Monday, 5 August 2013

ಮೈಸೂರು ವಕೀಲರಿಂದ ಕಲಾಪ ಬಹಿಷ್ಕಾರ



ವಕೀಲರಿಂದ ಕಲಾಪ ಬಹಿಷ್ಕಾರ
ಮೈಸೂರು, ಆ.5-ನ್ಯಾಯಾಲಯದ ನೌಕರನ ವರ್ತನೆಯನ್ನು ಖಂಡಿಸಿ ವಕೀಲರು  ಕಲಾಪವನ್ನು ಬಹಿಷ್ಕರಿಸಿ ಸೋಮವಾರ ಪ್ರತಿಭಟಿಸಿದರು.
ನ್ಯಾಯಾಲಯದ ಗುಮಾಸ್ತ ನಾಗೇಂದ್ರ ಪ್ರಸಾದ್ ಎಂಬಾತನು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕರ್ತವ್ಯ ಪಾಲನೆಯಲ್ಲಿ ಲೋಪವೆಸಗಿದ್ದಾನೆಂದು ವಕೀಲರು ಆರೋಪಿಸಿ ಪ್ರತಿಭಟಿಸಿದರು.
ಶಿಸ್ತು ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶರಾದ ಮೋಹನ್ ಶ್ರೀಪಾದ್ ಸಂಕೊಳ್ಳಿ ಅವರಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಕಾರಣ ಪ್ರತಿಭಟನೆ ನಡೆಸಿದ್ದಾಗಿ ವಕೀಲರು ತಿಳಿಸಿದರು.

No comments:

Post a Comment