Monday, 28 November 2016

Tuesday, 15 November 2016

ರಾಜ್ಯ ಪ್ರಶಸ್ತಿ ಪುರಸ್ಕøತರಾಗಿರುವ ಹೊಳಲು ಶ್ರೀಧರ್ ಗೆ ಅಭಿನಂದನೆ

ಮಂಡ್ಯ,ನ.15- ಕನ್ನಡ ವ್ಯಾಕರಣಬದ್ಧ ಭಾಷೆ.ಈ ನಮ್ಮ ಭಾಷೆಯ ಇತಿಹಾಸ ಗಮನಿಸಿದಾಗ ಸಮೃದ್ಧ ಸಾಹಿತ್ಯವನ್ನು ಹೊಂದಿದೆ.ಇಂತಹ  ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿತಾಗ ಇತರ ಎಲ್ಲಾ ವಿಷಯಗಳ ಕಲಿಕೆಗೆ ಪೂರಕವಾಗುತ್ತದೆ ಎಂದು ಮಂಡ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ತಿಮ್ಮೇಗೌಡ ಅಭಿಪ್ರಾಯಪಟ್ಟರು.
     ಅವರು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
   ಕನ್ನಡಕ್ಕೆ ತನ್ನದೇ ಸ್ಥಾನಮಾನ ಗೌರವ ಇದ್ದರೂ ನಾವು ಪರಭಾಷೆಗೆ ಮನ್ನಣೆ ಕೊಡುತ್ತಿದ್ದೇವೆ.ನಮ್ಮ ತಾಯಿಗೆ ಗೌರವ ಕೊಡುವ ರೀತಿ ಮೊದಲು ನಮ್ಮ ತಾಯಿಭಾಷೆಯಾದ ಕನ್ನಡವನ್ನು ಸಮರ್ಥವಾಗಿ ಕಲಿಯಬೇಕು.ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡಕ್ಕೆ ಮಾನ್ಯತೆ ಇದೆ.ಬೆಂಗಳೂರಿನಂತ ಕೆಲವು ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ನಂತಹ ಭಾಷೆಗಳು ವಿಜೃಂಭಿಸುತ್ತಿವೆ ಎಂದರು.
    ಪ್ರಧಾನ ಭಾಷಣ ಮಾಡಿದ ಅಧ್ಯಾಪಕಿ ತೇಜ ಉನ್ನತ ಹುದ್ದೆ ಶಿಕ್ಷಣ ಪಡೆಯಬೇಕಾದರೆ ಇಂಗ್ಲಿಷ್‍ನಲ್ಲೇ ಶಿಕ್ಷಣ ಪಡೆಯಬೇಕು ಎಂಬ ಭ್ರಮೆ ನಮ್ಮನ್ನಾವರಿಸಿದೆ.ಕನ್ನಡ ಕಲಿತೂ ಸಾಧನೆ ಮಾಡಬಹುದು ಎಂಬುದನ್ನು ನಾವು ಮರೆಯುತ್ತಿದ್ದೇವೆ.ಮಾತೃಭಾಷೆ ಸಮರ್ಥವಾಗಿ ಕಲಿತರೆ ಬದುಕು ಅಭಿವೃದ್ಧಿಯಾಗುತ್ತದೆ.ಕನ್ನಡ ಪ್ರಬುದ್ಧತೆ ಹೊಂದಿರುವ ಭಾಷೆ.ಆದರೂ ಕೊಡುಕೊಳ್ಳುವಿಕೆ ನಮ್ಮಲ್ಲಿರಬೇಕು.ಭಾಷೆಯ ಬಗ್ಗೆ ಅಭಿಮಾನಧನರಾಗಿ ರಬೇಕು ಆದರೆ ದುರಭಿಮಾನ ಬೇಡ.ಭಾಷೆ ನಿಂತ ನೀರಲ್ಲ ಅದು ಸೃಜನಶೀಲವಾಗಿರಬೇಕು ಎಂದು ಅವರು ತಿಳಿಸಿದರು.
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೊಳಲು ಶ್ರೀಧರ್ ಕನ್ನಡ ಎಂಬುದು ಕೇವಲ ಭಾಷೆ ಮಾತ್ರ ಅಲ್ಲ.ನಾಡು-ನುಡಿ,ನೆಲ,ಜಲ,ಸಾಹಿತ್ಯ,ಸಂಸ್ಕøತಿ,ಕಲೆ ಎಲ್ಲವೂ ಅದರಲ್ಲಿ ಅಡಗಿದೆ.ಭಾಷೆಯ ಜೊತೆಗೆ ನಮ್ಮ ಸಂಸ್ಕøತಿಯೂ ಅನಾವರಣಗೊಳ್ಳುತ್ತದೆ.ಆಂಗ್ಲಭಾಷಾ ವ್ಯಾಮೋಹದಿಂದಾಗಿ ಅದನ್ನು ಕಲಿತರೆ ಬದುಕಿಗೆ ಪೂರಕವಾಗಿರುತ್ತದೆ ಎಂಬ ಮನೋಭಾವ ಬೆಳೆದಿದೆ.ಇದನ್ನು ಹೋಗಲಾಡಿಸಲು ಸರ್ಕಾರ ಕನ್ನಡ ಕಲಿತವರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ನೀಡಿ ಕನ್ನಡ ಅನ್ನ ಕೊಡುವ ಭಾಷೆ ಎಂಬ ರೀತಿಯ ವಾತಾವರಣ ಸೃಷ್ಟಿಸಬೇಕು.
ಕನ್ನಡ ಅಭಿಮಾನ ಎಂಬುದು ತೋರಿಕೆಯಾಗಬಾರದು ಸಹಜವಾಗಿ ನಿತ್ಯ ನಿರಂತರವಾಗಿರಬೇಕು ಎಂದರು.ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ನಮ್ಮ ಕವಿಗಳು ರಚಿಸಿರುವ ಕನ್ನಡಾಭಿಮಾನ ಉಕ್ಕಿಸುವ ಕನ್ನಡ ಗೀತೆಗಳ ಬಗ್ಗೆ ಅವರು ತಿಳಿಸಿದರು.
   ಬಸರಾಳಿನ ಪ್ರೌಢಶಾಲೆಯಲ್ಲಿಯೇ ಕಲಿತು ಇದೇ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ರಾಜ್ಯ ಪ್ರಶಸ್ತಿ ಪುರಸ್ಕøತರಾಗಿರುವ ಹೊಳಲು ಶ್ರೀಧರ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ಡಿ.ಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲರಾದ ಚಂದ್ರೇಗೌಡ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ವಹಿಸಿದ್ದರು.ಸಮಾರಂಭದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕುಮಾರ್, ಎಸ್.ಡಿ.ಎಂಸಿ. ಸದಸ್ಯರಾದ ಶಂಕರ್,ಹಿರಿಯ ಸಹಶಿಕ್ಷಕಿ ರುಕ್ಮಿಣಮ್ಮ,ಶಿಕ್ಷಕರಾದ ಕಾಸಯ್ಯ,ಗಿರೀಶ್ ಉಪಸ್ಥಿತರಿದ್ದರು. ಶಾಲಾಮಕ್ಕಳು ಕನ್ನಡ ನಾಡುನುಡಿ ಬಗೆಗಿನ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Monday, 24 October 2016

ಭಾರತೀಯರ ರತ್ನ ಡಾ|| ಬಿ.ಆರ್.ಅಂಬೇಡ್ಕರ್: ಡಾ|| ಹೆಚ್.ಸಿ.ಮಹದೇವಪ್ಪ

ಬರ ಕಾಮಗಾರಿ ನಿರ್ವಹಣೆಗೆ ಸೂಚನೆ
      ಮೈಸೂರು.ಅ.24.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಹೀಮಾ ಸುಲ್ತಾನ್ ನಜೀರ್ ಅಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು.
     ಸಭೆಯಲ್ಲಿ ಬರದ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾದ್ಯಾಂತ ವ್ಯಾಪಕವಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಕೈಗೊಂಡ  ಕ್ರಮದ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ ಜಿಲ್ಲಾ ಪಂಚಾಯತ್ ಸದಸ್ಯರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಸದಸ್ಯರಿಗೆ ಮಾಹಿತಿ ಸಿಗುತ್ತಿಲ್ಲ ಎಂದು ಹಲವಾರು ಸದಸ್ಯರು ಪ್ರಸ್ತಾಪಿಸಿದರು.
     ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಶಂಕರ್ ಅವರು ಈ ವರ್ಷ ಶೇ. 57 ರಷ್ಟು ಮಾತ್ರ ಮಳೆಯಾಗಿದ್ದು, ಶೇ. 43 ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಒಟ್ಟು ಮಳೆ ಶೇ 80 ರಷ್ಟು ಮಳೆಯಾಗುತ್ತಿದ್ದು, ಆದರೆ ಸೆಪ್ಟೆಂಬರ್ ಶೇ. 78 ರಷ್ಟು ಮಳೆ ಕೊರತೆ ಹಾಗೂ ಅಕ್ಟೋಬರ್ ನಲ್ಲಿ  ಈವರೆಗೆ 88 ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳಿದರು.
     ಬೆಳೆ ನಷ್ಟದ ಬಗ್ಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯ ಕೈಗೊಂಡಿದೆ. ಶೇ. 90 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 1.21 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ವರದಿ ಮಾಡಲಾಗಿದ್ದು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪರಿಹಾರವನ್ನು ಕೇಳಲು ಕ್ರಮವಹಿಸಿದೆ. ಕೇಂದ್ರದಿಂದ ಅನುದಾನ ಬಿಡುಗಡೆ ನಂತರ ಬೆಳೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದರು.
     2015-16ನೇ ಸಾಲ್ಲಿನಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಹೊಸದಾಗಿ ಕೈಗೊಳ್ಳಲು ಕ್ರಿಯಾಯೋಜನೆಗೆ ಅನುಮೋದನೆ ನೀಡಿರುವುದಿಲ್ಲ. 2016-17 ನೇ ಸಾಲಿಗೆ 82 ಕೋಟಿ ರೂ, ಒದಗಿಸಲಾಗಿದ್ದು, ಮುಂದುವರೆದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಬಳಸಲಾಗುತ್ತಿದೆ ಎಂದರು.
    ಬೀಕರ ಬರದ ಹಿನ್ನೆಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ. ಬರ ನಿರ್ವಹಣೆಗಾಗಿ ಜಿಲ್ಲೆಗೆ 15 ಕೋಟಿ ರೂ. ನೀಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ 13 ವಾರಕ್ಕೆ ಸಾಕಾಗುವಷ್ಟು ಮೇವು ಸಂಗ್ರಹಣೆ ಇದೆ. 16 ಕಡೆ ಮೇವು ಬ್ಯಾಂಕ್ ತೆರೆಯಲು ಪ್ರಸ್ತಾವನೆ ಇರುತ್ತದೆಎಂದರು.
    ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಸೇರಿಸಲು ಮನವಿ ಸರ್ಕಾರಕ್ಕೆ ನಿರ್ಣಾಯ ಮಾಡಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರುಗಳು ತಿಳಿಸಿದರು.
     ಪ್ರತಿ ಹೋಬಳಿಯಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವುಗಳಿಗಾಗಿ ಮೇವು ಘಟಕ ಪ್ರಾರಂಭಿಸುವಂತೆ ನಿರ್ಣಯ ಮಾಡಲು ಸಭೆ ನಿರ್ಣಯಿಸಿತು.
      ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀಯರ ರತ್ನ ಡಾ|| ಬಿ.ಆರ್.ಅಂಬೇಡ್ಕರ್: ಡಾ||      ಹೆಚ್.ಸಿ.ಮಹದೇವಪ್ಪ







 ಮೈಸೂರು.ಅ.24.ಭಾರತದ ಸಂವಿಧಾನ ರಚಿಸಿ ಎಲ್ಲರಿಗೂ ಬೇಕಿರುವ ಮೂಲಭೂತ ಹಕ್ಕುಗಳನ್ನು ಒದಗಿಸಿಕೊಟ್ಟ ಡಾ|| ಬಿ.ಆರ್ ಅಂಬೇಡ್ಕರ್ ಅವರು ಭಾರತೀಯರ ರತ್ನ ಎಂದು ಲೋಕೋಪಯೋಗಿ  ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
    ಅವರು ಇಂದು ಮೈಸೂರು ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ, ಡಾ|| ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು ಡಾ|| ಬಿ.ಆರ್.ಅಂಬೇಡ್ಕರ್  ಅವರು ಗ್ರಂಥಾಲಯದಲ್ಲೇ ತಮ್ಮ ಹೆಚ್ಚಿನ ಕಾಲ ಕಳೆದು, ಜ್ಞಾನ ವೃದ್ಧಿಸಿಕೊಂಡು ಇಡೀ ಪ್ರಪಂಚದಲ್ಲೇ 5 ಬುದ್ಧಿ ಜೀವಿಗಳಲ್ಲಿ ಒಬ್ಬರಾದರು. ಭಾರತ ದೇಶದ 125 ಕೋಟಿ ಜನರಿಗೆ ಬೇಕಿರುವ ಸಂವಿಧಾನ ರೂಪಿಸಿದ ಇವರು ಕೇವಲ ಒಂದು ವರ್ಗಕ್ಕೆ ಸೇರಿದ ನಾಯಕರಲ್ಲ. ಇಡೀ ದೇಶದ ಎಲ್ಲಾ ವರ್ಗಕ್ಕೆ ಸೇರಿದ ನಾಯಕರು ಎಂದರು.
     ಧರ್ಮ, ಗುಂಪು, ಜಾತಿ, ಲಿಂಗ ಭೇದದ ಪರಿಕಲ್ಪನೆ ಮೀರಿ ಸರ್ವರಿಗೂ ಸಮಬಾಳು ಸಮಪಾಲು ಎಂಬ ಉದ್ದೇಶದಿಂದ ಸಂವಿಧಾನ ರೂಪಿಸಿದರು. ಮತದಾನದ ಹಕ್ಕು ನೀಡಿದರು. ಮತದಾನದ ಮೂಲಕ ಉತ್ತಮ ನಾಯಕ ಹಾಗೂ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಬೇಕು. ಶೋಷಿತ ಸಮುದಾಯಗಳು ಸಂಘಟನಾತ್ಮಕ ಹೋರಾಟ ಮಾಡಬೇಕು ಆಗಲೇ  ಶೋಷಣೆಯನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
      ಡಾ|| ಬಿ.ಆರ್.ಅಂಬೇಡ್ಕರ್ ಅವರು ಕಾನೂನು, ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿ ಉತ್ತಮ ಕೊಡುಗೆಗಳನ್ನು ನೀಡಿದರು. ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಹಿಂದೂ ಕೋಡ್ ಬಿಲ್ ಅಂಗೀಕಾರವಾಗದ ಸಂದರ್ಭದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲಿಂಗ ತಾರತಮ್ಯ ವಿರುದ್ಧ ಸಹ  ಹೋರಾಟ ನಡೆಸಿದರು ಎಂದರು.
        ಡಾ|| ಬಿ.ಆರ್.ಅಂಬೇಡ್ಕರ್ ಅವರು ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ ಎಂದರು. ತಳ ಸಮುದಾಯದವರು ಸ್ವಾಭಿಮಾನದಿಂದ ಬದುಕಬೇಕು. ಮೂಡನಂಬಿಕೆಯನ್ನು ದೂರ ಮಾಡಿಕೊಂಡು ಶಿಕ್ಷಣಕ್ಕೆ  ಆದ್ಯತೆ ನೀಡಬೇಕು ಎಂದರು.
      ಪರಿಶಿಷ್ಟ ಜಾತಿ ಹಾಗೂ ವರ್ಗದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನವನ್ನು ಮೀಸಲಿಡಲಾಗಿದೆ. ಮೈಸೂರು ನಗರಕ್ಕೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿರುವ ಹಿಂದೆ ಪೌರಕಾರ್ಮಿಕರ ಶ್ರಮವಿದೆ ಎಂದರು.
      ಕಾರ್ಯಕ್ರಮದಲ್ಲಿ ಶಾಸಕ ವಾಸು, ಹೆಚ್.ಪಿ.ಮಂಜುನಾಥ್, ಸೋಮಶೇಖರ್ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್.ಭೈರಪ್ಪ, ಉಪಮಹಾಪೌರರಾದ ವನಿತಾಪ್ರಸನ್ನ, ವಿವಿಧ ಸ್ಥಯಿ ಸಮಿತಿ ಅಧ್ಯಕ್ಷರಾದ ಪುಟ್ಟಲಿಂಗು, ಬಾಲು, ಎಂ.ಕೆ.ಶಂಕರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಅ. 27 ರಂದು ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ
      ಮೈಸೂರು.ಅ.24.ಸರ್ವ ಶಿಕ್ಷಣ ಅಭಿಯಾನ ವತಿಯಿಂದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸಾರ್ವಜನಿಕ  ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಕಾರ್ಯಕ್ರಮಗಳನ್ನು  ಪರಿಚಯಿಸಲು ನಿರ್ಮಿಸಿರುವ ಮಳಿಗೆಯನ್ನು ಅಕ್ಟೋಬರ್ 27 ರಂದು         ಸಂಜೆ 6-30 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪ ಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ತನ್ವೀರ್ ಸೇಠ್ ಅವರು ಉದ್ಘಾಟಿಸುವರು ಎಂದು ಸರ್ವ ಶಿಕ್ಷಣ  ಅಭಿಯಾನ ಸಾರ್ವಜನಿಕ  ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆ ಬಗ್ಗೆ ವಿಚಾರ ಸಂಕಿರಣ: ಹೆಸರು ನೊಂದಾಯಿಸಿಕೊಳ್ಳಿ
     ಮೈಸೂರು.ಅ.24. ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಪೋಬಿಕ್ಸ್ ಪುಡ್ಸ್ ಅಂಡ್ ಬಯೋಟೆಕ್ನಾಲಜಿ ಕನ್ಸಲ್‍ಟೆನ್ಸಿ ಸರ್ವಿಸಸ್ ಎಲ್‍ಎಲ್‍ಪಿ. ಇವರ ಸಹಯೋಗದೊಂದಿಗೆ ಆಹಾರ ಸಂಸ್ಕøರಣ ಘಟಕಗಳ ಸ್ಥಾಪನೆ ಬಗ್ಗೆ ವಿಚಾರ ಸಂಕಿರಣವನ್ನು ನವೆಂಬರ್ ಮಾಹೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
     ವಿಚಾರ ವಿನಿಯಮ ಮತ್ತು ಮಾಹಿತಿಯನ್ನು ಹಾಲಿ ಮತ್ತು ಭಾವೀ ಉದ್ದಿಮೆದಾರರ ಜೊತೆ ಹಂಚಿಕೊಂಡು ಉದ್ಯಮ ಸ್ಥಾಪನೆ/ವಿಸ್ತರಣೆಗೆ ಅನುವು ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ಬಗ್ಗೆ ಈಗಾಗಲೇ ನೋಂದಾಯಿಸಿಕೊಂಡಿರುವುದು ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು ಯಾವುದೇ ಶುಲ್ಕವಿಲ್ಲದೆ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 0821-2520886 ನ್ನು ಸಂಪರ್ಕಿಸಿ ನವೆಂಬರ್ 5 ರೊಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಸಂತೆ
     ಮೈಸೂರು. ಅ. 24.ಮೈಸೂರು ಜಿಲ್ಲೆಯ ಓಲ್ಡ್ ಸೋಸಲೆ ಗ್ರಾಮದಲ್ಲಿ ಅಂಚೆ ಸಂತೆಯನ್ನು ಅಕ್ಟೋಬರ್ 25 ರಂದು ಹಮ್ಮಿಕೊಳ್ಳಲಾಗಿದೆ.
    ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣಾ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು. ಓಲ್ಡ್ ಸೋಸಲೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಅವರು ಕೋರಿದ್ದಾರೆ.     
ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರ
     ಮೈಸೂರು.ಅ.24.ಬೆಂಗಳೂರಿನ ಅಲಿಂಕೋ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಶಿಬಿರ ಅಕ್ಟೋಬರ್ 25 ರಂದು ಮಧ್ಯಾಹ್ನ 12-30 ಗಂಟೆಗೆ ಹುಣಸರು ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
     ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಂ.ಕೆ. ಸೋಮಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
     ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ,್ಪ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಉಮಾಶ್ರೀ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ ನಜೀರ್ ಅಹಮದ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ  ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಪಿ. ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿ. ನಟರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
ಪ್ರೋತ್ಸಾಹಧನ: ಅರ್ಜಿ ಆಹ್ವಾನ
     ಮೈಸೂರು. ಅ. 24- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿಗೆ “ಸಮೃದ್ಧಿ ಯೋಜನೆ”ಯಡಿ ಆರ್ಥಿಕವಾಗಿ ಹಿಂದುಳಿದ, ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ಕೈಗೊಂಡಿರುವ ಮಹಿಳಾ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ತಲಾ ರೂ. 10,000/- ಪ್ರೋತ್ಸಾಹಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಸ್ವ ಬರಹದ ಅರ್ಜಿ ಆಹ್ವಾನಿಸಿದೆ.
    ಅಭ್ಯರ್ಥಿಗಳು ಸ್ವ ಬರಹದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ 3 ಪ್ರತಿಯಲ್ಲಿ ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ನವೆಂಬರ್ 7  ರೊಳಗೆ ಸಲ್ಲಿಸುವುದು.
 ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 60 ವಯೋಮಿತಿಯಲ್ಲಿರಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಹಾನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ ಮತ್ತು ಮೈಸೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿ “ಬೀದಿಬದಿ ವ್ಯಾಪಾರಿ”ಎಂದು ನೊಂದಣಿ ಮಾಡಿಸಿರುವ ಗುರಿತಿನ ಚೀಟಿ ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ಧೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು.
  ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು. ಒಬ್ಬ ಫಲಾನುಭವಿ ಕೇವಲ ಒಂದು ಭಾರಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
     ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ-0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742, ಟಿ.ನರಸೀಪುರ-08227-261267 ನ್ನು ಸಂಪರ್ಕಿಸಲು ಕೋರಿದೆ.
ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರ : ಅರ್ಜಿ ಆಹ್ವಾನ
       ಮೈಸೂರು, ಅ. 24. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2016-17ನೇ ಸಾಲಿನಲ್ಲಿ ವಿಶೇಷಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಕಲಾವಿದರಿಗೆ ಹಾಗೂ ಪರಿಶಿಷ್ಟ ಪಂಗಡದ ಕಲಾವಿದರಿಗೆ ನೇರವಾಗಿ ಪ್ರಯೋಜನವಾಗುವಂತಹ ವಿವಿಧ ಕಲಾಪ್ರಕಾರಗಳ ತರಬೇತಿ ಕಾರ್ಯಾಗಾರ ಕಮ್ಮಟವನ್ನು ಹಮ್ಮಿಕೊಂಡಿದೆ.
    ತರಬೇತಿ ಕಾರ್ಯಾಗಾರ ಮತ್ತು ಕಮ್ಮಟವನ್ನು 3 ದಿನಗಳ ಕಾಲ ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ನಶಿಸಿ ಹೋಗುತ್ತಿರುವ ಕಲೆಗಳಿಗೆ ಆದ್ಯತೆ ನೀಡಿ ಇದಕ್ಕೆ ಸಂಬಂಧಪಟ್ಟ ತರಬೇತಿಯನ್ನು ನೀಡಲಾಗುತ್ತಿದೆ. ಈ ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ದಿನಕ್ಕೆ 500/- ರಂತೆ ಗೌರವ ಸಂಭಾವನೆಯನ್ನು ಪಾವತಿಸಲಾಗುವುದು.
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷದಿಂದ 50 ವರ್ಷದೊಳಗಿನವರಾಗಿರಬೇಕು. ಆಸಕ್ತರು ನವೆಂಬರ್ 4 ರೊಳಗೆ ಅರ್ಜಿಯ ಜೊತೆಗೆ ಜಾತಿ ಪ್ರಮಾಣ ಪತ್ರದೊಂದಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು. ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸುವುದು.
ಎಲ್.ಪಿ.ಜಿ ಸಂಪರ್ಕ ಇದ್ದಲ್ಲಿ ಮಾಹಿತಿ ನೀಡಿ
      ಮೈಸೂರು, ಅ. 24. ಪಡಿತರ ಚೀಟಿದಾರರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಎಲ್.ಪಿ.ಜಿ. ಸಂಪರ್ಕ ಹೊಂದಿದ್ದು, ಆ ಮಾಹಿತಿಯನ್ನು ಬಹಿರಂಗಪಡಿಸದೆ ಸೀಮೆಎಣ್ಣೆ ಪಡೆಯುತ್ತಿರುವ ನಿಯಮಬಾಹಿರವಾಗಿರುತ್ತದೆ. ಪಡಿತರ ಚೀಟಿದಾರರು ಎಲ್.ಪಿ.ಜಿ ಸಬ್ಬಿಡಿ ಮತ್ತು ಸೀಮೆಎಣ್ಣೆ ಸಬ್ಸಿಡಿ ಎರಡನ್ನೂ ಪಡೆಯುವುದು ಸಹ ನಿಯಮಬಾಹಿರವಾಗಿರುತ್ತದೆ.
      ಒಬ್ಬ ವ್ಯಕ್ತಿ ಅಥವಾ ಕುಟುಮಬ ಈ ರೀತಿ ಎರಡೂ ಸೌಲಭ್ಯವನ್ನು ಪಡೆಯುತ್ತಿದ್ದಲ್ಲಿ ಅಂತಹ ಸೌಲಭ್ಯಗಳನ್ನು ರದ್ದುಪಡಿಸಲು ನಿಯಮಗಳಲ್ಲಿ ಅವಕಾಶವಿರುತ್ತದೆ. ಎಲ್.ಪಿ.ಜಿ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗೆ ಅಥವಾ ಸಂಬಂಧಿಸಿದ ಆಹಾರ ನಿರೀಕ್ಷಕರುಗಳಿಗೆ ಅಕ್ಟೋಬರ್ 25 ರೊಳಗೆ ನೀಡುವುದು.
      ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತ ಪ್ರದೇಶವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.
      ಇಲಾಖೆಯು ಕಳೆದ ವರ್ಷದಿಂದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸೀಮೆಎಣ್ಣೆ ಬಳಕೆದಾರ ಪಡಿತರ ಚೀಟಿದಾರರು ಎಲ್.ಪಿ.ಜಿ ಸಂಪರ್ಕ ಪಡೆಯಲು ಮನವಿ ಮಾಡುತ್ತಿದೆ. ಆದರೂ ಸಹ  ಜಿಲ್ಲೆಯ ನಗರ/ಪಟ್ಟಣ ಪ್ರದೇಶಗಳಲ್ಲಿ 39690 ಪಡಿತರ ಚೀಟಿದಾರರು ಇನ್ನು ಅಡುಗೆ ಅನಿಲ ಸಂಪರ್ಕ ಪಡೆದಿಲ್ಲವೆಂದು ಪ್ರತೀ ತಿಂಗಳು ಸೀಮೆಎಣ್ಣೆ ಪಡೆಯುತ್ತಿದ್ದಾರೆ.
      ಮೈಸೂರು -20454, ನಂಜನಗೂಡು-3324, ಟಿ.ನರಸೀಪುರ-6158, ಹುಣಸೂರು-2593, ಕೆ.ಆರ್.ನಗರ-2198, ಹೆಚ್.ಡಿ.ಕೋಟೆ-2955 ಹಾಗೂ ಪಿರಿಯಾಪಟ್ಟಣ-2008 ನಗರ ಮತ್ತು ಇತರೆ ಪಟ್ಟಣ ಪ್ರದೇಶಗಳಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದಿಲ್ಲವೆಂದು ಸೀಮೆಎಣ್ಣೆ ಪಡೆಯುತ್ತಿರುವುದು ಕಂಡುಬಂದಿರುತ್ತದೆ.
    ಯಾವ ಪಡಿತರ ಚೀಟಿದಾರರು ಇದುವರೆವಿಗೆ ಎಲ್.ಪಿ.ಜಿ ಸಂಪರ್ಕ ಪಡೆದಿರುವುದಿಲ್ಲವೋ ಅವರುಗಳಿಗೆ ಪ್ರಥಮ ಆದ್ಯತೆ ಮೇಲೆ ಎಲ್.ಪಿ.ಜಿ. ಸಂಪರ್ಕ ನೀಡಲು ಜಿಲ್ಲೆಯ ಎಲ್ಲಾ ಎಲ್.ಪಿ.ಜಿ ವಿತರಕರಿಗೆ ಆದೇಶಿಸಲಾಗಿದೆ. ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಪಡಿತರ ಚೀಟಿದಾರರು ಇದುವರೆವಿಗೆ ಎಲ್.ಪಿ.ಜಿ ಸಂಪರ್ಕ ಪಡೆದುಕೊಳ್ಳದಿದ್ದಲ್ಲಿ ಅಕ್ಟೋಬರ್ 25 ರೊಳಗೆ ತಮ್ಮ ಹತ್ತಿರದ ಎಲ್.ಪಿ.ಜಿ. ವಿತರಕರಿಂದ ಕಡ್ಡಾಯವಾಗಿ ಎಲ್.ಪಿ.ಜಿ ಸಂಪರ್ಕ ಪಡೆದುಕೊಳ್ಳುವುದು.
     ಯಾವುದೇ ಎಲ್.ಪಿ.ಜಿ ವಿತರಕರು ಎಲ್.ಪಿ.ಜಿ. ಸಂಪರ್ಕ ನೀಡಲು ತೊಂದರೆ ಮಾಡಿದಲ್ಲಿ ತಾಲ್ಲೂಕಿನ ಆಹಾರ ಶಿರಸ್ತೇದಾರರು/ಆಹಾರ ನಿರೀಕ್ಷಕರು ಅಥವಾ ಡಾ|| ಕೆ. ರಾಮೇಶ್ವರಪ್ಪ ಹಿರಿಯ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಇವರ ಮೊಬೈಲ್ ಸಂಖ್ಯೆ 9611165367 ಅಥವಾ ಸಹಾಯವಾಣಿ ಸಂಖ್ಯೆ 1967 ಗೆ ದೂರು ಸಲ್ಲಿಸುವಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಡಾ|| ಕಾ. ರಾಮೇಶ್ವರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೀಮೆಎಣ್ಣೆ ಬಿಡುಗಡೆ
     ಮೈಸೂರು, ಅ. 24. ನಗರ ಮತ್ತು ಗ್ರಾಮಾಂತರ ಪ್ರದೇಶದ ಅನಿಲ ರಹಿತ ಆದ್ಯತಾ ಕುಟುಂಬಗಳು ಬಿಪಿಎಲ್ ಮತ್ತು ಗ್ರಾಮಾಂತರ ಪ್ರದೇಶಗಳ ಆದ್ಯತೇತರ ಎಪಿಎಲ್ ಪಡಿತರ ಚೀಟಿದಾರರಿಗೆ 2016 ಅಕ್ಟೋಬರ್ ಮಾಹೆಯ ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.
     ನಗರ ಪ್ರದೇಶದ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ ಹಾಗೂ  ಗ್ರಾಮಾಂತರ ಪ್ರದೇಶದಲ್ಲಿ ಬಯೋಕೂಪನ್ ವ್ಯವಸ್ಥೆ ಜಾರಿಯಿರುವ ಪ್ರದೇಶದಲ್ಲಿ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ 3 ಲೀಟರ್ ಸೀಮೆಎಣ್ಣೆ  ಗ್ರಾಮಾಂತರ ಪ್ರದೇಶದಲ್ಲಿ ಬಯೋಕೂಪನ್ ವ್ಯವಸ್ಥೆ ಜಾರಿಯಿಲ್ಲದ ಪ್ರದೇಶದ ಎಎವೈ ಮತ್ತು ಆದ್ಯತಾ ಅನಿಲ ರಹಿತ ಪಡಿತರ ಚೀಟಿದಾರರಿಗೆ  2.5 ಲೀಟರ್ ಸೀಮೆಎಣ್ಣೆ ಮತ್ತು  ಆದ್ಯತೇತರ ಕುಟುಂಬ ಗ್ರಾಮಾಂತರ ಪ್ರದೇಶದ ಅನಿಲ ರಹಿತ ಎಪಿಎಲ್ ಪಡಿತರ ಚೀಟಿದಾರರಿಗೆ 2 ಲೀಟರ್ ಸೀಮೆಎಣ್ಣೆ ನೀಡಲಾಗುವುದು. ಪ್ರತಿ ಲೀಟರ್ ಸೀಮೆಎಣ್ಣೆಗೆ ರೂ. 20/- ನಿಗಧಿಪಡಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕರಾದ ಡಾ|| ಕಾ. ರಾಮೇಶ್ವರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಗು ಬೆಳೆ ಕುರಿತು ತರಬೇತಿ ಪ್ರಾತ್ಯಕ್ಷಿಕೆ
ಮೈಸೂರು, ಅ. 24. ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕವು, 28-10-2016 ರಂದು ತೆಂಗು ಕುರಿತಾದ ತರಬೇತಿ- ಪ್ರಾತ್ಯಕ್ಷಿಕೆÉ – ಸಂವಾದ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅನುಭವಿ ಕೃಷಿಕರು ಹಾಗೂ ನುರಿತ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಆಸಕ್ತರು ಹೆಸರು ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದ್ದು, ಹೆಸರು ನೋಂದಾಯಿಸಿಕೊಳ್ಳಲು 7829500130 / 9945832499 / 8904790461 / 9880445913 / 0821 2970411 ನ್ನು ಸಂಪರ್ಕಿಸಬಹುದಾಗಿದೆ. ನೋಂದಾಯಿಸಿದ ಬೆಳೆಗಾರರು ತಮ್ಮ ಪ್ರಸ್ತುತ ತೆಂಗು ಬೆಳೆಯಲ್ಲಿ ರೋಗ/ಕೀಟ/ಇತರೇ ಸಮಸ್ಯೆಗಳಿಗೊಳಗಾದ ಗಿಡದ ಭಾಗಗಳನ್ನು ಬರುವಾಗ ತೆಗೆದುಕೊಂಡು ಬಂದು ಘಟಕದಲ್ಲಿ ಪರೀಕ್ಷೆಗೊಳಪಡಿಸಿ ಸೂಕ್ತ ಸಲಹೆಯನ್ನು ಉಚಿತವಾಗಿ ಪಡೆಯಬಹುದು.

ಮಾಂಸದ ಕೋಳಿ ಸಾಕಾಣಿಕೆ ತರಬೇತಿ
     ಮೈಸೂರು, ಅ. 24. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ವತಿಯಿಂದ  2016-17ನೇ ಸಾಲಿನ ನಿರುದ್ಯೋಗ ಯುವಕ/ಯುವತಿಯರಿಗೆ ಹಾಗೂ ಸಣ್ಣ ರೈತರಿಗೆ ಮಾಂಸದ ಕೋಳಿ ಸಾಕಾಣಿಕೆ ತರಬೇತಿಯನ್ನು ದಿನಾಂಕ:             07-11-2016 ರಿಂದ 11-11-2016 ರವರೆಗೆ ಸಹಾಯಕ ನಿರ್ದೆಶಕರವರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿ., ಪ್ರಾದೇಶಿಕ ಕೇಂದ್ರ, ಧನ್ವಂತರಿ ರಸ್ತೆ, ಮೈಸೂರು ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
    ಸದರಿ ತರಬೇತಿ ಶಿಬಿರದ ಪ್ರಯೋಜನವನ್ನು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಒಂಭತ್ತು ಜಿಲ್ಲೆಯ ಆಸಕ್ತರು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರವರ ಕಛೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ (ನಿ), ಪ್ರಾದೇಶಿಕ ಕೇಂದ್ರ, ಧನ್ವಂತರಿ ರಸ್ತೆ, ಮೈಸೂರು.   0821-2422775 ನ್ನು ಸಂಪರ್ಕಿಸಬಹುದು.

Tuesday, 18 October 2016

ದಸಂಸ ವಿಘಟನೆಯ ಮೂಲ ಪುರುಷ ಎಚ್.ಗೋವಿಂದಯ್ಯ -ಗುರುಪ್ರಸಾದ್ ಕೆರಗೋಡು.

ದಸಂಸ ವಿಘಟನೆಯ ಮೂಲ ಪುರುಷ ಎಚ್.ಗೋವಿಂದಯ್ಯ -ಗುರುಪ್ರಸಾದ್ ಕೆರಗೋಡು.
ದಲಿತ ಚಳವಳಿಯ ಆಂತರ್ಯದಿಂದಲೇ ಹೊರ ಬಂದಿರುವ  ಎಚ್. ಗೋವಿಂದಯ್ಯರವರು ಹಲವಾರು ಸಂದರ್ಭಗಳಲ್ಲಿ ದೇವನೂರು ಮಹಾದೇವ ಮತ್ತು ದಲಿತ ಸಂಘರ್ಷ ಸಮಿತಿ ಬಗ್ಗೆ ತಮ್ಮ ಹೊಣೆಗೇಡಿ ಮಾತುಗಳ ಮೂಲಕ ಶತ್ರುಗಳಿಗಿಂತಲೂ ಮಿಗಿಲಾದ ರೀತಿಯಲ್ಲಿ ನಿಂದಿಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ದೇವನೂರ ಮಹಾದೇವ ಅವರ ವೈಚಾರಿಕತೆ, ಸಾಹಿತ್ಯ ಇತ್ಯಾದಿಗಳ ಬಗ್ಗೆ ತಮ್ಮ ಭಿನ್ನಾಭಿಪ್ರಾಯಗಳಿದ್ದರೆ, ಅಂತಹುದನ್ನು ಬರವಣಿಗೆಯಲ್ಲಿ ದಾಖಲಿಸಲಿ. ಹಾಗೆಯೇ ದಲಿತ ಚಳುವಳಿಯ ಸ್ವರೂಪ, ಕಾರ್ಯಕ್ರಮ ಹಾಗೂ ಗುರಿಗಳ ಬಗ್ಗೆ ನಿರ್ದಿಷ್ಟ ನಿಲುವುಗಳಿದ್ದರೆ ಸೂಕ್ತ ವೇದಿಕೆಗಳಲ್ಲಿ ವಿಮರ್ಶೆಗೆ ಮುಂದಾಗಲಿ. ಅದು ಬಿಟ್ಟು ದಲಿತ ಸಂಘರ್ಷ ಸಮಿತಿಯು ಛಿದ್ರಗೊಳ್ಳಲು ದೇವನೂರ ಮಹಾದೇವರವರೇ ಕಾರಣ, ಅವರಿದಲೇ ದಲಿತ ಚಳುವಳಿ ನಾಶವಾಗುತ್ತಿದೆ ಎಂಬ ಅರ್ಥದಲ್ಲಿ ಗೋವಿಂದಯ್ಯರವರು ತಮ್ಮ ನಾಲಿಗೆಯನ್ನು ಬಳಸುತ್ತಿರುವುದರಲ್ಲಿ ಹೆಚ್ಚಾಗಿ ವೈಯಕ್ತಿಕ ದ್ವೇಷ, ಈಷ್ರ್ಯೆ, ಕುಹಕ ಮುಂತಾದ ದುಷ್ಟ ವರ್ತನೆಗಳು ಕಾಣುತ್ತಿವೆಯೇ ಹೊರತು ಸಾಮಾಜಿಕ ಬದಲಾವಣೆ ಅಥವಾ ದಲಿತ ಚಳವಳಿ ಬಗೆಗಿನ ಕನಿಷ್ಟ ಕಾಳಜಿಗಳನ್ನೂ ಅವರ ಮಾತುಗಳು ದ್ವನಿಸುತ್ತಿಲ್ಲ.
ಕರ್ನಾಟಕದ ವೈಚಾರಿಕ ಆಂದೋಲನ, ಶೋಷಿತÀರ ಬಗೆಗಿನ ಕಾಳಜಿ, ಸಾಹಿತ್ಯ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ದೇವನೂರು ಮಹಾದೇವರವರ ಪ್ರಭಾವ ಎಷ್ಟಿದೆ ಅಥವಾ ಇಲ್ಲಾ ಎಂಬುದರ ಬಗ್ಗೆ ನಾಡಿನ ಸಮಸ್ತ ಪ್ರಜ್ಞಾವಂತ ನಾಗರೀಕರು ಸ್ವತಃ ಅರಿತು; ವಿಮರ್ಶಿಸಿ, ಸ್ವೀಕರಿಸುವ ಅಥವಾ ನಿರಾಕರಿಸುವ ಮುಕ್ತ ವಾತಾವರಣಕ್ಕೆ ಯಾರೊಬ್ಬರೂ ತೊಡಕಾಗಿಲ್ಲ. ಆದ್ದರಿಂದ ದಸಂಸವು ದೇವನೂರ ಮಹಾದೇವರವರ ಪರವಾಗಿ ಯಾವುದೇ ವಕಾಲತ್ತು ವಹಿಸಬೇಕಾದ ಅಗತ್ಯವಿಲ್ಲ ಎಂಬ ತಿಳುವಳಿಕೆಯಿಂದಲೇ ಈ ಪ್ರತಿಕ್ರಿಯೆಯನ್ನು ನೀಡುತ್ತಿದೆ.
ದೇವನೂರು ಮಹಾದೇವರವರಿಂದ ದಲಿತ ಸಂಘಟನೆ/ದಲಿತ ಚಳುವಳಿಯು ಛಿದ್ರವಾಗುತ್ತಿದೆ-ನಾಶವಾಗುತ್ತಿದೆ ಎಂಬ ಗೋವಿಂದಯ್ಯನವರ ಪುನರುಚ್ಚಿತ ನೇರ-ಗಂಭೀರ ಆರೋಪವು ಸ್ವತಃ ಗೋವಿಂದಯ್ಯನವರ ಕೊರಳನ್ನೇ ಸುತ್ತಿಕೊಂಡು ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆಂಬ ಸತ್ಯವು ಸಂಘಟನೆ ಮತ್ತು ಹೋರಾಟಗಳಲ್ಲಿ ಈಗಲೂ ಸಕ್ರಿಯರಾಗಿರುವ ದಸಂಸ ಹಿರಿಯ ಕಾರ್ಯಕರ್ತರೆಲ್ಲರಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿಯಾಗಿದೆ.
ದಸಂಸ ಸಂಘಟನೆಯ ಪ್ರಾರಂಭದಲ್ಲಿ ದೇವನೂರ ಮಹಾದೇವರವರ ಸುತ್ತಾ ಉಪಗ್ರಹದಂತೆ ಸುತ್ತುತ್ತಿದ್ದ ಗೋವಿಂದಯ್ಯರವರು ಬ್ರದರ್-ಬ್ರದರ್ ಅಂತ ಹೇಳುತ್ತಲೇ ಪ್ರೊ|| ಬಿ. ಕೃಷ್ಣಪ್ಪ, ದೇವಯ್ಯ ಹರವೆ, ದಲಿತಕವಿ ಸಿದ್ದಲಿಂಗಯ್ಯ, ಓ. ಶ್ರೀಧರನ್, ಇಂದೂಧರ ಹೊನ್ನಾಪುರ, ಕೆ. ರಾಮಯ್ಯ, ರಾಮ್‍ದೇವ್ ರಾಕೆ ಇತ್ಯಾದಿ... ಮುಂಚೂಣಿ ಸಂಘಟಕರ ನಡುವೆ ಗುಮಾನಿ, ಭಿನ್ನ ಮತದ ಬಿತ್ತನೆ ಹಾಕಿ ಅದು ಬೆಳೆದು ದೊಡ್ಡದಾಗುವಂತೆ ನೋಡಿಕೊಂಡರು. ಆ ಮೂಲಕ ಪ್ರಮುಖ ಮುಂಚೂಣಿ ನಾಯಕರ ನಡುವೆ ಸಂಘಟನಾತ್ಮಕವಾಗಿ ಇರಲೇಬೇಕಾಗಿದ್ದ ಆತ್ಮೀಯತೆ, ನಂಬಿಕೆ, ವಿಶ್ವಾಸಕ್ಕೆ ಭಂಗ ತರುವ ಮೂಲಕ ದಸಂಸ ವಿಘಟನೆಗೆ ಗೋವಿಂದಯ್ಯನವರೇ ಮುನ್ನುಡಿ ಬರೆದಿದ್ದು ಎಂಬುವುದನ್ನು ಈಗ ನಾವುಗಳು ಹೇಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರೇ ಸೃಷ್ಟಿಸಿದ್ದಾರೆ.
ಚಳವಳಿಗೆ ಬೇಕಾದ ತಾತ್ವಿಕತೆ, ವೈಚಾರಿಕತೆಯನ್ನು ಪೂರೈಸುವಲ್ಲಿ ವಿಫಲರಾಗಿರುವ ಗೋವಿಂದಯ್ಯನವರು ಈಗ ಎಲ್ಲಾ ಅನಾಹುತಗಳನ್ನೂ ದೇವನೂರು ಮಹಾದೇವರೊಬ್ಬರ ತಲೆಗೆ ಕಟ್ಟಲು ಹೊರಟಿರುವುದು ಕುಚೋದ್ಯವಲ್ಲದೆ ಬೇರೇನೂ ಅಲ್ಲ. ಸಂಘಟನೆ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ನಿರ್ದಿಷ್ಟ ಉಪಜಾತಿಯನ್ನು ತನ್ನ ಸ್ವಹಿತಕ್ಕೆ, ಸಾಮಥ್ರ್ಯಕ್ಕೆ, ಕಾರ್ಯ ಸೂಚಿಗಳಿಗೆ ಅಸ್ತ್ರವಾಗಿ ಬಳಸಿಕೊಂಡಿದ್ದಲ್ಲದೆ, ದಸಂಸ ಕಾರ್ಯಕರ್ತರ ಮನಸ್ಸುಗಳಲ್ಲಿ ಈ ಬಗ್ಗೆ ಎಂದೂ ಇಲ್ಲದಿದ್ದ ಒಡಕು ಭಾವನೆಗಳಿಗೆ ಪ್ರಚೋದನೆ ನೀಡಿದ್ದು ಕೂಡ ಇದೇ ಗೋವಿಂದಯ್ಯನವರು ಅನ್ನೋದು ದಸಂಸ ಚರಿತ್ರೆಯಲ್ಲಿ ದಾಖಲಾಗಿರುವ ಮತ್ತೊಂದು ಕಠೋರ ಸತ್ಯವಾಗಿದೆ.
ದಸಂಸ ಸಂಸ್ಥಾಪಕರಲ್ಲಿ ತಾವೂ ಒಬ್ಬರಾಗಿದ್ದುಕೊಂಡು ಸಂಘÀಟನೆಯನ್ನು ಕಟ್ಟಿ ಬೆಳೆಸುವಲ್ಲಿ ಇನ್ನಿತರ ಮೂಂಚೂಣಿ ನಾಯಕರೊಟ್ಟಿಗೆ ಆರಂಭದಲ್ಲಿ ಶ್ರಮಿಸಿದ ಗೋವಿಂದಯ್ಯನವರು ತಾವೇ ಕಟ್ಟಿ ಬೆಳೆಸಿದ ಚಳುವಳಿಯನ್ನು ತಾವೇ ಕೆಡುವುವಂತಹ ವಿದ್ವಂಸÀಕ ಮನಸ್ಥಿತಿಗೆ ಹೇಗೆ ಒಳಗಾದರೆಂಬುದೇ ಆಶ್ಚರ್ಯಕರವಾದ ವಿಚಾರ. ಹಾಗಿಲ್ಲದಿದ್ದರೆ ದಸಂಸ ಸತ್ತಿದೆ, ಅದನ್ನು ದಫನ್ ಮಾಡಬೇಕು, ಸಂಘಟನೆಯಲ್ಲಿರೋರೆಲ್ಲಾ ವಸೂಲಿಕಾರರು ಎಂದೆಲ್ಲಾ ಹೇಗೆ ಹೇಳಲಿಕ್ಕೆ ಸಾಧ್ಯ. (ಈ ಎಲ್ಲಾ ಮಾತುಗಳನ್ನು ಅವರು ಈ ಹಿಂದೆ ಮಾತನಾಡಿದ್ದಾರೆ) ಅವರ ಇಂತಹ ಮಾತು ಮತ್ತು ವರ್ತನೆಯು ಈಗಲೂ ದಲಿತ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅನೇಕ ಪ್ರಾಮಾಣಿಕ ಕಾರ್ಯಕರ್ತರ ಮನಸ್ಸಿಗೆ ಆಘಾತ ಹಾಗೂ ನೋವುಂಟು ಮಾಡಿದೆ.
ಗೋವಿಂದಯ್ಯನವರಂತವರ ಮಾತು ಮತ್ತು ವರ್ತನೆಗಳಿಂದಾಗಿ ದಲಿತ ಚಳುವಳಿಯ ಜತೆಗೆ ಗುರುತಿಸಿಕೊಂಡಿದ್ದ ಅನೇಕ ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ದಲಿತ ಚಿಂತಕರಾದಿಯಾಗಿ ನಿಧಾನವಾಗಿ ಬಹುತೇಕರು ಸಂಘಟನೆಯ ಚಟುವಟಿಕೆಗಳಿಂದ ಸಕ್ರಿಯ ಸಂಬಂಧಗಳಿಂದ ದೂರವಾಗಿ ಹೋದರು. ದಲಿತ ಚಳುವಳಿಯ ಇವತ್ತಿನ ಸ್ಥಿತಿಗೆ, ಒಡಕಿಗೆ ಗೋವಿಂದಯ್ಯರವರು ಈ ವಿಧದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಆದ್ದರಿಂದ ಗೋವಿಂದಯ್ಯರವರು ದಸಂಸದ ಛಿದ್ರತೆಗೆ ಇತರರನ್ನು ಬೆರಳು ಮಾಡಿ ದೂಷಿಸುವುದಾದರೆ, ಅದು ಮೊದಲು ಅವರ ವಿರುದ್ಧವೇ ಬೆರಳು ಮಾಡಿ ತೋರಿಸುತ್ತದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.

ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ



ವಿಳಾಸ: ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ,  10ನೇ ತಿರುವು, ಗಾಂಧಿನಗರ, ಮಂಡ್ಯ - 571 401
ಮೊಬೈಲ್ ನಂ. : 8095234299

Wednesday, 12 October 2016

ಪೊಲೀಸ್ ಶಿಕ್ಷಣ ಸಮುಚ್ಛಯ ನಿರ್ಮಾಣಕ್ಕೆ 22.5 ಕೋಟಿ ರೂ. ಅನುದಾನ: ಸಿದ್ದರಾಮಯ್ಯ

ಪೊಲೀಸ್ ಶಿಕ್ಷಣ ಸಮುಚ್ಛಯ ನಿರ್ಮಾಣಕ್ಕೆ 22.5 ಕೋಟಿ ರೂ. ಅನುದಾನ: ಸಿದ್ದರಾಮಯ್ಯ
ಮೈಸೂರು, ಅ. 12. ಮೈಸೂರು ನಗರದಲ್ಲಿ ಪೊಲೀಸ್ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಅತ್ಯುತ್ತಮವಾದ ಶಿಕ್ಷಣ ಸಮುಚ್ಛಯವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿ, ಕಾರ್ಯಗತ ಮಾಡಲಾಗುತ್ತಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 22.5 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೈಸೂರು ನಗರದ ಜಲಪುರಿ ಪೊಲೀಸ್ ಪಬ್ಲಿಕ್ ಶಾಲೆಯ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಿಸಿರುವ ನರ್ಸರಿ ಶಾಲಾ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಪ್ರವೇಶ ದೊರೆಯುತ್ತದೆ. ಆದರೆ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ. ಈ ಪೋಷಕರ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಾಗೂ ಮೌಲ್ಯಯುತವಾದ ಶಿಕ್ಷಣ ಸಿಗಬೇಕು ಎಂದು ಅವರು ಹೇಳಿದರು.
ಈ ಶಾಲೆ ಆರಂಭವಾದಾಗ 179 ಮಕ್ಕಳು ಇದ್ದರು ಈಗ 1200 ಮಕ್ಕಳು ಕಲಿಯುತ್ತಿದ್ದಾರೆ. ಪ್ರಾಥಮಿಕ ಪೂರ್ವ ಶಾಲೆಯಿಂದ 11ನೇ ತರಗತಿ ವರೆಗೆ ಇಲ್ಲಿ ಶಿಕ್ಷಣ ದೊರೆಯುತ್ತದೆ. ಸಿ.ಬಿ.ಎಸ್.ಸಿ.ಯಿಂದ ಅನುಮತಿ ಪಡೆದು ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೂ ಇಂತಹ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿದರು.
ಬಡವರ ಮಕ್ಕಳಿಗೂ ಉತ್ತಮವಾದ ಶಿಕ್ಷಣ ಸಿಗಬೇಕು ಎಂದು ಕೇಂದ್ರದ ಯು.ಪಿ.ಎ. ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆರ್.ಟಿ.ಇ. ಕಾಯ್ದೆ ಜಾರಿಗೆ ತಂದಿದೆ. ರಾಜ್ಯದಲ್ಲಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿತವರು ಸಹ ಮಹಾನ್ ವ್ಯಕ್ತಿಗಳಾಗಿದ್ದಾರೆ. ಎ.ಪಿ.ಜೆ. ಅಬ್ದುಲ್ ಕಲಾಂ, ಸಿ.ಎನ್.ಆರ್.ರಾವ್, ಸರ್. ಎಂ. ವಿಶ್ವೇಶ್ವರಯ್ಯ ಅವರು ಸಹ ಸರ್ಕಾರಿ ಶಾಲೆಯಲ್ಲಿ ಕಲಿತವರು ಎಂದು ಹೇಳಿದ ಅವರು, ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗಾಗಿ ರಾಜ್ಯದಲ್ಲಿ 1.02 ಕೋಟಿ ಮಕ್ಕಳಿಗೆ ಹಾಲು ಕೊಡಲಾಗುತ್ತಿದೆ. ಈ ಪೈಕಿ ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳು ಹಾಲು ಕುಡಿಯುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರ ಬಗ್ಗೆ ನನಗೆ ಸಹಾನುಭೂತಿ ಇದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಇದ್ದರೆ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ. ಶಾಂತಿ ಕಾಪಾಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದರು.
ಪೊಲೀಸರಿಗೆ ಸೌಲಭ್ಯ ನೀಡುವ ಬಗ್ಗೆ ವರದಿ ನೀಡಲು ರಾಘವೇಂದ್ರ ಔರಾದ್‍ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ಈಗಾಗಲೇ ವರದಿಯನ್ನು ಗೃಹ ಇಲಾಖೆಗೆ ನೀಡಿದೆ. ಈ ತಿಂಗಳ 21ರೊಳಗೆ ಸಭೆಗೆ ಕರೆದು ವರದಿ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸಿಗುವ ಉತ್ತಮವಾದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣವಾಗಿರುವಂತೆ ಎಲ್ಲಾ ಜಿಲ್ಲೆಗಳಲ್ಲೂ ಆಗಬೇಕು. ರಾಜ್ಯದ 176 ತಾಲ್ಲೂಕುಗಳಲ್ಲೂ ಒಂದೊಂದು ಶಾಲೆಯಲ್ಲಿ ದತ್ತು ಪಡೆದು ಈ ರೀತಿಯ ಶಿಕ್ಷಣವನ್ನು ಕೊಡಬೇಕು ಎಂದು ಅವರು ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ತಿಳಿಸಿದರು.
ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ 27 ವಿಷಯವಾರು ಪಠ್ಯಕ್ರಮಗಳ ಪರಿಷ್ಕರಣೆಗೆ ಸಮಿತಿ ನೇಮಕ ಮಾಡಲಾಗಿದ್ದು, ಅದರ ವರದಿ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ತುಂಬಾ ಶಿಥಿಲವಾಗಿರುವ ಕಟ್ಟಡಗಳ ದುರಸ್ಥಿ ಹಾಗೂ ನವೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳಲ್ಲಿ ಹೈಕೋರ್ಟ್‍ನ ನಿರ್ದೇಶನದ ಮೇರೆಗೆ ಏಕರೂಪ ಶುಲ್ಕ ಪದ್ಧತಿ ಜಾರಿಯಾಗಬೇಕು. ಡಿಸೆಂಬರ್ ಅಂತ್ಯದ ವೇಳೆಗೆ ಖಾಸಗಿ ಶಾಲೆಗಳು ಶುಲ್ಕದ ವಿವರಗಳನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ ನೀಡಲು ಮೌಲ್ಯವರ್ಧಿತ ಶಿಕ್ಷಣ ನೀಡಲಾಗುತ್ತಿದೆ. ಮೊದಲು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಈ ಶಿಕ್ಷಣ ನೀಡಲಾಗುತ್ತಿದ್ದು, ಈಗ ಸಾಮಾನ್ಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಈ ಯೋಜನೆಗೆ ‘ವಿಶ್ವಾಸ ಕಿರಣ’ ಎಂದು ಹೆಸರಿಡಲಾಗಿದೆ. 1.10 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆಯುತ್ತಿದ್ದಾರೆ. ಗಣಿತ ಮತ್ತು ವಿಜ್ಞಾನ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ.
ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಪಾಲಿಕೆ ಸದಸ್ಯರಾದ ಸಂದೇಶ್ ಸ್ವಾಮಿ, ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ, ಡಿ.ಜಿ ಮತ್ತು ಐ.ಜಿ.ಪಿ ಓಂಪ್ರಕಾಶ್, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಎ.ಡಿ.ಜಿ.ಪಿ ಸುನಿಲ್ ಕುಮಾರ್, ದಕ್ಷಿಣ ವಲಯದ ಐ.ಜಿ.ಪಿ ಬಿ.ಕೆ.ಸಿಂಗ್, ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್, ಪೊಲೀಸ್ ಆಯುಕ್ತರಾದ ಡಾ. ಬಿ. ದಯಾನಂದ್, ಪೊಲೀಸ್ ಅಧೀಕ್ಷಕರಾದ ರವಿ. ಡಿ. ಚನ್ನಣ್ಣನವರ್, ರಾಜ್ಯ ಗುಪ್ತವಾರ್ತೆ ಐ.ಜಿ.ಪಿ ಶರತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.

Monday, 10 October 2016

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ

ಮೈಸೂರು.ಅ.10- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 10 ರಿಂದ 12 ರವರೆಗೆ  ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಇಂದು ಸಂಜೆ 4-35 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.  ಅಕ್ಟೋಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದ ತೊಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.16 ಗಂಟೆಗೆ ಅರಮನೆ ಆವರಣದ ಬಲರಾಮ ದ್ವಾರದ ಬಳಿ ನಂಧೀಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ 2.45 ಕ್ಕೆ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆ ಉದ್ಘಾಟನೆ ಮತ್ತು ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಸಂಜೆ 4 ಗಂಟೆಗೆ ಕುವೆಂಪುನಗರದಲ್ಲಿರುವ ಕರುಣ ಚಾರಿಟಬಲ್ ಟ್ರಸ್ಟ್‍ನ ನವ್ಯ ಸಂತಾನೋತ್ಪತ್ತಿ ಕೇಂದ್ರ ಉದ್ಘಾಟಿಸಲಿದ್ದಾರೆ. ರಾತ್ರಿ 8 ಗಂಟೆಗೆ ಬನ್ನಿಮಂಟಪದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರ ಉಪಸ್ಥಿತಿಯಲ್ಲಿ ಪಂಜಿನ ಕವಾಯತ್ ವೀಕ್ಷಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
    ಅಕ್ಟೋಬರ್ 12 ರಂದು ಬೆಳಿಗ್ಗೆ 10-30 ಗಂಟೆಗೆ ನಜರ್‍ಬಾದ್‍ನಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಯ ನೂತನ ನರ್ಸರಿ ಬ್ಲಾಕ್ ಕಟ್ಟಡ ಉದ್ಘಾಟಿಸಿದ ನಂತರ ಮಧ್ಯಾಹ್ನ 12 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

Monday, 3 October 2016