ವಸತಿ ಸಕ್ರಮಕ್ಕೆ ಒತ್ತಾಯಿಸಿ ಧರಣಿ
ಮೈಸೂರು, ಆ.5-ನಗರದಲ್ಲಿ ಕೃಷಿ ಭೂಮಿಯಲ್ಲಿ
ಬಡವರು ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಬೇಕೆಂದು ಒತ್ತಾಯಿಸಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯು
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಪ್ರತಿಭಟನೆ ನಡೆಸಿತು.
ಸುಮಾರು 35 ವರ್ಷಗಳಿಂದಲೂ ಮನವಿ ಮಾಡಿಕೊಳ್ಳುತ್ತಾ
ಬಂದಿದ್ದರೂ ಯಾವುದೇ ಸರ್ಕಾರ ಬಡಜನರ ಸಮಸ್ಯೆಗೆ ಸ್ಪಂದಿಸದ ಕಾರಣ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ
ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಮನೆಯನ್ನು ಸಕ್ರಮಗೊಳಿಸಬೇಕು ಹಾಗೂ
ಮೂಲಭೂತ ಸೌಕರ್ಯವನ್ನು ತಕ್ಷಣ ಕಲ್ಪಿಸದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ
ಪ್ರತಿಭಟನಾನಿರತರು ತಿಳಿಸಿದರು.
ಸಂಘದ ಅಧ್ಯಕ್ಷ ವೇಣುಗೋಪಾಲ್, ಮಹಾದೇವಪ್ಪ,
ಪಿ. ನಾಗರಾಜ್, ಲಕ್ಕೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
No comments:
Post a Comment