು ದಸರಾ-2016 ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಬೆಳಿಗ್ಗೆ 9-30 ರಿಂದ ಭಾರತಾಂಬೆಗೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಮೈಸೂರು ವಾಣಿ ಸಂಗೀತ ಶಾಲಾ ಮಕ್ಕಳಿಂದ ಸುಗಮ ಸಂಗೀತ ಕಾರ್ಯಕ್ರಮ. ಬೆಳಿಗ್ಗೆ 10-30 ಗಂಟೆಗೆ ಬಾಲ ಕಲಾವಿದರಾದ ಕು|| ಅಮೋಘ, ಮಹೇಂದ್ರ ಪ್ರಸಾದ್(ಡ್ರಾಮ ಜೂನಿಯರ್ ಕಲಾವಿದರು) ಹಾಗೂ ಕು|| ದಿಶಾ (ಕಿನ್ನರಿ ಧಾರವಾಹಿ) ಮಕ್ಕಳ ದಸರಾ ಉದ್ಘಾಟನೆ.  ಮಧ್ಯಾಹ್ನ 11-30 ಗಂಟೆಗೆ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಿವಿಧ ವೇಷ ಭೂಷಣ ಸ್ಪರ್ಧೆ, ಮಧ್ಯಾಹ್ನ 12-30 ಗಂಟೆಗೆ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಏಕಪಾತ್ರಾಭಿನಯ, ಮಧ್ಯಾಹ್ನ 1-30 ಗಂಟೆಗೆ ಸುಮ ರಾಜ್‍ಕುಮಾರ್ ಅವರಿಂದ ಮಾತನಾಡುವ ಗೊಂಬೆ, ಮಧ್ಯಾಹ್ನ 2-30 ಗಂಟೆಗೆ ಪ್ರೌಢಶಾಲಾ ಮಕ್ಕಳಿಗೆ ಏಕಪಾತ್ರಾಧಿನಯ ಹಾಗೂ ಮಧ್ಯಾಹ್ನ 3-30 ಗಂಟೆಗೆ ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ಪುಣ್ಯಕೋಟಿ ನಾಟಕ ಏರ್ಪಡಿಸಲಾಗಿದೆ.
   
ಯುವದಸರಾ :- ಅಕ್ಟೋಬರ್ 4 ರಂದು ಸಂಜೆ 5-30 ಗಂಟೆಗೆ ಯುವ ಸಂಭ್ರಮದಲ್ಲಿ ಆಯ್ಕೆಯಾದ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಎಸ್.ಡಿ.ಎಂ.ಎಂ.ಎಂ.ಕೆ. ಜೆ.ಎಸ್.ಎಸ್. ಮಹಿಳಾ ಪದವಿ ಪೂರ್ವ ಕಾಲೇಜು, ಸೇವಾಭಾರತಿ ಪ್ರಥಮ ದರ್ಜೆ ಕಾಲೇಜು, ಹೊಸಮಠ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು,ಕೌಟಿಲ್ಯ ಪ್ರಥಮ ದರ್ಜೆ ಕಾಲೇಜು, ವಿದ್ಯಾವಿಕಾಸ ಬಿ.ಎಡ್. Pಕಾಲೇಜುಗಳಿಂದ  ಕಾರ್ಯಕ್ರಮ ನಡೆಯಲಿದೆ. ಸಂಜೆ 7-20 ಗಂಟೆಗೆ ರಾಘವ ಡ್ಯಾನ್ಸ್ ಅಕಾಡೆಮಿ ಅವರಿಂದ ನೃತ್ಯ ಕಾರ್ಯಕ್ರಮ, ಸಂಜೆ 7-40 ಗಂಟೆಗೆ ಹಾಸನದ ಭಾರತೀಯ ಸಂಗೀತ ನೃತ್ಯ ಶಾಲಾ ವತಿಯಿಂದ ಕರ್ನಾಟಕ ವೈಭವ ನೃತ್ಯ ರೂಪಕ  ಹಾಗೂ ಸಂಜೆ 8 ಗಂಟೆಗೆ ರಘು ಧೀಕ್ಷಿತ  ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಗೋಲ್ಡ್ ಕಾರ್ಡ್” ಸೌಲಭ್ಯ
      ಜಿಲ್ಲಾಡಳಿತದ ವತಿಯಿಂದ ದಸರಾ ಮಹೋತ್ಸವ-2016ರ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ “ಗೋಲ್ಡ್ ಕಾರ್ಡ್” ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಗೋಲ್ಡ್ ಕಾರ್ಡ್ ದರ ರೂ. 7500/-ಗಳು, ಇಬ್ಬರು ವಯಸ್ಕರು ಮತ್ತು ಒಂದು ಮಗು (6 ವರ್ಷದೊಳಗೆ) ಉಪಯೋಗಿಸಿಕೊಳ್ಳಬಹುದು.
     ದಿನಾಂಕ 01.10.2016 ರಿಂದ 11.10.2016ರವರೆಗೆ ಮೈಸೂರು ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಶ್ರೀ ಜಯಚಾಮರಾಜೇಂದ್ರ ಮೃಗಾಲಯ, ಜಗನ್‍ಮೋಹನ್ ಪ್ಯಾಲೇಸ್, ಕಾರಂಜಿ ಕೆರೆ, ರೀಜಿನಲ್ ಮ್ಯೂಸಿಯಂ ನ್ಯಾಚುರಲ್ ಹಿಸ್ಟರಿ, ರಂಗನತಿಟ್ಟು, ಬೃಂದಾವನ ಉದ್ಯಾನವನ (ಕೆ.ಆರ್.ಎಸ್), ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಚಾಮುಂಡಿ ಬೆಟ್ಟ (ವಿ.ಐ.ಪಿ. ದರ್ಶನ), ಸೆಂಟ್ ಫಿಲೋಮಿನಾ ಚರ್ಚ್‍ಹಾಗೂ ದಸರಾ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶ ಇರುತ್ತದೆ. ಗೋಲ್ಡಾನ್ ಕಾರ್ಡ್‍ನಲ್ಲಿ  ಅಕ್ಟೋಬರ್ 11, 2016ರ ಬೆಳಿಗ್ಗೆ 11.00 ಘಂಟೆಗೆ ದಸರಾ ಮೆರವಣಿಗೆ  ಜಂಬೂ ಸವಾರಿಗೆ ಹಾಗೂ ಅಕ್ಟೋಬರ್ 11, 2016ರಂದು ಸಂಜೆ 7.00 ಘಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮ ವೀಕ್ಷಣೆಗೆ ಇಬ್ಬರಿಗೆ ಅವಕಾಶವಿರುತ್ತದೆ.
    ಟಿಕೇಟ್ ನ್ನು ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಪ್ರವಾಸೋದ್ಯಮ ಇಲಾಖೆ, ಉಪ ನಿರ್ದೇಶಕರ ಕಛೇರಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 0821- 2422096 ಯನ್ನು ಸಂಪರ್ಕಿಸಬಹುದು ಆನಲೈನ್ ಮೂಲಕ ಬುಕ್ ಮಾಡಲು ತಿತಿತಿ.mಥಿsoಡಿeಜಚಿsಚಿಡಿಚಿ.gov.iಟಿ
“ಪ್ಯಾಲೇಸ್ ಆನ್ ವೀಲ್ಸ್: ಟಿಕೇಟ್ ಕಾಯ್ದಿರಿಸಿ
ಈ ಬಾರಿಯ ದಸರಾ ಮಹೋತ್ಸವ-2016ರ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ಜಿಲ್ಲಾಡಳಿತದ ವತಿಯಿಂದ ಅರಮನೆಗಳ ನಗರ ಮೈಸೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸುಗಳಲ್ಲಿ “ಪ್ಯಾಲೇಸ್ ಆನ್ ವೀಲ್ಸ್” ಎಂಬ ವಿಶೇಷ ಕಾರ್ಯಕ್ರಮವನ್ನು ಮಾನ್ಯ ಶ್ರೀ ಸೋಮಶೇಖರ್ ಕೃಷ್ಣರಾಜ ಕ್ಷೇತ್ರ, ಶಾಸಕರು, ಮಾನ್ಯ ಶ್ರೀ ವಾಸು,               ಚಾಮರಾಜ ಕ್ಷೇತ್ರ, ಶಾಸಕರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರುರವರು ದಿನಾಂಕ 02.10.2016 ರಂದು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದ್ದಾರೆ. ಈ ವಿನೂತನ ಒಂದು ದಿನದ ಪ್ರವಾಸಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಅನೇಕ ಪ್ರವಾಸಿಗರು ಈ ಪ್ರವಾಸಕ್ಕಾಗಿ ಟಿಕೇಟ್ ಅನ್ನು ಕಾಯ್ದಿರಿಸಿರುತ್ತಾರೆ. ಈ ಪ್ರವಾಸ ಕಾರ್ಯಕ್ರಮವು ದಿನಾಂಕ 09.10.2016ರಂದು  ಮುಕ್ತಾಯವಾಗುವುದರಿಂದ ಆಸಕ್ತ ಪ್ರವಾಸಿಗರು ತಮ್ಮ ಟಿಕೇಟ್ ಅನ್ನು ತಿತಿತಿ.ಞsಡಿಣಛಿ.iಟಿ ನÀಲ್ಲಿ ಕಾಯ್ದಿರಿಸಿಕೊಳ್ಳಬಹುದಾಗಿದೆ.
ಈ ವಿನೂತನ ಪ್ರವಾಸದಲ್ಲಿ ಪ್ರವಾಸಿಗರಿಗಾಗಿ ಉಚಿತ ವೈ-ಫೈ ಸೌಲಭ್ಯ, ಸಿಹಿ-ತಿನಿಸು ಮತ್ತು ಸ್ಮರಣಿಕೆಯನ್ನು ಒದಗಿಸಲಾಗುತ್ತಿದೆ. ವೈ-ಫೈ ಸೌಲಭ್ಯದ ಪ್ರಾಯೋಜಕತ್ವವನ್ನು ರಿಲಯನ್ಸ್ ಜಿಯೋ, ಸಿಹಿ-ತಿನಿಸು ಪ್ರಾಯೋಜಕತ್ವವನ್ನು ಮಹಾಲಕ್ಷ್ಮಿ ಸ್ವೀಟ್ಸ್, ಮೈಸೂರುರವರು ಸ್ಮರಣಿಕೆಯನ್ನು ದೇಸೀ ಅಡ್ಡಾ ಮೈಸೂರುರವರು ಹಾಗೂ ಪ್ರಿಂಟ್ ಪ್ರಾಯೋಜಕತ್ವವನ್ನು ಆ್ಯಡ್ಸ್ ಇಂಡಿಯಾ, ಮೈಸೂರುರವರು ವಹಿಸಿಕೊಂಡಿರುತ್ತಾರೆ.  ಹೆಚ್ಚಿನ ಮಾಹಿತಿಗೆ ಪ್ರವಾಸೋದ್ಯಮ ಇಲಾಖೆ,# 2, ಹೋಟೆಲ್ ಮಯೂರ ಹೊಯ್ಸಳ ಕಾಂಪ್ಲೆಕ್ಸ್,ಜೆ.ಎಲ್.ಬಿ. ರಸ್ತೆ, ಮೈಸೂರು – 570005 ದೂರವಾಣಿ ಸಂಖ್ಯೆ : 0821- 2422096 7760990820 ಯನ್ನು ಸಂಪರ್ಕಿಸುವುದು.
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
2014-15ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ ಮಟ್ಟದಲ್ಲಿ                   ಸಂಯುಕ್ತ ಸ್ಫರ್ಧಾತ್ಮಕ ಪರೀಕ್ಷೆಯ ಮೂಲಕ ಸರ್ಕಾರಿ ಪ್ರೌಢಶಾಲೆಗಳು, ಆಂಗ್ಲ ಮಾಧ್ಯಮದ ಆದರ್ಶ ವಿದ್ಯಾಲಯಗಳು ಮತ್ತು ಆರ್.ಎಂ.ಎಸ್.ಎ. ಅಡಿಯಲ್ಲಿ ಉನ್ನತೀಕರಿಸಲಾದ  ಸರ್ಕಾರಿ ಪ್ರೌಢಶಾಲಾ ಸಹಾಯಕ ಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡುವ ಕುರಿತು ಪರಿಷ್ಕøತ ತಿದ್ದುಪಡಿ ಅಧಿಸೂಚನೆಯಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ 29-09-2016ರಂದು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಿ, ಬಾಧಿತ ಅಭ್ಯರ್ಥಿಗಳಿಂದ ಆಕ್ಷೇಪಣೆಯನ್ನು ಕರೆಯಲಾಗಿದೆ. ಆಕ್ಷೇಪಣೆಗಳನ್ನು ಆಯ್ಕೆ ಪ್ರಾಧಿಕಾರಿ ಹಾಗೂ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ, ಮೈಸೂರು ಇವರಿಗೆ ದಿನಾಂಕ 14-10-2016ರ ಸಂಜೆ 5:30 ಗಂಟೆಯೊಳಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ನಿಗದಿತ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸುವ ನಮೂನೆಯನ್ನು ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.
ಆನೆ ದಿನಾಚರಣೆ
ವನ್ಯ ಜೀವಿ ಸಪ್ತಾಹದ ಅಂಗವಾಗಿ ದಿನಾಂಕ 4-10-2016 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರು ಅರಮನೆ ಮುಂಭಾಗದಿಂದ ಆನೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆ ಕೆ.ಆರ್.ವೃತ್ತ, ಬಾಟಾ ಸರ್ಕಲ್ ಮುಖಾಂತರ ಬನ್ನಿಮಂಟಪದವರೆಗೆ ಸಾಗಲಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯ
ದಸರಾ ದರ್ಶನ 2016ರ ಪ್ರಯುಕ್ತ ಕ.ರಾ.ರ.ಸಾ.ನಿಗಮ ವತಿಯಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಮತ್ತು ಸಾಂಸ್ಕøತಿಕ ಸ್ಥಳಗಳ ವೀಕ್ಷಣೆಗಾಗಿ “ ಗಿರಿದರ್ಶಿನಿ, ಜನದರ್ಶಿನಿ, ದೇವದರ್ಶಿನಿ ”  ಎಂಬ ವಿಶೇಷ ಪ್ಯಾಕೇಜ್ ಟೂರ್ ಸೌಲಭ್ಯವನ್ನು  ದಿ: 7/10/2016 ರಿಂದ 17/10/2016ರ ವರೆಗೆ ಕಲ್ಪಿಸಲಾಗಿದೆ.
 ಬನ್ನಿ ದಸರಾ ಸಂದರ್ಭದಲ್ಲಿ ಈ ವಿಶೇಷ ಕೊಡುಗೆಯೊಂದಿಗೆ ಕಣ್ಮನ ತಣಿಸುವ ಸುಂದರ ಸ್ಥಳಗಳನ್ನು ವೀಕ್ಷಿಸಿ ವಿಶೇಷ ಪ್ರವಾಸಿ ಪ್ಯಾಕೇಜ್‍ಗಳ ಮಾಹಿತಿಯು ಈ ಕೆಳಕಂಡಂತಿದೆ.
ಕ್ರ.ಸಂ. ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು ಸಮಯ ಮತ್ತು ಕಿ.ಮೀ ಪ್ರಯಾಣ ದರ ನಿರ್ಗಮನದ ಸ್ಥಳ
1 ಗಿರಿ ದರ್ಶಿನಿ ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಬಿಳಿಗಿರಿರಂಗನಬೆಟ್ಟ, ನಂಜನಗೂಡು. ಚಾಮುಂಡಿಬೆಟ್ಟ. 325 ಕಿ.ಮೀ. ನಿರ್ಗಮನ ಬೆಳಿಗ್ಗೆ 6.30 ಕ್ಕೆ ದೊಡ್ಡವರಿಗೆ-350
ಮಕ್ಕಳಿಗೆ-175 ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
2 ಜಲ ದರ್ಶಿನಿ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಭಿಜಲಪಾತ, ರಾಜಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್ 350 ಕಿ.ಮೀ. ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-375
ಮಕ್ಕಳಿಗೆ-190 ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
3 ದೇವ ದರ್ಶಿನಿ ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್. 250 ಕಿ.ಮೀ.
ನಿರ್ಗಮನ ಬೆಳಿಗ್ಗೆ 6.30 ದೊಡ್ಡವರಿಗೆ-275
ಮಕ್ಕಳಿಗೆ-140 ಮೈಸೂರು ಕೇಂದ್ರಿಯ ಬಸ್ ನಿಲ್ದಾಣ
 
      ಮುಂಗಡ ಬುಕ್ಕಿಂಗ್ ಹಾಗೂ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7760990822, 7760990820, 0821-2424995 ವೆಬ್‍ಸೈಟ್: ತಿತಿತಿ.ಞsಡಿಣಛಿ.iಟಿ ಸಂಪರ್ಕಿಸುವುದು.

Saturday, 1 October 2016

ವಿಶ್ವಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚೆನ್ನವೀರ ಕಣವಿ ಚಾಲನೆ.

ವಿಶ್ವಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚೆನ್ನವೀರ ಕಣವಿ ಚಾಲನೆ.
 ಮೈಸೂರು: ಕನ್ನಡ ನಾಡಿನ ಜೀವನದಿ ಕಾವೇರಿಗೆ ತಮಿಳ್ನಾಡು ಮಗ್ಗುಲ ಮುಳ್ಳಾಗಿದೆ ಎಂದು ನಾಡೋಜ ಚೆನ್ನವೀರ ಕಣವಿ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಮಿಳ್ನಾಡು ನಮ್ಮ ಪಾಲಿಗೆ ಮಗ್ಗುಲ ಮುಳ್ಳಾಗಿ ಆಗಾಗ ಚುಚ್ಚುತ್ತಲೇ ಇರುತ್ತದೆ. ಇದಕ್ಕೆ  ಸಂಕಷ್ಟ ಸೂತ್ರವೊಂದನ್ನು ಸಿದ್ದಪಡಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಶನಿವಾರ ಮದ್ಯಾಹ್ನ 12 ಗಂಟೆ 5 ನಿಮಿಷಕ್ಕೆ ಸಂದ ಶುಭ ಧನುರ್ ಲಗ್ನದಲ್ಲಿ ನಾಡ ದೇವತೆ, ತಾಯ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸಿದ ನಂತರ ಉದ್ಘಾಟನಾ ಭಾಷಣ ಮಾಡಿದ ಅವರು,  ಕರ್ನಾಟಕ- ತಮಿಳುನಾಡಿನ ನಡುವೆ ಉದ್ಭವಿಸಿರುವ ಈ ಬಿಕ್ಕಟ್ಟನ್ನು ಪರಿಸಹರಿಸಲು ಪ್ರಧಾನಮಂತ್ರಿಗೆ ಕಾನೂನಿನಲ್ಲಿ ಅವಕಾಶವಿದೆ ಎಂದರಲ್ಲದೇ ನ್ಯಾಯಾಲಯವೂ ಸಹ ಈ ಸಂಗತಿಯನ್ನು ಮಾನವೀಯತೆಯ ನಿಟ್ಟಿನಲ್ಲಿ ನೋಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ತಮ್ಮ ಪಕ್ಷದ ಹಿತಕ್ಕಿಂತಲೂ  ರಾಜ್ಯದ ಹಿತಮುಖ್ಯವೆಂದು ನಮ್ಮ ರಾಷ್ಟ್ರೀಯ ಪಕ್ಷಗಳು ಭಾವಿಸಬೇಕೆಂದು ಮನವಿ ಮಾಡಿದರು.
ಅಂತಾರಾಜ್ಯ ನೀರು ಹರಿಯುವ ಪ್ರದೇಶದಲ್ಲಿ ಪ್ರತಿ ರಾಜ್ಯ ಕ್ಕೆ ತನ್ನ ಪ್ರದೇಶದೊಳಗೆ ಒಂದು ಸಮುಚಿತ ಸಮತೋಲನದ ನೀರಿನಪಾಲು ಬಳಸಿಕೊಳ್ಳುವ ಹಕ್ಕಿದೆ ಎಂದು 1995ರಲ್ಲಿ ಹೆಲ್ಸಿಂಕಿ ಅಂತಾರಾಷ್ಟ್ರೀಯ ಕಾನೂನು ಸಂಘದ ಸಮಾವೇಶದಲ್ಲಿ ನೀರು ಹಂಚಿಕೆ ಕುರಿತು ಅಂತಾರಾಷ್ಟ್ರೀಯ ನೀತಿ ರೂಪಿಸಲಾಗಿದೆ.ಅದರ ಆಧಾರದ ಮೇಲೆ ತಕ್ಕ ಮಾನದಂಡಗಳನ್ನು ರೂಪಿಸಿ ಅಂತಾರಾಜ್ಯ ಜಲವಿವಾದಗಳನ್ನು ಕೇಂದ್ರ ಸರ್ಕಾರ ಬಗೆಹರಿಸಬಹುದೆಂದು ತಿಳಿಸಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿಯೊಂದನ್ನು ರೂಪಿಸುವುದು ಅತ್ಯಂತ ಅಗತ್ಯವಾಗಿದೆ. ಮಹಾದಾಯಿ ವಿವಾದವನ್ನು ಮೂರು ರಾಜ್ಯಗಳ ಮುಖ್ಯಮಂತ್ರಿ ಗಳು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆ ಹರಿಸಿಕೊಳ್ಳಬೇಕು ಎಂದು ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ರಾಜಕೀಯಕ್ಕೆ  ಬಳಸಿಕೊಳ್ಳದೆ, ಪ್ರಧಾನಿಯವರು ಮಧ್ಯಸ್ಥಿಕೆ ವಹಿದಿ ಸೌಹಾರ್ದತೆಯಿಂದ ಬಗೆ ಹರಿಸಿ ಪರಸ್ಪರ ಬಾಂಧವ್ಯ ಹೆಚ್ಚಿಸುವರು ಎಂಬುದು ಎಲ್ಲರ ಅಪೇಕ್ಷೆಯಾಗಿದೆ  ಎಂದರು.
                                      ಕನ್ನಡಿಗರು ಭಾಷಾಂಧರಲ್ಲ:
ಕನ್ನಡಿಗರು ಎಂದೂ ಭಾಷಾಂಧರಾಗಿರಲಿಲ್ಲ. ಸರ್ವಭಾಷಾ ಸಾರಸ್ವತಿ ಎಂಬ ಪರಿಕಲ್ಪನೆ ಜಗತ್ತಿಗೆ ಕೊಟ್ಟವರು ಕನ್ನಡಿಗರು.ತಾಯ್ನಾಡಿಗೆ ಅಗ್ರಪೂಜೆ ಸಲ್ಲಬೇಕು.ಕನ್ನಡವನ್ನು ಪೂರ್ತಿ ತೊರೆದು ಇಂಗ್ಲೀಷ್ ಒಂದೇ ನಮ್ಮ ಪರಮ ದೈವ ಎಂದರೆ ಮಾತ್ರ ದುರಂತ ತಪ್ಪಿದ್ದಲ್ಲ. ಇಂದು ಕನ್ನಡ ಪ್ರಜ್ಣೆ ತನ್ನ ಸ್ವೋಪಜ್ಞತೆಯಿಂದ ವಿಶ್ವಪ್ರಜ್ಞೆಯಾಗಿ, ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಂದಿಗೆ ಪ್ರವಹಿಸಿ, ಸಮನ್ವಯಗೊಂಡು ಸಾಕ್ಷಾತ್ಕಾರಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಶಿಕ್ಷಣ ನೀತಿ-2016 ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಿದ್ದು, ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಬೋಧನಾ ಮಾಧ್ಯಮವಾಗಿ ಮಾತೃ ಭಾಷೆ ಅಥವಾ ಸ್ಥಳೀಯ ಭಾಷೆಯಿರಬೇಕೆಂದೂ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ. ಶಿಕ್ಷಣವನ್ನು ಪ್ರಾರಂಭಿಸಬೇಕೆಂದೂ ಸೂಚಿಸಿರುವುದು ಸ್ವಾಗತರ್ಹ.  ರಾಜ್ಯ ಸರ್ಕಾರಗಳು ಆಯಾ ರಾಜ್ಯಗಳ ರಾಜ್ಯ ಭಾಷೆಯನ್ನು ಕಡ್ಡಾಯವಾಗಿ ಪ್ರಾಥಮಿಕ ಹಂತದಲ್ಲಿ    ಶಿಕ್ಷಣ ಮಾಧ್ಯಮ ವಾಗಿ ಮಾಡಬೇಕು ಅವಶ್ಯವೆನಿಸಿದಲ್ಲಿ ಸಂವಿಧಾನದ ತಿದ್ದುಪಡಿಯನ್ನೂ ಮಾಡಬಹುದಾಗಿದೆ ಎಂದವರು ನುಡಿದರು.
                              ಕಲ್ಬುರ್ಗಿ ಅಪರಾಧಿಗಳನ್ನು ಬಂಧಿಸಿ:
.ಎಂ.ಎಂ.ಕಲ್ಬುರ್ಗಿ ಯವರ ಅಮಾನುಷ ಹತ್ಯೆ, ಅಸಹಿಷ್ಣುತೆಯ ದ್ಯೋತಕವಾಗಿ ಇಡೀ ಪ್ರಪಂಚದ ತುಂಬ ಚರ್ಚೆಗೆ ಕಾರಣವಾಗಿದೆ. ಕಲ್ಬುರ್ಗಿ ಯವರ  ಹತ್ಯೆ ನಡೆದು ಒಂದು ವರ್ಷವೇ ಕಳೆದಿದ್ದರೂ ತನಿಖೆ ಪೂರ್ಣವಾಗದೇ ಇರುವುದು ವಿಷಾದದ ಸಂಗತಿ.ಸರ್ಕಾರ ಶೀಘ್ರ ತನಿಖೆ ಪೂರ್ಣಗೊಳಿಸಿ,ಅಪರಾಧಿಗಳನ್ನು ಬಂಧಿಸಿ ತ್ವರಿತ ಕ್ರಮಕೈಗೊಳ್ಳಬೇಕು.

ಕಂದಾಚಾರ ನಿಷೇಧಿಸಿ:

ಧರ್ಮದ ಸೋಗಿನಲ್ಲಿ ಆಚರಿಸು ನಾನಾ ರೀತಿಯ ಕಂದಾಚಾರಗಳನ್ನು ನಿಷೇಧಿಸುವ ಅತ್ಯಂತ ಅಗತ್ಯವಿದೆ.

ನಂಬಿಕೆಗಳು ಅವಶ್ಯಕ. ನಂಬಿಕೆಗಳು ವ್ಯಕ್ತಿಗತ ನೆಲೆಯಲ್ಲಿರುತ್ತವೆ. ಅಂಥವುಗಳನ್ನು ಯಾವ ವೈಚಾರಿಕರೂ ವಿರೋಧಿಸುವುದಿಲ್ಲ. ಆದರೆ ಜನ ಸಾಮಾನ್ಯರನ್ನು ಶೊಷಣೆಗೆ ಒಳಪಡಿಸುವ ಮೂಢ ನಂಬಿಕೆಗಳನ್ನು ನಾಗರಿಕ ಸಮಾಜ ವಿರೋಧಿಸಲೇ ಬೇಕು  ಅರ್ಥಹೀನವಾದ ಮೂಢ ಆಚರಣೆಗೆ ಸೀಗೆ ಮೆಳೆಯಲ್ಲಿ ಸಿಕ್ಕಿಕೊಂಡ ಮನುಷ್ಯನನ್ನು ಮತ್ತು  ಸಮಾಜವನ್ನು ಮುಕ್ತಿಗೊಳಿಸಿಬೇಕಾದರೇ, ಮೌಡ್ಯಚಾರಣೆ ನಿಷೇಧ ಕಾಯ್ದೆ ತರಬೇಕೆಂಬ ಧೋರಣಾ ನಿರ್ಣಯವನ್ನು ಸರಕಾರ ಕಾರ್ಯಗತಗೊಳಿಸಬೇಕೆಂದರು.
ಅನೇಕ ಬಗೆ ಮಾಲಿನ್ಯದ  ಇಂದಿನ ಕಲುಷಿತ ವಾತಾವರಣದಲ್ಲಿ ಒಳ ಹೊರಗಿನ  ತಾಪಮಾನವನ್ನು ತಣಿಸಲು ಜಲ ಸಂರಕ್ಷಣೆಯೊಂದಿಗೆ ಹಸಿರು ದಸರಾ ವರುಷದುದ್ದಕ್ಕೂ ಕಾರ್ಯರೂಪಗೊಳಿಸುವಂತಾಗಬೇಕೆಂದು ತಿಳಿಸಿದರು.
ತಮ್ಮ ಬಾಲ್ಯದ ದಸರೆಯನ್ನು ನೆನಪಿಸಿಕೊಂಡ ಕಣವಿ, 74 ವರ್ಷಗಳ ಹಿಂದೆ 1942 ರಲ್ಲಿ, ನಾನು ನಾಲ್ಕನೆ ತರಗತಿಯಲಿದ್ದಾಗ ಮೊದಲು ಮೈಸೂರು ದಸರಾ ಮಹೋತ್ಸವ ನೋಡಿದ್ದು, ಕಣ್ಣಿಗೆ ಕಟ್ಟಿದಂತಿದೆ ಎಂದರು.
ಕುವೆಂಪು ವಿರಚಿತ ಲಲಿತಾದ್ರಿ ಕವಿತೆ ಮೆಚ್ಚಿಕೊಂಡಿದ್ದೆ.ಹೀಗಾಗಿ ಲಲಿತಾದ್ರಿಯನ್ನು ನೋಡಬೇಕಿತ್ತು.
ರಾಜ್ಯದಲ್ಲಿ ಬರಗಾಲದ ಛಾಯೆ ದಟ್ಟವಾಗಿ ಆವರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಸರಳವಾಗಿ ಆಚರಿಸಲು ಯೋಗ್ಯ ನಿರ್ಣಯ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವ ವಸುಧೆಯೊಳಗಿನ ಒಂದು ಬಿಂದುವಾಗಿ,ತನ್ನೊಳಗೆ ವಸುಧೆಯನ್ನೇ ಅರಗಿಸಿಕೊಂಡ ಕನ್ನಡದ ಒಂದು ಭವ್ಯ ಪ್ರತಿಮೆಯಾಗಿದೆ. ಇದನ್ನು ಕನ್ನಡ ಸಂಸ್ಕೃತಿ ಎನ್ನಬಹುದು.  ಈ ಸಾಂಸ್ಕೃತಿಕ ಮಹೋತ್ಸವ ಕರ್ನಾಟಕದ ಎಲ್ಲ ಜಿಲ್ಲಾ ಸ್ಥಳಗಳಲ್ಲಿಯೂ ಆಯಾ ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ನಡೆಯುವಂತೆ ಆರ್ಥಿಕ ನೆರವಿನೊಂದಿಗೆ ಸರ್ಕಾರ ನೋಡಿಕೊಳ್ಳುವುದೆಂದು ಆಶಿಸಿದ್ದೇನೆ ಎಂದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ  ಚಾಮುಂಡಿ ತಾಯಿಯಲ್ಲಿ ಕಾವೇರಿ ವಿವಾದದ ಬಿಕ್ಕಟ್ಟು ಬಗೆ ಹರಿಯಲಿ, ನ್ಯಾಯಾ ಸಿಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದರು.
ರಾಜ್ಯದಲ್ಲಿ ಕೆಲವು ಕಡೆ ಬರಗಾಲವಿದ್ದರೆ, ಕೆಲವು ಜಿಲ್ಲೆಗಳಲ್ಲಿ ಅತೀವೃಷ್ಟಿ ಇದೆ. ರಾಜ್ಯ ಅನಾವೃಷ್ಟಿಗೆ ತುತ್ತಾಗುವುದನ್ನೂ ನೋಡುತ್ತಿದ್ದೇವೆ. ಕಾವೇರಿ ವಿವಾದಕ್ಕೆ 120 ವರ್ಷಗಳ ಇತಿಹಾಸವಿದೆ. 1820 ಮತ್ತು 24ರಲ್ಲಿ ಕಾವೇರಿ ನದಿ ನೀರಿನ ವಿಚಾರವಾಗಿ ಒಪ್ಪಂದವಾಗಿತ್ತು. ಅದು ಕೇವಲ 50 ವರ್ಷಗಳಿಗೆ ಮಾತ್ರ. ಆದರೆ ತದ ನಂತರವು 1991ರಲ್ಲಿ ಇಂಟ್ರೀಮ್ ಅವಾರ್ಡ್ ಆಯ್ತು.  ನಂತರ 192 ಟಿಎಂಸಿ ನೀರನ್ನು ಬಿಡಬೇಕೆಂದು ಒಪ್ಪಂಧವಾಗಿತ್ತು. ಅದರ ನಂತರ 192 ಟಿಎಂಸಿಗಿಂತ ಹೆಚ್ಚು ನೀರನ್ನು ಬಿಡುತ್ತಾ ಬಂದಿದ್ದೇವೆ. ಆದರೆ ಕಳೆದ ಐದು ವರ್ಷದಲ್ಲಿ  ಮಳೆ ಕೊರತೆಯಿಂದಾಗಿ ನೀರು ಹರಿಸಲು ಸಾಧ್ಯವಾಗಿಲ್ಲ. ಕೆ.ಆರ್‍ಎಸ್.ಜಲಾಶಯ ತುಂಬಬೇಕಾದರೆ  ಕೊಡಗಿನಲ್ಲಿ ಮಳೆಯಾಗಬೇಕು. ಆದರೆ ಅಲ್ಲಿಯೂ ಕೂ ಮುಂಗಾರು ಮಳೆ ಹೆಚ್ಚಾಗಿ ಆಗಿಲ್ಲ. ಇದರ ಪರಿಣಾಮವಾಗಿ 157 ಟಿಎಂಸಿ ನೀರು ಜಲಾಶಯಕ್ಕೆ ಬರಬೇಕಾಗಿತ್ತು. ಆದರೆ 129 ಟಿ.ಎಂ.ಸಿ ನೀರು ಮಾತ್ರ ಜಲಾಶಯಕ್ಕೆ ಒಳಹರಿವಾಗಿದೆ. ಶೇ.48 ರಷ್ಟು ನೀರು ಕೊರತೆ ಇದೆ. ಆದ್ದರಿಂದ ತಮಿಳು ನಾಡಿಗೆ ನೀರು ಬಿಡಲು ಸಾಧ್ಯವಾಗಿಲ್ಲವೆಂದು ಹೇಳಿದರು.
14 ಲಕ್ಷ ಎಕರೆ ಕೃಷಿ  ಭೂಮಿ ಇದ್ದು, ಕೇವಲ 4 ಲಕ್ಷ ಎಕರೆ ಪ್ರದೇಶದಲ್ಲಿ ಮಾತ್ರ  ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಲಾಗಿದೆ. ಆದರೆ ಕುಡಿಯುವ ನೀರಿಗೆ ಹೆಚ್ಚು ಒತ್ತು ನೀಡಿರುವುದರಿಂದ ಕೃಷಿ ಭೂಮಿಗೂ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.
ರಾಜ್ಯದ ಜನತೆಗೆ ಕುಡಿಯಲು ನೀರಿಲ್ಲ. ಆದರೆ ತಮಿಳುನಾಡು ಸಾಂಬಾ ಬೆಳೆ ಬೆಳೆಯಲು ನೀರು ಕೇಳುತ್ತಿದೆ. ಅಕ್ಟೋಬರ್‍ನಲ್ಲಿ ತಮಿಳುನಾಡಿನಲ್ಲಿ ಹೆಚ್ಚು ಮಳೆಯಾಗುತ್ತದೆ.  ಅವರಿಗೆ ಉತ್ತಮ ಅಂತರ್ಜಲವು ಇದೆ. ಆದರೂ ಸುಪ್ರೀಂ ಕೋರ್ಟ್‍ನ ತಮಿಳುನಾಡು ಪರ ತೀರ್ಪು ನೀಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ಯಾರಾ ಒಲಂಪಿಯನ್ ದೀಪಾ ಮಲ್ಲಿಕ್ ಮತ್ತು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ  ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಔಕಾಫ್ ಸಚಿವ ತನ್ವೀರ್  ಸೇಠ್,  ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಸಂಸದರಾದ ಪ್ರತಾಪ್ ಸಿಂಹ, ದೃವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಚಿಕ್ಕಮಾದು, ಮಹಾಪೌರಾದ ಬಿ.ಎಲ್.ಭೈರಪ್ಪ, ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾಧಿಕಾರಿ ಡಿ.ರಂದೀಪ್,  ಪೊಲೀಸ್ ಆಯುಕ್ತ ಬಿ.ದಯಾನಂದ್, ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ಕ್ರೀಡಾ ಜ್ಯೋತಿ ಉದ್ಘಾಟನೆ
ದಸರಾ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.  ಬಸವರಾಜು ವರ್ಷ ತೆಗೆದುಕೊಂಡು ಬಂದ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಿಸಿದರು.
ಸಾಂಸ್ಕøತಿಕ ಸ್ವಾಗತ
ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಆಗಮಿಸಿದ ಹಿರಿಯ ಸಾಹಿತಿ ನಾಡೋಜ ಚೆನ್ನವೀರ ಕಣವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗಣ್ಯರನ್ನು ಚಾಮುಂಡಿ ಬೆಟ್ಟದಲ್ಲಿ ಸಾಂಸ್ಕøತಿಕ  ಮತ್ತು ಜನಪದ ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು.
ಪಟ ಕುಣಿತ, ವೀರಗಾಸೆ, ಕಂಸಾಳೆ, ನಂಧಿಧ್ವಜ, ಕೀಲು ಕುದುರೆ ಹಾಗೂ ಪೂರ್ಣ ಕುಂಭದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.