Saturday, 9 April 2016

ಜಿ.ಪಂ. ಅಧಿಕಾರ ಚುಕ್ಕಾಣಿಗಾಗಿ ಸಚಿವ ಪ್ರಸಾದ್ ನೇತೃತ್ವದಲ್ಲಿ ರಹಸ್ಯ ಸಭೆ
ಮೈಸೂರು,ಏ.9- ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಅಧ್ಯಕ್ಷರು ಉಪಾಧ್ಯಕ್ಷರುಗಳ ಹುದ್ದೇಗಾಗಿ ಈಗಾಗಲೇ ಮೀಸಲಾತಿ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೂ  ಬಹುಮತ ಬಾರದೆ ಅತಂತ್ರಸ್ಥಿತಿಯಲ್ಲಿರುವ  ಜಿಲ್ಲೆ, ತಾಲ್ಲೂಕುಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿ, ಜೆಡಿಎಸ್.ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರು ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಮೈಸೂರು ಜಿಲ್ಲಾ ಪಂಚಾಯಿತಿಯ ಅಧಿಕಾರ ಹಿಡಿಯಲು ಕಾಂಗ್ರೆಸ್ ರಣತಂತ್ರ ನಡೆಸುತ್ತಿದ್ದು, ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ರವರು ಇಂದು ನಗರದ ಖಾಸಗಿ ಹೊಟೆಲ್ ವೊಂದರಲ್ಲಿ ಪಕ್ಷದ ಮುಖಂಡರು, ಶಾಸಕರುಗಳು, ಸದಸ್ಯರುಗಳೊಂದಿಗೆ  ರಹಸ್ಯ ಮಾತುಕತೆ ನಡೆಸಿದ್ದಾರೆ.
 ಜಿಲ್ಲೆಯಲ್ಲಿ ಅಧ್ಯಕ್ಷ ಸ್ಥಾನ  ಬಿಸಿಎಂ-ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ  ಮೀಸಲಿರುವುದರಿಂದ ಜೆಡಿಎಸ್, ಬಿಜೆಪಿ ಪಕ್ಷದಲ್ಲಿ ಬಿಸಿಎಂ-ಎ ಗೆ ಸೇರಿದ ಸದಸ್ಯರು ಯಾರು ಇಲ್ಲ. ಇದನ್ನೇ ಉಪಯೋಗಿಸಿಕೊಂಡ ಕಾಂಗ್ರೆಸ್ ಮೈಸೂರು ಜಿಪಂನ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ನಡೆಸುತ್ತಿದೆ,
 ಮೈ.ಜಿ.ಪಂನ ಅಧಿಕಾರ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಒಲಿಯುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ, ಸಚಿವರ ನೇತೃತ್ವದಲ್ಲಿ ಇಂದು ಧೀರ್ಘಕಾಲ ಚರ್ಚೆನಡೆಸಿ, ಬಹುಮತ ಸಾಭಿತು ಪಡಿಸಲು ಯಾವ ಪಕ್ಷ ದವರನ್ನು ಬೆಂಬಲಕ್ಕೆ  ಆಹ್ವಾನಿಸಬೇಕು, ಅಥವಾ ಆಪರೇಷನ್ ಕಾಂಗ್ರೆಸ್ ಮಾಡಬೇಕೇ ಎಂಬ ಬಗ್ಗೆ ಮಾತುಕತೆಗಳು ನಡೆದವು. ಮುಂದೆ ಏನಾಗುವುದು ಎಂಬುದನ್ನು ಕಾದು ನೊಡೋಣ.
 ಇಂದಿನ ಸಭೆಯಲ್ಲಿ ಶಾಸಕರುಗಳಾದ ವಾಸು, ಎಂ.ಕೆ. ಸೋಮಶೇಖರ್, ತನ್ವೀರ್‍ಸೇಠ್, ಎಂ.ಎಲ್.ಸಿ ಧರ್ಮಸೇನಾ ಹಾಗೂ ಇತರ ಮುಖಂಡರು, ಜಿ.ಪಂ ಸದಸ್ಯರುಗಳು, ಹಾಜರಿದ್ದರು.

No comments:

Post a Comment