Saturday, 20 October 2012

LADY OFFICERS MANDYA



 ಜಿಲ್ಲೆಯಲ್ಲೀಗ ಮಹಿಳಾ ಅಧಿಕಾರಿಗಳ ದರ್ಬಾರ್
ಒಂದು ಸಂಸಾರವನ್ನು ನಿರ್ವಹಿಸಬಲ್ಲ ಹೆಣ್ಣು ದೇಶವನ್ನು ಆಳಬಲ್ಲಳೇ ಎಂಬುದು ಕೆಲವು ದಶಕಗಳ ಹಿಂದೆ ತೇಲಿ ಬರುತ್ತಿದ್ದ ಮಾತು.ಅದಕ್ಕೆ ಅಪವಾದವೆಂಬಂತೆ ಜಿಲ್ಲೆಯಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳ ಕಾರ್ಯಕ್ಷಮತೆ, ದಕ್ಷತೆ ಎಂ ತಹವರನ್ನು ಬೆರಗಾಗಿಸುತ್ತದೆ.
ಯಾವುದೇ ಕಾರ್ಯ ವಹಿಸಿದರೂ ಯಾವುದೇ ಲೋಪಬರದಂತೆ `ಪುರುಷನಿಗಿಂತ ತಾನೇನು ಕಡಿಮೆ' ಎಂಬಂತೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು ತ್ತಿದ್ದಾರೆ.
ಪ್ರಥಮವಾಗಿ  ಉಪವಿಬಾಗಾಧಿಕಾರಿ ಹಾಗೂ ದಸರಾ ವಿಶೇಷ ಕರ್ತವ್ಯಾಧಿ ಕಾರಿಯಗಿ ಕಾರ್ಯನಿ ರ್ವಹಿಸುತ್ತಿರುವ ಶ್ರೀಮತಿ ಲತಾರವರು 2006ನೇ ತಂಡದ ಕೆಎಎಸ್ ಅಧಿಕಾರಿ.ಮಂಡ್ಯ ತಾಲೂಕಿನಲ್ಲಿ 3ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ನಂತರ ಬೆಂಗಳೂರಿನ ಕೆಐಡಿಬಿಯಲ್ಲಿ ಭೂಸ್ವಾಧೀ ನಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ 2011ರಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಬಡ್ತಿ ಹೊಂದಿದರು.ಇದಕ್ಕೂ ಮೊದಲೇ ಎಸ್‍ಬಿಐನಲ್ಲಿ ಬ್ಯಾಂಕ್ ಆಫೀಸರ್‍ಗಳಾಗಿಯೂ ಸೇವೆ ಸಲ್ಲಿಸಿದ ಇವರನ್ನು ಹಿರಿಯ ಉಪಾವಿಭಾಗಾಧಿಕಾರಿಯಾಗಿ ಪಾಂಡವಪುರ, ಶ್ರೀರಂಗಪಟ್ಟಣ,ಕೆ.ಆರ್.ಪೇಟೆ, ಮಂಡ್ಯಕ್ಕೆ ನೇಮಿಸಲಾಗಿದೆ. ಈ ಬಾರಿಯ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಸಂಪೂರ್ಣ ಉಸ್ತುವಾರಿಯನ್ನು ಅವರು ವಹಿಸಿಕೊಂಡಿರುವುದೇ ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ.
ಉಪವಿಭಾಗಾಧಿಕಾರಿಯಾದ ನಂತರ 500ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಇತ್ಯರ್ಥಗೊಳಿಸಿ ರೈತರು ಹಾಗೂ ಜನಸಾಮಾನ್ಯರನ್ನು ಇಕ್ಕಟ್ಟಿನಿಂದ ಪಾರುಗೊಳಿಸಿದ್ದಾರೆ.ಜೊತೆಗೆ ಇಲ್ಲಿಯವರೆಗೆ ನಡೆದಂತಹ ಎಲ್ಲಾ ಸಂಸತ್, ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯ್ತಿ, ತಾಲೂಕುಪಂಚಾಯ್ತಿ,ಪುರಸಭೆ, ಗ್ರಾಮ ಪಂಚಾಯ್ತಿ ಎಲ್ಲಾ ಚುನಾವಣೆಗಳ ಉಸ್ತುವಾರಿಯನ್ನು ಇವರು ವಹಿಸಿಕೊಂಡು ಯಾವುದೇ ಲೋಪಬರದಂತೆ ತಮ್ಮ ಕಾರ್ಯದಕ್ಷತೆ ಮೆರೆದಿದ್ದಾರೆ.
  ಮತ್ತೊಬ್ಬ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಾಂತಾ ಹುಲ್ಮನಿಯವರದು 2008ರ ಕೆಎಎಸ್ ತಂಡ.ಮೊದಲ  ವೃತ್ತಿ ಪ್ರವೇಶ ಮಂಡ್ಯಕ್ಕೆ. ನಂತರ ಪ್ರೊಬೆಷನರಿಯಾಗಿ ತುಮಕೂರಿಗೆ ವರ್ಗಾವಣೆ. ಇವರು ರೈತ ಕುಟುಂಬದಿಂದ ಬಂದವರಾದ್ದರಿಂದ ಮಂಡ್ಯ ಪರಿಸರವನ್ನೂ ಕೂಡ ತುಂಬಾ ಇಷ್ಟಪಡುತ್ತಾರೆ.ಜೊತೆಗೆ ರೈತರ ಸಮಸ್ಯೆಗಳಿಗೆ ಸಂಪೂರ್ಣ ಸ್ಪಂದಿಸುವ ಇವರು, ಅವರ ಸಮಸ್ಯೆಗಳನ್ನು ಶೀಘ್ರ ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಥಮ ಪ್ರಾಶಸ್ತ್ಯ ನೀಡುತ್ತಾರೆ.
ಉತ್ತಮ ಕ್ರೀಡಾಪಟುವೂ ಆಗಿರುವ ಹುಲ್ಮಾನಿಯವರು 4 ಬಾರಿ ಟೇಬಲ್ ಟೆನ್ನಿಸ್‍ನಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರವೇಶ ಮಾಡಿ ಪ್ರಶಸ್ತಿಯನ್ನೂಕೂಡ ಪಡೆದಿದ್ದಾರೆ. ಸ್ಕೌಟ್ಸ್ ಆಂಡ್ ಗೈಡ್ಸ್‍ನಲ್ಲಿ 1996ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರವರಿಂದ ರಾಷ್ಟ್ರಪತಿ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.
ಇವರು ಕೆಎಎಸ್ ಅಧಿಕಾರಿಯಾಗುವುದಕ್ಕೂ ಮೊದಲು ಎಂಬಿಎ ವ್ಯಾಸಾಂಗ ಮಾಡಿ ಖಾಸಗಿ ಕಂಪನಿಗಳಾದ ಸ್ಪೈಸ್ ಟೆಲಿಕಾಂ, ರಿಲಾಯನ್ಸ್ ಕಮ್ಯೂನಿಕೇಷನ್‍ಗಳಲ್ಲಿ ನೌಕರಿ ಮಾಡಿದ ನಂತರ ಪತ್ರಿಕೋದ್ಯಮಕ್ಕೂ ಕಾಲಿಟ್ಟು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‍ಗಳಲ್ಲೂ ಕಾರ್ಯ ನಿರ್ವಹಿಸಿ ತಮ್ಮ ದಕ್ಷತೆಯನ್ನು ಮೆರೆದಿದ್ದಾರೆ.ವಿದ್ಯಾರ್ಥಿ ದಿಸೆಯಿಂದಲೂ ಮುಂಚೂಣಿಯಲ್ಲಿದ್ದು ತಮ್ಮ ನಾಯಕತ್ವದಲ್ಲೇ ವಿದ್ಯಾರ್ಥಿ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಇವರು ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡ ಈ 6 ತಿಂಗಳಲ್ಲೇ 100ಕ್ಕೂ ಹೆಚ್ಚು ಮೊಕದ್ದಮೆಗಳನ್ನು ಇತ್ಯರ್ಥಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ (ಅಭಿವೃದ್ದಿ)ಯಾಗಿ  ಬಿ.ಆರ್.ಪೂರ್ಣಿಮ ಅವರು ಖ್ಯಾತ ವೈದ್ಯ ಹಾಗೂ ಸಾಹಿತಿ ಬೆಸಗರಹಳ್ಳಿ ರಾಮಣ್ಣರವರ ಪುತ್ರಿ.2004ನೇ ತಂಡದ ಕೆಎಎಸ್ ಅಧಿಕಾರಿಣಿಯಾದ ಇವರು ಪ್ರಥಮ ಬಾರಿಗೆ ಪಾಂಡವಪುರ ಉಪವಿಭಾಗಕ್ಕೆ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡರು.ನಂತರ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅವರು,ರಾಮನಗರ ಜಿಲ್ಲಾ ಪಂಚಾಯತ್‍ನಲ್ಲಿ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಪ್ರಸ್ತುತ ಮಂಡ್ಯ ಜಿ.ಪಂ. ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮೈಸೂರು- ಬೆಂಗಳೂರು ಜೋಡಿ ರೈಲ್ವೇ ಹಳಿ ಕಾಮಗಾರಿಯ ವೇಳೆ ಒತ್ತುವರಿಯಾಗಿದ್ದ 22ಹಳ್ಳಿಗಳ ಗ್ರಾಮಸ್ಥರಿಗೆ ಪರಿಹಾರ ನೀಡಿಸುವ ದೆಸೆಯಲ್ಲಿ ಕ್ರಮ ಜರುಗಿಸಿದರು.ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿ ದ್ದ ಇಗ್ಗಲೂರು ಬ್ಯಾರೇಜ್ ಕಾಮಗಾರಿಯನ್ನು ಪೂರ್ಣಗೊಳಿಸುವ ಜೊತೆಗೆ ಅಲ್ಲಿಯ 27 ಹಳ್ಳಿಗಳ ರೈತರಿಗೆ ಪರಿಹಾರವನ್ನು ದೊರಕಿಸಿಕೊಟ್ಟರು.
ತಾಲೂಕಿನ ಬೂದನೂರು ಗ್ರಾಮದ ಮೊದಲನೇ ಹಂತದಿಂದ ಎರಡನೇ ಹಂತಕ್ಕೆ  ವಿಸ್ತರಣೆ  ಮಾಡಲು ಭೂಸ್ವಾಧೀನ ಪಡಿಸಿಕೊಳ್ಳಬೇಕೆಂದು ಸರ್ಕಾರದಿಂದ ಆದೇಶ ಬಂದ ವೇಳೆ ಇವುಗಳನ್ನು ಪರಮಾರ್ಶಿಸಿದಾಗ ಮೊದಲ ಭೂ ಸ್ವಾಧೀನದ ಹಂತದಲ್ಲೇ ಲೋಪ ಉಂಟಾಗಿರುವುದನ್ನು ಗಮನಿಸಿ ಸರ್ಕಾರಕ್ಕೆ ಪತ್ರ ಬರೆದು ಅದನ್ನು ಸರಿಪಡಿಸಿ ಪುನಃ ಸರ್ವೆ ಮಾಡುವ ಕಾರ್ಯಕ್ಕೆ ಮುನ್ನುಡಿ ಬರೆದರು. ಆ ಮೂಲಕ ಸರ್ವೆ ಹಾಗೂ ಪಿಡಬ್ಲ್ಯೂಡಿ ಇಲಾಖೆಗಳಿಂದ ಸರ್ಕಾರಕ್ಕೆ ಆಗಬೇಕಾಗಿದ್ದ 20 ಕೋಟಿ ರೂ ನಷ್ಟವನ್ನು ತಪ್ಪಿಸಿದರು.ಇದು ಈಗ ಸುಪ್ರೀಂ ಕೋರ್ಟ್‍ನಲ್ಲಿದೆ.
ಪುರುಷರಿಗೆ ಸಮಾನವಾಗಿ ಹುದ್ದೆ ನಿಭಾಯಿಸುವ ವೇಳೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದ ಸಂಭವ ಬಂದರೂ ಅವುಗಳನ್ನು ಲೀಲಾಜಾಲವಾಗಿ ನಿಭಾಯಿಸುತ್ತಾ ಕರ್ತವ್ಯದ ಕಡೆಗೆ ಗಮನ ನೀಡುತ್ತೇನೆ ಎನ್ನುವ ಇವರು ಸಂಸಾರದ ಜಂಜಾಟದ ನಡುವೆಯೂ ಕಛೇರಿಯಲ್ಲಿ ಸಮಯ ದೊರಕದ ಕಾರಣ ಮನೆಯಲ್ಲೂ ಕೂಡ ಕಛೇರಿಯ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಾರೆ.ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸಿದರೆ ಅವರೂ ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ನಾನು ಕರ್ತವ್ಯ ನಿರ್ವಹಿಸುವ ವೇಳೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇನೆ ಎಂಬ ಸಮಾಧಾನ ನನಗಿದೆ ಎನ್ನುತ್ತಾರೆ ಬಿ.ಆರ್.ಪೂರ್ಣಿಮ.

 ಮಂಡ್ಯ ತಾಲೂಕಿನ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ.ಮಮತಾ ರವರದು 2006 ರ  ಕೆಎಎಸ್ ತಂಡ.ಮೂಲತಃ ಬೆಂಗಳೂರಿನವರು. ಇವರ ಪತಿ ಮದ್ದೂರು ತಾಲೂಕಿನ ಕೊಕ್ಕರೆಬೆಳ್ಳೂರಿನವರು. ಕೆಎಎಸ್ ತೆರ್ಗಡೆಯಾದ ನಂತರ ಬೆಂಗಳೂರಿನ  ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದಲ್ಲಿ ಹಿರಿಯ ಐಎಎಸ್ ಅಧಿಕಾರಿ ಡಾ.ಬಾಲಕೃಸ್ಣನ್‍ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರು.
ಮಂಡ್ಯ ತಹಸೀಲ್ದಾರ್ ಆಗಿ ನೇಮಕ ಗೊಂಡ ನಂತರ ಹೆಚ್ಚುವರಿ ಜಿಲ್ಲಾದಿ üಕಾರಿಯವರ ಆದೇಶದ ಮೇರೆಗೆ ಲಕ್ಷ್ಮಿಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಆಸ್ತಿಯನ್ನು ತೆರವುಗೊಳಿ ಸಿದರು.ಈಗ ಈ ವಿಚಾರ ನ್ಯಾಯಾಲಯದಲ್ಲಿದೆ.ಇಲ್ಲಿಯವರೆಗೆ 100ಕ್ಕೂ ಹೆಚ್ಚು ಮೊಕ ದ್ದಮೆಗಳನ್ನು ಇತ್ಯರ್ಥ ಗೊಳಿಸಿದ್ದಾರೆ.
ಮದ್ದೂರು ತಾಲೂಕಿನ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸವಿತರವರದು 2005ನೇ ಕೆಎಎಸ್ ತಂಡ.  ಮೂಲತಃ ಕೆ.ಆರ್.ಪೇಟೆಯವರಾದ ಇವರು ಎಂಎ ಮುಗಿಸಿದ ನಂತರ ಶ್ರೀರಂಗಪಟ್ಟಣದ ಪಿ.ಜಿ.ಶ್ರೀನಿವಾಸ್‍ರವರ ಜೊತೆ ವಿವಾಹವಾಯಿತು. ನಂತರ ಬಿಎಎಡ್ ವ್ಯಾಸಾಂಗ ಮಾಡಿದ ನಂತರ ಕೆಎಎಸ್ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾದರು. 2008ರಲ್ಲಿಪಾಂಡವಪುರ ತಹಸೀಲ್ದಾರ್ ಆಗಿ ಕಾರ್ಯನಿರ್ವಹಣೆ ಮಾಡಿದ ಅವರು, ಅಲ್ಲಿ 2 ತಿಂಗಳು ಮಾತ್ರ ಕಾರ್ಯ ನಿರ್ವಹಿಸಿ ನಂತರ ಟಿ.ನರಸೀ ಪುರಕ್ಕೆ ವರ್ಗಾವಣೆಗೊಂಡರು. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಅಲ್ಲಿ ಕಾರ್ಯನಿರ್ವಹಣೆ ಮಾಡಿ 1 ಕೋಟಿ ರೂಗಳಿ ಗಿಂತಲೂ ಹೆಚ್ಚು ದಂಡವನ್ನು ಅಕ್ರಮ ಮರಳು ದಂಧೆಗಾರರಿಗೆ ವಿಧಿಸಿದರು. ಆ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದ ಇವರು, ತದ ನಂತರ ಅರಕಲುಗೂಡಿಗೆ ವರ್ಗಾವಣೆಗೊಂಡು ಕಾರ್ಯ ನಿರ್ವಹಿಸಿದ ನಂತರ ಮದ್ದೂರಿಗೆ ವರ್ಗಾವಣೆಗೊಂಡರು.
ಇವರು ಕಾರ್ಯನಿರ್ವಹಿಸಿದ ಎಲ್ಲಾ ಕಡೆಗಳಲ್ಲೂ ಮರಳು ಅಕ್ರಮ ದಂಧೆಯು ಒಂದು ಸವಾಲಾಗಿ ಚಿಈವ್ಝಿತ್ಸ್ಜಿಬ¬ವ್ಜ್ತಿ ಅವುಗಳನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೇ ನಿಭಾಯಿಸಿದ್ದು ಇವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ. ಮದ್ದೂರು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಇಲ್ಲೂ ಕೂಡ ಜಮೀನು ಖಾತೆಗಳ ಸಮಸ್ಯೆ ಎದುರಾ ಗಿದೆ.ಆದರೂ ನಾನು ನಿಭಾಯಿಸುತ್ತೇನೆ ಎಂದು ಹೇಳುತ್ತಾರೆ.
ಹೀಗೆ ಜಿಲ್ಲೆಯ ಡಿವೈಎಸ್ಪಿ ಪಿ.ಜೆ.ಶೋಭಾರಾಣಿ, ಮದ್ದೂರು ತಾಲೂಕು ಶಾಸಕಿ ಕಲ್ಪನಸಿದ್ದರಾಜು, ಜಿಪಂ ಅಧ್ಯಕ್ಷೆಯಾಗಿ ನಾಗರತ್ನಬಸವರಾಜು, ತಾಪಂ ಅಧ್ಯಕ್ಷೆಯಾಗಿ ಸುಮರಾಮಚಂದ್ರ, ಉದ್ಯೋಗ ವಿನಿಮಯ ಅಧಿಕಾರಿ ರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿಮಲ, ಯುವ ಕೇಂದ್ರದ ಅಧಿಕಾರಿ ಡಾ.ಮಂಜುಳ ಹುಲ್ಲಹಳ್ಳಿ, ಆಯೂಷ್ ಅಧಿಕಾರಿ ಸೀತಾಲಕ್ಷ್ಮಿ, ಖಜಾನೆ ಅಧಿಕಾರಿ ಸುಕನ್ಯ ಸೇರಿದಂತೆ ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆಯಲ್ಲೂ ಕೂಡ ಮಹಿಳಾ ಅಧಿಕಾರಿಗಳ ಕಾರುಬಾರೇ ಕಂಡು ಬರುತ್ತಿದೆ. ಆದರೂ ಪುರುಷರಗಿಂತ ನಾವು ಯಾವುದರಲ್ಲಿ ಕಡಿಮೆ ಎಂಬಂತೆ ತಮಗೆ ವಹಿಸಿದ ಕರ್ತವ್ಯಗಳನ್ನು ಅತ್ಯಂತ ಶ್ರದ್ದೆಯಿಂದ, ಪ್ರಾಮಾಣಿಕವಾಗಿ, ಯಾವುದೇ  ಲೋಪ ಉಂಟಾಗದಂತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಒಟ್ಟಾರೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿ, ಜಿಪಂ ಸಿಇಓ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹೊರತು ಪಡಿಸಿದರೆ ಪೂರ್ತಿ ಮಹಿಳಾ ಅಧಿಕಾರಿಣಿಗಳೇ  ಆಡಳಿತದಲ್ಲಿ ವಿಜೃಂಭಿಸುತ್ತಿದ್ದಾರೆ.
ಖಜಾನೆ ಅಧಿಕಾರಿ ಸುಕನ್ಯ 








No comments:

Post a Comment