Thursday, 26 November 2015

ಕನ್ನಡದ ಚಿತ್ರ ರಂಗದ ಇತಿಹಾಸ ಬಿಂಬಿಸುವ
ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ
       ಮೈಸೂರು,ನ.26.-ಕನ್ನಡ ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಮೈಸೂರು ನಗರದ ಕಲಾಮಂದಿರದಲ್ಲಿ ಇದೇ 28 ರಂದು ಶನಿವಾರ ಸಂಜೆ 5-30 ಕ್ಕೆ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ  ಉದಯೋನ್ಮುಖ ಗಾಯಕ, ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ಸತಿಸುಲೋಚನಾ ಚಿತ್ರದಿಂದ ಆರಂಭಗೊಂಡು ಅಮೃತ ಮಹೋತ್ಸವ ಪೂರೈಸಿರುವ ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕುಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ           ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದ್ದು, ಈ ಎಲ್ಲಾ ಕಾಲಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞಾರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ.
         ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.
      ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರು ರಘುಲೀಲಾ ಸಂಗೀತ ಶಾಲೆಯ ಶ್ರೀಮತಿ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು, ಎಸ್.ಕೃಷ್ಣಪ್ರಸಾದ್(ಕೊಳಲು),          ಸಿ ವಿಶ್ವನಾಥ್( ಮ್ಯಾಂಡೋಲೀನ್), ವಿ.ವಿ.ಆನಂದ್ (ಗಿಟಾರ್), ಪ್ರಸನ್ನ ಕುಮಾರ್ (ಕೀಬೋರ್ಡ್) ಮೋಹನ್ (ರಿದಂಸ್ಯಾಟ್) ಇಂದುಶೇಖರ್ ಮತ್ತು ಜಗದೀಶ್ (ತಬಲ), ಕಿರಣ್ ಕುಮಾರ್ (ಡೋಲಕ್) ವಾದ್ಯ ಸಹಕಾರ ನೀಡುವರು.
     ಟಿ.ಎಸ್.ಅಶ್ವಿನಿ, ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ಗಾನ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ. ಎನ್. ವೈಷ್ಣವಿ ಕಾರ್ಯಕ್ರಮ ನಿರೂಪಿಸುವರು.
      ಪ್ರವೇಶ ಉಚಿತವಾಗಿದ್ದು, ಸರ್ವಜನಿಕರು ಕಾರ್ಯಕ್ರಮಕ್ಕೆ ಅಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ



ನವೆಂಬರ್ 30 ರಂದು ಸಾಮಾನ್ಯ ಕೌನ್ಸಿಲ್ ಸಭೆ
      ಮೈಸೂರು,ನ.26.ಮೈಸೂರು ಮಹಾನಗರ ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆ ನವೆಂಬರ್ 30 ರಂದು ಸಂಜೆ 4 ಗಂಟೆಗೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಪ್ರಭಾರ ಕೌನ್ಸಿಲ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಜಿಸ್ಟೀರಿಯಲ್ ವಿಚಾರಣೆ ಮುಂದೂಡಿಕೆ
      ಮೈಸೂರು,ನ.26.ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ದಿನಾಂಕ 10-11-2015 ರಂದು ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ದಿನಾಂಕ 26-11-2015 ರಂದು ನಡೆಯಬೇಕಿದ್ದ ಮೆಜಿಸ್ಟೀರಿಯಲ್ ವಿಚಾರಣೆಯನ್ನು ಮುಂದೂಡಲಾಗಿದ್ದು,  ಮೆಜಿಸ್ಟೀರಿಯಲ್ ವಿಚಾರಣೆ ದಿನಾಂಕ  30-11-2015 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
   ಭಾರತ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ವೇಳಾಪಟ್ಟಿ ಹೊರಡಿಸಿದ್ದು, ಈ ಸಂಬಂಧ ತುರ್ತು ಸಿದ್ದತೆಗಳನ್ನು ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಮೆಜಿಸ್ಟೀರಿಯಲ್ ವಿಚಾರಣೆಯನ್ನು ಮುಂದೂಡಲಾಗಿದೆ. ದಿನಾಂಕ 26-11-2015 ರಂದು ವಿಚಾರಣೆಗೆ ಹಾಜರಾಗಲು ತಿಳಿವಳಿಕೆ ನೀಡಲಾಗಿದ್ದ ಸಾರ್ವಜನಿಕರು ದಿನಾಂಕ 30-11-2015 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ : ಬಹುಮಾನ ಪ್ರಕಟ
      ಮೈಸೂರು,ನ.26.-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ದಿನಾಂಕ 7-11-2015 ರಂದು ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು.
     ಸದರಿ ಪ್ರಬಂಧ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕಿನ ತಾಂಡವಪುರದ ಸರ್ಕಾರಿ ಪ್ರೌಢಶಾಲೆಯ ಪ್ರೇಮ ಪ್ರಥಮ ಬಹುಮಾನ, ಮೈಸೂರು ತಾಲ್ಲೂಕು ದೊಡ್ಡಕಾನ್ಯ ಸರ್ಕಾರಿ ಪ್ರೌಢಶಾಲೆಯ ಪಲ್ಲವಿ ಪಿ. ದ್ವಿತೀಯ ಬಹುಮಾನ, ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ರೋಜ ಬಿ. ತೃತೀಯ ಬಹುಮಾನ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಾಜಶೇಖರಮೂರ್ತಿ ಹಾಗೂ ಹೊಸಹುಂಡಿ ಸರ್ಕಾರಿ ಪ್ರೌಢಶಾಲೆಯ ಉಮಾ ಸಮಾಧಾನಕರ ಬಹುಮಾನ ಪಡೆದಿರುತ್ತಾರೆ ಎಂದು ಡಯಟ್ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                     

ನಗರದಲ್ಲಿ ಇಂದು ಸಂವಿದಾನ ದಿನಾ ಆಚರಣೆ
ಮೈಸೂರು,ನ. 26- ನಗರದಲ್ಲಿ ಇಂದು ಜಿಲ್ಲಾಡಳಿತ ಹಾಗೂ ನಾಯಾಲಯದ ವತಿಯಿಂದ ಸಂವಿದಾನ ದಿನಾಚರಣೆಯನ್ನು ಆಚರಿಸುವ ಮೂಲಕ ಸಂವಿದಾನದ ಕರಡು ಪ್ರತಿಗೆ ನಮಸ್ಕರಿಸಲಾಯಿತು.
 ಭಾರರದ ಒಕ್ಕೂಟ ರಾಷ್ಟ್ರದಲ್ಲಿ ಸಂವಿದಾನಾತ್ಮಕ ಆಡಳಿತ ಜಾರಿಗೆ ಬಂದ್ದದ್ದು ಜನವರಿ 26, 1950 ಆದಿನವನ್ನು ದೇಶಾದ್ಯಂತ ಗಣರಾಜ್ಯದಿನವನ್ನಾಗಿ ಆಚರಿಸಲಾಗುತ್ತದೆ, ಅಂತೆಯೇ ಭಾರತದಂತಹ ದೊಡ್ಡ ರಾಷ್ಟ್ರಕ್ಕೆ ಎಲ್ಲಾ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಆಚಾರ, ವಿಚಾರ, ಅವರವರ ನಂಬಿಕೆ ಆಚರಣೆ ಗಳಿಗನುಗುಣವಾಗಿ ಡಾ. ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿದಾನದ ಕರಡು ಪ್ರತಿಗಳಿಗೆ ಹಲವಾರು ವಾರಿ ತಿದ್ದುಪಡಿ ತಂದು ಅದರಲ್ಲಿನ ಸರಿ ತಪ್ಪುಗಳನ್ನು ತಿದ್ದಿ ಸರಿಪಡಿಸಿ ಅಂತಿಮವಾಗಿ ಸಂವಿದಾನ ಒಪ್ಪಿಕೊಂಡ ದಿನ ಈ ದನ, ಆದ್ದರಿಂದಲೇ ಇಂದು ಕೇಂದ್ರ ಸರ್ಕಾರದ ವತಿಯಿಂದಲೇ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನವೆಂಬರ್ 26ರ ಈ ದಿನವನ್ನು ಸಂವಿದಾನ ದಿನವನ್ನಾಗಿ  ಈ ವರ್ಷದಿಂದ ಆಚರಿಸಲಾಗುತ್ತದೆ.
 ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರಮೋದಿಯವರು  ನಮ್ಮ ದೇಶದ ಸಂವಿದಾನಕ್ಕೆ ಸೆಲ್ಯುಟ್ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಿದ್ದಾರೆ. ಅಂತೆಯೇ ಇಂದು ಮೈಸೂರು ಜಿಲ್ಲಾಧಿಕಾರಿಗಳ  ಕಚೇರಿಯಲ್ಲಿ, ಜಿಲ್ಲಾಧಿಕಾರಿ ಸಿ.ಶಿಖಾ ರವರ ನೇತೃತ್ವದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಂವಿದಾನ ದಿನ ಆಚರಿಸಿ ಆಡಳಿತಾತ್ಮಕವಾದ ಸಂವಿದಾನ ಕರಡು ಪ್ರತಿಗೆ ನಮಿಸಿ ಗೌರವ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಸಮವಿದಾನಕ್ಕೆ ಗೌರವ ಸಲ್ಲಿಸಿದರು.
 ಅದೇರೀತಿ ನಗರದ ಜಿಲ್ಲಾ ನ್ಯಾಯಾಲಯದಲ್ಲೂ ಆವರಣದಲ್ಲೂ, ನ್ಯಾಯಾಧೀಶರುಗಳ ನೇತೃತ್ವದಲ್ಲಿ ವಕೀಲರುಗಳು ಸಂವಿದಾನ ಕರಡು ಪ್ರತಿಗೆ ಗೌರವ ಸಲ್ಲಿಸುವ ಮೂಲಕ ಸಂವಿದಾನ ದಿನಾಚರಣೆ  ಆಚರಿಸಿದರು. ನಂತರ ನ್ಯಾಯಾಧೀಶರು, ನೆರೆದಿದ್ದವರಿಗೆ ನಮ್ಮ ದೇಶದ ಸಂವಿದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಈ ಸಮಯದಲ್ಲಿ ನೂರಾರು ಮಂದಿ ವಕೀಲರುಗಳು, ಕೋರ್ಟ್ ಕಲಾಪದ ಕೇಸ್‍ಗಳಿಗಾಗಿ ಹಾಜರಾಗಲು ದೂರದ ಊರುಗಳಿಂದ ಆಗಮಿಸಿದ್ದ ಕಕ್ಷಿದಾರರು ಸಾರ್ವಜನಿಕರು, ಅಧಿಕಾರಿಗಳು, ನ್ಯಾಯಾಲದ ನೌಕರರು ಹಾಜರಿದ್ದರು.
     ಕುಡಿಯುವ ನೀರಿಗಾಗಿ ಒತ್ತಾಯಿಸಿ 46ನೇ ವಾರ್ಡ್‍ನಲ್ಲಿ ಪ್ರತಿಭಟನೆ
ಮೈಸೂರು, ನ.26- ಮೈಸೂರು ನಗರದ ಹಳೆ ಕೆಸರೆ ಭಾಗದ 46ನೇ ವಾರ್ಡ್
ನಲ್ಲಿ ಅಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಆಗ್ರಹಿಸಿ, ಜೆಡಿಎಸ್‍ನ ಅಲ್ಪಸಂಖ್ಯಾತ ವಿಭಾಗದ ನಗರಾಧ್ಯಕ್ಷ ಅಜ್ಜು (ಅಜಿಜುಲ್ಲಾ) ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡಸಿದರು.
 ಈ ವಾರ್ಡ್ ಸದಸ್ಯರಾಗಿ ಹಸಿನಾತಾಜ್ ಪ್ರತಿನಿಧಿಸಿದ್ದಾರೆ, ಅವರು ಕಳೆದಬಾರಿ ಮೇಯರ್ ಆಕಾಂಕ್ಷಿಯೂ ಆಗಿದ್ದರು, ಅದು ಕೈ ತಪ್ಪಿದ್ದರಿಂದ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಆಡಳಿತ ಪೂರೈಸಿ ಉತ್ತಮ ಬಜೆಟ್ ಅನ್ನೂ ಮಂಡಿಸಿದರು. ಆದರೆ ಅವರ ವಾರ್ಡಿನಲ್ಲೇ  ಸರಿಯಾಗಿ ನೀರು ಬರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ, ಇದರಿಂದಾಗಿ ಆ ವಾರ್ಡಿನ ಪಾಲಿಕೆ ಸದಸ್ಯರು ಸೇರಿದಂತೆ ಜೆಡಿಎಸ್. ಕಾರ್ಯಕರ್ತರು, ಬಡಾವಣೆಯ ನಿವಾಸಿಗಳು ಇಂದು ಕುಡಿಯುವ ನೀರು ಸರಬರಾಜಿಗಾಗಿ ಆಗ್ರಹಿಸಿ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ
 ಇಂದು ಕೆಲಸ ಕಾರ್ಯಗಳಿಗೆ, ಶಾಲಾ-ಕಾಲೇಜುಗಳಿಗೆ, ಹೊರ ಊರುಗಳಿಗೆ ತೆರಳಬೇಕಾದ  ಸಾರ್ವಜನಿಕರು ಅಡಚಣೆ ಜೊತೆಗೆ ತೊಂದರೆ ಅನುಭವಿಸಬೇಕಾಯಿತು.
 ಪ್ರತಿಭಟನೆಯಲ್ಲಿ ಹಸಿನಾತಾಜ್, ಆಯಿಷಾಬಾನು, ಎಂ.ಡಿ. ಸಲೀಂ, ಅಕ್ರಂ, ಆಯಿಸ್‍ಪಾಷ, ಜಾನ್‍ಬಾಸ್ಕೊ, ಸಲ್ಮಾನ್, ಶಿವಣ್ಣ, ಮಂಜುಳಾ, ಸರೋಜಾ, ರೇವತಿ ಸೇರಿದಂತೆ ನೂರಾರು ಮಂದಿ ಆರ್.ಎಸ್.ನಾಯ್ಡು ನಗರದ ಜನತೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

  28 ರಿಂದ ಕನಕ ದಾಸರ ಜಯಂತ್ಯೋತ್ಸ ಆಚರಣೆ
ಮೈಸೂರು,ನ.26-ಇಲ್ಲಿನ ಸಂತ ಶ್ರೀ ಕನಕದಾಸರ ಜಯಂತೋತ್ಸವ ಸಮಿತಿ ವತಿಯಿಂದ ಇದೇ ತಿಂಗಳ 28 ರಿಂದ ಡಿ. 1ರ ವರೆಗೆ ಕನಕ ದಾಸರ 528ನೇ ಜಯಂತೋತ್ಸವ ಕಾರ್ಯಕ್ರಮವನ್ನು ಮೂರುದಿನಗಳ ಕಾಲ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ ಎಂದು ಸಮಿತಿಯ  ಪ್ರಾಧಾನ ಕಾರ್ಯದರ್ಶಿ ಬ್ಯಾಂಕ್ ಪುಟ್ಟಸ್ವಾಮಿ ತಿಳಿಸಿದರು.
 ಇಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ 28ರ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಅಲಂಕರಿಸಿದ ಕನಕದಾಸದರ ಭಾವಚಿತ್ರವಿರಿಸಿ ಮೆರವಣಿಗೆ ಮಾಡಿಸಲಾಗುತ್ತದೆ, ಇದರ ಉದ್ಘಾಟನೆಯನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ನೆರವೇರಿಸಲಿದ್ದಾg,É ಜಗನ್ಮೋಹನರಮನೆಯಲಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದಾರೆ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕನಕದಾಸರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಲಿದ್ದಾರೆ , ಮಾಜಿ ಸಂಸದ ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ, ಯುವ ಕಾಂಗ್ರೆಸ್ ಮುಖಂಡ ರಾಕೇಶ್‍ಸಿದ್ದರಾಮಯ್ಯ, ಮೇಯರ್ ಬಿಎಲ್.ಬೈರಪ್ಪ ಸೇರಿದಂತೆ ಹಲವಾರು ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನ.29,30, ಡಿ.1 ರಂದು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಜೆ 5 ಗಂಟೆಗೆ ದಾಸರವಾಣಿ ಪದಗಳ ಹಾಡುಗಾರಿಕೆ, ಕಲಾವಿಧ ಶಶಿಧರ ಕೋಟೆ ವೃಂಧದವರಿಂದ ದಾಸರ ಕಿರ್ತನೆಗಳು, ಡಾ. ವಸುಂದರ ದೊರೆಸ್ವಾಮಿ ಅವರಿಂದ ಕನಕ ಕಂಡ ಕೃಷ್ಣ ಎಂಬ ನೃತ್ಯರೂಪಕ ನಡೆಯಲಿದೆ ಎಂದರು.
 ಪತ್ರಿಕಾ ಗೋಷ್ಠಿಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಎಂ. ಶಿವಣ್ಣ, ಸಿದ್ದನಾಂಗೇಂದ್ರ, ಜೆ. ಮಹದೇವಪ್ಪ, ಎಂ. ನಾಗರಾಜು ಉಪಸ್ಥಿತರಿದ್ದರು.

 ಚೆಲುವಾಂಬ ಆಸ್ಪತ್ರೆಯಲ್ಲಿ ಮತ್ತೊಂದು ಮಗು ಸಾವು
ಮೈಸೂರು,ನ.26-ದೊಡ್ಡಾಸ್ಪತ್ರೆ ಯೆಂದೇ ಪ್ರಸಿದ್ಧಿಹೊಂದಿರುವ ಮೈಸೂರಿನ ಕೆ. ಆರ್. ಆಸ್ಪತ್ರೆಯ ಪಕ್ಕದಲ್ಲಿರುವ ಹೆರಿಗೆಗಳಿಗೆಂದೇ ಮೀಸಲಾಗಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ನಿನ್ನೆ ದಿನ ಮತ್ತೊಂದು ಮಗು ಮೃತಪಟ್ಟಿರುವ ಘಟನೆ  ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲುಕಿನ ಉಲ್ಲಹಳ್ಳಿಯ ಕಲ್ಲೇನಹಳ್ಳಿ ಗ್ರತಾಮವಾಸಿ ಗೀತಾ (24)
ಎಂಬುವರಿಗೆ ಜನಿಸಿದ ನವಜಾಥ ಶಿಶು ಮೃತಪಟ್ಟಿದೆ, ಗೀತಾ ಹೆರಿಗೆಗಾಗಿ ಕಳೆದ ಬಾನುವಾರ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದರು, ಸೋಮವಾರ ಇವರನ್ನು ಪರೀಕ್ಷಿಸಿದ ವೈದ್ಯರು, ಮಗು ಅನಾರೋಗ್ಯದಿಂದಿದೆ ಆದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಡಿಸ್ಛಾರ್ಜ್ ಮಾಡಿದ್ದರು.
 ಆದರೆ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗು ಮೃತಪಟ್ಟಿರುತ್ತದೆ,  ಇದರಿಂದ  ಆಕ್ರೋಶಗೊಂಡ ಗೀತಾಳ ಕುಟುಂಬಸ್ತರು, ಸಂಬಧಿಕರು ಇಮದು ಚೆಲುವಾಂಬ ಆಸ್ಪತ್ರೆಮುಂದೆ  ಜಮಾಯಿಸಿ  ಮಗು ಸಾವಿಗೆ ಚೆಲುವಾಂಬ ಆಸ್ಪತ್ರೆಯ ವೈಧ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ಇಲ್ಲಿಗೆ ದಾಖಲಿಸಿದಾಗ ನಿಡಿದ ಚಿಕಿತ್ಸೆಗಳ ದಾಖಲಾತಿಗಳನ್ನು ನೀಡಿ ಎಂದು ಒತ್ತಾಯಿಸಿ ಕೆಲಕಾಲ ಗಲಾಟೆ ನಡೆಸಿದರು.
 ನಿನ್ನೆಯಷ್ಟೇ ಶಾಸಕ ವಾಸು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಸಿ ವೈದ್ಯರನನ್ನು ತರಾಟೆಗೆ ತೆಗೆದುಕೊಂಡು ಹೋದ ಕೆಲ ಹೊತ್ತಿನಲ್ಲೇ ಈ ಘಟನೆ ಸಂಭವಿಸಿದೆ. ಇಲ್ಲಿನ ಪರಿಸ್ಥಿತಿ ಸರಿಯಿಲ್ಲ, ಕಳೆದ 15 ದಿನಗಳಲ್ಲೇ 12 ಬಾಣಂತಿಯರು, 13 ಶಿಸುಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.     

Monday, 23 November 2015


 ಚಿತ್ತಾರದಲಿ ಜನಸಾಮಾನ್ಯರಿಗೆ  ಮಾಹಿತಿ ನೀಡಿದ ಲೇಸರ್ ಶೋ
       ಮೈಸೂರು,ನ.23-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾನುವಾರ ವಿನೂತನವಾಗಿ ಬಣ್ಣ, ಬಣ್ಣದ ಬೆಳಕಿನಲ್ಲಿ ಜನಸಮಾನ್ಯರ ಮನಸೆಳೆಯುವ  ಲೇಸರ್ ಶೋವನ್ನು  ಮೈಸೂರಿನ ಕೋಟೆ ಅಂಜುನೇಯ ಸ್ವಾಮಿ ದೇವಸ್ಥಾನ ಆವರಣ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆವರಣ, ಹುಣಸೂರು ಪುರಸಭೆ ಮೈದಾನ ಹಾಗೂ ಕೆ.ಆರ್.ನಗರ ಪುರಸಭೆ ಬಯಲು ರಂಗಮಂದಿರ ಮೈದಾನದಲ್ಲಿ ಆಯೋಜಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು.
       ಸರ್ಕಾರ ಸಾರ್ವಜನಿಕರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಕೃಷಿಭಾಗ್ಯ, ಸಾಲಮನ್ನ,ವಿದ್ಯಾಸಿರಿ ಸೇರಿದಂತೆ ಹಲವಾರು ಯೋಜನೆಗಳ ವಿವರವು ಬಣ್ಣ, ಬಣ್ಣದ ಗೆರೆಗಳಲ್ಲಿ ಮೂಡಿ ನೋಡುಗರನ್ನು ಮನರಂಜಿಸುವುದರ ಜೊತೆಗೆ ಮಾಹಿತಿಯನ್ನು ಸಹ ಲೇಸರ್ ಶೋ ನೀಡಿತು.
     ಸರ್ಕಾರದ ಸಾಧಿಸಿದ ಪ್ರಗತಿಯ ವಿವಿರ ಸೇರಿದಂತೆ ಬಾರಿಸು ಕನ್ನಡ ಡಿಂಡಿಮವಾ ಹಾಡಿನ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕವಿ ಹಾಗೂ ಸಾಹಿತಿಗಳನ್ನು ಸಹ ಬೆಳಕಿನ ಗೆರೆಗಳಲ್ಲಿ ಮೂಡಿ ಬಂದವು.ಬಾರಿಸು ಕನ್ನಡ ಡಿಂಡಿಮವಾ, ಈ ಸರ್ಕಾರ ನಮ್ಮ ಸರ್ಕಾರ ಹಾಗೂ ಪುಣ್ಯಕೋಟಿ ವಿಷಯಗಳಡಿ ಲೇಸರ್ ಶೋ ಆಯೋಜಿಸಲಾಗಿತ್ತು.
ಲಘುವಾಹನ ಚಾಲನಾ ತರಬೇತಿ
    ಮೈಸೂರು,ನ.23.ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲೆಯ ಪರಿಶಿಷ್ಟವರ್ಗದ ನಿರುದ್ಯೋಗಿ ಯುವಕ ಯುವತಿಯರಿಗೆ ಲಘುವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
    ಆಸಕ್ತರು ವೋಟರ್ ಐಡಿ, ವಯಸ್ಸಿನ ಬಗ್ಗೆ ದಾಖಲೆ, ವಿದ್ಯಾರ್ಹತೆ, ಜಾತಿ ಪ್ರಮಾಣಪತ್ರ,  ವರಮಾನ ಪ್ರಮಾಣ ಪತ್ರದೊಂದಿಗೆ ಸಂಬಂದಿಸಿದ ತಾಲ್ಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ / ತಾಲ್ಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:20-12-2015ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ  ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ, ಮೈಸೂರು ದೂರವಾಣಿ ಸಂಖ್ಯೆ 0821-2427140)ನ್ನು ಸಂಪರ್ಕಿಸಲು ಕೋರಲಾಗಿದೆ.

Thursday, 19 November 2015



ಮಂಡ್ಯದ ಮಿಮ್ಸ್‍ನಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಕ್ಷಯರೋಗ- ಪ್ರಸ್ತುತ ಮಾಹಿತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಮಿಮ್ಸ್ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಉದ್ಘಾಟಿಸಿದರು. ಡಾ.ಕೆ.ಎಂ.ಶಿವಕುಮಾರ್, ಡಾ.ಎಚ್.ಪಿ.ಮಂಜೇಗೌಡ, ಡಾ.ಅನಿಲ್, ಉಮೇಶ್ ಇತರರಿದ್ದಾರೆ. ಚಿತ್ರ- ಸಿದ್ದರಾಜು

ಮಂಡ್ಯದ ಅಶೋಕನಗರ ಹೋಟೆಲ್ ಸರೋವರ ಹತ್ತಿರ ನೂತನವಾಗಿ ಪ್ರಾರಂಭವಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರಷೋತ್ತಮಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಎಂ.ಎಸ್.ಆತ್ಮಾನಂದ, ಅಮರಾವತಿ ಚಂದ್ರಶೇಖರ್, ಎನ್.ಆರ್.ಜಗದೀಶ್, ಎಚ್.ಎಂ.ದಿವ್ಯಾನಂದಮೂರ್ತಿ, ಬೇಲೂರು ಸೋಮಶೇಖರ್, ಯಡಿಯೂರಪ್ಪ ಇತರರಿದ್ದಾರೆ. ಚಿತ್ರ- ಸಿದ್ದರಾಜು

ಮಂಡ್ಯದ ಅಶೋಕನಗರದಲ್ಲಿ ಹೋಲ್‍ಸೇಲ್ ದರದಲ್ಲಿ ದೊರೆಯುವ ಶ್ರೀ ಅನ್ನಪೂರ್ಣೆಶ್ವರಿ ಟ್ರೇಡರ್ಸ್ ಮಳಿಗೆಯನ್ನು ನಗರಸಭೆ ಸದಸ್ಯ ಎಸ್.ಕೆ.ಶಿವಪ್ರಕಾಶ್‍ಬಾಬು ಉದ್ಘಾಟಿಸಿದರು. ಟಿ.ಕೆ.ರಾಮಲಿಂಗಯ್ಯ, ಚಂದ್ರಕುಮಾರ್, ವೆಂಕಟರಾಜು, ಉಮೇಶ್, ಸತೀಶ್, ಶಂಕರ್ ಇತರರಿದ್ದಾರೆ.

ಮಂಡ್ಯ: ಅಶೋಕನಗರ ಹೋಟೆಲ್ ಸರೋವರ ಹತ್ತಿರ ನೂತನವಾಗಿ ಪ್ರಾರಂಭವಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರಷೋತ್ತಮಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ,  ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ತುಮಕೂರು ಮಾತ್ರವಲ್ಲದೆ ರಾಜ್ಯಾದ್ಯಂತ ವಿವಿಧೆಡೆ ಶಾಖೆಗಳನ್ನು ಆರಂಭಿಸಿದೆ. ಮಂಡ್ಯ ನಗರದಲ್ಲಿಯೂ ಸಹ ನೂತನ ಶಾಖೆ ಆರಂಭಿಸಿದೆ. ಜಿಲ್ಲೆಯ ರೈತಾಪಿ ಜನತೆ ಸಂಕಷ್ಟದಲ್ಲಿದ್ದು, ರೈತರಿಗೆ ಸಹಾಯವಾಗುವಂತಹ ಯೋಜನೆಗಳನ್ನು ಬ್ಯಾಂಕ್ ರೂಪಿಸಲಿ. ಜಿಲ್ಲೆಯ ಜನತೆಗೂ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹೇಳಿದರು.
ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ ಕೆಲಸ ಮಾಡಲಿ. ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿಕೊಡಲಿ ಎಂದರು.
ಬ್ಯಾಂಕ್‍ನ ಅಧ್ಯಕ್ಷ ಎನ್.ಆರ್.ಜಗದೀಶ್ ಮಾತನಾಡಿ, ಬ್ಯಾಂಕ್ ರಾಜ್ಯಾದ್ಯಂತ 25 ಶಾಖೆಗಳನ್ನು ಆರಂಭಿಸಿದ್ದು, 2.5 ಸಾವಿರ ಕೋಟಿ ರೂ. ವ್ಯವಹಾರ ಮಾಡುತ್ತಿದೆ. 1200 ಕೋಟಿ ರೂ. ಡಿಪಾಸಿಟ್ ಇಟ್ಟಿದ್ದು, 900 ಕೋಟಿ ಸಾಲ ಸೌಲಭ್ಯ ನೀಡಿದೆ. ವ್ಯಾಪಾರಸ್ಥರಿಗೆ ಮಾತ್ರವಲ್ಲದೆ ವಾಣಿಜ್ಯ ಉದ್ಯಮಿಗಳು, ನೌಕರರು, ರೈತರಿಗೂ ಎಲ್ಲ ರೀತಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಖಜಾಂಚಿ ಅಮರಾವತಿ ಚಂದ್ರಶೇಖರ್, ಬ್ಯಾಂಕ್ ಉಪಾಧ್ಯಕ್ಷ ಎಚ್.ಎಂ.ದಿವ್ಯಾನಂದಮೂರ್ತಿ, ಬ್ಯಾಂಕ್‍ನ ವ್ಯವಸ್ಥಾಪಕ ಯಡಿಯೂರಪ್ಪ, ಮುಖಂಡರಾದ ಬೇಲೂರು ಸೋಮಶೇಖರ್, ಶಿವನಂಜು, ಎಸ್.ಕೆ.ಶಿವಪ್ರಕಾಶ್‍ಬಾಬು, ಎಂ.ಪುಟ್ಟೇಗೌಡ ಇತರರು ಭಾಗವಹಿಸಿದ್ದರು.

Wednesday, 18 November 2015

19 ನೇ ನವೆಂಬರ್ 2015
ಅದ್ದೂರಿ ಕನಕದಾಸ ಜಯಂತಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ
    ಮೈಸೂರು, ನವೆಂಬರ್ 19. ಮೈಸೂರು ಜಿಲ್ಲಾಡಳಿತ ಹಾಗೂ ಕನಕ ಜಯಂತೋತ್ಸವ ಸಮಿತಿ ಸಹಯೋಗದೊಂದಿಗೆ ಕನಕದಾಸ ಜಯಂತಿಯನ್ನು ನವೆಂಬರ್ 28 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
    ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಇಂದು ನಡೆದ  ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
      ನವೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದಿಂದ ಕನಕದಾಸರ ಭಾವಚಿತ್ರ ಹಾಗೂ ವಿವಿಧ ಸ್ತಬ್ಥಚಿತ್ರ, ಜನಪದ ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ಹಾಗೂ 11:30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ತಜ್ಞರನ್ನು ಆಹ್ವಾನಿಸಲಾಗುವುದು.  ಮೆರವಣಿಗೆ ಹಾಗೂ ವೇದಿಕೆ  ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
   ಕಾರ್ಯಕ್ರಮಕ್ಕೆ ಅವಶ್ಯವಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡÀಲಾಗುತ್ತದೆ. ಸಮಾರಂಭದ ಯಶಸ್ವಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಕನಕದಾಸರ ಜನ್ಮ ಜಯಂತಿ ಕೇವಲ ಒಂದು ವರ್ಗದ ಆಚರಣೆಯಾಗಬಾರದು. ಎಲ್ಲ ವರ್ಗದ ಜನತೆಯ ಸಹಕಾರ ಪಡೆದು ಒಗ್ಗೂಡಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ಕೈಗೊಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
  ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಒಟ್ಟಾರೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕೆಂದು ಸಲಹೆ ಮಾಡಿದರು.
    ಪೊಲೀಸ್ ಉಪ ಆಯುಕ್ತ ಶೇಖರ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸೋಮಶೇಖರ್, ನೆಹರು ಯುವ ಕೇಂದ್ರ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ  ನಿರ್ದೇಶಕಿ ನಿರ್ಮಲ ಮಠಪತಿ, ವಿವಿಧ ಸಂಘಟನೆಗಳ ಮುಖಂಡರುಳಾದ ಎಂ.ಶಿವಣ್ಣ, ಬ್ಯಾಂಕ್ ಎಂ.ಪುಟ್ಟಸ್ವಾಮಿ, ಜೆ.ಮಹದೇವಪ್ಪ, ರೇವಣ್ಣ,  ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
(ಛಾಯಾಚಿತ್ರ ಲಗ್ತತಿಸಿದೆ)
ನ. 19 ರಿಂದ ಕಲಾಮಂದಿರದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಛಾಯಾಚಿತ್ರ ಪ್ರದರ್ಶನ
ಮೈಸೂರು, ನವೆಂಬರ್ 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ನವೆಂಬರ್ 19 ರಿಂದ 24ರ ವರೆಗೆ ಕನ್ನಡ ನಾಡು-ನುಡಿ ಸಂಬಂಧಿಸಿದ ‘ಬಾರಿಸು ಕನ್ನಡ ಡಿಂಡಿಮವ’ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.
   ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, 1956 ರ ನವೆಂಬರ್ 01 ರಂದು ಕನ್ನಡ ನಾಡು ಒಂದಾಗಿದ್ದು, ನಂತರ 1973 ರ ನವೆಂಬರ್ 01 ರಂದು ಕರ್ನಾಟಕ ರಾಜ್ಯದ ನಾಮಕರಣ, ಹಂತ ಹಂತವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೊಂಡಿದ್ದು, ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಸಂಗತಿಗಳನ್ನು ವಿಶೇಷ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.
  ವಿಶೇಷ ಛಾಯಾಚಿತ್ರ ಫಲಕಗಳು ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 10 ರಿಂದ 5:30 ಗಂಟೆಯ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

19 ನೇ ನವೆಂಬರ್ 2015
ಅದ್ದೂರಿ ಕನಕದಾಸ ಜಯಂತಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ
    ಮೈಸೂರು, ನವೆಂಬರ್ 19. ಮೈಸೂರು ಜಿಲ್ಲಾಡಳಿತ ಹಾಗೂ ಕನಕ ಜಯಂತೋತ್ಸವ ಸಮಿತಿ ಸಹಯೋಗದೊಂದಿಗೆ ಕನಕದಾಸ ಜಯಂತಿಯನ್ನು ನವೆಂಬರ್ 28 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
    ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಇಂದು ನಡೆದ  ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
      ನವೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದಿಂದ ಕನಕದಾಸರ ಭಾವಚಿತ್ರ ಹಾಗೂ ವಿವಿಧ ಸ್ತಬ್ಥಚಿತ್ರ, ಜನಪದ ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ಹಾಗೂ 11:30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ತಜ್ಞರನ್ನು ಆಹ್ವಾನಿಸಲಾಗುವುದು.  ಮೆರವಣಿಗೆ ಹಾಗೂ ವೇದಿಕೆ  ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
   ಕಾರ್ಯಕ್ರಮಕ್ಕೆ ಅವಶ್ಯವಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡÀಲಾಗುತ್ತದೆ. ಸಮಾರಂಭದ ಯಶಸ್ವಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಕನಕದಾಸರ ಜನ್ಮ ಜಯಂತಿ ಕೇವಲ ಒಂದು ವರ್ಗದ ಆಚರಣೆಯಾಗಬಾರದು. ಎಲ್ಲ ವರ್ಗದ ಜನತೆಯ ಸಹಕಾರ ಪಡೆದು ಒಗ್ಗೂಡಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ಕೈಗೊಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
  ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಒಟ್ಟಾರೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕೆಂದು ಸಲಹೆ ಮಾಡಿದರು.
    ಪೊಲೀಸ್ ಉಪ ಆಯುಕ್ತ ಶೇಖರ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸೋಮಶೇಖರ್, ನೆಹರು ಯುವ ಕೇಂದ್ರ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ  ನಿರ್ದೇಶಕಿ ನಿರ್ಮಲ ಮಠಪತಿ, ವಿವಿಧ ಸಂಘಟನೆಗಳ ಮುಖಂಡರುಳಾದ ಎಂ.ಶಿವಣ್ಣ, ಬ್ಯಾಂಕ್ ಎಂ.ಪುಟ್ಟಸ್ವಾಮಿ, ಜೆ.ಮಹದೇವಪ್ಪ, ರೇವಣ್ಣ,  ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
(ಛಾಯಾಚಿತ್ರ ಲಗ್ತತಿಸಿದೆ)
ನ. 19 ರಿಂದ ಕಲಾಮಂದಿರದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಛಾಯಾಚಿತ್ರ ಪ್ರದರ್ಶನ
ಮೈಸೂರು, ನವೆಂಬರ್ 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ನವೆಂಬರ್ 19 ರಿಂದ 24ರ ವರೆಗೆ ಕನ್ನಡ ನಾಡು-ನುಡಿ ಸಂಬಂಧಿಸಿದ ‘ಬಾರಿಸು ಕನ್ನಡ ಡಿಂಡಿಮವ’ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.
   ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, 1956 ರ ನವೆಂಬರ್ 01 ರಂದು ಕನ್ನಡ ನಾಡು ಒಂದಾಗಿದ್ದು, ನಂತರ 1973 ರ ನವೆಂಬರ್ 01 ರಂದು ಕರ್ನಾಟಕ ರಾಜ್ಯದ ನಾಮಕರಣ, ಹಂತ ಹಂತವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೊಂಡಿದ್ದು, ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಸಂಗತಿಗಳನ್ನು ವಿಶೇಷ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.
  ವಿಶೇಷ ಛಾಯಾಚಿತ್ರ ಫಲಕಗಳು ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 10 ರಿಂದ 5:30 ಗಂಟೆಯ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರು ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು,ನ.18- ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಉತ್ತನಹಳ್ಳಿ ವರ್ತುಲ ರಸ್ತೆಯ ಹೊಸಹುಂಡಿ ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.
 ತಾಲ್ಲೂಕಿನ ಕೊಚನಹಳ್ಳಿ ಗ್ರಾಮದ ನಿವಾಸಿ ನರಸಿಂಹನ್(35) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ ಪ್ರತಿಭಟಿಸಿದರು.
ಕಾರ್ಯ ನಿಮಿತ್ತ ಮೈಸೂರಿಗೆ ಸ್ಕೂಟರ್‍ನಲ್ಲಿ ನರಸಿಂಹನ್ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಅಪಘಾತದ ಸುದ್ದಿ ತಿಳಿದ ಗ್ರಾಮದ ನೂರಾರು ಜನತೆ ರೊಚ್ಚಿಗೆದ್ದು ರಸ್ತೆತಡೆ ನಡೆಸಿ ಅಪಘಾತ ತಡೆಗಟ್ಟಲು ಕ್ರಮವಹಿಸುವಂತೆ ಒತ್ತಾಯಿಸಿದರು.
ಪೊಲೀಸರು ಮದ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು  ಸಮಾಧಾನಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಕಂಬಕ್ಕೆ ಕಟ್ಟಿ ವ್ಯಕ್ತಿ ಸಜೀವ ದಹನ
ಮೈಸೂರು,ನ.18-ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಜೀವವಾಗಿ ದಹಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು-ಬನ್ನೂರು ವರ್ತುಲ ರಸ್ತೆಯ ನಾರಾಯಣ ಹೃದಯಾಲದ ಬಳಿ ದುಷ್ಕøತ್ಯ ನಡೆದಿದ್ದು, ಸುಮಾರು 25ರಿಂದ 30ರ ಪ್ರಾಯಾದ ವ್ಯಕ್ತಿ ಬೀಕರವಾಗಿ ಹತ್ಯೆಯಾಗಿದ್ದಾನೆ.
ದುಷ್ಕøರ್ಮಿಗಳು ರಾತ್ರಿವೇಳೆ ವ್ಯಕ್ತಿಯನ್ನು ಕರೆ ತಂದು ಇಲ್ಲಿನ ವಿದ್ಯುತ್ ಕಂಬಕ್ಕೆ ವೈಯರ್‍ನಿಂದ ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ವ್ಯಕ್ತಿ ಸಜೀವವಾಗಿ ದಹನಗೊಂಡಿದ್ದಾನೆ.
ಬೆಳಿಗ್ಗೆ ವೇಳೆಗೆ ದಾರಿಹೋಕರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣಾ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.