ಮಮತಾ
ಕೋಲ್ಕತಾ, ಬುಧವಾರ,
31 ಅಕ್ಟೋಬರ್ 2012
ಸಂಸತ್ತನ್ನು ತತ್ಕ್ಷಣ ವಿಸರ್ಜಿಸಬೇಕೆಂಬ ಅಣ್ಣಾ ಹಜಾರೆಯವರ ಬೇಡಿಕೆಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು ಯುಪಿಎ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಇದೊಂದು ಅಲ್ಪಸಂಖ್ಯಾಕ ಸರಕಾರವಾಗಿದೆ. ಹಜಾರೆ ಮಾಡಿರುವ ಬೇಡಿಕೆಗಳಿಗೆ ತನ್ನ ಸಂಪೂರ್ಣ ಸಮ್ಮತಿಯಿದೆ. ಯುಪಿಎ ಸರಕಾರ ನಮ್ಮ ಬೆಂಬದಿಂದ ಅಧಿಕಾರಕ್ಕೆ ಬಂದಿತು. ನಾವು ಹೊರಬಿದ್ದ ಬಳಿಕ ರಾಷ್ಟ್ರಪತಿಗೆ ಪತ್ರ ಬರೆದು, ನಾವು ಸರಕಾರಕ್ಕೆ ಬೆಂಬಲ ಹಿಂದೆಗೆದುಕೊಂಡಿದ್ದೇವೆ ಎಂದು ಪತ್ರ ಬರೆದು ತಿಳಿಸಿದೆವು. ಈಗ ಇದು ಕಾಂಗ್ರೆಸ್ ಸರಕಾರವೇ ಹೊರತು ಯುಪಿಎ ಸರಕಾರವಲ್ಲ ಎಂದು ಮಮತಾ ಹೇಳಿದರು.
ಸರಕಾರ ನಡೆಸಲು ಅವರಿಗೆ ಯಾವುದೇ ಹಕ್ಕು ಇಲ್ಲ. ಅದು ಬಹುಮತ ಕಳೆದುಕೊಂಡಿದೆ ಎಂದವರು ತಿಳಿಸಿದರು.
ಸಂಸತ್ತನ್ನು ತತ್ಕ್ಷಣ ವಿಸರ್ಜಿಸಬೇಕೆಂದು ಸಾಮಾಜಿಕ ಸೇವಾಕರ್ತ ಹಜಾರೆ ಮತ್ತು ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಸೋಮವಾರ ಆಗ್ರಹಿಸಿದ್ದರು.
No comments:
Post a Comment