ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳ ಜಂಟಿ ಸಮಾವೇಶ
ನವದೆಹಲಿಯ ವಿಜ್ಞಾನ ಭವನದಲ್ಲಿ ಇದೇ ಭಾನುವಾರ, ಎಪ್ರಿಲ್ 24, 2016ರಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳ ಜಂಟಿ ಸಮಾವೇಶ ನಡೆಯಲಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ,ನ್ಯಾಯಮೂರ್ತಿ, ಶ್ರೀ. ಟಿ.ಎಸ್ ಠಾಕೂರ್, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವರಾದ ಶ್ರೀ. ಡಿ.ವಿ ಸದಾನಂದ ಗೌಡ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಜಂಟಿ ಸಮಾವೇಶವನ್ನು ಪ್ರಧಾನ ಮಂತ್ರಿ, ಶ್ರೀ. ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ದೇಶದಲ್ಲಿ ಗುಣಮಟ್ಟದ ನ್ಯಾಯವನ್ನು ಸಮರ್ಪಕವಾಗಿ ಹಾಗೂ ಸರಿಯಾದ ಸಮಯದಲ್ಲಿ ನೀಡುವಲ್ಲಿನ ತಮ್ಮ ಬೆಂಬಲವನ್ನು ಪುರ್ನ ದೃಢೀಕರಿಸಲು ನ್ಯಾಯಾಂಗ ಮತ್ತು ಕಾರ್ಯಾಂಗಗಳಿಗೆ ಜಂಟಿ ಸಮಾವೇಶ ಉತ್ತಮ ಅವಕಾಶವಾಗಿದೆ.
ಸಮಾವೇಶದ ಕೊನೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಮತ್ತು ನ್ಯಾಯಂಗ ಅನುಕರಿಸುವಂತಹ ಉತ್ತಮ ನಿರ್ಣಯಗಳು ರೂಪುಗೊಳ್ಳುವ ವಿಶ್ವಾಸವಿದೆ. ಸಮಾವೇಶದ ಬಳಿಕ ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವರು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಧ್ಯಮದ ಜತೆ ಸಂವಾದ ನಡೆಸಲಿದ್ದಾರೆ.
ದೇಶದಲ್ಲಿ ಕಾನೂನು ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ಪ್ರಮುಖ ವಿಚಾರಗಳ ಚರ್ಚೆಗಾಗಿ ಇಂತಹ ಸಮಾವೇಶಗಳನ್ನು ಆಯೋಜಿಸಲಾಗುತ್ತದೆ. ಸಮಾವೇಶಕ್ಕಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳನ್ನು ಆಹ್ವಾನಿಸಲಾಗಿದೆ.
No comments:
Post a Comment