ಈ ಭಾರಿಯ ದಸರಾ ಮಹೋತ್ಸವದಲ್ಲಿ ಮೊದಲನೆ ಘಟ್ಟೆ ಎನಿಸಿರುವ ಗಜಪಯಣಕ್ಕೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಚಾಲನೇ ನೀಡಿದರು
ನಾಗರ ಹೊಳೆ ಅರಣ್ಯ ಪ್ರದೇಶದ ಬೀರನ ಹೊಸಹಳ್ಳಿ ಬಳಿಯ ನಾಗಪುರ ಗ್ರಾಮದಲ್ಲಿ 6ಆನೆಗಳ ತಂಡದ ಗಜ ಪಯಣಕ್ಕೆ ಚಾಲನೆ ನೀಡಲಾಯಿತು.
ಅಂಬಾರಿ ಹೊರುವ ಅರ್ಜುನ,ಬಲರಾಮ,ಗಜೇಂದ್ರ,ಅಭಿಮನ್ಯೂ,ಸರಳ,ವರಲಷ್ಮಿ,ಎಂಬ 6 ಆನೆಗಳ ತಂಡ ಇಲ್ಲಿಂದು ಹೊರಟು ಆ 30ಕ್ಕೆ ಮೈಸೂರು ತಲುಪಲಿವೆ.
ಸಚಿವ ವಿ.ಶ್ರೀನಿವಾಸ್ ಪ್ರಸಾದ್ ,ಶಾಸಕ ಹೆಚ್.ಬಿ.ಮಂಜುನಾಥ್,ಜಿಲ್ಲಾಧಿಕಾರಿ ಶಿಖಾ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
No comments:
Post a Comment